ದ್ವಿತೀಯ ಪಿ.ಯು.ಸಿ ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ರಾಜ್ಯಶಾಸ್ತ್ರ ನೋಟ್ಸ್, 2nd Puc Political Science Chapter 4 Notes in Kannada Kseeb Solutions For Class 12 Political Science Chapter 4 Notes Question Answer Extract Mcq Pdf Download Social Movements and their Political Implications Questions and Answers Notes Pdf
2nd Puc Political science chapter 4th lesson question answer
Samajika Chaluvaligalu Mattu Avugala Rajakiya Parinamagalu Notes
1. ಕಲಾರಾಮ ದೇವಾಲಯ ಪ್ರವೇಶದ ಮುಂದಾಳತ್ವವನ್ನು ಯಾರು ವಹಿಸಿದ್ದರು ?
ಡಾ. ಬಿ.ಆರ್. ಅಂಬೇಡ್ಕರ್
2. ಆರ್ಥಿಕ ಶೋಷಣೆ ಎಂದರೇನು ?
ಆರ್ಥಿಕವಾಗಿ ಹಿಂದುಳಿದ ಅಸಹಾಯಕರ ಮೇಲೆ ಪ್ರಬಲರು ಮಾಡುವ ದಬ್ಬಾಳಿಕೆ.
3. ಮೂಕ ನಾಯಕ ಪತ್ರಿಕೆ ಪ್ರಾರಂಭಿಸಿದವರು ಯಾರು ?
ಡಾ| ಬಿ.ಆರ್. ಅಂಬೇಡ್ಕರ
4, ಸಾಮಾಜಿಕ ತಾರತಮ್ಯ ಎಂದರೇನು ?
ಶ್ರೇಷ್ಠ-ಕನಿಷ್ಠ, ಮೇಲು ಕೀಳೆಂಬ ಭೇದ ಭಾವವನ್ನು ಮಾಡುವುದು.
5. ಚಿಪ್ಕೋ ಚಳುವಳಿಯ ರೂವಾರಿ ಯಾರು ?
ಚಾಂಡಿ ಪ್ರಸಾದ ಭಟ್ಟ
6. ಸಾಲು ಮರದ ತಿಮ್ಮಕ್ಕ ಯಾವ ಜಿಲ್ಲೆ ಸೇರಿದವರು ?
ರಾಮನಗರ ಜಿಲ್ಲೆಗೆ
7, ಯಾವ ದಿನವನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ?
ಜೂನ-5
8. AITUC ವಿಸ್ತರಿಸಿ
All India Trade Union Congress(ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್),
9. ಶೋಷಿತ ಮಹಿಳೆಯರಿಗೆ ಶಿಕ್ಷಣ ಪ್ರಾರಂಭಿಸಿದ ಪ್ರಥಮ ಶಿಕ್ಷಕಿಯನ್ನು ಹೆಸರಿಸಿ.
ಸಾವಿತ್ರಿ ಬಾ.ಪುಲೆ
10. ಯಾವ ದಿನವನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ?
ಮೇ-1
11, ಜ್ಯೋತಿ ಬಾ ಪುಲೆಯವರು ಯಾವ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು ?
ಅಕ್ಷರ ಕ್ರಾಂತಿ
12. UDHR ವಿಸ್ತರಿಸಿ.
ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ
13, ಅಪ್ಪಿಕೊ ಚಳುವಳಿ ಎಲ್ಲಿ ಪ್ರಾರಂಭವಾಯಿತು ?
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಸಿದ್ದಾಪುರ,
14. ಕರ್ನಾಟಕದಲ್ಲಿ ಮಾನವ ಹಕ್ಕುಗಳ ಆಯೋಗ ಯಾವಾಗ ಸ್ಥಾಪನೆಯಾಯಿತು?
2005 ರಲ್ಲಿ
15. ‘ರಾಷ್ಟ್ರೀಯ ದುಹಿಳಾ ಆಯೋಗ ಯಾವಾಗ ಜಾರಿಗೆ ಬಂದಿತು?
1992
II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ,
1. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಯಾರು, ಯಾವಾಗ ಸ್ಥಾಪಿಸಿದರು ?
ದಲಿತರು, 1974 ರಲ್ಲಿ,
2. ದಲಿತರೆಂದರೆ ಯಾರು ?
ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತರಾದವರು.
3. ಅಂಬೇಡ್ಕರ್‌ರ ಮೂರು ವಾಣಿಗಳು ಯಾವುವು ?
ಶಿಕ್ಷಣ, ಸಂಘಟನೆ, ಹೋರಾಟ,
4. ಪ್ರಾಚೀನ ಕಾಲದ ನಾಲ್ಕು ಸಾಮಾಜಿಕ ವರ್ಗಗಳಾವುವು ?
ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ
5. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಹೋರಾಟ ಎಲ್ಲಿ ಯಾವಾಗ ಪ್ರಾರಂಭವಾಯಿತು?
1920 ರಲ್ಲಿ ಶ್ರೀ ಕಾಂತರಾಜೇ ಅರಸರವರ ನೇತೃತ್ವದಲ್ಲಿ
ಮೈಸೂರು ಸಂಸ್ಥಾನದಲ್ಲಿ,
6, ‘ಹಿಂದೂ ವಿಂಡೋಸ್ ಹೋಮ್’ ಎಲ್ಲಿ ಮತ್ತು ಯಾವಾಗ ಸ್ಥಾಪನೆಯಾಯಿತು ?
1899 ರಲ್ಲಿ ಪೂನಾದಲ್ಲಿ,
7. ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಎರಡು ಕಾಯ್ದೆಗಳನ್ನು ತಿಳಿಸಿ.
ಹಿಂದೂ ವಿವಾಹ ಕಾಯ್ದೆ, 1955
ಬಾಲ್ಯವಿವಾಹ ನಿಷೇಧ ಕಾಯ್ದೆ
8. ಇಬ್ಬರು ಭಾರತೀಯ ಕಮ್ಯೂನಿಷ್ಟ್ ನಾಯಕರನ್ನು ಹೆಸರಿಸಿ,
ಎಸ್. ಎ ಢಾಂಗೆ
ಇ.ಎಂ.ಎಸ್. ನಂಬೂದ್ರಿ ಪಾಡ್
9, ಕಾರ್ಮಿಕರೆಂದರೆ ಯಾರು ?
ಕೃಷಿ ಮತ್ತು ಕೈಗಾರಿಕೆಗಳಲ್ಲಿ ತಮ್ಮ ದೈಹಿಕ ಶ್ರಮವನ್ನು ಹಾಕಿ ಕೆಲಸ ಮಾಡುವವರು ಇವರು ಕೂಲಿಗಾಗಿ ಕಾರ್ಯ ನಿರ್ವಹಿಸುವರು.
10. ಯಾವುದಾದರೂ ಎರಡು ಕಾರ್ಮಿಕ ಕಾಯ್ದೆಯನ್ನು ಹೆಸರಿಸಿ.
1. ಕಾರ್ಮಿಕ ಪರಿಹಾರ ಕಾಯ್ದೆ – 1923
2. ಕನಿಷ್ಟ ವತನ ಕಾಯ್ದೆ – 1948
11. ಕರ್ನಾಟಕ ರೈತ ಸಂಘದ ಇಬ್ಬರು ನಾಯಕರ ಹೆಸರು ತಿಳಿಸಿ,
1. ಪ್ರೊ. ಎಂ.ಡಿ. ನಂಜುಂಡಸ್ವಾಮಿ
2. ಎಸ್.ಡಿ. ಸುಂದರೇಶ್
12. ಮಾನವ ಹಕ್ಕುಗಳೆಂದರೇನು ?
ಮಾನವನಿಂದ ಬೇರ್ಪಡಿಸಲಾಗದ, ಯಾವುದೇ ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಇತರ ಸ್ಥಾನಮಾನಗಳ ಅಂತರವಿಲ್ಲದೆ ಮಾನವರು ಅನುಭವಿಸುವ ಹಕ್ಕುಗಳಾಗಿವೆ.
13. ಮರ್ಯಾದಾ ಹತ್ಯೆ ಎಂದರೇನು ?
ಅಂತರಜಾತಿಯ ವಿವಾಹ ಮತ್ತು ಅಂತರಧರ್ಮೀಯ ವಿವಾಹವಾದಾಗ ಕುಟುಂಬದ ಗೌರವವನ್ನು ಕಾಪಾಡಲು ಹಾಗೂ ಇದನ್ನು ತಪ್ಪಿಸಲು ಮಾಡುವ ದುಷ್ಕೃತ್ಯಕ್ಕೆ ಮರ್ಯಾದಾ ಹತ್ಯೆ ಎನ್ನುವರು.
147. ಪರಿಸರ ಎಂದರೇನು ?
ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ, ಇದು ಜೈವಿಕ ಮತ್ತು ಅಜೈವಿಕ ಘಟಕಗಳನ್ನು ಒಳಗೊಂಡಿದ್ದು ಮಾನವನಿಗೆ ಅತ್ಯಂತ ಉಪಯುಕ್ತವೂ ಆಗಿರುತ್ತದೆ.
15. ಪರಿಸರ ಚಳುವಳಿಗೆ ಸಂಬಂಧಿಸಿದ ಎರಡು ಕಾನೂನುಗಳನ್ನು ಹೆಸರಿಸಿ,
ಪರಿಸರ ಸಂರಕ್ಷಣಾ ಕಾಯ್ದೆ = 1986
2. ಜೀವ ವೈವಿಧ್ಯ ಕಾಯ್ದೆ – 2002
16, ಹಿಂದುಳಿದ ವರ್ಗದವರ ಏಳಿಗೆಗೆ ಹೋರಾಡಿದ ನಾಯಕರು ಯಾರು ?
- ತಮಿಳುನಾಡಿನ ಶ್ರೀ ಪೇರಿಯಾರ್ ರಾಮಸ್ವಾಮಿ ನಾಯ್ಕರ್
- ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಅರಸ
17, ದಲಿತ ಕಾಯ್ದೆಯ ವಿಶೇಷತೆ ಏನು ?
1989 ರ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳಿಗೆ ಕಾನೂನು ಸಲಹೆಯನ್ನು ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಕೊಳ್ಳಲು ವಿಫಲವಾದರೆ ದಂಡನಾರ್ಹವಾಗುತ್ತದೆ. ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ವಿಶೇಷ ನ್ಯಾಯಾಲಯಗಳನ್ನು ರಚಿಸಿ ಸರ್ಕಾರಿ ಅಭಿಯೋಜಕರನ್ನು ನೇಮಿಸಲು ನಿರ್ದೇಶಿಸಲಾಗಿದೆ. ಆದುದರಿಂದ ಈ ಕಾಯ್ದೆಯನ್ನು ದಲಿತ ಕಾಯ್ದೆ ಎನ್ನಲಾಗಿದೆ.
III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ
1. ದಲಿತ ಚಳುವಳಿಯ ಕಾರಣಗಳಾವವು ?
- ಸಾಮಾಜಿಕ ಅಸಮಾನತೆ
- ಆರ್ಥಿಕ ಅಸಮಾನತೆ
- ತಾರತಮ್ಯ
- ಅರಿವಿನ ಕೊರತೆ
- ರಾಜಕೀಯ ಅಸಮಾನತೆ
2. ಹಿಂದುಳಿದ ವರ್ಗದ ಚಳುವಳಿಯ ಕಾರಣಗಳನ್ನು ವಿವರಿಸಿ,
- ಸಾಮಾಜಿಕ ತಾರತಮ್ಯ
- ಆರ್ಥಿಕ ಶೋಷಣೆ
- ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ
- ರಾಜಕೀಯ ಪ್ರಾತಿನಿದ್ಯತೆಯ ವಂಚನೆ
- ಏಕೀಕರಣ
3. ಮಹಿಳಾ ಚಳುವಳಿಯ ಕರಣಗಳಾವುವು ?
- ಅಸಮಾನತೆ
- ವರದಕ್ಷಿಣೆ ಪಿಡುಗು
- ಲೈಂಗಿಕ ಹಿಂಸಾಚಾರ
- ಮಾನವ ಹಕ್ಕುಗಳ ಸಂರಕ್ಷಣೆ ಮಾಡದಿರುವುದು
- ಲಿಂಗಾಧಾರಿತ ಸಾಮಾಜಿಕ ವ್ಯವಸ್ಥೆ
- ಕೌಟುಂಬಿಕ ಹಿಂಸೆ
4. ಕಾರ್ಮಿಕ ಚಳುವಳಿಯ ಕಾರಣಗಳಾವುವು ?
- ಕಾರ್ಮಿಕ ಹಿತಾಸಕ್ತಿ, ನಿರ್ಲಕ್ಷ್ಯ
- ಉದ್ಯೋಗಿಗಳ ಕಡೆಗಣನೆ
- ಸೌಲಭ್ಯ ಪಡೆಯಲು
- ಕಲ್ಯಾಣ ಕಾರ್ಯಕ್ರಮಗಳು
- ಅಸಂಘಟಿತ ವಲಯಗಳ ಕಾರ್ಮಿಕರ ಸ್ಥಿತಿ.
5. ರೈತ ಚಳುವಳಿಯ ಪ್ರಮುಖ ಕಾರಣಗಳಾವುವು ?
- ವಂಚಿತ ಭಾವನೆ
- ರೈತರ ಸಮಸ್ಯೆಗಳ ಕಡೆಗಣನೆ
- ಸಾಲದ ಹೊರೆ
- ಪ್ರಕೃತಿಯ ಮುನಿಸು
- ಅವೈಜ್ಞಾನಿಕ ಭೂಸ್ವಾಧೀನ
- ಬೆಂಬಲ ಬೆಲೆ,
6. ಮಾನವ ಹಕ್ಕುಗಳ ಚಳುವಳಿಯ ಕಾರಣಗಳಾವುವು ?
ಮಾನವನಿಂದ ಬೇರ್ಪಡಿಸಲಾಗದಂತಹ ಹಕ್ಕುಗಳನ್ನು ಮಾನವ ಹಕ್ಕುಗಳು ಎನ್ನಲಾಗಿದೆ. ಪ್ರಸ್ತುತ ಎಲ್ಲಾ ಕಡೆಗಳಲ್ಲಿಯೂ ಒಂದಲ್ಲ ಒಂದು ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ, ಇದರ ವಿರುದ್ಧ ಹೋರಾಡಲು ಮಾನವ ಹಕ್ಕುಗಳ ಚಳುವಳಿ ಪ್ರಾರಂಭವಾಯಿತು.
ಈ ಮಾನವ ಹಕ್ಕುಗಳ ಚಳುವಳಿಯ ಕಾರಣಗಳು :
- ದಾಸ್ಯದಿಂದ ವಿಮೋಚನೆ
- ದಲಿತರ ಹಕ್ಕುಗಳ ರಕ್ಷಣೆ
- ನಾಗರಿಕ ಹಕ್ಕುಗಳ ರಕ್ಷಣೆ
- ಕೌಟುಂಬಿಕ ಜೀವನದ ರಕ್ಷಣೆ
- ಮೊಕದ್ದಮೆಗಳನ್ನು ದಾಖಲಿಸಲು ನಿರಾಕರಿಸುವುದು,
7. ಮಾನವ ಹಕ್ಕು ಚಳುವಳಿಯ ರಾಜಕೀಯ ಪರಿಣಾಮಗಳನ್ನು ತಿಳಿಸಿ,
- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
- ರಾಜ್ಯ ಮಾನವ ಹಕ್ಕುಗಳ ಆಯೋಗ
- ಮಕ್ಕಳ ಹಕ್ಕುಗಳು
- ಅರಿವು ಮೂಡಿಸುವುದು,
8. ಪರಿಸರ ಚಳುವಳಿಯ ಕಾರಣಗಳಾವುವು ?
- ಪರಿಸರ ನಾಶ
- ಪರಿಸರ ಮಾಲಿನ್ಯ
- ಜೀವ ವೈವಿಧ್ಯಗಳ ರಕ್ಷಣೆ
- ಪರಿಸರ ಶಿಕ್ಷಣದ ಕೊರತೆ
- ಪರಿಸರ ನಿರ್ವಹಣೆಯ ಕೊರತೆ.
9. ಪರಿಸರ ಚಳುವಳಿಯ ರಾಜಕೀಯ ಪರಿಣಾಮಗಳನ್ನು ವಿವರಿಸಿ
- ಗಂಗಾ ನದಿಯ ನೀರಿನ ಶುದ್ದೀಕರಣ ಯೋಜನೆ
- ಕೃಷ್ಣ ಮಹಾಜನ ಸಮಿತಿ
- ಸರಕಾರ ಜಾರಿಗೆ ತಂದ ಶಾಸನಗಳು,
10. ಹಿಂದುಳಿದ ವರ್ಗಗಳ ಪರವಾದ ಮಂಡಲ್ ಆಯೋಗದ ಬಗ್ಗೆ ಟಿಪ್ಪಣೆ ಬರೆಯಿರಿ.
ಮಂಡಲ್ ಆಯೋಗದ ರಚನೆ ಅಧ್ಯಕ್ಷರು ವರದಿ ನೀಡಿದ ದಿನಾಂಕ: ಜಾರಿಗೆ ತಂದ ದಿನಾಂಕ ಮತ್ತು ಸರ್ಕಾರ, ಮಂಡಲ್ ಆಯೋಗದ ವರದಿಯ ಶಿಫಾರಸ್ಸುಗಳು,
11. ಅವೈಜ್ಞಾನಿಕ ಭೂಸ್ವಾದೀನ ಕಾಯ್ದೆ ಬಗ್ಗೆ ಚರ್ಚಿಸಿ
ಅವೈಜ್ಞಾನಿಕ ಭೂಸ್ವಾಧೀನದ ಅರ್ಥ–ಪರಿಣಾಮಗಳು-1974 ರಲ್ಲಿ, ಕನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸರವರು ಜಾರಿಗೆ ತಂದ ಭೂಸುಧಾರಣಾ ಕಾಯ್ದೆ- ‘2013 ರ ಭೂಸ್ವಾಧೀನ ಕಾಯ್ದೆ ಪ್ರಾಮುಖ್ಯತೆ.
12. ಸಾಲು ಮರದ ತಿಮ್ಮಕ್ಕನವರ ಸಾಧನೆ ಕುರಿತು ಟಿಪ್ಪಣೆ ಬರೆಯಿರಿ.
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲ್ಲಿಕಲ್ಲು ಗ್ರಾಮದವರು, ಇವರು ಗ್ರಾಮದ ನಡುವೆ ರಸ್ತೆಯ ಇಕ್ಕೆಲಗಳಲ್ಲಿ ಆಲದ ಸಸಿಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿದರು. ತನ್ನ ಸುಪರ್ದಿಗೆ ತೆಗೆದುಕೊಂಡು, ಇವರ ಜೀವಮಾನದ ಸಾಧನೆಯನ್ನು ಗುರುತಿಸಿ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ‘ರಾಷ್ಟ್ರ ಪ್ರಶಸ್ತಿಯನ್ನು ನೀಡಲಾಯಿತು. ಪರಿಸರಕ್ಕೆ ಇವರು ನೀಡಿದ ಕೊಡುಗೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಪ್ರಬಂಧವನ್ನು ಮಂಡಿಸಲಾಗಿದೆ.
FAQ
ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತರಾದವರು.
ಕೃಷಿ ಮತ್ತು ಕೈಗಾರಿಕೆಗಳಲ್ಲಿ ತಮ್ಮ ದೈಹಿಕ ಶ್ರಮವನ್ನು ಹಾಕಿ ಕೆಲಸ ಮಾಡುವವರು ಇವರು ಕೂಲಿಗಾಗಿ ಕಾರ್ಯ ನಿರ್ವಹಿಸುವರು.
ಮಾನವನಿಂದ ಬೇರ್ಪಡಿಸಲಾಗದ, ಯಾವುದೇ ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಇತರ ಸ್ಥಾನಮಾನಗಳ ಅಂತರವಿಲ್ಲದೆ ಮಾನವರು ಅನುಭವಿಸುವ ಹಕ್ಕುಗಳಾಗಿವೆ.
ಇತರೆ ವಿಷಯಗಳು:
ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್
1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ
1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್