7ನೇ ತರಗತಿ ಕನ್ನಡ ತಿರುಕನ ಕನಸು ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 7th Standard Tirukana Kanasu Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Poem 7 Notes 7th Class Kannada 7th Poem Notes Pdf Tirukana Kanasu Poem Summary in Kannada Tirukana Kanasu Story in Kannada
7th Std Tirukana Kanasu Kannada Padya Notes Pdf
ಕೃತಿಕಾರರ ಪರಿಚಯ : –
ಮುಪ್ಪಿನ ಷಡಕ್ಷರಿ :
ಮುಪ್ಪಿನ ಪಡಕ್ಷರಿಯವರು ಕ್ರಿ.ಶ .1500 ರಿಂದ ಸುಮಾರಿನಲ್ಲಿ ಜೀವಿಸಿದ್ದರು . ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡುತ್ತಿದ್ದರು ಎಂದು ಹೇಳಲಾಗಿದೆ . ಇವರು ಕೊಳ್ಳೇಗಾಲದವರು . ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ . ಇವರು ನಿಜಗುಣ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ ,
ಮುಖ್ಯಾಂಶಗಳು :
Tirukana Kanasu Poem Summary in Kannada Pdf
ಮುಪ್ಪಿನ ಪಡಕ್ಷರಿಯವರ ಈ ಪದ್ಯ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ . ಎಲ್ಲಾಮಕ್ಕಳಿಗೂ ಬಾಲ್ಯದಲ್ಲಿ ಬಾಯಿಪಾಠವಾದ ಈ ಪದ್ಯ ಸಾಯುವವರೆಗೂ ನೆನಪಿನಲ್ಲಿ ಉಳಿದಿರುತ್ತದೆ ಈ ಪದ್ಯ ಒಂದು ರೀತಿಯ ದೃಶ್ಯ ಕಾವ್ಯದಂತೆ ಹೇಳುವವರ ಮತ್ತು ಕೇಳುವವರ ಮನಃಪಟದಲ್ಲಿ ಮೂಡಿ ಮಾಯವಾಗುತ್ತದೆ .ಒಂದೂರಿನಲ್ಲಿ ಒಬ್ಬ ತಿರುಕ ( ಭಿಕ್ಷುಕ ) ಒಂದು ಸಲ ಜೀರ್ಣ ಸ್ಥಿತಿಯಲ್ಲಿರುವ ಧರ್ಮಶಾಲೆಯ ಗೋಡೆಯ ಬದಿಗೆ ಮಲಗಿರುತ್ತಾನೆ . ಆಗ ಅವನಿಗೆ ಒಂದು ಕನಸು ಬೀಳುತ್ತದೆ . ಆ ಊರಿನ ರಾಜನಿಗೆ ಮಕ್ಕಳಿರುವುದಿಲ್ಲ .
7th Tirukana Kanasu Saramsha
ಅವನು ಸತ್ತು ಹೋಗುತ್ತಾನೆ .ಅವನ ನಂತರ ರಾಜ್ಯವನ್ನು ಆಳಲು ಯಾರು ಎಂಬ ಚರ್ಚೆ ನಡೆದು ಪಟ್ಟದ ಆನೆಯ ಸೊಂಡಿಲಿಗೆ ಹಾರವನ್ನು ಕೊಟ್ಟು ಅದು ಯಾರ ಕೊರಳಿಗೆ ಹಾರವನ್ನು ಹಾಕುತ್ತದೆಯೋ ಅವರೇ ಪಟ್ಟದ ರಾಜ ಎಂಬ ನಿರ್ಣಯವನ್ನು ಮಾಡಿ , ಆನೆಯನ್ನು ಕಳಿಸುತ್ತಾರೆ . ಆ ಆನೆಯು ನಡೆದಾಡುತ್ತಾ ಬಂದು ಈ ತಿರುಕನ ಕೊರಳಿಗೆ ಹಾರವನ್ನು ಹಾಕುತ್ತದೆ .ಅದರಿಂದ ಅವನು ರಾಜನಾಗುತ್ತಾನೆ .ಅವನಿಗೆ ಗಂಡು ಮತ್ತು ಹೆಣ್ಣು ಮಕ್ಕಳು ಹುಟ್ಟುತ್ತದೆ . ಸುಖದಿಂದ , ಸಂತೋಷ ದಿಂದ – ರಾಜ್ಯವಾಳುತ್ತಿರುತ್ತಾನೆ . ರಾಜಸಭೆಯಲ್ಲಿ ಅವನ ತೊಡೆಯ ಮೇಲೆ ಅವನ ಮಕ್ಕಳು ಬಂದು ಕುಳಿತು ಆಟವಾಡುತ್ತಿರುತ್ತಾರೆ . ಹೀಗೆ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ . ಆಗ ಮಂತ್ರಿಗಳಿಗೆ ಹೇಳಿ ಗಂಡು , ಹುಡುಕಿ ಮದುವೆ ಮಾಡುತ್ತಾರೆ . ಈ ರೀತಿ ಎಲ್ಲರೂ ಮೆಚ್ಚುವಂತೆ ಸಂಭ್ರಮ , ಆನಂದದಿಂದ ರಾಯನು ( ತಿರುಕನು ) ಹಿಗ್ಗುತ್ತಿರುತ್ತಾನೆ, ಹೀಗಿರುವಾಗ ಶತ್ರು ಸೈನ್ಯವು ರಾಜ್ಯವನ್ನು ಮುತ್ತುತ್ತದೆ, ಆಗ ಹೆದರಿಕೆಯಿಂದ ತಿರುಕನು ಕಣ್ಣು ತೆರೆಯುತ್ತಾನೆ.
ಪದಗಳ ಅರ್ಥ
- ತಿರುಕು= ಭಿಕ್ಷುಕ
- ಪುರ = ಪಟ್ಟಣ , ನಗರ
- ಕರಿ = ಆನೆ
- ಕುಸುಮಮಾಲೆ = ಹೂವಿನ ಮಾಲೆ
- ಮುರುಕು = ಪಾಳುಬಿದ್ದ , ಮುರಿದುಬಿದ್ದ
- ಧರ್ಮಶಾಲೆ = ಅನ್ನಛತ್ರ
- ತೊಡರಿಸು = ಧರಿಸು, ಹಾಕು
- ಪಟ್ಟ = ಸಿಂಹಾಸನ
- ಒಡೆಯ , = ರಾಜ , ದೊರೆ
- ಮಾಳಪೆವು = ಮಾಡುವೆನು
- ಒಡನೆ = ತಕ್ಷಣ
- ಪೊಡವಿ = ರಾಜ್ಯ
- ಆಣ್ಮ = ಒಡೆಯ , ರಾಜ
- ಹಿಗ್ಗು = ಸಂತೋಪ ಪಡು , ಹರ್ಷಿಸು
- ನೃಪ = ದೊರೆ , ರಾಜ
- ಭಟ್ಟಿನಿಗಳು = ಹೆಂಡತಿಯರು
- ನಲ್ಲ = ಪ್ರಿಯತಮ
- ಓಲಗ = ರಾಜಸಭೆ
- ಲೀಲೆ = ವಿನೋದ , ವಿಲಾಸ
- ಚಾತುರಂಗ = ಸೈನ್ಯದ ನಾಲ್ಕು ಅಂಗಗಳು
- ಲೋಲ = ಉತ್ಸುಕ
- ಸುತ = ಮಗ
- ಜೀಯ =ಸ್ವಾಮಿ
- ಸಕಲ = ಎಲ್ಲಾ
- ಉಲ್ಲಾಸ = ಹರ್ಷ ,
- ಅಖಿಲ = ಸಕಲ , ಎಲ್ಲಾ
- ಮೆಚ್ಚು = ಒಪ್ಪು , ಮೆಚ್ಚಿಕೊಳ್ಳು
- ಅಂದದಿ = ರೀತಿಯಲ್ಲಿ
- ಧನ = ಹಣ
- ಮದ = ಗರ್ವ , ಅಹಂಕಾರ
- ತನುಜ = ಮಗ
- ಜನಿತ = ಹುಟ್ಟು
ಅಭ್ಯಾಸ ಪ್ರಶ್ನೆಗಳು
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ತಿರುಕನು ಎಲ್ಲಿ ಕನಸನ್ನು ಕಂಡನು ?
ಉತ್ತರ : ತಿರುಕನು ಮುರುಕು ಧರ್ಮಶಾಲೆಯಲ್ಲಿ ಒರಗಿರುವಾಗ ( ಮಲಗಿರುವಾಗ ) ಬಂದ ಕನಸನ್ನು ಕಂಡನು .
2. ಆನೆಯು ಯಾರ ಕೊರಳಿಗೆ ಮಾಲೆಯನ್ನ ಹಾಕಿತು ?
ಉತ್ತರ : ಆನೆಯು ತಿರುಕನ ಕೊರಳಿಗೆ ಮಾಲೆಯನ್ನು ಹಾಕಿತು .
3. ತಿರುಕನಿಗೆ ಪಟ್ಟವನ್ನು ಕಟ್ಟಿದವರು ಯಾರು ?
ಉತ್ತರ : ತಿರುಕನಿಗೆ ಅರಮನೆಯ ಅಧಿಕಾರಗಳು ಪಟ್ಟವನ್ನು ಕಟ್ಟಿದರು .
4. ರಾಜ ಲೋಲನಾಗಿ ಮಂತ್ರಿಗೆ ಏನೆಂದು ನುಡಿದನು ?
ಉತ್ತರ : ರಾಜ ( ಲೋಲನಾಗಿ ) ಸಂತೋಷದಿಂದ ಮಂತ್ರಿಗೆ ತನ್ನ ಮಕ್ಕಳಿಗೆ ಮದುವೆ ಮಾಡಲು ಸಂಬಂಧವನ್ನು ನೋಡಲು ಹೇಳಿದನು .
5. ‘ ತಿರುಕನ ಕನಸು ‘ ಈ ಪದ್ಯವನ್ನು ಬರೆದ ಕವಿ ಯಾರು ?
ಉತ್ತರ : ‘ ತಿರುಕನ ಕನಸು ‘ ಪದ್ಯವನ್ನು ಮುಪ್ಪಿನ ಷಡಕ್ಷರಿಯವರು ಬರೆದಿದ್ದಾರೆ .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮುಾರು ವಾಕ್ಯಗಳಲ್ಲಿ ಉತ್ತರಿಸಿ .
1. ಕರಿಯ ಕೈಗೆ ಕುಸುಮ ಮಾಲೆಯನ್ನು ಕೊಡಲು ಕಾರಣವೇನು ?
ಉತ್ತರ : ಆ ಪಟ್ಟಣದ ರಾಜನು ಸತ್ತಾಗ ಅವನಿಗೆ ಮಕ್ಕಳಿಲ್ಲದ್ದರಿಂದಕ ಪಟ್ಟದಾನೆಯ ಸೊಂಡಿಲುನಿರ್ಧಾರಕ್ಕೆ ಬರುತ್ತಾರೆ . ಕೊರಳಿಗೆ ಹಾಕುವುದೋ ಕರಿಯ ( ಆನೆಯ )
2 . ತಿರುಕ ಪೊಡವಿಯಾಣ್ಮನಾದುದು ಹೇಗೆ ?
ಉತ್ತರ :ಪಟ್ಟದಾನೆಯು ತನ್ನ ಸೊಂಡಿಲಿಗೆ ತೊಡರಿಸಿದ ಮಾಲೆಯನ್ನು ತೆಗೆದುಕೊಂಡು ಎಲ್ಲಾ ಕಡೆಯೂ ಸುತ್ತಿ ,ಕೊನೆಗೆ ತಿರುಕನ ಕೊರಳಿಗೆ ಹಾಕುತ್ತದೆ . ನಿರ್ಣಯದಂತೆ ಅರಮನೆಯವರು ತಿರುಕನನ್ನು ರಾಜ್ಯದ ರಾಜನನ್ನಾಗಿ ಮಾಡುತ್ತಾರೆ . ಹೀಗೆ ತಿರುಕನು ಪೊಡವಿಯಾಣ್ಮನಾದನು .
3. ಕನಸು ಕಾಣುತ್ತಿದ್ದ ತಿರುಕನು ಹೆದರಿ ಏಕೆ ಕಣ್ಣು ತೆರೆದನು ?
ಉತ್ತರ : ಸುಖದ ಸುಪ್ಪತ್ತಿಗೆಯಲ್ಲಿರುವಾಗ ಎಂದರೆ ಎಲ್ಲಾ ರೀತಿಯ ಸುಖ ಸಂತೋಷವನ್ನು ಹೊಂದಿರುತ್ತಾನೆ . ರಾಣಿಯರು , ಮಕ್ಕಳು ಅವರ ಜೊತೆಗಾರರಾದ ಮದುಮಕ್ಕಳು ಹೀಗೆ ಸಂತೋಷ ಸಂಭ್ರಮದಲ್ಲಿರುವಾಗಲೇ ಶತ್ರು ಸೈನ್ಯದವರ ,ಮಕ್ಕಳು ಅ ಬಂದು ಆಕ್ರಮಣ ಮಾಡುತ್ತಾರೆ .ಆಗ ತಿರುಕನು ಕಣ್ಣು ತೆರೆಯುತ್ತಾನೆ .
ಇ ) ಐದಾರು ವಾಕ್ಯಗಳಲ್ಲಿ ಉತ್ತರಿಸು
1 . ತಿರುಕನು ರಾಜನಾದದ್ದು ಹೇಗೆ ?
ಉತ್ತರ : ತಿರುಕನು ಎಂದಿನಂತೆ ಹಾಳುಬಿದ್ದ , ಮುರಿದ ಬಿದ್ದ ಧರ್ಮಶಾಲೆಯ ಗೋಡೆಯ ಬದಿಗೆ ಮಲಗಿರುತ್ತಾನೆ ಆ ಊರಿನ ರಾಜ ಸತ್ತು ಹೋಗಿ ಅವನಿಗೆ ಮಕ್ಕಳಿಲ್ಲದಿರುವುದರಿಂದ ಪಟ್ಟದಾನೆಯ ಸೊಂಡಿಲಿಗೆ ಕುಸುಮಮಾಲೆಯನ್ನು ಕೊಟ್ಟು ಕಳುಹಿಸುತ್ತಾರೆ . ಅದು ಇವನ ಕೊರಳಿಗೆ ಕುಸುಮಮಾಲೆಯನ್ನು ಹಾಕುತ್ತದೆ . ಅದರ ಪ್ರಕಾರ ಅವನಿಗೆ ರಾಜ್ಯ ಪಟ್ಟವನ್ನು ಕಟ್ಟಿ ರಾಜನನ್ನಾಗಿ ಮಾಡುತ್ತಾರೆ . ಹೀಗೆ ತಿರುಕನು ರಾಜನಾಗುತ್ತಾನೆ .
2 . ತಿರುಕನು ಕನಸಿನಲ್ಲಿ ರಾಜ್ಯವನ್ನು ಆಳಿದ ರೀತಿಯನ್ನು ವಿವರಿಸಿ .
ಉತ್ತರ : ತಿರುಕನು ಕನಸಿನಲ್ಲಿಯೇ ತಾನು ರಾಜನಾದುದಕ್ಕೆ ಹೆಮ್ಮೆಪಟ್ಟುಕೊಳ್ಳುತ್ತಾನೆ . ರಾಜನಾದ ಮೇಲೆ ಇತರ ರಾಜರು ಇವನಿಗೆ ತಮ್ಮ ಕನ್ನೆಯರನ್ನು ಕೊಟ್ಟು ಮದುವೆ ಮಾಡುತ್ತಾರೆ . ರಾಜ್ಯವನ್ನು ಚೆನ್ನಾಗಿ ಆಳುತ್ತಾ , ತನ್ನ ಪತ್ನಿಯರೊಂದಿಗೆ ಸುಖವಾಗಿರುತ್ತಾನೆ . ರಾಜ್ಯಭಾರ ಮಾಡುತ್ತಾ ಕುಳಿತುಕೊಂಡಿರುವಾಗ ಇವನ ಮಕ್ಕಳು ಬಂದು ತೊಡೆಯೇರಿ ಕುಳಿತು ಆಟವಾಡುತ್ತಿದ್ದರು .ಈ ರೀತಿ ಚೆನ್ನಾಗಿ ರಾಜ್ಯವನ್ನಾಳುತ್ತಿದ್ದನು .
ಈ ) ಈ ಪದ್ಯಭಾಗವನ್ನು ಪೂರ್ಣಗೊಳಿಸಿ ,
ನಡೆದು ಯಾರ ಕೊರಳಿನಲ್ಲಿ
ತೊಡರಿಸುವುದೊ ಅವರ ಪಟ್ಟ
ಕೊಡೆಯರನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು
ಉ . ಮಾದರಿಯಂತೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆಯಿರಿ .
ಮಾದರಿ : ತಿರುಕನೋರ್ವನೂರಮುಂದೆ ತಿರುಕನು + ಒರ್ವನು + ಊರ + ಮುಂದೆ
- ಒರಗಿರಲೊಂದು = ಒರಗಿ + ಇರುತ್ತಲಿ + ಒಂದು ,
- ವರಕುಮಾರರಿಲ್ಲದಿರಲು = ವರ ಕುಮಾರರು + ಇಲ್ಲದೆ + ಇರಲು
- ಪೊಡವಿಯಾಣ್ಮನಾದನೆಂದು =ಪೊಡವಿಯ + ಅಣ್ಯನು +ಆದೆನು + ಎಂದು
- ನಿಮ್ಮಸುಖದೊಳಿರಲವಂಗೆ = ನಿಮ್ಮ ಸುಖದೊಳ್ +ಇರಲು+ ಅವಂಗೆ
FAQ :
ಉತ್ತರ : ತಿರುಕನಿಗೆ ಅರಮನೆಯ ಅಧಿಕಾರಗಳು ಪಟ್ಟವನ್ನು ಕಟ್ಟಿದರು .
ಉತ್ತರ : ‘ ತಿರುಕನ ಕನಸು ‘ ಪದ್ಯವನ್ನು ಮುಪ್ಪಿನ ಷಡಕ್ಷರಿಯವರು ಬರೆದಿದ್ದಾರೆ .
ಉತ್ತರ : ತಿರುಕನು ಮುರುಕು ಧರ್ಮಶಾಲೆಯಲ್ಲಿ ಒರಗಿರುವಾಗ ( ಮಲಗಿರುವಾಗ ) ಬಂದ ಕನಸನ್ನು ಕಂಡನು.
ಇತರೆ ವಿಷಯಗಳು :
7th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Hello