6th Standard Dr Rajkumar Kannada Notes | 6ನೇ ತರಗತಿ ಡಾ. ರಾಜಕುಮಾರ್ ಕನ್ನಡ ನೋಟ್ಸ್ 

6th Standard Dr Rajkumar Question Answer | 6ನೇ ತರಗತಿ ಡಾ. ರಾಜಕುಮಾರ್  ಕನ್ನಡ ನೋಟ್ಸ್ 

6th Standard Dr Rajkumar Kannada Notes | 6ನೇ ತರಗತಿ ಡಾ. ರಾಜಕುಮಾರ್ ಕನ್ನಡ ನೋಟ್ಸ್ , ಪ್ರಶ್ನೆ ಉತ್ತರ question answer, text book pdf download Kannada Deevige

ಅಧ್ಯಾಯ -4
ಡಾ. ರಾಜಕುಮಾರ್

6th Standard Dr Rajkumar Question Answer

ಪ್ರಶ್ನೆಗಳು ಮತ್ತು ಉತ್ತರಗಳು : 

ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ : 

 1. ಡಾ.ರಾಜಕುಮಾರ್ ಅವರು ಜನಿಸಿದ್ದು ಯಾವಾಗ ? 

ಉತ್ತರ : ಡಾ.ರಾಜಕುಮಾರ್‌ರವರು 1929 ರ ಏಪ್ರಿಲ್ 24 ರಂದು ಜನಿಸಿದರು . 

 1. ರಾಜಕುಮಾರರ ಹುಟ್ಟೂರು ಯಾವುದು ? 

ಉತ್ತರ : ರಾಜ್‌ಕುಮಾರ್‌ರ ಹುಟ್ಟೂರು ತಾಳವಾಡಿ ಪಕ್ಕದ ಗಾಜನೂರು . ಇದು ಚಾಮರಾಜ ನಗರದಿಂದ ಹನ್ನೆರಡು ಮೈಲಿ ದೂರದಲ್ಲಿದೆ . 

 1. ರಾಜಕುಮಾರ್‌ ಅವರ ತಂದೆ – ತಾಯಿಯ ಹೆಸರೇನು ? 

ಉತ್ತರ : ರಾಜಕುಮಾರರ ತಂದೆ ರಂಗಭೂಮಿಯ ನಟರಾದ ಸಿಂಗಾ ನಲ್ಲೂರೂ ಶ್ರೀಪಟ್ಟ ಸ್ವಾಮಯ್ಯನವರು . ತಾಯಿ ಶ್ರೀಮತಿ ಲಕ್ಷಮ್ಮನವರು . 

 1. ಗುಬ್ಬಿ ವೀರಣ್ಣನವರ ಕಂಪನಿ ಹೆಸರೇನು ? 

ಉತ್ತರ : ಗುಬ್ಬಿ ವೀರಣ್ಣನವರ ಕಂಪನಿ ಹೆಸರು “ ಗುಬ್ಬಿ ವೀರಣ್ಣ ನಾಟಕ ಕಂಪನಿ ”

 1. ರಾಜಕುಮಾರರು ಮೊದಲು ನಾಯಕನಟರಾದ ಸಿನಿಮಾ ಯಾವುದು ? 

ಉತ್ತರ : ‘ ಬೇಡರ ಕಣ್ಣಪ್ಪ ‘ ಎಂಬುದು ರಾಜಕುಮಾರರು ಮೊದಲು ನಾಯಕ ನಟರಾಗಿ ನಟಿಸಿದ ಸಿನಿಮಾ.

 1. ರಾಜಕುಮಾರ್ ಅವರ ಶ್ರೀಮತಿಯವರ ಹೆಸರೇನು ? 

ಉತ್ತರ : ರಾಜಕುಮಾರ್ ಅವರ ಶ್ರೀಮತಿಯವರ ಹೆಸರು ಪಾರ್ವತಿ 

 1. 1992 ರಲ್ಲಿ ಕರ್ನಾಟಕ ಸರ್ಕಾರವು ರಾಜಕುಮಾರರಿಗೆ ನೀಡಿದ ಪ್ರಶಸ್ತಿ ಯಾವುದು ? 

ಉತ್ತರ : 1992 ರಲ್ಲಿ ಕರ್ನಾಟಕ ಸರ್ಕಾರವು ರಾಜಕುಮಾರರಿಗೆ ‘ ಕರ್ನಾಟಕ ರತ್ನ ‘ ಪ್ರಶಸ್ತಿ ನೀಡಿ ಗೌರವಿಸಿತು . 

ಆ . ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : 

 1. ಊರಿನ ಜನರು ಮುತ್ತುರಾಜ ಜನಿಸಿದಾಗ ಏಕೆ ಸಂಭ್ರಮಪಟ್ಟರು ?

 ಉತ್ತರ : ಏಪ್ರಿಲ್ ತಿಂಗಳು ಸುಡು ಬಿಸಿಲು , ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ಜೋರಾಗಿ ಮಳೆ ಬಂದದ್ದರಿಂದ ತುಂಬಾ

ಸಂತೋಷವಾಯಿತು . ಭೂಮಿ ತಂಪಾಯಿತು . ಇಂತಹ ತಣ್ಣನೆ ಹೊತ್ತಿನಲ್ಲಿ ಮುತ್ತುರಾಜ ಜನಿಸಿದಾಗ ಸಹಜವಾಗಿಯೇ ಜನರಿಗೆ

ಇಳೆಗೆ ಮಳೆಯನ್ನು ತಂದ ಕಂದ ಎಂದು ಹೆಮ್ಮೆಯುಂಟಾಯಿತು . ಆದ್ದರಿಂದ ಅವರೆಲ್ಲಾ ಸಂಭ್ರಮಪಟ್ಟರು .

 1. ‘ ಮುತ್ತುರಾಜ ‘ ಎಂಬ ಹೆಸರಿಡಲು ಕಾರಣವೇನು ?

 ಉತ್ತರ : ಅವರ ತಂದೆ ಮುತ್ತತ್ತಿ ರಾಯರಿಗೆ ಹರಕೆ ಹೊತ್ತಿದ್ದರು.ಆ ಹರಕೆಯಿಂದಲೆ ಗಂಡು ಮಗು ಹುಟ್ಟಿದೆ ಮತ್ತು ಅವರಿಗೆ ಮಗನಿಗೆ

ರಾಜ ಎಂಬ ಹೆಸರಿಡಬೇಕು ಎಂಬ ಮಹದಾಸೆಯಿತ್ತು . ಆದ್ದರಿಂದ ಮುತ್ತುರಾಜ ಎಂಬ ಹೆಸರಿಟ್ಟರು . 

 1. ಬಾಲ್ಯದಲ್ಲಿ ಮುತ್ತುರಾಜನಿಗೆ ಒದಗಿದ ಅನುಭವಗಳಾವುವು ? 

ಉತ್ತರ : ಇವರ ಬಾಲ್ಯವು ಗಾಜನೂರಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಕಳೆಯಿತು . ತೀರಾ ಅಪರೂಪಕ್ಕೆ ನಂಜನಗೂಡು ಹಾಗೂ ಇನ್ನೂ

ಅಪರೂಪಕ್ಕೆ ಮೈಸೂರಿನ ದರ್ಶನವಾಗುತ್ತಿತ್ತು . ಬಡತನ , ಹಸಿವು , ಜಗಳ , ಜಾತ್ರೆ , ಪೂಜೆ , ಉತ್ಸವ , ಹೊಲ , ತೋಟ , ಕಾಡುತೊರೆ ,

ಬಂಧು – ಬಳಗ , ತಾಯಿಯ ವಾತ್ಸಲ್ಯಧಾರೆ ಇವೆಲ್ಲವೂ ಸಹಜವಾಗಿ ದೊರೆತಿತ್ತು .

 1. ರಂಗಭೂಮಿಯೊಂದಿಗೆ ರಾಜಕುಮಾರರ ಬಾಂಧವ್ಯ ಯಾವ ಬಗೆಯದು ? 

ಉತ್ತರ : ರಂಗಭೂಮಿಯು ಇವರ ಮೊದಲ ಆಡುಂಬೊಲ ಎಂದರೆ ಆಟದ ಬಯಲಾಗಿತ್ತು . ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ಬಾಲ

ಕಲಾವಿದನಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು . ನಂತರ ಸುಬ್ಬಯ್ಯನಾಯ್ಡುರವರ ‘ ಶ್ರೀ ಸಾಹಿತ್ಯ ಸಾಮ್ರಾಜ್ಯ ‘ ಎಂಬ ನಾಟಕ ಸಂಸ್ಥೆಗೆ

ಸೇರಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದು ಎವರ ಬದುಕಿನಲ್ಲಿ ಮಹತ್ವದ ದಿನಗಳಾಗಿದ್ದವು .

 1. ರಾಜಕುಮಾರರಿಗೆ ಯಾವ ಯಾವ ಗೌರವ ಪುರಸ್ಕಾರ ಲಭಿಸಿವೆ ?

 ಉತ್ತರ : ರಾಜಕುಮಾರರಿಗೆ ಗೌರವ ಡಾಕ್ಟರೇಟ್ , ಪದ್ಮಭೂಷಣ , ಗುಬ್ಬಿ ವೀರಣ್ಣ ಪ್ರಶಸ್ತಿ , ಕರ್ನಾಟಕ ರತ್ನ ಮತ್ತು ಡಾ . ದಾದಾ ಸಾಹೇಬ್ ಫಾಲ್ಕೆ

ಅವಾರ್ಡ್ ಹೀಗೆ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ . 

 1. ಅಭಿಮಾನಿಗಳು ರಾಜಕುಮಾರರಿಗೆ ನೀಡಿರುವ ಬಿರುದುಗಳನ್ನು ಹೆಸರಿಸಿ , 

ಉತ್ತರ : ಇವರ ಅಭಿಮಾನಿಗಳು ಕಲಾ ಕೌಸ್ತುಭ , ಗಾನ ಗಂಧರ್ವ , ನಟ ಸಾರ್ವಭೌಮ , ಕಲಾ ಕೇಸರಿ , ಕನ್ನಡದ ಕಣ್ಮಣಿ ,

ವರನಟ , ರಸಿಕರ ರಾಜ ಮುಂತಾದ ಅನೇಕ ಬಿರುದುಗಳನ್ನು ನೀಡಿ ತಮ್ಮ ಪ್ರೀತಿಯನ್ನು ತೋರಿದ್ದಾರೆ . 

ಇ . ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ : 

 1. ರಾಜಕುಮಾರ್ ಅವರ ಬಾಲ್ಯ ಜೀವನ ಹೇಗಿತ್ತು ? 

     ಉತ್ತರ : ರಾಜಕುಮಾರ್‌ರವರು ಅವರ ತಂದೆ ತಾಯಿಗೆ ಮೊದಲ ಮಗನಾಗಿ , ಮುತ್ತತ್ತಿರಾಯನ ಕೃಪೆಯಿಂದ ಜನಿಸಿದ ಕೂಸು ಹುಟ್ಟಿದಾಗ

     ಕೆಂಪಗೆ , ಹಸಿ ಬೆಣ್ಣೆಯಂತಿದ್ದ ಹಸುಗೂಸು , ನೋಡಿದವರ ಕಣ್ಮನ ಸೆಳೆಂಯುವ ರೂಪ , ಮನೆಯವರಿಗೆ ಬಲು ಪ್ರೀತಿ , ಎಲ್ಲರೂ ಮುದ್ದಾಡುವವರೇ

      ಹೀಗೆ ಎಲ್ಲರ ಕಣ್ಮಣಿಯಾಗಿ ಬೆಳೆದನು . ಪ್ರಕೃತಿಯ ಮಡಿಲಲ್ಲಿ ಅಕ್ಕರೆಯ ಮಗುವಾಗಿ ಎಲ್ಲಾ ಹಳ್ಳಿಯ ಹುಡುಗರಂತೆ ಸ್ವಾಭಾವಿಕವಾಗಿ ಇವರ ಬಾಲ್ಯವಿತ್ತು . 

 1. ಭಕ್ತಿ ಪ್ರಧಾನ ಚಿತ್ರಗಳಲ್ಲಿ ರಾಜಕುಮಾರ್ ನಿರ್ವಹಿಸಿದ ಪಾತ್ರಗಳಾವುವು ? 

         ಉತ್ತರ : ಭಕ್ತಿ ಪ್ರದಾನ ಚಿತ್ರಗಳಲ್ಲಿ ರಾಜಕುಮಾರರು ಎಲ್ಲಾ ಪಾತ್ರಗಳನ್ನೂ ಮಾಡಿದ್ದಾರೆ . ಅವರು ನಿರ್ವಹಿಸದೆ ಇರುವ ಪಾತ್ರವೇ ಇಲ್ಲ

        ಎಂದರೂ ತಪ್ಪಾಗಲಾರದು . ಪ್ರಮುಖವಾದ ಭಕ್ತಿ ಪ್ರದಾನ ಚಿತ್ರಗಳು ಭಕ್ತ ವಿಜಯ , ಹರಿ ಭಕ್ತ . ಓಹಿಲೇಶ್ವರ , ಕೃಷ್ಣಗಾರುಡಿಗೆ , ಧರ್ಮವಿಜಯ ,

        ದಶಾವತಾರ ಶ್ರೀ ಶೈಲ ಮಹಾತ್ಮ , ಕಬೀರ್ , ಭಕ್ತ ಚೇತ , ತುಕಾರಾಂ , ಭೂಕೈಲಾಸದಲ್ಲಿ ರಾವಣನಾಗಿ , ಮೋಹಿನಿ ಭಸ್ಮಾಸುರದಲ್ಲಿ ಭಸ್ಮಾಸುರನಾಗಿ ,

        ಭಕ್ತ ಕುಂಬಾರದಲ್ಲಿ ಕುಂಬಾರನಾಗಿ , ಬಬ್ರುವಾಹನನಾಗಿ ಹೀಗೆ ಹೆಸರಿಸಲಸದಳವಾದಷ್ಟು ಪಾತ್ರಗಳನ್ನು ಮಾ ಇದೆ . 

 1. ಗಾಯನಕ್ಷೇತ್ರಕ್ಕೆ ರಾಜಕುಮಾರರ ಸೇವೆಯನ್ನು ವಿವರಿಸಿ . 

    ಉತ್ತರ : ರಾಜಕುಮರರು ಒಳ್ಳೆಯ ಗಾಯಕರೂ ಹೌದು , ಚಿಕ್ಕಂದಿನಿಂದಲೂ ರಂಗ ಭೂಮಿಯ ಹಾಡುಗಳಲ್ಲಿ ಪರಿಣಿತರು .

    ಸೋದರ ಮಾವಂದಿರಿಂದ ಸಂಗೀತ ಪಾಠದ ತಾಲೀಮು ( ಅಭ್ಯಾಸ ) , ಒಳ್ಳೆಯ ಕಂಠಸಿರಿ ಹೀಗಾಗಿ ಸಾವಿರಾರು ಚಿತ್ರ ಗೀತೆ

     ಭಕ್ತಿ ಗೀತೆಗಳನ್ನು ಹಾಡಿದ್ದಾರೆ . ಭಾವ ಗೀತೆಗಳನ್ನು ಸಹ ಹಾಡಿದ್ದಾರೆ . ಇವರು ಅನೇಕ ಚಲನ ಚಿತ್ರದ ಹಾಡುಗಳು ಅಪಾರ

       ಜನಪ್ರಿಯತೆಯನ್ನು ಗಳಿಸಿದೆ . ಸಂಪತ್ತಿಗೆ ಸವಾಲ್ ಚಿತ್ರದ ‘ ಯಾರೇ ಕೂಗಾಡಲೀ ಹಾಡಿನಿಂದ ಪ್ರಸಿದ್ದಿ ಪಡೆದರು . ನಾದಮಯ ಹಾಡಿಗೆ

      ‘ ರಾಷ್ಟ್ರ ಪ್ರಶಸ್ತಿ ಬಂದಿದೆ . ಈ ರೀತಿ ಗಾಯನ ಕ್ಷೇತ್ರದಲ್ಲಿಯೂ ಒಳ್ಳೆಯ ಸೇವೆಯನ್ನು ಸಲ್ಲಿಸಿದ್ದಾರೆ . 

 1. ರಾಜಕುಮಾರ್ ಅವರು ಕನ್ನಡಿಗರಲ್ಲಿ ಮನೆಮಾತಾಗಿರುವುದರ ವೈಶಿಷ್ಟ್ಯವನ್ನು ತಿಳಿಸಿ .

       ಉತ್ತರ : ರಾಜಕುಮಾರ್‌ ಶ್ರೇಷ್ಠ ನಟ , ಶ್ರೇಷ್ಠ ಗಾಯಕ , ಅಲ್ಲದೆ ಒಳ್ಳೆಯ ಹೃದಯವಂತ ಮನುಷ್ಯರಾಗಿದ್ದರು . ಕನ್ನಡಿಗರನ್ನು

     ಅಭಿಮಾನಿ ದೇವರೆಂದು ಕರೆಯುತ್ತಿದ್ದರು . ಇವರು ವಿನಯವಂತಿಕೆಗೆ ಸರಳತೆಗೆ ಹೆಸರು ವಾಸಿಯಾಗಿದ್ದಾರೆ . ಎಲ್ಲರನ್ನೂ ಪ್ರೀತಿಸುತ್ತಿದ್ದರು .

     ಇವರ ಸಹೃದಯತೆಗೆ ಮನ ಸೋಲದವರೇ ಇರಲಿಲ್ಲ . ಇಂದಿಗೂ ಇವರು ಎಲ್ಲರ ಪ್ರೀತಿ ಪಾತ್ರರಾಗಿ , ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ .

      ಎಲ್ಲರೂ ಇವರನ್ನು ಇಷ್ಟಪಡುತ್ತಾರೆ . 

ಈ ಸಂದರ್ಭ ಸೂಚಿಸಿ :

 1. ಇಳೆಗೆ ಮಳೆಯನ್ನು ಕರೆತಂದ ಕಂದ . 

ಉತ್ತರ : ಈ ವಾಕ್ಯವನ್ನು ರಾಜ್‌ಕುಮಾರ್‌ರವರು ಹುಟ್ಟಿದಾಗ ಜನರ ಮನದಲ್ಲಿ ಮೂಡಿ ಬಂದ ಭಾವನೆ ಹಾಗೂ ಪರಸ್ಪರ

ಈ ಮಾತನ್ನು ವಿನಿಮಯ ಮಾಡಿಕೊಂಡಿದ್ದಾರೆ . 

 1. ಅಪರೂಪಕ್ಕೆ ಮೈಸೂರಿನ ದರ್ಶನವೂ ಆಗುತ್ತಿತ್ತು .

 ಉತ್ತರ : ರಾಜಕುಮಾರರ ಬಾಲ್ಯದಲ್ಲಿ ಅವರ ಹುಟ್ಟೂರಾದ ದೊಡ್ಡ ಗಾಜನೂರಿನಿಂದ ನಂಜನಗೂಡಿಗೆ ಮತ್ತು ಅಪರೂಪಕ್ಕೆ

ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದರು ಎಂಬುದನ್ನು ತಿಳಿಸುವ ಸಂದರ್ಭದಲ್ಲಿ ಬಂದಿದೆ . 

 1. ಮುತ್ತುರಾಜನ ಹೆಸರನ್ನು ‘ ರಾಜಕುಮಾರ್ ‘ ಎಂದು ಬದಲಾಯಿಸಿದರು . 

ಉತ್ತರ : ಇವರ ಮೊದಲ ಚಿತ್ರದ ನಿರ್ದೇಶಕರಾದ ಎಚ್.ಎಲ್.ಎನ್ . ಸಿಂಹರವರು ಇವರ ಹೆಸರನ್ನು ‘ ರಾಜ್ ಕುಮಾರ್ ‘

ಎಂದು ಬದಲಾಯಿಸಿದರು . ಮುತ್ತುರಾಜ್ ಎಂಬುದು ಸಿನಿಮಾರಂಗಕ್ಕೆ ಬೇಡ , ಸಿನಿಮಾರಂಗದಲ್ಲಿ ರಾಜಕುಮಾರನಾಗಿ ಬೆಳೆಯಲಿ

ಎಂಬ ಹಾರೈಕೆಯೊಂದಿಗೆ ಹೆಸರನ್ನು ಬದಲಾಯಿಸಿದರು . 

ಉ . ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ . 

 1. ರಾಜಕುಮಾರ್ ಅವರಿಗೆ ತಂದೆ ತಾಯಿ ಮುತ್ತುರಾಜು ಎಂದು ನಾಮಕರಣ ಮಾಡಿದ್ದರು . 
 2. ರಂಗಭೂಮಿಯು ಮುತ್ತುರಾಜನ ಮೊದಲ ಆಡುಂಬೊಲ . 
 3. ರಾಜಕುಮಾರ್‌ ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪ
 4. ಜೀವನ ಚೈತ್ರ ಚಿತ್ರದ ಗಾಯನಕ್ಕೆ ರಾಜಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿತು . 
 5. ರಾಜಕುಮಾರ್ ಅವರಿಗೆ ‘ ಕರ್ನಾಟಕ ರತ್ನ ‘ ಪುರಸ್ಕಾರ ದೊರೆತದ್ದು ರಲ್ಲಿ 1992

ಊ . ಹೊಂದಿಸಿ ಬರೆಯಿರಿ . 

  1. ಮೊದಲ ಹೆಸರು    –    ಮುತ್ತುರಾಜ
  2. ಮೊದಲ ಚಿತ್ರ        –   ಬೇಡರ ಕಣ್ಣಪ್ಪ
  3. ರಾಷ್ಟ್ರಪ್ರಶಸ್ತಿ        –   ಜೀವನಚೈತ್ರ
  4. ಬದಲಾದ ಹೆಸರು  –   ರಾಜಕುಮಾರ್

6ನೇ ತರಗತಿ ಡಾಕ್ಟರ್ ರಾಜಕುಮಾರ್ ಕನ್ನಡ ಪ್ರಶ್ನೋತ್ತರಗಳು pdf

6th Standard Dr Rajkumar Kannada Notes Lesson question answer pdf textbook summary in Kannada deevige  6th Class Dr Rajkumar Kannada Notes question answer text book pdf download

6th Class Kannada Dr Rajkumar Notes Pdf Downlead

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  6 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

One thought on “6th Standard Dr Rajkumar Kannada Notes | 6ನೇ ತರಗತಿ ಡಾ. ರಾಜಕುಮಾರ್ ಕನ್ನಡ ನೋಟ್ಸ್ 

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh