6th Standard Doddavara Dari Kannada Notes | 6ನೇ ತರಗತಿ ದೊಡ್ಡವರ ದಾರಿ ಕನ್ನಡ ನೋಟ್ಸ್ 

6th Standard Doddavara Dari Kannada Notes | 6ನೇ ತರಗತಿ ದೊಡ್ಡವರ ದಾರಿ ಕನ್ನಡ ನೋಟ್ಸ್ 

6th Standard Doddavara Dari Kannada Notes | 6ನೇ ತರಗತಿ ದೊಡ್ಡವರ ದಾರಿ ಕನ್ನಡ ನೋಟ್ಸ್ , ಪ್ರಶ್ನೆ ಉತ್ತರ question answer, text book pdf download Kannada deevige 6th class Notes pdf summary in Kannada

 

 

 

 

ಲೇಖಕ   :   ಬೆ.ಗೋ ರಮೇಶ್ಜ

ಜನನ   :    1945 ಆಗಸ್ಟ್ 22 , ಮೈಸೂರು ಜಿ , ಕೃಷ್ಣರಾಜನಗರ ತಾ . ದೊಡ್ಡಹನಸೋಗೆ ಗ್ರಾಮ

ತಾಯಿ   :  ರಾಧಮ್ಮ:ತಂದೆ  :  ಬಿ.ಎಸ್ . ಗೋವಿಂದರಾಜು 

ವಿದ್ಯಾಭ್ಯಾಸ   :  ಬಿ.ಇ. ಪಧವೀದರರು 

ವೃತ್ತ್ತಿ  :  ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು , ಕ.ವಿ.ನಿ. 

ಪ್ರವೃತ್ತಿ  :  ಸಾಹಿತಿ  ಭಾಷಾಂತರಕಾರ , ಗಮಕಿ

 ವಚನಗಳ ಅಂಕಿತ  :   ಶಾಂತಿಪ್ರಿಯ

 

ಕೃತಿಗಳು 

ಕನ್ನಡದಲ್ಲಿ 500 ಕ್ಕಿಂತಲೂ ಹೆಚ್ಚು ಕೃತಿಗಳು 

ವಿಶ್ವವಿಖ್ಯಾತ ಮಹಿಳೆಯರು , ನಮ್ಮ ಗಮಕಿಗಳು , ಕನ್ನಡ ಕವಿರತ್ನತ್ರಯರು ,

 ವಿಜ್ಞಾನಿಗಳ & ದೇಶಭಕ್ತರ ಜೀವನ ಚರಿತ್ರೆಗಳು , ವಚನಸಾಗರ ,

 ಪ್ರಶಸ್ತಿಗಳು 

ವಚನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 600 ವಚನಗಳ ಸಂಕಲನ ವಚನಸಾಗರ ಕೃತಿಗೆ

 ಸರ್ ಎಂ.ವಿ. ನವರತ್ನ ಪ್ರಶಸ್ತಿ , ಡೆಪ್ಯುಟಿ ಚನ್ನಬಸಪ್ಪ ರಾಜ್ಯ ಪ್ರಶಸ್ತಿ 

ಪ್ರಸ್ತುತ ಪಾಠವನ್ನು ಇದರ ಪ್ರಸಿದ್ಧ ವ್ಯಕ್ತಿಗಳ ಬಾಳಿನಲ್ಲಿ ಒಂದು ಘಟನೆ ಎಂಬ ಕೃತಿಯಿಂದ

ಆಯ್ದುಕೊಳ್ಳಲಾಗಿದೆ .

ಅಧ್ಯಾಯ– 1

ದೊಡ್ಡವರ ದಾರಿ

ಪ್ರಶ್ನೆಗಳು ಮತ್ತು ಉತ್ತರಗಳು :

 ಅ . ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದುದನ್ನು ಆರಿಸಿ ಬಿಟ್ಟಸ್ಥಳ ಭರ್ತಿಮಾಡಿರಿ . 

 1. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಬೇಕು ಎಂದೆನಿಸಿತು .
 2. ಪ್ರಸಾದರು ಅವರಿಗೆಲ್ಲ ಅಷ್ಟಷ್ಟು ಕಾಸು ಕೊಟ್ಟರು . 
 3. ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು . 
 4. ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡೂ ಆಗಿತ್ತು . 

ಆ . ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ರಚಿಸಿರಿ

 1. ರಾಷ್ಟ್ರಪತಿ : ‘ ಅಬ್ದುಲ್ ಕಲಾಂ ‘ ನಮ್ಮ ರಾಷ್ಟ್ರಪತಿಗಳಾಗಿದ್ದರು . 
 2. ಕಾಸು : ಕಾಸು ಈಗ ಚಲಾವಣೆಯಲ್ಲಿ ಇಲ್ಲ .
 3. ಶಿಸ್ತು : ಮಕ್ಕಳಿಗೆ ಚಿಕ್ಕವಯಸಿನಲ್ಲಿಯೇ ಸರಿಯಾದ ಶಿಸ್ತು ಬೆಳೆಸಬೇಕಾಗಿರುವುದು ತಂದೆ – ತಾಯಿಯ ಕರ್ತವ್ಯವೂ ಕೂಡ ಹೌದು . 
 4. ದಾರಿ : ನಾವು ಸರಿಯಾದ ದಾರಿಯಲ್ಲಿ ನಡೆದರೆ ಗುರಿ ತಲುಪಬಹುದು . 

ಇ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ . 

 1. ರಾಜೇಂದ್ರ ಪ್ರಸಾದರು ತಾವು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು ? 

        ಉತ್ತರ : ರಾಜೇಂದ್ರ ಪ್ರಸಾದರು ತಾವು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು . 

 1. ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಏನನ್ನು ಕೊಟ್ಟರು ?

     ಉತ್ತರ : ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಕಾಸು ಕೊಟ್ಟರು . 

 1. ಯಾವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು ? 

        ಉತ್ತರ : ಪುಸ್ತಕದ ಪುಟಗಳನ್ನು ಹರಿದು ಹಾಕುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು . 

 1. ಜಾಮಿಯಾ ಮಿಲಿಯಾ ಎಲ್ಲಿದೆ ? 

         ಉತ್ತರ : ಜಾಮಿಯಾ ಮಿಲಿಯಾ ದೆಹಲಿಯಲ್ಲಿದೆ .

 1. ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಯಾವ ವೇಷ ಹಾಕಿದರು ? 

ಉತ್ತರ : ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಬೂಟ್ ಪಾಲಿಶ್ ಮಾಡುವವಣ ವೇಶ ಹಾಕಿದರು . 

ಈ ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು ? 

 1. “ ನೋಡಿ ಮಕ್ಕಳೇ , ಪುಸ್ತಕಗಳು ಜ್ಞಾನ ಭಂಡಾರ . ” 

ಉತ್ತರ : ಈ ಮಾತನ್ನು ರಾಜೇಂದ್ರ ಪ್ರಸಾದರು ಮಕ್ಕಳಿಗೆ ಹೇಳಿದರು . 

 1. “ ತಾತಾ , ನಾವು ಇನ್ನು ಮುಂದೆ ಎಂದೂ ಪುಸ್ತಕಗಳ ಪುಟಗಳನ್ನು ಹರಿಯುವುದಿಲ್ಲ . ” 

ಉತ್ತರ : ಮಕ್ಕಳು . ರಾಜೇಂದ್ರ ಪ್ರಸಾದರಿಗೆ ಈ ಮಾತನ್ನು ಹೇಳಿದರು . 

ಉ . ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ . 

 1. ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವವನ್ನು ವಿವರಿಸಿರಿ . 

ಉತ್ತರ : ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವ ಪ್ರಶಂಸನೀಯವಾಗಿದ್ದು , ಅವರದು ಜನಕ ಮಹಾರಾಜನಂತೆ ಋಷಿ ಸದೃಶ ಜೀವನ ,

ಅವರು ಕೋಪವನ್ನು ಹತ್ತಿಕ್ಕಬಲ್ಲವರಾಗಿದ್ದು ಬಾಳಿನಲ್ಲಿ ಶಿಸ್ತು , ಸಂಯಮ , ಸಮಯ ಪಾಲನೆ ಇವುಗಳಿಗೆ ಭಾರಿ ಮಹತ್ವ ನೀಉತ್ತಿದ್ದರು .

ತಾವು ` ಜನರ ಸೇವಕ ‘ ಎಂದು ಹೇಳಿಕೊಳ್ಳುತ್ತಿದ್ದರು .

 1. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್‌ಹುಸೇನ್ ಏನು ಮಾಡಿದರು ? 

ಉತ್ತರ : ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ಜಾಕಿರ್ ಹುಸೇನ್‌ರವರು ವಿಶ್ವವಿದ್ಯಾನಿಲಯದ ಪ್ರವೇಶದ್ವಾರದಲ್ಲಿ ಒಬ್ಬ ಬೂಟ್ ಪಾಲಿಶ್

ಹಾಕುವವನ ವೇಶದಲ್ಲಿ , ಕೈಯಲ್ಲಿ ಪಾಲಿಶ್ ಡಬ್ಬಿ , ಬ್ರಷ್ ಹಿಡಿದು ಕುಳಿತಿದು , ಒಂದಿಬ್ಬರಿಗೆ ಪಾಲಿಶ್ ಕೂಡ ಮಾಡಿದ್ದರು . 

ಊ . ವಚನ ಬದಲಿಸಿ ಬರೆಯಿರಿ . 

 1. ಗಿಡ – ಗಿಡಗಳು
 2. ತಮ್ಮಂದಿರು – ತಮ್ಮ
 3. ಪತ್ರಗಳು – ಪತ್ರ 
 4. ಮಗು – ಮಕ್ಕಳು 

ಋ . ಪುಲ್ಲಿಂಗ ಅಥವಾ ಸ್ತ್ರೀಲಿಂಗ ರೂಪಕ್ಕೆ ಪರಿವರ್ತಿಸಿ ಬರೆಯಿರಿ . 

 1. ಅವನು- ಅವಳು 
 2. ಇವಳು – ಇವಳು 
 3. ಗೌಡತಿ- ಗೌಡ 
 4. ಶರಣ – ಶರಣೆ

 ಎ . ಕೆಳಗಿನವುಗಳಿಗೆ ನಾಲ್ಕು ಉದಾಹರಣೆಗಳನ್ನು ಕೊಡಿರಿ . 

 1. ಅನ್ವರ್ಥನಾಮ

 1.ವ್ಯಾಪಾರಿ 2. ಕುಂಟ 3. ಶಿಕ್ಷಕ

 1. ರೂಢನಾಮ  

1. ನದಿಗಳು 2.ದೇಶ 3.ಪರ್ವತ 4.ಶಾಲೆ

 1. ಅಂಕಿತನಾಮ 

1.ಕೂಡಲಸಂಗಮದೇವ 2.ಪುರಂದರವಿಠಲ 3.ಶ್ರೀ ಚೆನ್ನ ಮಲ್ಲಿಕಾರ್ಜುನ 4.ಶಾಂತಿಪ್ರಿಯ

6th Standard Doddavara Dari Kannada Notes Lesson question answer pdf textbook  Notes summary in Kannada deevige  6ನೇ ತರಗತಿ ದೊಡ್ಡವರ ದಾರಿ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ

6ನೇ ತರಗತಿ ದೊಡ್ಡವರ ದಾರಿ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ Kannada Deevige  6th Standard Doddavara Dari Kannada Notes Notes question answer text book pdf download

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  6 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

 

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh