Badukuva Kale Prabandha in Kannada | ಬದುಕುವ ಕಲೆ ಪ್ರಬಂಧ ಕನ್ನಡ pdf

Badukuva Kale Prabandha in Kannada, ಬದುಕುವ ಕಲೆ ಪ್ರಬಂಧ ಕನ್ನಡ Pdf, Badukuva Kale Bagge Pabhanda, Essay About Badukuva Kale in Kannada Pdf Badukuva Kale Essay Writting in Kannada Badukuva Kale Essay in Kannada Language

ಪೀಠಿಕೆ :

ಬದುಕು ‘ಅತ್ಯುತ್ತಮ’ವಾದುದು. ಮಾನವರು ಬದುಕುವುದು ಕಲಿಯಬೇಕಷ್ಟೆ. ಆದರೆ ಇಂದು ಇದನ್ನು ಕಲಿಸಿಕೊಡುವುದು ಒಂದು ಉದ್ಯಮವಾಗಿಬಿಟ್ಟಿದೆ. ‘ಬದುಕುವುದನ್ನು ಕಲಿಯಿರಿ’, ‘ವ್ಯಕ್ತಿತ್ವ ವಿಕಸನ’, ‘ಜೀವನ ಕೌಶಲಗಳು’ ಮುಂತಾದ ಹೆಸರುಗಳಲ್ಲಿ ಸಾವಿರಾರು ಪುಸ್ತಕಗಳು ಪ್ರತಿ ವರುಶ ಪ್ರಕಟವಾಗುತ್ತವೆ.

ಕಲಿಸಿಕೊಡಲು ಅನೇಕ ಶ್ರೀಶ್ರೀಗಳು ಹುಟ್ಟಿಕೊಂಡಿದ್ದಾರೆ. ಕಂಪನಿಗಳು, ವೃತ್ತಿಪರ ತರಬೇತುದಾರರು ಹುಟ್ಟಿಕೊಂಡು ಸಾವಿರಾರು ಶಿಬಿರಗಳನ್ನು ನಡೆಸುತ್ತಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ಶುಲ್ಕವನ್ನು ವಸೂಲು ಮಾಡುತ್ತಾರೆ.

ಇದನ್ನು ಕಲಿಸಿಕೊಡಲು ಶಾಲಾಕಾಲೇಜುಗಳಲ್ಲಿ ವ್ಯಾಲ್ಯೂ ಎಜುಕೇಶನ್ ತರಗತಿಗಳನ್ನು ಹೆಚ್ಚುವರಿಯಾಗಿ ನಡೆಸಲಾಗುತ್ತಿದೆ. ಹೀಗೆ ಅನೇಕ ಬಗೆಗಳಲ್ಲಿ ಬದುಕುವ ಕೌಶಲವನ್ನು ಕಲಿಸಿಕೊಡಲು ಪ್ರಯತ್ನಿಸಲಾಗುತ್ತಿದೆ

ತಮಾಶೆಯೆಂದರೆ, ಇಲ್ಲೆಲ್ಲಾ ಮಾತನಾಡುವುದು ಹೇಗೆ? ಉಡುಗೆ ತೊಡುಗೆಗಳನ್ನು ಹೇಗೆ ಧರಿಸಬೇಕು? ಹಣ ಗಳಿಸುವುದು ಹೇಗೆ? ನಗುವುದು ಹೇಗೆ? ಊಟ ಮಾಡುವುದು ಹೇಗೆ? ಮುಂತಾದವುಗಳ ಬಗೆಗೆ ಗಮನಹರಿಸುತ್ತ ಅವೇ ಬದುಕಿನ ನಿಜವಾದ ಕೌಶಲಗಳು ಎಂದು ಬಿಂಬಿಸಿ ಜನರನ್ನು ಯಾಮಾರಿಸಲಾಗುತ್ತಿದೆ.

ಒಂದು ವೇಳೆ ಇವುಗಳನ್ನು ಒಪ್ಪಿಕೊಂಡರೂ ಇವು ಮಾನವರ ಭೌತಿಕ ಸ್ಥಿತಿಗೆ ಸಂಬಂಧಿಸಿದ ಸಂಗತಿಗಳು. ಆದರೆ ಮಾನವರ ಬದುಕುಬಾಳುವೆಗಳ ಔನ್ನತ್ಯ-ಔಚಿತ್ಯಗಳು ಅಂತರಂಗದ ಅರಿವು ಗಳಿಕೆಯ ಮೇಲೆ ಆಧರಿಸಿರುತ್ತವೆ. ಒಬ್ಬ ವ್ಯಕ್ತಿಯ ಗಾತ್ರದ ಮೇಲೆ, ಶಾರೀರಿಕ ಅಂದಚಂದದ ಮೇಲೆ ಯಾರೂ ಒಬ್ಬರ ವ್ಯಕ್ತಿತ್ವವನ್ನು, ಅವರ ಬಾಳ್ವೆಯನ್ನು ಅಳತೆ ಮಾಡುವುದಿಲ್ಲ.

ಅಂತಹ ಭೌತಿಕ ರೂಪ ಮತ್ತು ಸಂಪತ್ತಿನ ಆಧಾರ ದಲ್ಲಿ ಮೌಲ್ಯಮಾಪನಗೊಂಡು ಬಿಂಬಿತವಾದ ಯಾವ ವ್ಯಕ್ತಿತ್ವವೂ ಹೆಚ್ಚುಕಾಲ ಉಳಿಯುವುದಿಲ್ಲ. ಅಂತರಂಗದ ಅರಿವು ಮಾನವರ ಬದುಕಿಗೆ ಬಹಳ ಮುಖ್ಯವೆಂದು ಯಾವ ತರಬೇತುದಾರರು, ಶ್ರೀಶ್ರೀಗಳು ಹೇಳಿಕೊಡುವುದಿಲ್ಲ.

ಅದನ್ನು ಮರೆಮಾಚಲಾಗುತ್ತದೆ. ಯಾಕೆಂದರೆ ಅರಿವನ್ನು ಮಾರಲು ಸಾಧ್ಯವಿಲ್ಲ; ಅದನ್ನು ಪ್ರತಿಯೊಬ್ಬ ವ್ಯಕ್ತಿಯೂ ತಮ್ಮಲ್ಲಿ ತಾವೇ ಕಂಡುಕೊಳ್ಳಬೇಕಿರುತ್ತದೆ.

ಜನರಿಗೆ ಅವರ ಪಾಡಿಗೆ ಅವರು ಅರಿತುಕೊಳ್ಳುವ ದಾರಿ ತೋರಿಸಿದರೆ ಮಾರುವ ದಲ್ಲಾಳಿಗಳಿಗೇನು ಲಾಭ? ಪುಸ್ತಕಗಳನ್ನು ಕೊಂಡು ತರಬಹುದೇ ಹೊರತು, ಅರಿವನ್ನು ಕೊಂಡು ತರಲು ಸಾಧ್ಯವೇ? ನಿಜವಾದ ಅರಿವನ್ನು ನಮ್ಮಲ್ಲಿ ನಾವೇ ಕಂಡುಕೊಳ್ಳಬೇಕಿರುತ್ತದೆ. ಅದಕ್ಕಾಗಿ ಬಹಳ ಎಚ್ಚರಿಕೆಯಿಂದ ನಿರಂತರವಾಗಿ ಪ್ರಯತ್ನ ಮಾಡಬೇಕಶ್ಟೇ.

ಅದನ್ನು ಅರಿತುಕೊಳ್ಳಲು ಕೆಲವರ ನೆರವು ಬೇಕಾಗುತ್ತದೆ. ಅಲ್ಲದೆ ಇಂದು ಅಂತರಂಗದ ಇಲ್ಲವೇ ಬಹಿರಂಗದ ಯಾವುದೇ ಬಗೆಯ ಕೌಶಲಗಳನ್ನು ಕಲಿಸಿಕೊಡುವ ದುಸ್ಥಿತಿ ಏಕೆ ಸೃಶ್ಟಿಯಾಗಿದೆ? ಇತರೆ ಜೀವಜಾತಿಗಳಿಗೆ ಯಾರು ಬದುಕುವ ಈ ಕಲೆಯನ್ನು ಕಲಿಸಿಕೊಡುತ್ತಾರೆ?

Badukuva Kale Prabandha in Kannada

ವಿಷಯ ವಿವರಣೆ

ಈ ಜಗತ್ತಿನಲ್ಲಿ ಜನರು ಹೇಗೆ ಬದುಕಬೇಕೆಂದು, ಹೇಳುವುದರಿಂದ ಹೇಳುವವರಿಗೂ ಬರುವುದಿಲ್ಲ; ಕೇಳುವುದರಿಂದ ಕೇಳುವವರಿಗೂ ಬರುವುದಿಲ್ಲ. ಅದು ನಮ್ಮ ಶಿಕ್ಷಣದಿಂದಲೂ ಬರುತ್ತಿಲ್ಲ.  ಹಾಗೆ ಬರುವುದಾಗಿದ್ದರೆ ನಮ್ಮ ಇಂದಿನ ಶಿಕ್ಷಣದ ಮೂಲಕವೇ ಎಲ್ಲವೂ ಸಾಧ್ಯವಾಗಬೇಕಿತ್ತು. ಅದು ಸಾಧ್ಯವಾಗಿಲ್ಲ ಯಾಕೆ? ಇಂದಿನ ಶಿಕ್ಶಣದ ಉದ್ದೇಶ ವಿದ್ಯಾರ್ಥಿಗಳನ್ನು ಪರೀಕ್ಶೆಯಲ್ಲಿ ಪಾಸು ಮಾಡಿಸುವಶ್ಟಕ್ಕೆ ಮಾತ್ರ ಸೀಮಿತವಾಗಿದೆ.

ವಿದ್ಯಾರ್ಥಿಗಳಿಗೂ ಶಿಕ್ಷಣವೆಂಬುದು ಪರೀಕ್ಷೆಯೆಂಬ ಒಂದು ಶಾಸ್ತ್ರವನ್ನು ಮುಗಿಸುವುದಶ್ಟೇ ಉದ್ದೇಶವಾಗಿದೆ. ಅರಿವು ಮತ್ತು ವ್ಯಕ್ತಿತ್ವ ರೂಪಿಸುವ ಒಂದು ಮುಖ್ಯ ದಾರಿಯಾಗಿ ಶಿಕ್ಶಣವನ್ನು ಭಾವಿಸಿಯೇ ಇಲ್ಲ. ಮಾರಾಟ ಮತ್ತು ಖರೀದಿದಾರ ನಡುವಿನ ಸಂಬಂಧವೇ ಕಲಿಸುವ ಮತ್ತು ಕಲಿಯುವವರ ನಡುವೆ ಇರುವುದು.

ಶಿಕ್ಶಣ ಇಂದು ಒಂದು ವ್ಯಾಪಾರಿ ಸರಕು. ಹಾಗಾಗಿ ಇಲ್ಲಿ ಹೆಚ್ಚಿನದನ್ನು ನಿರೀಕ್ಷಿಸುವಂತಿಲ್ಲ. ಯಾರೋ ಹೇಳಿದ್ದನ್ನು ಕೇಳುವುದರಿಂದ ಇಲ್ಲವೇ ಬರೆದದ್ದನ್ನು ಪರಿಶ್ರಮದ ಓದಿನಿಂದ ಪ್ರೇರಣೆ ದೊರೆಯಬಹುದಶ್ಟೇ. ಪ್ರೇರಣೆಯೇ ಬದುಕಲ್ಲ; ಸಿದ್ದಿ ಸಾಧನೆಯಲ್ಲ.

ಹಾಗಾಗಿಯೇ ಗಾಂಧೀಜಿ ತಮ್ಮ ಜೀವನದಲ್ಲಿ ಬೋಧನೆಯ ಜೊತೆಗೆ ಬದುಕುವುದನ್ನು ಕಲಿಯಲು ಪ್ರಯತ್ನಿಸಿದರು. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ಕಲಿತರು.

ವಿಚಾರ ಆಚಾರವಾಗಿ ನುಡಿ ನಡೆಯಾಗುವ ಬಗೆಯನ್ನು ತಮ್ಮ ಬದುಕಿನಲ್ಲಿ ತೋರಿಸಿಕೊಡಲು ಯತ್ನಿಸಿದರು. ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಮಾತಿನ ಮೂಲಕ ಅದನ್ನು ಸಾಧಿಸಿ ತೋರಿಸಲು ಯತ್ನಿಸಿದರು. ಪುಕ್ಕಟೆ ಸಂದೇಶ ನೀಡಲಿಲ್ಲ.

ಶರಣರು ಇಂತಹದ್ದೇ ವಿಚಾರಗಳನ್ನು ತೋರಿಸಿಕೊಟ್ಟರು ಮತ್ತು ಹಾಗೆಯೇ ಬದುಕಿ ಬಾಳಿದರು. ‘ನುಡಿಯೊಳಗಾಗಿ ನಡೆಯದಿದ್ದರೆ’ ಕೂಡಲ ಸಂಗಮದೇವ ಮೆಚ್ಚಲಾರನೆಂದರು ಬಸವಣ್ಣ.

ಇವರು ಹೀಗೆ ಬದುಕುತ್ತಿದ್ದಾರೆ; ನಾನು ಅವರಂತೆ ಬದುಕಬೇಕು ಎಂದು ಬಯಸುವ ಕಾಪಿಕ್ಯಾಟುಗಳೇ ಹೆಚ್ಚು. ಸ್ವತಂತ್ರವಾಗಿ ಚಿಂತಿಸುವ, ತಮಗೆ ಬೇಕಾದಂತೆ ಬದುಕಲು ಪ್ರಯತ್ನಿಸುವವರೇ ಕಡಿಮೆ. ಮಾನವರಿಗೆ ಬುದ್ಧಿ ಮತ್ತು ಆಲೋಚನೆ ಮಾಡುವ ಸಾಮರ್ಥ್ಯ ಇದೆ ಎಂದ ಮೇಲೆ ಯೋಚಿಸಿ ಬದುಕಬೇಕಲ್ಲವೇ?

ಉಪಸಂಹಾರ :

ತಿಳಿದು ಜೀವಿಸುವ ‘ಅತ್ಯುತ್ತಮ’ ಬದುಕನ್ನು ನಿಸರ್ಗ ಮಾನವರಿಗೆ ನೀಡಿದೆ. ಆದರೆ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂಬುದಷ್ಟೆ ಸಮಸ್ಯೆ.

ಅಲ್ಲಿ ಕಪಟವಿಲ್ಲ ಅವುಗಳಿಗೆ ಕೂಡಿಡುವ ಚಿಂತೆಯಿಲ್ಲ. ಅದನ್ನು ಉಳಿಸಿಕೊಳ್ಳಲು ಸೈನ್ಯ ಕಟ್ಟುವ ಅಗತ್ಯವೂ ಇಲ್ಲ. ಕಳ್ಳತನವಿಲ್ಲ; ಕಾನೂನು ರೂಪಿಸಬೇಕಿಲ್ಲ. ಅವುಗಳನ್ನು ಉಲ್ಲಂಘಿಸುವ ಅಗತ್ಯವೂ ಬರುವುದಿಲ್ಲ. ಜೈಲುಗಳನ್ನು ಸ್ಥಾಪಿಸುವ ಅನಿವಾರ್ಯವಿಲ್ಲ.

ದಂಡ ವಿಧಿಸುವುದು; ಜೀವಾವಧಿ ಮತ್ತು ಮರಣ ದಂಡನೆ ವಿಧಿಸುವ ಸಂದರ್ಭವೂ ಒದಗಿಬರುವುದಿಲ್ಲ. ಪರಿಸರ ಮಾಲಿನ್ಯವಿಲ್ಲ; ಜಾಗತಿಕ ತಾಪಮಾನ ಏರಿಕೆಯ ಭಯವಿಲ್ಲ;

ಜಾತಿ-ಧರ್ಮಗಳ ಒಳಜಗಳವಿಲ್ಲ. ದೇಶಭಕ್ತಿ ತೋರಿ ಸಬೇಕಿಲ್ಲ. ಮಾರಾಟ ಮಾಡಿ ಲಾಭ ದೋಚುವ ದರ್ದಿಲ್ಲ; ಕೊಳ್ಳುಬಾಕತನ ಮೊದಲೇ ಇಲ್ಲ. ಅಂದಂದಿನ ಅಗತ್ಯವನ್ನು ಪೂರೈಸಿಕೊಂಡು ಸರಳವಾಗಿ ಬಾಳುತ್ತವೆ.

‘ನಿನ್ನನ್ನು ನೀ ತಿಳಿಕೋ’ ಎಂಬ ನೆಲೆಗೆ ಎಲ್ಲರೂ ಬಂದು ಮುಟ್ಟಿದ್ದಾರೆ. ದೇಹವೇ ದೇಗುಲವಾಗಿದೆ. ಕಾಯಕವೇ ಕೈಲಾಸವಾಗಿದೆ. ಇದನ್ನು ಅರಿಯುವ ಇಚ್ಚೆಯಿಲ್ಲದೆ ಎಲ್ಲ ಹೊಲಸು ಮನದ ಹೊಸ್ತಿಲನ್ನು ದಾಟಿ ಒಳಹೊಕ್ಕು ನಡುಮನೆಯಲ್ಲಿ ವಿರಾಜಮಾನಿಸಿದೆ.

Badukuva Kale Prabandha ಕೊನೆಗೊಂದು ಮಾತು:

ಮಾನವರು ಸಂಘ ಜೀವಿಗಳು ಎನ್ನಲಾಗುತ್ತದೆ. ಎಲ್ಲ ಜೀವಿಗಳು ಸಂಘ ಜೀವಿಗಳೇ ಹೌದು. ಸಂಘವಿಲ್ಲದೆ ಸಂಘರ್ಶವಿಲ್ಲ, ಈ ಭೂಮಂಡಲದಲ್ಲಿ ಯಾವ ಜೀವಿಯೂ ಜೀವಿಸುತ್ತಿಲ್ಲ. ನಿರಂತರ ಸಂಘ ಮತ್ತು ಸಂಘರ್ಶದಿಂದ ಜೀವಜಗತ್ತು ಬದುಕುತ್ತಿದೆ.

ಆದರೆ ಮಾನವರು ಮಾತ್ರ ಸಂಘಟನೆಗೊಳ್ಳುವ ಹಂತದಲ್ಲಿ ಬದುಕನ್ನು ಕೆಡಿಸಿಕೊಂಡಿದ್ದಾರೆ. ಪ್ರಾಣಿಗಳು ತಾವು ವಾಸಿಸುವ ಜಾಗದಲ್ಲಿ ಹಿಕ್ಕೆಪಿಕ್ಕೆಗಳನ್ನು ಹಾಕಿ ಹೊಲಸು ಮಾಡಿರಬಹುದು; ಅವುಗಳ ಬದುಕನ್ನಲ್ಲ.

ಬದುಕುವ ಕಲೆ ಪ್ರಬಂಧ  Prabandha Essay Badukuva Kale Video

ಈ ವಿಡಿಯೋ ನೋಡುವುದರಿಂದ ಪ್ರಬಂಧಗಳನ್ನು ಬರೆಯುವ ರೀತಿಯನ್ನು ತಿಳಿದುಕೊಳ್ಳಬಹುದು. ಪ್ರಬಂಧ ರಚನೆಯಲ್ಲಿನ ಮೂರು ಹಂತಗಳನ್ನು ತಿಳಿದುಕೊಳ್ಳಬಹುದು. ಇದು ಅಭಿವ್ಯಕ್ತಿ ಸಾಮರ್ಥ್ಯವಾಗಿರುವುದರಿಂದ ವಿಷಯ ಸಂಗ್ರಹವಿದ್ದರೆ ಹಂತಗಳನ್ನು ಅನುಸರಿಸಿ ಬರೆಯಲು ಸುಲಭವಾಗುತ್ತದೆ. ನಾನು ಈ ವಿಡಿಯೋದಲ್ಲಿ ಮಕ್ಕಳಿಗೆ ಅನುಕೂಲವಾಗಲೆಂದು ಸುಲಭವಾಗಿ ಕಲಿತು, ನೆನಪಿನಲ್ಲಿಡಲು ಅನುಕೂಲವಾಗುವಂತೆ ಪ್ರಬಂಧಗಳನ್ನು ಅಪ್ ಲೋಡ್ ಮಾಡುತ್ತೇನೆ. ಈ ವಿಡಿಯೋದಲ್ಲಿ ‘ಬದುಕುವ ಕಲೆ ( badukuva kale )ವಿಷಯಕ್ಕೆ ಸಂಬಂಧಿಸಿದಂತೆ ಪ್ರಬಂಧವನ್ನು ಸಂಕ್ಷಿಪ್ತವಾಗಿ ವಿವರಿಸಿದ್ದೇನೆ. ಇದರ ಸದುಪಯೋಗವಾಗಬೇಕೆಂಬುದೇ ನನ್ನ ಆಶಯವಾಗಿದೆ.

Badukuva Kale Prabandha Kannada Pdf Download

FAQ :

ಸಂತೋಷದ ಜೀವನಕ್ಕೆ ಏನು ಬೇಕು?

ಉತ್ತಮ ಸಂಬಂಧಗಳು ಸಂತೋಷ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಆನಂದಿಸಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಕೆಲವು ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಉತ್ತಮ ಸಂಬಂಧಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ನಮಗೆ ಸಹಾಯ ಮಾಡುತ್ತದೆ. 

ಜೀವನದ ಅಗತ್ಯತೆಗಳು ಯಾವುವು

ಜೀವನದ ಅಗತ್ಯತೆಗಳಲ್ಲಿ ಶಿಕ್ಷಣ , ಆರೋಗ್ಯ ರಕ್ಷಣೆ, ಆಶ್ರಯ, ಸುರಕ್ಷಿತ ಮತ್ತು ಬೆದರಿಕೆಯಿಲ್ಲದ ಕೆಲಸ, ನೀರು, ಪೋಷಣೆ, ಭದ್ರತೆ, ಪ್ರಮುಖ ಪ್ರಾಥಮಿಕ ಸಂಬಂಧಗಳು ಮತ್ತು ಸುರಕ್ಷಿತ ಪರಿಸರ ಸೇರಿವೆ. 

ಇತರ ವಿಷಯಗಳು

ಮತದಾನ ಪ್ರಬಂಧ

ಸಾಂಕ್ರಾಮಿಕ ರೋಗ ಪ್ರಬಂಧ

ಬದುಕುವ ಕಲೆ ಪ್ರಬಂಧ ಕನ್ನಡ 

ಗ್ರಂಥಾಲಯದ ಮಹತ್ವ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ

Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಕನ್ನಡ ದೀವಿಗೆ.in ಜಾಲತಾಣದಲ್ಲಿ ಇರುವ ಪ್ರಬಂಧಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *