5ನೇ ತರಗತಿ ಗಿಡಮರ ಕನ್ನಡ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 5th Standard Gida Mara Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Poem 1 Notes 5th Standard Kannada 1st Poem Notes Gida Mara Poem 5th Standard
Gida Mara Kannada Poem Notes
ತರಗತಿ : 5ನೇ ತರಗತಿ
ವಿಷಯ : ಕನ್ನಡ
ಪದ್ಯದ ಹೆಸರು : ಗಿಡಮರ
ಕೃತಿಕಾರರ ಹೆಸರು : ಡಾ . ಸತ್ಯಾನಂದ ಪಾತ್ರೋಟ
ಕೃತಿಕಾರರ ಪರಿಚಯ
ಡಾ . ಸತ್ಯಾನಂದ ಪಾತ್ರೋಟ ಬಾಗಲಕೋಟೆಯಲ್ಲಿ ಜನಿಸಿದರು . ಕನ್ನಡದಲ್ಲಿ ಎಂ.ಎ. , ಪಿಹೆಚ್.ಡಿ.ಪದವಿ ಪಡೆದಿರುವ ಇವರು ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ . ಇವರು ಕರಿನೆಲದ ಕಲೆಗಳು , ಜಾಜಿ ಮಲ್ಲಿಗೆ , ಕಲ್ಲಿಗೂ ಗೊತ್ತಿರುವ ಕಥೆ , ಕರಿಯ ಕಟ್ಟಿದ ಕವನ , ನನ್ನ ಕನಸಿನ ಹುಡುಗಿ , ನದಿಗೊಂದು ಕನಸು ಮತ್ತು ಅವಳು ಎಂಬ ಕವನ ಸಂಕಲನಗಳನ್ನೂ ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ , ಮತ್ತೊಬ್ಬ ಏಕಲವ್ಯ ಎಂಬ ನಾಟಕಗಳನ್ನು ಒಂದಿಷ್ಟು ಕ್ಷಣಗಳು ಎಂಬ ಪ್ರಬಂಧ ಸಂಕಲನವನ್ನು ಪ್ರಕಟಿಸಿರುತ್ತಾರೆ . ಎದೆಯ ಮಾತು ಎಂಬುದು ಇವರ ಕಾವ್ಯದ ಧ್ವನಿಸುರುಳಿ , ಕರ್ನಾಟಕ ಸರಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇವರನ್ನು ಪುರಸ್ಕರಿಸಿದೆ . ‘ ಗಿಡಮರ ‘ ಎಂಬ ಈ ಕವನವನ್ನು ಅವರ ಕರಿಯ ಕಟ್ಟಿದ ಕವನ ಎಂಬ ಕವನಸಂಕಲನದಿಂದ ಆರಿಸಲಾಗಿದೆ .
5ನೇ ತರಗತಿ ಗಿಡಮರ ಕನ್ನಡ ಪದ್ಯದ ನೋಟ್ಸ್
ಅ. ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1. ಯಾರೇ ಏನೇ ಮಾಡಿದರೂ ಗಿಡಮರ ಏನು ಮಾಡುತ್ತವೆ?
ಯಾರೇ ಏನೇ ಮಾಡಿದರೂ ಗಿಡಮರ ದಿವ್ಯ ಮೌನವಾಗಿರುತ್ತವೆ.
2. ಕಡಲುಕ್ಕುವ ಚೇತನ ಎಲ್ಲಿ ಕಾಣಬರುತ್ತದೆ?
ರೆಂಬೆ ಕೊಂಬೆಗಳ ಚಿಗುರುವಲ್ಲಿ ಕಡಲುಕ್ಕುವ ಚೇತನವು ಕಾಣ ಬರುತ್ತವೆ.
3. ಅದು ಇದು ಎಣಿಸದಿರುವುದು ಯಾವುದು?
ಜಾತಿ ಮತ ಪಂಥ ಎಣಿಸದಿರುವುದು ಗಿಡಮರಗಳು.
4. ಗಿಡ ಮರಗಳು ಹೇಗೆ ಬೆಳೆದು ಅರಳುತ್ತಿವೆ?
ಮಳೆ, ಚಳಿ, ಗಾಳಿ, ಬಿಸಿಲು ಲೆಕ್ಕಿಸದೆ ತಡಡೆದು ನಿಂದು ಗಿಡಮರಗಳು ಬೆಳೆದು ಅರಳುತ್ತಿವೆ.
Gida Mara Poem in Kannada 5th Standard Pdf
ಆ. ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಬೆಳೆದು ನಿಂತ ಗಿಡಮರ ಹೇಗಿವೆ?
ಬೆಳೆದು ನಿಂತ ಗಿಡಮರ ಕಪ್ಪು ಬಣ್ಣದ ಬೊಡ್ಡೆಗಳು ಹಚ್ಚಹಸಿರು ಎಲೆಗಳು, ನಾನಾ ಬಣ್ಣ ಬಣ್ಣದಿಂದ ಕೂಡಿದ ಹೂಗಳು, ಹೂಗಳಿಂದ ಅಲಂಕೃತವಾಗಿ ಗಿಡ ಮರಗಳು ಬೆಳೆದು ನಿಂತಿವೆ.
2. ಯಾರ ಮಾತಿನಂತೆ ಮನ ಇಲ್ಲ? ಏಕೆ?
ಮನುಷ್ಯನ ಮಾತಿನಂತೆ ಅವನ ಮನ ಇಲ್ಲ. ಅವನ ಮನಸ್ಸಿನ ತುಂಬೆಲ್ಲ ಕೇವಲ ವರ್ಣ, ಜಾತಿ, ಧರ್ಮ ಮುಂತಾದವುಗಳ ಹೀನ ವಿಚಾರಗಳು ತುಂಬಿಕೊಂಡಿವೆ. ಅದಕ್ಕಾಗಿ ಮಾತಿನಂತೆ ಅವರ ಮನಸ್ಸು ಇಲ್ಲ.
3. ಗಿಡಮರಗಳು ಯಾವುದನ್ನು ಮೀರಿ ಬೆಳೆದವೆ?
ಮರಗಿಡಗಳು ಯಾವುದೇ ಭೆದಭಾವ ಇಲ್ಲದೆ ನಾಔೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿಹೇಳುತ್ತವೆ. ಹಿಡಮರಗಳು ಜಾತಿ-ಗೀತಿ, ಲಿಂಗ-ಧರ್ಮ, ಉಚ್ಚ-ನೀಚ, ಮೇಲು-ಕೀಳು, ಎಂಬ ಭಾವನೆಗಳನ್ನು ಮೀರಿ ಬೆಳೆದು ನಿಂತಿವೆ.
ಇ. ಬಿಟ್ಟ ಸ್ಥಳವನ್ನು ಪದ್ಯದಿಂದ ಆವರಿಸಿದ ಸೂಕ್ತ ಪದಗಳಿಂದ ತುಂಬಿರಿ.
- ಎಂಥ ಸೊಗಸು ಏನು ಕಂಪು
- ಬೆಳೆದು ನಿಂತ ಗಿಡಮರ
- ರೆಂಬೆ ಕೊಂಬೆ ಚಿಗುರುವಲ್ಲಿ
- ಕಡಲುಕ್ಕುವ ಚೇತನ
- ಮನುಷ್ಯನಲ್ಲಿ ಮಾತು ಉಂಟು
- ಮಾತಿನಂತೆ ಇಲ್ಲಮನ
- ಜಾತಿ-ಗೀತಿ ಲಿಂಗ-ಧರ್ಮ
- ಮೀರಿಬೆಳೆದ ಗಿಡಮರ
ಬೊಡ್ಡೆ | ಮಾತು | ಅವನು |
ಮನ | ಹಸಿರು | ಧರ್ಮ |
ಚಿಗುರು | ಜಾತಿ | ಹೂವು |
ಕೊಂಬೆ | ಅವಳು | ರೆಂಬೆ |
ಮಾನವನಿಗೆ ಸಂಬಂಧ: ಮಾತು,ಧರ್ಮ,ಅವಳು,ಮನ,ಜಾತಿ,ಅವನು
ಗಿಡ ಮರಗಳಿಗೆ ಸಂಬಂಧ: ಬೊಡ್ಡೆ,ಹಸಿರು,ಚಿಗುರು,ಹೂವು,ಕೊಂಬೆ,ರೆಂಬೆ
FAQ :
ರೆಂಬೆ ಕೊಂಬೆಗಳ ಚಿಗುರುವಲ್ಲಿ ಕಡಲುಕ್ಕುವ ಚೇತನವು ಕಾಣ ಬರುತ್ತವೆ.
ಮಳೆ, ಚಳಿ, ಗಾಳಿ, ಬಿಸಿಲು ಲೆಕ್ಕಿಸದೆ ತಡಡೆದು ನಿಂದು ಗಿಡಮರಗಳು ಬೆಳೆದು ಅರಳುತ್ತಿವೆ.
ಮನುಷ್ಯನ ಮಾತಿನಂತೆ ಅವನ ಮನ ಇಲ್ಲ. ಅವನ ಮನಸ್ಸಿನ ತುಂಬೆಲ್ಲ ಕೇವಲ ವರ್ಣ, ಜಾತಿ, ಧರ್ಮ ಮುಂತಾದವುಗಳ ಹೀನ ವಿಚಾರಗಳು ತುಂಬಿಕೊಂಡಿವೆ. ಅದಕ್ಕಾಗಿ ಮಾತಿನಂತೆ ಅವರ ಮನಸ್ಸು ಇಲ್ಲ.
ಇತರೆ ವಿಷಯಗಳು:
5th Standard All Subject Notes
5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.