7ನೇ ತರಗತಿ ಕನ್ನಡ ನನ್ನ ಬಾಲ್ಯ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 7th Standard Nanna Balya Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Puraka Pata Nanna Balya Notes
7th Class Nanna Balya Kannada Notes Pdf
ತರಗತಿ : 7ನೇ ತರಗತಿ
ವಿಷಯ : ಕನ್ನಡ
ಪಾಠದ ಹೆಸರು : ನನ್ನ ಬಾಲ್ಯ
ನಿರೂಪಣೆ : ಡಾ . ಗಣೇಶ ಅಮೀನಗಡ
ಕೃತಿಕಾರರ ಪರಿಚಯ
ಡಾ . ಗಣೇಶ ಅಮೀನಗಡ ಅವರು ಬಾಗಲಕೋಟೆ ಜಿಲ್ಲೆಯ ಅಮೀನಗಡದವರು , ಹಂಪಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ . ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯುಳ್ಳ ಇವರು ಪ್ರಸ್ತುತ ಮೈಸೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ಮುಖ್ಯ ವರದಿಗಾರರಾಗಿರುತ್ತಾರೆ . ‘ ಕೈದಿಗಳ ಕಥನ ‘ ಮುಂತಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ . ಅವರ ‘ ಏಣಿಯಿಂದ ರಂಗದ ಏಣಿಗೆ ‘ ಎಂಬ ಕೃತಿಯಿಂದ ಪ್ರಸ್ತುತ ಭಾಗವನ್ನು ಆರಿಸಲಾಗಿದೆ .
ಅ. ಈ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಏಣಗಿ ಬಾಳಪ್ಪನವರು ತಮ್ಮನ್ನು ಏನೆಂದು ಗುರುತಿಸಿಕೊಂಡಿದ್ದಾರೆ?
ಏಣಗಿ ಬಾಳಪ್ಪನವರು ತಮ್ಮನ್ನು ರಂಗಭೂಮಿಯ ಸಾಮಾನ್ಯ ನಟನೆಂದು ಗುರುತಿಸಿಕೊಂಡಿದ್ದಾರೆ.
೨. ‘ಪಾದುಕಾ ಪಟ್ಟಾಭಿಷೇಕ’ ನಾಟಕವನ್ನು ಬರೆದವರು ಯಾರು?
ಗರುಡ ಸದಾಶಿವರಾಯರು ಪಾದುಕಾ ಪಟ್ಟಭಿಷೇಕ ನಾಟಕವನ್ನು ಬರೆದವರು.
೩. ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಏಣಗಿಯವರು ಯಾವ ಪಾತ್ರ ವಹಿಸುತ್ತಿದ್ದರು?
ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಏಣಗಿಯವರು ಭರತನ ಪಾತ್ರ ವಹಿಸುತ್ತಿದ್ದರು
೪. ರಂಗಕಲಾವಿದ ಬಾಳಪ್ಪನವರ ಹುಟ್ಟೂರು ಎಲ್ಲಿದೆ?
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ- ರಂಗಕಲಾವಿದ ಬಾಳಪ್ಪನವರು ಹುಟ್ಟಿದ ಊರು.
ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ನಟನಿಗೂ ಸಮುದಾಯಕ್ಕೂ ಇರುವ ಸಂಬಂಧದ ಬಗ್ಗೆ ಏಣಗಿ ಬಾಳಪ್ಪನವರು ಏನು ಹೇಳುತ್ತಾರೆ?
ಸಮುದಾಯದ ಎದುರಿಗೆ ನಟನು ಯಾವಾಗಲೂ ನಟನಾಗಿ ಬಾಳುತ್ತಾನೆ. ಸಮುದಾಯದ ಆಶ್ರಯ ತಪ್ಪಿದರೆ ನಟ ಬದುಕಿರಲಾರ ಮೀನಿಗೆ ನೀರಿನ ಸಂಗವಿದ್ದಂತೆ ನಟನಿಗೆ ಪ್ರೇಕ್ಷಕರ ಸಂಗವಿರುತ್ತದೆ ಎಂದು ಏಣಗಿ ಬಾಳಪ್ಪನವರು ಹೇಳುತ್ತಾರೆ.
೨. ಏಣಗಿ ಬಾಳಪ್ಪನವರ ಕುಟುಂಬವನ್ನು ಕುರಿತು ಬರೆಯಿರಿ.
ಬಾಳಪ್ಪನವರದು ತೀರಾ ಸಾದಾ ಕುಟುಂಬ. ಅವ್ವ ಬಾಳಮ್ಮ ತಂದೆ ಕರಿಬಸಪ್ಪ. ಇವರಿಗೆ ಮೂರು ಮಕ್ಕಳು ಅಣ್ಣ ಬಸಪ್ಪ, ಅಕ್ಕ ವೀರವ್ವ ಮತ್ತು ಸ್ವತಃ ಬಾಳಪ್ಪನವರು.
೩. ಅವ್ವನ ಸ್ಮರಣೆಯ ಫಲ ಎಂದು ಬಾಳಪ್ಪನವರು ಏನನ್ನು ನೆನಸಿಕೊಳ್ಳುತ್ತಾರೆ?
ಬಡತನದಲ್ಲಿ ಬೆಳೆದು ಬಂದ ಬಾಳಪ್ಪನವರ ಬದುಕಿನಲ್ಲಿ ಐಶ್ವರ್ಯವೂ ಅವರಿಗೆ ಲಭಿಸಿತು. ಆದರೆ ಗರ್ವ ಬರಲಿಲ್ಲ ದುಡ್ಡಿನಿಂದ ಅವರಿಗೆ ಮದ ಬರಲಿಲ್ಲಾ ಅದರಿಂದ ಯಾವ ವ್ಯಸನಕ್ಕೂ ಅವರು, ತುತ್ತಾಗಲಿಲ್ಲ. ಇದೆಲ್ಲಾ ಅವರ ಅವ್ವನ ಸ್ಮರಣೆಯ ಫಲ ಎಂದು ಬಾಳಪ್ಪನವರು ನೆನೆಸಿಕೊಳ್ಳುತ್ತಾರೆ.
FAQ :
ಏಣಗಿ ಬಾಳಪ್ಪನವರು ತಮ್ಮನ್ನು ರಂಗಭೂಮಿಯ ಸಾಮಾನ್ಯ ನಟನೆಂದು ಗುರುತಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ- ರಂಗಕಲಾವಿದ ಬಾಳಪ್ಪನವರು ಹುಟ್ಟಿದ ಊರು.
ಗರುಡ ಸದಾಶಿವರಾಯರು ಪಾದುಕಾ ಪಟ್ಟಭಿಷೇಕ ನಾಟಕವನ್ನು ಬರೆದವರು.
ಇತರೆ ವಿಷಯಗಳು :
7th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.