ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ – 5.2 ಮೊಘಲರು ನೋಟ್ಸ್, 2nd Puc History Moghalaru Notes Question Answer Mcq in Kannada History Chapter 5.2 Notes Kseeb Solution For Class 12 History Chapter 5.2 Notes History Chapter 5 Medieval Period Questions and Answers
ಅಧ್ಯಾಯ – 5.2 ಮೊಘಲರು
2nd Puc History Chapter 5.2 Question Answer in Kannada
I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :
1. ಅಕ್ಬರ್ ಜಾರಿಗೊಳಿಸಿದ ಹೊಸ ಧರ್ಮ ಯಾವುದು ?
ದಿನ್ – ಇ – ಇಲಾಹಿ
2. ಅಕ್ಬರ್ ನ ಪ್ರಸಿದ್ದ ಕಂದಾಯ ಮಂತ್ರಿ ಯಾರು ?
ರಾಜಾತೋದರ ಮಲ್ಲ .
3.’ ಹುಮಾಯೂನ್ ನಾಮಾ ‘ ಎಂಬ ಗ್ರಂಥ ಬರೆದವರು ಯಾರು ?
ಗುಲ್ಬದನ್ ಬೇಗಂ .
4. ‘ ಅಕ್ಬರ್ ನಾಮಾ ‘ ಎಂಬ ಗ್ರಂಥ ಬರೆದವರು ಯಾರು ?
ಅಬ್ದುಲ್ ಫಜಲ್
5. ‘ ಐನ್ – ಇ – ಅಕ್ಬರಿ ‘ ಎಂಬ ಗ್ರಂಥ ಬರೆದವರು ಯಾರು ?
ಅಬ್ದುಲ್ ಫಜಲ್ .
6. ಅಕ್ಬರನ ಆಸ್ಥಾನದಲ್ಲಿದ್ದ ಪ್ರಸಿದ್ದ ಸಂಗೀತಗಾರ ಯಾರು ?
ತಾನ್ಸೇನ್ .
7. ಮೊದಲ ಪಾಣಿಪತ್ ಕದನ ಯಾವಾಗ ನಡೆಯಿತು ?
ಸಾ.ಶ. 1526 ರಲ್ಲಿ .
8. ಮೊಘಲ್ ಸಂತತಿಯ ಸ್ಥಾಪಕ ಯಾರು ?
ಬಾಬರ್ .
9. ಗೊಂಡ್ವಾನ ರಾಜ್ಯದ ರಾಣಿ ಯಾರು ?
ದುರ್ಗಾವತಿ .
10.’ ಹಳ್ಳಿ ಫಾಟ್ ‘ ಕದನ ಯಾವಾಗ ನಡೆಯಿತು ?
ಸಾ.ಶ. 1576 ರಲ್ಲಿ .
11. ತಾಜ್‌ಮಹಲ್‌ನ ಪ್ರಧಾನ ಶಿಲ್ಪಿ ಯಾರು ?
ಉಸ್ತಾದ್ ಇಸಾ .
2nd Puc History Moghalaru Notes
II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ :
1. ಅಕ್ಬರ್ ನ ರಾಜಧಾನಿಗಳಾವುವು ?
ದೆಹಲಿ , ಫತೇಪುರ .
2. ತೋದರ ಮಲ್ಲನು ವರ್ಗೀಕರಿಸಿದ ಯಾವುದಾದರೂ ಎರಡು ಬಗೆಯ ಭೂಮಿಯ ವಿಧಗಳನ್ನು ಹೆಸರಿಸಿ ,
ಪೋಲಚ್ [ ಸತತ ಉಳುಮೆಯಲ್ಲಿರುವ ಭೂಮಿ ಬಂಜಾರ್ [ 5 ವರ್ಷಗಳಿಗಿಂತ ಹೆಚ್ಚು ಕಾಲ ಉಳುಮೆ ಮಾಡದ ಭೂಮಿ . ]
3. ಅಬ್ದುಲ್ ಫಜಲ್‌ನ ಎರಡು ಕೃತಿಗಳನ್ನು ಹೆಸರಿಸಿ ,
‘ ಐನಿ ಅಕ್ಬರಿ ‘ , ‘ ಅಕ್ಬರ್ ನಾಮಾ ‘
4. 2 ನೇ ಪಾಣಿಪತ್ ಕದನವು ಯಾರ ನಡುವೆ ನಡೆಯಿತು ?
ಹೇಮು [ ರಾಜಾವಿಕ್ರಮಾದಿತ್ಯ ಮತ್ತು ಅಕ್ಬರ್ ನಡುವೆ ನಡೆಯಿತು .
5. ಅಕ್ಬರ್ ಎಲ್ಲಿ ಮತ್ತು ಯಾವಾಗ ಜನಿಸಿದನು ?
ಅಮರಕೋಟೆಯಲ್ಲಿ ಸಾ.ಶ .1542 ರಲ್ಲಿ ಜನಿಸಿದನು .
6. ಅಕ್ಬರ್ ಕಾಲದ ಪ್ರಸಿದ್ಧ ಯಾರಾದರೂ ಇಬ್ಬರು ಇತಿಹಾಸಕಾರರನ್ನು ಹೆಸರಿಸಿ .
ಅಬ್ದುಲ್ ಫಜಲ್ , ಬದೌನಿ .
7. ತಾಜ್‌ಮಹಲ್ ಕಟ್ಟಿಸಿದವರು ಯಾರು ? ಅದು ಎಲ್ಲಿದೆ ?
ತಾಜ್‌ಮಹಲ್ ಕಟ್ಟಿಸಿದವರು ಷಹಜಹಾನ್ , ಅದು ಆಗ್ರಾದಲ್ಲಿದೆ .
8. ಮೊಘಲರ ಕಾಲದ ಯಾರಾದರೂ ಇಬ್ಬರು ಪ್ರಸಿದ್ಧ ಸಂಗೀತಗಾರರನ್ನು ಹೆಸರಿಸಿ .
ತಾನ್‌ಸೇನ್ , ಸೂರ್‌ದಾಸ್
9. ದೆಹಲಿಯಲ್ಲಿನ ಯಾವುದಾದರೂ ಎರಡು ಪ್ರಸಿದ್ಧ ಮೊಘಲ್ ಸ್ಮಾರಕಗಳನ್ನು ತಿಳಿಸಿ .
ದಿವಾನ್ – ಇ – ಆಂ , ಕೆಂಪುಕೋಟೆ
III . ಈ ಕೆಳಗಿನ ಪ್ರಶ್ನೆಗಳಿಗೆ 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಿ :
1. ಅಕ್ಬರ್ ನ ಧಾರ್ಮಿಕ ಮತ್ತು ರಜಪೂತ ನೀತಿಯನ್ನು ವಿವರಿಸಿ .
ರಜಪೂತ ನೀತಿ :
- ಧೈರ್ಯ ಮತ್ತು ರಾಜನಿಷ್ಟೆಯುಳ್ಳ ರಜಪೂತರು ಮೊಘಲರ ಶತ್ರುಗಳಾಗಿದ್ದರೂ ಸಹ ಅಕ್ಷರಮು ಅವರ ಮಹತ್ವವನ್ನರಿತು ಅವರೊಡನೆ ಸ್ನೇಹ ಸಂಬಂಧ ವೈವಾಹಿಕ ಸಂಬಂಧವನ್ನು ಏರ್ಪಡಿಸಿಕೊಂಡನು.ಅವರನ್ನು ಮನ್‌ಸಬ್ದಾರರನ್ನಾಗಿ ನೇಮಿಸಿದನು .
- ಜೈಪುರದ ಬಿಹಾರಿಮಲ್‌ನ ಮಗಳಾದ ಜೋಡಾ ಬಾಯಿಯನ್ನು ವಿವಾಹವಾದನು . ರಜಪೂತ ಅರಸರು ಆಂತರಿಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಅನುಮತಿ ನೀಡಿದನು .
- ‘ ಜಜಿಯಾ ‘ ರದ್ದುಪಡಿಸಿದನು .
ಧಾರ್ಮಿಕ ನೀತಿ :
- ಪರಮತ ಸಹಿಷ್ಣುವಾಗಿದ್ದು ಅವರವರ ಧರ್ಮದ ಆಚರಣೆಗೆ ಮುಕ್ತ ಅವಕಾಶ ಮಾಡಿಕೊಟ್ಟು ಹಿಂದೂ ಹಬ್ಬಗಳಲ್ಲಿ ಅವನೂ ಪಾಲ್ಗೊಳ್ಳುತ್ತಿದ್ದನು .
- ಬಾಲ್ಯವಿವಾಹ , ಸತಿಪದ್ಧತಿಯನ್ನು ರದ್ದುಪಡಿಸಿದನು . ದಿನ್ – ಇ – ಇಲಾಹಿ ಎಂಬ ಹೊಸಧರ್ಮವನ್ನು ಸ್ಥಾಪಿಸಿದನು .
2. ಅಕ್ಬರನ ಆಡಳಿತವನ್ನು ಸಂಕ್ಷಿಪ್ತವಾಗಿ ಬರೆಯಿರಿ .
- ಅಕ್ಷರನ ಅಧೀನದಲ್ಲಿ ಮೊಘಲರ ಆಡಳಿತ ಕೇಂದ್ರೀಕೃತ ವಾಗಿತ್ತು . ಅವನು ಇಸ್ಲಾಂ ತತ್ವಗಳಿಗೆ ಅನುಸಾರವಾಗಿ ಆಡಳಿತವನ್ನು ನಡೆಸುತ್ತಿದ್ದನು .
- ವಕೀಲ್ ( ಮುಖ್ಯಮಂತ್ರಿ ) , ದಿವಾನ್ – ಇ – ಆಲಾ ( ಅರ್ಥಮಂತ್ರಿ ) , ಮೀರ್‌ಭಕ್ಷಿ ( ವೇತನ ಬಟವಾಡೆ ಅಧಿಕಾರಿ ) , ಸದರ್ ಉಸ್ – ಸದರ್ ( ದಾನದತ್ತಿಯ ಉಸ್ತುವಾರಿ ) ಖಾನ್ – ಇ – ಸಮಾನ್ ( ಗೃಹಮಂತ್ರಿ ) ದಿವಾನ್ ( ಕಂದಾಯ ಮಂತ್ರಿ ) , ಖಾಜಿ ( ಮುಖ್ಯ ನ್ಯಾಯಾಧೀಶ ] ಎಂಬ ಮಂತ್ರಿಗಳಿದ್ದು ಅಕ್ಷರನಿಗೆ ಆಡಳಿತದಲ್ಲಿ ಸಲಹೆ ಮತ್ತು ಸಹಕಾರವನ್ನು ನೀಡುತ್ತಿದ್ದರು .
- ಅಕ್ಷರನ ಸಾಮ್ರಾಜ್ಯವು 16 ಪ್ರಾಂತ್ಯಗಳನ್ನು [ ಸುಭಾ ] ಒಳಗೊಂಡಿತ್ತು . ಪ್ರತಿಯೊಂದು ಪ್ರಾಂತ್ಯಕ್ಕೂ ಸುಭಾದಾರ್ ಎಂಬ ರಾಜ್ಯಪಾಲನಿದ್ದನು . ಸುಭಾಗಳನ್ನು ಸರ್ಕಾರ್ [ ಜಿಲ್ಲೆ ] ಗಳಾಗಿ , ಸರ್ಕಾರ್ ಗಳನ್ನು ಪರ್ಗಣ [ ತಾಲ್ಲೂಕು ಗಳಾಗಿ ವಿಂಗಡಿಸ ಲಾಗಿತ್ತು . ನಗರಾಡಳಿತದ ಉಸ್ತುವಾರಿಯು ಕೊತ್ವಾಲರದಾಗಿತ್ತು .
- ಸಾ.ಶ. 1582 ರಲ್ಲಿ ಫತೇಮರ ಸಿಕ್ರಿಯಲ್ಲಿ ಇಬಾದತ ಖಾನಾ ‘ ವನ್ನು ನಿರ್ಮಿಸಿದನು . ಹಿಂದೂ , ಬೌದ್ಧ ಜೈನ , ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಧಾರ್ಮಿಕ ನಾಯಕರು ಇಲ್ಲಿ ಸಭೆ ಸೇರುತ್ತಿದ್ದರು .
- ಗ್ರಾಮವು ಆಡಳಿತದ ಕೊನೆಯ ಘಟಕವಾಗಿತ್ತು .
- ಮನ್‌ಸಬ್ದಾರಿ ಪದ್ಧತಿ : ಮೀರ್‌ಭಕ್ಷಿಯ ನೆರವಿನಿಂದ ಈ ಪದ್ಧತಿಯನ್ನು ರೂಪಿಸಲಾಯಿತು . ಮನ್ ಸಬ್ಬಾರರು ಸೈನಿಕರ ಗುಂಪುಗಳ ನಾಯಕರಾಗಿದ್ದರು . ಈ ಪದ್ಧತಿಯಲ್ಲಿ ಚಾಟ್ [ ಸೈನಿಕರ ಸಂಖ್ಯೆ ] , ಸವಾ [ ಕುದುರೆಯ ಸವಾರರ ಸಂಖ್ಯೆ ] ಎಂಬ ಎರಡು ವಿಭಾಗವಿತ್ತು .
- ತೋದರ ಮಲ್ಲ ಎಂಬುವವನು ಉತ್ತಮವಾದ ಕಂದಾಯ ಪದ್ಧತಿಯನ್ನು ರೂಢಿಸಿದ್ದು ಇದು ಭೂಮಿಯ ಫಲವತ್ತೆಯನ್ನು ಅನುಸರಿಸಿತು . ತೋದರ ಮಲ್ಲನ ಬಂದೋಬಸ್ತ್ ಎಂಬ ಪದ್ದತಿಯ ಮೂಲಕ ರೈತರಿಗೆ ಸಾಲ ಸೌಲಭ್ಯ ದೊರೆಯುತ್ತಿತ್ತು .
3. ಸಾಹಿತ್ಯ ಹಾಗೂ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೊಘಲರ ಕೊಡುಗೆಗಳನ್ನು ವಿವರಿಸಿ .
- ಇವರ ಕಾಲದಲ್ಲಿ ಟರ್ಕಿಶ್ , ಪರ್ಷಿಯನ್ , ಸಂಸ್ಕೃತ ಮತ್ತು ಹಿಂದಿ ಸಾಹಿತ್ಯಗಳು ಏಳಿಗೆ ಹೊಂದಿದ್ದವು . ಬಾಬರನು ಬಾಬರ್‌ನಾಮಾ ಬರೆದನು .
- ರಾಮಾಯಣ , ಮಹಾಭಾರತ , ಅಥರ್ವಣವೇದ , ಪಂಚತಂತ್ರ ಮುಂತಾದವುಗಳನ್ನು ಸಂಸ್ಕೃತದಿಂದ ಪರ್ಷಿಯನ್‌ಗೆ ತರ್ಜುಮೆ ಮಾಡಲಾಯಿತು .
- ಷಹಜಹಾನನ ಮಗ ದಾರ ಉಪನಿಷತ್‌ಗಳನ್ನು ಪರ್ಶಿಯನ್ ಭಾಷೆಗೆ ತರ್ಜುಮೆ ಮಾಡಿದನು . ಅಬ್ದುಲ್ ಫಜಲ್ : ಐನ್ ಇ – ಅಕ್ಟರಿ ಮತ್ತು ಅಕ್ಟರನಾಮಾ , ಗುಲ್ಬದನ್ ಬೇಗಂ : ಹುಮಾಯೂನ್ ನಾಮಾ , ಮಲಿಕ್ ಮಹಮದ್ ಜೈಸಿಯು ಪದ್ಮಾವತಿ , ಮುಂತಾದವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ .
ಕಲೆ ಮತ್ತು ವಾಸ್ತುಶಿಲ್ಪ :
- ಇವರು ಕಲೆ ಮತ್ತು ವಾಸ್ತುಶಿಲ್ಪದ ಆರಾಧಕರಾಗಿದ್ದು , ಗುಮ್ಮಟಗಳು , ಎತ್ತರವಾದ ಸ್ತಂಭಗಳು , ಹೆಬ್ಬಾಗಿಲುಗಳು , ಕಮಾನು ಗಳು , ಅರಮನೆಗಳು , ಕೋಟೆಗಳನ್ನು ಸುಂದರವಾಗಿ ನಿರ್ಮಿಸಿದ್ದಾರೆ .
- ಕಾಬೂಲ್‌ಬಾಗ್ , ಜುಮ್ಮಾಮಸೀದಿ , ಬುಲಂದ್ ದರ್ವಾಜ , ಪಂಚಮಹಲ್ , ಬಾದ್ ಷಾಹಿ ಮಸೀದಿ , ತಾಜ್‌ಮಹಲ್ , ಮೋತಿ ಮಸೀದಿ , ಜುಮಾ ಮಸೀದಿ , ದಿವಾನ್ – ಇ – ಆಂ , ಕೆಂಪುಕೋಟೆ , ಮಯೂರು ಸಿಂಹಾಸನ , ಇವುಗಳಲ್ಲಿ ಮುಖ್ಯವಾದವು .
I. ಈ ಕೆಳಗಿನ ಪ್ರಶ್ನೆಗೆ 30 ರಿಂದ 40 ವಾಕ್ಯಗಳಲ್ಲಿ ಉತ್ತರಿಸಿ :
2nd Puc History 5th Chapter Notes in Kannada
1. ಅಕ್ಬರನ ಸಾಧನೆಗಳನ್ನು ವಿವರಿಸಿ .
ಜಲಾಲ್ – ಉದ್ – ದೀನ್ ಮಹಮದ್ ಅಕ್ಟರನು ಹುಮಾಯೂನ್ ಮತ್ತು ಹಮೀದಾಬಾನು ಬೇಗಂ ರ ಮಗ . ಹುಮಾಯೂನನು ತನ್ನ ರಾಜ್ಯವನ್ನು ಕಳೆದುಕೊಂಡು ಅಲೆಮಾರಿಯಾಗಿ ಸಂಚರಿಸುತ್ತಿದ್ದಾಗ ‘ ರಾಣಾ ‘ ನ ರಕ್ಷಣೆಯಲ್ಲಿ ಅಮರಕೋಟೆ ಎಂಬಲ್ಲಿ ಸಾ.ಶ. 1542 ರಲ್ಲಿ ಜನಿಸಿದನು . ತಂದೆಯ ಮರಣದಿಂದಾಗಿ 14 ನೇ ವಯಸ್ಸಿನಲ್ಲಿಯೇ ಅಧಿಕಾರಕ್ಕೆ ಬರಬೇಕಾಯಿತು . ಬೈರಾಂಖಾನನು ರಾಜಪ್ರತಿನಿಧಿಯಾಗಿದ್ದನು .
ಅಕ್ಬರ ನ ಸೈನಿಕ ಸಾಧನೆಗಳು
2 ನೇ ಪಾಣಿಪತ್ ಕದನ :
- ಬಂಗಾಳದ ಆದಿಲ್ ಷಾನ ಪ್ರಧಾನ ಮಂತ್ರಿಯಾದ ಹೇಮು ಮೊಘಲ್ ರಾಜ್ಯಪಾಲದೆಹಲಿ ಮತ್ತು ಆಗ್ರಾವನ್ನು ಇದರಿಂದಾಗಿ ಬೈರಾಂಖಾನನ ತರ್ದಿ ಬೇಗ್‌ನಿಂದ ವಶಪಡಿಸಿಕೊಂಡನು . ನೆರವಿನೊಂದಿಗೆ ಈ ಕದನ ನಡೆಯಿತು . ಹೇಮು ಜಯ ಸಾಧಿಸಬೇಕಾದ ಸಮಯದಲ್ಲಿ ಆತನ ಕಣ್ಣಿಗೆ ಬಾಣವೊಂದು ತಗುಲಿ ಬೈರಾಂಖಾನ್‌ನಿಂದ ಕೊಲೆಯಾದನು .
- ಅಕ್ಬರ್ ದೆಹಲಿ ಮತ್ತು ಆಗ್ರಾವನ್ನು ವಶಪಡಿಸಿಕೊಂಡನು . ಗೊಂಡ್ವಾನದಲ್ಲಿ ರಾಣಿ ದುರ್ಗಾವತಿಯು ತನ್ನ ಮಗ ವೀರ ನಾರಾಯಣನ ರಾಜ ಪ್ರತಿನಿಧಿಯಾಗಿ ಆಳುತ್ತಿದ್ದಾಗ ಅಕ್ಷರನ ಮಂತ್ರಿ ಅಸಫ್‌ಖಾನ್ ಅವಳೊಂದಿಗೆ ಯುದ್ಧ ಮಾಡಿ ಸಾಯಿಸಿ , ಗೊಂಡ್ವಾನವನ್ನು ವಶಪಡಿಸಿಕೊಂಡನು .
- ಗುಜರಾತಿನ ರಾಜ ಮುಜಾಫರ್ ಷಾನನ್ನು ಸೋಲಿಸಿ ಗುಜರಾತ್ ವಶಪಡಿಸಿಕೊಂಡನು . ಬಂಗಾಳದ ರಾಜ್ಯಪಾಲ ದಾವುದ್‌ಖಾನ್‌ನನ್ನು ಸೋಲಿಸಿ ಬಂಗಾಳ ಮತ್ತು ಒರಿಸ್ಸಾಗಳನ್ನು ವಶಪಡಿಸಿ ಕೊಂಡನು .
- ಅಕ್ಬರನ ಮಲ ಸಹೋದರಿ ಹಕೀಮ್ ಮಿರ್ಜಾನ ಸಾವಿನ ನಂತರ ಕಾಬೂಲ್ ಮತ್ತು ಕಾಶ್ಮೀರಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು .
ರಜಪೂತ ನೀತಿ :
- ಧೈರ್ಯ ಮತ್ತು ರಾಜನಿಷ್ಟೆಯುಳ್ಳ ರಜಪೂತರು ಮೊಘಲರ ಶತ್ರುಗಳಾಗಿದ್ದರೂ ಸಹ ಅಕ್ಬರನು ಅವರ ಮಹತ್ವವನ್ನರಿತು ಅವರೊಡನೆ ಸ್ನೇಹ ಸಂಬಂಧ , ವೈವಾಹಿಕ ಸಂಬಂಧವನ್ನು ಏರ್ಪಡಿಸಿ ಕೊಂಡನು . ಅವರನ್ನು ಮನ್‌ಸಬ್ದಾರರನ್ನಾಗಿ ನೇಮಿಸಿದನು .
- ಜೈಪುರದ ಬಿಹಾರಿಮಿನ ಮಗಳಾದ ಜೋದಾ ಬಾಯಿಯನ್ನು ವಿವಾಹವಾದನು . ರಜಪೂತ ಅರಸರು ಆಂತರಿಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಅನುಮತಿ ನೀಡಿದನು .
- ‘ ಜಜಿಯಾ ‘ ರದ್ದುಪಡಿಸಿದನು .
ಧಾರ್ಮಿಕ ನೀತಿ :
- ಪರಮತ ಸಹಿಷ್ಣುವಾಗಿದ್ದು ಅವರವರ ಧರ್ಮದ ಆಚರಣೆಗೆ ಮುಕ್ತ ಅವಕಾಶ ಮಾಡಿಕೊಟ್ಟು ಹಿಂದೂ ಹಬ್ಬಗಳಲ್ಲಿ ಅವನೂ ಪಾಲ್ಗೊಳ್ಳುತ್ತಿದ್ದನು .
- ಬಾಲ್ಯವಿವಾಹ , ಸತಿಪದ್ಧತಿಯನ್ನು ರದ್ದುಪಡಿಸಿದನು .
- ದಿನ್ – ಇ – ಇಲಾಹಿ ಎಂಬ ಹೊಸಧರ್ಮವನ್ನು ಸ್ಥಾಪಿಸಿದನು .
- ಸಾ.ಶ. 1582 ರಲ್ಲಿ ಫತೇಪುರ ಸಿಕ್ರಿಯಲ್ಲಿ ಇಬಾದತ್ ಖಾನಾ ‘ ವನ್ನು ನಿರ್ಮಿಸಿದನು . ಹಿಂದೂ , ಬೌದ್ಧ , ಜೈನ , ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಧಾರ್ಮಿಕ ನಾಯಕರು ಇಲ್ಲಿ ಸಭೆ ಸೇರುತ್ತಿದ್ದರು ಅಕ್ಷರನ ಅಧೀನದಲ್ಲಿ ಮೊಘಲರ ಆಡಳಿತ ಕೇಂದ್ರೀಕೃತ ವಾಗಿತ್ತು .
- ಅವನು ಇಸ್ಲಾಂ ತತ್ವಗಳಿಗೆ ಅನುಸಾರವಾಗಿ ಆಡಳಿತವನ್ನು ನಡೆಸುತ್ತಿದ್ದನು . ವಕೀಲ್ ( ಮುಖ್ಯಮಂತ್ರಿ ) , ದಿವಾನ್ – ಇ – ಆಲಾ ( ಅರ್ಥಮಂತ್ರಿ ) , ಮೀರ್‌ಭಕ್ಷಿ ( ವೇತನ ಬಟವಾಡೆ ಅಧಿಕಾರಿ ) , ಸದರ್ ಉಸ್ – ಸದರ್ ( ದಾನದತ್ತಿಯ ಉಸ್ತುವಾರಿ ) , ಖಾನ್ – ಇ – ಸಮಾನ್ ( ಗೃಹಮಂತ್ರಿ ) ದಿವಾನ್ ( ಕಂದಾಯ ಮಂತ್ರಿ ) , ಖಾಜಿ [ ಮುಖ್ಯನ್ಯಾಯಾಧೀಶ ] ಎಂಬ ಮಂತ್ರಿಗಳಿದ್ದು ಅಕ್ಷರನಿಗೆ ಆಡಳಿತದಲ್ಲಿ ಸಲಹೆ ಮತ್ತು ಸಹಕಾರವನ್ನು ನೀಡುತ್ತಿದ್ದರು .
- ಅಕ್ಬರ್ನ ಸಾಮ್ರಾಜ್ಯವು 16 ಪ್ರಾಂತ್ಯಗಳನ್ನು [ ಸುಭಾ ] ಒಳಗೊಂಡಿತ್ತು .
- ಪ್ರತಿಯೊಂದು ಪ್ರಾಂತ್ಯಕ್ಕೂ ಸುಭಾದಾರ್ ಎಂಬ ರಾಜ್ಯಪಾಲನಿದ್ದನು .
- ಸುಭಾಗಳನ್ನು ಸರ್ಕಾರ್ [ ಜಿಲ್ಲೆ ] ಗಳಾಗಿ , ಸರ್ಕಾರ್ ಗಳನ್ನು ಪರ್ಗಣ [ ತಾಲ್ಲೂಕ್ಕು ಗಳಾಗಿ ವಿಂಗಡಿಸ ಲಾಗಿತ್ತು . ನಗರಾಡಳಿತದ ಉಸ್ತುವಾರಿಯು ಕೊತ್ವಾಲರ ದಾಗಿತ್ತು .
- ಗ್ರಾಮವು ಆಡಳಿತದ ಕೊನೆಯ ಘಟಕವಾಗಿತ್ತು .
- ಮನ್‌ಸಬ್ದಾರಿ ಪದ್ಧತಿ : ಮೀರ್‌ಭಕ್ತಿಯ ನೆರವಿನಿಂದ ಈ ಪದ್ಧತಿಯನ್ನು ರೂಪಿಸಲಾಯಿತು . ಮಾನ್ ಸಬ್ಬಾರರು ಸೈನಿಕರ ಗುಂಪುಗಳ ನಾಯಕರಾಗಿದ್ದರು . ಈ ಪದ್ಧತಿಯಲ್ಲಿ ಚಾಟ್ [ ಸೈನಿಕರ ಸಂಖ್ಯೆ ] . ಸವಾರ್ [ ಕುದುರೆಯ ಸವಾರರ ಸಂಖ್ಯೆ ] ಎಂಬ ಎರಡು ವಿಭಾಗವಿತ್ತು .
- ತೋದರ ಮಲ್ಲ ಎಂಬುವವನು ಉತ್ತಮವಾದ ಕಂದಾಯ ಪದ್ದತಿಯನ್ನು ರೂಢಿಸಿದ್ದು . ಇದು ಭೂಮಿಯ ಫಲವತ್ತತೆಯನ್ನು ಅನುಸರಿಸಿತ್ತು .
- ತೋದರ ಮಲ್ಲನ ಬಂದೋಬಸ್ತ್ ಎಂಬ ಪದ್ದತಿಯ ಮೂಲಕ ರೈತರಿಗೆ ಸಾಲ ಸೌಲಭ್ಯ ದೊರೆಯುತ್ತಿತ್ತು .
ಹೆಚ್ಚುವರಿ ಪ್ರಶ್ನೋತ್ತರಗಳು:
1. ಬಂಗಾಳದ ಮಹ್ಮದ್ ಆದಿಲ್ ಷಾನ ಪ್ರಧಾನ ಮಂತ್ರಿ ಯಾರು ?
ಹೇಮು ( ರಾಜಾವಿಕ್ರಮಾದಿತ್ಯ )
2. ಹೇಮುವಿನ ಹತ್ಯೆಯ ನಂತರ ಅಕ್ಟರ್ ಯಾವ ಯಾವ ಪ್ರದೇಶಗಳನ್ನು ವಶಪಡಿಸಿಕೊಂಡನು ?
ದೆಹಲಿ ಮತ್ತು ಆಗ್ರಾ
3. ಹುಮಾಯೂನನು ಯಾರಿಂದ ಅಧಿಕಾರವನ್ನು ಕಳೆದುಕೊಂಡನು ?
ಷೇರ್ ಷಹ ಸೂರ್
4. ಭಾರತಕ್ಕೆ ಪಿರಂಗಿ ದಳದ ಪರಿಚಯವನ್ನು ಮಾಡಿಸಿದವರಾರು ?
ಬಾಬರ್
5.ಅಕ್ಬರ್ನ ಬಾಲ್ಯದಲ್ಲಿ ರಾಜಪ್ರತಿನಿಧಿಯಾಗಿದ್ದವರು ಯಾರು ?
ಭೈರಾಂಖಾನ್
6.ಗೊಂಡ್ವಾನದ ರಾಣಿ ಯಾರು ?
ರಾಣಿ ದುರ್ಗಾವತಿ
7 . ಅಕ್ಬರ್ನ ಹೆಂಡತಿಯಾದ ಜೋದಾಬಾಯಿ ಯಾರ ಮಗಳು ?
ಅಂಬರ್ ( ಜೈಪುರ ) ದ ಬಿಹಾರಿಮಲ್‌ನ ಮಗಳು .
8. ಮೊಘಲರ ಆಕ್ರಮಣದ ವಿರುದ್ಧ ವೀರಾವೇಶದಿಂದ ಹೋರಾಡಿದ ಅಹಮದ್‌ನಗರದ ರಾಣಿ ಯಾರು ?
ಚಾಂದ್ ಬೀಬಿ
9. ಅಕ್ಬರ್ ಎಲ್ಲಿ ಜನಿಸಿದನು?
ಅಮರ ಕೋಟೆಯಲ್ಲಿ
FAQ
ಬಾಬರ್ .
ದಿನ್ – ಇ – ಇಲಾಹಿ
ಅಮರ ಕೋಟೆಯಲ್ಲಿ
ಇತರೆ ವಿಷಯಗಳು:
ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್
1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF