6th Standard Meravanige Kannada Notes | 6ನೇ ತರಗತಿ ಮೆರವಣಿಗೆ ಕನ್ನಡ ನೋಟ್ಸ್ 

6th Standard Meravanige Kannada Notes | 6ನೇ ತರಗತಿ ಮೆರವಣಿಗೆ ಕನ್ನಡ ನೋಟ್ಸ್ 

6th Standard Meravanige Kannada Notes | 6ನೇ ತರಗತಿ ಮೆರವಣಿಗೆ ಕನ್ನಡ ನೋಟ್ಸ್  , ಪ್ರಶ್ನೆ ಉತ್ತರ question answer, text book pdf download Kannada deevige

ಅಧ್ಯಾಯ -6

ಮೆರವಣಿಗೆ 

ಪ್ರಶ್ನೆಗಳು ಮತ್ತು ಉತ್ತರಗಳು : 

ಆ . ಪದಗಳ ಅರ್ಥ ಬರೆಯಿರಿ . 

  1. ಸಿದ್ಧತೆ : ತಯಾರು 

      2 , ಅಲಂಕಾರ : ಸಿಂಗಾರ

  1. ಖುಷಿ : ಸಂತೋಷ
  2. ರಾಶಿ : ಸಮೂಹ , ಗುಂಪು , ಗುಡ್ಡೆ

 ಆ . ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ . 

  1. ಸಕ್ರಿಯವಾಗಿ ದಯವಿಟ್ಟು ಪಾಲ್ಗೊಳ್ಳಬೇಕು ಎಲ್ಲರೂ . 

ಉತ್ತರ : ದಯವಿಟ್ಟು ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು . 

  1. ಅದು ಆಯ್ತು ಬಾರಿಸು ಹೋಗದಂತೆ ಹರಿದು .

 ಉತ್ತರ : ಆಯ್ತು , ಅದು ಹರಿದು ಹೋಗದಂತೆ ಬಾರಿಸು . 

  1. ಮತ್ತೆ ನೀಡಿದರು ಮತ್ತೆ ಶಿಕ್ಷಕರು ವಿವರಣೆ .

 ಉತ್ತರ : ಶಿಕ್ಷಕರು ಮತ್ತೆ ಮತ್ತೆ ವಿವರಣೆ ನೀಡಿದರು . 

  1. ಭವ್ಯತೆಗೆ ತಾಯಿ ಜನರೆಲ್ಲ ಭುವನೇಶ್ವರಿಯ ಮುಗಿಯುತ್ತಿದ್ದಾರೆ ಕೈ . 

ಉತ್ತರ : ತಾಯಿ ಭುವನೇಶ್ವರಿಯ ಭವ್ಯತೆಗೆ ಜನರೆಲ್ಲ ಕೈ ಮುಗಿಯುತ್ತಿದ್ದಾರೆ . 

ಇ , ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ . 

  1. ಕಾಳಜಿ : ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ .
  2. ಜವಾಬ್ದಾರಿ : ನಮಗೆ ವಹಿಸಿರುವ ಕೆಲಸವನ್ನು ತಾತ್ಸಾರ ಮಾಡದೆ ಜವಾಬ್ದಾರಿಯಿಂದ ಮಾಡಬೇಕು . 3. ಮೆರವಣಿಗೆ : ನಾನು ಕೂಡ ಕಳೆದ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದೆ . 
  3. ಗ್ರಂಥಾಲಯ : ನಮ್ಮ ಶಾಲೆಯ ಗ್ರಂಥಾಲಯದಲ್ಲಿ ತುಂಬಾ ಕಥೆ ಪುಸ್ತಕಗಳಿವೆ . 

ಈ ಒಂದು ವಾಕ್ಯದಲ್ಲಿ ಉತ್ತರಿಸಿರಿ . 

  1. ಶಿಕ್ಷಕರು ಏನನ್ನು ತಯಾರಿಸಿದ್ದರು ? 

ಉತ್ತರ : ಶಿಕ್ಷಕರು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳ ಸಿದ್ಧತೆ ಮಾಡಿಕೊಳ್ಳಬೇಕಾದ ಯೋಜನೆಯ ಪಟ್ಟಿಯನ್ನು ತಯಾರಿಸಿದ್ದರು . 

  1. ಹಬೀಬ್ ಯಾವ ಜವಾಬ್ದಾರಿಯನ್ನು ವಹಿಸಿಕೊಂಡನು ? 

ಉತ್ತರ : ಹಬೀಬ್ ವಾದ ಜವಾಬ್ದಾರಿಯನ್ನು ವಹಿಸಿಕೊಂಡನು .

  1. ಉಪಾಹಾರ ಕೊಡಿಸುವ ಜವಾಬ್ದಾರಿಯನ್ನು ಯಾರು ವಹಿಸಿಕೊಂಡರು ? 

ಉತ್ತರ : ಉಪಾಹಾರ ಕೊಡಿಸುವ ಜವಾಬ್ದಾರಿಯನ್ನು ಊರಿನ ಹಿರಿಯರು ವಹಿಸಿಕೊಂಡರು .

  1. ಶಿಕ್ಷಕರು ಏಕೆ ಸಂತಸಗೊಂಡರು ? 

ಉತ್ತರ : ಯೋಜನೆಯಂತೆ ಎಲ್ಲಾ ಕಾರ್ಯಕ್ರಮಗಳು ಹಂಚಿಕೆಯಾದುದ್ದನ್ನು ಕಂಡು ಸಂತಸಗೊಂಡರು. 

  1. ಹಂಪಣ್ಣ ಹೇಗೆ ಬ್ಯಾಂಡ್ ಬಾರಿಸುತ್ತಿದ್ದನು ?

 ಉತ್ತರ : ಹಂಪಣ್ಣ ಎಲ್ಲರೂ ತನ್ನನ್ನು ನೋಡಲೆಂದು ವಿವಿಧ ಭಂಗಿಯಲ್ಲಿ ಬ್ಯಾಂಡ್ ಬಾರಿಸುತ್ತಿದ್ದನು . 

ಉ . ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ . 

  1. ಶಿಕ್ಷಕರು ಸಭೆ ಕರೆದ ಉದ್ದೇಶವನ್ನು ತಿಳಿಸಿರಿ .

 ಉತ್ತರ : ಶಿಕ್ಷಕರು ಸಭೆ ಕರೆದ ಉದ್ದೇಶವೇನೆಂದರೆ – ಬರುವ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವಕ್ಕಾಗಿ

ಆಗಬೇಕಾದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಹಾಗೂ ಅವರು ತಯಾರಿಸಿದ ಯೋಜನೆಗಳು ಶಾಲಾ ಮಕ್ಕಳಿಗೆ ಹಾಗೂ

ಊರ ಹಿರಿಯರ ಮುಂದೆ ತಿಳಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸುವುದೇ ಆಗಿತ್ತು . 

  1. ಶಿಕ್ಷಕರು ವಾದ್ಯ ತಂಡದವರಿಗೆ ನೀಡಿದ ಸೂಚನೆಗಳು ಯಾವುವು ?

 ಉತ್ತರ : ಶಿಕ್ಷಕರು ವಾದ್ಯ ತಂಡದವರಿಗೆ ನೀಡಿದ ಸೂಚನೆಗಳೆಂದರೆ- ‘ ವಾದ್ಯ ತಂಡದ ನಾಯಕ ಹಬೀಬ್

ಈ ತಂಡದಲ್ಲಿ ಹತ್ತು ಜನರು ಇರಬೇಕು . ಬೇಸ್‌ ಡ್ರಂ ಮತ್ತು ಸೈಡ್ ಡಂ ಬಾರಿಸಲು ಒಬ್ಬೊಬ್ಬರಿರಲಿ , ತುತ್ತೂರಿ ,

ತಾಳ ಇತ್ಯಾದಿಗಳಿಗೆ ಇಬ್ಬಿಬ್ಬರಿರಲಿ . ಎಲ್ಲರೂ ಎಲ್ಲರೂ ಒಂದೇ ರೀತಿಯ ವಸ್ತ್ರ ಧರಿಸಿರಬೇಕು . ತುತ್ತೂರಿಯವರು

ಮುಂದೆ ಇದ್ದು ಒಂದೊಂದೆ ಹೆಜ್ಜೆ ಹಾಕಬೇಕು . ಒಂದೇ ವೇಗದಲ್ಲಿ ಸಾಗಬೇಕು . ಊರಿನ ಕೆಲವು ಸ್ಥಳಗಳಲ್ಲಿ ನೃತ್ಯ

ತಂಡದವರು ನೃತ್ಯ ಮಾಡುವಾಗ ನೃತ್ಯ ಮಾಡುವುದನ್ನು ನಿಲ್ಲಿಸಬೇಕು ಎಂದರು . 

  1. ಭುವನೇಶ್ವರಿಯ ಮೆರವಣಿಗೆಯ ಬಗ್ಗೆ ಜನರ ಮಾತುಗಳೇನು ? 

ಉತ್ತರ : ಭುವನೇಶ್ವರಿಯ ಮೆರವಣಿಗೆಯ ಬಗ್ಗೆ ಜನರ ಮಾತುಗಳು ಅಪೂರ್ವವಾಗಿತ್ತು . ‘ ಕರ್ನಾಟಕ ಮಾತೆ

ಭುವನೇಶ್ವರಿಗೆ ಜಯವಾಗಲಿ ‘ ಎಂಬ ಘೋಷಣೆಯನ್ನು ಕೂಗಿದರು . ಎಂಥ ಅಪೂರ್ವ ದೃಶ್ಯ ನೋಡಲು ಎರಡು

ಕಣ್ಣುಗಳು ಸಾಲವು , ಯಾವ ದಸರೆಗೂ ಕಡಿಮೆ ಇಲ್ಲ ‘ ಎಂದು ಜನರು ಮಾತನಾಡುತ್ತಿದ್ದರು . ಕೆಲವರಿಗೆ ಮಾತೇ

ಹೊರಡಲಿಲ್ಲ . ಇನ್ನು ಕೆಲವರು ಅಬ್ಬಬ್ಬಾ ! ಎಂದು ಬೆರಗಾದರು . 

ಊ . ಕೆಳಗಿನ ವಾಕ್ಯಗಳಲ್ಲಿ ಜೋಡುನುಡಿಗಳನ್ನು ಗುರುತಿಸಿ ಬರೆಯಿರಿ . 

  1. ನಮ್ಮ ನೆರೆಹೊರೆಯವರು ಬಹಳ ಒಳ್ಳೆಯವರು . 

          ಉತ್ತರ : ನೆರೆಹೊರೆ 

  1. ಅಮ್ಮ ರಾತ್ರಿಹಗಲು ಕೆಲಸ ಮಾಡುತ್ತಾಳೆ .

       ಉತ್ತರ : ರಾತ್ರಿಹಗಲು 

  1. ನಾಟಕದಲ್ಲಿ ವಿಧವಿಧವಾದ ಉಡುಗೆತೊಡುಗೆ ಧರಿಸುತ್ತಾರೆ .

 ಉತ್ತರ : ಉಡುಗೆತೊಡುಗೆ

ಋು . ಸರಿಹೊಂದುವ ಬಿಡಿ ಪದಗಳನ್ನು ಸೇರಿಸಿ ಜೋಡುನುಡಿ ಸೇರಿಸಿರಿ . 

ಆಟ , ತಿಂಡಿ , ಹೊರಗೆ , ದಿಕ್ಕು , ತೀರ್ಥ , ಪಕ್ಕ , ದೆಸೆ , ಒಳಗೆ , ಅಕ್ಕ , ಕೊಳ್ಳ , ಪಾಠ , ಹಳ್ಳ , 

  1. ಆಟ – ಪಾಠ
  2. ತಿಂಡಿ- ತೀರ್ಥ 
  3. ಹೊರಗೆ- ಒಳಗೆ
  4. ದಿಕ್ಕು ದೆಸೆ
  5. ಅಕ್ಕ – ಪಕ್ಕ
  6. ಹಳ್ಳ- ಕೊಳ್ಳ

6ನೇ ತರಗತಿ ಮೆರವಣಿಗೆ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ PDF

6th Standard Meravanige Kannada Note Lesson question answer pdf textbook summary Kannada Deevige 6th Class Meravanige Kannada Notes question answer text book pdf download

6ನೇ ತರಗತಿ ಮೆರವಣಿಗೆ ಕನ್ನಡ ಪ್ರಶ್ನೋತ್ತರಗಳು pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  6 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh