rtgh

ದ್ವಿತೀಯ ಪಿ.ಯು.ಸಿ ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ರಾಜ್ಯಶಾಸ್ತ್ರ ನೋಟ್ಸ್‌ | 2nd Puc Political Science Chapter 5 Notes in Kannada

ದ್ವಿತೀಯ ಪಿ.ಯು.ಸಿ ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ರಾಜ್ಯಶಾಸ್ತ್ರ ನೋಟ್ಸ್‌, 2nd Puc Political Science Chapter 5 Notes Kseeb Solutions For Class 12 Political Science Chapter 5 Notes Question Answer Extract Mcq Pdf 2023 Nation Building and Challenges To Indian Democracy Notes 2nd Puc Political Science 5th Lesson Question Answer

2nd Puc Political Science 5th Chapter Notes in Kannada

I. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.

1.‌ ರಾಷ್ಟ್ರ ನಿರ್ಮಾಣ ಎಂದರೇನು ?

ರಾಷ್ಟ್ರೀಯ ವಾದದಿಂದ ಕೂಡಿರುವ ಜನತೆ ರಾಷ್ಟ್ರದ ಪುನರ್ ನಿರ್ಮಾಣ ಹಾಗೂ ಸರ್ವತೋಮುಖ ಅಭಿವೃದ್ಧಿ ಸಾಧಿಸುವ ಸಂಕಲ್ಪವಾಗಿದೆ.

2. ರಾಷ್ಟ್ರ ಎಂಬ ಪ್ರಕ್ರಿಯೆಯು ಯಾವ ಒಪ್ಪಂದದಿಂದ ಮೂಡಿ ಬಂದಿತು?

ವೆಸ್ಟ್ ಫಾಲಿಯಾ ಒಪ್ಪಂದ,

3. ಯಾವ ರಾಷ್ಟ್ರವನ್ನು ಸಾಂಸ್ಕೃತಿಕ ವೈವಿಧ್ಯತೆಗಳ ನಾಡು ಎಂದು ಕರೆಯಲಾಗಿದೆ ?

ಭಾರತ

4. ಯಾವ ರಾಷ್ಟ್ರವನ್ನು ಜನಾಂಗೀಯತೆ ನಾಡು ಎಂದು ಕರೆಯಲಾಗಿದೆ ?

ಆಫ್ರಿಕಾ

5. ಅಸಮಾನತೆ ಎಂದರೇನು ?

ಜಾತಿ, ಲಿಂಗ, ಧರ್ಮ ಮತ್ತು ಅಂತಸ್ತಿನ ಆಧಾರದ ಮೇಲೆ ತಾರತಮ್ಯ ಮಾಡುವ ವ್ಯವಸ್ಥೆ

6. ಜಾತಿ ಆಧಾರಿತ ಅಸಮಾನತೆ ಎಂದರೇನು ?

ಜಾತಿ ಆಧಾರಿತವಾಗಿ ಮೇಲ್ದಾತಿಗಳು ಕೆಳಜಾತಿಯ ಜನರ ಮೇಲೆ ನಡೆಸುವ ಆರ್ಥಿಕ ಸಾಮಾಜಿಕ ಧಾರ್ಮಿಕ ಶೋಷಣೆಯಾಗಿದೆ.

7. ಲಿಂಗಾಧಾರಿತ ಅಸಮಾನತೆ ಎಂದರೇನು ?

ಗಂಡು ಹೆಣ್ಣು ಎಂಬ ತಾರತಮ್ಯದಿಂದ ಸ್ತ್ರೀಯರನ್ನು ಸಮಾನ ಅವಕಾಶಗಳಿಂದ ವಂಚಿತರನ್ನಾಗಿ ಮಾಡುವ ಪ್ರಕ್ರಿಯೆಯಾಗಿದೆ.

8. ಅನಕ್ಷರತೆ ಎಂದರೇನು ?

ವ್ಯಕ್ತಿಯೊಬ್ಬನು ತನ್ನ ಮಾತೃಭಾಷೆಯಲ್ಲಿ ಓದಲು, ಬರೆಯಲು ತಿಳಿಯದಂತಹ ಸ್ಥಿತಿಯನ್ನು ಅನಕ್ಷರತೆ ಎಂದು ಕರೆಯುತ್ತಾರೆ.

9. 86 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಯಾವಾಗ ಆಂಗೀಕರಿಸಲ್ಪಟ್ಟಿತು ?

ಭಾರತದ ಸಂಸತ್ತು 2002 ರಲ್ಲಿ 86 ನೇ ತಿದ್ದುಪಡಿಯನ್ನು ಆಂಗೀಕರಿಸಿತು.

10. RTE ಯನ್ನು ವಿಸ್ತರಿಸಿರಿ,

Right to Education

11. ಕೋಮುವಾದ ಎಂದರೇನು ?

ಸಮಾಜದ ಒಂದು ಮತೀಯ ಗುಂಪು ಇನ್ನೊಂದು ಮತೀಯ ಗುಂಪಿನ ವಿರುದ್ಧ ದ್ವೇಷ ಸಾಧಿಸುವುದಾಗಿದೆ.

12 ಭಯೋತ್ಪಾದನೆಯ ಮೂಲ ಪದ ಯಾವುದು ?

Terrore ಎಂಬ ಲ್ಯಾಟಿನ್ ಭಾಷೆಯ ಪದ

13. ಭಯೋತ್ಪಾದನೆ ಎಂದರೇನು ?

ಜನರಲ್ಲಿ ಭಯವನ್ನು ಸೃಷ್ಟಿಸಿ, ದೇಶದಲ್ಲಿ ಆತಂಕ ಮತ್ತು ಆಶಾಂತಿಯ ವಾತಾವರಣ ನಿರ್ಮಿಸಿ ಸೈದ್ಧಾಂತಿಕ ಗುರಿಗಳನ್ನು ಈಡೇರಿಸಿಕೊಳ್ಳುವ ಗುಂಪು.

14. TADA ವಿಸ್ತರಿಸಿ,

ಭಯೋತ್ಪಾದಕರು ಮತ್ತು ಅಡ್ಡಿಪಡಿಸುವ ಚಟುವಟಿಕೆಗಳ ತಡೆ ಕಾಯಿದೆ.

15. POTA ವಿಸ್ತರಿಸಿ.

Prevention of Terrorism Act.

16. UAPA ವಿಸ್ತರಿಸಿ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ.

17. ಭ್ರಷ್ಟಾಚಾರ ಎಂದರೇನು ?

ಸರಕಾರಿ ನೌಕರ ಅಥವಾ ರಾಜಕಾರಣಿ ತನ್ನ ಸ್ವಾರ್ಥಕ್ಕಾಗಿ ಕಾನೂನು ಬದ್ಧ ವೇತನವನ್ನು ಹೊರತುಪಡಿಸಿ, ಪಡೆಯುವ ಹಣ ಅಥವಾ ಬಹುಮಾನವನ್ನು ಭ್ರಷ್ಟಾಚಾರ ಎನ್ನುತ್ತಾರೆ.

18. ಲೋಕಪಾಲರನ್ನು ಯಾರು ನೇಮಿಸುತ್ತಾರೆ ?

ರಾಷ್ಟ್ರಪತಿಗಳು.

19. ಲೋಕಪಾಲ ಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು ?

2014 ಜನೇವರಿ 1 ರಂದು

20. ಲೋಕಾಯುಕ್ತರನ್ನು ಯಾರು ನೇಮಿಸುತ್ತಾರೆ ?

ರಾಜ್ಯಪಾಲರು.

21. ಕರ್ನಾಟಕದ ಲೋಕಾಯುಕ್ತ ಸಂಸ್ಥೆ ಯಾವಾಗ ಜಾರಿಗೆ ಬಂದಿತು?

1984

22. ಲೋಕಾಯುಕ್ತ ಅಧಿಕಾರಾವಧಿ ಎಷ್ಟು ?

5 ವರ್ಷಗಳು,

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ

1. ರಾಷ್ಟ್ರ ನಿರ್ಮಾಣದ ಒಂದು ವ್ಯಾಖ್ಯೆಯನ್ನು ಬರೆಯಿರಿ,

‘ರಾಷ್ಟ್ರ ನಿರ್ಮಾಣ ಎಂಬುದು ಜನರನ್ನು ಸಂಘಟಿಸಿ, ಅವರಲ್ಲಿ ಸಾಮರಸ್ಯ ಸಾಧಿಸಿ ಎಲ್ಲರೂ ಒಪ್ಪಿಕೊಳ್ಳುವ ವ್ಯವಸ್ಥೆಯನ್ನು ನಿರ್ಮಿಸುವ ಪ್ರಕ್ರಿಯೆ” ಮೈರಾನ್ ವೀನರ್

2. ಉತ್ತಮ ಆಡಳಿತ ಎಂದರೇನು ?

ದೇಶದ ಆಡಳಿತ ವ್ಯವಸ್ಥೆಯಲ್ಲಿ ನಿಯಂತ್ರಣ, ಪಾರದರ್ಶಕತೆಯಿಂದ ಕೂಡಿರುವ ಮತ್ತು ಆಡಳಿತದಲ್ಲಿ ತಂತ್ರಜ್ಞಾನ ಬಳಕೆಯಿರುವ ಆಡಳಿತ ವ್ಯವಸ್ಥೆ

3, ಕಡ್ಡಾಯ ಶಿಕ್ಷಣ ಎಂದರೇನು ?

6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಪ್ರಾಥಮಿಕ ಶಿಕ್ಷಣ ಒದಗಿಸುವುದು ಮತ್ತು ಉಚಿತ ದಾಖಲಾತಿ, ಹಾಜರಾತಿ ನೀಡಿ ಅವರ ಶಿಕ್ಷಣ ಪೂರ್ಣಗೊಳಿಸುವುದು.

4. ರಾಷ್ಟ್ರೀಯ ಭಾವೈಕ್ಯತೆ ಎಂದರೇನು ?

ಭಾರತದಲ್ಲಿ ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಇದ್ದು ಭಾವನಾತ್ಮಕವಾಗಿ ಮಾನಸಿಕವಾಗಿ ರಾಜಕೀಯವಾಗಿ ಎಲ್ಲ ಪ್ರಜೆಗಳನ್ನು ಒಂದುಗೂಡಿಸುವ ಪ್ರಕ್ರಿಯೆಯಾಗಿದೆ.

5, ಭಯೋತ್ಪಾದನೆಗೆ ಒಂದು ವ್ಯಾಖ್ಯೆಯನ್ನು ಬರೆಯಿರಿ.

ಒಂದು ಸಂಘಟಿತ ಗುಂಪು ವ್ಯವಸ್ಥಿತವಾದ ಹಿಂಸಾಚಾರದ ಮೂಲಕ ತನ್ನ ಗುರಿಯನ್ನು ಈಡೇರಿಸಿಕೊಳ್ಳಲು ಭಯದ ವಾತಾವರಣ ಸೂಸುವ ಅಸಂವಿಧಾನಕ ಕ್ರಮ”

6, ನೆರಹೊರೆಯ ಶಾಂತಿ ಸಮಿತಿ ಎಂದರೇನು ?

ಕೋಮುವಾದವನ್ನು ನಿಗ್ರಹಿಸಲು ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಎಲ್ಲ ಜಾತಿ, ಧರ್ಮದ ಜನರಿಂದ ರಚನೆಯಾಗಿ ಎಲ್ಲರಲ್ಲೂ ಸದ್ಭಾವನೆ ಮತ್ತು ಭಾತೃತ್ವ ಮನೋಭಾವ ತಿಳಿಸುವುದು.

7. ಭ್ರಷ್ಟಾಚಾರದ ಒಂದು ವ್ಯಾಖ್ಯೆಯನ್ನು ಬರೆಯಿರಿ,

ಭಾರತೀಯ ದಂಡ ಸಂಹಿತೆ 161 ನೇ ಸೆಕ್ಷನ್ ಒಬ್ಬ ಸರ್ಕಾರಿ ನೌಕರನು ತನ್ನ ಕರ್ತವ್ಯ ನಿರ್ವಹಿಸಲು ವೇತನವನ್ನು ಹೊರತು ಪಡಿಸಿ, ಇತರೇ ಲಾಭ ಪಡೆಯಲು ಪ್ರಯತ್ನಿಸುವುದಕ್ಕೆ ಭ್ರಷ್ಟಾಚಾರ ಎನ್ನುತ್ತಾರೆ.

8. ಲೋಕಪಾಲ ಎಂದರೇನು ?

ಭಾರತದ ಆಡಳಿತದಲ್ಲಿ ಕಂಡು ಬರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮತ್ತು ಇತರ ಅಧಿಕಾರ ದುರುಪಯೋಗ ನಿಯಂತ್ರಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ಕ್ರಮವೇ ಲೋಕಪಾಲ,

9. ಲೋಕಾಯುಕ್ತ ಎಂದರೇನು ?

ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ನಾಗರಿಕರ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ನೇಮಕವಾದ ಭ್ರಷ್ಟಾಚಾರ ನಿಗ್ರಹಿಸಲು ಇರುವ ರಾಜ್ಯ ಸರ್ಕಾರದ ಸಂಸ್ಥೆಯೇ ಲೋಕಾಯುಕ್ತ.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ

1. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಉಂಟಾಗುವ ಮುಖ್ಯ ಅಡಣೆಗಳಾವುವು ? ವಿವರಿಸಿ,

 • ಬಡತನ
 • ಜನಸಂಖ್ಯಾ ಸ್ಫೋಟ
 • ಪ್ರಾದೇಶಿಕ ಅಸಮತೋಲನ
 • ಸಾಮಾಜಿಕ ಮತ್ತು ರಾಜಕೀಯ ಶೋಭೆ
 • ರಾಜಕೀಯ ಬಿಕ್ಕಟ್ಟು

2, ಜಾತಿ ಅಸಮಾನತೆಗೆ ಕಾರಣಗಳಾವುವು ?

 • ವರ್ಣಾಶ್ರಮ ವ್ಯವಸ್ಥೆ
 • ಸಾಮಾಜಿಕ ಅಂತರ
 • ಅನಕ್ಷರತೆ ಮತ್ತು ಸಂಪ್ರದಾಯ
 • ಮೇಲರಿಮೆ
 • ವೈವಾಹಿಕ ನಿರ್ಬಂಧಗಳು

3, ಲಿಂಗ ಆಧಾರಿತ ಅಸಮಾನತೆಗೆ ಕಾರಣಗಳು ಯಾವುವು ?

 • ಮನುಸ್ಮೃತಿ
 • ಪುರುಷ ಪ್ರಾಬಲ್ಯ
 • ಶಿಕ್ಷಣದ ನಿರಾಕರಣೆ
 • ವರದಕ್ಷಿಣೆ ಪದ್ಧತಿ
 • ಸೂಕ್ತ ಪ್ರಾತಿನಿಧ್ಯ ನೀಡದಿರುವುದು

4. ಜಾತಿ ಆಧಾರಿತ ಅಸಮಾನತೆಗೆ ಪರಿಹಾರಗಳನ್ನು ತಿಳಿಸಿ,

 • ಶಿಕ್ಷಣ
 • ಉದ್ಯೋಗ
 • ಶಾಸನ ಸಭೆಗಳಲ್ಲಿ ಮೀಸಲಾತಿ
 • ಸ್ಥಳೀಯ ಸಂಸ್ಥೆಗಳಲ್ಲಿ ಮಿಸಲಾತಿ
 • ಅಸ್ಪೃಶ್ಯತೆ ನಿವಾರಣೆ

5, ಅನಕ್ಷರತೆಗೆ ಕಾರಣಗಳನ್ನು ಪಟ್ಟಿ ಮಾಡಿ,

 • ಜನಸಂಖ್ಯಾ ಸ್ಫೋಟ
 • ಬಡತನ
 • ಸಾಮಾಜಿಕ ಹಿಂದುಳಿದಿರುವಿಕೆ
 • ಬಾಲಕಾರ್ಮಿಕ ಪದ್ಧತಿ
 • ಅಸ್ಪೃಶ್ಯತೆ ನಿವಾರಣೆ

6. ಭಾರತದ ಪ್ರಜಾಪ್ರಭುತ್ವಕ್ಕೆ ಕೋಮುವಾದ ಒಂದು ದೊಡ್ಡ ತೊಡಕಾಗಿದೆ. ಹೇಗೆ ?

 • ರಾಷ್ಟ್ರೀಯ ಏಕತೆಗೆ ಧಕ್ಕೆ
 • ರಾಷ್ಟ್ರೀಯವಾದ ಮತ್ತು ದೇಶಾಭಿಮಾನಕ್ಕೆ
 • ರಾಷ್ಟ್ರೀಯ ಅಭಿವೃದ್ಧಿಗೆ ತೊಡಕು
 • ಅಸಮರ್ಥ ರಾಜಕೀಯ ನಾಯಕತ್ವ ಧಕ್ಕೆ
 • ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಧಕ್ಕೆ

7. ಪ್ರಜಾಪ್ರಭುತ್ವಕ್ಕೆ ಭಯೋತ್ಪಾದನೆ ಹೇಗೆ ಮಾರಕವಾಗಿದೆ. ವಿವರಿಸಿ,

 • ಆಡಳಿತ ಯಂತ್ರಕ್ಕೆ ಅಡ್ಡಿ
 • ಸಂವಿಧಾನ ಗೌರವ ನೀಡುವುದಿಲ್ಲ
 • ಮಾನವ ಹಕ್ಕುಗಳ ಉಲ್ಲಂಘನೆ
 • ಪ್ರಜಾಪ್ರಭುತ್ವ ವಿರೋಧ ಚಟುವಟಿಕೆಗಳು
 • ಆರ್ಥಿಕ ಬೆಳವಣಿಗೆಗೆ ಅಡ್ಡಿ

8. ಭ್ರಷ್ಟಾಚಾರದ ಅರ್ಥ ಮತ್ತು ವ್ಯಾಖ್ಯೆಗಳನ್ನು ಬರೆಯಿರಿ.

ಭ್ರಷ್ಟಾಚಾರ ಭಾರತಕ್ಕೆ ಪ್ರಾಚೀನ ಕಾಲದಿಂದ ಬೆಳೆದು ಬಂದ ಬಳುವಳಿಯಾಗಿದೆ. ಇಂದು ರಾಜಕೀಯ ಮತ್ತು ಆಡಳಿತ ಎರಡರಲ್ಲೂ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ. ಭ್ರಷ್ಟಾಚಾರ ಎಂದರೆ ಸಾರ್ವಜನಿಕ ಸ್ಥಾನದಲ್ಲಿರುವ ವ್ಯಕ್ತಿಗಳು ಹಣದ ರೂಪದಲ್ಲಿ ಅನಧಿಕೃತವಾಗಿ ಸ್ವೀಕರಿಸುವುದಕ್ಕೆ ಭ್ರಷ್ಟಾಚಾರ ಎಂದು ಕರೆಯುತ್ತಾರೆ,

ವ್ಯಾಖ್ಯೆಗಳು :

1. ಭಾರತೀಯ ದಂಡ ಸಂಹಿತೆ – ಒಬ್ಬ ಸರ್ಕಾರಿ ನೌಕರನು ತನ್ನ ಅಧಿಕೃತ ಕರ್ತನ ನಿರ್ವಹಿಸಲು ಕಾನೂನುಬದ್ದ ಪ್ರತಿಫಲ ಹೊರತುಪಡಿಸಿ ಇತರೆ ಲಾಭ ಪಡೆಯುವುದಕ್ಕೆ ಭ್ರಷ್ಟಾಚಾರ ಎಂದು ಕರೆಯುತ್ತಾರೆ.

2, ಡೆವಿಡ್ ಹೆಚ್, ಬೆಯ್ಲೆ – ವ್ಯಯಕ್ತಿಕ ಲಾಭಕ್ಕಾಗಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದು ಭ್ರಷ್ಟಾಚಾರ,

3. ಭಾರ್ಗವ – ಸರ್ಕಾರಿ ನೌಕರನೊಬ್ಬ ತನ್ನ ಸ್ವಾರ್ಥ ಮತ್ತು ತನ್ನವರಿಗಾಗಿ ಎಸಗುವ ಕರ್ತವ್ಯ ಲೋಪ ಅಥವಾ ಪಡೆಯುವ ಸಂಭಾವನೆಯನ್ನು ಭ್ರಷ್ಟಾಚಾರ ಎಂದು ಕರೆಯುತ್ತಾರೆ.

9. ಭ್ರಷ್ಟಾಚಾರ ಪ್ರಜಾಪ್ರಭುತ್ವಕ್ಕೆ ಒಂದು ಗಂಡಾಂತರ – ವಿಶ್ಲೇಷಿಸಿ.

 • ಶಕ್ತಿ ರಾಜಕಾರಣ
 • ರಾಜಕೀಯ ಅಪರಾಧೀಕರಣ
 • ಅಧಿಕಾರಶಾಹಿಯ ಅನೈತಿಕತೆ,
 • ಸಾಮಾಜಿಕ ನ್ಯಾಯದ ಉಲ್ಲಂಘನೆ

10, ಲೋಕಪಾಲದ ರಚನೆ ಮತ್ತು ಕಾರ್ಯಗಳು ವಿವರಿಸಿ.

ನೇಮಕ ಓರ್ವ ಚೇರಮನ್‌ 8 ಜನ ಸದಸ್ಯರನ್ನು ರಾಷ್ಟ್ರಪತಿಗಳಿಂದ ನೇಮಕ, ಅಧಿಕಾರಾವಧಿ – 5 ವರ್ಷಗಳು ಭತ್ಯೆ ಸೌಲಭ್ಯಗಳು ನಿವೃತ್ತಿ ಲಾಭಗಳು ಲಭಿಸುತ್ತವೆ.

ಕಾರ್ಯಗಳು :

 • ತಪ್ಪಿತಸ್ಥ ಸರ್ಕಾರಿ ಉದ್ಯೋಗಿಗಳಿಗೆ ಶಿಕ್ಷೆ ವಿಧಿಸುವುದು,
 • ವಿದೇಶಿ ಮೂಲಗಳಿಂದ ಬರುವ ವಂತಿಗೆ ಮೇಲೆ ನಿಗಾ ಇಡುವುದು.
 • ಯಾವುದೇ ಪ್ರಕರಣದ ತನಿಖೆ ನಡೆಸುವ ಅಧಿಕಾರ
 • ಭ್ರಷ್ಟಾಚಾರದಿಂದ ಗಳಿಸಿದ ಆಸ್ತಿ ಮುಟ್ಟುಗೋಲು ಹಾಕುವುದು.
 • ಭ್ರಷ್ಟಾಚಾರಿಗಳಿಗೆ 2 ವರ್ಷದವರೆಗೆ ಶಿಕ್ಷೆ ವಿಧಿಸುವುದು.

IV. ಈ ಕೆಳಗಿನ ಪ್ರಶ್ನೆಗೆ 30/40 ವಾಕ್ಯಗಳಲ್ಲಿ ಉತ್ತರಿಸಿ,

1. ರಾಷ್ಟ್ರ ನಿರ್ಮಾಣದ ವಿವಿಧ ಅಗತ್ಯ ಅಂಶಗಳನ್ನು ವಿವರಿಸಿ.

 • ಜನತೆಯ ಬೆಂಬಲ
 • ಉತ್ತಮ ಆಡಳಿತ
 • ಬದ್ಧತೆಯಿಂದ ಕೂಡಿರುವ ನಾಯಕತ್ವ
 • ರಾಜಕೀಯ ಸಂಸ್ಕೃತಿ
 • ಸಾರ್ವತ್ರಿಕ ಶಿಕ್ಷಣ 6. ರಾಷ್ಟ್ರೀಯ ಗುಣ
 • ಸಮೂಹ ಮಾಧ್ಯಮಗಳು
 • ಜವಾಬ್ದಾರಿಯುತ ಬೌದ್ಧಿಕತೆ
 • ರಾಷ್ಟ್ರೀಯ ಸಮಗ್ರತೆ

2. ಭಾರತದ ಪ್ರಜಾಪ್ರಭುತ್ವಕ್ಕೆ ಅನಕ್ಷರತೆಯು ಒಂದು ದೊಡ್ಡ ಸವಾಲಾಗಿದೆ, ಚರ್ಚಿಸಿರಿ,

ಅನಕ್ಷರತೆ’ ಎಂದರೆ ಓದಲು ಬರೆಯಲು ತಿಳಿಯದಂತಹ ಸ್ಥಿತಿಯನ್ನು ಅನಕ್ಷರತೆ ಎನ್ನುತ್ತಾರೆ. ಜನಪ್ರಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಆದರೆ ಅಧಿಕ ಮತದಾರರು ಅನಕ್ಷರಸ್ಥರೇ ಆಗಿರುವದರಿಂದ ಭಾರತದ ಪ್ರಮುಖ ಅಂಶಗಳೆಂದರೆ –

 • ಕಡಿಮೆ ಮತದಾನ
 • ಮತದಾನದ ದುರುಪಯೋಗ
 • ಯೋಗ್ಯ ಅಭ್ಯರ್ಥಿಯ ಆಯ್ಕೆ ಕಷ್ಟಕರ
 • ಹಣ ಮತ್ತು ತೋಳ್ಳಲದ ಪ್ರಯೋಗ
 • ಸರ್ವಾಧಿಕಾರತ್ವದ ಉದಯ 6. ಚುನಾವಣಾ ಅವ್ಯವಹಾರಗಳು
 • ಜಾತೀಯತೆ
 • ಕೋಮು ಮನೋಭಾವನೆ
 • ಜನಸಂಖ್ಯಾ ಸ್ಫೋಟ
 • ರಾಜಕೀಯ ನಿರಾಸಕ್ತಿ

3. ಭಾರತದ ಪ್ರಜಾಪ್ರಭುತ್ವಕ್ಕೆ ಭಯೋತ್ಪಾದನೆ ಒಂದು ಗಂಡಾಂತರ ವಿಶ್ಲೇಷಿಸಿ.

ಯಾವುದೇ ಒಂದು ಸಂಘಟಿತ ಗುಂಪು ವ್ಯವಸ್ಥಿತ ಹಿಂಸಾಚಾರದ ಮೂಲಕ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವುದೇ ಭಯೋತ್ಪಾದನೆಯಾಗಿದೆ. ಕೊಲೆ ಸುಲಿಗೆ, ಅಪಹರಣ ಮತ್ತು ವಿದ್ವಂಸಕ ಕೃತ್ಯಗಳನ್ನು ಎಸಗುವವರೇ ಭಯೋತ್ಪಾದಕರು.

 • ಆಡಳಿತ ಯಂತ್ರಕ್ಕೆ ಅಡ್ಡಿ
 • ಸಂವಿಧಾನಕ್ಕೆ ಗೌರವವಿಲ್ಲ.
 • ಮಾನವ ಹಕ್ಕುಗಳ ಉಲ್ಲಂಘನೆ
 • ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು
 • ಆರ್ಥಿಕ ಬೆಳವಣಿಗೆ ಅಡ್ಡಿ,

4. ಕೋಮುವಾದದ ಕಾರಣಗಳು ಮತ್ತು ನಿವಾರಣೆ ಪಾಯಗಳನ್ನು ಕುರಿತು ಬರೆಯಿರಿ,

ಮತೀಯ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತ ಜನರ ನಡುವೆ ಉದ್ಭವಗೊಳ್ಳುವ ಸಮಸ್ಯೆಯು ಕೋಮುವಾದ. ಪರಸ್ಪರ ಗುಂಪುಗಳು ದ್ವೇಷ ಸಾಧಿಸುವುದು, ಪರಸ್ಪರ ನಿಂದಿಸುವ ಅವಮಾನಿಸುವ ಅಪಮಾನಗೊಳಿಸುವ ಕ್ರಿಯೆಯಾಗಿದೆ. ಕೋಮುವಾದಕ್ಕೆ ಕಾರಣವಾದ ಅಂಶಗಳು ಹೀಗಿವೆ. ಕಾರಣಗಳು :

 • ಭಾರತದಲ್ಲಿ ಬ್ರಿಟಿಷರ ನೀತಿ
 • ಹಿಂದು-ಮುಸ್ಲಿಂ ರಾಷ್ಟ್ರೀಯವಾದ
 • ಕೋಮು ಗಲಭೆಗಳು 4. ರಾಜಕೀಯ ಪ್ರೇರಿತ
 • ಧಾರ್ಮಿಕ ಹಿತಾಸಕ್ತಿ ಸಂಘಟನೆಗಳು

ನಿವರಣೋಪಾಯಗಳು :

 • ಜಾತ್ಯಾತೀತತೆ
 • ರಾಷ್ಟ್ರೀಯ ಭಾವೈಕ್ಯತ
 • ನೆರೆಹೊರೆ ಶಾಂತಿ ಸಮಿತಿಗಳು

5. ಭಯೋತ್ಪಾದಕತೆಯ ಕಾರಣಗಳು ಮತ್ತು ಅವುಗಳ ನಿವಾರಣೆಗೆ ಶಾಸನಾತ್ಮಕ ಕ್ರಮಗಳನ್ನು ಕುರಿತು ಬರೆಯಿರಿ.

ಅಪರಾಧಿಗಳು ವೈಯಕ್ತಿಕ ಲಾಭಕ್ಕಾಗಿ ಭಯದ ತಂತ್ರ ಬಳಸುವಿಕೆಯೇ ಭಯೋತ್ಪಾದನೆಯಾಗಿದೆ. ಇದೊಂದು ಬೆದರಿಕೆಯೊಡ್ಡುವ ಪ್ರಬಲ ಅಸ್ತ್ರವಾಗಿದೆ. ಭಯೋತ್ಪಾದನೆಗೆ ಕಾರಣಗಳು ಹೀಗಿವೆ.

 • ಪ್ರತ್ಯೇಕವಾದಿ ಚಳುವಳಿಗಳು
 • ಧಾರ್ಮಿಕ ಮೂಲಭೂತವಾದ
 • ಈಶಾನ್ಯ ರಾಜಕೀಯ ವ್ಯವಸ್ಥೆ
 • ದುರ್ಬಲ ರಾಜಕೀಯ ವ್ಯವಸ್ಥೆ
 • ಆರ್ಥಿಕ ತಾರತಮ್ಯ

ಶಾಸನೀಯ ಕ್ರಮಗಳು :

 • ಫೋಟಾ ಕಾಯ್ದೆ ಜಾರಿ 2001
 • ಟಾಡಾ ಕಾಯ್ದೆ ಜಾರಿ (1987)
 • ಮೀಸಾ ಕಾಯ್ದೆ ಜಾರಿ 1971
 • ಲುಫಾ ಕಾಯ್ದೆ ಜಾರಿ

FAQ

1.‌ ರಾಷ್ಟ್ರ ನಿರ್ಮಾಣ ಎಂದರೇನು ?

ರಾಷ್ಟ್ರೀಯ ವಾದದಿಂದ ಕೂಡಿರುವ ಜನತೆ ರಾಷ್ಟ್ರದ ಪುನರ್ ನಿರ್ಮಾಣ ಹಾಗೂ ಸರ್ವತೋಮುಖ ಅಭಿವೃದ್ಧಿ ಸಾಧಿಸುವ ಸಂಕಲ್ಪವಾಗಿದೆ.

2. ಅಸಮಾನತೆ ಎಂದರೇನು ?

ಜಾತಿ, ಲಿಂಗ, ಧರ್ಮ ಮತ್ತು ಅಂತಸ್ತಿನ ಆಧಾರದ ಮೇಲೆ ತಾರತಮ್ಯ ಮಾಡುವ ವ್ಯವಸ್ಥೆ

3. ಲೋಕಾಯುಕ್ತ ಎಂದರೇನು ?

ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ನಾಗರಿಕರ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ನೇಮಕವಾದ ಭ್ರಷ್ಟಾಚಾರ ನಿಗ್ರಹಿಸಲು ಇರುವ ರಾಜ್ಯ ಸರ್ಕಾರದ ಸಂಸ್ಥೆಯೇ ಲೋಕಾಯುಕ್ತ.

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *