6ನೇ ತರಗತಿ ಗಾಢ ಕತ್ತಲು ಮತ್ತು ಗುಮ್ಮಗಳು ಕನ್ನಡ ನೋಟ್ಸ್‌ | 6th Standard Gadha Kattalu Mattu Gummagalu Kannada Notes

6ನೇ ತರಗತಿ ಕನ್ನಡ ಗಾಢ ಕತ್ತಲು ಮತ್ತು ಗುಮ್ಮಗಳು ಪೂರಕ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, 6th Standard Gadha Kattalu Mattu Gummagalu Kannada Notes Summary Question Answer Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Puraka Pata Kattalu Mattu Gummagalu Notes

Gadha Kattalu Mattu Gummagalu Kannada Notes

ತರಗತಿ : 6ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಗಾಢ ಕತ್ತಲು ಮತ್ತು ಗುಮ್ಮಗಳು

6th Class Gadha Kattalu Mattu Gummagalu Kannada Notes

6th Class Gadha Kattalu Mattu Gummagalu Kannada Notes

ಕವಿ ಕೃತಿ ಪರಿಚಯ :

ವಿಜಯಶ್ರೀ ಹಾಲಾಡಿ ( ಜನನ : 1975 ಎಪ್ರಿಲ್ 28 ) ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿ ಗ್ರಾಮದ ಮುದೂಲಿ ಎಂಬ ಹಳ್ಳಿಯವರು . ತಂದೆ ಎಂ . ಬಾಬು ರಾವ್ , ತಾಯಿ ರತ್ನಾವತಿ . ವೃತ್ತಿಯಲ್ಲಿ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕಿ . ಪ್ರೌಢ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯಗಳೆರಡನ್ನೂ ಬರೆಯುತ್ತಿದ್ದಾರೆ . ಇದುವರೆಗೆ ಎಂಟು ಪುಸ್ತಕಗಳು ಪ್ರಕಟವಾಗಿದ್ದು ಅವುಗಳಲ್ಲಿ 5 ಮಕ್ಕಳ ಕೃತಿಗಳು – ” ಓತಿಕ್ಯಾತ ತಲೆಕುಣ್ಣಿ ” , ” ಪಪ್ಪು ನಾಯಿಯ ಪೀಪಿ ” , ” ಸೂರಕ್ಕಿ ಗೇಟ್ ” , ” ಜಂಚಿಕೊಳ್ಳಿ ಮತ್ತು ಪುಟ್ಟ ವಿಜಿ ‘ , ” ಕಾಡಂಚಿನ ಊಲಿನಲ್ಲ ” . ಸದ್ಯ ಕನ್ನಡದಲ್ಲಿ ಮಕ್ಕಳಿಗಾಗಿ ಹೊಸತನವಿಂದ ಬರೆಯುತ್ತಿರುವ ಲೇಖಕರಲ್ಲಿ ವಿಜಯಶ್ರೀ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ ಬಂದಿದೆ . ಹಾಲಾಡಿಯೂ ಒಬ್ಬರು . ” ಪಪ್ಪು ನಾಯಿಯ ಪೀಪಿ ” ಕೃತಿಗೆ 2015 ನೇ ಸಾಲಿನ ಕರ್ನಾಟಕ ಹೊಂಬಳ ಮಕ್ಕಳ ಸಾಹಿತ್ಯ ಜಿ . ರಾಜ್ಯ ಪ್ರಶಸ್ತಿ , ಡಿಸೋಜ – ಎಚ್ಚೆಸ್ವಿ ಪುಟಾಣಿ ಪುರಸ್ಕಾರ ಮುಂತಾದವು ಇವರ ಕೃತಿಗಳಿಗೆ ಸಂದಿವೆ .

6ನೇ ತರಗತಿ ಗಾಢ ಕತ್ತಲು ಮತ್ತು ಗುಮ್ಮಗಳು ಕನ್ನಡ ನೋಟ್ಸ್

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ವಿಜಿಗೆ ಗುಮ್ಮಗಳ ಬಗ್ಗೆ ಭಯ ಹುಟ್ಟಿದ್ದೇಕೆ?

ವಿಜಿ ಚಿಕ್ಕವಳಿದ್ದಾಗ ಹಾಲು ಕುಡಿಯದಿದ್ದರೆ, ಊಟ ಮಾಡದಿದ್ದರೆ ” ಗುಮ್ಮ ಬರುತ್ತದೆ ಬೇಗ ಬೇಗ ತಿನ್ನು” ಎಂದು ಹೆದರಿಸಲಾಗುತ್ತಿತ್ತು. ಅವರ ಮನೆಯ ಹತ್ತಿರವೇ ಮಳೆಗಾಲದ ರಾತ್ರಿಗಳಲ್ಲಿ ಗುಮ್ಮಗಳು ಊಂ ಎಂದು ಸತತವಾಗಿ ಕೂಗುವುದು ಕೇಳಿ ಗುಮ್ಮನ ಕುರಿತು ಭಯ ಅವಳಲ್ಲಿ ಹುಟ್ಟಿತು.

2. ಹಳ್ಳಿಯಲ್ಲಿ ರಾತ್ರಿಯ ಕತ್ತಲು ಹೇಗಿರುತ್ತದೆ?

ಹಳ್ಳಿಗಳಲ್ಲಿ ವಿದ್ಯತ್ತೇ ಇರುವುದಿಲ್ಲ. ಉರಿಯುವ ಚಿಮಣಿ ದೀಪ ಬಿಟ್ಟರೆ ಹೊರಗೆಲ್ಲ ದಟ್ಟ ಕತ್ತಲು ಹೇಗೆಂದರೆ ಜಗವೆಲ್ಲವೂ ಮಸಿಯಲ್ಲಿ ಅದ್ದಿಟ್ಟಂತೆ ಕಣ್ಣಿಗೆ ಕಣ್ಣು ತಾಗಿಸಿದರೂ ಕತ್ತಲಲ್ಲದೆ ಬೇರೆನೂ ಕಾಣುವುದಿಲ್ಲ. ಮಳೆಗಾಲ ಮತ್ತು ಅಮವಾಸ್ಯೆಯ ಸಂದರ್ಭದಲ್ಲಿ ಕತ್ತಲು ಮತ್ತಷ್ಟು ಕಟುವಾಗಿರುತ್ತದೆ. ಬೇಸಿಗೆಯ ಹುಣ್ಣಿಮೆಯ ದಿನಗಳಲ್ಲಿ ಒಳ್ಳೆಯ ತಿಂಗಳ ಬೆಳಕು ಚೆಲ್ಲಿಕೊಂಡು ಹೊರಗಿನ ಗದ್ದೆ, ಗಿಡ ಮರಗಳು ಕಾಣುತ್ತಿರುತ್ತವೆ.

3. ರಾತ್ರಿಯ ಕತ್ತಲಿನಲ್ಲಿ ಬೆಳಕು ಹುಟ್ಟಿಸಿಕೊಳ್ಳಲು ಹಳ್ಳಿಗರು ಏನೇನು ಉಪಾಯಗಳನ್ನು ಮಾಡುತ್ತಾರೆ?

ಹಳ್ಳಿಗರು ಸಂಜೆಯಾದೊಡನೆ ಚಿಮಣಿ ದೀಪಗಳು, ಒಂದೆರಡು ಲ್ಯಾಂಪ್ಗಳು, ದೇವರ ದೀಪವನ್ನು ಹಚ್ಚಿಬಿಡುತ್ತಿದ್ದರು. ದೂರ ಎಲ್ಲಾದರೂ ಹೋಗುತ್ತಿದ್ದರೆ ಬ್ಯಾಟರಿಯನ್ನು ಬಳಸುತ್ತಿದ್ದರು. ಎಲ್ಲರ ಮನೆಯಲ್ಲಿ ಬ್ಯಾಟರಿ ಇರಲಿಲ್ಲ. ಹೆಚ್ಚಿನವರು ದೂರದ ಪ್ರಯಾಣಕ್ಕೆ ಸೂಡಿಯನ್ನು ಬಳಸುತ್ತಿದ್ದರು. ತೆಂಗು, ಅಡಿಕೆಯ ಗರಿ ಬಾಳೆ ನಾರಿನಿಂದ ಸೂಡಿಯನ್ನು ತಯಾರಿಸಿ, ಸೂಡಿಯ ತುದಿಗೆ ಬೆಂಕಿ ಹಚ್ಚಿಕೊಂಡು, ಅದನ್ನು ಮೈಲಿಗಟ್ಟಲೆ ನಡೆಯುತ್ತಿದ್ದರು.

4. ಯಕ್ಷಗಾನ ನೊಡಲು ಹೋಗಿ ಬರುವ ರಾತ್ರಿಗಳ ಅನುಭವಗಳೇನು?

ವಿಜಿ ಸ್ವಲ್ಪ ಬೆಳೆದು ದೊಡ್ಡವಳಾದ ಮೇಲೆ ಅಮ್ಮ ದೊಡ್ಡಮ್ಮ ತಂಗಿ ನೀಲಿಮಾ ಇವರ ಜೊತೆಗೆ ಯಕ್ಷಗಾನಕ್ಕೆ ಹೋಗುತ್ತಿದ್ದಳು. ಅವಳ ಆಗಿನ ಖುಷಿ ವರ್ಣಿಸಲು ಅಸಾಧ್ಯ. ಆ ನೀರವ ರಾತ್ರಿಯಲ್ಲಿ ಬ್ಯಾಟರಿ ಹಿಡಿದು ಕಾಡುಗಳಲ್ಲಿ ನಡೆದು ಹೋಗುವಾಗ ಕಾಡಿನ ಗಾಳಿಯನ್ನು ಹೀರಿಕೊಳ್ಳುತ್ತಿದ್ದಳು. ಹಾಗೆ ಯಕ್ಷಗಾನಕ್ಕೆ ಹೋಗುವಾಗ ಅವತ್ತಿನ ಯಕ್ಷಗಾನ ಹೇಗಿರಬಹುದು ಎಂದು ಚರ್ಚೆಯಾದರೆ, ವಾಪಸ್ಸು ಬರುವಾಗ ನೋಡಿದ ಯಕ್ಷಗಾನದ ಕುರಿತು ವಿಮರ್ಶೆಗಳು ಟೀಕೆ ಟಿಪ್ಪಣಿಗಳು ಇರುತ್ತಿದ್ದವು.

5. ವಿಜಿ ಕತ್ತಲಿನ ಭಯವನ್ನು ಹೇಗೆ ಗೆದ್ದಳು?

ವಿಜಿ ಸ್ವಲ್ಪ ಬೆಳೆದು ದೊಡ್ಡವಳಾದ ಮೇಲೆ ಗುಮ್ಮನ ಹೆದರಿಕೆ ದೂರಾಯಿತು. ಕಗ್ಗತ್ತಲ ರಾತ್ತಿಗಳಲ್ಲಿ ಎಲ್ಲಿಗಾದರೂ ಹೋಗುವುದು ಅವಳಿಗೆ ಇಷ್ಟವಾಗತೊಡಗಿತು. ಕಾಡು ಮತ್ತು ಕತ್ತಲಿನ ವಾತಾವರಣದಲ್ಲಿ ಬಾಲ್ಯದಿಂದಲೂ ಬೆಳೆದಿದ್ದರಿಂದ ತೋಟದ ತನಕ ಕತ್ತಲಿನಲ್ಲಿ ಒಬ್ಬಳೆ ಬ್ಯಾಟರಿ ಹಿಡಿದು ಹೋಗಿ ಬರುವ ಧೈರ್ಯ ಬೆಳೆಸಿಕೊಂಡಳು. ಒಂಬತ್ತನೇ ತರಗತಿಗೆ ಬಂದಾಗ ರಾತ್ರಿ ಒಬ್ಬಳೇ ಉಪ್ಪರಿಗೆಯಲ್ಲಿ ಕತ್ತಲನ್ನು ದಿಟ್ಟಿಸುತ್ತಾ ಮಲಗುವುದು ಅವಳಿಗೆ ಅಭ್ಯಾಸವಾಗಿತ್ತು. ಹೀಗೆ ಅವಳು ಕತ್ತಲಿನ ಭಯವನ್ನು ಗೆದ್ದಳು.

FAQ :

ವಿಜಿಗೆ ಗುಮ್ಮಗಳ ಬಗ್ಗೆ ಭಯ ಹುಟ್ಟಿದ್ದೇಕೆ?

ವಿಜಿ ಚಿಕ್ಕವಳಿದ್ದಾಗ ಹಾಲು ಕುಡಿಯದಿದ್ದರೆ, ಊಟ ಮಾಡದಿದ್ದರೆ ” ಗುಮ್ಮ ಬರುತ್ತದೆ ಬೇಗ ಬೇಗ ತಿನ್ನು” ಎಂದು ಹೆದರಿಸಲಾಗುತ್ತಿತ್ತು. ಅವರ ಮನೆಯ ಹತ್ತಿರವೇ ಮಳೆಗಾಲದ ರಾತ್ರಿಗಳಲ್ಲಿ ಗುಮ್ಮಗಳು ಊಂ ಎಂದು ಸತತವಾಗಿ ಕೂಗುವುದು ಕೇಳಿ ಗುಮ್ಮನ ಕುರಿತು ಭಯ ಅವಳಲ್ಲಿ ಹುಟ್ಟಿತು.

ಯಕ್ಷಗಾನ ನೊಡಲು ಹೋಗಿ ಬರುವ ರಾತ್ರಿಗಳ ಅನುಭವಗಳೇನು?

ವಿಜಿ ಸ್ವಲ್ಪ ಬೆಳೆದು ದೊಡ್ಡವಳಾದ ಮೇಲೆ ಅಮ್ಮ ದೊಡ್ಡಮ್ಮ ತಂಗಿ ನೀಲಿಮಾ ಇವರ ಜೊತೆಗೆ ಯಕ್ಷಗಾನಕ್ಕೆ ಹೋಗುತ್ತಿದ್ದಳು. ಅವಳ ಆಗಿನ ಖುಷಿ ವರ್ಣಿಸಲು ಅಸಾಧ್ಯ. ಆ ನೀರವ ರಾತ್ರಿಯಲ್ಲಿ ಬ್ಯಾಟರಿ ಹಿಡಿದು ಕಾಡುಗಳಲ್ಲಿ ನಡೆದು ಹೋಗುವಾಗ ಕಾಡಿನ ಗಾಳಿಯನ್ನು ಹೀರಿಕೊಳ್ಳುತ್ತಿದ್ದಳು. ಹಾಗೆ ಯಕ್ಷಗಾನಕ್ಕೆ ಹೋಗುವಾಗ ಅವತ್ತಿನ ಯಕ್ಷಗಾನ ಹೇಗಿರಬಹುದು ಎಂದು ಚರ್ಚೆಯಾದರೆ, ವಾಪಸ್ಸು ಬರುವಾಗ ನೋಡಿದ ಯಕ್ಷಗಾನದ ಕುರಿತು ವಿಮರ್ಶೆಗಳು ಟೀಕೆ ಟಿಪ್ಪಣಿಗಳು ಇರುತ್ತಿದ್ದವು.

ಇತರೆ ವಿಷಯಗಳು :

6th Standard All Subject Notes

ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh