6th Standard Kannada Notes of Lesson Nee Hoda Marudina | 6ನೇ ತರಗತಿ ನೀ ಹೋದ ಮರುದಿನ ಕನ್ನಡ ನೋಟ್ಸ್ 

6th Standard Kannada Notes of Lesson Nee Hoda Marudin | 6ನೇ ತರಗತಿ ನೀ ಹೋದ ಮರುದಿನ ಕನ್ನಡ ನೋಟ್ಸ್ 

6th Standard Kannada Notes of Lesson Nee Hoda Marudina padya question answer pdf summary in kannada, 6ನೇ ತರಗತಿ ನೀ ಹೋದ ಮರುದಿನ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ 

ಪದ್ಯ ಭಾಗ-೩

ನೀ ಹೋದ ಮರುದಿನ ಪದ್ಯ

ನೀ ಹೋದ ಮರುದಿನ ಪದ್ಯದ ಪ್ರಶ್ನೆಗಳು ಮತ್ತು ಉತ್ತರಗಳು : 

6th standard kannada notes of lesson

ಅ . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ . 

  1. ಯಾರು ಹೋದ ಮೇಲೆ ನಮ್ಮ ಬದುಕು ಮೊದಲಿನಂತೆ ಆಗಿದೆ ?

 ಉತ್ತರ : ಬಾಬಾ ಸಾಹೇಬ್ ಅಂಬೇಡ್ಕರ್‌ ಹೋದ ಮೇಲೆ ನಮ್ಮ ಬದುಕು ಮೊದಲಿನಂತೆ ಆಗಿದೆ . 

  1. ಯಾವುದು ಪ್ರತಿನಿತ್ಯ ತಪ್ಪಿಲ್ಲ ನಮಗೆ ?

ಉತ್ತರ : ಪ್ರತಿನಿತ್ಯ ಎದ್ದಾಗ ನಮ್ಮ ಸುದ್ದಿ ಸಂಭ್ರಮದ ಕೇಕೆ ತಪ್ಪಿಲ್ಲ . 

  1. ಏನನ್ನು ಕಳೆದುಕೊಂಡ ಬರಡು ಗಿಡ ನಾವು ? 

ಉತ್ತರ : ನಮ್ಮ ಜ್ಞಾನೇಂದ್ರಿಯಗಳಾದ ಕಣ್ಣು , ಕಿವಿ , ಕೈಕಾಲು , ಮೂಗು , ಮೈ ಮನಸ್ಸು ಮತ್ತು ಬುದ್ಧಿಯನ್ನು

ಕಳೆದುಕೊಂಡ ಬರಡು ಎಂದರೆ ಸತ್ವಹೀನ ಗಿಡಗಳಾಗಿದ್ದೇವೆ . 

  1. ತಾಳಿ ತಾಳಿ ಒಮ್ಮೆ ಏನಾಗಿ ಕುಟುಕುವನು ? 

ಉತ್ತರ : ತಾಳಿ ತಾಳಿ ಒಮ್ಮೆ ಚೇಳಾಗಿ ಕುಟುಕುವನು .

  1. ಈ ಪದ್ಯವನ್ನು ಬರೆದವರು ಯಾರು ? 

ಉತ್ತರ : ಈ ಪದ್ಯವನ್ನು ಬರೆದವರು ಚೆನ್ನಣ್ಣ ವಾಲೀಕಾರ , 

ಆ . ಸ್ವಂತವಾಕ್ಯದಲ್ಲಿ ಬಳಸಿರಿ . 

  1. ಸ್ವಾತಂತ್ರ್ಯ : ನಮ್ಮ ದೇಶವು 1947 ನೇ ಇಸವಿ ಆಗಸ್ಟ್ 15 ರಂದು ಸ್ವಾತಂತ್ರ್ಯವನ್ನು ಪಡೆಯಿತು .
  2. ಬದುಕು : ಎಲ್ಲರೂ ಬದುಕು ಹಸನಾಗಬೇಕು .

 3 , ಸಂಭ್ರಮ : ಹಬ್ಬದ ದಿನ ಎಲ್ಲರೂ ಸಂಭ್ರಮದಿಂದ ಇರುತ್ತಾರೆ . 

  1. ಕುಟುಕು : ಚೇಳು ಕುಟುಕುತ್ತದೆ . 

ಇ . ಈ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ . 

ಸಾರಾಂಶ : ಚೆನ್ನಣ್ಣ ವಾಲೀಕಾರರು ದಲಿತರ ಸ್ಥಿತಿಗತಿಗಳ ಬಗ್ಗೆ ಅವರ ನೋವುಗಳ ಬಗ್ಗೆ ಹೇಳುತ್ತಿದ್ದಾರೆ .

ಸ್ವಾತಂತ್ರ್ಯ ಬಂದು . ಸಂವಿಧಾನವೂ ಸಹ ಜಾರಿಗೆ ಬಂದಿದೆ . ಆದರೆ ನಮ್ಮ ಸ್ಥಿತಿಯಲ್ಲಿ ಯಾವ ಬದಲಾವಣೆಯೂ

ಆಗಿಲ್ಲ . ನೀನು ( ಬಾಬಾ ಸಾಹೇಬ್ ಅಂಬೇಡ್ಕರ್ ) ಸತ್ತ ಮೇಲೆ ನಮ್ಮನ್ನು ಕೇಳುವವರೇ ಇಲ್ಲ . ನೀನು ನಮಗಾಗಿ

ದುಡಿದ ಹಾಗೆ , ನಮ್ಮ ಬಗ್ಗೆ ನಿನಗಿದ್ದಂತಹ ಕಳಕಳಿ ಇದ್ಯಾವುದೂ ಇರುವ ಒಬ್ಬನೂ ಇದುವರೆಗೂ ಬಂದಿಲ್ಲ .

ಪ್ರತಿದಿನ ಪ್ರಾರಂಭವಾದಾಗಲೂ ಈ ದಿನ ನಮಗೆ ಸುಖ ಸಂಭ್ರಮ ಸಿಗಬಹುದು ಎಂಬ ಭ್ರಮೆ ತಪ್ಪಿಲ್ಲ . ಎಲ್ಲೆಲ್ಲೂ

ಇದರ ಬಗ್ಗೆ ಮಾತೇ ಹೊರತು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ . ಅಧಿಕಾರದಲ್ಲಿರುವವರ ಮಾತು ಕೇಳಬೇಕು ,

ಅವರ ಹಾಗೆ ಇರಬೇಕು ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ . ನಮ್ಮನ್ನು ಶೋಷಿಸುತ್ತಾರೆ . ಹೆಸರಿಗೆ ಮಾತ್ರ ಸ್ವಾತಂತ್ರ್ಯ

ಬಂದಿದೆ . ಆದರೆ ನಮಗೆ ಮಾತ್ರ ಯಾವ ಅನುಕೂಲಗಳೂ ಲಭ್ಯವಾಗಿಲ್ಲ . ನಮಗೆ ಕೈ ಕಾಲು , ಕಿವಿ , ಮೂಗು , ಮೈ ಮತ್ತು

ಮನಸ್ಸುಗಳು , ತಲೆ , ಕಣ್ಣು ಎಲ್ಲಾ ಇದ್ದರೂ , ಏನೂ ಇಲ್ಲದಂತೆ ನಿರ್ಜೀವವಾಗಿರಬೇಕು ಇಲ್ಲದೆ ಹೋದರೆ ನಮ್ಮ ನಾಶ ,

ನಮ್ಮ ಮೇಲೆ ಆಕ್ರಮಣ ಮಾಡಿ ನಮ್ಮನ್ನು ಸಾಯಿಸುತ್ತಾರೆ . ನಾವು ನಡೆಯುವ ದಾರಿಯಲ್ಲಿ ಬರಿ ಅಡ್ಡಕಲ್ಲುಗಳು ,

ಮುಳ್ಳುಕಲ್ಲುಗಳನ್ನು ಹಾಸಿದ್ದಾರೆ . ಹೆಚ್ಚಿಗೆ ಮಾತಾಡಿದರೆ ಹಾಡ ಹಗಲಲ್ಲೇ ಹೊಡೆದು ಹಾಕುತ್ತಾರೆ . ಇದೇ ರೀತಿ ನಮ್ಮ

ಮೇಲೆ ಎಷ್ಟು ದಿನ ಆಕ್ರಮಣ ನಡೆಸುತ್ತಾರೆ . ಎಲ್ಲದಕ್ಕೂ ಎಂದು ಮಿತಿಯಿದೆ . ನಾವು ತಾಳಿಕೊಳ್ಳುವುದಕ್ಕೂ ಸಹಿಸಿಕೊಳ್ಳುವುದಕ್ಕೂ ,

ನಮ್ಮ ಸಹನೆಗೂ ಕೊನೆಯಿದೆ . ತಾಳಿ ತಾಳಿ ಒಮ್ಮೆ ಚೇಳಾಗಿ ಕುಟುಕುವುದಿಲ್ಲವೆ ? ಈ ಬಡ ಜೀವಿಯ ತಾಳ್ಮೆಯೂ ಒಡೆದು

ಹೋಗುತ್ತದೆ . ಇವನನ್ನು ಸಾಮಾನ್ಯವಾದ ಬಡಜೀವಿ ಎಂದು ಪರಿಗಣಿಸಬೇಡಿ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದಾರೆ .

ಏನೇ ಆದರೂ , ಎಷ್ಟೇ ಮೆರೆದರೂ , ಮೆರೆದವರು ಒಮ್ಮೆ ಬರುವ ಕೊನೆಯಿಂದ ಗೋಡೆಯ ಮೇಲೆ ಫೋಟೋ ಆಗಿದ್ದಾರೆ .

ನಮ್ಮ ಸಹನೆಯ ಮಿತಿ ಮೀರಿ ಹೋಗಿದೆ . ನಾವು ಕೂಡಾ ದೂರವೇನಿಲ್ಲ 

ಬಾಬಾ ಸಾಹೇಬರು ಗಾಂಧೀಜಿಯವರೊಡನೆ ಸುಮ್ಮ ಸಮ್ಮನೆ ಇದ್ದರೆ ? ಎಷ್ಟೊಂದು ಪ್ರಯತ್ನಪಟ್ಟು , ಹೋರಾಡಿ ಇಂದಿನ

ದಲಿತ ಸಮಾಜಕ್ಕೆ ಅನೇಕ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ . ಅಷ್ಟೆಲ್ಲಾ ಒದ್ದಾಡಿದ್ದರೂ ನಮ್ಮ ಸ್ಥಿತಿ ಹೀಗಿದೆ . ಇದು

ಯಾವಾಗ ಸರಿಯಾಗುತ್ತದೋ ಗೊತ್ತಿಲ್ಲ . ಆದರೂ ಸಹ ಪವಾಡದಂತೆ ಬದಲಾವಣೆಯ ಗಾಳಿ ಬೀಸಿ ಎಲ್ಲರ ಜೀವನವೂ

ಹಸನಾಗಲಿ ಎಂಬುದು ಈ ಕವಿತೆಯ ( ಕವಿಯ ) ಆಶಯವಾಗಿದೆ . 

ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿರಿ . 

ನೀ ಹೋದ ಮರುದಿನ ಮೊದಲಂಗೆ ನಮ್ ಬದುಕು 

ಹಾಗ್ಯಾದೋ ಬಾಬಾ ಸಾಹೇಬ 

ನಿನ್ನಂಗ ದುಡಿದವರು ಕಳಕಳಿಯ ಪಡುವವರು

 ಇನ್ನುತನ ಬರಲಿಲ್ಲ ಒಬ್ಬ ನೀ ಹೋದ 

 

ಕೈಕಾಲು ಕಿವಿ ಮೂಗು ಮೈಮನಸ್ಸು ತಲೆ ಕಣ್ಣು 

ಕಳಕಂಡ ಬರಡು ಗಿಡ ನಾವು 

ಮೈ ತುಂಬಾ ಮನತುಂಬಾ ಸಿಕ್ಕವರ ಮುಖಮುದ್ರೆ 

ಚೀರಾಟ ಹಾರಾಟ ಸಾವೋ || ನೀ ಹೋದ

6th Standard Kannada Notes of Lesson Nee Hoda Marudina Ppf Download

6th Standard Nee hoda Marudina Kannada Notes Lesson question answer pdf textbook  Notes summary in Kannada deevige  6ನೇ ತರಗತಿ ನೀ ಹೋದ ಮರುದಿನ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ 6th Standard Nee hoda Marudina Kannada Notes Kannada Deevige  Notes App download 6ನೇ ತರಗತಿ ನೀ ಹೋದ ಮರುದಿನ ಕನ್ನಡ ನೋಟ್ಸ್  ಉತ್ತರ Kannada Deevige 6th Standard Nee hoda Marudina Kannada Notes Kannada Notes question answer text book pdf downlod

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  6 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh