4ನೇ ತರಗತಿ ಕನ್ನಡ ದುಡಿಮೆಯ ಗರಿಮೆ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು ಸಾರಾಂಶ, 4th Standard Dudimeya Garime Kannada Notes Question Answer Summary Mcq Pdf Download in Kannada Medium Karnataka State Syllabus 2024 Kseeb Solutions For Class 4 Kannada Chapter Chapter 15 Notes 4th Standard Kannada 15th Lesson Notes Pdf
4th Dudimeya Garime Kannada Poem Question Answer
ಅಭ್ಯಾಸ ಚಟುವಟಿಕೆ
ಅ ) ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಕಬ್ಬಿಣದಿಂದ ತಯಾರಿಸುವ ಸಲಕರಣೆಗಳು ಯಾವುವು ?
ಉತ್ತರ : ಹಾರೆ , ಕೊಡಲಿ , ಸಲಿಕೆ , ಗುದ್ದಲಿ ಇವು ಕಬ್ಬಿಣದಿಂದ ತಯಾರಿಸುವ ಸಲಕರಣೆಗಳು ,
2. ಜನರನ್ನು ಸಲಹುವ ದಾತ ಯಾರು ?
ಉತ್ತರ : ಜನರನ್ನು ಸಲಹುವ ದಾತ ರೈತ .
3. ನೊಗವನ್ನು ಯಾವುದರಿಂದ ಮಾಡುವರು ?
ಉತ್ತರ : ನೊಗವನ್ನು ಒಣಮರದ ಕಟ್ಟಿಗೆಯಿಂದ ಮಾಡುವರು .
4. ಮೀನನ್ನು ಹೇಗೆ ಹಿಡಿಯುವರು ?
ಉತ್ತರ : ಮೀನನ್ನು ಬಲೆಯನ್ನು ಬೀಸಿ ಹಿಡಿಯುವರು .
Dudimeya Garime Poem Notes Pdf
ಆ ) ಎರಡು / ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಬಳಗದ ಮೆಚ್ಚುಗೆಯನ್ನು ಬಟ್ಟೆ ಹೊಲಿಯುವವರು ಹೇಗೆ ಗಳಿಸಬಹುದು ?
ಉತ್ತರ : ಹೊಸ ಹೊಸ ಬಗೆಯ ಉಡುಪುಗಳನ್ನು ಹೊಲಿಯುವುದರ ಮೂಲಕ ಬಟ್ಟೆ ಹೊಲಿಯುವವರು ಬಳಗದ ಮೆಚ್ಚುಗೆಯನ್ನು ಗಳಿಸಬಹುದು .
2. ನೇಗಿಲ’ನ್ನು ಹೇಗೆ ಮಾಡುವರು ?
ಉತ್ತರ : ಒಣಮರದ ಹಲಗೆಯನ್ನು ಉಪಯೋಗಿಸಿ ಚೂಪಾಗಿ ಕೆತ್ತಿ ನೇಗಿಲನ್ನು ಮಾಡುವರು .
ಇ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ .
( ಕಾರ್ಮಿಕ , ಕತ್ತೆ , ಮರ )
1. ಜನರನ್ನು ಸಲಹುವವನು ………….
ಉತ್ತರ : ರೈತ
2. ನೊಗವನ್ನು…… ದಿಂದ ಮಾಡುತ್ತಾರೆ .
ಉತ್ತರ : ಮರ
3. ಬಟ್ಟೆಯ ಗಂಟನ್ನು …….. ಹೊರುತ್ತದೆ .
ಉತ್ತರ : ಕತ್ತೆ
4. ಮೀನನ್ನು ಹಿಡಿಯಲು …….. ಬಳಸುತ್ತಾರೆ .
ಉತ್ತರ : ಬಲೆ
ಈ ) ಖಾಲಿ ಜಾಗದಲ್ಲಿ ಪದ್ಯದ ಮುಂದಿನ ಸಾಲುಗಳನ್ನು ಬರೆದು ಪೂರ್ಣಗೊಳಿಸಿ .
ಹೊಸ ಹೊಸ ಬಗೆಯಲಿ……….
……..ಬೆಳಗಿಸುವೆ
ಅಪ್ಪನ ಅಮ್ಮನ ……….
………..ತವಕಿಸುವೆ
ಉತ್ತರ :
ಹೊಸ ಹೊಸ ಬಗೆಯಲಿ ಉಡುಗೆಯ ಹೊಲೆಯುತ
ಮೈಯನು ಮನವನು ಬೆಳಗಿಸುವೆ
ಅಪ್ಪನ ಅಮ್ಮನ ಮಕ್ಕಳ ಬಳಗದ
ಮೆಚ್ಚುಗೆ ಗಳಿಸಲು ತವಕಿಸುವೆ .
ಭಾಷಾ ಚಟುವಟಿಕೆ
ಅ) ಕೊಟ್ಟಿರುವ ವಿರುದ್ಧಾರ್ಥಕ ಪದಗಳನ್ನು ಮಾದರಿಯಂತೆ ವಾಕ್ಯಗಳಲ್ಲಿ ಬಳಕೆ ಮಾಡಿ .
ಮಾದರಿ : ದೂರ > ಹತ್ತಿರ = ನಾನು ಎಸೆದ ಕಲ್ಲು ದೂರ ಬಿದ್ದಿತು .
ನಮ್ಮ ಮನೆ ಶಾಲೆಯ ಹತ್ತಿರವಿದೆ .
ರಾತ್ರಿ x ಹಗಲು = ನಾನು ರಾತ್ರಿ ಎರಡು ಗಂಟೆ ಅಭ್ಯಸಿಸುವೆನು.
ನಾನು ಹಗಲು ಒಂದು ಗಂಟೆ ಆಟವಾಡುತ್ತೇನೆ.
ಹಿಗ್ಗು x ಕುಗ್ಗು = ನಮ್ಮ ಹೊಲದಲ್ಲಿ ಬಿತ್ತಿದ ಪೈರು ಚೆನ್ನಾಗಿ ಬೆಳೆದಾಗ ಎಲ್ಲರೂ ಹಿಗ್ಗುವರು .
ನಾವು ಬೆಳೆದ ಪೈರಿಗೆ ತಕ್ಕ ಬೆಲೆ ಸಿಗದೇ ಇದಾಗ ಕುಗ್ಗುವವು .
ಸುಳ್ಳು x ನಿಜ = ನಾವು ಸುಳ್ಳು ಎಂದೂ ಹೇಳಿ ಶಾರದು .
ನಾವು ಯಾವಾಗಲೂ ನಿಜವನೇ ಹೇಳಬೇಕು .
ಚಿಕ್ಕ x ದೊಡ್ಡ = ನಮ್ಮ ಮನೆಯಲ್ಲಿ ಬೆಳೆದ ಮಾವಿನ ಗಿಡ ಚಿಕ್ಕದಾಗಿದೆ .
ನಮ್ಮ ಹೊಲದಲ್ಲಿ ಬೆಳೆದ ತೆಂಗಿನ ಮರ ದೊಡ್ಡದಾಗಿದೆ .
ಆ ) ಪ್ರಾಸ ಪದಗಳನ್ನು ಪದ್ಯದಿಂದ ಆರಿಸಿ ಮಾದರಿಯಂತೆ ಬರೆಯಿರಿ ?
ಮಾದರಿ : ರೈತನಿಗೆ ದಾತನಿಗೆ
ಉತ್ತರ :
ಕೊಯ್ಯುವನು- ನೀಡುವೆನು
ಹಿಡಿಯ – ಎಣಿಸುವೆನು
ಬೆಳಗಿಸುವ ತವಕಿಸುವೆ .
ಇ ) ಕೊಟ್ಟಿರುವ ವಾಕ್ಯದಲ್ಲಿ ಕೆಲಸವನ್ನು ಸೂಚಿಸುವ ಪದವನ್ನು ಗುರುತಿಸಿ ಬರೆಯಿರಿ .
ನೇಗಿಲ ಅಳತೆಗೆ ಕೊಯ್ಯುವೆನು
ಉತ್ತರ : ಕೊಯ್ಯುವೆನು
ಕತ್ತೆಯ ಬೆನ್ನಲಿ
ಉತ್ತರ : ಇರಿಸುವೆನುಇರಿಸುವೆನು
ಸಂಜೆಗೆ ಹಣವನ್ನು ಎಣಿಸುವೆನು
ಉತ್ತರ : ಎಣಿಸುವೆನು
ಬಳಕೆ ಚಟುವಟಿಕೆ
1.ನಿಮ್ಮ ಊರಿನಲ್ಲಿ ಕಸುಬುದಾರರನ್ನು ಪಟ್ಟಿ ಮಾಡಿ ಅವರು ಯಾವ ಯಾವ ಕೆಲಸವನ್ನು ಮಾಡುತ್ತಾರೆ ಎಂಬುದನ್ನು ಕೊಟ್ಟಿರುವ ಜಾಗದಲ್ಲಿ ಬರೆಯಿರಿ .
ಉತ್ತರ :
ಕಸಬುದಾರರು – ಮಾಡುವ ಕೆಲಸ
ಕಸಬುದಾರರು ಮಾಡುವ ಕೆಲಸ
- ದರ್ಜೆ ಬಟ್ಟೆ ಹೊಲಿಯುವುದು .
- ನೇಕಾ ಬಟ್ಟೆ ನೇಯುವುದು
- ಬಡಿಗ . ಬಾಗಿಲು , ಕಿಟಕಿ , ಮುಂತಾದವುಗಳನ್ನು ತಯಾರಿಸುವುದು .
2. ಊರಿನಲ್ಲಿ ವಿವಿಧ ಕಸುಬುಗಳನ್ನು ಮಾಡುವವರು ಇರಬೇಕು , ಏಕೆ ?
ಉತ್ತರ : ಊರಿನಲ್ಲಿ ವಿವಿಧ ಕಸುಬುಗಳನ್ನು ಮಾಡುವವರು ಇರಬೇಕು . ಏಕೆಂದರೆ ಯಾವುದೇ ಒಂದು ಕೆಲಸ ಒಬ್ಬನಿಂದಲೇ ಮಾಡಲಾಗುವುದಿಲ್ಲ . ಉದಾಹರಣೆಗೆ ಮನೆ ನಿರ್ಮಿಸುವುದು .
3. ಕೊಟ್ಟಿರುವ ಚೌಕದಲ್ಲಿ ರೈತನಿಗೆ ಸಂಬಂಧಿಸಿದ ಅನೇಕ ಪದಗಳು ಅಡಗಿ ಕುಳಿತಿವೆ . ಅಂತಹ ಪದಗಳನ್ನು ಪತ್ತೆ ಹಚ್ಚಿ ವೃತ್ತ ಹಾಕು.
ಉತ್ತರ :
ಈ ಕವಿತೆಯಲ್ಲಿ ಬರುವ ಕಸುಬುದಾರರಲ್ಲಿ ನಿನಗೆ ಇಪ್ಪವಾದವರು ಯಾರು ? ಏಕೆ ?
ಉತ್ತರ :
ಈ ಕವಿತೆಯಲ್ಲಿ ಬರುವ ಕಸುಬುದಾರರಲ್ಲಿ ನನಗೆ ಇಷ್ಮವಾದವರು – ಬಟ್ಟೆಯನ್ನು ಹೊಲಿಯುವ ದರ್ಜಿ ( ಟೇಲರ್ ) , ಏಕೆಂದರೆ ಅವನು ಹೊಸ ಹೊಸ ಬಗೆಯಲ್ಲಿ ಬಟ್ಟೆ ಹೊಲಿಯುವುದು ನನಗೆ ಇಷ್ಮವಾಗಿದೆ .
ಪದ್ಯದ ಸಾರಾಂಶ :
ಕವಿ ಕುಳಮರ್ವ ಅವರು ತಮ್ಮ ಈ ಕವನದಲ್ಲಿ ವಿವಿಧ ಕುಲಕಸುಬುದಾರರ ಕುರಿತು ಮತ್ತು ಅವರು ಮಾಡುವ ವೃತ್ತಿಯಿಂದ ಹೇಗೆ ಉಪಯೋಗವಿದೆ ಎಂದು ವಿವರಿಸಿದ್ದಾರೆ .
ಕಬ್ಬಿಣವನ್ನು ಕಾಸಿ ಕುಟ್ಟು ಹಾರೆಯನ್ನು ಮಾಡುತ್ತ ಪ್ರೀತಿಯಿಂದ ಈ ದೇಶದ ಅನ್ನದಾತನಾದ ರೈತನಿಗೆ ನೀಡುವನು . ಈ ಜಗದ ಜನರನ್ನು ಸಲಹುವ ಅನ್ನದಾತನಿಗೆ ಬೆಳೆಯನ್ನು ಬೆಳೆಯಲು ತನ್ನ ನೆರವನ್ನು ನೀಡುವೆನೆಂದು ಕಮ್ಮಾರನು ಹೇಳುವನು
‘ ಕಾಡಿನಲ್ಲಿ ಸುತ್ತಾಡಿ ಒಣಮರಗಳನ್ನು ಹುಡುಕಿ ತಂದು ವ್ಯವಸಾಯಕ್ಕೆ ಅವಶ್ಯವಿರುವ ನೇಗಿಲಕ್ಕೆ ಬೇಕಾದ ರೀತಿಯಲ್ಲಿ ಮತ್ತು ಬಂಡಿಯ ಗಾಲಿಗೆ ಬೇಕಾದ ಆಕಾರದಲ್ಲಿ ಮರವನ್ನು ತುಂಡರಿಸುವನು ಬಡಿಗ , ಉತ್ತಮವಾದ ನೇಗಿಲನ್ನು ಮಾಡಿ ಅದರೊಂದಿಗೆ ನೊಗವನ್ನು ಕೂಡಾ ಸುಂದರವಾದ ಕೆತ್ತನೆಯೊಂದಿಗೆ ರೂಪಿಸಿ ಅನ್ನದಾತ ರೈತನಿಗೆ ನೀಡುವೆನೆಂದು ಬಡಿಗ ವೃತ್ತಿಯ ವ್ಯಕ್ತಿ ಹೇಳುವನು .
ಎಲ್ಲರೂ ನೀಡಿದ ಬಟ್ಟೆಯ ಗಂಟನ್ನು ಒಟ್ಟಿಗೆ ಸೇರಿಸಿ , ಕತ್ತೆಯ ಬೆನ್ನಮೇಲೆ ಇರಿಸಿ ಬಟ್ಟೆ ಒಗೆದು ಸ್ವಚ್ಛ ಸ್ವಚ್ಛ ಮಾಡಲು ಹಳ್ಳಕ್ಕೆ ಸಾಗುವನು ದೋಭಿ ,
ಹರಿಯುವ ನೀರನ್ನು ಮಲಿನಗೊಳಿಸದೇ ಎಲ್ಲರ ಬಟ್ಟೆಗಳನ್ನು ಒಗೆದು ಸ್ವಚ್ಛಗೊಳಿಸಿ ಶುಭ್ರವಾಗಿಡುವೆ ಎಂದು ಅಗಸವೃತ್ತಿಯ ದೋಬಿ ಹೇಳುವನು .
ಸಮುದ್ರದಲ್ಲಿ ಮೀನುಗಳನ್ನು ಹಿಡಿಯಲು ಬಲೆಯನ್ನು ಬೀಸಿ ಮೀನುಗಳನ್ನು ಆನಂದದಿಂದ ಹಿಡಿಯುವೆನು .ಹಿಡಿದ ಮೀನುಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಅವುಗಳನ್ನು ಮಾರಾಟ ಮಾಡಿ ಸಂಜೆಯ ಹೊತ್ತಿಗೆ ದುಡ್ಡು ಎಣಿಸುವೆನು ಎಂದು ಮೀನುಗಾರನು ಹೇಳುವನು .
ಹೊಸ ಹೊಸ ರೀತಿಯಲ್ಲಿ ಬಟ್ಟೆಗಳನ್ನು ಹೊಲಿಯುತ್ತ ಹೊಲಿದ ಬಟ್ಟೆ ಧರಿಸಿದವರ ಮನಸ್ಸಿಗೆ ಹೊಸ ಹುರುಪು ಬರುವ ಹಾಗೆ ಮಾಡುವನು . ಅಪ್ಪ , ಅಮ್ಮ ಮಕ್ಕಳ ಹಾಗೂ ಬಳಗದವರ ಮೆಚ್ಚುಗೆಯನ್ನು ಗಳಿಸಲು ತವಕಿಸುವನು ಈ ಬಟ್ಟೆ ಹೊಲಿಯುವ ದರ್ಜಿ ( ಟೈಲರ್ ) .
ಹೀಗೆ ಕವಿ ವಿವಿಧ ಕುಲಕಸಬುದಾರರ ವೃತ್ತಿ ಹಾಗೂ ಅದರ ಪ್ರಯೋಜನ ಕುರಿತು ಈ ಪದ್ಯ ಬಹಳ ಸುಂದರವಾಗಿ ವರ್ಣಿಸಿದ್ದಾರೆ .
FAQ :
ಉತ್ತರ : ಜನರನ್ನು ಸಲಹುವ ದಾತ ರೈತ .
ಉತ್ತರ : ನೊಗವನ್ನು ಒಣಮರದ ಕಟ್ಟಿಗೆಯಿಂದ ಮಾಡುವರು .
ಇತರೆ ವಿಷಯಗಳು :
4th Standard Kannada Textbook Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.