6ನೇ ತರಗತಿ ಗಂಧರ್ವಸೇನ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 6th Standard Gandharvasena Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Chapter 2 Notes 6th Class Kannada 2nd Lesson Notes 6th Standard Kannada 2nd Chapter Notes Gandharvasena Kannada Question Answer 6th Standard Kannada Notes of Lesson 2
Gandharvasena 6th Class Notes
ಅ. ಸರಿಯಾದ ಪದಗಳನ್ನು ಆಯ್ಕೆ ಮಾಡಿ ಬಿಟ್ಟ ಸ್ಥಳ ತುಂಬಿರಿ.
- ರಾಜನು ಒಡ್ಡೋಲಗ ವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿದ .
- ಸೇವಕಿ ಚುರುಕು ಬುದ್ಧಿಯವಳು .
- ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ನಿಜಾಂಶ ಹೇಳಿದ .
- ರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು ಮಂತ್ರಿ .
- ಅಂತಃಪುರ ಇದರ ಅರ್ಥ ರಾಣಿವಾಸ
ಆ . ಈ ಪದಗಳ ಅರ್ಥ ಬರೆಯಿರಿ.
- ನಿಟ್ಟುಸಿರು : ದೀರ್ಘವಾಗಿ ಬಿಡುವ ಉಸಿರು .
- ಪರಿಸಮಾಪ್ತಿ : ಮುಕ್ತಾಯ .
- ಮಾರ್ನುಡಿ : ಪ್ರತಿಯಾಗಿ ಮಾತನಾಡು .
- ಉದ್ಧರಿಸು : ಹೇಳು , ಹೊರಗೆಡಹು .
ಇ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಮಂತ್ರಿ ಅಳುತ್ತಾ ರಾಜನ ಬಳಿ ಏನೆಂದು ಹೇಳಿದ ?
ಉತ್ತರ : ಮಂತ್ರಿ ಅಳುತ್ತಾ ರಾಜನ ಬಳಿ ಬಂದು – “ ಗಂಧರ್ವ ಸೇನರು ತೀರಿಕೊಂಡರಂತೆ ” ಎಂದು ಹೇಳಿದ
2. ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಜ ಯಾರಿಗೆ ಹೇಳಿದ ?
ಉತ್ತರ : ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಜ ರಾಣಿವಾಸದವರಿಗೆ ಹೇಳಿದನು .
3. ರಾಣಿಯ ಸೇವಕಿ ಏನೆಂದು ಆಲೋಚನೆ ಮಾಡಿದಳು ?
ಉತ್ತರ : ರಾಣಿಯ ಸೇವಕಿ , “ ನಮ್ಮ ಮಹಾರಜರಿಗೂ , ಆ ಗಂಧರ್ವ ಸೇನರಿಗೂ ಏನು ಸಂಬಂಧ ? ಎಂದು ಆಲೋಚನೆ ಮಾಡಿದಳು.
4. ರಾಣಿಯರು ನಗಲು ಕಾರಣವೇನು ?
ಉತ್ತರ : ರಾಜ ಮತ್ತು ಅವನ ಆಸ್ಥಾನಿಕರ ಮೂರ್ಖತನಕ್ಕೆ ರಾಣಿಯರು ನಗಲು ಕಾರಣವಾಯಿತು
ಈ ಕೆಳಗಿನ ಪ್ರಶ್ನೆಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ .
1. ರಾಜನ ಒಡ್ಡೋಲಗ ನಡೆದ ಪ್ರಸಂಗವನ್ನು ವಿವರಿಸಿರಿ .
ಉತ್ತರ : ರಾಜನ ಒಡೋಲಗದಲ್ಲಿ ನಡೆದ ಪ್ರಸಂಗವೆಂದರೆ ‘ ರಾಜ್ಯದ ಒಡೋಲಗ ನಡೆಯುತ್ತಿದ್ದಾಗ ಮಂತ್ರಿ ಗಟ್ಟಿಯಾಗಿ ಅಳುತ್ತಾ ಬಂದು , ಸಿಂಹಾಸನವನ್ನು ಚುಂಬಿಸಿ , ಭೂಮಿಯನ್ನು ಮುಟ್ಟಿ ನಮಸ್ಕರಿಸಿ ತನ್ನ ನಾಲಿಗೆಯನ್ನು ಉದ್ದ ಮಾಡಿ ಮಹಾರಾಜರೇ ಗಂಧರ್ವ ಸೇನರು ತೀರಿಕೊಂಡರಂತೆ ‘ ಎಂದು ಉದ್ಗರಿಸುತ್ತಾ ಮೂರ್ಛ ಹೋದ . ರಾಜನು ಒಡೋಲಗವನ್ನು ಅಲ್ಲಿಗೆ ಪರಿಸಮಾಪ್ತಿಗೊಳಿಸಿ ಕಣ್ಣೀರು ಸುರಿಸುತ್ತಾ ಗಂಧರ್ವಸೇನರ ಆತ್ಮಶಾಂತಿಗೆ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಎಲ್ಲರೂ ಶೋಕಾಚರಣೆ ಮಾಡಬೇಕೆಂದು ಆಜ್ಞಾಪಿಸಿದನು .ಮಂತ್ರಿಯ ಆರೈಕೆಗೆ ವೈದ್ಯರನ್ನು ಕರೆಸಿ ಉಪಚರಿಸುವಂತೆ ರಾಜಭಟರಿಗೆ ತಿಳಿಸಿ ಅಂತಃಪುರಕ್ಕೆ ಬಂದು ಅಲ್ಲಿಯೂ ಕರುಳುಕಿತ್ತು ಬರುವಮತೆ ಅಳತೊಡಗಿದನು .
ಉ. ಸಂದರ್ಭ ಸಹಿತ ವಿವರಿಸಿರಿ .
1.“ ರಾಜ ಅಲ್ಲಿಯೂ ಕರುಳು ಕಿತ್ತು ಬರುವಂತೆ ಅಳತೊಡಗಿದ . ”
ಉತ್ತರ : ಪ್ರಸ್ತವನೆ : ಪ್ರಸ್ತುತ ಈ ವಾಕ್ಯವನ್ನು ‘ ಜಾನಪದ ಕಥೆ’ಯಿಂದ ಆರಿಸಲಾದ ‘ ಗಂಧರ್ವಸೇನ ‘ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಪ್ರಸ್ತುತ ಈ ವಾಕ್ಯವನ್ನು ಕತೆಯನ್ನು ರಚಿಸಿದ ಕಥೆಗಾರ ರಾಜನ ಬಗ್ಗೆ ಕೇಳುಗರಿಗೆ , ಓದುಗರಿಗೆ ( ಮಕ್ಕಳಿಗೆ ) ಹೇಳುತ್ತಿದ್ದಾರೆ .
ವಿವರಣೆ : ಗಂಧರ್ವಸೇನ ಸತ್ತನೆಂಬ ವಿಷಯ ತಿಳಿದು , ಹಾಗೂ ಮಂತ್ರಿ ಅಳುತ್ತಾ ಮೂರ್ಛ ಹೋದುದ ಕಂಡು , ರಾಜನು ಕೂಡ ಅಳುತ್ತಾ , ರಾಣಿವಾಸದವರಿಗೆ ವಿಷಯ ತಿಳಿಸಿ ಅಲ್ಲಿಯೂ ಕರುಳು ಕಿತ್ತು ಬರುವಂತೆ ಅಳತೊಡಗಿದ . ವಿಶೇಷತೆ : ಭಾಷೆ ಸರಳವಾಗಿದೆ . ಸುಲಭವಾಗಿದೆ .
2.“ ಸ್ವಾಮಿ , ಅವರು ಯಾರು ? ಏನಾಗಿದ್ದರು ? ಎಂದು ನನಗೆ ತಿಳಿಯದು.”
ಉತ್ತರ : ಪ್ರಸ್ತವನೆ : ಪ್ರಸ್ತುತ ಈ ವಾಕ್ಯವನ್ನು ‘ ಜಾನಪದ ಕಥೆ’ಯಿಂದ ಆರಿಸಲಾದ ‘ ಗಂಧರ್ವಸೇನ ‘ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಈ ವಾಕ್ಯವನ್ನು ಪಡೆಯುವ ಮುಖ್ಯಸ್ಥ ಮಂತ್ರಿಗೆ ಗಂಧರ್ವಸೇನನ ಬಗ್ಗೆ ಹೇಳುತ್ತಾ ಈ ವಾಕ್ಯವನ್ನು ಹೇಳಿದ್ದಾನೆ .
ವಿವರಣೆ : ಗಂಧರ್ವಸೇನಾ ಯಾರು ಎಂಬುದು ತನಗೇನು ತಿಳಿದಿಲ್ಲವೆಂದು , ಅವರು ಏನಾಗಿದ್ದರು ಎಂದು ಕೂಡ ತನಗೆ ಗೊತ್ತಿಲ್ಲ ಎಂಬ ಬಗ್ಗೆ ಮಂತ್ರಿಯವರಿಗೆ ತಳಿಸಿದನು . ತನ್ನ ಹೆಂಡತಿ ಹೇಳಿದ ವಿಷಯವನ್ನು ತಮಗೆ ತಿಳಿದಿರಲೆಂದು ಹೇಳಿದ ಎಂಬುದಾಗಿ ಹೇಳುತ್ತಾನೆ .
ವಿಶೇಷತೆ : ಪಡೆಯ ಮುಖ್ಯಸ್ಥನ ಮೂರ್ಖತನ ಇಲ್ಲಿ ತಿಳಿದು ಬಂದಿದೆ .
3.“ ನಿನ್ನೆ ರಾತ್ರಿ ಕಣ್ಣು ಮುಚೊಂಬಿಟ್ಟ. ”
ಉತ್ತರ : ಪ್ರಸ್ತವನೆ : ಪ್ರಸ್ತುತ ಈ ವಾಕ್ಯವನ್ನು ‘ ಜಾನಪದ ಕಥೆ’ಯಿಂದ ಆರಿಸಲಾದ ‘ ಗಂಧರ್ವಸೇನ ‘ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಮಡಿವಾಳ , ‘ ಗಂಧರ್ವಸೇನ ‘ ಎಂಬ ತನ್ನ ಕತ್ತೆಯು ಹಿಂದಿನ ರಾತ್ರಿ ತೀರಿಕೊಂಡ ಬಗ್ಗೆ , ಮಂತ್ರಿ , ಪಡೆಯ ಮುಖ್ಯಸ್ಥ, ಹಾಗೂ ಆತನ ಹೆಂಡತಿಗೆ ಹೇಳಿದಳು .
ವಿವರಣೆ : ‘ ಗಂಧರ್ವಸೇನ ‘ ಎಂಬುದು ಮಡಿವಾಳಿ ತನ್ನ ಕತ್ತೆಗೆ ಇಟ್ಟ ಪ್ರೀತಿಯ ಹೆಸರು , ಅದು ಹಿಂದಿನ ದಿನ ಸತ್ತು ಹೋದ ಕಾರನ ಮಗನಂತೆ ಸಾಕಿದ್ದ ಅದನ್ನು ಕಳೆದುಕೊಂಡು ದುಃಖಪಡುತ್ತಾ ಹಿಂದಿನ ದಿನ ರಾತ್ರಿ ಅದು ಸತ್ತು ಹೋಯಿತೆಂದು ಅಳುತ್ತಾ ತಿಳಿಸಿದಳು .
ವಿಶೇಷತೆ : ಪ್ರಾಣಿಗಳ ಬಗ್ಗೆ ಇದ್ದ ಪ್ರೇಮ ಪ್ರೀತಿ ಸರಳ – ಸಹಜ ಭಾಷೆಯಲ್ಲಿ ವ್ಯಕ್ತವಾಗಿದೆ .
4.“ ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು .”
ಉತ್ತರ : ಪ್ರಸ್ತವನೆ : ಪ್ರಸ್ತುತ ಈ ವಾಕ್ಯವನ್ನು ‘ ಜಾನಪದ ಕಥೆ’ಯಿಂದ ಆರಿಸಲಾದ ‘ ಗಂಧರ್ವಸೇನ ‘ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಈ ವಾಕ್ಯವನ್ನು ಕಥೆಯ ಸಂಕಲನಗಾರರು ರಾಜ ಹಾಗೂ ಆತನ ಆಸ್ಥಾನಿಕರ ಮೂರ್ಖತನದ ಬಗ್ಗೆ ಬರೆಯುತ್ತಾ ‘ ಗಂಧರ್ವಸೇನ ‘ ಬಗ್ಗೆ ನಿಜಾಂಶ ತಿಳಿದಾಗ ರಾಣಿವಾಸದಲ್ಲಿ ಉಂಟಾದ ನಗುವನ್ನು ಕಂಡು ಬರೆದಿದ್ದಾರೆ .
ವಿವರಣೆ : ಕುರಿಗಳು ಯಾವಾಗಲೂ ತಲೆ ಬಗ್ಗಿಸಿ ಹೋಗುತ್ತಿರುತ್ತವೆ . ಮುಂದೆ ಹೋಗುವ ಕುರಿ ಹೇಗೆ ಸಾಗುವುದೋ ಅದನ್ನೆ ಎತರ ಕುರಿಗಳು ಹಿಂಬಾಲಿಸುವುವು . ಮೂರ್ಖತನಕ್ಕೆ ಉದಾಹರಣೆಯಾಗಿದೆ . ಈ ಗಾದೆಯನ್ನು ಇಲ್ಲಿ ವಿವರಿಸಲಾಗಿದೆ .
ವಿಶೇಷತೆ : ಹಾಸ್ಯಸ್ಪದವಾದ ಗಾದೆ ಮಾತು ಇದಾಗಿದೆ .
- ಮೂಗು ತೂರಿಸು , 2. ಕೇಳಿದ ಕಿವಿ ಊರಿಗೆ ಮಾರಿ ತಂದಿತು , 3. ಕಾಲಿಗೆ ಬುದ್ಧಿಹೇಳು , 4. ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೆ ಬುರುಡೆ , 5. ಬೆನ್ನಿಗೆ ಚೂರಿ ಹಾಕು , 6. ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು , 7. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ , 8. ತಲೆ ಹಾಕು , 9. ಮುಚ್ಚಿಟ್ಟದ್ದು ಮಣ್ಣಿನ ಪಾಲು , 10. ಕರುಳು ಹಿಂಡು , 11. ಮಂಕು ಬೂದಿ , 12. ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು .
ನುಡಿಗಟ್ಟುಗಳು | ಗಾದೆಗಳು | ಒಗಟುಗಳು |
ಮೂಗು ತೂರಿಸುಕಾಲಿಗೆ ಬುದ್ಧಿಹೇಳುಬೆನ್ನಿಗೆ ಚೂರಿ ಹಾಕುತಳೆ ಹಾಕುಕರುಳು ಹಿಂಡುಮಂಕು ಬೂದಿ | ಕೇಳಿದ ಕಿಎ ಊರಿಗೆ ಮಾರಿ ತಂದಿತುಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು .ಮುಚ್ಚಿಟ್ಟದ್ದು ಮಣ್ಣಿನ ಪಾಲು | ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೆ ಬುರುಡೆ ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು . |
FAQ :
ಉತ್ತರ : ಮಂತ್ರಿ ಅಳುತ್ತಾ ರಾಜನ ಬಳಿ ಬಂದು – “ ಗಂಧರ್ವ ಸೇನರು ತೀರಿಕೊಂಡರಂತೆ ” ಎಂದು ಹೇಳಿದ
ಉತ್ತರ : ರಾಜ ಮತ್ತು ಅವನ ಆಸ್ಥಾನಿಕರ ಮೂರ್ಖತನಕ್ಕೆ ರಾಣಿಯರು ನಗಲು ಕಾರಣವಾಯಿತು
ಇತರೆ ವಿಷಯಗಳು :
6th Standard All Subject Notes
ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.