ದ್ವಿತೀಯ ಪಿ.ಯು.ಸಿ ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ರಾಜ್ಯಶಾಸ್ತ್ರ ನೋಟ್ಸ್ | 2nd Puc Political Science Chapter 1 Notes

ದ್ವಿತೀಯ ಪಿ.ಯು.ಸಿ ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ರಾಜ್ಯಶಾಸ್ತ್ರ ನೋಟ್ಸ್, 2nd Puc Political Science Chapter 1 Notes in Kannada Medium Kseeb Solutions For Class 12 Political Science Chapter 1 Notes Bharatada Rajakiya Vyavasteya Ugama Mattu Belavanige Notes Extract Mcq Pdf Download

2nd Puc Political Science Chapter 1

2nd Puc Political Science Chapter 1

ಒಂದು ಅಂಕದ ಪ್ರಶ್ನೆಗಳು

2nd Puc Political Science 1st Lesson Question Answer in Kannada

1. ಭಾರತ ಯಾವಾಗ ಸ್ವತಂತ್ರವಾಯಿತು ?

1947 ಆಗಷ್ಟ 15 ರಂದು

2. ಭಾರತದ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು ?

1950 ಜನವರಿ 26 ರಂದು,

3. ಭಾರತ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಉದಯಿಸಿತು ?

1885

4. ಯಾವ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕ್ರೌನ್‌ ಗೆ ವರ್ಗಾಯಿಸಿತು ?

1858 ರ ಕಾಯಿದೆ

5. ಡಯಾರ್ಕಿ ಎಂದರೇನು ?

ದ್ವಿ-ಸರ್ಕಾರ ಪದ್ಧತಿ.

6. ಸೈಮನ್ ಆಯೋಗವು ಏನನ್ನು ಶಿಫಾರಸ್ಸು ಮಾಡಿತು ?

ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕೆಂದು ಶಿಫಾರಸ್ಸು ಮಾಡಿತು.

7. ಗಡಿರೇಖೆ ಆಯೋಗದ ಅಧ್ಯಕ್ಷರು ಯಾರು ?

ಸರ್‌ ಸಿರಿಲ್‌ ರ‍್ಯಾಡಕ್ಲೀಫ್

8. ಮಧ್ಯಂತರ ಸರ್ಕಾರ ಯಾವಾಗ ರಚನೆಯಾಯಿತು ?

1946 ಸಪ್ಟೆಂಬರ 2 ರಂದು

9. ವೈಸ್‌ರಾಯರವರ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರು ಯಾರು ?

ಪಂಡಿತ ಜವಾಹರಲಾಲ್ ನೆಹರು,

10, ಯಾವ ದೇಶವನ್ನು ಜಗತ್ತಿನ ಬೃಹತ್‌ ಪ್ರಜಾಸತ್ತಾತ್ಮಕ ದೇಶ ಎಂದು ಕರೆಯುತ್ತೇವೆ ?

ಭಾರತ ದೇಶ

11. ಪ್ಯಾರಾಮೌಂಟ್ಸ್ ಎಂದರೇನು ? ‌

ದೇಶಿಯ ಸಂಸ್ಥಾನಗಳು ತಮ್ಮ ಅಂತರಿಕ ವಿಷಯಗಳಲ್ಲಿ ಸ್ವಾತಂತ್ರ್ಯ ಹೊಂದಿದ್ದು ವಿದೇಶಿ ವ್ಯವಹಾರಗಳು ಮತ್ತು ಮಿಲಿಟರಿ ವಿಷಯ ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಇದನ್ನು ಪ್ಯಾರಾಮೌಂಟ್‌ ಎಂದು ಕರೆಯುತ್ತಾರೆ.

12, ಆಪರೇಷನ್ ಪೋಲೋ ಎಂದರೇನು ?

ಹೈದರಾಬಾದ್ ನಿಜಾಮನ ಆಡಳಿತದ ಅರಾಜಕತೆಯನ್ನು ಅಂತ್ಯಗೊಳಿಸಲು ಭಾರತ ಸೇನೆ 1948 ಸಪ್ಟೆಂಬರನಲ್ಲಿ ಮಾಡಿದ ಪೊಲೀಸ್ ಕಾರ್ಯಾಚರಣೆಯನ್ನು ಅಪರೇಷನ್ ಪೋಲೋ ಎನ್ನುವರು.

13, ಸಂವಿಧಾನದ ಯಾವ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿದೆ ?

370 ನೇ ವಿಧಿ

14, ರಾಜ್ಯಗಳ ಏಕೀಕರಣದ ರೂವಾರಿ ಯಾರು ?

ಸರ್ದಾರ್ ವಲ್ಲಭಭಾಯಿ ಪಟೇಲ

15, 2014 ರಲ್ಲಿ ಯಾವ ರಾಜ್ಯವನ್ನು ವಿಭಜಿಸಲಾಯಿತು ?

ಆಂಧ್ರಪ್ರದೇಶ

16, ರಾಜ್ಯ ಪುನರ್ ರಚನಾ ಆಯೋಗ ಯಾವಾಗ ರಚನೆಯಾಯಿತು ?

1953 ರಲ್ಲಿ

17, ಬಾಂಬೆಯನ್ನು ಯಾವಾಗ ವಿಭಜಿಸಲಾಯಿತು ?

1960 ರಲ್ಲಿ

18. ಪ್ರಥಮ ಲೋಕಸಭೆಯ ಸ್ಪೀಕರ್ ಯಾರು ?

ಶ್ರೀ ಜಿ.ವಿ. ಮಾವಳಂಕ‌

ಎರಡು ಅಂಕದ ಪ್ರಶ್ನೆಗಳು

1. ಫೆಡರಲ್ ನ್ಯಾಯಾಲಯವು ಎಲ್ಲಿ ಮತ್ತು ಯಾವಾಗ ಸ್ಥಾಪನೆಯಾಯಿತು ?

ದೆಹಲಿಯಲ್ಲಿ 1937 ರಲ್ಲಿ ಸ್ಥಾಪನೆಯಾಯಿತು.

2. ಪಂಜಾಬನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು. ಅವು ಯಾವುವು ?

2, ಪಂಜಾಬ ಮತ್ತು ಹರಿಯಾಣ

3. ಸೈಮನ್ ಕಮಿಷನ್‌ ಅನ್ನು ಏಕೆ ನೇಮಿಸಲಾಯಿತು ?

1919 ರ ಕಾಯ್ದೆ ಭಾರತೀಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದ್ದು ಗಾಂಧೀಜಿ ನೇತೃತ್ವದ ಕಾಂಗ್ರೆಸ್ ಪಕ್ಷ ಅಸಹಕಾ‌ ಮತ್ತು ಸ್ವರಾಜ್ಯ ಅಂದೋನಲವನ್ನು ಪ್ರಾರಂಭಿಸಿತು. ಅದರ ಪರಿಣಾಮವನ್ನಾಗಿ ಬ್ರಿಟಿಷ್ ಸರ್ಕಾರವು ಸೈಮನ್ ಆಯೋಗವನ್ನು ರಚಿಸಿತು.

4. 1935 ರ ಕಾಯ್ದೆಯಲ್ಲಿ ಎಷ್ಟು ವಿಧಿಗಳು ಮತ್ತು ಷೆಡ್ಯೋಲ್ ಗಳಿವೆ?

321 ವಿಧಿಗಳು ಮತ್ತು 10 ಷೆಡ್ಯೂಲ್‌ಗಳು

5, ಬಾಂಬೆಯನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ? ಅವು ಯಾವುವು ?

ಎರಡು . (!) ಗುಜರಾತ್ (2) ಮಹಾರಾಷ್ಟ್ರ)

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ,

1. ಮಧ್ಯಂತರ ಸರ್ಕಾರದ ಬಗ್ಗೆ ಟಿಪ್ಪಣೆ ಬರೆಯಿರಿ,

 • ಇದು 2ನೇ ಸಪ್ಟೆಂಬರ 1946 ರಲ್ಲಿ ರಚನೆಯಾಯಿತು.
 • ಮಧ್ಯಂತರ ಸರಕಾರದಲ್ಲಿ ಹೊಸದಾಗಿ ರಚನೆಯಾದ ರಾಜ್ಯಾಂಗ ರಚನಾ ಸಭೆಯ 389 ಸದಸ್ಯರನ್ನು ಒಳಗೊಂಡಿತು.
 • ಇದು 15ನೇ ಅಗಷ್ಟ 1947 ರವರೆಗೆ ಅಸ್ತಿತ್ವದಲ್ಲಿತ್ತು.
 • ಜವಾಹರಲಾಲ್ ನೆಹರೂರವರು ಈ ಸರ್ಕಾರದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದರೆ, ಇತರ ಪ್ರಮುಖ ಸದಸ್ಯರು ಮಂತ್ರಿ ಮಂಡಳದಲ್ಲಿದ್ದರು.
 • ಇದು ಬ್ರಿಟಿಷ್ ಅಧಿಕಾರದಿಂದ ಭಾರತ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯ ಪಡೆಯುವ ಹಸ್ತಾಂತರ ಸುಗಮ ಕಾರ್ಯವಾಗಿದೆ. (ವಿವರಿಸುವುದು)

2. ಪ್ರಥಮ ಮಹಾ ಚುನಾವಣೆಯ ಬಗ್ಗೆ ಟಿಪ್ಪಣೆ ಬರೆಯಿರಿ

 • ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ಆಧರಿಸಿ ಭಾರತದಲ್ಲಿ ಲೋಕಸಭೆ ಮೊದಲು ಮಹಾಚುನಾವಣೆ 1951 ಅಕ್ಟೋಬರ 1952 ಫೆಬ್ರುವರಿವರೆಗೆ ನಡೆದವು.
 • ಈ ಚುನಾವಣೆ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು
 • ಬೃಹತ್ ರಾಜಕೀಯ ಪ್ರಯೋಗವಾಯಿತು.
 • ಈ ಕೆಳಕಂಡ ಅಂಶಗಳಿಂದ ಜಗತ್ತಿನ ಅತಿದೊಡ್ಡ ಸ್ವತಂತ್ರ್ಯ ಮಹಾಚುನಾವಣೆ ಎಂದು ಸಾಬೀತಾಗುತ್ತದೆ.
 • ಚುನಾವಣೆ ನಡೆದ ಒಟ್ಟು ಲೋಕಸಭಾ ಸ್ಥಾನಗಳು 489 * ಮತದಾರರ ಸಂಖ್ಯೆ 176 ಮಿಲಿಯನ್
 • ಮತದಾನ ಮಾಡಿದವರು ಒಟ್ಟು 105.5 ಮಿಲಿಯನ್
 • ಮತಗಟ್ಟೆಗಳ ಸಂಖ್ಯೆ – 2,24,000
 • ಶೇಕಡವಾರು ಮತದಾನ – 45%
 • ಚುನಾವಣಾ ಕಣದಲ್ಲಿದ್ದ ರಾಜಕೀಯ ಪಕ್ಷಗಳು ಸುಮಾರು 70.
 • ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಸಂಖ್ಯೆ 1800
 • ಈ ಚುನಾವಣೆಯಲ್ಲಿ 364 ಸ್ಥಾನಗಳನ್ನು ಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜನಪ್ರಿಯ ಪಕ್ಷವಾಗಿ ಹೊರಹೊಮ್ಮಿತು.
 • ಚುನಾವಣಾ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ ನಡೆಯಿತು.

3. 1947 ರ ಭಾರತ ಸ್ವಾತಂತ್ರ್ಯ ಕಾಯ್ದೆಯ ಮುಖ್ಯಾಂಶಗಳನ್ನುವಿವರಿಸಿ.

 • 1947 ಅಗಷ್ಟ 15 ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳನ್ನು ಸ್ಥಾಪಿಸಲು ಅವಕಾಶ ನೀಡಿತು.
 • ಗಡಿಗಳನ್ನು ಗುರುತಿಸಲು ಸರ್ ಸಿರಿಲ್, ರ‍್ಯಾಡ್ ಕ್ಲೀಪ್ ಅವರ ಅಧ್ಯಕ್ಷತೆಯಲ್ಲಿ ಗಡಿ ಆಯೋಗ ರಚಿಸಲಾಯಿತು.
 • ಭಾರತ ರಾಜ್ಯಗಳ ಮೇಲೆ ಚಕ್ರವರ್ತಿಯ ಅಧಿಪತ್ಯವು ಕೊನೆಗೊಂಡಿತು.
 • ಗವರ್ನಲ್‌ ಜನರಲ್, ಮತ್ತು ಪ್ರಾಂತೀಯ ಗೌರರಗಳು ಸಂವಿಧಾನಾತ್ಮಕ ಮುಖ್ಯಸ್ಥರಾಗಿದ್ದರೂ, ಶಾಸನ ರಚಿಸುವ ವಿಶೇಷಾಧಿಕಾರವನ್ನು ಹೊಂದಿರುವದಿಲ್ಲ.
 • ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಹುದ್ದೆಯು ರದ್ದಾಗುತ್ತದೆ.
 • 1947 ಅಗಸ್ಟ 15 ರಿಂದ ಬ್ರಿಟಿಷ್ ಇಂಡಿಯಾದಲ್ಲಿ ಸೇರಿದ
 • ಯಾವುದೇ ಭಾಗಕ್ಕೆ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದಿರುವದಿಲ್ಲ.
 • ರಾಜ್ಯಾಂಗ ರಚನಾ ಸಭೆಯು ಸಂಪೂರ್ಣ ಪರಮಾಧಿಕಾರದಿಂದ ಕೂಡಿದ್ದ ಸಂವಿಧಾನವನ್ನು ರಚಿಸುವ ಪೂರ್ಣ ಅಧಿಕಾರ ಹೊಂದಿತು.
 • ಹೊಸ ಸಂವಿಧಾನ ರಚನೆಯಾಗುವವರೆಗೆ ತಾತ್ಕಾಲಿಕವಾಗಿ 1935 ಕಾಯ್ದೆಯ ಜಾರಿಯಲ್ಲಿರುವದು.

4. ಪಟೇಲ್ ಸ್ಟೀಮ್ ಎಂದರೇನು ?

 • ಪ್ರಾಂತಗಳ ಏಕೀಕರಣ ಪ್ರಕ್ರಿಯೆಯು ಕೆಳಗಿನ 3 ಹಂತಗಳಲ್ಲಿ ನಡೆಯಿತು.
 • ಸಣ್ಣ ರಾಜ್ಯಗಳನ್ನು ಅವುಗಳೊಂದಿಗೆ ಹೊಂದಿಕೊಂಡಿರುವ ಪ್ರಾಂತಗಳೊಂದಿಗೆ ವಿಲೀನ ಮಾಡುವದು, ಇಂತಹ 216 ರಾಜ್ಯಗಳನ್ನು ಅವುಗಳಿಗೆ ಹೊಂದಿಕೊಂಡಿರುವ ಪ್ರಾಂತಗಳೊಂದಿಗೆ ವಿಲೀನ ಮಾಡಲಾಯಿತು, ಉದಾ: ಓರಿಸ್ಸಾದೊಂದಿಗೆ 24 ರಾಜ್ಯಗಳು,
 • ಹಲವಾರು ಸಣ್ಣ ರಾಜ್ಯಗಳು ಸೇರಿಕೊಂಡು ಒಂದು ದೊಡ್ಡ ರಾಜ್ಯವನ್ನು ರಚಿಸಿಕೊಂಡವು. ಈ ರಾಜ್ಯಗಳಲ್ಲಿ ಇರುವ ಆಳ್ವಿಕೆಗಾರರಲ್ಲಿ ಬಹುಪ್ರಮುಖ ವ್ಯಕ್ತಿಯೊಬ್ಬರು ರಾಜ ಪ್ರಮುಖರಾದರು. ಉದಾ : ಸೌರಾಷ್ಟ್ರ ಪಟಿಯಾಲ
 • ಸಣ್ಣ ಹಿಂದುಳಿದ ಸುಮಾರು 61 ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸಿ, ಚೀಪ್ ಕಮೀಷನರ್ ಪ್ರಾಂತಗಳನ್ನಾಗಿ ಮಾಡಲಾಯಿತು. ಉದಾ: ಹಿಮಾಚಲ ಪ್ರದೇಶ, ಅಜೀರ್, ಕೂರ್ಗ್ ಇತ್ಯಾದಿ.

5. ರಾಜ್ಯಗಳ ಪುನ‌ರಚನೆಗೆ ಭಾಷೆಯು ಆಧಾರವಾಗಿರಬೇಕೆಂಬುದಕ್ಕೆ ಕಾರಣಗಳನ್ನು ನೀಡಿ ?

 • ಭಾಷೆಯು ಜನರ ಸಂಸ್ಕೃತಿ ಮತ್ತು ಸಂಪ್ರದಾಯಗಳೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದೆ.
 • ಮಾತೃಭಾಷಾ ಮಾಧ್ಯಮದ ಮೂಲಕ ಮಾತ್ರ ಯಶಸ್ವಿಯಾಗಿ ಶಿಕ್ಷಣ ಪಡೆದು ಸಾಕ್ಷರತೆಯನ್ನು ಸಾಧಿಸಬಹುದು.
 • ಜನಸಾಮಾನ್ಯರ ಮಾತೃಭಾಷೆಯಲ್ಲಿ ರಾಜಕಾರಣ ಮತ್ತು ಅಡಳಿತವು ನಡೆದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನೈಜ ಸ್ವರೂಪ ಲಭಿಸುತ್ತದೆ.
 • ಭಾಷಾವಾರು ರಾಜ್ಯಗಳು ಮಾತ್ರ ಶಿಕ್ಷಣ, ಆಡಳಿತ ಮತ್ತು ನ್ಯಾಯಿಕ ವ್ಯವಹಾರಗಳನ್ನು ಮಾತೃ ಭಾಷೆಯಲ್ಲಿ ಸಮರ್ಥವಾಗಿ ನೀಡಬಲ್ಲವು.

FAQ

1. ಭಾರತದ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು ?

1950 ಜನವರಿ 26 ರಂದು,

2. ಭಾರತ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಉದಯಿಸಿತು ?

1885

3. ಗಡಿರೇಖೆ ಆಯೋಗದ ಅಧ್ಯಕ್ಷರು ಯಾರು ?

ಸರ್‌ ಸಿರಿಲ್‌ ರ‍್ಯಾಡಕ್ಲೀಫ್

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *