rtgh

6th Standard Krishna Sudama Kannada Notes | 6ನೇ ತರಗತಿ ಕೃಷ್ಣ – ಸುಧಾಮ (ನಾಟಕ) ಕನ್ನಡ ನೋಟ್ಸ್

6ನೇ ತರಗತಿ ಕೃಷ್ಣ ಸುಧಾಮ ನಾಟಕ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 6th Standard Krishna Sudama Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Chapter 3 Notes 7th Class Kannada 3rd Lesson Notes Krishna Sudama Nataka Question Answer Kannada Krishna Sudama Nataka 6th Standard Notes

7th Standard Kannada 3rd Chapter Notes Pdf

ಅಧ್ಯಾಯ3

ಕೃಷ್ಣ – ಸುಧಾಮ (ನಾಟಕ)

ಲೇಖಕ : ವಿ.ಎಸ್ . ಶಿರಹಟ್ಟಿಮಠರು

ಜನನ  : 01-02-1953 , ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ

ತಂದೆ : ಶಂಕರಯ್ಯ , ತಾಯಿ : ಗುರುಸಿದ್ದಪ್ಪ

ವೃತ್ತಿ:  ಮುಖ್ಯೋಪಾಧ್ಯಾಯರು , ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ , ಹಲಗಲಿ ಬಾಗಕೋಟೆ ಜಿ .

ಪ್ರವೃತ್ತಿ : ಅನುವಾದಕರು , ನಾಟಕಕಾರರು

ಕೃತಿಗಳು

 ನಾಟಕಗಳು : ತುಂಬದ ಕೊಡ , ನರಗುಂದ ಬಂಡಾಯ , ಮಾಡಿದ್ದುಣ್ಣೆ ಮಾರಾಯ , ಗುಣವಂತ

ರಾಜಕುಮಾರ ಮುಂತಾದ 60 ಕ್ಕೂ ಹೆಚ್ಚಿನ ಮಕ್ಕಳ ನಾಟಕ ರಚಿಸಿದ್ದಾರೆ . 

ಪ್ರಶಸ್ತಿಗಳು 

2002 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಸ್ತುತ ಪಾಠವನ್ನು ಇವರ ಹೂವಿನ ಹಂದರ ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ . 

6th Standard Kannada Krishna Sudama Nataka Notes

ಅ . ಈ ಪದಗಳಿಗೆ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ

  1. ಗೆಳೆಯ : ಮಿತ್ರ , ಸ್ನೇಹಿತ
  2. ಹೆಂಡತಿ : ಪತ್ನಿ , ಶ್ರೀಮತಿ , ಮಡದಿ
  3. ರಾಜ : ಅರಸ , ರಾಯ 
  4. ದುಡಿಮೆ : ಪರಿಶ್ರಮ , ಶ್ರಮಿಸು 

ಆ . ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ . 

  1. ಪರಮಮಿತ್ರ : ದುರ್ಯೋಧನನ ಪರಮ ಮಿತ್ರ ಕರ್ಣ 
  2. ವಿಶ್ರಾಂತಿ : ನನಗೆ ಈಗ ಸ್ವಲ್ಪ ಹೊತ್ತು ವಿಶ್ರಾಂತಿ ಬೇಕು .
  3. ಸತ್ಕಾರ : ಮನೆಗೆ ಅಥತಿಗಳು ಬಂದಾಗ ಅವರನ್ನು ಸತ್ಕರಿಸುವುದು ನಮ್ಮ ಸಂಸ್ಕೃತಿ . 
  4. ಸಂತೋಷ : ಪರೀಕ್ಷೆಯಲ್ಲಿ ನನಗೆ ಹೆಚ್ಚಿನ ಅಂಕ ಬಂದುದರಿಂದ ನನಗೆ ಬಹಳ ಸಂತೋಷವಾಗಿದೆ .
  5. ಶ್ರಮಿಸು : ರೈತರು ಹೊಲ – ಗದ್ದೆಗಳಲ್ಲಿ ಬಹಳವಾಗಿ ಶ್ರಮಿಸುತ್ತಾರೆ . 

ಇ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ . 

1. ಸುಧಾಮ ಯಾವುದನ್ನು ಮಾನವಧರ್ಮ ಎನ್ನುತ್ತಾನೆ ?

 ಉತ್ತರ : “ ಜೀವನದಲ್ಲಿ ಬಂದುದ್ದನ್ನು ಅನುಭವಿಸಲೇಬೇಕು , ಅದೇ ಮಾನವ ಧರ್ಮ ” ಎಂಬುದಾಗಿ ಸುಧಾಮ ಹೇಳುತ್ತಾನೆ . 

2. ಯಾರಿಗಾಗಿ ಶ್ರೀಕೃಷ್ಣನ ಬಳಿ ಸಹಾಯ ಕೇಳಲು ಸುಧಾಮನ ಪತ್ನಿ ಹೇಳುತ್ತಾಳೆ ? 

ಉತ್ತರ : ಮಕ್ಕಳಿಗಾಗಿ ಶ್ರೀ ಕೃಷ್ಣನ ಬಳಿ ಸಹಾಯ ಕೇಳಲು ಸುಧಾಮನ ಪತ್ನಿ ಹೇಳುತ್ತಾಳೆ .

3. ಸುಧಾಮನ ಕಣ್ಣಲ್ಲಿ ನೀರು ಏಕೆ ಬಂತು ?

 ಉತ್ತರ : ಶ್ರೀ ಕೃಷ್ಣ ಸುಧಾಮನನ್ನು ಕೈ ಹಿಡಿದು ಒಳಗೆ ಕರೆದುಕೊಂಡು ಬಂದಾಗ ಸುಧಾಮನ ಕಣ್ಣಲ್ಲಿ ಸಂತೋಷದಿಂದ ನೀರು ಬಂತು . 

4. ಮನೆಗೆ ಮರಳಿದ ಸುಧಾಮನು ಏನನ್ನು ಕಂಡನು ? 

ಉತ್ತರ : ಮನೆಗೆ ಮರಳಿದ ಸುಧಾಮನು ತನ್ನ ಮನೆಯ ಜಾಗದಲ್ಲಿ ದೊಡ್ಡ ಅರಮನೆ ಇದ್ದದ್ದನ್ನು ಹೆಂಡತಿ ಮಕ್ಕಳು ರೇಷ್ಮೆ ವಸ್ತ್ರ ಧರಿಸಿ , ಮೈಮೇಲೆ ಚಿನ್ನದ ಒಡವೆಗಳನ್ನು ಧರಿಸಿದ್ದನ್ನು ಕಂಡನು . 

5. ಸುಧಾಮನ ಮನೆಯನ್ನು ಕಟ್ಟಿಸಿದವರು ಯಾರು ? 

ಉತ್ತರ : ಸುಧಾಮನ ಮನೆಯನ್ನು ಕಟ್ಟಿಸಿದವರು ಶ್ರೀ ಕೃಷ್ಣ . 

ಈ ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ . 

1. ಕೃಷ್ಣ – ಸುಧಾಮರು ಗುರುಕುಲದಲ್ಲಿ ಕಳೆದ ದಿನಗಳನ್ನು ಪರಸ್ಪರ ನೆನಪಿಸಿಕೊಂಡದ್ದು ಹೇಗೆ ?

 ಉತ್ತರ : ಕೃಷ್ಣ ಸುಧಾಮರು ಗುರುಕುಲದಲ್ಲಿ ಒಟ್ಟಿಗೆ ಊಟ ಮಾಡುತ್ತಿದ್ದದ್ದು . ಕಟ್ಟಿಗೆ ತರಲು ಹೋಗುತ್ತಿದ್ದದ್ದು , ಗುರುಮಾತೆ ಕೊಟ್ಟಿದ್ದ ಹುರಿ

2. ಕೃಷ್ಣನು ಸುಧಾಮನಿಗೆ ಮನೆ ಕಟ್ಟಿಸಿಕೊಟ್ಟ ಸಂದರ್ಭವನ್ನು ವಿವರಿಸಿರಿ . 

ಉತ್ತರ : ಕೃಷ್ಣನು ಸುಧಾಮನಿಗೆ ಮನೆ ಕಟ್ಟಿಸಿಕೊಟ್ಟ ಸಂದರ್ಭವನ್ನು ಸುಧಾಮನ ಹೆಂಡತಿ , ಶ್ರೀ ಕೃಷ್ಣನು ಮನೆ ಕಟ್ಟಿಸಿದ ರೀತಿಯನ್ನು ಈ ರೀತಿ ವಿವರಿಸಿದಳು , “ ನೀವು ದ್ವಾರಕ ನಗರ ತಲುಪಿದ ದಿನವೇ ಅಲ್ಲಿಂದ ಸೇವಕರ ದಂಡು ಬಂತು , ಬೇಕಾದ ಎಲ್ಲಾ ವಸ್ತುಗಳನ್ನು ತಂದರು , ಚಕ ಚಕಾಂತ ಮನೆ ನಿರ್ಮಿಸಿದರು . ನಮಗೆಲ್ಲ ಹೊಸ ಉಡುಪು , ಆಭರಣಗಳನ್ನು ಸಹ ಕೊಟ್ಟರು ” . 

ಉ . ಕೆಳಗಿನ ಮಾತುಗಳನ್ನು ಯಾರು , ಯಾರಿಗೆ , ಯಾವಾಗ ಹೇಳಿದರು ? 

1. ನನ್ನನ್ನು ಕಂಡರೆ ಅವನಿಗೆ ಅಪಾರ ಪ್ರೀತಿ , ಸ್ನೇಹ , ಗೌರವ 

ಉತ್ತರ : ಈ ಮಾತನ್ನು ಸುಧಾಮನು ಶ್ರೀ ಕೃಷ್ಣನ ಬಳಿ ಸಹಾಯ ಕೇಳಲು ಹೇಳಿದ ತನ್ನ ಹೆಂಡತಿಗೆ ಹೇಳಿದನು . 

2. ಹಸಿದಿರುವ ಮಕ್ಕಳಿಗೋಸ್ಕರನಾದರೂ ಹೋಗಿ ಕೇಳಿ 

 ಉತ್ತರ : ಈ ಮಾತನ್ನು ಸುಧಾಮನ ಹೆಂಡತಿ , ಸುಧಾಮನ ಆಪ್ತಮಿತ್ರನಾಗಿರುವ ಶ್ರೀ ಕೃಷ್ಣನ ಬಳಿ ಸಹಯ ಕೇಳಲು ಹೇಳಿದಾಗ ಮಿತ್ರನ ಬಳಿ ಕೇಳಿದರೆ ಸ್ವಾಭಿಮಾನಕ್ಕೆ ಧಕ್ಕೆ ಬರುವುದು ಸ್ನೇಹದ ದುರುಪಯೋಗವಾಗುವುದೆಂದು ಯೋಚಿಸುತ್ತದ್ದ ಸಂದರ್ಭದಲ್ಲಿ ಸುಧಾಮನಿಗೆ ಹೇಳುತ್ತಾನೆ .

3. ನನಗೆ ಗುರುಕುಲದ ಜೀವನ ನೆನಪಾಗುತ್ತದೆ . 

ಉತ್ತರ : ನನಗೆ ಗುರುಕುಲದ ಜೀವನ ನೆನಪಾಗುತ್ತದೆ ಸಹಾಯ ಕೇಳಲೆಂದು ಬಂದ ಸುಧಾಮನು , ತನ್ನ ಬಡತನದ ಬಗ್ಗೆ ಹೇಗೆ ಹೇಳುವುದು ? ಏನೆಂದು ಸಹಾಯ ಕೇಳುವುದೆಂದು ಯೋಚಿಸುತ್ತಿರುವಾಗಲೇ ಶ್ರೀ ಕೃಷ್ಣನು ಸುಧಾಮನ ಬಳಿ ಬಂದು ಯೋಗಕ್ಷೇಮ ವಿಚಾರಿಸುತ್ತಾ ತಾವಿಬ್ಬರು ಈ ವಾಕ್ಯವನ್ನು ಸುಧಾಮನಿಗೆ ಹೇಳಿದನು . 

4. ನಿಮಗೂ ರೇಷ್ಮೆ ಬಟ್ಟೆ ಕೊಟ್ಟಿದ್ದಾರೆ. 

 ಉತ್ತರ : ಶ್ರೀ ಕೃಷ್ಣನಿಂದ ಬೀಳ್ಕೊಂಡು ಏನೂ ಕೇಳದೆ ಬಂದ ಸುಧಾಮ ತನ್ನ ಪುಟ್ಟ ಗುಡಿಸಲ ಜಾಗದಲ್ಲಿ ಅರಮನೆ ಇದ್ದದ್ದು ಹೆಂಡತಿ ಮಕ್ಕಳು ರೇಷ್ಮೆ ಉಡುಗೆ – ತೊಡುಗೆ ಹಾಗೂ ಉಡವುಗಳನ್ನು ಧರಿಸಿದ್ದನ್ನು ಕಂಡು ಆಶ್ಚರ್ಯಪಟ್ಟನು . ಆಗ ಸುಧಾಂನ ಮಗ ಓಡಿ ಬಂದು ಈ ಮಾತನ್ನು ಸುಧಾಮನಿಗೆ ಹೇಳಿದನು .

FAQ :

ಸುಧಾಮನ ಕಣ್ಣಲ್ಲಿ ನೀರು ಏಕೆ ಬಂತು ?

 ಉತ್ತರ : ಶ್ರೀ ಕೃಷ್ಣ ಸುಧಾಮನನ್ನು ಕೈ ಹಿಡಿದು ಒಳಗೆ ಕರೆದುಕೊಂಡು ಬಂದಾಗ ಸುಧಾಮನ ಕಣ್ಣಲ್ಲಿ ಸಂತೋಷದಿಂದ ನೀರು ಬಂತು. 

ಸುಧಾಮ ಯಾವುದನ್ನು ಮಾನವಧರ್ಮ ಎನ್ನುತ್ತಾನೆ ?

 ಉತ್ತರ : “ ಜೀವನದಲ್ಲಿ ಬಂದುದ್ದನ್ನು ಅನುಭವಿಸಲೇಬೇಕು , ಅದೇ ಮಾನವ ಧರ್ಮ ” ಎಂಬುದಾಗಿ ಸುಧಾಮ ಹೇಳುತ್ತಾನೆ . 

ಸುಧಾಮನ ಮನೆಯನ್ನು ಕಟ್ಟಿಸಿದವರು ಯಾರು ? 

ಉತ್ತರ : ಸುಧಾಮನ ಮನೆಯನ್ನು ಕಟ್ಟಿಸಿದವರು ಶ್ರೀ ಕೃಷ್ಣ. 

ಇತರೆ ವಿಷಯಗಳು :

6th Standard All Subject Notes

ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *