ಒಮ್ಮೆ ನಗುತ್ತೇವೆ ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 2nd PUC Omme Nagutteve Kannada Notes Question Answer Poem 13 guide Pdf Download 2024
ತರಗತಿ : ದ್ವಿತೀಯ ಪಿ.ಯು.ಸಿ
ಪದ್ಯದ ಹೆಸರು : ಒಮ್ಮೆ ನಗುತ್ತೇವೆ
ಕೃತಿಕಾರರ ಹೆಸರು : ಪ್ರೊ. ಬಿ. ಸುಕನ್ಯಾ ಮಾರುತಿ
2 PUC Omme Nagutteve Kannada Notes
ಕವಿ ಪರಿಚಯ :
ಧಾರವಾಡದ ಜೆ.ಎಸ್.ಎಸ್ . ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಪ್ರೊ . ಬಿ . ಸುಕನ್ಯಾ ಮಾರುತಿ ( ಜನನ : ೧.೩.೧೯೫೬ ) ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರಿನವರು . ಬಂಡಾಯ ಸಾಹಿತ್ಯ – ಸಂಘಟನೆ , ಮಹಿಳಾ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ . ಇದುವರೆಗೆ ಪರಿಸರದಲ್ಲಿ , ಪಂಚಾಗ್ನಿ ಮಧ್ಯೆ , ನಾನು ನನ್ನವರು , ತಾಜಮಹಲಿನ ಹಾಡು , ಬಿಂಬದೊಳಗಣ ಮಾತು , ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ . ‘ ನಾನೆಂಬ ಮಾಯೆ ‘ ಎಂಬ ಸಮಗ್ರ ಕಾವ್ಯ ೨೦೦೭ ರಲ್ಲಿ ಪ್ರಕಟವಾಗಿದೆ . ಪ್ರಣಯಿನಿ , ಸಂಕೃತಿ , ಪ್ರಶಾಂತ ಎಂಬ ಕೃತಿಗಳನ್ನು ಇತರರೊಂದಿಗೆ ಸಂಪಾದಿಸಿದ್ದಾರೆ .
ಕರ್ನಾಟಕ ವಿ.ವಿ. ಸಿಂಡಿಕೇಟ್ ಸದಸ್ಯೆ , ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆಯಾಗಿ ಕೆಲಸ ನಿರ್ವಹಿಸಿರುವ ಇವರು ಗೋಕಾಕ್ ಚಳುವಳಿ , ದಲಿತ ಬಂಡಾಯ ಚಳುವಳಿ , ಕುಲಕಸುಬು ದೇಶೀಕಲೆಗಳ ಅಭಿವೃದ್ಧಿಗಾಗಿ ಸಂಸ್ಕೃತಿ ಸಂಗ್ರಾಮ ಪ್ರತಿಷ್ಠಾನದ ಸ್ಥಾಪನೆ – ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡವರು .
ಇವರ ಸಾಹಿತ್ಯ ಸಾಧನೆಗಾಗಿ ನಾಲ್ಕನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ‘ ಗೌರವ ಪ್ರಶಸ್ತಿ , ‘ ಅಂಬೇಡ್ಕರ್ ‘ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ . – ಹೊಟ್ಟೆಗೆ ಅನ್ನವಿಲ್ಲದೆ ಬಳಲುವವರಲ್ಲಿ ನಗು ಎಲ್ಲಿಂದ ಬಂದೀತು ? ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತಿದೆ . ಅವರ ಮೊಗದಲ್ಲಿ ನಗೆ ಅರಳಬೇಕಾದರೆ ಮೂಲಭೂತ ಸೌಕರ್ಯಗಳನ್ನು ಮೊದಲು ಒದಗಿಸಬೇಕು. ಆ ಮೂಲಕ ಹೊಗೆಯಾಗಿರುವ ಅವರ ಬದುಕಿನಲ್ಲಿ ನಗೆ ಮೂಡಿಸಬೇಕು ಎಂಬ ಕಳಕಳಿ ಇಲ್ಲಿದೆ. ಕವಯಿತ್ರಿ ಶೋಷಿತರ ಪರವಾಗಿ ಹೊಮ್ಮಿಸಿರುವ ಪ್ರತಿಭಟನೆಯ ಧ್ವನಿ ಇಲ್ಲಿ ಸಶಕ್ತವಾಗಿ ಮೂಡಿಬಂದಿದೆ.
ಕಾವ್ಯದ ಹಿನ್ನೆಲೆ :
ನಮ್ಮದು ಸಮೃದ್ಧ ದೇಶವಾದರೂ ಸಮಾನತೆಗಾಗಿ ಸಮೃದ್ಧತೆಯ ಬದುಕಿಗಾಗಿ ನಿರಂತರ ಹೋರಾಟ ನಡದೇ ಇದೆ . ಶತಶತಮಾನಗಳಿಂದ ಶೋಷಣೆಗೆ ಒಳಗಾದ ಜನ ಸಮಪಾಲು – ಸಮಬಾಳು ಪಡೆಯಲು ಅವಿರತ ಪ್ರಯತ್ನದಲ್ಲಿದ್ದಾರೆ . ಆದರೂ ಇಲ್ಲಿ ಎಲ್ಲ ಇದ್ದರೂ ‘ ಯಾರಿಗುಂಟು ಯಾರಿಗಿಲ್ಲ ‘ ಎನ್ನುವ ವಾತಾವರಣ ಇದೆ . ಬಡವರ , ನಿರ್ಗತಿಕರ ಬದುಕಿನ ಆರ್ತ ನೋವಿಗೆ ಮನಮಿಡಿಯುವ ಅಂಶ ಇಲ್ಲಿದೆ . ತಿನ್ನಲು ತುತ್ತನ್ನವೂ ಸಿಗದ ಜನಸಮುದಾಯದಲ್ಲಿ ನಗೆ ಎಲ್ಲಿಂದ ಬರಬೇಕು ? ಅವರ ದುಗುಡ ದುಮ್ಮಾನ ದೂರಮಾಡಿ , ಹೊಗೆ ಸರಿಸಿ , ಅವರ ಬಾಳಲ್ಲಿ ನಗೆ ಮೂಡಿಸುವ ಪ್ರಯತ್ನ ಈ ಕವಿತೆಯಲ್ಲಿದೆ . ಶೋಷಿತರ ಪರವಾದ ಬಂಡಾಯದ ಧ್ವನಿ ಇಲ್ಲಿ ಸಶಕ್ತವಾಗಿ ಅಭಿವ್ಯಕ್ತಗೊಂಡಿದೆ .
ಶಬ್ದಾರ್ಥ :
ಕುದಿ – ಬೇಯು ; ಮೊರೆಯಿಡು – ಬೇಡು , ಯಾಚಿಸು ; ಕಂಬನಿ ಕಣ್ಣೀರು ; ಲಾವಾರಸ – ಭೂಮಿಯಿಂದ ಹೊರಬರುವ ಜ್ವಾಲಾಮುಖಿ ; ಧಗೆ – ಹೊಗೆ ; ಹೊಳೆ – ಕಾಂತಿ ; ಆಪೋಶನ – ಊಟದ ಮೊದಲು ಮತ್ತು ನಂತರ ಅಂಗೈಯಲ್ಲಿ ಹಾಕಿಕೊಂಡು ಕುಡಿಯುವ ನೀರು / ಹಾಲು .
2nd PUC Omme Nagutteve Kannada Notes
I . ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )
ಕವಯಿತ್ರಿ ತಾನೆಂದೂ ನಂಬಿರದ ದೇವರಲ್ಲಿ ಮೊರೆ ಇಡುತ್ತಾರೆ .
ಜನರನ್ನು ದಾರಿದ್ರವೆಂಬ ಧಗೆಯಿಂದ ಹೊರನೂಗಿಸುತ್ತೇನೆಂದು ಕವಯಿತ್ರಿ ಹೇಳುವರು .
ಜನರಿಗೆ ಗಂಜಿಗೂ ಗತಿಯಿಲ್ಲ .
ಕವಯಿತ್ರಿ ದೀನದಲಿತತನಕ್ಕೆ ಧಿಕ್ಕಾರವಿರಲಿ ಎನ್ನುತ್ತಾರೆ .
ದನಗಳಿಗೆ ಮೇವಿಲ್ಲ .
II. ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )
2nd PUC Omme Nagutteve Kannada Notes Question Answer
1 ) ಕವಯಿತ್ರಿ ಮುಗಿಲತ್ತ ಕೈಚಾಚಿ ಏಕೆ ನಿಂತಿದ್ದಾರೆ ?
ಕವಯಿತಿಗೆ ಏನು ಮಾಡಲಾಗದೆ , ಅವರ ಸ್ಥಿತಿ ನೋಡಲಾಗದೆ ಅವರಿಗಾಗಿ ಕವಯಿತ್ರಿ ಮುಗಿಲತ್ತ ಕೈಚಾಚಿ ನಿಂತಿದ್ದಾರೆ .
2 ) ಕವಯಿತ್ರಿ ನಗುವ ನಗು ಎಂಥಹುದು ?
ಕವಯಿತ್ರಿ ನಗುವ ನಗು ಕೊನೆಯಿಲ್ಲದ್ದು , ಮೊನೆಯಿಲ್ಲದ್ದು , ಆಕಾಶದಲ್ಲಿ ಕಾರ್ಮೋಡ ಕಲಿಸುವ ನಗು , ಮಳೆ ಸುರಿಸುವ , ಹೊಳೆ ಹರಿಸುವ , ಬೆಳೆ ಬೆಳೆಸುವ ನಗು ಕವಯಿತ್ರಿಯದು .
3 ) ಜನರನ್ನು ಕವಯಿತ್ರಿ ಯಾವ ಯಾವುದರಿಂದ ಪಾರು ಮಾಡುವುದಾಗಿ ಹೇಳಿದ್ದಾರೆ ?
ದಾರಿದ್ರವೆಂಬ ಬೆಂಕಿಯ ಧಗೆಯಲ್ಲಿ ಬೇಯುತ್ತಿರುವ ಜನರನ್ನು ಅವರ ಈ ದಾರಿದ್ರ ಎಂಬ ಬೆಂಕಿಯ ಧಗೆಯಿಂದ ಪಾರು ಮಾಡುವುದಾಗಿ ಕವಯಿತ್ರಿ ಹೇಳಿದ್ದಾರೆ . ಅವರ ಎಂದರೆ ದೀನದಲಿತರ ನೋವನ್ನು ಸರ್ವನಾಶ ಮಾಡುತ್ತೇನೆ ಎಂಬುದಾಗಿ ಹೇಳುವರು .
4 ) ದನಗಳಿಗೆ ಜನಗಳಿಗೆ ಏನೇನು ಇಲ್ಲ ?
ದನಗಳಿಗೆ ಮೇವಿಲ್ಲ . ಜನಗಳಿಗೆ ನೀರಿಲ್ಲ , ಗಂಜಿಗೂ ಗತಿಯಿಲ್ಲ . ತಿನ್ನಲು ತುತ್ತನ್ನ ಇಲ್ಲದ ಜನರಲ್ಲಿ ನಗುವಂತು ಇಲ್ಲವೇ ಇಲ್ಲ .
III . ಐದಾರು ವಾಕ್ಯದಲ್ಲಿ ಉತ್ತರಿಸಿ : ( ನಾಲ್ಕು ಅಂಕದ ಪ್ರಶ್ನೆಗಳು )
1 ) ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯ ವಿವರಿಸಿ .
‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯವೆಂದರೆ – ‘ ನಗು ಆರೋಗ್ಯ , ಆಯಸ್ಸು ಕೊಡುತ್ತದೆ . ಆದರೆ ಈ ದಲಿತರ ಜೀವನದಲ್ಲಿ ನಗ ಎಂಬುದಿಲ್ಲ . ಸಾಮಾಜಿಕ ಅಸಮಾನತೆಯನ್ನು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತದೆ . ಅವರ ಮೊಗದಲ್ಲಿ ನಗೆ ಅರಳ ಬೇಕಾದರೆ ಮೂಲಭೂತ ಸೌಕಯ್ಯಗಳನ್ನು ಒದಗಿಸಬೇಕು . ಅದಕ್ಕಾಗಿ ಅವರ ಬಾಳಿನಲ್ಲಿ ಕವಯಿತ್ರಿ ನಗೆ ಮೂಡಿಸುವ ಪ್ರಯತ್ನ ಮಾಡುತ್ತಾ ಅವರನ್ನು ನಗಿಸಿ ತಾನೂ ಕೂಡ ನಗುವ ವಿಚಾರ ವ್ಯಕ್ತಪಡಿಸಿದ್ದಾರೆ . ಕವಯಿತ್ರಿ ತಾನೇ ಸ್ವಯಂ ಹೇಳುವಂತೆ ದೀನದಲಿತರನ್ನು ಹೊಗೆಯಿಂದ ಪಾರು ಮಾಡಿ . ಅವರನ್ನು ನಗಿಸುತ್ತೇನೆ . ನಾನು ನಗುತ್ತೇನೆ , ಅದು ಕೊನೆಯಿಲ್ಲದ , ಮೊನೆಯಿಲ್ಲದ ನಗು , ಆಕಾಶದಲ್ಲಿ ಕಾರ್ಮೋಡ ಕವಿಸುವ , ಮಳೆ ಸುರಿಸುವ ಹೊಳೆಹರಿಸುವ , ಬೆಳೆ ಬೆಳೆಸುವ , ದನ , ಜನ , ಎಲ್ಲ ಕೂಡಿ ನಕ್ಕೆ ನಗುತ್ತೇವೆ ‘ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುವುದೇ ಈ ಕವಿತೆಯ ವೈಶಿಷ್ಟ್ಯವಾಗಿದೆ .
2 ) ಕವಯಿತ್ರಿ ಅಗ್ನಿಪರ್ವತ ಜ್ವಾಲಾಮುಖಿ ಆಗಿದ್ದೇನೆ ಎನ್ನಲು ಕಾರಣಗಳೇನು ?
ಶೋಷಿತ ಸಮುದಾಯದವರು , ದೀನದಲಿತರು , ತುತ್ತಾನ್ನಕ್ಕೆ ಗತಿ ಇಲ್ಲದವರು , ದನಗಳಿಗೂ ಮೇವಿಲ್ಲ , ಜನಗಳಿಗೆ ನೀರಿಲ್ಲ , ಗಂಜಿಗೂ ಗತಿ ಇಲ್ಲ . ಸತ್ತ ದನಗಳನ್ನು ಕಿತ್ತು ತಿನ್ನುವುದನ್ನು ನೋಡಲಾಗದೆ ಈ ಸಮಾಜದ ಸ್ಥಿತಿಗತಿಯನ್ನು ಕಂಡು ಆಕ್ರೋಶ ಭುಗಿಲೆಳೆತ್ತದೆ . ದೀನದಲಿತರ ಬಗ್ಗೆ ತೋರುವ ಸಮಾಜದ ರೀತಿ – ನೀತಿಯಿಂದ ನೊಂದುಬೆಂದು ಕವಯಿತ್ರಿ ಜ್ವಾಲಾಮುಖಿಯಂತೆ ಸಿಡಿದಿದ್ದಾರೆ . ಆದ್ದರಿಂದ ಸ್ವತಃ ಕವಯಿತ್ರಿಯವರು ‘ ಅಗ್ನಿಪರ್ವತ , ಜ್ವಾಲಾಮುಖಿ ಆಗಿದ್ದೇನೆ ‘ ಎಂದು ಹೇಳಿದ್ದಾರೆ .
IV ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :
1 ) “ ಒಮ್ಮೆ ನಕ್ಕೇ ನಗುತ್ತೇವೆ . ”
ಶ್ರೀಮತಿ ಸುಕನ್ಯಾ ಮಾರುತಿಯವರು ಬರೆದಿರುವ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯ ಕೊನೆಯ ವಾಕ್ಯವಿದು . ಜಗತ್ತನ್ನು ಆವರಿಸಿರುವ ಬರಗಾಲ ದೂರಾಗಿ , ಬಡತನ – ದಾರಿದ್ರ ತೊಲಗಿ ಜನರು ಸಂತೋಷದಲ್ಲಿರಬೇಕು . ಆಕಾಶದಲ್ಲಿ ಕಾರ್ಮೋಡ ಕವಿದು , ಭೂಮಿಗೆ ಮಳೆ ಸುರಿದು , ಹೊಳೆ ತುಂಬಿ ಹರಿದು , ಬೆಳೆ ಬೆಳೆಯುವಂತಾದಾಗ ಜನರೆಲ್ಲ ಸಂತೋಷದಿಂದ ಜೀವಿಸುತ್ತಾರೆ . ದನಕರುಗಳು ನೆಮ್ಮದಿಯಿಂದ ಬದುಕುತ್ತವೆ . ಈ ಎಲ್ಲ ಸಹಜೀವಿಗಳು ಸಂತೋಷದಿಂದಿರುವಾಗ ತಾವೂ ಅವರೊಂದಿಗೆ ಒಮ್ಮೆ ನಕ್ಕೆ ನಗುತ್ತೇವೆ , ಎಲ್ಲರೂ ಕೂಡಿ ನಗುತ್ತೇವೆ . ಅಂತಹ ಕಾಲ ಬಂದೇ ತೀರುವುದೆಂಬ ಆಶಯವನ್ನು ಕವಯಿತ್ರಿ ಈ ಮೇಲಿನ ವಾಕ್ಯದ ಮೂಲಕ ವ್ಯಕ್ತಪಡಿಸಿದ್ದಾರೆ .
2 ) “ ಧಗಧಗ ಉರಿವ ಜ್ವಾಲಾಮುಖಿಯಾಗಿದ್ದೇನೆ ”
ಶ್ರೀಮತಿ ಸುಕನ್ಯಾ ಮಾರುತಿ ಅವರ ` ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ಕವಯಿತ್ರಿ ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ . ಭೀಕರವಾದ ಬರಗಾಲದಲ್ಲಿ ದನಕರುಗಳು , ಜನರು ತಿನ್ನಲು ಆಹಾರವಿಲ್ಲದೆ , ಕುಡಿಯಲು ನೀರಿಲ್ಲದೆ ಸಾಯುತ್ತಿದ್ದಾರೆ . ಈಗ ಮಳೆ ಬಂದರೆ ಮಾತ್ರವೇ ಅವರ ಉಳಿಗಾಲ . ಇಂತಹ ಸಂದರ್ಭದಲ್ಲಿ ಅವರ ದೀನ ಸ್ಥಿತಿ ನೋಡಲಾರದೆ ಕವಯಿತಿ ಮಳೆಗಾಗಿ ಮುಗಿಲತ್ತ ಕೈಚಾಚಿ ನಿಂತಿದ್ದಾರೆ . ಮಳೆಗಾಗಿ ಬೇಡುತ್ತಿದ್ದರೂ ಮನದೊಳಗೆ ಧಗಧಗಿಸಿ ಉರಿಯುವ ಜ್ವಾಲಾಮುಖಿಯಾಗಿದ್ದೇನೆಂದು ಈ ಸಂದರ್ಭದಲ್ಲಿ ಕವಯಿತ್ರಿ ಹೇಳಿರುವರು .
3 ) “ ದೀನದಲಿತತನಕ್ಕೆ ಧಿಕ್ಕಾರವಿರಲಿ ! ”
ಶ್ರೀಮತಿ ಸುಕನ್ಯಾ ಮಾರುತಿಯವರ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ದೀನದಲಿತರಿಗಾಗಿ ಎಂದೂ ನಂಬದ , ಕಾಣದ ದೇವರನ್ನು ಪ್ರಾರ್ಥಿಸಿರುವ ಕವಯಿತ್ರಿ ಯಾರೂ ಸಹಾಯಹಸ್ತವನ್ನು ಚಾಚದಿದ್ದ ಸಂದರ್ಭದಲ್ಲಿ ಇಡೀ ಜಗತ್ತನ್ನೇ ಮುಳುಗಿಸಿ ಬಿಡುವ ಛಲ ಮೂಡುವುದೆಂದು ಹೇಳಿರುವರು . ಬೆಂಕಿ ನಾಲಗೆ ಚಾಚಿ ನನ್ನವರ ದಾರಿದ್ರವನ್ನೇ ಆಪೋಶನ ಮಾಡಬೇಕೆನ್ನುವ ಅವರು ದಲಿತರಿಂದ ದೀನ ದಲಿತತನ ಸರ್ವನಾಶವಾಗಬೇಕೆಂಬ , ಸಮಾನತೆಯು ಮೂಡಬೇಕೆಂಬ ಆಶಯ ಹೊಂದಿರುವುದನ್ನು ಈ ಮೇಲಿನ ವಾಕ್ಯದಲ್ಲಿ ಗಮನಿಸಬಹುದಾಗಿದೆ .
4 ) “ ಗಂಜಿಗೂ ಗತಿಯಿಲ್ಲ ”
ಶ್ರೀಮತಿ ಸುಕನ್ಯಾ ಮಾರುತಿಯವರು ಬರೆದಿರುವ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯ ಆರಂಭದಲ್ಲಿ ಈ ಮೇಲಿನ ವಾಕ್ಯವಿದೆ .ಜನಗಳು ಮತ್ತು ವನಗಳು ಭೀಕರ ಬರಗಾಲದ ಧಾಳಿಗೆ ಸಿಕ್ಕು ತತ್ತರಿಸಿ , ದಾರಿದ್ರವನ್ನು ಅನುಭವಿಸುತ್ತಿರುವ ಸ್ಥಿತಿಯನ್ನು ವಿವರಿಸುವ ಸಂದರ್ಭದಲ್ಲಿ ಕವಯಿತ್ರಿ ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ . ದನಗಳಿಗೆ ಮೇವು ಸಿಗದಂತಹ ಪರಿಸ್ಥಿತಿ ಎದುರಾಗಿದೆ . ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ . ತಿನ್ನಲು ಗಂಜಿಗೂ ಗತಿಯಿಲ್ಲ . ಇಂತಹ ಪರಿಸ್ಥಿತಿಯಲ್ಲಿ ಜನರೆಲ್ಲ ಸತ್ತ ದನಗಳನ್ನು ಕಿತ್ತು ಕಿತ್ತು ತಿನ್ನಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆಂದು ಕವಯಿತ್ರಿ ಅತ್ಯಂತ ವಿಷಾದದಿಂದ ಹೇಳಿದ್ದಾರೆ .
2nd PUC Omme Nagutteve Kannada Notes Question Answer pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.