7th Standard Hacchevu Kannadada Deepa Notes | 7ನೇ ತರಗತಿ ಹಚ್ಚೇವು ಕನ್ನಡದ ದೀಪ ಕನ್ನಡ ನೋಟ್ಸ್

7ನೇ ತರಗತಿ ಹಚ್ಚೇವು ಕನ್ನಡದ ದೀಪ ಪದ್ಯದ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 7th Standard Hacchevu Kannadada Deepa Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada 7th Class Kannada 5th Poem Notes

ಕವಿ ಪರಿಚಯ :  

Contents hide

ಡಿ ಎಸ್ ಕರ್ಕಿಯವರು ರಚಿಸಿದ ಕವನ ಇದನ್ನು ಇವರ ‘ ನಕ್ಷತ್ರಗಾನ ‘ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ ಎಸ್ ಕರ್ಕಿಯವರು ಭಾವತೀರ್ಥ , ತನನತೋಂ ಗೀತಗೌರವ , ಕರಿಕೆ ಕಣಗಿಲು , ನಮನ , ಬಣ್ಣದಚೆಂಡು ಎಂಬ ಕವನ ಸಂಕಲನಗಳನ್ನು ಬರೆದಿದ್ದಾರೆ . ಗಡಿನಾಡನಲ್ಲಿದ್ದ ಇವರು ಅವರೆಲ್ಲರ ಪ್ರತಿನಿಧಿಯಾಗಿ ಏಕೀಕರಣದ ಕನಸ ಕಂಡವರು ಅದಕ್ಕಾಗಿಯೇ ಅನೇಕ ಕವನಗಳನ್ನು ಕಟ್ಟಿ ಜನರ ಮನದಲ್ಲಿ ಕೆಚ್ಚನ್ನು ಮೂಡಿಸಿದರು . 

ಆಶಯ :

ಕನ್ನಡ ನಾಡಿನ ನಾಡಿನವರ ಭಾಷೆ ಕನ್ನಡ ನಾಡಭಾಷೆಯಾದ ಕನ್ನಡ ಇಂದು ವಿವಿಧ ಕಾರಣಗಳಿಂದ ನಾಡಿನವರಿಂದ ದೂರವಾಗುತ್ತದೆ . ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ .

ಪಪಂಚದಲ್ಲಿಯೇ ಅತ್ಯಂತ ವೈಜ್ಞಾನಿಕವಾಗಿ ಜೋಡಿಸಲ್ಪಟ್ಟ ವರ್ಣಮಾಲೆಯನ್ನು ಹೊಂದಿರುವ ಹೆಗ್ಗಳಿಕೆ ನಮ್ಮದು . ಇಂತಹ ಸುಂದರ ಭಾಷೆಯನ್ನು ನಮ್ಮ ನಾಡಿನಲ್ಲಿ ಜೊತೆಗೆ ನಾಡಿನ ಹೊರಗೂ ಪಸರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಕಥೆ ಬರೆಯುವುದು ಸಾಮರ್ಥ್ಯ : ಕಥೆಗಳನ್ನು ನಾಟಕಗಳಾಗಿ ನಾಟಕಗಳನ್ನು ಕಥೆಗಳಾಗಿ ಪರಿವರ್ತಿಸುವ ಕವಿತೆಗಳಿಗೆ ಸಾರಾಂಶ ಬರೆಯುವ ಸೃಜನಾತ್ಮಕಥೆಯನ್ನು ಬೆಳೆಸುವುದು.

ಸಾರಾಂಶ :

Hacchevu Kannadada Deepa Poem Summary in Kannada

ಈ ಕವನ ಸಂಕಲನದಲ್ಲಿ ಕವಿ ಡಿ . ಎಸ್ ಕರ್ಕಿ ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡತನ ರ ಜಾಗೃತಿಗೊಳ್ಳಿ ಎಲ್ ಶಿಸುವ ಕಾರ್ಯವನ್ನು ಮಾಡುತ್ತಿದ್ದಾರೆ . ಕನ್ನಡದ , ಕನ್ನಡನುಡಿಯೆಂಬ ದೀಪವನ್ನು ಒಲವಿನಿಂದ ಹಳ್ಳೋಣ . ಬಹಳ ದಿನಗಳಿಂದ , ನಾಡುನುಡಿಯ ಬಗೆಗಿನ ಮರವಿನಿಂದಾಗಿ ಮೂಡಿರುವ ತಿರಸ್ಕಾರದ ಭಾವನೆಯನ್ನು ದೂರ ಮಾಡುತ್ತಾ ಕನ್ನಡದ ಕಂಪು ಎಲ್ಲೆ ಸೂಸಲಿ ಅಲ್ಲಿ ಭಾಗವಹಿಸುತ್ತಾ ಕನ್ನಡ ನಾಡಿನ ಯಾವುದೇ ಭಾಗದಲ್ಲೂ ಕನ್ನಡದ ಕಾಂತಿಯನ್ನು ಬೆಳಗೋಣ , ಹಳೆಯದನ್ನು ಮರೆತು , ಪ್ರಾಣವನೇ , ದೀಪವಾಗಿಸಿ ಒಲವಿನಿಂದ ಕನ್ನಡದ ದೀಪವನ್ನು ಹಚ್ಚೋಣ . 

7th Hacchevu Kannadada Deepa Saramsha in Kannada

ಬಹುದೂರದವರೆಗೆ ಕಾಣುವಂತೆ ದೀಪವನ್ನು ಹಚ್ಚಿ ಆ ಬೆಳಕಿನಲ್ಲಿ ಕನ್ನಡ ತಾಯಿಯ ರೂಪ ಚಿರವಾಗಿರುವಂತೆ ಮಾಡುವೆವು ಮನದಲ್ಲಿನ ಯಾವುದೇ ಭಾವನೆಗಳು ಗಡಿನಾಡಿನ ಆಚೆ ಹೋಗುವುದಿಲ್ಲ . ಪ್ರೀತಿಯಿರುವಾಗ ಭಯದ ಮಾತೆ ಇಲ್ಲ . ನಾಡಿನ ಪ್ರೀತಿಯನ್ನು ಮನೆ – ಮನೆ ಮನ – ಮನಗಳಲ್ಲಿ ಕನ್ನಡದ ಮೂಲಕ ಹತ್ತೋಣ ನಮ್ಮ ಹಿರಿಯರು ಶ್ರಮಿಸಿ ಗಳಿಸಿದ ,ಉಳಿಸಿದ ಹೆಸರನ್ನು ಬೆಳಗಲು ಒಂದುಗೂಡೋಣ . ನಮ್ಮೆಲ್ಲರ ಮನಸ್ಸುಗಳನ್ನು ಒಂದಾಗಿಸಿ ಕನ್ನಡ ಮಾತೆಯನ್ನು ಪೂಜಿಸೋಣ ನಮ್ಮ ಉಸಿರಲ್ಲಿ ಶಕ್ತಿ ತುಂಬಿ ಮಂಗಳ ಗೀತೆಯನ್ನು ಹಾಡೋಣ , ಹುಚ್ಚು ಭಾವನೆಗಳನ್ನು ಕಟ್ಟಿಟ್ಟು ಕೆಟ್ಟದ್ದನ್ನು ನಾಶಮಾಡುತ್ತಾ ಕನ್ನಡದ ಉನ್ನತಿಗೆ ಶ್ರಮಿಸೋಣ ಕನ್ನಡ ತಾಯಿಯ ಮಮತೆಯ ಒಡಲಿಗೆ ಮಿಂಚೆಂಬ ಒಗ್ಗಟ್ಟಿನ ದೀಪವನ್ನಿಟ್ಟು ಬೆಳಗೋಣ . 

Hacchevu Kannadada Deepa Question Answer

ಶಬ್ದಾರ್ಥ : 

  • ಹಚೇವು – ಹಚ್ಚುವೆವು 
  • ಕರುನಾಡು – ಕನ್ನಡನಾಡು
  • ಕೊಚೇವು – ಕತ್ತರಿಸುತ್ತೇವೆ 
  • ಸೂಸು – ಹರಡು , ಚಿಮುಕಿಸು
  •  ಕರಣ – ಒಡಲು 
  • ಶರೀರ – ಕಾಂತಿ , ತೇಜಸ್ಸು 
  • ಪಕಾಶ ಎರೆ – ಹೊಯ್ಯು 
  • ಹುರಿಗೊಳಿಸು – ಹಗ್ಗ ಮಾಡು , ಬಲಪಡಿಸು 
  • ಕೆಚ್ಚು – ಕೂಡುವಿಕೆ , ಬೆಸುಗೆ , ಸೇರಿಸು ; 
  • ಅಚ್ಚಳಿಯದೆ – ಅಂದಗೆಡದಂತೆ , ರೂಪುಗೆಡದಂತೆ ; 
  • ಒಂದುಗೂಡೇವು – ಒಂದಾಗಿ ಸೇರುತ್ತೇವೆ ;
  •  ನೀಡು . – ಬೀಸು , ಹೊರಹೊಮ್ಮು
  •  ಮಾಂಗಲ್ಯಗೀತೆ – ಮಂಗಳಕರವಾದ ಹಾಡ 
  • ಮರುಳು – ಹುಚ್ಚು – 
  • ಕಡೆ – ನಿವಾರಿಸು 
  • ಮೈಮರೆವು – ದೇಹದ ಅರಿವು ಇಲ್ಲವಾಗು , ಮೂರ್ಛ ;
  •  ಮಾತೆ – ತಾಯಿ , ಜನನಿ ; 
  • ಕೋಳ – ಹೊಲಸು ; 
  • ಕಂಪು – ಸುಂಗಂಧ , ಪರಿಮಳ 
  • ನಾಡು – ಜನವಸತಿಯುಳ್ಳ ಪ್ರದೇಶ , ರಾಜ್ಯ ,
  •  ಡೆಂಡೆ – ಗ್ರಹಿಸು , ಹಿಡಿದಿಟ್ಟುಕೊ ; 
  • ಹೊಸೆ – ಹುರಿ ಮಾಡು , ಹೆಣೆ ;
  •  ಹರಿವು – ಪವಹಿಸು , ಹರಿಯುವಿಕೆ ; 
  • ಬೀರು – ಹರಡು ; 
  • ಅಚ್ಚಳಿ – ಅಂದಕೆಡು ; 
  • ತೋರು – ಕಾಣುವಂತೆ ಮಾಡು ; 
  • ಒಡಲು – ಹೊಟ್ಟೆ 
  • ತೂರು – ಎಸೆ , ನೂಕು .

ಅಭ್ಯಾಸ

 ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ .

1. ಕನ್ನಡದ ಕಂಪನ್ನು ಸೂಸುವಲ್ಲಿ ಏನನ್ನು ಚಾಚುತ್ತೇವೆ ? 

ಉತ್ತರ : ಕನ್ನಡದ ಕಂಪನ್ನು ಸೂಸುವಲ್ಲಿ ನಮ್ಮ ದೇಹವನ್ನು ಚಾಚುತ್ತೇವೆ . 

2. ಕಲ್ಪನೆಯ ಕಣ್ಣು ಹರಿವ ತನಕ ಯಾವ ದೀಪಗಳನ್ನು ಹಚ್ಚುತ್ತೇವೆ ? 

ಉತ್ತರ : ಕಲ್ಪನೆಯ ಕಣ್ಣು ಹರಿವ ತನಕ ಸಾಲು  ದೀಪಗಳನ್ನು ಹಚ್ಚುತ್ತೇವೆ .

3. ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲರೂ ಏನು ಮಾಡಬೇಕು? 

ಉತ್ತರ : ನಮ್ಮವರು ಗಳಿಸಿದ ಹೆಸರುಳಿಸಲು ಕನ್ನಡಿಗರೆಲ್ಲರೂ ಒಂದುಗೂಡಿ ಕನ್ನಡ ಮಾತೆಯನ್ನು ಪೂಜಿಸಬೇಕು . 

4. ನಮ್ಮುಸಿರು ತೀಡುವ ನಾಡಿನಲ್ಲಿ ಯಾವ ಗೀತೆ ಹಾಡುತ್ತೇವೆ ? 

ಉತ್ತರ : ನಮ್ಮುಸಿರು ತೀಡುವ ನಾಡಿನಲ್ಲಿ ಮಂಗಳದ ಗೀತೆಯನ್ನು ಹಾಡುತ್ತೇವೆ .

5. ಕರುಳೆಂಬ ಕುಡಿಗೆ ಏನನ್ನು ಮುಡಿಸುತ್ತೇವೆ ? 

ಉತ್ತರ : ಕರುಳೆಂಬ ಕುಡಿಗೆ ಮಿಂಚನ್ನು ಮುಡಿಸುತ್ತೇವೆ .

7th Standard Kannada Hacchevu Kannadada Deepa Notes

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ .

1 . ಕನ್ನಡಿಗರು ಯಾವ ದೀಪವನ್ನು ಹಚ್ಚುತ್ತಾರೆ

ಉತ್ತರ : ಕನ್ನಡಿಗರು ಕನ್ನಡದ ಶ್ರೀಮಂತಿಕೆಯನ್ನು ತೋರುವ ಒಲವನ್ನು ಬೆಳಗುವ ದೀಪವನ್ನು ಹಚ್ಚುತ್ತಾರೆ . 

2 . ಮರೆವನ್ನು ಮರೆತು , ಒಲವನ್ನು ಎರೆದು , ಹೇಗೆ ಕನ್ನಡದ ದೀಪ ಹಚ್ಚುತ್ತಾರೆ ? 

ಉತ್ತರ : ಕನ್ನಡಿಗರೆಲ್ಲರೂ ಈ ನಾಡಿಗಾಗಿ ಶ್ರಮಿಸುತ್ತ ಕಹಿಯನ್ನು ಮರೆತು ವಿಶಾಲವಾದ ಮನಸ್ಸಿನಿಂದ ನಾಡಿಗಾಗಿ ಒಲವನ್ನು ಎರೆದು ಕನ್ನಡದ ದೀಪವನ್ನು ಹಚ್ಚಿ ಅದರ ಕಾಂತಿಯನ್ನು ಎಲ್ಲೆಡೆ ಬೆಳಗುತ್ತಾರೆ .

3. ಕನ್ನಡ ಮಾತೆಯನ್ನು ಹೇಗೆ ಆದರಿಸುತ್ತಾರೆ ? 

ಉತ್ತರ : ಕನ್ನಡಿಗರು ಗಳಿಸಿದ ಹೆಸರನ್ನು ಉಳಿಸಲು ಕನ್ನಡಿಗರೆಲ್ಲರೂ ನಾವೆಲ್ಲರೂ ಒಂದುಗೂಡಿ ಕನ್ನಡ ವಾತೆಯನ್ನು ಪೂಜಿಸುತ್ತ ಕೆಟ್ಟದ್ದನ್ನು ನಾಶಮಾಡುವ ಸಂಕಲ್ಪದಿಂದ ಮಂಗಳಗೀತೆಯನ್ನು ಹಾಡುತ್ತಾ ಕನ್ನಡದ ಕಾಂತಿಯನ್ನು ಬೆಳಗುವುದರ ಮೂಲಕ ಕನ್ನಡ ಮಾತೆಯನ್ನು ಆದರಿಸುತ್ತಾರೆ

 ಇ . ಕೆಳಗಿನ ಸಾಲುಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ . 

  1. ಮೈಮರೆವೆಯಿಂದ ಕೂಡಿರುವ_____ 
  2. ಹಚ್ಚಿರುವ ದೀಪದಲಿ ತಾಯರೂಪ _____
  3. ನಮ್ಮೆದೆಯ ಮಿಡಿಯು ಮಾಡೇವು . ______
  4. ಕರುಳೆಂಬ ಕುಡಿಗೆ ಮಿಂಚನೇ _________ .

ಉತ್ತರಗಳು 

1.ಕೊಲೆಯ ಕೊಚ್ಚೇವು 

2.ಅಚ್ಚಳಿಯದಂತೆ ತೋರೇವು 

3.ಪೂಜೆ ಮಾಡೆವು 

4.ಹಚ್ಚೇವು ಕನ್ನಡ ದೀಪ 

Hacchevu Kannadada Deepa 7th Standard Notes

ಈ . ‘ ಹಚ್ಚೇವು  ‘ ಎಂಬ ಪದಕ್ಕೆ ಸರಿಹೊಂದುವ , ಪದ್ಯದಲ್ಲಿ ಇರುವ ಪ್ರಾಸಪದಗಳನ್ನು ಬರೆಯಿರಿ .

ಹಚ್ಚೇವು 

ಕೊಚ್ಚೇವು =ಚಾಚೇವು=ಒಂದುಗೂಡೇವು

ಮರೆತೇವು =ತೆರೆದೇವು =ಎರದೇವು 

ಬೀರೇವು=ತೋರೇವು=ತೂರೇವು 

ಮಾಡೇವು =ಹಾಡೇವು =ತೊರೆದೇವು 

ಕಡೆದೇವು=ಪಡೆದೇವು=ಕೊಡೇವು 

ಉ . ‘ ಬೀರೆವು ‘ ಎಂಬ ಪದದಂತೆ ಪದಮಧ್ಯದಲ್ಲಿ ‘ ರ ‘ ಅಕ್ಷರ ಬರುವ ಪದಗಳನ್ನು ಪಟ್ಟಿ ಮಾಡಿ . ತೊರೆದೇವು ತೂರೇವು ತೋರೇವು ಬೀರೇವು 

ಬೀರೇವು -ತೂರೇವು -ತೊರೇವು 

ಊ . ಕೈಗೆ ಕಾಲ್ ಮೂಳೆಯ ಜಡಿಯ

 ಶಿಲುಬೆಗಿಕ್ಕಿ ಸಾಯೆ ಬಡಿಯ 

ಅವರ ತಪ್ಪ ಕ್ಷಮಿಸುಯೆಂದು

 ಮೊರೆಯನಿಟ್ಟ ತಂದೆಗೆಂದು 

ಕ್ರಿಸ್ತ ಸತ್ತು ಬದುಕಿದ

ಯುಗವೊಂದನು ತೊಡಗಿದ- ಕಯ್ಯಾರ ಕಿಞ್ಞಣ್ಣ ರೈ ( ಶತಮಾನದ ಗಾನ ) 

ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಪಟ್ಟಿ ಮಾಡಿ : 

ಜಡಿಯೆ = ಬಡಿಯ

 ಕ್ಷಮಿಸುಯೆಂದು = ತಂದೆಗೆಂದು

 ಬದುಕಿದ = ತೊಡಗಿದ . 

ಕೈಗೆ =ಕಾಲ್ಗೆ 

 ಭಾಷಾಭ್ಯಾಸ

ಅ. ಕೆಳಗೆ ನೀಡಿರುವ ಪದ್ಯದ ಪ್ರಾಸಪದಗಳನ್ನು ಜೋಡಿಸಿ ಬರೆಯಿರಿ .

ದೀಪ  ಮರುಳು   ತೀಡು  ಹಾಡು 

ಮನವ   ಹಚ್ಚು  ರೂಪ  ಕರುಳು ಪಡೆ 

ಮನೆ ,ಇಡೀ ಗೂಡು ನಾಡು ಮರೆತೆವು 

ನಾಡು ಗಡಿನಾಡು ಸಿಡಿ ಪ್ರೀತಿ ನೀತಿ 

ಮನ ಕುಡಿ ಇರುಳು ಸೋಂಪು ನಡುನಡು 

ಅಚ್ಚು ತೊಡೆ  ಮುಡಿ ಹಿಡಿ ಮರೆವು 

ಮಿಡಿ ತೊರೆದೇವು ಕೆಚ್ಚು ಗಳಿಸು  ಕಂಪು 

  •  ಗೂಡು = ನಾಡು 
  • ಪ್ರೀತಿ = ನೀತಿ ,ಭೀತಿ = ನೀತಿ
  •  ಮನ = ಮನೆ 
  • ತೊಡೆ = ಪಡೆ 
  • ಮುಡಿ = ಮಿಡಿ
  •  ಹಿಡಿ = ಸಿಡಿ
  • ನಡುಗಾಡು = ಗಡಿನಾಡು 
  • ಮಿಡಿ = ಕುಡಿ 
  • ನೀಡು = ಹಾಡು 
  • ಕರುಳು = ಇರುಳು
  •  ಮರೆತೇವು = ತೊರೆದೇವು 
  • ಮನವ = ಮರೆವ
  • ಕಂಪು = ಸೊಂಪು 
  • ಕೆಚ್ಚು = ಅಚ್ಚು
  • ನಾಡು – ಹಾಡು 

ಆ . ಕೆಳಗೆ ನೀಡಿರುವ ಪದಗಳ ಅರ್ಥವ್ಯತ್ಯಾಸವನ್ನು ಗಮನಿಸಿ 

  • .  ಹಚ್ಚು – ಹಚ್ಚೇವು – ಹಚ್ಚುವುದಿಲ್ಲ ,

             ಹಚ್ಚೇವು – ಹಚ್ಚುತ್ತೇವೆ .

  •  ಬೀರು – ಬೀರೇವು – ಬೀರುವುದಿಲ್ಲ

              ಬೀರೇವು –  ಬೀರುತ್ತೇವೆ

  •   ಮಾಡು – ಮಾಡೆವು – ಮಾಡುವುದಿಲ್ಲ . 

             ಮಾಡೆವು- ಮಾಡುತ್ತೇವೆ 

ಇ . ಇದೇ ರೀತಿಯಲ್ಲಿ ನೋಡು , ಹಾಡು , ನಿಲ್ಲು , ಮೆಚ್ಚು ಮೊದಲಾದ ಪದಗಳನ್ನು ಕೆಳಗಿನ ವಾಕ್ಯದಲ್ಲಿ ಬಳಸಿ ವಾಕ್ಯ ಪೂರ್ಣಗೊಳಿಸಿ . 

  • ನಾವು ಕನ್ನಡ ಚಲನ ಚಿತ್ರಗಳನ್ನು_________
  • ನಾವು ಕನ್ನಡ ಗೀತೆಗಳನ್ನು ಹಾಡುತ್ತೇವೆ______
  •  ನಿಮಗಾಗಿ ನಾಳೆ ನಾವು ಕಾಯುತ್ತಾ 
  • ನಿಮ್ಮೆಲ್ಲ ಚಿತ್ರಗಳನ್ನು

ಉತ್ತರ :

  •  ನೋಡುತ್ತೇವೆ . 
  • ಹಾಡೇವು  
  • ನಿಲ್ಲುತ್ತೇವೆ .  
  • ಮೆಚ್ಚೇವು 

ಈ . ಒಂದೇ ಪದವನನ್ನು ನಾಮಪದ ಮತ್ತು ಕ್ರಿಯಾಪದ ಅರ್ಥದಲ್ಲಿ ಮಾದರಿಯಂತೆ ಬಳಸಿ ವಾಕ್ಯ ರಚಿಸಿ . 

ಮಾದರಿ : ಕಳೆ : ನಮ್ಮ ಶಾಲಾ ಕೈತೋಟದಲ್ಲಿ ತುಂಬಾ ಕಳೆ ಬೆಳೆದಿದೆ . ರಾಜು ಬೆಲೆ ಬಾಳುವ ಉಂಗುರವನ್ನು ಕಳೆದನು .

  1. ಹಚ್ಚು : ರಾಜು ತರಕಾರಿ ಹಚ್ಚಿದ ನಂತರ ದೀಪ ಹಚ್ಚಿದನು 
  2. ಕುಡಿ  ನೀನು ನನ್ನ ಕರುಳಿನ ಕುಡಿ , ಬೇಗ ಹಾಲು ಕುಡಿ .
  3. ಪಡೆ : ಅಶೋಕನು ಶತ್ರುಪಡೆಯೊಂದಿಗೆ ಕಾದಾಡಿ ಜಯವನ್ನು ಪಡೆದನು . 

ಉ . ಮೊದಲೆರಡು ಪದಗಳ ಸಂಬಂಧ ಗ್ರಹಿಸಿ ಖಾಲಿ ಜಾಗದಲ್ಲಿ ಸೂಕ್ತ ಪದ ಭರ್ತಿಮಾಡಿ . 

  1. ಆಂಧ್ರಪ್ರದೇಶ : ಹೈದರಾಬಾದ್ : : ಕೇರಳ : 
  2. ಶತ್ರು : ಮಿತ್ರ : : ರಾತ್ರಿ :  
  3. ಮಾತಾ : ತಾಯಿ : : ಪಿತಾ : 
  4. ದಾವಣಗೆರೆ : ನಡುನಾಡು : : ಬೆಳಗಾವಿ : 

  ಉತ್ತರ :

  • ತಿರುವನಂತಪುರ 
  • ಹಗಲು 
  • ತಂದೆ 
  • ಗಡಿನಾಡು

FAQ :

1. ಕಲ್ಪನೆಯ ಕಣ್ಣು ಹರಿವ ತನಕ ಯಾವ ದೀಪಗಳನ್ನು ಹಚ್ಚುತ್ತೇವೆ ? 

ಉತ್ತರ : ಕಲ್ಪನೆಯ ಕಣ್ಣು ಹರಿವ ತನಕ ಸಾಲು  ದೀಪಗಳನ್ನು ಹಚ್ಚುತ್ತೇವೆ .

2. ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲರೂ ಏನು ಮಾಡಬೇಕು? 

ಉತ್ತರ : ನಮ್ಮವರು ಗಳಿಸಿದ ಹೆಸರುಳಿಸಲು ಕನ್ನಡಿಗರೆಲ್ಲರೂ ಒಂದುಗೂಡಿ ಕನ್ನಡ ಮಾತೆಯನ್ನು ಪೂಜಿಸಬೇಕು.

3. ನಮ್ಮುಸಿರು ತೀಡುವ ನಾಡಿನಲ್ಲಿ ಯಾವ ಗೀತೆ ಹಾಡುತ್ತೇವೆ ? 

ಉತ್ತರ : ನಮ್ಮುಸಿರು ತೀಡುವ ನಾಡಿನಲ್ಲಿ ಮಂಗಳದ ಗೀತೆಯನ್ನು ಹಾಡುತ್ತೇವೆ .

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh