ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್, 2nd Puc Political Science Chapter 2 Notes Question Answer Extract Mcq Pdf Download 2023, Kseeb Solutions For Class 12 Political Science Chapter 2 Notes in Kannada Medium Chunavanegalu Mattu Bharatadalli Paksha Paddhati Notes 2nd Puc Political Science 2nd Lesson Question Answer
2nd Puc Political Science Chapter 2 Notes in Kannada
2nd Puc Political Science 2nd Chapter
1. ಚುನಾವಣೆ ಎಂದರೇನು ?
ದೇಶದಲ್ಲಿನ ಎಲ್ಲಾ ಮತದಾರರು ತಮ್ಮನ್ನಾಳುವ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡುವ ವಿಧಾನವೇ ಚುನಾವಣೆ
2. ಚುನಾವಣೆಯ ಮೂಲ ಪದ ಯಾವುದು ?
ಎಲಿಗೆರೆ
3. ಉಪಚುನಾವಣೆ ಎಂದರೇನು ?
ಚುನಾಯಿತ ಸದಸ್ಯರ ರಾಜೀನಾಮೆ, ಮರಣ ಮುಂತಾದ ಕಾರಣಗಳಿಂದ ತನ್ನ ಅಥವಾ ಇನ್ನಿತರ ಕಾರಣಗಳಿಗೆ ತನ್ನ ಸದಸ್ಯತ್ವವನ್ನು ಕಳೆದುಕೊಂಡರೆ ಆ ಸ್ಥಾನಕ್ಕೆ 6 ತಿಂಗಳ ಒಳಗಾಗಿ ನಡೆಯುವ ಚುನಾವಣೆಯೇ ಉಪಚುನಾವಣೆ
4. ಚುನಾವಣಾ ಆಯೋಗದ ಮುಖ್ಯಸ್ಥರು (ಆಯುಕ್ತರು) ಯಾರು?
ಸುನೀಲ ಆರೋರಾ
5, ಭಾರತದ ಚುನಾವಣಾ ಆಯುಕ್ತರನ್ನು ಯಾರು ನೇಮಿಸುತ್ತಾರೆ?
ರಾಷ್ಟ್ರಪತಿಗಳು,
6. EPIC ನ್ನು ವಿಸ್ತರಿಸಿರಿ,
Electrol Photo Identity Card (ಮತದಾರರ ಗುರುತಿನ ಚೀಟಿ)
7. NOTA ನ್ನು ವಿಸ್ತರಿಸಿರಿ,
None of the above.
8. ನೇರ ಚುನಾವಣೆಗೆ ಒಂದು ಉದಾಹರಣೆ ಕೊಡಿ.
ಭಾರತದ ಲೋಕಸಭಾ ಮತ್ತು ರಾಜ್ಯ ವಿಧಾನ ಸಭೆ,
9. ಭಾರತದಲ್ಲಿ ಎಂಥಹ ಪಕ್ಷ ಪದ್ಧತಿ ಇದೆ ?
ಬಹುಪಕ್ಷ ಪದ್ಧತಿ.
10, UPA ನ್ನು ವಿಸ್ತರಿಸಿರಿ,
United Progressive Allience (ಸಂಯುಕ್ತ ಪ್ರಗತಿ -ಪರ ಒಕ್ಕೂಟ)
11. N D A ನ್ನು ವಿಸ್ತರಿಸಿರಿ.
National Democratic Allience. (at ಪ್ರಜಾಸತ್ತಾತ್ಮಕ ಒಕ್ಕೂಟ)
12. ಪಕ್ಷಾಂತರ ನಿಷೇಧ ಕಾಯ್ದೆ ಯಾವಾಗ ಜಾರಿಗೆ ಬಂದಿತು.
1985 ಎಪ್ರೀಲ್ 1.
II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ
2nd Puc Political Science Chapter 2 Question Answer in Kannada
1. ಪ್ರತ್ಯಕ್ಷ ಚುನಾವಣೆ ಎಂದರೇನು ? ಉದಾಹರಣೆ ಕೊಡಿ,
ಒಂದು ರಾಷ್ಟ್ರದ ಚುನಾವಣೆ ವ್ಯವಸ್ಥೆಯಲ್ಲಿ ವಯಸ್ಸ ಮತದಾರರು ನೇರವಾಗಿ ತಾವೇ ಮತಗಟ್ಟೆಗೆ ಹೋಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ರಹಸ್ಯಮತದಾನದ ಮೂಲಕ ಮತ ಚಲಾಯಿಸುವ ಪದ್ಧತಿಯೇ ಪ್ರತ್ಯಕ್ಷ ಚುನಾವಣೆ,
ಉದಾ : ಲೋಕಸಭೆ ಮತ್ತು ರಾಜ್ಯದ ವಿಧಾನ ಸಭಾ ಚುನಾವಣೆಗಳು,
2. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು ?
ಭಾರತದಲ್ಲಿ 18 ವರ್ಷ ತುಂಬಿದ ಎಲ್ಲಾ ಸ್ತ್ರೀ ಮತ್ತು ಪುರುಷರು, ಲಿಂಗ, ಧರ್ಮ, ಜಾತಿ, ಅರ್ಥಿಕ ಹಾಗೂ ಸಾಮಾಜಿಕ ಸ್ಥಾನಮಾನ ಮುಂತಾದವುಗಳ ತಾರತಮ್ಯವಿಲ್ಲದೆ ಮತದಾನದಲ್ಲಿ ಪಾಲ್ಗೊಂಡು ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ. ಇದೇ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ.
ಉದಾ : ಭಾರತ,
3. ಸಾರ್ವತ್ರಿಕ ಚುನಾವಣೆ ಎಂದರೇನು ?
ಶಾಸನ ಸಭೆಗಳಿಗೆ ಜನಪ್ರತಿನಿಧಿಗಳನ್ನು ಆರಿಸಲು ದೇಶದ ಎಲ್ಲ ಮತದಾರರು ನಿಯಕಕಾಲಿಕವಾಗಿ ನಡೆಯುವ ಚುನಾವಣೆಗಳಲ್ಲಿ ಮತ ಹಾಕುವ ಪದ್ಧತಿಗೆ ಸಾರ್ವತ್ರಿಕ ಚುನಾವಣೆ ಎನ್ನುವರು.
4. ರಾಜಕೀಯ ಪಕ್ಷ ಎಂದರೇನು ?
ಸಾಮಾನ್ಯ ಸಿದ್ಧಾಂತದ ಆಧಾರದ ಮೇಲೆ ರಾಜಕೀಯ ಅಧಿಕಾರವನ್ನು ಪಡೆಯುವ ಉದ್ದೇಶದಿಂದ ಸಂಘಟಿತವಾಗಿರುವ ಜನಸಮೂಹವೇ ರಾಜಕೀಯ ಪಕ್ಷ
5. ಏಕಪಕ್ಷ ಪದ್ಧತಿ ಎಂದರೇನು ?
ಒಂದು ಉಪ್ಪದಲ್ಲಿ ಕೇವಲ ಒಂದು ಪಕ್ಷ ಅಸ್ತಿತ್ವದಲ್ಲಿದ್ದರ ಅದನ್ನು ಏಕಪಕ್ಷ ಪದ್ಧತಿ ಎನ್ನುವರು.
ಉದಾ: ಚೀನಾ (ಕಮ್ಯುನಿಷ್ಠ)
6. ಬಹುಪಕ್ಷ ಪದ್ಧತಿ ಎಂದರೇನು ? ಉದಾಹರಣೆ ಕೊಡಿ.
ಒಂದು ರಾಷ್ಟ್ರದಲ್ಲಿ ಎರಡಕ್ಕಿಂತಲೂ ಹೆಚ್ಚು ಪಕ್ಷಗಳು ಅಸ್ತಿತ್ವದಲ್ಲಿರುವುದಕ್ಕೆ ಬಹುಪಕ್ಷ ಪದ್ಧತಿ ಎನ್ನುವರು.
ಉದಾ: ಭಾರತ, ಫ್ರಾನ್ಸ್, ಜರ್ಮನಿ,
7. ರಾಜಕೀಯ ಪಕ್ಷಗಳ ಎರಡು ಕಾರ್ಯಗಳನ್ನು ಬರೆಯಿರಿ,
ಅಭ್ಯರ್ಥಿಗಳ ಆಯ್ಕೆ
ಸರ್ಕಾರದ ರಚನೆ,
8. ಭಾರತದ ಯಾವುದಾದರೂ ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳನ್ನು ಹೆಸರಿಸಿ
ರಾಷ್ಟ್ರೀಯ ಕಾಂಗ್ರೆಸ್, ಪಕ್ಷ, ಭಾರತೀಯ ಜನತಾ ಪಕ್ಷ, ಮುಸ್ಲಿಂ ಲೀಗ್, ಕಮ್ಯುನಿಷ್ಟ ಪಕ್ಷ, ಬಹುಜನ ಸಮಾಜವಾದಿ ಪಕ್ಷ.
9. ಪ್ರಾದೇಶಿಕ ಪಕ್ಷಗಳನ್ನು ಹೆಸರಿಸಿ,
ಜೆ.ಡಿ.ಎಸ್, ಕೆ.ಜೆ.ಪಿ, ಡಿ.ಎಮ್.ಕೆ, ಎ.ಎ,ಪಿ,
10, ಸಮ್ಮಿಶ್ರ ಸರ್ಕಾರ ಎಂದರೇನು ?
ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಕ್ರಿಯೆಗೆ ಸಮಿಶ್ರ ಸರ್ಕಾರ ಎನ್ನುವರು.
11. ಸಮ್ಮಿಶ್ರ ಸರ್ಕಾರ ಯಾವ ಸಂದರ್ಭದಲ್ಲಿ ರಚನೆಯಾಗುತ್ತದೆ?
ಚುನಾವಣೆಗಳು ನಡೆದು ಫಲಿತಾಂಶಗಳು ಪ್ರಕಟವಾದಾಗ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ಮಾಡಿಕೊಂಡಾಗ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ.
12. ಮಧ್ಯಂತರ ಚುನಾವಣೆ ಎಂದರೇನು ?
ಒಂದು ನಿರ್ದಿಷ್ಟ ಅವಧಿಗೆ ಆಯ್ಕೆಯಾದ ಸರ್ಕಾರ ತನ್ನ ಮೂರ್ತಿ ಅಧಿಕಾರಾವಧಿ ಮುಗಿಯುವ ಮುನ್ನವೇ ನಾನಾ ಕಾರಣಗಳಿಂದಾಗಿ ಆಧಿಕಾರದಿಂದ ಕೆಳಗಿಳಿದಾಗ ನಡೆಯುವ ಚುನವಣೆಯೇ ಮಧ್ಯಂತರ ಚುನಾವಣೆ,
13. ಮರುಚುನಾವಣೆ ಎಂದರೇನು ?
ಚುನಾವಣಾ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಅಕ್ರಮ ಮತಪಟ್ಟಿಗೆ ನಾಶ, ಮತಪತ್ರಗಳ ಕಸಿಯುವಿಕೆ, ಸಿಬ್ಬಂದಿಗೆ ಕರ್ತವ್ಯದಲ್ಲಿ ಅಡಚಣೆ, ಅಥವಾ ಯಾವುದೇ ರೀತಿಯ ಅವ್ಯವಹಾರಗಳು ನಡೆದಲ್ಲಿ ಚುನಾವಣೆ ರದ್ದುಗೊಳಿಸಿ, ಮನಃ ಚುನಾವಣೆಯನ್ನು ನಡೆಸುವುದೇ ಮರುಚುನಾವಣೆ.
14. ಚುನಾವಣಾ ಸುಧಾರಣೆಗಳ ಸಮಿತಿಗಳನ್ನು ಹೆಸರಿಸಿ,
- ಎ.ಕೆ, ತಾರ್ಕುಂಡೆ ಸಮಿತಿ
2. ಗುಪ್ತಾ ಸಮಿತಿ,
III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ,
1. ಚುನಾವಣೆಗಳ ಮಹತ್ವವನ್ನು ಬರೆಯಿರಿ,
- ಪ್ರಜಾಸತ್ತಾತ್ಮಕ ವ್ಯವಸ್ಥೆಯ ತಳಹದಿ,
- ಪ್ರಜೆಗಳಿಗೆ ಸಮಾನ ನ್ಯಾಯ ಮತ್ತು ಸ್ವಾತಂತ್ರ್ಯ ದೊರಕಿಸುವುದು,
- ಪ್ರಜೆಗಳ ಹಿತಾಸಕ್ತಿ ರಕ್ಷಣೆ
- ಪ್ರಜೆಗಳಿಗೆ ತಮಗೆ ಬೇಕಾದ ಪ್ರತಿನಿಧಿಗಳ ಆಯ್ಕೆ,
- ಪ್ರಜಾಪ್ರಭುತ್ವದ ಅಳತೆಗೋಲು,
- ಸಾರ್ವಜನಿಕ ಅಭಿಪ್ರಾಯ ರೂಪಿಸುತ್ತದೆ.
- ರಾಜಕೀಯ ಜ್ಞಾನ ಮೂಡಿಸುತ್ತದೆ.
- ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ
- ರಾಜಕೀಯ ನಾಯಕರ ನಡುವೆ ಸಾಮರಸ್ಯ
2. ಪ್ರತ್ಯಕ್ಷ ಚುನಾವಣೆಯ ಲಕ್ಷಣಗಳನ್ನು ವಿವರಿಸಿ
ಜನ ಪ್ರತಿನಿಧಿಗಳ ಮೇಲೆ ನಿಯಂತ್ರಣ
ರಾಜಕೀಯ ಪರಿಜ್ಞಾನ ಮೂಡಿಸುತ್ತದೆ.
ಹೆಚ್ಚು ಪ್ರಜಾಸತ್ತಾತ್ಮಕವಾದುದು.
ಯೋಗ್ಯ ಅಭ್ಯರ್ಥಿಗಳ ಆಯ್ಕೆ
ಸಾರ್ವಜನಿಕರೊಂದಿಗೆ ಸಂಪರ್ಕ (ಇವುಗಳ ವಿವರಣೆ)
3, ಪರೋಕ್ಷ ಚುನಾವಣೆಯ ಲಕ್ಷಣಗಳನ್ನು ವಿವರಿಸಿ.
- ಸಮರ್ಥ ಅಭ್ಯರ್ಥಿಗಳ ಆಯ್ಕೆ (
- ಪ್ರಚಾರದ ಆರ್ಭಟವಿಲ್ಲ.
- ಶಾಲಕಿಯುತ ಮತದಾನ
- ಭಾವೋದ್ರೇಕಕ್ಕೆ ಆಸ್ಪದವಿಲ್ಲ.
- ಹಿಂದುಳಿದ ರಾಷ್ಟ್ರಗಳಿಗೆ ಸೂಕ್ತ (ವಿವರಣೆ)
4. ಮತದಾರರ ಗುರುತಿನ ಚೀಟಿಯಿಂದಾಗುವ ಅನುಕೂಲಗಳನ್ನು ಬರೆಯಿರಿ.
- ನಕಲಿ ಮತದಾನ ತಡೆಗಟ್ಟುವುದು,
- ಚುನಾವಣಿಗಳನ್ನು ನ್ಯಾಯಯುತವಾಗಿ ನಡೆಸುವುದು.
- ಚುನಾವಣೆಗಳು ನಿಷ್ಪಕ್ಷಪಂತವಾಗಿರುತ್ತವೆ, .
- ಸರ್ಕಾರದ ಹಲವಾರು ಯೋಜನೆಗಳಿಂದ ಸಿಗುವ ಲಾಭವನ್ನು ಇದರಿಂದ ಪಡೆಯಬಹುದು, (ವಿವರಣೆ)
5. ವಿದ್ಯುನ್ಮಾನ ಮತಯಂತ್ರದಿಂದ ಆಗುವ ಪ್ರಯೋಜನಗಳನ್ನು ವಿವರಿಸಿ,
- ಮತದಾನ ಸುಲಭ
- ಸಮಯದ ಉಳಿತಾಯ
- ಹಣಕಾಸಿನ ಉಳಿತಾಯ
- ಪರಿಸರ ನಾಶ ತಡೆಗಟ್ಟುತ್ತದೆ.
- ಅನಕ್ಷರಸ್ಥರಿಗೆ ಹೆಚ್ಚು ಅನುಕೂಲ
- ಚುನಾವಣಾ ಅಕ್ರಮ ತಡೆಗಟ್ಟುತ್ತದೆ.
- ಶೀಘ್ರ ಫಲಿತಾಂಶ, (ವಿವರಣೆ)
6. ಪಕ್ಷಾಂತರ ನಿಷೇಧ ಕಾಯ್ದೆಯನ್ನು ವಿವರಿಸಿ.
- 1985 ಎಪ್ರಿಲ್ 1 ರಂದು ಜಾರಿಯಾಗಿ 2003 ರಲ್ಲಿ ಸಂವಿಧಾನದ 91ನೇ ತಿದ್ದುಪಡಿಯ ಮೂಲಕ ಬದಲಾವಣೆ ಮಾಡಲಾದ ಕಾಯ್ದೆಯ ಮುಖ್ಯಾಂಶಗಳು ಕೆಳಗಿನಂತಿದೆ.
- ಶಾಸನಸಭೆಯ ಸದಸ್ಯರು ಸ್ವ ಇಚ್ಛೆಯಿಂದ ತಮ್ಮ ಪಕ್ಷ ತ್ಯಜಿಸಿದರೆ,
- ಸದನದಲ್ಲಿ ವಿಪ್ ಉಲ್ಲಂಘಿಸಿದಾಗ .
- ಪಕ್ಷದ ಅನುಮತಿ ಇಲ್ಲದೆ ಸದನದಲ್ಲಿ ಮತ ಚಲಾಯಿಸಿದಾಗ
- ನಾಮಕರಣಗೊಂಡ ಶಾಸಕರು 6 ತಿಂಗಳ ನಂತರ ಬೇರೆ ಪಕ್ಷ ಸೇರಿದಾಗ
- ಅನರ್ಹಗೊಂಡ ವ್ಯಕ್ತಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಯಾವುದೇ ಲಾಭದಾಯಕ ಹುದ್ದೆ ಒಪ್ಪಿಕೊಳ್ಳುವಂತಿಲ್ಲ.
- ಮಂತ್ರಿ ಮಂಡಲದ ಗಾತ್ರ ಶೇ. 15 ಮೀರುವಂತಿಲ್ಲ.
- ಸದಸ್ಯರ ಅನರ್ಹಗೊಳಿಸುವ ಅಧಿಕಾರ ಸಭಾಪತಿಗಳಿಗೆ ಇರುತ್ತದೆ.
- ಪಕ್ಷೇತರ ಸದಸ್ಯ ಯಾವುದೇ ಪಕ್ಷ ಸೇರಿದರೆ ಅದು ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಅನರ್ಹನಾಗುತ್ತಾನೆ.
IV. ಈ ಕೆಳಗಿನ ಪ್ರಶ್ನೆಗೆ 30/40 ವಾಕ್ಯಗಳಲ್ಲಿ ಉತ್ತರಿಸಿ,
1. ಭಾರತದ ಚುನಾವಣಾ ಆಯೋಗದ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ
ರಚನೆ : ಸಂವಿಧಾನದ 324 ನೇ ವಿಧಿ, ಒಬ್ಬ ಚುನಾವಣಾ ಆಯುಕ್ತ ಮತ್ತು ಇಬ್ಬರು ಇತರ ಚುನಾವಣಾ ಆಯುಕ್ತರನ್ನು ಹೊಂದಿದೆ.
ನೇಮಕ : ಮುಖ್ಯ ಹಾಗೂ ಇತರ ಇಬ್ಬರು ಆಯುಕ್ತರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
ಅಧಿಕಾರಾವಧಿ : 6 ವರ್ಷ ಇಲ್ಲವೇ 65 ವರ್ಷಗಳು ತುಂಬುವವರೆಗೆ
ಅಧಿಕಾರ ಹಾಗೂ ಕಾರ್ಯಗಳು :
- ಮತದಾರ ಪಟ್ಟಿ ಸಿದ್ಧಪಡಿಸುವುದು, ಪರಿಶೀಲನೆ, ಪರಿಷ್ಕರಣೆ ಮತ್ತು ನಿರ್ದೇಶನ ನೀಡುವುದು.
- ಲೋಕಸಭೆ, ರಾಜ್ಯ ಸಭೆ, ವಿಧಾನಸಭೆ, ವಿಧಾನ ಪರಿಷತ್ತು, ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಸ್ಥಾನಕ್ಕೆ ಚುನಾವಣೆ ನಡೆಸುವುದು.
- ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಖ್ಯ ಚುನಾವಣಾ ಅಧಿಕಾರಿಗಳ ನೇಮಕ ಮಾಡುವುದು,
- ಚುನಾವಣೆಯ, ಷಣೆ, ಅಧಿಸೂಚನೆ ಹೊರಡಿಸುವುದು.
- ಚುನಾವಣಾ ದಿನಾಂಕವನ್ನು ಗೊತ್ತು ಪಡಿಸುವುದು.
- ಚುನಾವಣಾ ಸಿಬ್ಬಂದಿ ನೇಮಕ
- ರಾಜಕೀಯ ಪಕ್ಷಗಳಿಗೆ ಮಾನ್ಯತೆ, ಚಿಹ್ನೆ ನೀಡುವುದು,
- ಚುನಾವಣೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವುದು,
- ಮರು ಚುನಾವಣೆಗೆ ಆದೇಶಿಸುವುದು,
- ಚುನಾವಣಾ ಪ್ರಚಾರದ ಸಮಯ ನಿಗದಿ ಪಡಿಸುವುದು.
- ಮತ ಎಣಿಕೆ, ಫಲಿತಾಂಶ ಪ್ರಕಟಣೆ,
- ವಿಜೇತರ ಪಟ್ಟಿಯನ್ನು ರಾಷ್ಟ್ರಪತಿಗೆ ಸಲ್ಲಿಸುವುದು,
- ಸರ್ಕಾರ ರಚಿಸುವಂತೆ ಸಲಹೆ ನೀಡುವುದು. (ವಿವರಣೆ)
2. ಭಾರತದಲ್ಲಿ ಚುನಾವಣಾ ಸುಧಾರಣೆಗಳನ್ನು ವಿವರಿಸಿ,
- ಮತದಾರರ ಗುರುತಿನ ಚೀಟಿ
- ವಿದ್ಯುನ್ಮಾನ ಮತಯಂತ್ರ
- ಅಭ್ಯರ್ಥಿಗಳ ಹಿನ್ನೆಲೆಯ ಕಡ್ಡಾಯ ಘೋಷಣೆ
- ಅಪರಾಧಗಳ ವಿವರ ಕಡ್ಡಾಯ ಘೋಷಣೆ
- ಶೈಕ್ಷಣಿಕ ವಿವರಗಳ ಹಿನ್ನೆಲೆ
- ಆಸ್ತಿ ವಿವರಗಳ ಹಿನ್ನೆಲೆ
- ರಾಜ್ಯದ ಚುನಾವಣಾ ವೆಚ್ಚವನ್ನು ಭರಿಸುವುದು
3, ಭಾರತದ ಪಕ್ಷ ಪದ್ಧತಿಯ ಸ್ವರೂಪವನ್ನು ವಿವರಿಸಿ,
- ಸಂವಿಧಾನೇತರ ಬೆಳವಣಿಗೆ
- ಬಹು ಪಕ್ಷ ಪದ್ಧತಿಯ ಅಸ್ತಿತ್ವ
- ಪಕ್ಷಗಳಲ್ಲಿ ಒಡಕು ಮತ್ತು ವಿಲೀನ
- ಏಕಪಕ್ಷ ಪ್ರಾಬಲ್ಯದ ಕ್ಷೀಣತೆ
- ಭಿನ್ನಮತೀಯತೆ
- 6. ಪಕ್ಷಾಂತರ ಪಿಡುಗು
- ನಾಯಕತ್ವದ ವರ್ಚಸ್ಸು
- 8. ತತ್ವರಹಿತ ರಾಜಕೀಯ ಪಕ್ಷಗಳು
- ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ
- ಸಮ್ಮಿಶ್ರ ಸರ್ಕಾರದ ಶಕೆ (ಇವುಗಳ ವಿವರಣೆ)
4. ಭಾರತದ ರಾಜಕೀಯ ಪಕ್ಷಗಳ ಕಾರ್ಯಗಳನ್ನು ವಿವರಿಸಿ
- ಚುನಾವಣಾ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದು.
- ಅಭ್ಯರ್ಥಿಗಳ ಆಯ್ಕೆ
- ರಾಜಕೀಯ ಶಿಕ್ಷಣ ಮತ್ತು ಅರಿವು
- ಚುನಾವಣೆಗೆ ಸ್ಪರ್ಧಿಸುವುದು
- ಸರ್ಕಾರದ ರಚನೆ ಮತ್ತು ನಿರ್ವಹಣೆ
- ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಣೆ
- ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು
- ಸರ್ಕಾರ ಮತ್ತು ಜನರ ನಡುವೆ ಸೇತುವೆ.
- ಸಾರ್ವಜನಿಕ ಹಿತಾಸಕ್ತಿ ರಕ್ಷಣೆ
- ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ
FAQ
ರಾಷ್ಟ್ರಪತಿಗಳು,
ಚುನಾಯಿತ ಸದಸ್ಯರ ರಾಜೀನಾಮೆ, ಮರಣ ಮುಂತಾದ ಕಾರಣಗಳಿಂದ ತನ್ನ ಅಥವಾ ಇನ್ನಿತರ ಕಾರಣಗಳಿಗೆ ತನ್ನ ಸದಸ್ಯತ್ವವನ್ನು ಕಳೆದುಕೊಂಡರೆ ಆ ಸ್ಥಾನಕ್ಕೆ 6 ತಿಂಗಳ ಒಳಗಾಗಿ ನಡೆಯುವ ಚುನಾವಣೆಯೇ ಉಪಚುನಾವಣೆ
ಭಾರತದ ಲೋಕಸಭಾ ಮತ್ತು ರಾಜ್ಯ ವಿಧಾನ ಸಭೆ,
ಇತರೆ ವಿಷಯಗಳು:
ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್
1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ
1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್