7ನೇ ತರಗತಿ ನನ್ನ ಬಾಲ್ಯ ಕನ್ನಡ ನೋಟ್ಸ್ | 7th Standard Nanna Balya Kannada Notes 2022

7ನೇ ತರಗತಿ ನನ್ನ ಬಾಲ್ಯ ಕನ್ನಡ ನೋಟ್ಸ್, 7th Standard Nanna Balya Kannada Notes Question Answer Kseeb Solution For Class 7 Kannada Nanna Balya Notes

Nanna Balya Kannada Notes

7th Class Nanna Balya Kannada Notes

ತರಗತಿ : 7ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ನನ್ನ ಬಾಲ್ಯ

ನಿರೂಪಣೆ : ಡಾ . ಗಣೇಶ ಅಮೀನಗಡ

ಕೃತಿಕಾರರ ಪರಿಚಯ

ಡಾ . ಗಣೇಶ ಅಮೀನಗಡ ಅವರು ಬಾಗಲಕೋಟೆ ಜಿಲ್ಲೆಯ ಅಮೀನಗಡದವರು , ಹಂಪಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ . ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯುಳ್ಳ ಇವರು ಪ್ರಸ್ತುತ ಮೈಸೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ಮುಖ್ಯ ವರದಿಗಾರರಾಗಿರುತ್ತಾರೆ . ‘ ಕೈದಿಗಳ ಕಥನ ‘ ಮುಂತಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ . ಅವರ ‘ ಏಣಿಯಿಂದ ರಂಗದ ಏಣಿಗೆ ‘ ಎಂಬ ಕೃತಿಯಿಂದ ಪ್ರಸ್ತುತ ಭಾಗವನ್ನು ಆರಿಸಲಾಗಿದೆ .

ಅ. ಈ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಏಣಗಿ ಬಾಳಪ್ಪನವರು ತಮ್ಮನ್ನು ಏನೆಂದು ಗುರುತಿಸಿಕೊಂಡಿದ್ದಾರೆ?

ಏಣಗಿ ಬಾಳಪ್ಪನವರು ತಮ್ಮನ್ನು ರಂಗಭೂಮಿಯ ಸಾಮಾನ್ಯ ನಟನೆಂದು ಗುರುತಿಸಿಕೊಂಡಿದ್ದಾರೆ.

೨. ‘ಪಾದುಕಾ ಪಟ್ಟಾಭಿಷೇಕ’ ನಾಟಕವನ್ನು ಬರೆದವರು ಯಾರು?

ಗರುಡ ಸದಾಶಿವರಾಯರು ಪಾದುಕಾ ಪಟ್ಟಭಿಷೇಕ ನಾಟಕವನ್ನು ಬರೆದವರು.

೩. ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಏಣಗಿಯವರು ಯಾವ ಪಾತ್ರ ವಹಿಸುತ್ತಿದ್ದರು?

ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಏಣಗಿಯವರು ಭರತನ ಪಾತ್ರ ವಹಿಸುತ್ತಿದ್ದರು

೪. ರಂಗಕಲಾವಿದ ಬಾಳಪ್ಪನವರ ಹುಟ್ಟೂರು ಎಲ್ಲಿದೆ?

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ- ರಂಗಕಲಾವಿದ ಬಾಳಪ್ಪನವರು ಹುಟ್ಟಿದ ಊರು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ನಟನಿಗೂ ಸಮುದಾಯಕ್ಕೂ ಇರುವ ಸಂಬಂಧದ ಬಗ್ಗೆ ಏಣಗಿ ಬಾಳಪ್ಪನವರು ಏನು ಹೇಳುತ್ತಾರೆ?

ಸಮುದಾಯದ ಎದುರಿಗೆ ನಟನು ಯಾವಾಗಲೂ ನಟನಾಗಿ ಬಾಳುತ್ತಾನೆ. ಸಮುದಾಯದ ಆಶ್ರಯ ತಪ್ಪಿದರೆ ನಟ ಬದುಕಿರಲಾರ ಮೀನಿಗೆ ನೀರಿನ ಸಂಗವಿದ್ದಂತೆ ನಟನಿಗೆ ಪ್ರೇಕ್ಷಕರ ಸಂಗವಿರುತ್ತದೆ ಎಂದು ಏಣಗಿ ಬಾಳಪ್ಪನವರು ಹೇಳುತ್ತಾರೆ.

೨. ಏಣಗಿ ಬಾಳಪ್ಪನವರ ಕುಟುಂಬವನ್ನು ಕುರಿತು ಬರೆಯಿರಿ.

ಬಾಳಪ್ಪನವರದು ತೀರಾ ಸಾದಾ ಕುಟುಂಬ. ಅವ್ವ ಬಾಳಮ್ಮ ತಂದೆ ಕರಿಬಸಪ್ಪ. ಇವರಿಗೆ ಮೂರು ಮಕ್ಕಳು ಅಣ್ಣ ಬಸಪ್ಪ, ಅಕ್ಕ ವೀರವ್ವ ಮತ್ತು ಸ್ವತಃ ಬಾಳಪ್ಪನವರು.

೩. ಅವ್ವನ ಸ್ಮರಣೆಯ ಫಲ ಎಂದು ಬಾಳಪ್ಪನವರು ಏನನ್ನು ನೆನಸಿಕೊಳ್ಳುತ್ತಾರೆ?

ಬಡತನದಲ್ಲಿ ಬೆಳೆದು ಬಂದ ಬಾಳಪ್ಪನವರ ಬದುಕಿನಲ್ಲಿ ಐಶ್ವರ್ಯವೂ ಅವರಿಗೆ ಲಭಿಸಿತು. ಆದರೆ ಗರ್ವ ಬರಲಿಲ್ಲ ದುಡ್ಡಿನಿಂದ ಅವರಿಗೆ ಮದ ಬರಲಿಲ್ಲಾ ಅದರಿಂದ ಯಾವ ವ್ಯಸನಕ್ಕೂ ಅವರು, ತುತ್ತಾಗಲಿಲ್ಲ. ಇದೆಲ್ಲಾ ಅವರ ಅವ್ವನ ಸ್ಮರಣೆಯ ಫಲ ಎಂದು ಬಾಳಪ್ಪನವರು ನೆನೆಸಿಕೊಳ್ಳುತ್ತಾರೆ

ಇತರೆ ವಿಷಯಗಳು :

7th Standard Kannada Notes lessons Question Answer

7th Standard Kannada Textbook Pdf Download 

Shivakumara Swamiji Quotes in Kannada

7th Notes App

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ  

ಕನ್ನಡ ದೀವಿಗೆ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ  ಮತ್ತು ನಾವು ನಿಮ್ಮನ್ನು ಶೀಘ್ರದಲ್ಲಿಯೇ ಸಂಪರ್ಕಿಸುತ್ತೇವೆ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh