6ನೇ ತರಗತಿ ಧನ್ಯವಾದ ಹೇಳಿದ ಕೊಕ್ಕರೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 6th Standard Dhanyavada Helida Kokkare Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Chapter 5 Notes 6th Class Kannada 5th Lesson Notes Dhanyavada Helida Kokkare Lesson Story in Kannada
6th Standard Kannada 5th lesson Question Answer Pdf
ಅಧ್ಯಾಯ – 5
ಧನ್ಯವಾದ ಹೇಳಿದ ಕೊಕ್ಕರೆ
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಹರಿಯ ಗುಣ ಎಂತಹುದು ?
ಉತ್ತರ : ಹರಿಯು ಸದ್ಗುಣವುಳ್ಳವನು ಮತ್ತು ಕರುಣಾಳುವೂ ಆಗಿದ್ದನು .
2. ಕೊಕ್ಕರೆಗೆ ಏನಾಗಿತ್ತು ?
ಉತ್ತರ : ಕೊಕ್ಕರೆಯ ಮೈಯೊಳಗೆ ಬಾಣವೊಂದು ಚುಚ್ಚಿ ಗಾಯವಾಗಿ ನೋವಾಗಿತ್ತು .
3. ಹರಿಯು ಕೊಕ್ಕರೆಯನ್ನು ಹೇಗೆ ಉಪಚರಿಸಿದನು ?
ಉತ್ತರ : ಹರಿಯು ಮೆಲ್ಲನೆ ಆ ಬಾಣವನ್ನು ಹೊರತೆಗೆದು , ಗಾಯಕ್ಕೆ ತನಗೆ ತಿಳಿದ ರಸ ಮೂಲಿಕೆಯನ್ನು ಹಾಕಿ , ಉಪಚರಿಸಿದನು .
4. ವೃದ್ಧ ತಂದೆ ತಾಯಿಗಳು ಹುಡುಗಿಗೆ ಏನು ಹೇಳಿದರು ?
ಉತ್ತರ : ವೃದ್ಧ ತಂದೆ – ತಾಯಿಗಳು ಹುಡುಗಿಗೆ , ನೀನು ನಮ್ಮಲ್ಲಿಯೇ ಇದ್ದು ಬಿಡು , ಮಗಳ ಹಾಗೆ ನೋಡ್ಕೋತೇವೆ ಎಂದು ಹೇಳಿದರು .
5. ಹರಿಗೆ ಪೀತಾಂಬರ ಮಾರಿದಾಗ ಬಂದ ಹಣವೆಷ್ಟು ?
ಉತ್ತರ : ಹರಿಗೆ ಪೀತಾಂಬರ ಮಾರಿದಾಗ ನೂರಾರು ವರಹಗಳು ಬಂದಿತು .
ಆ . ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ
1. ಹುಡುಗಿ ಕೊಠಡಿಯೊಳಗೆ ಏನು ಮಾಡುತ್ತಿದ್ದಳು ?
ಉತ್ತರ : ಹುಡುಗಿಯು ಕೊಠಡಿಯೊಳಗೆ ಹೋದ ಮೇಲೆ ಕೊಕ್ಕರೆಯಾಗಿ ಮಾರ್ಪಾಡಾಗಿ , ಚಿನ್ನ ಮತ್ತು ಬೆಳ್ಳಿಯ ದಾರಗಳಿಂದ ಪೀತಾಂಬರವನ್ನು ನೇಯುತ್ತಿತ್ತು . ಈ ಪೀತಾಂಬರವು ಸುಂದರವಾಗಿಯೂ ಬೆಲೆ ಬಾಳುವುದಾಗಿಯೂ ಇರುತ್ತಿತ್ತು . ಕೊಕ್ಕರೆಗೆ ಈ ರೀತಿಯ ಪವಾಡದ ಶಕ್ತಿಯಿತ್ತು .
2. ಹರಿಯು ಕೊಠಡಿಯೊಳಗೆ ಹೋದಾಗ ಉಂಟಾದ ಆಶ್ಚರ್ಯವೇನು ?
ಉತ್ತರ : ಹರಿಯು ಕೊಠಡಿಯ ಒಳಗೆ ಹೋಗಿ ನೋಡಿದಾಗ , ಅವನಿಗಾಗಿ ಆಶ್ಚರ್ಯವೊಂದು ಕಾದಿತ್ತು. ಆ ಕೊಠಡಿಯೊಳಗೆ ಹುಡುಗಿ ಇರಲಿಲ್ಲ ಹುಡುಗಿಯ ಬದಲಾಗಿ ಬಿಳಿ ಕೊಕ್ಕರೆಯೊಂದು ಚಿನ್ನ ಮತ್ತು ಬೆಳ್ಳಿಯ ದಾರಗಳಿಂದ ಪೀತಾಂಬರವನ್ನು ನೇಯುತ್ತಿತ್ತು . ಹುಡುಗಿಯ ಬದಲಿಗೆ ಬಿಳಿ ಕೊಕ್ಕರೆಯನ್ನು ನೋಡಿ ಆಶ್ಚರ್ಯ ಪಟ್ಟನು .
ಇ , ಈ ಮಾತುಗಳ ಸಂದರ್ಭವನ್ನು ವಿವರಿಸಿರಿ .
1. “ ನಮ್ಮ ಮಗಳ ಹಾಗೆ ನೋಡ್ಕೊತೇವೆ . ”
ಉತ್ತರ : ಈ ವಾಕ್ಯವನ್ನು ಡಾ . ಅನುಪಮಾ ನಿರಂಜನರವರು ಬರೆದ “ ಧನ್ಯವಾದ ಹೇಳಿದ ಕೊಕ್ಕರೆ ” ಎಂಬ ಪಾಠದಿಂದ ಆರಿಸಲಾಗಿದೆ . ಈ ವಾಕ್ಯವನ್ನು ವೃದ್ಧ ರೈತ ದಂಪತಿಗಳು ಸುಂದರವಾದ ಹುಡುಗಿಗೆ ಹೇಳಿದ ಮಾತು . ಆ ಹುಡುಗಿಯು ವೃದ್ಧ ಹೆಂಡತಿಗೆ ಮನೆಗೆಲಸದಲ್ಲಿ ನೆರವಾಗಿದ್ದನು ಕಂಡು , ಅವಳು ಪುನಃ ವಾಪಸ್ಹೋ ಗಬಾರದೆಂದು ಈ ಮಾತನ್ನು ಹೇಳಿದರು .
2 .“ ಶ್ರೀಮಂತ ವರ್ತಕರಿಗೆ ಮಾರಿ ಬನ್ನಿ . ”
ಉತ್ತರ : ಈ ವಾಕ್ಯವನ್ನು ಡಾ . ಅನುಪಮಾ ನಿರಂಜನರವರು ಬರೆದ “ ಧನ್ಯವಾದ ಹೇಳಿದ ಕೊಕ್ಕರೆ ” ಎಂಬ ಪಾಠದಿಂದ ಆರಿಸಲಾಗಿದೆ . ತಾನು ಪೀತಾಂಬರವನ್ನು ನೇಯುವಾಗ ಯಾರು ನೋಡಬಾರದೆಂದು ಹೇಳಿದ್ದರೂ , ಕುತೂಹಲ ತಡೆಯಲಾರದೆ ಅವಳ ಹತ್ತಿರ ತನ್ನ ಪ್ರೇಮದ ವಿಷಯವನ್ನು ಹೇಳಬೇಕೆಂದುಕೊಂಡು ಹರಿ ಕೊಠಡಿಯ ಒಳಗೆ ಹೋದಾಗ ಕೊಕ್ಕರೆ ರೂಪದಲ್ಲಿದ್ದ ಹುಡುಗಿಯು ಹರಿಗೆ ಹೇಳಿದಳು
FAQ :
ಉತ್ತರ : ಹರಿಯು ಸದ್ಗುಣವುಳ್ಳವನು ಮತ್ತು ಕರುಣಾಳುವೂ ಆಗಿದ್ದನು .
ಉತ್ತರ : ವೃದ್ಧ ತಂದೆ – ತಾಯಿಗಳು ಹುಡುಗಿಗೆ , ನೀನು ನಮ್ಮಲ್ಲಿಯೇ ಇದ್ದು ಬಿಡು , ಮಗಳ ಹಾಗೆ ನೋಡ್ಕೋತೇವೆ ಎಂದು ಹೇಳಿದರು .
ಉತ್ತರ : ಹರಿಯು ಮೆಲ್ಲನೆ ಆ ಬಾಣವನ್ನು ಹೊರತೆಗೆದು , ಗಾಯಕ್ಕೆ ತನಗೆ ತಿಳಿದ ರಸ ಮೂಲಿಕೆಯನ್ನು ಹಾಕಿ, ಉಪಚರಿಸಿದನು .
ಇತರೆ ವಿಷಯಗಳು :
6th Standard All Subject Notes
ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
It is nice it is very helpful for me
So thankyou
It is nice it is very helpful for me so thankyou