ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್‌ | 2nd Puc Political Science Chapter 3 Notes in Kannada

ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್‌ ಪ್ರಶ್ನೋತ್ತರ, 2nd Puc Political Science Chapter 3 Notes Question Answer in Kannada Medium 2nd Puc Bharatadalli Adalita Yantra Notes Kseeb Solutions For Class 12 Political Science Chapter 3 Notes extract Mcq Pdf Download Political Science Chapter 3 Administrative Machinery in India Questions and Answers, Notes Pdf

2nd Puc Political Science 3rd Chapter Notes in Kannada

ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ,

2nd Puc Political Science Chapter 3 Notes in Kannada Pdf

1. ಆಡಳಿತದ ಮೂಲ ಪದ ಯಾವುದು ?

Ad Ministiare, Ad ಎಂದರೆ ಸಾರ್ವಜನಿಕ Ministiare ಎಂದರೆ ಸೇವೆ ಎಂಬ ಅರ್ಥ ಬರುತ್ತದೆ.

2, ಆಡಳಿತ ಎಂದರೇನು ?

ನಿರ್ದಿಷ್ಟ ಗುರಿಸಾಧನೆಗಾಗಿ ನಡೆಸುವ ಸಾಮೂಹಿಕ ಪ್ರಯತ್ನವನ್ನು ಆಡಳಿತ ಎನ್ನುತ್ತಾರೆ.

3, ಕೇಂದ್ರಾಡಳಿತದ ಮುಖ್ಯಸ್ಥರು ಯಾರು ?

ರಾಷ್ಟ್ರಪತಿ

4. ರಾಜ್ಯಾಡಳಿತದ ಮುಖ್ಯಸ್ಥರು ಯಾರು ?

ರಾಜ್ಯಪಾಲರು

5. ಜಿಲ್ಲಾಡಳಿತದ ಮುಖ್ಯಸ್ಥರು ಯಾರು ?

ಜಿಲ್ಲಾಧಿಕಾರಿಗಳು

6. CAT ವಿಸ್ತರಿಸಿ,

Central Administrative Trubumal (ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ)

7, KAT ವಿಸ್ತರಿಸಿ,

8. Karnataka Administrative Trubumal ( ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ)

8. UPSC ವಿಸ್ತರಿಸಿ,

Union Public Service Commission (ಕೇಂದ್ರ ಲೋಕ ಸೇವಾ ಆಯೋಗ)

9. KPSC ವಿಸ್ತರಿಸಿ.

Karnataka Public Service Commission ( ಕರ್ನಾಟಕ ಲೋಕ ಸೇವಾ ಆಯೋಗ)

10. JPSC ವಿಸ್ತರಿಸಿ,

Joint Public Service Commission (ಜಂಟಿ ಲೋಕ ಸೇವಾ ಆಯೋಗ)

11, IAS ವಿಸ್ತರಿಸಿ.

Indian Administratives Service (daca ಸೇವಾ ಆಯೋಗ)

12, IPS ವಿಸ್ತರಿಸಿ

Indian Police Service (ಭಾರತೀಯ ಪೊಲೀಸ್‌ ಸೇವಾ ಆಯೋಗ)

13, KAS ವಿಸ್ತರಿಸಿ,

Karnataka adnimistratives Service ( ಕರ್ನಾಟಕ ಆಡಳಿತ ಸೇವೆ )

14. ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಯಾರು ನೇಮಕ ಮಾಡುತ್ತಾರೆ ?

ಪ್ರಧಾನ ಮಂತ್ರಿಯನ್ನೊಳಗೊಂಡ ಸಚಿವ ಸಂಪುಟದ ಸಲಹೆಯ ಮೇರೆಗೆ ರಾಷ್ಟ್ರಪತಿ ನೇಮಿಸುತ್ತಾರೆ.

15. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಯಾರು ನೇಮಿಸುತ್ತಾರೆ ?

ಮುಖ್ಯಮಂತ್ರಿಯನ್ನೊಳಗೊಂಡ ಮಂತ್ರಿಮಂಡಲದ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.

16. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು ಎಷ್ಟು?

6 ವರ್ಷ ಅಥವಾ 65 ವಯಸ್ಸಾದ ಮೇಲೆ ನಿವೃತ್ತಿಯಾಗುತ್ತಾರೆ,

17. ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು ಎಷ್ಟು ?

6 ಅಥವಾ 62 ವರ್ಷ.

18. ರಾಜ್ಯ ಸೇವೆಗೆ ಒಂದು ಉದಾ ಕೊಡಿ.

ಕರ್ನಾಟಕ ಆಡಳಿತ ಸೇವೆ.

19. ಯಾವ ವಿಧಿಯು ಅಖಿಲ ಭಾರತದ ಸೇವೆಗೆ ಅವಕಾಶ ಕಲ್ಪಿಸಿದೆ?

312 ವಿಧಿ

20, ಲಾಲ್‌ಬಹಾದ್ದೂರ್ ಶಾಸ್ತ್ರಿ ಆಕಾಡೆಮಿ ಎಲ್ಲಿದೆ 7

ಮಾಸ್ಸೂರಿಯಲ್ಲಿದೆ,

21. ಸರದಾರ್ ವಲ್ಲಭಬಾಯಿ ಪಟೇಲ್ ಆಕಾಡಮಿ ಎಲ್ಲಿದೆ ?

ಹೈದ್ರಾಬಾದ್‌ ನಲ್ಲಿದೆ.

22. ಕೇಂದ್ರ ಸೇವೆಗೆ ಒಂದು ಉದಾ ಕೊಡಿ.

ಭಾರತೀಯ ರೇಲ್ವೆ ಸೇವೆ.

23, ಜಿಲ್ಲಾಡಳಿತ ಎಂದರೇನು ?

ರಾಜ್ಯದ ಆಡಳಿತದ ಮೂಲ ಘಟಕವೇ ಜಿಲ್ಲಾಡಳಿತ. ಇದು ಜಿಲ್ಲೆಯೊಳಗಿನ ಸಾರ್ವಜನಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ.

24. ಕನಾಟಕ ಲೋಕ ಸೇವಾ ಆಯೋಗದ ಈಗಿನ ಅಧ್ಯಕ್ಷರು ಯಾರು ?

ಶಿವಶಂಕರಪ್ಪ ಎಸ್ ಸಾಹುಕಾರ್

25. ಸರ್ಕಾರದ ನಾಲ್ಕನೇಯ ಅಂಗ ಯಾವುದು ?

ನಾಗರೀಕ ಸೇವಾ ವರ್ಗ

26. ಶಾಶ್ವತ ಕಾರ್ಯಾಂಗ ಎಂದು ಯಾವುದನ್ನು ಕರೆಯುತ್ತಾರೆ ?

ನಾಗರೀಕ ಸೇವಾ ವರ್ಗ

27. ಅಖಿಲ ಭಾರತ ಸೇವೆಗೆ ಒಂದು ಉದಾಹರಣೆ ಕೊಡಿ.

ಭಾರತೀಯ ಆಡಳಿತ ಸೇವೆ.

28.‌ ಹೊಸ ಅಖಿಲ ಭಾರತ ಸೇವೆಗಳ ರಚನೆ ಮಾಡಿಕೊಳ್ಳುವ ಅಧಿಕಾರ ಯಾರಿಗಿದೆ ?

(ಪಾರ್ಲಿಮೆಂಟ್ ) ಸಂಸತ್ತಿಗೆ ಇದೆ.

29. ರಾಜ್ಯ ಸಚಿವಾಲಯದ ಮುಖ್ಯಸ್ಥರು ಯಾರು?

ಮುಖ್ಯ ಕಾರ್ಯದರ್ಶಿ,

30. ಕರ್ನಾಟಕದ ಈಗಿನ ಮುಖ್ಯ ಕಾರ್ಯದರ್ಶಿ ಯಾರು ?

ವಂದಿತಾ ಶರ್ಮಾ

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ,

2nd Puc Political Science 3rd Lesson Question Answer

1. ಆಡಳಿತ ಸೇವೆ ಎಂದರೇನು ?

ದೇಶದ ದಿನನಿತ್ಯದ ಆಡಳಿತವನ್ನು ನಡೆಸಿಕೊಂಡು ಹೋಗುವ ಕಾರ್ಯವನ್ನು ನಿರ್ವಹಿಸಿಕೊಂಡು ಹೋಗುವಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವ ಎಲ್ಲ ಸರ್ಕಾರಿ ನೌಕರರು ಮಾಡುವ ಕಾರ್ಯವೇ ಆಡಳಿತ ಸೇವೆ,

2. ಆಡಳಿತ ಸೇವೆಯ ವರ್ಗೀಕರಣ ಮಾಡಿ,

ಅಖಿಲ ಭಾರತ ಸೇವೆ

ಕೇಂದ್ರ ಸೇವೆ

ರಾಜ್ಯ ಸೇವೆ.

3. ಆಡಳಿತ ಸೇವೆಯ ತಾಟಸ್ಥ್ಯ ಎಂದರೇನು ?

ನಾಗರಿಕ ಸಿಬ್ಬಂದಿಯು ರಾಜಕೀಯ ಚಟುವಟಿಕೆಗಳಿಂದ ಆದಷ್ಟು ದೂರವಿರಬೇಕು. ಚುನಾವಣೆಗಳ ಸಂದರ್ಭದಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಾಗಲೀ ಅಥವಾ ದೇಣಿಗೆ ನೀಡುವುದಾಗಲಿ ಮಾಡಬಾರದು. ಇದನ್ನೇ ಆಡಳಿತ (ರಾಜಕೀಯ) ತಾಟಸ್ಥ್ಯತೆ ಎನ್ನುತ್ತಾರೆ.

4. ಆಡಳಿತ ಸೇವೆಯ ಅನಾದಕತ್ವ ಎಂದರೇನು ?

ನಾಗರಿಕ ಸಿಬ್ಬಂದಿಗಳು ತೆರೆಮರೆಯಲ್ಲಿ ಎಲೆ ಮರೆ ಕಾಯಿಯಂತೆ, ಕಾರ್ಯನಿರ್ವಹಿಸಬೇಕು, ಯಾವುದೇ ಹೊಗಳಿಕೆ ಅಥವಾ ತೆಗಳಿಕೆ, ಯಶಸ್ಸು ಅಥವಾ ಅಪಯಶಸ್ಸು ಕೀರ್ತಿ ಅಥವಾ ಅಪಕೀರ್ತಿಗಳಿಗೆ ಮಹತ್ವ ಕೊಡದೇ ತಮ್ಮ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಇದನ್ನು ಅನಾಮದೇಕತ್ವ ಅಥವಾ ಅನಾಮಕತ್ವ ಎನ್ನುತ್ತಾರೆ.

5. ಜರ್ಮನ್ ಪೈನರ್ ರವರ ವ್ಯಾಖ್ಯೆಯನ್ನು ತಿಳಿಸಿ,

“ಶಾಶ್ವತವಾಗಿ ಸೇವೆಯಲ್ಲಿರುವ ವೇತನ ಪಡೆಯುತ್ತಿರುವ ಕಾರ್ಯ ಕೌಶಲ್ಯವನ್ನು ಹೊಂದಿರುವ ವೃತ್ತಿ ನಿರತ ಉದ್ಯೋಗಿಗಳ ಸಮೂಹವೇ ನಾಗರಿಕ ಸೇವಾ ವರ್ಗ”

6. ಸರ್ಕಾರದ ಮೂರು ಇಲಾಖೆಗಳನ್ನು ತಿಳಿಸಿ.

ರೈಲ್ವೆ ಇಲಾಖೆ, ಗೃಹ ಇಲಾಖೆ, ಶಿಕ್ಷಣ ಇಲಾಖೆ,

7. ಅಧಿಕಾರಿ ಶ್ರೇಣಿ ಪದ್ಧತಿ ಎಂದರೇನು ?

ನಾಗರಿಕ ಸೇವೆಗಳಲ್ಲಿ ಅನೇಕ ಮೇಲಾಧಿಕಾರಿಗಳು ಹಾಗೆಯೇ ಅದೀನಾಧಿಕಾರಿಗಳು ಇರುತ್ತಾರೆ, ಮೇಲಾಧಿಕಾರಿಗಳು ಆದೇಶಗಳನ್ನು ನೀಡುತ್ತಾರೆ. ಅವುಗಳನ್ನು ಪಾಲಿಸುವುದು ಅಧೀನಾಧಿಕಾರಿಗಳ ಕರ್ತವ್ಯವಾಗಿರುತ್ತದೆ. ಇದನ್ನೇ ಶ್ರೇಣಿ ಪದ್ಧತಿ ಎನ್ನುತ್ತಾರೆ.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ

1. ಆಡಳಿತ ಪಾತ್ರವನ್ನು ತಿಳಿಸಿ,

ಚಾರ್ಲ್ಸ್ ಎ. ಬಿಯಾರ್ಡ, ಪ್ರಕಾರ ಆಡಳಿತವು ಆಧುನಿಕ ನಾಗರಿಕತೆಯ ವಿಜ್ಞಾನವಾಗಿದೆ.

ಜೋಲ್ಡಗೆಯ್ದಾನ್ (1971) ಸಾರ್ವಜನಿಕ ಆಡಳಿತದ ಕಾರ್ಯ ಮತ್ತು ಪಾತ್ರವನ್ನು ಕೆಳಕಂಡಂತೆ ಪಟ್ಟಿ ಮಾಡಿದ್ದಾರೆ.

  • ರಾಜಕೀಯ ಸಂರಕ್ಷಣೆ
  • ಸ್ಥಿರತೆ ಮತ್ತು ವ್ಯವಸ್ಥೆಯ ಕ್ರಮಬದ್ಧ ನಿರ್ವಹಣೆ
  • ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಸಾಂಸ್ಥಿಕರಣ
  • ಬೃಹತ್‌ ಪ್ರಮಾಣದ ವಾಣಿಜ್ಯ ವಿದ್ಯಮಾನಗಳ ಬೆಳವಣಿಗೆ
  • ಆರ್ಥಿಕ ಬೆಳವಣಿಗೆಗಳನ್ನು ನೈಜಗೊಳಿಸುವುದು.
  • ದುರ್ಬಲ ವರ್ಗದವರ ಸಾಮಾಜಿಕ ರಕ್ಷಣೆ
  • ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು,
  • ಸಾರ್ವಜನಿಕ ನೀತಿಗಳು ಹಾಗೂ ರಾಜಕೀಯ ನೀತಿಗಳ ಮೇಲೆ ಪ್ರಭಾವ

ಪೊಲೀಸ್ ರಾಜ್ಯಗಳಲ್ಲಿ ಆಡಳಿತ ವ್ಯಾಪ್ತಿಯು ಸಂಕುಚಿತವಾಗಿದ್ದು, ಆದರೆ ಆಧುನಿಕ ರಾಜ್ಯಗಳು ಕಲ್ಯಾಣ ರಾಜ್ಯಗಳಾಗಿರುವುದರಿಂದ ಆಡಳಿತದ ವ್ಯಾಪ್ತಿಯು ಹೆಚ್ಚಾಯಿತು. ಇದರ ಜೊತೆಗೆ ವೈಜ್ಞಾನಿಕ ಪ್ರಗತಿ, ಕೈಗಾರಿಕಾ ಕ್ರಾಂತಿ ಶಾಂತಿಕ ಪ್ರಗತಿ ಜನಸಂಖ್ಯಾ ಬೆಳವಣಿಗೆ ಮತ್ತು ಜನರ ಕಲ್ಯಾಣ ಹಾಗೂ ಉನ್ನತಿಗಾಗಿ ಕಲ್ಯಾಣ ರಾಜ್ಯದಲ್ಲಿ ಕಾರ್ಯಗಳು ಮತ್ತು ಚಟುವಟಿಕೆಗಳು ಹೆಚ್ಚಾದವು.

2. ನಾಗರಿಕ ಸೇವಾ ವರ್ಗದ ಲಕ್ಷಣಗಳನ್ನು ಚರ್ಚಿಸಿ

ಸರ್ಕಾರದ ಆಡಳಿತ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವ ಎಲ್ಲ ನೌಕರರ ಸಮೂಹವೇ ನಾಗರಿಕ ಸೇವಾ ವರ್ಗ.

ಲಕ್ಷಣಗಳು

  • ವೃತ್ತಿ ನಿರತ ವರ್ಗ
  • ಅಧಿಕಾರಿ ಶ್ರೇಣಿ ಪದ್ಧತಿ
  • ರಾಜಕೀಯ ತಾಟಸ್ಥ್ಯ
  • ಅನಾಮಕತ್ವ
  • ನಿಷ್ಪಕ್ಷಪಾತತ
  • ಸೇವಾ ಮನೋಭಾವ
  • ಖಾಯಂ (ಶಾಶ್ವತ)
  • ಕಾನೂನಿನ ಮಿತಿ

3. ಮುಖ್ಯ ಕಾರ್ಯದರ್ಶಿಯ ಕಾರ್ಯಗಳನ್ನು ಬರೆಯಿರಿ.

  • ಮುಖ್ಯಮಂತ್ರಿಗೆ ಸಲಹೆ ನೀಡುವುದು
  • ಸಚಿವ ಸಂಪುಟದ ಸಭೆಗಳಲ್ಲಿ ಭಾಗವಹಿಸುವುದು
  • ಸಚಿವಾಲಯದ ಮೇಲ್ವಿಚಾರಣೆ ಮತ್ತು ನಿಯಂತ್ರಣ
  • ಇತರ ಕಾರ್ಯದರ್ಶಿಗಳ ಕಾರ್ಯ ವೈಖರಿಯನ್ನು ಗಮನಿಸುವುದು.
  • ಸರ್ಕಾರದ ಯೋಜನೆಗಳ ಅನುಷ್ಠಾನ
  • ಕೇಂದ್ರ ಮತ್ತು ರಾಜ್ಯಗಳ ಸಂಪರ್ಕ ಸೇತುವೆ,

4. ಅಖಿಲ ಭಾರತ ಸೇವೆಗಳ ಬಗ್ಗೆ ಟಿಪ್ಪಣೆ ಬರೆಯಿರಿ.

ಮುಖ್ಯವಾದ ಅಖಿಲ ಭಾರತ ಸೇವೆಗಳೆಂದರೆ

  1. ಭಾರತೀಯ ಆಡಳಿತ ಸೇವೆ (IAS)
  2. 2. ಭಾರತೀಯ ಪೊಲೀಸ್ ಸೇವೆ (IPS)
  3. ಭಾರತೀ ಅರಣ್ಯ ಸೇವೆ (IFS)

ಭಾರತ ಸಂವಿಧಾನದ 312 ವಿಧಿಯಲ್ಲಿ ಅಖಿಲ ಭಾರತ ಸೇವೆಗಳ ರಚನೆಗೆ ಅವಕಾಶ ಕೊಡಲಾಗಿದೆ.

  1. ಈ ಸೇವೆಗಳ ಸೇರಿದ ಸಿಬ್ಬಂದಿ ವರ್ಗ ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ, ತರಬೇತಿ ಪಡೆದು ಭಾರತ ದೇಶದಾದ್ಯಂತ ಸೇವೆ ಸಲ್ಲಿಸುತ್ತಾರೆ.
  2. ಈ ಸೇವೆಗಳ ರಚನೆಗೆ ಮುಖ್ಯ ಕಾರಣ ಇಡೀ ದೇಶದಾದ್ಯಂತ ಏಕರೂಪ ಆಡಳಿತ ಇರಬೇಕೆಂಬುದಾಗಿದೆ.
  3. ಈ ಸೇವೆಗಳು ಜನವರಿ 26 1950 ರಲ್ಲಿ ಜಾರಿಯಾದವು.
  4. ಈ ಸೇವೆಗಳಿಗೆ ಸೇರಿದ ಸಿಬ್ಬಂದಿಯನ್ನು ಕೇಂದ್ರ ಮತ್ತು ರಾಜ್ಯಗಳೆರಡೂ ಉಪಯೋಗಿಸಿಕೊಳ್ಳಬಹುದು.
  5. ಈ 3 ಸೇವೆಗಳಲ್ಲದೆ ಹೊಸ ಸೇವೆಗಳನ್ನು ರಚನೆ
  6. ಮಾಡಿಕೊಳ್ಳಬೇಕಾದರೆ ರಾಜ್ಯ ಸಭೆಯ 2/3 ಅಂಶ ಭಾಗದಷ್ಟು ಸದಸ್ಯರು ನಿಯಮಾವಳಿಯನ್ನು ಅಂಗೀಕರಿಸಬೇಕು.
  7. ಈ ಅಖಿಲ ಭಾರತ ಸೇವೆಗಳು ರಾಷ್ಟ್ರ ಮತ್ತು ರಾಜ್ಯಗಳಿಗೆ ಒಂದು ಶ್ರೇಷ್ಠ ಆಡಳಿತವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

5. ಕರ್ನಾಟಕ ಲೋಕಸೇವಾ ಆಯೋಗ ರಚನೆ ಕಾರ್ಯಗಳನ್ನು ಬರೆಯಿರಿ.

ಸಂ 315 ನೇ ವಿಧಿಯು ಪ್ರತಿಯೊಂದು ರಾಜ್ಯಕ್ಕೂ ರಾಜ್ಯ ಸೇವೆಗಳಿಗೆ ಅಗತ್ಯವಾಗಿ ಬೇಕಾದ ಸಿಬ್ಬಂದಿ ವರ್ಗದವರನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಲೋಕಸೇವಾ ಆಯೋಗಗಳ ರಚನೆಗೆ ಅವಕಾಶ ನೀಡಿದೆ.

ರಚನೆ :

ನೇಮಕಾತಿ : ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ರಾಜ್ಯಪಾಲರು ನೇಮಿಸುತ್ತಾರೆ. (ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲದ ಸಲಹೆ ಮೇರೆಗೆ)

ಅಧಿಕಾರಾವಧಿ : 6 ಅಥವಾ 62 ವರ್ಷ ವಯೋಮಿತಿ ವರೆಗೆ ಅಧಿಕಾರದಲ್ಲಿರುತ್ತಾರೆ. ನಿವೃತ್ತಿಯ ನಂತರ ಚುನ‌ ನೇಮಕಕ್ಕೆ ಅವಕಾಶವಿಲ್ಲ. ಆದರೆ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಅಥವಾ ರಾಜ್ಯಗಳ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಬಹುದು.

ವೇತನ : ಇವರ ವೇತನ ಮತ್ತು ಸೇವಾ ನಿಯಮಗಳನ್ನು

ರಾಜ್ಯ ಶಾಸನ ಸಭೆ ನಿರ್ಧರಿಸುತ್ತದೆ. ಪದಚ್ಯುತಿ : ಕೇಂದ್ರ ಲೋಕ ಸೇವಾ ಆಯೋಗದ ಸದಸ್ಯರನ್ನು ವಜಾಗೊಳಿಸುವ ವಿಧಾನವನ್ನು ಅನುಸರಿಸಲಾಗುತ್ತದೆ.

ಕಾರ್ಯಗಳು :

  1. ರಾಜ್ಯ ಸೇವೆಗಳಿಗೆ ನೇಮಕ ಮಾಡಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದು.
  2. ಇಲಾಖಾವಾರು ಪರೀಕ್ಷೆಗಳನ್ನು ನಡೆಸುವುದು.
  3. ನೇಮಕಾತಿ, ಬಡ್ತಿ, ವರ್ಗಾವಣೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಲಹೆ.
  4. ತನ್ನ ಕಾರ್ಯಗಳ ಬಗ್ಗೆ ರಾಜ್ಯಪಾಲರಿಗೆ ವಾರ್ಷಿಕ ವರದಿ ನೀಡುವದು.
  5. ರಾಜ್ಯದಲ್ಲಿನ ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳುವಳಿಕೆ ನೀಡುವದು.

FAQ

1, ಆಡಳಿತ ಎಂದರೇನು ?

ನಿರ್ದಿಷ್ಟ ಗುರಿಸಾಧನೆಗಾಗಿ ನಡೆಸುವ ಸಾಮೂಹಿಕ ಪ್ರಯತ್ನವನ್ನು ಆಡಳಿತ ಎನ್ನುತ್ತಾರೆ.

2. JPSC ವಿಸ್ತರಿಸಿ,

Joint Public Service Commission (ಜಂಟಿ ಲೋಕ ಸೇವಾ ಆಯೋಗ)

3. KPSC ವಿಸ್ತರಿಸಿ.

Karnataka Public Service Commission ( ಕರ್ನಾಟಕ ಲೋಕ ಸೇವಾ ಆಯೋಗ)

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

All Notes App

2 thoughts on “ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್‌ | 2nd Puc Political Science Chapter 3 Notes in Kannada

Leave a Reply

Your email address will not be published. Required fields are marked *

rtgh