6ನೇ ತರಗತಿ ಕರ್ನಾಟಕ ಏಕೀಕರಣ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 6th Standard Karnataka Ekikarana Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Chapter 8 Notes 6th Class Kannada 8th Lesson Notes
6th Standard Kannada 8th Chapter Notes Pdf in Kannada
ಅಧ್ಯಾಯ – 8
ಕರ್ನಾಟಕ ಏಕೀಕರಣ
Karnataka Ekikarana 6th Standard Notes
ಅ . ಹೊಂದಿಸಿ ಬರೆಯಿರಿ .
” ಅ” ‘‘ ಬ ”
- 1890 ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ
- 1916 ಕರ್ನಾಟಕ ಸಭೆ ಸಂಸ್ಥೆ ಪ್ರಾರಂಭ
- 1915 ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆ
- 1956 ಮೈಸೂರು ರಾಜ್ಯ ಉದಯ
- 1973 ಕರ್ನಾಟಕ ರಾಜ್ಯ ಎಂಬ ಹೆಸರು ಬಂದಿದ್ದು
ಆ . ಕೆಳಗಿನ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ .
- ಹೋರಾಟ : ಸುಭಾಷ್ ಚಂದ್ರಬೋಸ್ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ .
- ಸವಾಲು : ಸ್ವಾತಂತ್ರ್ಯ ಬಂದ ನಂತರವೂ ನಾವು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು .
- ಕಲ್ಪಿಸು : ನಮಗೆ ನಮ್ಮ ಉಪಾಧ್ಯಾಯರು ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ .
- ಅಗ್ರಗಣ್ಯ : ಕರ್ನಾಟಕ ಏಕೀಕರಣಕ್ಕೆ ಹೋರಾಟ ನಡೆಸಿದ ಅಗ್ರಗಣ್ಯರು ನೂರಕ್ಕೂ ಹೆಚ್ಚು .
- ಪ್ರತಿಭೆ :ನಾವು ಮಕ್ಕಳ ಪ್ರತಿಭೆಯನ್ನು ಹೊರ ಹೊಮ್ಮಿಸಲು ಸತತವಾಗಿ ಪರಿಶ್ರಮಿಸಬೇಕು .
ಇ . ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ರೇಡಿಯೋದಲ್ಲಿ ಯಾವ ನುಡಿ ಹರಿದು ಬಂತು ?
ಉತ್ತರ : ರೇಡಿಯೋದಲ್ಲಿ ಆಕಾಶವಾಣಿ ‘, ಇದೀಗ ಮಕ್ಕಳ ಕಾರ್ಯಕ್ರಮ , ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ ಹಿರಿಯರೊಬ್ಬರು ತಮ್ಮ ಅನುಭವಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಾರೆ . ಆಲಿಸರಿ ಎಂಬ ನುಡಿ ಹರಿದು ಬಂತು .
2. ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ . ಯಾಕೆ ?
ಉತ್ತರ : ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ . ಏಕೆಂದರೆ ಕನ್ನಡ ಪರ ದೇಶಗಳಲ್ಲಿ ಮುಂಬೈ , ಮದ್ರಾಸ್ , ಕೊಡಗು ಮತ್ತು ಇತರ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು . ನಮ್ಮ ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಎದುರಾಗಿತ್ತು .
3. ಕನ್ನಡದ ಪರವಾಗಿ ಹೋರಾಟ ಮಾಡಿದವರಲ್ಲಿ ಕೆಲವರ ಹೆಸರು ತಿಳಿಸಿರಿ .
ಉತ್ತರ : ಕನ್ನಡದ ಪರವಾಗಿ ಹೋರಾಟ ಮಾಡಿದ ಮಹನೀಯರೆಂದರೆ ‘ ರಾ.ಹ.ದೇಶಪಾಂಡೆ ‘, ‘ ರೊದ್ದ ಶ್ರೀನಿವಾಸರಾವ್ ಆಲೂರು ವೆಂಕಟರಾಯರು . ಡೆಪ್ಯೂಟಿ ಚೆನ್ನಬಸಪ್ಪ ಮುತಾಂದವರು .
4. ವಂಗಭಂಗ ಚಳುವಳಿಯನ್ನು ಯಾರು ನಡೆಸಿದರು ?
ಉತ್ತರ : ‘ ವಂಗಭಂಗ ‘ ಚಳುವಳಿಯನ್ನು ನಡೆಸಿದರು ‘ ಬಂಗಾಳಿಗರು ‘ .
5. ವಿದ್ಯಾವರ್ಧಕ ಸಂಘದ ಕೆಲಸವೇನಾಗಿತ್ತು ?
ಉತ್ತರ : ಕನ್ನಡದಲ್ಲಿ ಶಿಕ್ಷಣ ನೀಡುವುದು . ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ ಹಾಗೂ ವಾಗ್ಯೂಷಣ ‘ಎಂಬ ಮಾಸ ಪತ್ರಿಕೆಯನ್ನು ಆರಂಭಿಸುವುದೇ ಅಲ್ಲದೆ ಕನ್ನಡಿಗರೆಲ್ಲ ಒಂದಾಗಲು ಪ್ರೇರಣೆ ನೀಡುವುದು ವಿದ್ಯಾವರ್ಧಕ ಸಂಘದ ಕೆಲಸವಾಗಿತ್ತು .
6. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಯಾವಾಗ ಬಂದಿತು ?
ಉತ್ತರ : ನಮ್ಮ ರಾಜ್ಯಕ್ಕೆ 1973 ‘ ಕರ್ನಾಟಕ ‘ ಎಂಬ ಹೆಸರು ಬಂದಿತು .
6th Standard Kannada Notes of Lesson 8
ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ .
1. ಕನ್ನಡನಾಡು ಏಕೀಕರಣಗೊಳ್ಳಲು ಕನ್ನಡಿಗರಿಗೆ ಪ್ರೇರಣೆಯಾದ ಘಟನೆ ಯಾವುದು ?
ಉತ್ತರ : ಬ್ರಿಟಿಷರು ಒಡೆದು ಆಳುವ ನೀತಿಯಿಂದಾಗಿ 1905 ರ ಆಗಸ್ಟ್ 16 ರಂದು ಬ್ರಿಟಿಷ್ ಸರ್ಕಾರ ಬಂಗಾಳ ರಾಜ್ಯ ವಿಭಜನೆಗೆ ಮುಂದಾಯಿತು . ಇದನ್ನು ಪ್ರತಿಭಟಿಸಿದ ಬಂಗಾಳಿಯರು ‘ ವಂಗಭಂಗ ‘ ಎನ್ನುವ ಬೃಹತ್ತಾದ ಚಳುವಳಿಯನ್ನು ನಡೆಸಿದರು . ಇದಕ್ಕೆ ಮಣಿದ ಸರ್ಕಾರ ಪುನಃ ಬಂಗಾಳವನ್ನು ಒಂದುಗೂಡಿಸಿತು . ಈ ಘಟನೆಗಳಿಗೆ ಪ್ರೇರಣೆ ನೀಡಿತು .
2. ‘ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಏಕೀಕರಣದ ಬೇಡಿಕೆಗೆ ವೇದಿಕೆ ಕಲ್ಪಿಸಿದ್ದು ಹೇಗೆ ?
ಉತ್ತರ : ‘ ಕನ್ನಡ ಸಾಹಿತ್ಯ ಪರಿಷತ್ತು ‘ ಕರ್ನಾಟಕ ಏಕೀಕರಣದ ಬೇಡಿಕೆಗೆ ವೇದಿಕೆ ಕಲ್ಪಿಸಿದ್ದು ಈ ರೀತಿ ಇತ್ತು ಕನ್ನಡ ನಾಡು ನುಡಿಯ ಬೆಳವಣಿಗೆ , ಸಂರಕ್ಷಣೆ ಮತ್ತು ಧೈಯೋದ್ದೇಶವಾಯಿತು . ಕನ್ನಡ ಗ್ರಂಥಗಳ ಪ್ರಕಟಣೆ , ಸಂಶೋಧನೆ , ನಿಘಂಟು ರಚನೆ ಮುಂತಾದ ಸವಾಲುಗಳನ್ನು ಗಟ್ಟಿತನದಿಂದ ಎದುರಿಸಿ ಕನ್ನಡಕ್ಕೊಂದು ನೆಲೆ ಕಲ್ಪಿಸುವಲ್ಲಿ ಸಾಹಿತ್ಯ ಪರಿಷತ್ತಿನ ಸಾಧನೆ ಅಗಾಧವಾದದ್ದು . ಕನ್ನಡಿಗರನ್ನು ಒಂದುಗೂಡಿಸಿ ಕರ್ನಾಟಕದ ಏಕೀಕರಣಕ್ಕೆ ದನಿ ಎತ್ತುವ ಮೂಲಕ ಏಕೀಕರಣದ ಬೇಡಿಕೆಗೆ ವೇದಿಕೆ ಕಲ್ಪಿಸಿತು .
3. ಕರ್ನಾಟಕ ಸಭೆಯ ಮೊದಲ ಕಾರ್ಯಕ್ರಮದಲ್ಲಿ ಏನೆಲ್ಲಾ ಘಟನೆಗಳು ನಡೆದವು ?
ಉತ್ತರ : ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ 25-12-1924 ರಂದು ಕರ್ನಾಟಕ ಸಭೆಯ ಮೊದಲ ಕಾರ್ಯಕ್ರಮ ನಡೆಯಿತು . ಹುಯಿಲುಗೋಳು ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು . ಈ ಸಭೆಯ ಪರಿಣಾಮವಾಗಿ ಮದ್ರಾಸ್ ಮತ್ತು ಮುಂಬೈ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಗೊಂಡಿತು .
ಉ . ಕೆಳಗಿನ ಪ್ರಶ್ನೆಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ .
1. ಬಂಗಾಳದಲ್ಲಿ ನಡೆದ ‘ ವಂಗ ಭಂಗ ‘ ಚಳುವಳಿಯ ಬಗ್ಗೆ ಬರೆಯಿರಿ ?
ಉತ್ತರ : ಬ್ರಿಟಿಷರದ್ದು ಒಡೆದು ಆಳುವ ನೀತಿ , ಅದರಂತೆಯೆ 1905 ರ ಆಗಸ್ಟ್ 16 ರಂದು ಬ್ರಿಟಿಷ್ ಸರ್ಕಾರ ವಿಭಜನೆಗೆ ಮುಂದಾಯಿತು . ಇದನ್ನು ಪ್ರತಿಭಟಿಸಿದ ಬಂಗಾಳಿಗರು ‘ ವಂಗಭಂಗ ‘ ಎನ್ನುವ ಬೃಹತ್ತಾದ ಚಳುವಳಿಯನ್ನು ಒಂದು ಮಾಡಿತು .
ಊ . ಕೆಳಗಿನ ಪರಿಚ್ಛೇದವನ್ನು ಓದಿ ಪ್ರಶ್ನೆಗಳಿಗೆ ಉತ್ತರಿಸಿರಿ .
ಭಾರತದ ಜನಮಾನಸದಲ್ಲಿ ಇಂದಿಗೂ ಮುಕ್ಕಾಗದೇ ಇರುವವರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ವ್ಯಕ್ತಿತ್ವವೂ ಒಂದು . ಕಡುಬಡತನದ ಮನೆಯಲ್ಲಿ ಜನಿಸಿದ ಅವರು ರಾಷ್ಟ್ರದ ಉನ್ನತ ಹುದ್ದೆಯಾದ ಪ್ರಧಾನಿ ಪದವಿಗೇರಿದರು . ಅಧಿಕಾರಾವಧಿಯಲ್ಲಿ ಸ್ವಂತಕ್ಕೊಂದು ಮನೆ ಮಾಡಿಕೊಳ್ಳಲಿಲ್ಲ . ರಾಷ್ಟ್ರದ ಜನತೆಗೆ ಅವರ ಮೇಲೆ ಅಪಾರ ವಿಶ್ವಾಸವಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿಗಳು 1904 ಅಕ್ಟೋಬರ್ 2 ರಂದು ವಾರಣಾಸಿ ಹತ್ತಿರದ ಮೊಗಲ್‌ರಾಯಿಯಲ್ಲಿ ಶಾರದಾ ಪ್ರಸಾದ , ರಾಮದುಲಾರಿ ದೇವಿಯವರ ಮಗನಾಗಿ ಜನಿಸಿದರು . ಒಂದೂವರೆ ವರ್ಷದ ಮಗುವಾಗಿದ್ದಾಗಲೇ ತಂದೆ ತೀರಿಕೊಂಡರು .
ತಾಯಿಯ ಆರೈಕೆಯಲ್ಲಿ ಅಜ್ಜನ ಮನೆಯಲ್ಲಿ ಬೆಳೆದರು . ವಿದ್ಯಾರ್ಥಿಯಾಗಿದ್ದಾಗ ಸ್ನೇಹಿತರೊಂದಿಗೆ ಜಾತ್ರೆಗೆ ಹೋಗಿದ್ದರು . ಹಿಂತಿರುಗಿ ಬರುವಾಗ ದೋಣಿ ದಾಟಿಸುವವನಿಗೆ ಕೊಡಲು ಹಣವಿರಲಿಲ್ಲ . ಗೆಳೆಯರಲ್ಲಿ ಕೈಚಾಚಲು ಮನಸ್ಸಿರಲಿಲ್ಲ . ಗಂಗಾನದಿಯನ್ನು ದಾಟಲೇಬೇಕು ಆಗ ಏನು ಮಾಡಿದರು ಗೊತ್ತೇ ? ಗೆಳೆಯರ ಬಳಿ ತಡವಾಗಿ ಬರುವೆನೆಂದು ಹೇಳಿ ಸಂಜೆಯಾಗುತ್ತಿದ್ದಂತೆ ತುಂಬಿ ಹರಿಯುತ್ತಿದ್ದ ಗಂಗಾ ನದಿಯಲ್ಲಿ ಧುಮುಕಿ ಈಜಿ ಮನೆ ಸೇರಿದರು . ಜೀವನದ ಕೊನೆಯುಸಿರಿರುವವರೆಗೂ ಯಾರ ಬಳಿಯೂ ಕೈಚಾಚಲಿಲ್ಲ ನಮ್ಮ ಲಾಲ್ ಬಹಾದ್ದೂರ್ ಶಾಸ್ತ್ರಿಗಳು .
ಪ್ರಶ್ನೆಗಳಿಗೆ ಉತ್ತರಿಸಿರಿ .
ಅ . ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಯಾವ ಉನ್ನತ ಪದವಿಗೇರಿದರು ?
ಉತ್ತರ : ಲಾಲ್ ಬಹಾದ್ದೂರ್ ಶಾಸ್ತ್ರಿಯವರು ರಾಷ್ಟ್ರದ ಉನ್ನತ ಪದವಿಯಾದ ಪ್ರಧಾನ ಮಂತ್ರಿಯ ಪದವಿಗೇರಿದರು .
ಆ . ಇವರು ಎಲ್ಲಿ , ಯಾವಾಗ ಜನಿಸಿದರು ?
ಉತ್ತರ : ಲಾಲ್ ಬಹದ್ದೂರ್ ಶಾಸ್ತ್ರಿಯವರು 1904 ಅಕ್ಟೋಬರ್ 2 ರಂದು ವಾರಣಾಸಿ ಹತ್ತಿರದ ಮೊಗಲ್ ಸರಾಯಿಯಲ್ಲಿ ಜನಿಸಿದರು .
ಇ . ತಂದೆ ತೀರಿಕೊಂಡ ಬಳಿಕ ಶಾಸ್ತ್ರಿಯವರು ಹೇಗೆ ಬೆಳೆದರು ?
ಉತ್ತರ : ತಂದೆ ತೀರಿಕೊಂಡ ಬಳಿಕ ಶಾಸ್ತ್ರಿಯವರು ತಾಯಿಯ ಆರೈಕೆಯಲ್ಲಿ ಅಜ್ಜನ ಮನೆಯಲ್ಲಿ ಬೆಳೆದರು .
ಈ ‘ ಅಕ್ಟೋಬರ್ 2 ‘ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮದಿನ . ಅವರ ಹೆಸರೇನು ?
ಉತ್ತರ : ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ , ಈ ಇಬ್ಬರು ಮಹಾವ್ಯಕ್ತಿಗಳ ಜನ್ಮದಿನ ಅಕ್ಟೋಬರ್ 2 ರಂದು .
ಉ . ದೋಣಿ ದಾಟಿಸುವವನಿಗೆ ಕೊಡಲು ಹಣವಿಲ್ಲದಾಗ ಶಾಸ್ತ್ರಿ ಏನು ಮಾಡಿದರು ?
ಉತ್ತರ : ದೋಣಿ ದಾಟಿಸುವವನಿಗೆ ಕೊಡಲು ಹಣವಿಲ್ಲದಾಗ ಗಂಗಾ ನದಿಯಲ್ಲಿ ಧುಮುಕಿ ಈಜಿ ಮನೆ ಸೇರಿದರು .
ಊ . ದೂರದರ್ಶನ ವೀಕ್ಷಣೆಯ ಸಾಧಕ ಬಾಧಕಗಳ ಬಗ್ಗೆ ಒಂದು ಚಿಕ್ಕ ಪ್ರಬಂಧ ಬರೆಯಿರಿ
ಪೀಠಿಕೆ: ದೂರದರ್ಶನ ಒಂದು ದೃಶ್ಯ ಹಾಗೂ ಶ್ರವ್ಯ ಸಾಧನ , ಚಿಕ್ಕಮಕ್ಕಳಿಂದ , ವಯೋವೃದ್ಧರವರಿಗೂ ದೂರದರ್ಶನವನ್ನು ವೀಕ್ಷಿಸುತ್ತಾರೆ . ವಿಶೇಷ ಸಮಾಚಾರಗಳಿಗಾಗಿ , ಮನರಂಜನೆಗಾಗಿ , ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ , ಸಿನಿಮಾ ಪ್ರಿಯರಿಗೆ , ಕ್ರೀಡಾಭಿಮಾನಿಗಳಿಗಾಗಿ , ಮಕ್ಕಳ ಕಾರ್ಟುನ್‌ಗಳಿಗಾಗಿ ದೂರದರ್ಶನವನ್ನು ಎಲ್ಲರೂ ವೀಕ್ಷಿಸುವರು .
ವಿವರಣೆ : ದೂರದರ್ಶನದಿಂದ ಸಾಧಕಗಳು ಇದೆ . ಹಾಗೂ ಭಾದಕಗಳು ಇವೆ . ದೂರದರ್ಶನ ವೀಕ್ಷಣೆಯ ಸಾಧಕಗಳೆಂದರೆ : ದೇಶವಿದೇಶಗಳ ಸುದ್ದಿ ಸಮಾಚಾರಗಳು , ವ್ಯಕ್ತಿ ಪರಿಚಯ ಆಧ್ಯಾತ್ಮಿಕ ಸ್ಥಳಗಳ ದರ್ಶನ , ಮಕ್ಕಳಗಾಗಿ ಮನರಂಜನೆ , ಗೃಹಿಣಿಯರಿಗಾಗಿ ಅಡುಗೆಮನೆ , ಸಾಂಸ್ಕೃತಿಕ ಕಾರ್ಯಕ್ರಮಗಳು , ಸಿನಿಮಾ ಪ್ರಿಯರಿಗೆ ಸಿನಿಮಾ , ಕ್ರೀಡಾಪಟುಗಳಿಗೆ ಕ್ರೀಡೆ ಹೇಗೆ ಎಲ್ಲವೂ ಲೈವ್ ಕಾರ್ಯಕ್ರಮದಲ್ಲಿ ನೋಡಬಹುದು .
ದೂರದರ್ಶನ ವೀಕ್ಷಣೆಯ ಬಾಧಕಗಳೆಂದರೆ : ಮಕ್ಕಳು ದೂರದರ್ಶನ ನೋಡುವುದರಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು ವ್ಯಾಸಂಗದ ಕಡೆಗೆ ಗಮನ ಕಡಿಮೆಯಗುತ್ತಿದೆ . ಕೆಲವು ಉತ್ತೇಜಿತ ಕಾರ್ಯಕ್ರಮಗಳಿಂದತಪ್ಪು ಹಾದಿ ಹಿಡಿದು ಕಳ್ಳರು , ಡಾಕು , ದರೋಡೆಕೋರರು ಆಗುತ್ತಿದ್ದದಾರೆ , ಗೃಹಿಣಿಯರು ತಮ್ಮ ಕಾರ್ಯ ಕ್ಷೇತ್ರವನ್ನು ಸೀಮಿತಗೊಳಿಸಿದ್ದಾರೆ . ಸದಾ ಕಾಲ ಯಾವುದಾದರು ನೆಪ ಒಡ್ಡಿ ದೂರದರ್ಶನ ಮುಂದೆ ಕುಳಿತಿರುತ್ತಾರೆ . ವಾಹಿನಿಗಳು ನೇರ – ದಿಟ್ಟ ಸಮಾಚಾರಗಳಿಂದಾಗಿ ಒಳಗೊಳಗೆ ಆಂತರಿಕ ದೇಶಗಳು ಕೂಡ ಬೆಳೆಯುತ್ತವೆ . ಹೀಗಾಗಿ ದೂರದರ್ಶನ ವೀಕ್ಷಣೆಯಿಂದ ನಾವು ಬಾಧಕಗಳ ಬಗ್ಗೆಯೂ ಗಮನಕೊಡಬೇಕಾಗಿದೆ .
ಉಪಸಂಹಾರ : ದೂರದರ್ಶನ ನಮ್ಮ ಮನರಂಜನೆಗೆ ಜ್ಞಾನರ್ಜನೆ . ಸೀಮಿತ ಅವಧಿಯಲ್ಲಿ ಮಾತ್ರ ಉಪಯೋಗಿಸುವುದರಿಂದ ಬಾಧಕಗಳಿಂದ ನಾವು ಮುಕ್ತರಾಗಿ ಅದರ ಸದುಪಯೋಗ ಮಾಡಿಕೊಳ್ಳಬಹುದು .
FAQ :
ಉತ್ತರ : ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ . ಏಕೆಂದರೆ ಕನ್ನಡ ಪರ ದೇಶಗಳಲ್ಲಿ ಮುಂಬೈ , ಮದ್ರಾಸ್ , ಕೊಡಗು ಮತ್ತು ಇತರ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು . ನಮ್ಮ ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಎದುರಾಗಿತ್ತು .
ಉತ್ತರ : ರೇಡಿಯೋದಲ್ಲಿ ಆಕಾಶವಾಣಿ ‘, ಇದೀಗ ಮಕ್ಕಳ ಕಾರ್ಯಕ್ರಮ , ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ ಹಿರಿಯರೊಬ್ಬರು ತಮ್ಮ ಅನುಭವಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಾರೆ . ಆಲಿಸರಿ ಎಂಬ ನುಡಿ ಹರಿದು ಬಂತು .
ಉತ್ತರ : ‘ ವಂಗಭಂಗ ‘ ಚಳುವಳಿಯನ್ನು ನಡೆಸಿದರು ‘ ಬಂಗಾಳಿಗರು ‘.
ಇತರೆ ವಿಷಯಗಳು :
6th Standard All Subject Notes
ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.