6ನೇ ತರಗತಿ ಸಿದ್ಧಾರೂಢರ ಜಾತ್ರೆ ಕನ್ನಡ ನೋಟ್ಸ್ | 6th Standard Siddharoodhara Jatre Kannada Notes

6ನೇ ತರಗತಿ ಸಿದ್ಧಾರೂಢರ ಜಾತ್ರೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು Pdf, 6th Standard Siddharoodhara Jatre Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Chapter 6 Notes 6th Class Kannada 6th Lesson Notes 6th Standard Kannada 6th Chapter Notes Pdf

6th Class Siddharoodhara Jatre Kannada Notes 2024

ತರಗತಿ : 6ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಸಿದ್ಧಾರೂಢರ ಜಾತ್ರೆ

Siddharoodhara Jatre Kannada Notes

ಅಭ್ಯಾಸಗಳು:

ಅ. ಪದಗಳ ಅರ್ಥಗಳ ಅರ್ಥ ಬರೆಯಿರಿ.

1. ಹಿರೇಮಣಿ: (ತರತಿಯ) ನಾಯಕ, ಮುಂದಾಳು

2. ಕರ್ಮಭೂಮಿ: ಕಾರ್ಯಕ್ಷೇತ್ರ ( ಕೆಲಸ ಮಾಡಿದ ಸ್ಥಳ)

3. ಪತಾಕೆ: ಧ್ವಜ, ಬಾವುಟ

4. ಜನಸ್ತೋಮ: ಜನ ಸಮೂಹ, ಜನರ ಗುಂಪು

ಆ. ಈ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ.

1.ಅಲ್ಲಿ ಜಾತ್ರೆ ದಿನ ಶಿವರಾತ್ರಿಯ ಕೂಡುತ್ತದೆ.

ಶಿವರಾತ್ರಿಯ ದಿನ ಅಲ್ಲಿ ಜಾತ್ರೆ ಕೂಡುತ್ತದೆ.

2. ಮಠದ ಮಂಟಪ ಮುಂದೆ ಹಾಕಿದ್ದರು ದೊಡ್ಡ

ಮಠದ ಮುಂದೆ ದೊಡ್ಡ ಮಂಟಪ ಹಾಕಿದ್ದರು.

3. ಮಿಠಾಯಿಗಳನ್ನು ಶಾಲೆಯ ಕೊಂಡರು ಮಕ್ಕಳು

ಶಾಲೆಯ ಮಕ್ಕಳು ಮಿಠಾಯಿಗಳನ್ನು ಕೊಂಡರು.

4. ಹೋರಾಟದ ಸಕ್ರಿಯವಾಗಿದ್ದ ಸ್ವಾತಂತ್ರ್ಯ ಮಠವಿದು ಸಮಯದಲ್ಲಿ

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿದ್ದ ಮಠವಿದು.

ಇ. ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.

1. ಪ್ರೇರಣೆ: ಗುರುಗಳ ಪ್ರೇರಣೆಯಿಂದ ರವಿಯು ಸಂಗೀತ ಕಲಿತನು.

2. ಕಷ್ಟಕಾರ್ಪಣ್ಯ: ಪಾಂಡವರು ವನವಾಸದಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದರು.

3. ಹುರುಪು: ಕ್ರಿಕೆಟ್‌ ಆಡುವುದೆಂದರೆ ರಮೇಶನಿಗೆ ತುಂಬಾ ಹುರುಪು.

4. ಸ್ವಯಂಸೇವಕ: ಜನರಿಗೆ ಸಹಾಐ ಕಲ್ಪಿಸಲು ಶಾಲಾ ಮಕ್ಕಳು ಸ್ವಯಂಸೇವಕರಾಗಿ ದುಡಿದರು.

6th Siddharoodhara Jatre Question Answer in Kannada

ಈ. ಒಂದು ವಾಕ್ಯದಲ್ಲಿ ಉತ್ತರಿಸಿರಿ .

೧. ಸಿದ್ಧಾರೂಢರ ಮಠವು ಯಾವ ಜಿಲ್ಲೆಯಲ್ಲಿದೆ ?

ಉತ್ತರ: ಸಿದ್ಧಾರೂಢರ ಮಠವು ಧಾರವಾಡ ಜಿಲ್ಲೆಯಲ್ಲಿದೆ.

೨. ಶಾಲೆಯ ಮಕ್ಕಳಿಗೆ ದಾರಿಯ ದಣಿವು ಏಕೆ ಆಗಲಿಲ್ಲ ?

ಉತ್ತರ: ಹಲವು ಚರ್ಚೆ ಸಂವಾದಗಳು ದಾರಿಯುದ್ದಕ್ಕೂ ನಡೆದಿದ್ದರಿಂದ ಶಾಲೆಯ ಮಕ್ಕಳಿಗೆ ದಣಿವು ಆಗಲಿಲ್ಲ.

೩. ಸಿದ್ಧಾರೂಢ ಸ್ವಾಮಿಗಳು ಮೂಲತಃ ಯಾವ ಊರಿನವರು ?

ಉತ್ತರ: ಸಿದ್ಧಾರೂಢ ಸ್ವಾಮಿಗಳು ಮೂಲತಃ ಬೀದರ್‌ ಜಿಲ್ಲೆಯ ಚಳಕಾಪುರದವರು.

೪. ಸ್ವಾಮಿಗಳು ಯಾವ ಮಂತ್ರವನ್ನು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು ?

ಉತ್ತರ: ʼಓಂ ನಮಃ ಶಿವಾಯʼ ಎಂಬ ಮಂತ್ರವನ್ನು ಸ್ವಾಮಿಗಳು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು.

೫. ಮಠದಲ್ಲಿ ಶಾಲೆಯ ಮಕ್ಕಳು ಯಾವ ಕೆಲಸಗಳನ್ನು ಮಾಡಿದರು ?

ಉತ್ತರ: ಮಠದಲ್ಲಿ ಶಾಲೆಯ ಮಕ್ಕಳು ಕೆಲವರು ನೀರು ತಂದು ಕೊಟ್ಟರು ಕೆಲವರು ಬಂದ ಜನರಿಗೆ ಊಟ ಬಡಿಸಿದರು.

೬. ಶಾಲಾ ಮಕ್ಕಳು ಯಾವ ಆಟಗಳನ್ನು ಆಡಿದರು ?

ಉತ್ತರ: ಶಾಲಾ ಮಕ್ಕಳು ತೊಟ್ಟಿಲ ಜೀಕ ಹಾಗೂ ಕುದುರೆ ಆನೆ ಒಂಟೆಗಳಿಂದ ಕೂಡಿದ ತಿರುಗು ಯಂತ್ರಗಳಲ್ಲಿ ಕುಳಿತು ಆಟವಾಡಿದರು.

೭. ಸಿದ್ಧಾರೂಢರ ಮಠದಿಂದ ಸ್ಫೂರ್ತಿಯನ್ನು ಪಡೆದ ರಾಷ್ಟ್ರನಾಯಕರು ಯಾರು ?

ಉತ್ತರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಗಾಂದೀಜಿ ಮತ್ತು ತಿಲಕರಂಥ ರಾಷ್ಟ್ರೀಯ ನಾಯಕರು ಸಿದ್ಧಾರೂಢರ ಮಠದಿಂದ ಸ್ಫೂರ್ತಿಯನ್ನು ಪಡೆದರು.

ಉ. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಸಿದ್ಧಾರೂಢ ಸ್ವಾಮಿಗಳ ಜೀವನದ ಬಗ್ಗೆ ತಿಳಿಸಿರಿ.

ಸಿದ್ಧಾರೂಢರು ಬೀದರ್‌ ಜಿಲ್ಲೆಯ ಚಳಕಾಪುರದಲ್ಲಿ 1839ರಲ್ಲಿ ಜನಿಸಿದರು. ಅವರಿಗೆ ಚಿಕ್ಕಂದಿನಲ್ಲಿಯೇ ಐಹಿಕ ಸುಖ ಭೋಗಗಳಲ್ಲಿ ವಿರಕ್ತಿ ಬಂದು ಸನ್ಯಾಸವನ್ನು ಸ್ವೀಕಾರ ಮಾಡಿದರು. ಮನೆಬಿಟ್ಟು ಸಂಚಾರಿಯಾಗಿ ಊರಿಂದ ಊರಿಗೆ ಸಂಚರಿಸುತ್ತಾ ತಮ್ಮ ನಲವತ್ತೊಂದನೆಯ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ಬಂದು ನೆಲೆ ನಿಂತು ಅನೇಕ ಮಹಾನ್‌ ವ್ಯಕ್ತಿಗಳಿಗೆ ಸ್ಫೂರ್ತಿಯಾದರು.

2. ಮಠವು ಸಮಾಜದಲ್ಲಿ‌ ಹೇಗೆ ದಾರಿದೀಪವಾಗಿದೆ?

ಮಠಗಳು ಹಲವಾರು ರೀತಿಯಲ್ಲಿ ಸಮಾಜಕ್ಕೆ ಸಹಾಯವನ್ನು ಮಾಡುತ್ತದೆ. ಬಡಬಗ್ಗರಿಗೆ ಧನ ಸಹಾಯ ಮಾಡಬಹುದು. ವಿದ್ಯಾರ್ಥಿಗಳಿಗೆ ಊಟ ವಸತಿ ನೀಡಬಹುದು. ದಿಕ್ಕು ತೋಚದವರಿಗೆ ಮಾನಸಿಕ ನೆಮ್ಮದಿ ನೀಡುವ ಉಪದೇಶ ಮಾಡಬಹುದು. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು. ಒಟ್ಟಾರೆ ಮಠಗಳು ಸಮಾಜಕ್ಕೆ ದಾರಿದೀಪವಾಗಿವೆ.

3. ಸಿದ್ಧಾರೂಢ ಜಾತ್ರೆಯ ತೇರೆಳೆಯುವ ಸಂದರ್ಭವನ್ನು ವರ್ಣಿಸಿ.

ಮಠದ ಮುಂದೆ ಒಂದು ದೊಡ್ಡ ಮಂಟಪ ಅದರ ಮುಂದೆ ಬಣ್ಣ ಬಣ್ಣದ ಅರಿವೆ ಸುತ್ತಿ ಪತಾಕೆಗಳನ್ನು ಹಚ್ಚಿ ಸಿಂಗರಿಸಿದ ದೊಡ್ಡ ತೇರು ನಿಂತಿತ್ತು. ನಾಲ್ಕು ಗಂಟೆಗೆ ಜನರೆಲ್ಲ ತೇರು ನೋಡಲು ಸೇರಿದರು. ಕೆಲವರು ಗುಂಪು ಗುಂಪಾಗಿ ಅಲ್ಲಲ್ಲಿ ನಿಂತರು. ಕೆಲವರು ತೇರಿನ ಹಗ್ಗ ಹಿಡಿದು ಅದರ ಸಮೀಪ ನಿಂತರು. ಎಲ್ಲರೂ ʼಹರ ಹರ ಮಹಾದೇವ! ʼ ಎಂದು ಭಕ್ತಿಯಿಂದ ಕೂಗುತ್ತಾ ಎಳೆಯತೊಡಗಿದರು.

ಊ. ಕೆಳಗಿನ ವಾಕ್ಯಗಳಲ್ಲಿ ಜೋಡುನುಡಿಗಳನ್ನು ಗುರುತಿಸಿ ಬರೆಯಿರಿ.

1.ನಮ್ಮ ನೆರೆಹೊರೆಯವರು ಬಹಳ ಒಳೆಯವರು.

ನೆರೆಹೊರೆ

2. ಅಮ್ಮ ರಾತ್ರಿಹಗಲು ಕೆಲಸ ಮಾಡುತ್ತಾಳೆ.

ರಾತ್ರಿಹಗಲು

3. ನಾಟಕದಲ್ಲಿ ವಿಧವಿಧವಾದ ಉಡುಗೆ ತೊಡುಗೆ ಧರಿಸಿರುತ್ತಾರೆ.

ಉಡುಗೆ ತೊಡುಗೆ

ಋ. ಸರಿಹೊಂದುವ ಬಿಡಿ ಪದಗಳನ್ನು ಸೇರಿಸಿ ಜೋಡುನುಡಿಗಳನ್ನು ರಚಿಸಿರಿ.

ಆಟ ಪಾಠ, ತಿಂಡಿ ತೀರ್ಥ, ಹೊರಗೆ ಒಳಗೆ , ದಿಕ್ಕು ದೆಸೆ, ಅಕ್ಕ ಪಕ್ಕ, ಹಳ್ಳ ಕೊಳ್ಳ

FAQ :

ಸಿದ್ಧಾರೂಢರ ಮಠವು ಯಾವ ಜಿಲ್ಲೆಯಲ್ಲಿದೆ ?

ಸಿದ್ಧಾರೂಢರ ಮಠವು ಧಾರವಾಡ ಜಿಲ್ಲೆಯಲ್ಲಿದೆ.

ಶಾಲೆಯ ಮಕ್ಕಳಿಗೆ ದಾರಿಯ ದಣಿವು ಏಕೆ ಆಗಲಿಲ್ಲ ?

ಹಲವು ಚರ್ಚೆ ಸಂವಾದಗಳು ದಾರಿಯುದ್ದಕ್ಕೂ ನಡೆದಿದ್ದರಿಂದ ಶಾಲೆಯ ಮಕ್ಕಳಿಗೆ ದಣಿವು ಆಗಲಿಲ್ಲ.

ಸ್ವಾಮಿಗಳು ಯಾವ ಮಂತ್ರವನ್ನು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು ?

ʼಓಂ ನಮಃ ಶಿವಾಯʼ ಎಂಬ ಮಂತ್ರವನ್ನು ಸ್ವಾಮಿಗಳು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು.

ಇತರೆ ವಿಷಯಗಳು :

6th Standard All Subject Notes

ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

1 thoughts on “6ನೇ ತರಗತಿ ಸಿದ್ಧಾರೂಢರ ಜಾತ್ರೆ ಕನ್ನಡ ನೋಟ್ಸ್ | 6th Standard Siddharoodhara Jatre Kannada Notes

Leave a Reply

Your email address will not be published. Required fields are marked *

rtgh