ದ್ವಿತೀಯ ಪಿ.ಯು.ಸಿ ಅಧ್ಯಾಯ – 5.3 ಮರಾಠರ ಏಳಿಗೆ ಇತಿಹಾಸ ನೋಟ್ಸ್, 2nd Puc History Chapter 5.3 Notes Question Answer Pdf Download in Kannada Medium Kseeb Solution For Class 12 History Chapter 5.3 Notes In Kannada Maratara Elige Notes in Kannada
ಅಧ್ಯಾಯ – 5.3 ಮರಾಠರ ಏಳಿಗೆ

2nd Puc History 5th Chapter Notes in Kannada
I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :
1. ಮರಾಠ ರಾಜ್ಯದ ಸ್ಥಾಪಕರು ಯಾರು ?
ಶಿವಾಜಿ .
2. ಶಿವಾಜಿ ಮತ್ತು ಜೈಸಿಂಗ್ ನಡುವೆ ಸಹಿ ಹಾಕಲಾದ ಒಪ್ಪಂದ ಯಾವುದು ?
ಪುರಂದರ ಒಪ್ಪಂದ .
3. ಶಿವಾಜಿಯ ಬಿರುದು ಯಾವುದು ?
ಛತ್ರಪತಿ .
4. ಶಿವಾಜಿಯ ಕಿರೀಟಧಾರಣೆಯಾದ ವರ್ಷ ಯಾವುದು ?
ಸಾ.ಶ. 1674 .
5. ‘ ಚೌತ್ ‘ ಎಂದರೇನು ?
ಶಿವಾಜಿಯ ನೇರ ಆಡಳಿತಕ್ಕೆ ಒಳಪಡದ ನೆರೆಯ ಪ್ರದೇಶಗಳು ಕೊಡಬೇಕಾದ ಭೂಕಂದಾಯ ಚೌತ್ .
II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ :
1. ಶಿವಾಜಿ ಎಲ್ಲಿ , ಯಾವಾಗ ಜನಿಸಿದನು ?
ಶಿವಾಜಿ ಶಿವನೇರಿ ಎಂಬಲ್ಲಿ , ಸಾ.ಶ. 1627 ರಲ್ಲಿ ಜನಿಸಿದನು .
2. ಶಿವಾಜಿಯ ತಂದೆ – ತಾಯಿ ಯಾರು ?
ಷಹಜಿ ಭೋಂಸ್ಲೆ , ಜೀಜಾಬಾಯಿ .
3. ಶಿವಾಜಿಯ ಮೇಲೆ ಪ್ರಭಾವ ಬೀರಿದ ಇಬ್ಬರು ವ್ಯಕ್ತಿ ಗಳನ್ನು ಹೆಸರಿಸಿ .
ಸಂತ ರಾಮದಾಸ್ ಮತ್ತು ತುಕಾರಾಂ .
4. ಶಿವಾಜಿಯ ಯಾವುದಾದರೂ ಎರಡು ಪ್ರಮುಖ ಕೋಟೆಗಳನ್ನು ಹೆಸರಿಸಿ .
ಪುರಂಧರ ಕೋಟೆ , ರಾಯಘಡ ಕೋಟೆ .
5. ಶಿವಾಜಿಯು ಸಂಗ್ರಹಿಸುತ್ತಿದ್ದ ಎರಡು ಪ್ರಮುಖ ತೆರಿಗೆಗಳು ಯಾವುವು ?
ಚೌತ್ ಮತ್ತು ಸರ್ದೇಶಮುಖಿ .
2nd Puc History Chapter 5.3 Notes in Kannada Pdf
III . ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದನ್ನು 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಿ :
1. ಶಿವಾಜಿಯ ದಿಗ್ವಿಜಯಗಳನ್ನು ವಿವರಿಸಿ .
ಶಿವಾಜಿಯು 20 ನೇ ವಯಸ್ಕನಾಗುವ ಮೊದಲೇ ಸೈನಿಕ ಜೀವನವನ್ನು ಆರಂಭಿಸಿ , ತೋರಣಕೋಟೆ ಮತ್ತು ಬಿಜಾಪುರದ ಸುಲ್ತಾನನಿಂದ ಚಿಕಾನ , ಕೊಂಡನ , ಸಿಂಹಗಡ ಮತ್ತು ಪುರಂದರಗಳನ್ನು ವಶಪಡಿಸಿಕೊಂಡನು . ಇದರಿಂದ ಷಹಜಿಯು ಬಂಧನಕ್ಕೊಳಪಟ್ಟಾಗ ರಾಜ ನೈತಿಕ ಜಾಣ್ಮೆ ಯಿಂದ ತನ್ನ ತಂದೆಯನ್ನು ಬಿಡುಗಡೆಗೊಳಿಸಿದನು . ನಂತರ ಚಾವಳಿ ಪ್ರದೇಶವನ್ನು ಆಕ್ರಮಿಸಿ , ಪ್ರತಾಪ್‌ಡ್ ‘ ಎಂಬ ಹೊಸಕೋಟೆಯನ್ನು ನಿರ್ಮಿಸಿದನು .
ಶಿವಾಜಿ ಮತ್ತು ಅಪ್ಪಲ್ ಖಾನ್ :
ಬಿಜಾಪುರದ ಸುಲ್ತಾನನು ತನ್ನ ಸೇನಾನಿ ಅಫೈಲ್ ಖಾನನ್ನು ಶಿವಾಜಿ ವಿರುದ್ಧ ಹೋರಾಡಲು ಕಳುಹಿಸಿದನು . ಶಿವಾಜಿ ‘ ವ್ಯಾಘ್ರನಖ ‘ ಎಂಬ ಆಯುಧದಿಂದ ಈತನನ್ನು ಕೊಂದು ಅವನ ಬಿಡಾರವನ್ನು ಲೂಟಿ ಮಾಡಿದನು . ಬಿಜಾಪುರದ ಸುಲ್ತಾನನು ಶಿವಾಜಿಯೊಡನೆ ಶಾಂತಿ ಒಪ್ಪಂದವನ್ನು ಮಾಡಿಕೊಂಡು ಆತನ ಪ್ರದೇಶಗಳಿಗೆ ಮಾನ್ಯತೆ ನೀಡಿದನು .
ಶಿವಾಜಿ ಮತ್ತು ಔರಂಗಜೇಬ :
ಮೊಘಲ್ ಸುಲ್ತಾನ ಔರಂಗಜೇಬನಿಗೆ ಸೇರಿದ ಹಲವಾರು ಕೋಟೆಗಳು ಮತ್ತು ಪ್ರದೇಶಗಳನ್ನು ಶಿವಾಜಿಯು ವಶಪಡಿಸಿಕೊಂಡಿದ್ದನು . ಇದರಿಂದಾಗಿ ಶೈಯಿಸ್ತಾಖಾನ್ ಎಂಬುವವನು ದಖನ್ನಿನ ರಾಜ್ಯಪಾಲನನ್ನಾಗಿ ನೇಮಿಸಿ ಶಿವಾಜಿಯನ್ನು ಸದೆಬಡಿಯಲು ಹೇಳಿದನು . ಶೈಯಿಸ್ತಾಖಾನ್ ಶಿವಾಜಿಗೆ ಸೇರಿದ ಪೂನಾ , ಕೊಂಕಣ , ಚಕಾನ್ ಕೋಟೆಗಳನ್ನು ವಶಪಡಿಸಿಕೊಂಡನು . ನಂತರ ಶಿವಾಜಿಯ ಬಾಲ್ಯಜೀವನದ ಮನೆಯಲ್ಲಿಯೇ ಬಿಡಾರ ಹೂಡಿದನು . ಇದನ್ನರಿತ ಶಿವಾಜಿ ಮದುವೆ ದಿಬ್ಬಣದವರಂತೆ ಸುಮಾರು 100 ಜನರೊಡಗೂಡಿ ಏಕಾಏಕಿ ಧಾಳಿ ಮಾಡಿದನು . ಈ ದಾಳಿಯಲ್ಲಿ ಶೈಯಾಸ್ತಖಾನ್ ತನ್ನ ಕೈ ಬೆರಳುಗಳನ್ನು ಕಳೆದು ಕೊಂಡು ಪಲಾಯನ ಮಾಡಿದನು .
ಸೂರತ್ ಮೇಲೆ ಧಾಳಿ ಮಾಡಿ ಒಂದು ಕೋಟಿ ರೂ ಸಂಗ್ರಹಿಸಿದನು . ಮೊಘಲರನ್ನು ಬೆಂಬಲಿಸಿದ ಇಂಗ್ಲೀಷರನ್ನು ಹಿಮ್ಮೆಟ್ಟಿಸಿದನು . ಮೊಘಲ್ ಸೈನ್ಯದ ಆಗಮನದ ಸುದ್ದಿ ತಿಳಿದು ಸೂರತ್‌ನಿಂದ ಫಲಾಯನ ಮಾಡಿದನು . ಶಿವಾಜಿಯ ವಿರುದ್ಧ ಔರಂಗಜೇಬನು ರಾಜಾ ಜೈಸಿಂಗ್ ನನ್ನು ಕಳುಹಿಸಿದನು .
ಈತ ಪುರಂದರ , ರಾಯಗಡ ಮುಂತಾದ ಕೋಟೆಗಳನ್ನು ವಶಪಡಿಸಿಕೊಂಡನು . ನಂತರ ಇವರಿಬ್ಬರ ನಡುವೆ ‘ ಪುರಂದರ ಒಪ್ಪಂದ ‘ ವಾಗಿ ಶಿವಾಜಿಯು 23 ಕೋಟೆಗಳನ್ನು ನೀಡಿ , ಕಪ್ಪ ಕಾಣಿಕೆ ನೀಡಲು ಒಪ್ಪಿದನು . ನಂತರ ಜೈಸಿಂಗ್‌ನ ಒತ್ತಾಯದ ಔರಂಗಜೇಬನ ಆಸ್ತಾನಕ್ಕೆ ಬಂದನು . ಆದರೆ ಔರಂಗಜೇಬನು ಶಿವಾಜಿಯನ್ನು ಅವಮಾನಿಸಿ ಸೆರೆಮನೆಗೆ ತಳ್ಳಿದನು . ನಂತರ ಸಿಹಿ ತುಂಬಿದ ಬುಟ್ಟಿಯಲ್ಲಿ ಶಿವಾಜಿ ಸಾಂಬಾಜಿಯ ಜೊತೆಗೂಡಿ ತಪ್ಪಿಸಿಕೊಂಡು ಬಂದು ಎರಡು ಬಾರಿ ಸೂರತ್ ಮೇಲೆ ದಾಳಿ ಮಾಡಿದ್ದೇ ಅಲ್ಲದೆ ಮೊಘಲರಿಗೆ ಬಿಟ್ಟು ಕೊಟ್ಟಿದ್ದ ಎಲ್ಲಾ ಕೋಟೆಗಳನ್ನು ವಶಪಡಿಸಿಕೊಂಡನು .
ತನ್ನ ಪಟ್ಟಾಭಿಷೇಕದ ನಂತರ ಶಿವಾಜಿಯು ಹುಬ್ಬಳ್ಳಿ ಜಿಂಜಿ ಮತ್ತು ವೆಲ್ಲೂರುಗಳನ್ನು ಆಕ್ರಮಿಸಿದನು . ಸಾ.ಶ. 1680 ರಲ್ಲಿ ಮರಣ ಹೊಂದಿದನು .
2. ಶಿವಾಜಿಯ ಆಡಳಿತ ಪದ್ಧತಿಯ ಬಗ್ಗೆ ಒಂದು ವಿವರಣೆ ನೀಡಿ .
ಶಿವಾಜಿಯು ಉತ್ತಮ ದಿಗ್ವಿಜಯಕಾರನಾಗಿದ್ದಂತೆ ಸಮರ್ಥ ಆಡಳಿತಗಾರನೂ ಆಗಿದ್ದನು . ಕೇಂದ್ರ ಸರ್ಕಾರದ ಕೇಂದ್ರಬಿಂದು ಇವನೇ ಆಗಿದ್ದನು .
8 ಮಂದಿ ಮಂತ್ರಿ ಗಳನ್ನೊಳಗೊಂಡ ‘ ಅಷ್ಟಪ್ರಧಾನ ‘ ರಿದ್ದರು .
ಅವರೆಂದರೆ 1 . ಪೇಶ್ವ – ಪ್ರಧಾನಮಂತ್ರಿ ,
2.ಅಮಾತ್ಯ – ಹಣಕಾಸುಮಂತ್ರಿ ,
3 , ಮಂತ್ರಿ – ಇತಿಹಾಸಕಾರ ,
4. ಸುಮ ೦ ತ್ – ವಿದೇಶಾಂಗ ವ್ಯವಹಾರ ,
5.ಸಚಿವ – ರಾಜಪತ್ರ ವ್ಯವಹಾರ ,
6 , ಪಂಡಿತ್‌ರಾವ್ – ಧನಾಧ್ಯಕ್ಷ ,
7 , ಸೇನಾಪತಿ ,
8 . ನ್ಯಾಯಾಧೀಶ – ಸರ್ಕಾರದಲ್ಲಿ 18 ಇಲಾಖೆಗಳಿದ್ದು ಅವು ವಿವಿಧ ಮಂತ್ರಿಗಳ ಉಸ್ತುವಾರಿಯಲ್ಲಿದ್ದವು . ಶಿವಾಜಿಯು ತನ್ನ ರಾಜ್ಯವನ್ನು ‘ ಸ್ವರಾಜ್ಯ ‘ ಎಂದು ಕರೆದಿದ್ದನು . ನಾಲ್ಕು ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಪ್ರತಿ ಪ್ರಾಂತ್ಯಕ್ಕೂ ಸರ್ದೇಶ್‌ಮುಖ್ ಎಂಬ ರಾಜ್ಯಪಾಲನನ್ನು ನೇಮಿಸಿದ್ದನು .
ಪ್ರಾಂತ್ಯಗಳನ್ನು ‘ ದೇಶ್ ‘ ಗಳಾಗಿ ವಿಂಗಡಿಸಿ ‘ ದೇಶ್ ಮುಖ್ ಅಥವಾ ದೇಶ್‌ಪಾಂಡೆ ‘ ಎಂಬ ಅಧಿಕಾರಿಯನ್ನು ನೇಮಿಸಿದ್ದನು .
‘ ದೇಶ್’ಗಳನ್ನು ‘ ಪರಗಣ’ಗಳಾಗಿ ವಿಂಗಡಿಸಿ ದೇಸಾಯಿ ಎಂಬ ಅಧಿಕಾರಿಗಳನ್ನು ನೇಮಿಸಿದ್ದನು . ಗ್ರಾಮ ಸಭೆಯು ಆಡಳಿತದ ಅತಿಚಿಕ್ಕ ಘಟಕವಾಗಿತ್ತು .
ಕಂದಾಯಪದ್ಧತಿ :
ಭೂಮಿಯ ಫಲವತ್ತತೆ ಮತ್ತು ಉತ್ಪತ್ತಿಯನ್ನಾಧರಿಸಿ ಶಿವಾಜಿಯು ಭೂಮಿಯನ್ನು ಉತ್ಪನ್ನದ ಶೇ . 30 ಕ್ಕೆ ವರ್ಗೀಕರಿಸಿ ಭೂಕಂದಾಯವನ್ನು ನಿಗಧಿಪಡಿಸಿದನು . ಪ್ರಾಕೃತಿಕ ವಿಕೋಪಗಳಾದಾಗ ಕಂದಾಯವನ್ನು ರದ್ದುಪಡಿಸುತ್ತಿದ್ದನು .
ಚೌತ್ ಮತ್ತು ಸರ್ದೇಶ್‌ಮುಖಿ ಎಂಬ ಎರಡು ಪ್ರಮುಖ ತೆರಿಗೆ ಅಥವಾ ಸೈನಿಕ ಕಾಣಿಕೆ ( ರಕ್ಷಣಾ ತೆರಿಗೆ ) ಗಳನ್ನು ಸಂಗ್ರಹಿಸುತ್ತಿದ್ದನು .
ಸೈನಿಕ ವ್ಯವಸ್ಥೆ :
ಸೈನ್ಯವು ಕಾಲಾಳು , ಅಶ್ವಪಡೆ , ಫಿರಂಗಿಪಡೆ ಮತ್ತು ಒಂಟೆ ಮತ್ತು ಆನೆಗಳನ್ನು ಒಳಗೊಂಡಿತು . ಕಾಲಾಳುಗಳು ಗೆರಿಲ್ಲಾ ಮತ್ತು ಪರ್ವತಯುದ್ಧ ಕಲೆಗಳಲ್ಲಿ ತರಬೇತಿ ಪಡೆದಿದ್ದರು . ಅಲ್ಲದೆ 200 ಹಡಗುಗಳ ನ್ನೊಳಗೊಂಡ ಬಲಿಷ್ಟ ನೌಕಾಪಡೆ ಹೊಂದಿದ್ದನು .
ನ್ಯಾಯಾಂಗ ಪದ್ಧತಿ :
ರಾಜನೇ ಸರ್ವೋಚ್ಛ ನ್ಯಾಯಾಧೀಶನಾಗಿದ್ದು , ಗ್ರಾಮ ಪಂಚಾಯಿತಿಗಳು ನಾಗರೀಕ ಮೊಕದ್ದಮೆಗಳನ್ನು ಮತ್ತು ಜಿಲ್ಲಾ ಅಧಿಕಾರಿ ನಾಗ 330 ರಾಜ್ಯಪಾಲರು ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದ್ದರು . ಗ್ರಾಮ ನ್ಯಾಯಾಲಯಗಳ ತೀರ್ಪುಗಳಿಗೆ ರಾಜ ಮನ್ನಣೆ ಇತ್ತು ; ರಾಜ ಮತ್ತು ನ್ಯಾಯಾಧೀಶರು ಮೇಲ್ಮನವಿಗಳ ಬಗ್ಗೆ ಆಲಿಸುತ್ತಿದ್ದರು . ನ್ಯಾಯಾಧೀಶನು ನಾಗರೀಕ ಮತ್ತು ಸೈನಿಕ ನ್ಯಾಯ ನಿರ್ವಹಣೆಗೆ ಜವಾಬ್ದಾರನಾಗಿದ್ದನು .
2nd Puc History Chapter 5.3 Mcq Questions in Kannada
ಹೆಚ್ಚುವರಿ ಪ್ರಶ್ನೋತ್ತರಗಳು:
1. ಶಿವಾಜಿಯ ಸೈನಿಕ ಕಾರ್ಯಾಚರಣೆಗೆ ನೆರವಾದ ಗುಡ್ಡಗಾಡು ಜನರು ಯಾರು ?
ಮಾವಳಿಯರು
2 . ಶಿವಾಜಿಯ ಗುರು ಯಾರು ?
ದಾದಾಜಿ ಕೊಂಡದೇವ
3. ಶಿವಾಜಿಯ ಆಕ್ರಮಣದಿಂದ ತನ್ನ ಕೈ ಬೆರಳುಗಳನ್ನು ಕಳೆದುಕೊಂಡವನಾರು ?
ಶೈಯಿಸ್ತಾ ಖಾನ್
4.ಸೂರತ್ ಮೇಲಿನ ದಾಳಿಯು ಯಾವಾಗ ನಡೆಯಿತು ?
ಸಾ.ಶ. 1664 ರಲ್ಲಿ
5.ಶಿವಾಜಿಯ ಮಗನ ಹೆಸರೇನು ?
ಸಾಂಬಾಜಿ
6. ಶಿವಾಜಿಯ ಕಿರೀಟಧಾರಣೆಯಾದ ವರ್ಷ ಯಾವುದು ?
ಸಾ.ಶ. 1674
7.ವೆಂಕೋಜಿ ಯಾರು ?
ಶಿವಾಜಿಯ ಮಲಸಹೋದರ .
8. ಪರಗಣಗಳ ಆಡಳಿತವನ್ನು ಯಾರು ನೋಡಿಕೊಳ್ಳುತ್ತಿದ್ದರು ?
ʼ ದೇಸಾಯಿ ‘ ಎಂಬ ಅಧಿಕಾರಿ .
FAQ
ಶಿವಾಜಿ .
ಛತ್ರಪತಿ .
ಷಹಜಿ ಭೋಂಸ್ಲೆ , ಜೀಜಾಬಾಯಿ .
ಇತರೆ ವಿಷಯಗಳು:
ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್
1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF