6th Standard Yana Kuritondu Patra Kannada Notes | 6ನೇ ತರಗತಿ ಯಾಣ ಕುರಿತೊಂದು ಪತ್ರ ಕನ್ನಡ ನೋಟ್ಸ್ 

6ನೇ ತರಗತಿ ಯಾಣ ಕುರಿತೊಂದು ಪತ್ರ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 6th Standard Yana Kuritondu Patra Kannada Notes Question Answer Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Chapter 7 Notes 6th Class Kannada 7th Lesson Notes 6th Standard Kannada 7th Chapter Notes Yana Kuritondu Patra in Kannada

Kannada Yana Kuritondu Patra Question Answer

ಅಧ್ಯಾಯ -7

ಯಾಣ ಕುರಿತೊಂದು ಪತ್ರ 

ಆ . ಇಲ್ಲಿರುವ ಪದಗಳನ್ನು ಬಳಸಿ , ಸೂಕ್ತವಾದುದನ್ನು ಬಿಟ್ಟ ಸ್ಥಳದಲ್ಲಿ ತುಂಬಿರಿ .

 ( ಪದ್ಮನಿ , ರಾಗಿಣಿ ಮತ್ತು ಜೆನಿಫರ್ , ಗುಪ್ತ , ರಾಜು , ದಂತ . )

  1. ಅದೊಂದು ಭಾನುವಾರ ಎಲ್ಲರೂ ರಾಜು ಮನೆಗೆ ಬಂದರು .
  2. ‘ ಇ ಮೇಲ್ ‘ ತೆರೆಯಲು ಗುಪ್ತ ಸಂಕೇತದ ಅಗತ್ಯವಿದೆ . 
  3. ವಿಶೇಷ ಪತ್ರ ತಯಾರಿಸಲು ಹೇಳಿದ್ದು ಪದ್ಮಿನಿ  ಮೇಡಂ . 
  4. ಯಾಣದ ಕುರಿತಾಗಿ ಒಂದು ದಂತ ಕಥೆಯಿದೆ .
  5. ಯಾಣದ ಚಿತ್ರಗಳನ್ನು ಅದರ ವಿವರಗಳನ್ನು ರಾಗಿಣಿ ಮತ್ತು ಜೆನಿಫರ್ ಓದಿದರು .

 ಆ . ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ .

  1. ಕಾಗದ , ಪತ್ರ , ದೂರವಾಣಿ , ಓಲೆ , – ದೂರವಾಣಿ 
  2. ಹೆಬ್ಬಂಡೆ , ಹಿರಿದು ಬಂಡೆ , ಕಿರಿದು ಬಂಡೆ , ದೊಡ್ಡ ಬಂಡೆ . – ಕಿರಿದು ಬಂಡೆ 
  3. ಸಂತೋಷ , ದುಃಖ , ಆನಂದ , ಸುಖ , – ದುಃಖ
  4. ಸಂಪತ್ತು , ಆಪತ್ತು , ಧನ , ಐಶ್ವರ್ಯ . – ಆಪತ್ತು 

6th Standard Kannada Notes of Lesson 7

ಇ . ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ.

1. ರಾಜುವಿನ ಮನೆಗೆ ಯಾರು ಯಾರು ಬಂದರು ? 

ಉತ್ತರ : ಸಲೀಂ , ರಾಗಿಣಿ , ಜೆನಿಫರ್ ಮತ್ತು ಶಂಕರ , ರಾಜುವಿನ ಮನೆಗೆ ಬಂದರು .

2. ಇ – ಅಂಚೆ ಎಂದರೇನು ? 

ಉತ್ತರ : ಇ ಅಂದರೆ ಇಲೆಕ್ಟ್ರಾನಿಕ್ ಅಂಚೆ , ಇದನ್ನೇ ಇ – ಮೇಲ್ ಎಂದು ಕೂಡ ಹೇಳುವರು .

3. ಯಾಣದ ಯಾವ ಶಿಖರ ಉಕ್ಕಿನಕೋಟೆಯಂತಿದೆ ? 

ಉತ್ತರ : 390 ಅಡಿ ಎತ್ತರದ ಭೈರವೇಶ್ವರ ಶಿಖರ ಯಾಣದ ಉಕ್ಕಿನಕೋಟೆಯಂತಿದೆ .

4. ಯಾಣದ ಕಲ್ಲು ಯಾವುದರಿಂದ ಉತ್ಪತ್ತಿಯಾಗಿದೆ ?

 ಉತ್ತರ : ಯಾಣದ ಕಲ್ಲು ಸುಣ್ಣದ ಕಲ್ಲಿನಿಂದ ಉತ್ಪತ್ತಿಯಾಗಿದೆ . 

5. ಯಾಣದಲ್ಲಿ ಯಾವ ದೇವರ ಉತ್ಸವ ನಡೆಯುತ್ತದೆ ? 

ಉತ್ತರ : ಯಾಣದಲ್ಲಿ ಭೈರವೇಶ್ವರ ದೇವರ ಉತ್ಸವ ನಡೆಯುತ್ತದೆ . 

ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ . 

1. ಸುಂದರ್‌ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಏಕೆ ಹೇಳಿದರು ? 

ಉತ್ತರ : ಗುಪ್ತ ಸಂಕೇತವು ಇನ್ನೊಬ್ಬರಿಗೆ ಗೊತ್ತಾಗಬಾರದು . ಗೊತ್ತಾದರೆ ಯಾರು ಬೇಕಾದರು ಪತ್ರ ಓದಬಹುದು , ಬೇರೆಯವರ ಪತ್ರ ನಾವು ಓದಬಾರದು . ಅದಕ್ಕಾಗಿ ಸುಂದರ್ , ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಹೇಳಿದನು

2. ಯಾಣದ ಕುರಿತಾಗಿ ಇರುವ ಒಂದು ದಂತಕಥೆಯನ್ನು ಬರೆಯಿರಿ. 

ಉತ್ತರ : ಯಾಣದ ಕುರಿತಾದ ಒಂದು ದಂತಕಥೆಯಿದೆ ಅದೇನೆಂದರೆ ಪುರಾಣ ಕಾಲದಲ್ಲಿ ಯಾಣದಲ್ಲಿ ಭಸ್ಮಾಸುರನೆಂಬ ರಾಕ್ಷಸ ವಾಸವಾಗಿದ್ದ , ಈತನ ಉಪಟಳ ಸಹಿಸಲು ಅಸಾಧ್ಯವಾದಾಗ ಶಿವನು ಆತನನ್ನು ಸುಟ್ಟು ಬೂದಿಮಾಡಿದ . ಈ ಬೂದಿಯಿಂದ ದೊಡ್ಡದಾದ ಶಿಖರ ಬೆಳೆಯಿತು ಎಂಬುದೇ ಈ ದಂತ ಕಥೆ , 

3. ಯಾವ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ ? 

ಉತ್ತರ : ಕಾಡಿನ ಮಧ್ಯೆ ಸಾಗಿದಾಗ ನಮಗೆ ಸಿಗುವ ಮೋಹಿನಿ ಶಿಖರ , ಇದು 300 ಅಡಿ ಎತ್ತರವಿದ್ದು ನೋಡುಗರನ್ನು ಮೈ ರೋಮಾಂಚನಗೊಸುತ್ತದೆ . ಸ್ವಲ್ಪ ಮುಂದಿರುವ 390 ಅಡಿ ಎತ್ತರದ ಭೈರವೇಶ್ವರ ಶಿಖರ ಕಪ್ಪು ಕಲ್ಲಿನ ಉಕ್ಕಿನ ಕೋಟೇಯಂತಿದೆ. ಪ್ರಕೃತಿ ಮಾತೆಯೇ ಶಿಲ್ಪಿಯ ರೂಪತಾಳಿ ಈ ಆಕೃತಿಗಳನ್ನು ಕೆತ್ತಿರಬಹುದು ಎಂಬುವಷ್ಟರ ಮಟ್ಟಿಗೆ ಯಾಣದ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ . 

ಉ . ಸಂಧಿ ಬಿಡಿಸಿ , ಸಂಧಿಯನ್ನು ಹೆಸರಿಸಿರಿ . 

  1. ಭಸ್ಮಾಸುರ = ಭಸ್ಮ + ಅಸುರ = ಸವರ್ಣದೀರ್ಘ ಸಂಧಿ 
  2. ಭೈರವೇಶ್ವರ = ಭೈರವ + ಈಶ್ವರ = ಗುಣಸಂಧಿ – 
  3. ಏಕೈಕ = ಏಕ + ಏಕ = ವೃದ್ಧಿಸಂಧಿ 
  4. ಇತ್ಯಾದಿ = ಇತಿ + ಆದಿ = ಯಣ್‌ಸಂಧಿ 
  5. ಸೂರ್ಯೋದಯ = ಸೂರ್ಯ + ಉದಯ = ಗುಣಸಂಧಿ 

ಊ . ನಿಮೂರಿನ ರಸ್ತೆಗೆ ಬೀದಿ ದೀಪವನ್ನು ಅಳವಡಿಸುವಂತೆ ಕೋರಿ ಸಂಬಂಧಿಸಿದ ಕಛೇರಿಗೆ ಒಂದು ಪತ್ರ ಬರೆಯಿರಿ .

ಇಂದ , 

ರವಿ , 

4 ನೇ ಮುಖ್ಯ ರಸ್ತೆ , 1 ನೇ ಅಡ್ಡ ರಸ್ತೆ , 

ಆರ್ . ಆರ್ ನಗರ , 

ಕೆ.ಎಂ.ಕಾಲೋನಿ , 

ಮೈಸೂರು . 

ಗೆ , 

ನಿರ್ದೇಶಕರು , 

ಮಹಾನಗರ ಪಾಲಿಕೆ , 

ಮೈಸೂರು .

 ಮಾನ್ಯರೇ , 

          ವಿಷಯ : ಬೀದಿ ದೀಪಗಳನ್ನು ಸರಿಪಡಿಸುವುದರ ಬಗ್ಗೆ   

ಕೆ.ಎಂ.ಕಾಲೋನಿ , ಸೇರಿದ ಆರ್. ಆರ್ ನಗರ , 4 ನೇ ಮುಖ್ಯ ರಸ್ತೆ , 1 ನೇ ಅಡ್ಡ ರಸ್ತೆಯಲ್ಲಿ ಹತ್ತು ಬೀದಿ ದೀಪಗಳಿದ್ದು  ಅದರಲ್ಲಿ ಎರಡು ಮಾತ್ರ ರಾತ್ರಿ ಉರಿಯುತ್ತಿದೆ ಉಳಿದ ಎಂಟು ದೀಪಗಳು ಕೆಟ್ಟು ಸುಮಾರು ನಾಲ್ಕು ದಿನಗಳಾಯಿತು  ಇದುವರೆಗೂ ಯಾರೂ ಸರಿಪಡಿಸಿಲ್ಲ . ಮೌಖಿಕವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ರಾತ್ರಿ ವೇಳೆ ಜನ ಓಡಾಡುವುದು ಬಹಳ ಕಷ್ಟವಾಗಿದೆ . ರಸ್ತೆ ಕೂಡ ಸರಿಯಲ್ಲ ಹಳ್ಳ ಕೊಳ್ಳ , ನಾಯಿ ಕಾಟ ಬೇರೆ . ದಯವಿಟ್ಟು ತಕ್ಷಣ  ಬೀದಿ ದೀಪಗಳನ್ನು ಸರಿಪಡಿಸಬೇಕೆಂದು ಇಲ್ಲಿನ ನಿವಾಸಿಗಳ ಪರವಾಗಿ ಕೇಳಿಕೊಳ್ಳುತ್ತೇನೆ . 

ವಂದನೆಗಳೊಂದಿಗೆ

 ನಿವಾಸಿಗಳ ಸಹಿ  ತಮ್ಮ ವಿಶ್ವಾಸಿ . ಸಹಿ

ರವಿ

1 .

2 .

3 . 

4 . 

FAQ :

ಯಾಣದ ಯಾವ ಶಿಖರ ಉಕ್ಕಿನಕೋಟೆಯಂತಿದೆ ? 

ಉತ್ತರ : 390 ಅಡಿ ಎತ್ತರದ ಭೈರವೇಶ್ವರ ಶಿಖರ ಯಾಣದ ಉಕ್ಕಿನಕೋಟೆಯಂತಿದೆ .

ಯಾಣದಲ್ಲಿ ಯಾವ ದೇವರ ಉತ್ಸವ ನಡೆಯುತ್ತದೆ ? 

ಉತ್ತರ : ಯಾಣದಲ್ಲಿ ಭೈರವೇಶ್ವರ ದೇವರ ಉತ್ಸವ ನಡೆಯುತ್ತದೆ . 

ಇ – ಅಂಚೆ ಎಂದರೇನು ? 

ಉತ್ತರ : ಇ ಅಂದರೆ ಇಲೆಕ್ಟ್ರಾನಿಕ್ ಅಂಚೆ , ಇದನ್ನೇ ಇ – ಮೇಲ್ ಎಂದು ಕೂಡ ಹೇಳುವರು .

ಇತರೆ ವಿಷಯಗಳು :

6th Standard All Subject Notes

ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh