4ನೇ ತರಗತಿ ಹುತಾತ್ಮ ಬಾಲಕ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 4th Standard Hutatma Balaka Kannada Notes Question Answer Summary Pdf Download Kannada Medium Karnataka State Syllabus 2024, Kseeb Solutions For Class 4 Kannada Chapter 14 Notes 4th Standard Kannada 14th Lesson Notes Pdf Hutatma Balaka 4th Standard Kannada
Hutatma Balaka Kannada 4th Standard Question Answer
ಅಭ್ಯಾಸ
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
1. ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಯಾರು ?
ಉತ್ತರ : ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಗಾಂಧೀಜಿಯವರು .
2. ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ ಯಾವುದು ?
ಉತ್ತರ :1942 ರ ಆಗಸ್ಟ್ 15 ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ .
3. ನಾರಾಯಣನ ತಾಯಿ ಏನೆಂದು ಮಗನನ್ನು ಹರಸಿದಳು ?
ಉತ್ತರ : ನಾರಾಯಣನ ತಾಯಿ ‘ ದೇವರು ನಿನಗೆ ಮಾಡಲಿ ‘ ಎಂದು ಮಗನನ್ನು ಹರಸಿದಳು .
4. ನಾರಾಯಣನು ಕೂಗಿದ ಘೋಷಣೆ ಯಾವುದು ?
ಉತ್ತರ : ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ‘ ಎಂಬ ಘೋಷಣೆಯನ್ನು ನಾರಾಯಣನು ಕೂಗಿದನು .
5.ಸಾವಿನ ಅಂಚಿನಲ್ಲಿದ್ದ ಬಾಲಕ ಏನನ್ನು ಕೇಳಿದ ?
ಉತ್ತರ : ಸಾವಿನ ಅಂಚಿನಲ್ಲಿದ್ದ ಬಾಲಕ ತನ್ನ ನೋವನ್ನು ಮರೆತು ‘ ಸ್ವರಾಜ್ಯ ‘ ಬೇಕೆಂದು ಕೇಳಿದ .
ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ
1. ಬಾಲಕ ನಾರಾಯಣ ಮುಂಜಾನೆ ಎದ್ದು ಹೇಗೆ ಸಿದ್ಧನಾದನು ?
ಉತ್ತರ : ಬಾಲಕ ನಾರಾಯಣ ಅಂದು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ ಕೈಯಲೇ ನೇಯ್ದ ಖಾದಿ ಚಡ್ಡಿ , ಅಂಗಿ ಮತ್ತು ಗಾಂಧಿ ಟೋಪಿಯನ್ನು ಧರಿಸಿದನು . ಮನೆಯ ಬೀರುವಿನಲ್ಲಿದ್ದ ತ್ರಿವರ್ಣದ ಧ್ವಜವನ್ನು ತೆಗೆದುಕೊಂಡು ಬ್ರಿಟೀಷರ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಸಿದ್ದನಾದನು .
2. ನಾರಾಯಣನ ತಾಯಿ ಏಕೆ ಅಚ್ಚರಿಗೊಂಡಳು
ಉತ್ತರ : ” ಅಮ್ಮಾ ಬ್ರಿಟೀಷರ ವಿರುದ್ದ ಪ್ರತಿಭಟನಾ ಮೆರವಣಿ ನಡೆಯುತ್ತಿದೆ . ಅದಕ್ಕೆ ಕೂಡಿಕೊಳ್ಳಲು ನಾನು ಹೋಗುತ್ತಿದ್ದೇನೆ ‘ ಎಂದ ನಾರಾಯಣ , ಬಾಲಕ ನಾರಾಯಣನ ಕಣ್ಣಿನಲ್ಲಿ ಅಪೂರ್ವ ಕಾಂತಿಯಿತ್ತು . ‘ ಮಗು ನೀನು ಇನ್ನೂ ಚಿಕ್ಕವನು . ದೊಡ್ಡವರ ಮೆರವಣಿಗೆಯಲ್ಲಿ ನೀನು ಹೇಗೆ ಸೇರಲು ಸಾಧ್ಯ ? ” ಎಂದು ತಾಯಿ ಕೇಳಿದಳು . ಅದಕ್ಕೆ ಅವನು ” ಅಮ್ಮ ಹಿರಿಯರು ಕಿರಿಯರು ಎನ್ನುವುದು ಮುಖ್ಯವಲ್ಲ , ಭಾರತ ಮಾತೆಯ ಸೇವೆಯನ್ನು ಹೇಗೆ ಮಾಡುತ್ತೇವೆ ಎನ್ನುವುದೇ ಮುಖ್ಯ ‘ ಎಂದು ಹೇಳಿದನು . ಮಗನ ಈ ರೀತಿಯ ಮಾತನ್ನು ಕೇಳಿ ತಾಯಿ ಅಚ್ಚರಿಗೊಂಡಳು .
3. ಪೊಲೀಸರು ಸಿಟ್ಟಿನಿಂದ ಏಕೆ ಕುದಿಯುತ್ತಿದ್ದರು ?
ಉತ್ತರ : ದುರ್ಗದ ಬಯಲಿನಲ್ಲಿ ಸೇರಿದ್ದ ಜನರನ್ನು ನಾರಾಯಣ ಸೇರಿಕೊಂಡನು . ಮಿಂಚಿನ ಕಣ್ಣಿನ ಚತುರ ಹುಡುಗನ ಆಗಮನ ಎಲ್ಲರನ್ನೂ ಆಕರ್ಷಿಸಿತು . ಮೆರವಣಿಗೆ ಆರಂಭವಾಯಿತು . ನಾರಾಯಣ ತಾರಕ ಸ್ವರದಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ‘ ಎಂದು ಘೋಷಣೆ ಕೂಗುತ್ತಿದ್ದನು . ಇತರರು ಅವನ ಕೂಗನ್ನು ಪ್ರತಿಧ್ವನಿಸುತ್ತಿದ್ದರು . ಇದನ್ನು ಕಂಡ ಪೊಲೀಸರು ಸಿಟ್ಟಿನಿಂದ ಕುದಿಯುತ್ತಿದ್ದರು .
ಇ ) ಈ ಮಾತನ್ನು ಯಾರು ? ಯಾರಿಗೆ ಹೇಳಿ
1.” ಎಲ್ಲಿಗೆ ಹೋಗುತ್ತಿರುವೆ ಮಗು ? ”
ಉತ್ತರ : ಯಾರು ? : ತಾಯಿ
ಯಾರಿಗೆ ? : ನಾರಾಯಣನಿಗೆ
2. “ ಅಮ್ಮ ಹಿರಿಯರು ಕಿರಿಯರು ಎನ್ನುವುದು ಮುಖ್ಯವಲ್ಲ . “
ಉತ್ತರ : ಯಾರು ? : ನಾರಾಯಣ
ಯಾರಿಗೆ ? : ತಾಯಿಗೆ
3. ” ನಿನಗೆ ಏನು ಬೇಕು ? ”
ಉತ್ತರ : ಯಾರು ? : ಆಂಗ್ಲ ಅಧಿಕಾರಿ ,
ಯಾರಿಗೆ ? : ನಾರಾಯಣನಿಗೆ
ಭಾಷಾ ಚಟುವಟಿಕೆ
ಅ ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ .
ಉತ್ತರ :
- ಅಹಿಂಸೆ • ಹಿಂಸೆ
- ಕಿರಿಯ • ಹಿರಿಯ
- ಸಾಧ್ಯ • ಅಸಾಧ್ಯ
- ಬೇಕು • ಬೇಡ
ಆ ) ಮಾದರಿಯಲ್ಲಿ ಸೂಚಿಸಿರುವಂತೆ ಪದ ಬಿಡಿಸಿ ಬರೆಯಿರಿ .
ಮಾದರಿ : ಧೈರ್ಯವಂತ ಒರ್ಯ + ವಂತ
ಉತ್ತರ :
- ಗುಣವಂತ = ಗುಣ : + ವಂತ
- ಶೌರ್ಯವಂತ = ಶೌರ್ಯ + ವಂತ
- ಶಕ್ತಿವಂತ = ಶಕ್ತಿ + ವಂತ
- ಬುದ್ದಿವಂತ : ಬುದ್ದಿ : + ವಂತ
- ಹಣವಂತ = ಹಣ + ವಂತ
ಇ ) ಕೊಟ್ಟಿರುವ ಪದಗಳನ್ನು ಬಳಸಿ ಸಂತ ವಾಕ್ಯ ರಚಿಸಿ .
ಘೋಷಣೆ = ಬಾಲಕ ನಾರಾಯಣ ‘ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ‘ ಎಂಬ ಘೋಷಣೆ ಕೂಗುತ್ತಿದ್ದನು .
ಅಹಿಂಸೆ : ಗಾಂಧೀಜಿಯವರು ಭಾರತವನ್ನು ಸ್ವತಂತ್ರವನ್ನಾಗಿಸಲು ಬ್ರಿಟೀಷರ ವಿರುದ್ದ ಅಹಿಂಸೆಯ ಮಾರ್ಗವನ್ನು ಅನುಸರಿಸಿದರು .
ಜೋರಾಗಿ = ಬಾಲಕ ನಾರಾಯಣನ ಜೊತೆಯಲ್ಲಿದ್ದ ಜನರು ಬ್ರಿಟೀಷರ ವಿರುದ್ಧ ಜೋರಾಗಿ ಘೋಷಣೆ ಕೂಗುತ್ತಿದ್ದರು .
ಆಶ್ಚರ್ಯ = ಬಾಲಕ ನಾರಾಯಣನ ಮಾತು ಕೇಳಿ ಅವನ ತಾಯಿ ಆಶ್ಚರ್ಯದಿಂದ ನೋಡಿದಳು
ಮೆರವಣಿಗೆ = ಬಾಲಕ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದನು .
ಈ ) ‘ ಈ ಕೆಳಗಿನ ಪದಗಳಿಗೆ ನುಡಿ ಕಣಜದಿಂದ ಅರ್ಥ ಹುಡುಕಿ ಬರೆಯಿರಿ .
ಉತ್ತರ : 1. ನೆರವು : ಸಹಾಯ , ಬೆಂಬಲ , ಆಸರೆ
ಹರಸು = ಆಶೀರ್ವದಿಸು
ಅದ್ಭುತ = ಆಶ್ಚರ್ಯ , ವಿಸ್ಮಯ
ಕಸುಬು = ಕೆಲಸ , ಉದ್ಯೋಗ ,
ಬಳಕೆ ಚಟುವಟಿಕೆ
ಅ ) ವೃತ್ತದೊಳಗಿನ ಪದವನ್ನು ಅದರ ಸಮಾನಾರ್ಥಕ ಪದಗಳೊಂದಿಗೆ ಗೆರೆ ಎಳೆದು ಜೋಡಿಸಿ .
ಉತ್ತರ
ಚತುರ ಕುರುಹು ಸುಳಿವು ಗುರುತು ನೆನಪು
ಆ ) ಕೊಟ್ಟಿರುವ ಅಕ್ಷರ ಬಳಸಿ ಪದ ರಚಿಸಿ , ಅಕ್ಷರ ಬಂಧ ಪೂರ್ಣಗೊಳಿಸು . ರಚನೆಯಾದ ಖಾಲಿ ಜಾಗದಲ್ಲಿ ಬರೆದಿದೆ . ( ಡೆ , ಣ , ರ , ನೆ , ವು )
FAQ :
ಉತ್ತರ : ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ‘ ಎಂಬ ಘೋಷಣೆಯನ್ನು ನಾರಾಯಣನು ಕೂಗಿದನು .
ಉತ್ತರ : ಸಾವಿನ ಅಂಚಿನಲ್ಲಿದ್ದ ಬಾಲಕ ತನ್ನ ನೋವನ್ನು ಮರೆತು ʼಸ್ವರಾಜ್ಯ‘ ಬೇಕೆಂದು ಕೇಳಿದ .
ಇತರೆ ವಿಷಯಗಳು :
4th Standard Kannada Textbook Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
nice