7th Standard Bidugadeya Haadu Kannada Notes | 7ನೇ ತರಗತಿ ಬಿಡುಗಡೆಯ ಹಾಡು ಕನ್ನಡ ನೋಟ್ಸ್

7ನೇ ತರಗತಿ ಬಿಡುಗಡೆಯ ಹಾಡು ಪದ್ಯದ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು Pdf, 7th Standard Bidugadeya Haadu Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Poem 6 Notes 7th Class Kannada 6th Poem Notes 7th Class Bidugadeya Haadu Kannada Question Answer Pdf

ಅ ) ಕೊಟ್ಟಿರುವ ಒಂದು ವಾಕ್ಯದಲ್ಲಿ ಉತ್ತರಿಸಿ . 

1. ಪಂಜರದ ಹಕ್ಕಿ ಯಾವುದರ ಸಂಕೇತವಾಗಿದೆ ? 

ಉತ್ತರ : ಪಂಜರದ ಹಕ್ಕಿ ಭಾರತೀಯರ ( ಬಂಧನದಲ್ಲಿರುವವರ ) ಸಂಕೇತವಾಗಿದೆ . 

2. ಹಂಗಿನ ಅರಮನೆಯಲ್ಲಿ ಹಕ್ಕಿ ಹೇಗೆ ನರಳುತ್ತಿದೆ ?

ಉತ್ತರ : ಹಂಗಿನರಮನೆಯಲ್ಲಿ ರೆಕ್ಕೆಗಳ ಬಿಗಿ ಹಿಡಿದು ನರಳುತ್ತಿದೆ .  

3. ಮೃಗರಾಜ ಏನೆಂದು ಗೊಣಗುತ್ತಿದೆ ?  

ಉತ್ತರ : ಮೃಗರಾಜ ಇನ್ನು ಈ ಬಂಧನ ಸಾಕು ಎಂದು ಗೊಣಗುತ್ತಿದೆ . 

4. ಯಾವುದು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ ? 

ಉತ್ತರ : ಕಾರಿರುಳು ತನ್ನ ಸೆರೆಯೊಳಗೆ ರವಿಕಿರಣಗಳನ್ನು ಅಡಗಿಸಿಟ್ಟುಕೊಂಡಿದೆ . 

5. ನಮ್ಮ ಗುಡಿಯು ( ಬಾವುಟ ) ಎಷ್ಟು ಬಣ್ಣಗಳನ್ನು ಹೊಂದಿದೆ ? 

ಉತ್ತರ : ನಮ್ಮ ಬಾವುಟವು ಮೂರು ಬಣ್ಣಗಳನ್ನು ಹೊಂದಿದೆ . 

ಆ. ಕೊಟ್ಟಿರುವ ಎರಡು – ಮೂರು ವಾಕ್ಯಗಳಲ್ಲಿ

1. ಪಂಜರದಲ್ಲಿ ನರಳುತ್ತಿರುವ ಹಕ್ಕಿ ಹರ್ಷದಲ್ಲಿ ವಿಹರಿಸಲು ಏನು ಮಾಡಬೇಕು ?

 ಉತ್ತರ : ಪಂಜರದಲ್ಲಿ ನರಳುತ್ತಿರುವ ಹಕ್ಕಿ  ಪಂಜರದ ಬಾಗಿಲನ್ನು ಮುರಿದು ಹೆಣೆದ ಬಂಧನದಿಂದ ಮುಕ್ತಿ ಹೊಂದುತ್ತದೆ . ಬಾನಾಡಿಯಾಗಿ ( ಪಕ್ಷಿಯಾಗಿ ) ಆಕಾಶದಲ್ಲಿ
ವಿಹರಿಸುತ್ತಾ ಹರ್ಪಿಸಲಿ ಎಂದು ಕವಿ ಹಾರೈಸುತ್ತಾರೆ . 

2. ತಿಳಿನೀರ ಮಳೆ ಏಕೆ ಸುರಿಯಬೇಕು ?

 ಉತ್ತರ : ಕಾರಿರುಳಿನಿಂದ ಜಡಗೊಂಡ ಮೈ ಹಾಗೂ ಮನಸ್ಸುಗಳು ತನ್ನ ಮಲಿನತೆಯನ್ನು ಕಳೆದುಕೊಳ್ಳಲು ತಿಳಿನೀರ ಮಳೆ ಸುರಿಯಬೇಕು . ಈ ರೀತಿ ಸುರಿದ ಮಳೆಯಿಂದ ಕೊಳಕು ಮಾಯವಾಗುತ್ತದೆ . ಒಳ ಹೊರಗೆ ಶುಚಿಯಾಗಬೇಕಾದರೆ ತಿಳಿ ನೀರ ಮಳೆ ಸುರಿಯಬೇಕಾಗುತ್ತದೆ .

3. ಕಡಲುಗಳ ರಾಣಿಗೆ ಇನ್ನು ಉಳಿಗಾಲವಿಲ್ಲವೇಕೆ ? 

ಉತ್ತರ : ಶತ ಶತಮಾನಗಳಿಂದ ಮೆರೆದ ಕಡಲುಗಳ ರಾಣಿಗೆ ಇನ್ನು ಮುಂದೆ ಉಳಿಗಾಲವಿಲ್ಲ ಏಕೆಂದರೆ ಭಾರತೀಯರಲ್ಲಿ ಇಂದು ಐಕ್ಯತೆಯಿದೆ . ಅವರೆಲ್ಲ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಿಡಿಲ ಹೋರಾಟ ಮಾಡುತ್ತಿದ್ದಾರೆ . ಅದೂ ತಾಯಿ ಭಾರತೀಯ ಮೇಲೆ ಆಣೆ ಹಾಕಿ & ಬ್ರಿಟಿಷರನ್ನು ನಮ್ಮ ದೇಶದಿಂದ ತೊಲಗಿಸಿ ಧೈಯದಿಂದ ಹೋರಾಡುತ್ತಿರುವುದರಿಂದ ಕಡಲ ರಾಣಿಗೆ ಉಳಿಗಾಲವಿಲ್ಲ . 

4. ಕವಿ ಒಕ್ಕೊರಲ ಹಾಡನ್ನು ಹೇಗೆ ಹಾಡಬೇಕೆಂದು ಕವಿ ಬಯಸುತ್ತಾನೆ ?

ಉತ್ತರ : ಜಾತಿ ಮನೋವುಗಳ ಬೇಧವಿಲ್ಲದೆ ನಾವೆಲ್ಲಾ ಒಂದೇ ಎಂಬ ಮನೋಭಾವದಿಂದ ಮನುಜಮತವನ್ನು ಎತ್ತಿ ಹಿಡಿದಿದ್ದೇವೆ . ನಮ್ಮ ಮೂರು ಬಣ್ಣದ ಬಾವುಟವನ್ನು ಹಾರಿಸುತ್ತಾ ಸರ್ವರಿಗೂ ನಾವು ಸಮ ಎಂದು ಮನದುಂಬಿ ದನಿಯೆತ್ತಿ ಒಕ್ಕೊರಲ ಹಾಡನ್ನು ಹಾಡಬೇಕು ಎಂದು ಕವಿ ಬಯಸುತ್ತಾರೆ . 

ಇ ) ಖಾಲಿ ಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ 

೧. ಚಡಪಡಿಸುತಿದೆ __________ ಹಾದಿ ಹುಡುಕಿ.
೨. ಸೆರೆಯಿಂದ ನಾ __________ ಸದರೇರಬೇಕು.
೩. ಇನ್ನೆಲ್ಲ ನೀನೇಳು _______ ರಾಣಿ.
೪. ಹಾಡುವೆವು ಬಿಡುಗಡೆಯ ________ ಹಾಡು.

 ಉತ್ತರಗಳು :

 1 ) ಮುನ್ನಡೆವ

 2 ) ಜಿಗಿದು 

3 ) ಕಡಲುಗಳ

 4 ) ಒಕ್ಕೊರಲ 

ಭಾಷಾ ಚಟುವಟಿಕೆ 

ಅ . ಸೂಚನೆಗಳನ್ನು ಗಮನಿಸಿ

1. ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ಪಟ್ಟಿ ಮಾಡಿರಿ . 

ಉತ್ತರ : ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖರು ಪ್ರಮುಖರ ಹೆಸರುಗಳನ್ನು ಶಾಸಿ , ಜವಹರಲಾಲ್ ನೆಹರೂ , ಲಾಲ್‌ಬಹದ್ದೂರ್ ಶಾಸ್ತ್ರಿ , ಸರ್ದಾರ್ ವಲ್ಲಬಾಯಿ ಪಟೇಲ್ , ಸುಭಾಷ್ ಚಂದ್ರ ಬೋಸ್ ಈ ರೀತಿ ಸಾವಿರಾರು ಜನರಿದ್ದಾರೆ.

ಆ. ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ 

  1. ಸೆರೆಯಿಂದ = ಸೆರೆ + ಇಂದ = ‘ ಯ ‘ 
  2. ಉಳಿಗಾಲ = ಉಳಿ + ಕಾಲ = ಆದೇಶಸಂಧಿ 
  3. ‘ ಹತ್ತಡಿಯ = ಹತ್ತು + ಅಡಿಯ = ಲೋಪಸಂಧಿ
  4. ಮನದುಂಬಿ = ಮನ + ತುಂಬಿ = ದೇಶಸಂಧಿ 

ಇ. ಈ ಕೆಳಗಿನ ಪದಗಳಿಗೆ  ತತ್ಸಮ- ತತ್ಬವ ಬರೆಯಿರಿ,

  1. ಮೃತ = ಮಿಗ . 
  2. ರಾಜ = ರಾಯ 
  3. ಬಣ್ಣ = ವರ್ಣ
  4. ಪ್ರಾಣ = ಹರಣ 
  5. ವಸನ = ಬೆಸನ
  6. ಹಕ್ಕಿ = ಪಕ್ಷಿ ತದ್ಭವ ಪದಗಳನ್ನು 

ಈ. ಈ ಕೆಳಗಿನ ವಾಕ್ಯಗಳನ್ನು ವೇಗವಾಗಿ ಓದುವುದನ್ನು ಅಭ್ಯಾಸ ಮಾಡಿ. 

  1. ಗಿಡ ತಳಿರೊಡೆದೆರಡೆಲೆಯಾಯ್ತು .

ಕೃತಿಕಾರರ ಪರಿಚಯ : – 

ಮುದೇನೂರು ಸಂಗಣ್ಣ :

ಸಂಗಣ್ಣನವರು ಬಳ್ಳಾರಿ ಜಿಲ್ಲೆಗೆ ಸೇರಿದ ಹರಪ್ಪನಹಳ್ಳಿ ತಾಲೂಕಿನ ಚಿಗಟೇರಿಯಲ್ಲಿ ದೊಡ್ಡ ವ್ಯಾಪಾರಿ ಜಮೀನ್ದಾರಿ ಕುಟುಂಬದಲ್ಲಿ ಸಂಗೀತ ನಾಟಕದಲ್ಲಿ ಬಹಳ . 17 ನೇ ಮಾರ್ಚ್ 1927 ರಲ್ಲಿ ಜನಿಸಿದರು . ಬಾಲ್ಯದಿಂದಲೂ ಆಸಕ್ತಿ ಇವರಿಗೆ ಶಿವರಾಮಕಾರಂತ , ಗೆಳೆತನವಿತ್ತು . ವ್ಯವಸಾಯ , ಮಾಡಿದ್ದಾರೆ . ಇವರ ಪ್ರಮುಖ ಬಾಳ ಭಿಕ್ಷುಕ , ಚಿತ್ರಪಟ , ರಾಮಾಯಣ ‘ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ . ಕೆ.ವಿ.ಸುಬ್ಬಣ್ಣನವರ ಜೊತೆ ಕೃಷಿಯ ಜೊತೆ ಸಾಹಿತ್ಯ ಕೃಷಿಯನ್ನು ಕೃತಿಗಳು ‘ ನವಿಲು ಕುಣಿದಾವ , ಮಾಡಿದ್ದರು . ಜನಪದ ಮುಕ್ತಕಗಳು , ಆ ಅಜ್ಜ ಈ ಮೊಮ್ಮಗ , ಗೊಂದಲಿಗ ದೇವೇಂದ್ರಪ್ಪನ ಹಾಡುಗಳು , ಚಿಗಟೇರಿ ಪದಕೋಶ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ನಾಡೋಜ ಪ್ರಶಸ್ತಿ , ಕರ್ನಾಟಕಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ.

ಮುಖ್ಯಾಂಶಗಳು :

ಈ ಪದ್ಯದಲ್ಲಿ ಸ್ವಾತಂತ್ರ್ಯ ಎಷ್ಟೊಂದು ಮುಖ್ಯ ಇದು ಮನುಷ್ಯರಿಗೆ ಮಾತ್ರವಲ್ಯ ಪ್ರಾಣಿ ಪಕ್ಷಿಗಳಿಗೂ ಅವಶ್ಯಕ ಎಂಬುದನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ . ನಮ್ಮ ದೇಶ ಭಾರತವನ್ನು ” ಕಡಲುಗಳ ರಾಣಿ ‘ ಎನಿಸಿದ ಇಂಗ್ಲೆಂಡ್ , ಪಡೆಯ ( ಆ ಟಿಪ್ ) ಹೇಗೆ ಆಳಿದರು , ಅವರಿಂದ ಸ್ವತಂತ್ರ ಹೋರಾಟ ಮಾಡಬೇಕಾಯಿತು ಎಂಬುದು ಎಲ್ಲರಿಗೂ ತಿಳಿದ ಸಂಗತಿ . ಭಾರತೀಯರ ಐಕ್ಯತೆಯ ಮಂತ್ರದಿಂದಲೇ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು ಎಂಬುದನ್ನು ಈ ಪದ್ಯದ ಮೂಲಕ ಒತ್ತಿ ಹೇಳುತ್ತಿದ್ದಾರೆ .ರುದ್ರರು , ನಮ್ಮ ತಾಯಿ ಭಾರತೀಯ ಆಣೆ ನಾವು ನಿನ್ನನ್ನು ಬಿಡುವುದಿಲ್ಲ . ಇಲ್ಲಿಂದ ನೀನು ತೊಲಗಲೇಬೇಕು , ಹೋಗು ಹೊರಟು ಹೋಗು ಎಂದು ಬೊಬ್ಬಿಡುತ್ತಿದ್ದಾರೆ . ಜಾತಿ , ಮತ , ಪಂಥ ಎಂದು ಬೇಧವೆಣಿಸಿದೆ ನಾವೆಲ್ಲರ ಮನುಜಮತ ದ ವರು ಎಂದು ತೋರಿಸಿಕೊಡುತ್ತೇವೆ . ನಮ್ಮ ಮೂರು ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ . ನಾವು ಎಲ್ಲರಿಗೂ ನಾವೆಲ್ಲರೂ ಒಂದೇ ಎಂದು ಐಕ್ಯತೆಯಿಂದ ಮನಸ ದನಿಯೆತ್ತಿ ಹಾಡುತ್ತೇವೆ . ಇದು ನಮ್ಮ ಬಿಡುಗಡೆಯ ಹಾಡು . ಸರ್ವತಂತ್ರ ಸ್ವತಂತ್ರರು ಎಂದು ಆ ಹಾಡುತ್ತಿದ್ದಾರೆ.

ಪದಗಳ ಅರ್ಥ : 

  • ಹಂಗು – ಋಣ ,
  •  ಪಂಜರ – ಪಕ್ಷಿಗಳ ಬೋನು 
  • ಬಾನಾಡಿ – ಪಕ್ಷಿ 
  • ವಿಹರಿಸು ಸಂಚರಿಸು 
  • ಹರ್ಷ – ಹಿಗ್ಗು , ಸಂತೋಷ 
  • ಸೊಕ್ಕಿ – ಗರ್ವ , ಜಂಭ
  • ಕೊಳೆಗೊಂಡು – ಮಾಲಿನ್ಯಗೊಂಡು , ತೃಪ್ತಿಗೊಂಡು 
  • ತಣಿಸು – ತಂಪಾಗಿಸು , ತೃಪ್ತಿಗೊಳಿಸು 
  • ವಸನ – ವಸ್ತ್ರ , ಬಟ್ಟೆ 
  • ಹದ್ದು – ಎಲ್ಲೆ , ಗಡಿ
  • ಕನಲು – ಕೋಪಗೊಳ್ಳು , ಸಿಟ್ಟಾಗು 
  • ಕೆಂಗಿಡಿ – ಉರಿಬೆಂಕಿ , 
  • ಕೆಂಪಾದ ಬೆಂಕಿ
  •  ಸದರೇರು – ಅಂಗಳ ಸೇರು , ಬಂದಮುಕ್ತವಾಗು 
  • ಸೆರೆ – ಬಂಧನ 
  • ಅಡಗು – ಕಾಣದಂತಾಗು 
  • ಕಾರಿರುಳು – ದಟ್ಟವಾದ ಕತ್ತಲೆ
  • ಪಣ – ಒತ್ತೆ ಇಡು 
  • ತೊಲಗು – ಬಿಟ್ಟು ಹೋಗು , ಹೊರಟುಹೋಗು 
  • ಗುಡಿ – ಬಾವುಟ , ಕೇತನ
  • ಒಕ್ಕೊರಲು – ಒಗ್ಗಟ್ಟು , ಒಂದೇ ಧ್ವನಿಯಾಗು

FAQ :

ಪಂಜರದ ಹಕ್ಕಿ ಯಾವುದರ ಸಂಕೇತವಾಗಿದೆ ? 

ಉತ್ತರ : ಪಂಜರದ ಹಕ್ಕಿ ಭಾರತೀಯರ ( ಬಂಧನದಲ್ಲಿರುವವರ ) ಸಂಕೇತವಾಗಿದೆ . 

ಮೃಗರಾಜ ಏನೆಂದು ಗೊಣಗುತ್ತಿದೆ ?  

ಉತ್ತರ : ಮೃಗರಾಜ ಇನ್ನು ಈ ಬಂಧನ ಸಾಕು ಎಂದು ಗೊಣಗುತ್ತಿದೆ . 

ಯಾವುದು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ ? 

ಉತ್ತರ : ಕಾರಿರುಳು ತನ್ನ ಸೆರೆಯೊಳಗೆ ರವಿಕಿರಣಗಳನ್ನು ಅಡಗಿಸಿಟ್ಟುಕೊಂಡಿದೆ . 

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh