7ನೇ ತರಗತಿ ಕನ್ನಡ ಅಭಿಮನ್ಯುವಿನ ಪರಾಕ್ರಮ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 7th Standard Abhimanyuvina Parakrama Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Poem 8 Notes 7th Class Kannada 8th Poem Notes Abhimanyuvina Parakrama in Kannada 7th Standard Kannada Poem Abhimanyu Parakrama
7th Class Abhimanyuvina Parakrama Question Answer in Kannada
ಲೇಖಕರ ಪರಿಚಯ :
ಕುಮಾರವ್ಯಾಸ :
ಕುಮಾರವ್ಯಾಸನ ಮೂಲ ಹೆಸರು ನಾರಾಣಪ್ಪ. ಗದುಗಿನ ನಾರಾಣಪ್ಪ ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಕರೆಯಲಾಗುತ್ತದೆ. ಕವಿಯ ಕಾವ್ಯನಾಮ ಕುಮಾರವ್ಯಾಸ ಕಾಲ ಸುಮಾರು ಸಾ. ಶಾ 1430 ಎಂದು ನಿಗದಿಪಡಿಸಲಾಗಿದೆ. ಕುಮಾರವ್ಯಾಸ ಕವಿಯ ಹುಟ್ಟೂರು ಈಗಿನ ಗದಗ ಜಿಲ್ಲೆಯಲ್ಲಿರುವ ಕೋಳಿವಾಡ ಗ್ರಾಮ. ಕಾವ್ಯರಚನೆಯನ್ನು ಮಾಡಿದ್ದು ಗದುಗಿನ ವೀರನಾರಾಯಣನ ಗುಡಿಯಲ್ಲಿ. ಈಗಳು ಸಹ ಆ ಗುಡಿಯಲ್ಲಿರುವ ಒಂದು ಕಂಬಕ್ಕೆ ಕುಮಾರವ್ಯಾಸನ ಕಂಬ ಎಂದು ಕರೆಲಾಗುತ್ತದೆ. ಕುಮಾಋವ್ಯಾಸ ಈ ಕಂಬದ ಅಡಿಯಲ್ಲೇ ಈ ಕಾವ್ಯವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಇದೆ.
ಕುಮಾರವ್ಯಾಸನ ಪ್ರಸಿದ್ದ ಕೃತಿ ಕರ್ಣಾಟ ಭಾರತ ಕಥಾಮಂಜರಿ ಇದಕ್ಕೆ ಗದುಗಿನ ಭಾರತ ಕನ್ನಡ ಭಾರತ ಎಂದೂ ಕರೆಯಲಾಗುತ್ತದೆ. ಇವನನ್ನು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆಯುತ್ತಾರೆ . ಕುವೆಂಪುರವರು ಕುಮಾರವ್ಯಾಸನ ಗದುಗಿನ ಭಾರತವನ್ನುಮೆಚ್ಚಿಕೊಂಡು ಈ ರೀತಿ ಹೇಳಿದ್ದಾರೆ .
ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು.
ಮುಖ್ಯಾಂಶಗಳು :
ಪ್ರಸ್ತುತ ಪದ್ಯದಲ್ಲಿ ಅಭಿಮನ್ಯುವು ಆಡಿದ ಸಾಹಸದ ಮಾತುಗಳಿವೆ . ವೀರನಾದರೂ ವಿನಯಶಾಲಿ ಕವಿಯು ಪರಿಣಾಮಕಾರಿಯಾದ ಉಪಮೆ ರೂಪಕಗಳನ್ನು ಬಳಸಿದ್ದಾನೆ . ಇಂದಿನ ವಿದ್ಯಾರ್ಥಿಗಳು ಇಂತಹ ಸಾಹಸ , ಕೆಚ್ಚು , ಧೈರ್ಯ , ಆತ್ಮಸ್ಥೆರ್ಯ ಇವನ್ನೆಲ್ಲಾ ಅಳವಡಿಸಿಕೊಳ್ಳಬೇಕು . ನಮಗೆ ಎಂಬುದರ ‘ ಧೈರ್ಯಂ ಸರ್ವತ್ರ ಸಾಧನಂ ‘ ಎಂಬಂತೆ ಎಲ್ಲಾ ಜಯಕ್ಕೂ ಮೂಲ ಧೈರ್ಯವೇ . ಯಾವುದೇ ಕೌಶಲವನ್ನಾದರೂ ಚೆನ್ನಾಗಿ ಕಲಿಯಬೇಕು .‘ ವಿದ್ಯೆಯನ್ನು ಪೂರ್ಣವಾಗಿ ಕಲಿಯಬೇಕು . ಅರ್ಧಂಬರ್ಧ ಕಲಿತರೆ ಹೀಗೆ ಅನಾಹುತವಾಗುತ್ತದೆ .ಮಹಾಭಾರತ ಯುದ್ಧದಲ್ಲಿ ದ್ರೋಣಾಚಾರರು ಪದ್ಮವ್ಯೂಹವನ್ನು ರಚಿಸಿ , ಯುದ್ಧಕ್ಕೆ ಆಹ್ವಾನಿಸುತ್ತಾರೆ . ಪದ್ಮವ್ಯೂಹವನ್ನು ಭೇದಿಸಲು ಕೃಷ್ಣಾರ್ಜುನರಿಗೆ ಮಾತ್ರ ಗೊತ್ತಿರುತ್ತದೆ . ಆದರೆ ಅವರು ಯುದ್ಧ ಮಾಡುತ್ತಾ ಬಹಳ ದೂರದವರೆಗೆ ಹೋಗಿರುತ್ತಾರೆ . ಅಭಿಮನ್ಯುವಿಗೆ ಪದ್ಮವ್ಯೂಹವನ್ನು ಭೇದಿಸುತ್ತಾ ಒಳಗೆ ಹೋಗುವುದು ಗೊತ್ತಿರುತ್ತದೆ . ಸಂದರ್ಭದಲ್ಲಿ ಎಲ್ಲರೂ ಆದರೆ ಅದರಿಂದ ಹೊರಬರುವುದು ತಿಳಿದಿರಲಿ ಬಂದು ಧರ್ಮರಾಯನಲ್ಲಿ ಅರಿಕೆ ನನ್ನನ್ನು ಪದ್ಮವ್ಯೂಹ ಭೇದಿಸಲು ಕಳಿ ಶತ್ರುಗಳನ್ನು ಯಮಪುರಿಗೆ ಅಟ್ಟು * ಅಭಿಮನ್ಯುವು ಳ್ಳುತ್ತಾನೆ . ದೊಡ್ಡಪ್ಪ , ಆ ಮಹಾಯುದ್ಧದಲ್ಲಿ ಈ ಯುದ್ಧವನ್ನು ಗೆದ್ದು ಬರುತ್ತೇನೆ ಚಿಂತಿಸಬೇಡ , ನನ್ನನ್ನು ಕಳುಹಿಸು ಎಂದು ವಿಜ್ಞಾಪಿಸಿಕೊಳ್ಳುವನು . ಅದಕ್ಕೆ ಧರ್ಮರಾಯನು , ಅವನ ಮಾತು ಕೇಳಿ , ನಸುನಗುತ್ತಾ ಅವನನ್ನು ಬರಸೆಳೆದು ಅಪ್ಪಿಕೊಂಡು , ಅಂತಹ ಪೌರುಷ ನಿನಗುಂಟೆಂದು ನನಗೆ ಗೊತ್ತು , ಆದರೆ ನೀನಿನ್ನೂ ಮಗು , ಎದುರುಗಡೆ ಇರುವವರು ಮಾಜ ಸಮಬಲರು , ಅವರನ್ನು ನೀನು ಹೇಗೆ ತಡೆದು ಯುದ್ಧ ಮಾಡುವೆ ಎಂದಾಗ ಅಭಿಮನ್ಯುವು ಎದುರುಗಡೆ ಇರುವವರು ಮೃಗಜಲದಂತೆ ಭ್ರಮೆಯ ಅದರಲ್ಲಿ ದೋಣಿ ನಡೆಸಲು ಸಾಧ್ಯವೇ , ಮೋಸದ ಆಲೋಚನೆಗೆ ನಾನು ಹೆದರುವೆನೆ , ನನ್ನನೀಗಲೇ ಕಳುಹಿಸು ನೋಡು , ನಾನು ಗದೇ ಗೆಲ್ಲುತ್ತೇನೆ ಎಂದನು . ಧರ್ಮರಾಯನು ಕಂದಾ , ವೈರಿಗಳು ಪದ್ಮವ್ಯೂಹವನ್ನು ರಚಿಸಿದ್ದಾರೆ , ಅಲ್ಲಿರುವವರು ಅಸಾಧ್ಯರು , ಕೃಪ , ಅಶ್ವತ್ಥಾಮ , ಕರ್ಣ , ಜಯದ್ರಥ ಇನ್ನೂ ಮುಂತಾದ ಅತಿರಥ , ಮಹಾರಥರು ಅವರನ್ನು ಎದುರಿಸುವುದು ಸಾಮಾನ್ಯವಲ್ಲ ಎಂದಾಗ ಅಭಿಮನ್ಯುವು ಗಾಳಿಯು ಬೆವರುವುದುಂಟೆ , ಅಗ್ನಿಜ್ವಾಲೆ ಹಿಮಕ್ಕೆ ಅಂಜುವುದೇ ? ಸ್ಪರ್ಧಾತ್ಮಕವಾದ ಯುದ್ಧವಿದು , ನಾನು ಚಿಕ್ಕವನು ಹಿಂಜರಿಯದಿರಿ , ನಿಮ್ಮ ಕಣ್ಣುಗಳಿಗೆ ಔತಣವನ್ನು ವೈರಿಸೈನ್ಯವನ್ನು ಸೋಲಿಸಿ ಬರುವೆನು , ನನ್ನನ್ನು ಕಳುಹಿಸಿ ಎಂದಾಗ ಧರ್ಮರಾಯನು ಸರಿ , ಶತ್ರು ನಾನು ನಮ್ಮ ಸೈನ್ಯದ ಜೊತೆ ಅಭಿಮನ್ಯುವಿಗೆ ಹೋರಾಡಲು ಅವಕಾಶ ಕೊಡುತ್ತೇನೆ ಚಿಕ್ಕ ( ವನಾದರೂ ಶೂರ , ಧೀರ , ಯಾವ ಪ್ರದರ್ಶಿಸುತ್ತಾನೆ . ಎಂಬುದು ಗಮನಾರ್ಹವಾದುದು .
ಶಬ್ದಾರ್ಥ
- ಜನಪ = ರಾಜ ( ಧರ್ಮರಾಯ )
- ಅಂಫ್ರಿ = ಪಾದ
- ಮಣೆ = ನಮಸ್ಕರಿಸು
- ಬೆಸಸು = ಅಪ್ಪಣೆ ಮಾಡು
- ಬೊಪ್ಪ = ತಂದೆ ( ದೊಡ್ಡಪ )
- ಅಹವ = ಯುದ್ಧ
- ಅನುವರ = ಯುದ್ಧ
- ಕೃತಾಂತ = ಯಮ =
- ಅಹಿತರು = ಹಿತವಲ್ಲದವರು , ವೈರಿಗಳು
- ಕಾಳಗ = ಯುದ್ಧ
- ಹಸುಳೆ = ಮಗು
- ಅದಟು = ಪರಾಕ್ರಮ
- ಘನ = ದೊಡ್ಡ
- ಘನ = ಮಗು
- ಶಿಶು = ಯುದ್ಧ ಮಾಡುವರು
- ಕಾದುವರು = ಸರಿಸಮವಲ್ಲದ ಬಲ
- ಅಸಮಬಲ = ಬಾಣ ಪ್ರಯೋಗ
- ಎಸುಗೆ = ತಡೆದುಕೊಳ್ಳು
- ಸೈರಿಸು = ಸಮರ್ಥನಾಗ
- ತೊರೆ = ನದಿ
- ಮರೀಚಿ = ಮೃಗಜ
- ಹರುಗೋಲ=ನಾವೇ
- ಲೆಪ್ಪ = ವಿಗ್ರಹಗಳನ್ನು ಮಾಡಲು ಬಳಸುವ ಎರಕ
- ಉರಗ = ಹಾವು
- ಕುಮಂತ್ರ = ಮೋಸದ ಆಲೋಚನೆ
- ದಂಡು = ಸನ್ಯ
- ಅಂಜು = ಹೆದರು
- ಮುರಿಯುವುದು
- ವೆಗ್ಗಳ = ಅತಿಯಾಗಿ
- ಅಮ್ಮೆ = ಸಾಧ್ಯವಿಲ್ಲ
- ವೈರಿ = ಶತ್ರು
- ಅಸದ = ಅಸಾಧ್ಯ
- ಚಕ್ರವ್ಯೂಹ = ಸೈನ್ಯವನ್ನು ಚಕ್ರದೋಪಾದಿಯಲ್ಲಿ ನಿಲ್ಲಿಸುವುದು
- ಇಂದುಧರ = ಶಿವ ಅಡ್ಡ
- ಹಾಯ್ದರು = ಮೇಲೆ ಬಿದ್ದರು
- ಬೆಮರು = ಬೆವರು
- ವಹ್ನಿಜ್ವಾಲೆ = ಬೆಂಕಿಯ ಜ್ವಾಲೆ
- ಹಿಮ = ಮಂಜಿನ ಹನಿ
- ಅಂಜು = ಹೆದರು
- ಮಂಜು = ಇಬ್ಬನಿ
- ದುಗುಡ = ಚಿಂತೆ
- ನಿಮ್ಮಡಿ ಆಲಿ = ನಿಮ್ಮ ಕಣ್ಣು
- ಔತಣ = ವಿಶೇಷ ಭೋಜನ
- ಇಳ್ಳು = ಬಡಿಸು
- ಒರಸಿ = ನಾಶಮಾಡಿ
- ರಿಪುಬಲ = ವೈರಿಸೈನ
- ಅರಿಬಲ =ವೈರಿಸೈನ್ಯ
- ಖಂಡಿಗಳ = ನಾಶಪಡಿಸು
- ಮೋಹರ = ಸೈನ್ಯ
- ನೇಮ = ಅಪ್ಪಣೆ
ಅಭ್ಯಾಸ ಪ್ರಶ್ನೆಗಳು
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಧರ್ಮರಾಯನಿಗೆ ನಮಸ್ಕರಿಸಿದ ಅಭಿಮನ್ಯು ಹೇಳುವುದೇನು ?
ಉತ್ತರ: ಅಭಿಮನ್ಯು ಬಂದು ಧರ್ಮರಾಯನಿಗೆ ನಮಸ್ಕರಿಸಿ ,ನನ್ನನ್ನು ಯುದ್ಧಕ್ಕೆ ಕಳುಹಿಸು ದೊಡ್ಡಪ್ಪ , ಪದ್ಮವ್ಯೂಹದೊಳಗೆ ಹೋಗಲು ನನಗೆ ಗೊತ್ತು , ಶತ್ರುಗಳನ್ನೆಲ್ಲಾ ಯಮಪುರಿಗೆ ಯುದ್ಧಕ್ಕೆ ಕಳುಹಿಸು ಯುದ್ಧವನ್ನು ಗೆದ್ದು ಬರುತ್ತೇನೆ ಎಂದು ಹೇಳುತ್ತಾನೆ.
2. ಅಭಿಮನ್ಯುವಿನ ಮಾತನ್ನು ಕೇಳಿ ಧರ್ಮರಾಯ ಏನು ಹೇಳುತ್ತಾನೆ ?
ಉತ್ತರ : ಅಭಿಮನ್ಯುವಿನ ಮಾತನ್ನು ನಗುತ್ತಾ ಅಭಿಮನ್ಯುನನ್ನು ಕೇಳಿದ ಅಭಿಮನ್ಯುವನ್ನು ಧರ್ಮರಾಯನು ಪ್ರೀತಿಯಿಂದ ಬಿಗಿದಪ್ಪಿ ಕಂದಾ , ನೀನಿನ್ನೂ ಚಿಕ್ಕವನು , ನಿನಗೆ ಪೌರುಷವುಂಟು ಆದರೆ , ಶತ್ರು ಸೈನ್ಯದಲ್ಲಿರುವವರು ಅಸಮಬಲರು , ಯುದ್ಧದಲ್ಲಿ ಅತಿರಥ ಮಹಾರಥರು , ಅವರನ್ನು ನೀನು ಹೇಗೆ ಎದುರಿಸುತ್ತೀಯಾ ಎಂದು ಕೇಳುತ್ತಾನೆ .
3. ಧರ್ಮರಾಯನ ಮಾತಿಗೆ ಅಭಿಮನ್ಯು ಕೊಡುವ ಉತ್ತರವೇನು ?
ಉತ್ತರ : ಧರ್ಮರಾಯನ ಮಾತಿಗೆ ಅಭಿಮನ್ಯುವು ಅವರೆಲ್ಲಾ ಮೃಗಜಲದಂತೆ , ಅದರಲ್ಲಿ ದೋಣಿಯನ್ನು ನಡೆಸಲು ಸಾಧ್ಯವೇ , ಲೆಪ್ಪದುರುಗನ ಹಿಡಿಯಲು ಗರುಡ ಮಂತ್ರ ಬೇಕೆ , ಮೋಸದ ಆಲೋಚನೆಯಿಂದ ಮಾಡಿದ ಈ ವ್ಯೂಹಕ್ಕೆ ನನ್ನನ್ನು ಒಮ್ಮೆ ಕಳುಹಿಸಿ ನೋಡು , ನಾನು ಯುದ್ಧವನ್ನು ಗೆದ್ದು ಬರುತ್ತೇನೆ ಎಂದನು .
ಆ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ಲೆಪ್ಪದುರುಗನ ಹಿಡಿಯಲೇತಕೆ ಗರುಡಮಂತ್ರವು ಎಂದರೇನು ?
ಎರಕದಿಂದ ಮಾಡಿದ ಹಾವನ್ನು ಹಿಡಿಯಲು ಗರುಡ ಮಂತ್ರದ ಅವಶ್ಯಕತೆ ಇದೆಯೇ ? ಎಂದರ್ಥ.
2. ನಿಮ್ಮ ಆಲಿಗಳಿಗೆ ಏನು ಇಕ್ಕುವೆ ಎಂದು ಅಭಿಮನ್ಯು ಹೇಳುತ್ತಾನೆ ?
ಉತ್ತರ : ನಿಮ್ಮ ಕಣ್ಣುಗಳಿಗೆ ಶತ್ರುಗಳನ್ನು ಸಾಯಿಸಿ ಔತಣವನ್ನು ನೀಡುವೆ ಎಂದು ಅಭಿಮನ್ಯುವು ಹೇಳುತ್ತಾನೆ .
3. ವೈರಿವ್ಯೂಹದೊಳಗೆ ಇರುವ ವೀರರು ಯಾರು ?
ಉತ್ತರ : ವೈರಿವ್ಯೂಹದೊಳಗೆ ಕೃಪ , ಗುರುನಂದನನಾದ ಅಶ್ವತ್ಥಾಮ ,ಕರ್ಣ , ಭೂರಿಶ್ರವ ಮತ್ತು ಜಯದ್ರಥರು ಇರುವರು .
ಇ. ಕೆಳಗಿನ ವಾಕ್ಯಗಳನ್ನು ಯಾರು , ಯಾರಿಗೆ ಹೇಳಿದರು ತಿಳಿಸಿ,
1. ಶಿಶುವು ನೀನೆಲೆ ಮಗನೆ ಕಾದುವರಸಮಬಲರು ಕಣಾ !
ಉತ್ತರ : ಈ ಮಾತನ್ನು ಧರ್ಮರಾಯನು ಅಭಿಮನ್ಯು ಹೇಳಿದನು .
2. ಕೊಡನ ಮಗನ ಕುಮಂತ್ರದೊಡ್ಡಿನ ಕಡಿತಕಾನಂಜುವೆನೆ ?
ಉತ್ತರ : ಈ ಮಾತನ್ನು ಅಭಿಮನ್ಯು ಧರ್ಮರಾಯನಿಗೆ ಹೇಳಿದನು .
3 . ನೀಗೆಲುವಂದವೆಂತೈ ಸಮರವಿದು ಸಾಮಾನ್ಯವಲ್ಲೆಂದ.
ಉತ್ತರ : ಈ ಮಾತನ್ನು ಧರ್ಮರಾಯನು ಅಭಿಮನ್ಯುವಿಗೆ ಹೇಳಿದನು .
4 . ಬಾಲನಿವನೆನ್ನದಿರು ದುಗುಡವ ತಾಳಲಾಗದು ಬೊಪ್ಪ
ಉತ್ತರ : ಈ ಮಾತನ್ನು ಅಭಿಮನ್ಯುವು ಧರ್ಮರಾಯನಿಗೆ ಹೇಳಿದನು .
ಈ ‘ ಅ ‘ ಪಟ್ಟಿಯಲ್ಲಿನ ಪದಗಳಿಗೆ ‘ ಆ ‘ ಪಟ್ಟಿಯಲ್ಲಿ ಅರ್ಥ ನೀಡಲಾಗಿದೆ . ಪಟ್ಟಿಗಳ ಪದಗಳನ್ನು ಹೊಂದಿಸಿ ಬರೆಯಿರಿ :
ಅ ಪಟ್ಟಿ ಆ ಪಟ್ಟಿ
೧. ಅದಟು ಅಪ್ಪಣೆ
೨. ಸೈರಿಸಲಾಪೆ ನಾಶಮಾಡು
೩. ಅಮ್ಮೆನು ಪರಾಕ್ರಮ
೪. ಅಸದಳ ಸಾಧ್ಯವಾಗುವುದಿಲ್ಲ
೫. ಖಂಡಿಗೆಳೆ ಅಸಾಧ್ಯ
೬. ನೇಮ ತಡೆದುಕೊಳ್ಳಲು ಸಾಧ್ಯ
ಉತ್ತರ :
ಪರಾಕ್ರಮ
ತಡೆದುಕೊಳ್ಳಲು ಸಾಧ್ಯ
ಸಾಧ್ಯವಾಗುವುದಿಲ್ಲ
ಅಸಾಧ್ಯ
ನಾಶಮಾಡು
ಅಪ್ಪಣೆ
ಉ . ಈ ಕಾವ್ಯವನ್ನು ಹೊಸಗನ್ನಡಕ್ಕೆ ಪರಿವರ್ತಿಸಿ , ಭಾಷೆಯಲ್ಲಾದ ಬದಲಾವಣೆಗಳನ್ನು ಗುರುತಿಸಿ :
( ಅಭಿಮನ್ಯು ) ಜನಪನ ಅಂಫ್ರಿಗೆ ಮಣಿದು , ಕೈ ಮುಗಿದು , ” ಬೆಸ ಬೊಪ್ಪ , ಮಹಾ ಆಹವದ ಒಳಗೆ ಪದ್ಮವ್ಯೂಹ ಭೇದನವ ತಾ ಬಲ್ಲೆನು , ಅನುವರವ ಗೆಲುವೆನು , ಅಹಿತರನು ಕೃತಾಂತನ ಮನೆಗೆ ಕಳುಹುವೆನು , ನೀನ್ ಇನಿತುಚಿಂತಿಸಲೇಕೆ ಕಾಳಗಕೆ ಎನ್ನ ಕಳುಹು ” ಎಂದ .
ಅಭಿಮನ್ಯುವು ಧರ್ಮರಾಯನ ಪಾದಕ್ಕೆ ನಮಸ್ಕರಿಸಿ , ಕೈ ಮುಗಿದು , “ ನನಗೆ ಅಪ್ಪಣೆ ಮಾಡಿ ದೊಡ್ಡಪ್ಪ , ಈ ಯುದ್ಧದ ಪದ್ಮವ್ಯೂಹವನ್ನು ಭೇದಿಸುವುದು ನನಗೆ ತಿಳಿದಿದೆ , ಯುದ್ಧವನ್ನು ಗೆಲ್ಲುವೆನು , ಶತ್ರುಗಳನ್ನು ಯಮನ ಮನೆಗೆ ಕಳಿಸುವೆನು , ನೀನು ಚಿಂತಿಸಬೇಡ , ನನ್ನನ್ನು ಯುದ್ಧಕ್ಕೆ ಕಳುಹಿಸು ಎಂದನು .
ಭಾಷಾ ಚಟುವಟಿಕೆ
1. ವಿಪಯವನ್ನು ಮನಸ್ಸಿಗೆ ನಾಟುವಂತೆ ಮಾಡಲು ಅದೇ ರೀತಿಯ ಮತ್ತೊಂದು ವಿಷಯದ ಮೂಲಕ ಹೇಳುವುದನ್ನು ರೂಪಕ ಎನ್ನುತ್ತಾರೆ . ಅಭಿಮನ್ಯು ಧರ್ಮ ಪರಾಕ್ರಮ ಸಾಹಸಗಳನ್ನು ತಿಳಿಸಲು ಬಳಸುವ ರೂಪಕಗಳನ್ನು ಕೆಳಗೆ ನೀಡಲಾಗಿದೆ.ಇವುಗಳನ್ನುಅರ್ಥಮಾಡಿಕೊಂಡು ವಿವರಿಸಿರಿ.
1 . ಮರೀಚಿಯ ತೊರೆಗೆ ಹರುಗೋಲಿಡುವರುಂಟೇ
ಉತ್ತರ : ಮೃಗಜಲದ ಅಥವಾ ಮರೀಚಿಕೆಯ ನದಿಯಲ್ಲಿ ದೋಣಿಯನ್ನು ನಡೆಸಲು ಸಾಧ್ಯವೇ ?.
2 . ಲೆಪ್ಪದುರುಗನ ಹಿಡಿಯಲೇತಕೆ ಗರುಡಮಂತ್ರವು
ಉತ್ತರ : ಲೋಹದ ( ಎರಕದ ) ಹಾವನ್ನು ಹಿಡಿಯಲು ಗರುಡ ಮಂತ್ರವು ಏಕೆ ?
3 . ಗಾಳಿಬೆವರುವುದುಂಟೆ
ಉತ್ತರ : ಗಾಳಿ ಬೆವರುವುದುಂಟೆ
4 . ವಹ್ನಿಜ್ವಾಲೆ ಹಿಮಕಂಜುವುದೆ
ಉತ್ತರ : ಅಗ್ನಿಜ್ವಾಲೆ ( ಹಿಮ ) ಮಂಜಿಗೆ ಹೆದರುವುದೆ ?
5. ಮಂಜಿನ ಮೇಲುಗಾಳಗವುಂಟೆಲು ಬೇಸಗೆಯ ಬಿಸಿಲೊಳಗೆ
ಉತ್ತರ : ಕಡು ಬೇಸಿಗೆಯ ಬಿಸಿಲೊಳಗೆ ಮಂಜಿನ ಸ್ಪರ್ಧಾತ್ಮಕವಾದ ಯುದ್ಧ ನಡೆಯುವುದುಂಟೆ ? ಭೇದನ ಅನುವರ ಕೃತಿ ತಾಂತ ಅಹಿತುರ : ಕಾಳಗ ಛಂದಸ್ಸು ಅಭ್ಯಾಸ
FAQ :
ಉತ್ತರ : ವೈರಿವ್ಯೂಹದೊಳಗೆ ಕೃಪ , ಗುರುನಂದನನಾದ ಅಶ್ವತ್ಥಾಮ ,ಕರ್ಣ , ಭೂರಿಶ್ರವ ಮತ್ತು ಜಯದ್ರಥರು ಇರುವರು .
ಉತ್ತರ: ಅಭಿಮನ್ಯು ಬಂದು ಧರ್ಮರಾಯನಿಗೆ ನಮಸ್ಕರಿಸಿ ,ನನ್ನನ್ನು ಯುದ್ಧಕ್ಕೆ ಕಳುಹಿಸು ದೊಡ್ಡಪ್ಪ , ಪದ್ಮವ್ಯೂಹದೊಳಗೆ ಹೋಗಲು ನನಗೆ ಗೊತ್ತು , ಶತ್ರುಗಳನ್ನೆಲ್ಲಾ ಯಮಪುರಿಗೆ ಯುದ್ಧಕ್ಕೆ ಕಳುಹಿಸು ಯುದ್ಧವನ್ನು ಗೆದ್ದು ಬರುತ್ತೇನೆ ಎಂದು ಹೇಳುತ್ತಾನೆ.
ಎರಕದಿಂದ ಮಾಡಿದ ಹಾವನ್ನು ಹಿಡಿಯಲು ಗರುಡ ಮಂತ್ರದ ಅವಶ್ಯಕತೆ ಇದೆಯೇ ? ಎಂದರ್ಥ.
ಇತರೆ ವಿಷಯಗಳು :
7th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.