ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ – 5.1 ದೆಹಲಿ ಸುಲ್ತಾನರು ನೋಟ್ಸ್, 2nd Puc History Chapter 5.1 Notes Question Answer Dehali Sultanaru Notes Pdf Kseeb Solution For Class 12 History Chapter 5.1 Notes in Kannada 2nd Puc History Chapter 5 Notes in Kannada Medieval Period in Kannada
ಇತಿಹಾಸ ಅಧ್ಯಾಯ – 5.1 ಮಧ್ಯಕಾಲೀನ ಯುಗ ( ದೆಹಲಿ ಸುಲ್ತಾನರು )
2nd Puc History Chapter 5 Notes in Kannada
I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :
1. ಭಾರತದ ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಮರು ಯಾರು ?
ಅರಬ್ಬರು .
2. ಅಲ್ಬೆರುನಿಯ ಪ್ರಸಿದ್ದ ಪುಸ್ತಕವನ್ನು ಹೆಸರಿಸಿ .
ಕಿತಾಬ್ – ಉಲ್ – ಹಿಂದ್ .
3. ಗುಲಾಮಿ ಸಂತತಿಯ ಸ್ಥಾಪಕರು ಯಾರು ?
ಕುತುಬ್ – ಉದ್ – ದಿನ್ ಐಬಕ್
4. ಖಿಲ್ಟಿ ಸಂತತಿಯ ಸ್ಥಾಪಕರು ಯಾರು ?
ಜಲಾಲ್‌ಉದ್ದೀನ್ ಖಿಲ್ಲಿ .
5. ದಕ್ಷಿಣದ ದಂಡೆಯಾತ್ರೆ ಕೈಗೊಂಡ ಅಲ್ಲಾವುದ್ದೀನ್ ಖಿಲ್ಡಿಯ ಪ್ರಸಿದ್ದ ದಂಡನಾಯಕ ಯಾರು ?
ಮಲ್ಲಿಕಾಫರ್ .
6. ‘ ಭಾರತದ ಗಿಣಿ ‘ ಎಂದು ಯಾರನ್ನು ಕರೆಯಲಾಗಿದೆ ?
ಅಮೀರ್ ಖುಸ್ರು .
7 . ತೊಘಲಕ್ ಸಂತತಿಯ ಸ್ಥಾಪಕರು ಯಾರು ?
ಫಿಯಾಸುದ್ದೀನ್ ತೊಘಲಕ್ .
8.ತೊಘಲಕ್ ಸಂತತಿಯ ಪ್ರಸಿದ್ದ ಸುಲ್ತಾನನು ಯಾರು ?
ಮಹಮದ್ ಬಿನ್ ತೊಘಲಕ್ .
9. ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾಯಿಸಿದವರು ಯಾರು ?
ಮಹಮದ್ ಬಿನ್ ತೊಘಲಕ್ .
10. ಸಾಂಕೇತಿಕ ನಾಣ್ಯವನ್ನು ಜಾರಿಗೊಳಿಸಿದವರು ಯಾರು ?
ಮಹಮದ್ ಬಿನ್ ತೊಘಲಕ್ .
11. ದೆಹಲಿಯಲ್ಲಿ ಕುತುಬ್ ಮಿನಾರ್‌ನ ನಿರ್ಮಾಣವನ್ನು ಆರಂಭಿಸಿದವರು ಯಾರು ?
ಕುತುಬ್ – ಉದ್ – ದೀನ್ ಐಬಕ್ .
II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ :
1. 2 ನೇ ತರೈನ್ ಕದನ ನಡೆದ ವರ್ಷ ಯಾವುದು ? ಅದು ಯಾರ ನಡುವೆ ನಡೆಯಿತು ?
2 ನೇ ತರೈನ್ ಕದನ ಸಾ.ಶ .1192 ರಲ್ಲಿ ಘಜೈ ಮಹಮದ್ ಮತ್ತು ಪೃಥ್ವಿರಾಜ್ ಚೌಹಾನ್ ನಡುವೆ ನಡೆಯಿತು .
2. ಅಲ್ಲಾವುದ್ದೀನ್ ಖಿಲ್ಲಿ ಕಟ್ಟಿಸಿದ ಯಾವುದಾದರೂ ಎರಡು ಪ್ರಮುಖ ಸ್ಮಾರಕಗಳನ್ನು ಹೆಸರಿಸಿ .
ಜಮೈತ್‌ಖಾನ್ ಮಸೀದಿ , ಅಲೈದರ್ವಾಜ ,
3. ಎರಡನೇ ಸಿಕಂದರ್ ಎಂದು ಅಲ್ಲಾವುದ್ದೀನ್ ಖಿಲ್ಲಿಯು ತನ್ನನ್ನು ಕರೆದುಕೊಂಡಿದ್ದು ಏಕೆ ?
ಇವನಿಗೆ ಇಡೀ ಪ್ರಪಂಚವನ್ನೇ ಗೆಲ್ಲಬೇಕೆಂಬ ಆಸೆ ಇತ್ತು . ಆದರೆ ಭಾರತವನ್ನು ಮಾತ್ರ ಗೆಲ್ಲುವಲ್ಲಿ ತೃಪ್ತಿ ಪಟ್ಟುಕೊಳ್ಳಬೇಕಾಯಿತು . ಆದ್ದರಿಂದ 2 ನೇ ಸಿಕಂದರ್ ಎಂದು ಕರೆದುಕೊಂಡನು .
4. ದೆಹಲಿಯನ್ನು ಆಳಿದ ಯಾವುದಾದರೂ ಎರಡು ಸುಲ್ತಾನ ಸಂತತಿಗಳನ್ನು ಹೆಸರಿಸಿ .
ಗುಲಾಮಿ ಸಂತತಿ , ತೊಘಲಕ್ ಸಂತತಿ ,
5. ಅಲ್ಲಾವುದ್ದೀನ್ ಖಿಲ್ಜಿಯ ಇಬ್ಬರು ಸೇನಾಪತಿಗಳನ್ನು ಹೆಸರಿಸಿ .
ಉಲುಫ್ ಖಾನ್ , ನಜರತ್ ಖಾನ್ ,
6. ಮಹಮದ್ ಬಿನ್ ತೊಘಲಕನು ರಾಜಧಾನಿಯ ವರ್ಗಾವಣೆ ಮಾಡಿದ್ದಕ್ಕೆ ಯಾವುದಾದರೂ ಎರಡು ಕಾರಣಗಳನ್ನು ನೀಡಿ .
ಮಂಗೋಲರ ಧಾಳಿಯನ್ನು ತಡೆಯಲು . ದೆಹಲಿಯು ಗಡಿಪ್ರದೇಶಕ್ಕೆ ಹತ್ತಿರವಿದ್ದುದು .
7. ತೊಘಲಕ್ ಕಾಲದ ಇಬ್ಬರು ಇತಿಹಾಸಕಾರರನ್ನು ಹೆಸರಿಸಿ .
ಜಿಯಾವುದ್ದೀನ್ ಬರಾನಿ , ಇಬಾನ್‌ಬತೂತ ,
8. ‘ ತಾರೀಜ್ – ಇ – ಫಿರೋಜ್ ಷಾಹಿ ‘ ಯನ್ನು ಬರೆಯ ಲಾರಂಭಿಸಿದವರು ಯಾರು ? ಅದನ್ನು ಪೂರ್ಣಗೊಳಿಸಿ ದವರು ಯಾರು ?
ಬರಾನಿ , ಪೂರ್ಣಗೊಳಿಸಿದನು . ಶಾಮ್ಸ್ – ಇ – ಸಿರಾಜ್ ಅಫೀಫ್
9. ಅಮೀರ್ ಖುಸ್ರುವಿನ ಎರಡು ಗ್ರಂಥಗಳನ್ನು ಹೆಸರಿಸಿ .
ಖಜ್ಯಾನ್ – ಉಲ್ – ಮುಹತ್ , ತಾರೀಖ್ – ಇ – ಅಲೈ .
III . ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದನ್ನು 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಿ :
2nd Puc History Chapter 5.1 Notes Question Answer
1. ಅಲ್ಲಾವುದ್ದೀನ್ ಖಿಲ್ಡಿಯ ದಕ್ಷಿಣ ದಂಡಯಾತ್ರೆಯ ಬಗ್ಗೆ ಒಂದು ವಿವರಣೆ ಬರೆಯಿರಿ .
ದಕ್ಷಿಣ ಭಾರತದ ಅಪಾರ ಸಂಪತ್ತು ಮತ್ತು ಅದನ್ನು ಆಕ್ರಮಿಸುವ ಉದ್ದೇಶದಿಂದ ತನ್ನ ಸಮರ್ಥ ಸೇನಾನಿಯಾದ ಮಲ್ಲಿಕಾಫರ್‌ನನ್ನು ದಕ್ಷಿಣ ಭಾರತದ ದಂಡಯಾತ್ರೆಗೆ ನಿಯೋಜಿಸಿದನು .
ದೇವಗಿರಿಯ ಮೇಲೆ ಆಕ್ರಮಣ ( ಸಾ.ಶ. 1307 ) :
ದೇವಗಿರಿಯ ರಾಜ ರಾಮಚಂದ್ರದೇವನನ್ನು ಸೋಲಿಸಿ ರಾಣಿ ದೇವಲದೇವಿಯನ್ನು ಸೆರೆಹಿಡಿದನು . ಅವಳನ್ನು ಅಲ್ಲಾವುದ್ದೀನ್ ಖಿಲ್ಲಿಯ ಹಿರಿಯ ಮಗ ಖಜರ್‌ಖಾನನು ವಿವಾಹವಾದನು . ರಾಮಚಂದ್ರ ದೇವನು ವಾರ್ಷಿಕ ಕಪ್ಪ ಕಾಣಿಕೆ ಕೊಡಲು ಒಪ್ಪಿದನು .
ವಾರಂಗಲ್‌ನ ದಂಡಯಾತ್ರೆ [ ಸಾ.ಶ. 1309 ] :
ವಾರಂಗಲ್‌ನ ರಾಜ ಪ್ರತಾಪರುದ್ರದೇವನು ಮಲ್ಲಿಕಾಫರನಿಗೆ ಶರಣಾಗಿ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕಾಯಿತು . ಅಲ್ಲದೆ ಅಪಾರವಾದ ಸಂಪತ್ತನ್ನು ಕೊಟ್ಟನು .
ದ್ವಾರಸಮುದ್ರದ ಮೇಲೆ ದಾಳಿ [ ಸಾ.ಶ. 1310 ] :
ಹೊಯ್ಸಳ ರಾಜ 3 ನೇ ವೀರಬಲ್ಲಾಳನ ದ್ವಾರಸಮುದ್ರದ ಮೇಲೆ ಆಕ್ರಮಣ ಮಾಡಿದ ಮಲ್ಲಿಕಾಫರ್ ರಾಜಧಾನಿಯನ್ನು ಲೂಟಿ ಮಾಡಿ ಹಲವಾರು ದೇವಾಲಯಗಳನ್ನು ಕೆಡವಿದನು .
ಮಧುರೈನ ಆಕ್ರಮಣ [ ಸಾ.ಶ . 1311 ] :
ಮಧುರೈನಲ್ಲಿ ಸುಂದರ ಪಾಂಡ್ಯ ಮತ್ತು ವೀರ ಪಾಂಡ್ಯ ಎಂಬ ಸಹೋದರರ ಮಧ್ಯೆ ಅಂತಃ ಕಲಹ ನಡೆಯುತ್ತಿತ್ತು . ಈ ಮಧ್ಯೆ ಮಲ್ಲಿಕಾಫರ್‌ನ ಸೈನ್ಯ ನುಗ್ಗಿ ಹಲವಾರು ನಗರ ಹಾಗೂ ದೇವಾಲಯಗಳನ್ನು ಲೂಟಿ ಮಾಡಿತು . ಅಲ್ಲಿನ ಪ್ರಸಿದ್ಧ ದೇವಾಲಯವನ್ನು ಧ್ವಂಸಮಾಡಿ ಮಸೀದಿಯನ್ನು ನಿರ್ಮಿಸಿದನು .
ದೇವಗಿರಿಯ ಮೇಲೆ 2 ನೇ ಆಕ್ರಮಣ [ ಸಾ.ಶ. 1312 ]
ಇದು ಕೊನೆಯ ಯುದ್ಧವಾಗಿದ್ದು ದೇವಗಿರಿಯ ಶಂಕರದೇವನು ಕಪ್ಪ ಕಾಣಿಕೆಗಳನ್ನು ತಡೆಹಿಡಿದು ಸ್ವತಂತ್ರನಾಗಲು ಪ್ರಯತ್ನಿಸುತ್ತಿದ್ದುದನ್ನು ಅರಿತ ಮಲ್ಲಿಕಾಫರ್ ಅವನನ್ನು ಸಾಯಿಸಿ ದೇವಗಿರಿಯನ್ನು ವಶಪಡಿಸಿಕೊಂಡನು .
2. ಅಲ್ಲಾವುದ್ದೀನ್ ಖಿಲ್ವಿಯ ಸುಧಾರಣೆಗಳನ್ನು ತಿಳಿಸಿ .
ಅಲ್ಲಾವುದ್ದೀನನು ಪ್ರಬಲ ಮತ್ತು ಸಮರ್ಥ ಆಡಳಿತಗಾರನಾಗಿದ್ದು ದೈವದತ್ತ ನಂಬಿಕೆ ಇಟ್ಟಿದ್ದನು .
ಸರದಾರರು ಮತ್ತು ಅಧಿಕಾರಿಗಳ ವೈವಾಹಿಕ ಸಂಬಂಧವನ್ನು ನಿರ್ಬಂಧಿಸಿದ್ದು , ಅವರ ಗುಪ್ತಸಭೆ ಮತ್ತು ಔತಣಕೂಟಗಳನ್ನು ನಿಷೇಧಿಸಿದ್ದನು ಮತ್ತು ಗುಪ್ತಚರರನ್ನು ನೇಮಿಸಿದ್ದನು .
ಸೈನಿಕ ಸುಧಾರಣೆಗಳು :
ಬೃಹತ್ ಮತ್ತು ಸರ್ವಸನ್ನದ ಸೈನ್ಯವಿತ್ತು . ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿ , ಸೈನಿಕರ ನಕಲಿ ಹಾಜರಾತಿ ಮತ್ತು ಭ್ರಷ್ಟಾಚಾರವನ್ನು ತಡೆಯಲು ವಿವರಣಾತ್ಮಕ ದಾಖಲೆಗಳ ನಿರ್ವಹಣೆಯನ್ನು ಜಾರಿಗೆ ತಂದನು .
ಜಾಗೀರ್ ಪದ್ಧತಿಯನ್ನು ರದ್ದುಪಡಿಸಿ ನಗದು ರೂಪದಲ್ಲಿ ವೇತನ ನೀಡಿದನು . ಅರೀಜ್ – ಇ – ಮುಮಾಲಿಕ್ ಎಂಬ ಅಧಿಕಾರಿಯು ಸೈನಿಕರ ಅಧಿಕಾರವನ್ನು ಹೊಂದಿದ್ದನು
ಕಂದಾಯ ಸುಧಾರಣೆಗಳು :
ವೈಜ್ಞಾನಿಕ ತಳಹದಿಯ ಮೇಲೆ ಭೂ ಮಾಪನವನ್ನು ಆರಂಭಿಸಿ ಭೂ ಕಂದಾಯವನ್ನು ನಿಗಧಿಪಡಿಸಿದನು . ಸರದಾರರು , ಜಾಗೀರ್‌ದಾರರು ಮತ್ತು ಉಲೇಮಾರ ಮೇಲೆ ಅವನು ಹೆಚ್ಚಿನ ತೆರಿಗೆಗಳನ್ನು ಹೇರಿದನು .
ಮುಸ್ಲಿಂಯೇತರ ಮೇಲೆ ‘ ಜಜಿಯಾ ‘ ವನ್ನು ವಿಧಿಸಿದನು , ಅವರು ಯಾತ್ರಾ ತೆರಿಗೆ , ಸರಕು ತೆರಿಗೆ ಗಳನ್ನು ಕೊಡಬೇಕಿತ್ತು .
ಕಂದಾಯ ಅಧಿಕಾರಿಗಳ ಭ್ರಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ಅವರ ವೇತನವನ್ನು ಹೆಚ್ಚಿಸಿದನು . ರೈತರಿಂದ ಭೂ ಕಂದಾಯವನ್ನು ಸಂಗ್ರಹಿಸಲು ‘ ಮುಸ್ತಕ್‌ರಾಜ್ ‘ ಎಂಬ ವಿಶೇಷ ಅಧಿಕಾರಿಯ ಹುದ್ದೆಯನ್ನು ಸೃಷ್ಟಿಸಿದನು .
ಆರ್ಥಿಕ ಸುಧಾರಣೆಗಳು :
[ ಮಾರುಕಟ್ಟೆ ನಿಯಮಗಳು ] ಸೈನಿಕರಿಗೆ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಮಾರುಕಟ್ಟೆ ನಿಯಮ ಜಾರಿಗೊಳಿಸಿ , ದೈನಂದಿನ ಉಪಯೋಗದ ಎಲ್ಲಾ ವಸ್ತುಗಳ ದರಗಳನ್ನು ನಿಗದಿ ಗೊಳಿಸಲಾಯಿತು . ಮಾರುಕಟ್ಟೆಯನ್ನು ನಿಯಂತ್ರಿಸಲು ಪ್ರತ್ಯೇಕ ಇಲಾಖೆ ಮತ್ತು ವಿಶೇಷ ಅಧಿಕಾರಿಗಳನ್ನು ನೇಮಿಸಿದನು . ರಾಜಧಾನಿಯಲ್ಲಿ ನಿಗಧಿಗೊಳಿಸಿದ್ದ ದರಗಳು ಎಲ್ಲಾ ನಗರಗಳಿಗೂ ಅನ್ವಯವಾಗುತ್ತಿದ್ದವು .ಸರ್ಕಾರಿ ಉಗ್ರಾಣಗಳಲ್ಲಿ ಧಾನ್ಯಗಳನ್ನು ಶೇಖರಿಸಿಡ ಲಾಗುತ್ತಿತ್ತು . ತುರ್ತು ಸಂದರ್ಭಗಳಾದ ಕೊರತೆಯ ಸಮಯ ಮತ್ತು ಬರಗಾಲಗಳಿಗಾಗಿ ಉಪಯೋಗಿಸಲಾಗುತ್ತಿತ್ತು .
ಯಾವುದೇ ವ್ಯಾಪಾರಿ ಅಥವಾ ಮಾರಾಟಗಾರ ತೂಕ ಮತ್ತು ಅಳತೆಗಳಲ್ಲಿ ವಂಚಿಸಿದರೆ ವಂಚಿಸಲಾದ ತೂಕಕ್ಕೆ ಸಮನಾದಷ್ಟು ಮಾಂಸವನ್ನು ಅವನ ಶರೀರ ( ತೊಡೆ ) ದಿಂದ ಕತ್ತರಿಸಿ ಹಾಕುವ ಶಿಕ್ಷೆ ವಿಧಿಸಲಾಗುತ್ತಿತ್ತು .
ಅಲ್ಲವುದ್ದೀನ್ ಖಿಲ್ಜಿಯ ಕೊನೆಯ ದಿನಗಳು ಸುಖಕರವಾಗಿರಲಿಲ್ಲ . ಅವನ ನಂಬಿಕಸ್ತ ಸೇನಾಪತಿ ಮಲಿಕಾಫರ್ ಅವನಿಗೆ ವಿಷಪ್ರಾಶನ ಮಾಡಿದ್ದರಿಂದ ಸುಲ್ತಾನನು ಸಾ.ಶ. 1316 ರಲ್ಲಿ ಮರಣ ಹೊಂದಿದನು .
3. ಮಹಮದ್ ಬಿನ್ ತೊಘಲಕ್‌ನನ್ನು ‘ ವೈರುಧ್ಯಗಳ ಮಿಶ್ರಣ ‘ ಎಂದು ಏಕೆ ಕರೆಯಲಾಗಿದೆ ?
- ಮಹಮದ್ ಬಿನ್ ತೊಘಲಕ್‌ನು ಸುಶಿಕ್ಷಿತ ವಿದ್ವಾಂಸ , ವಾಗ್ನಿ , ಧರ್ಮನಿಷ್ಠೆ ಮುಸಲ್ಮಾನನಾಗಿದ್ದನು ಇವನು ಜಾರಿಗೆ ತಂದ ಯೋಜನೆಗಳು ಸಮರ್ಪಕವಾಗಿರಲಿಲ್ಲ ಆದ್ದರಿಂದಲೇ ಈತನನ್ನು ವೈರುದ್ಯಗಳ ಮಿಶ್ರಣ ಎಂದು ಕರೆಯಲಾಗಿದೆ . ತನ್ನ ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಲು ಗಂಗಾ ಮತ್ತು ಯಮುನಾ ನದಿಗಳ ಫಲವತ್ತಾದ ದೋ ಅಬ್ ಪ್ರದೇಶಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದನು ; ಇದು ಉತ್ತಮವಾದುದೇ ಆದರೂ ಮಳೆಯ ಕೊರತೆಯಿಂದಾಗಿ ರೈತರಿಗೆ ತೆರಿಗೆಯ ಭಾರ ಹೆಚ್ಚಾಯಿತು .
- ತೆರಿಗೆ ನೀಡದ ರೈತರ ವಿರುದ್ಧ ನಿರ್ದಯವಾಗಿ ಕ್ರಮ ಕೈಗೊಂಡು ಜನಪ್ರಿಯತೆಯನ್ನು ಕಳೆದುಕೊಂಡನು . * ತನ್ನ ರಾಜಧಾನಿಯನ್ನು ಮಂಗೋಲರ ದಾಳಿಯಿಂದ ತಪ್ಪಿಸಲು ಮತ್ತು ದೆಹಲಿಯ ಗಡಿ ಪ್ರದೇಶಕ್ಕೆ ಹತ್ತಿರ ವಿದ್ದುದರಿಂದ ಸಾಮ್ರಾಜ್ಯದ ಕೇಂದ್ರದಲ್ಲಿದ್ದ ದೇವಗಿರಿಗೆ ವರ್ಗಾಯಿಸಲು ಹೊಸ ನಗರವನ್ನೇ ನಿರ್ಮಿಸಿ ಎಲ್ಲಾ ಜನತೆಯು ಸುಮಾರು 1120 ಕಿ.ಮೀ ದೂರದ ದೇವಗಿರಿಗೆ ಹೊರಡಲು ಆದೇಶಿಸಿದನು .
- ದಟ್ಟಕಾಡುಗಳ ಮೂಲಕ ಅನಾಯಾಸ ಪ್ರಯಾಣ , ಭಾರೀ ಮಳೆ , ಖಾಯಿಲೆ , ಹಸಿವು , ದರೋಡೆಕೋರರ ದಾಳಿಯಿಂದಾಗಿ ಅಪಾರವಾದ ಸಾವು ನೋವು ಉಂಟಾಗಿ ನಂತರ ಇದು ಸುಲ್ತಾನನಿಗೆ ತಿಳಿದು ಮತ್ತೆ ಜನರು ದೆಹಲಿಗೆ ಮರಳುವಂತೆ ಆದೇಶಿಸಿ ಇನ್ನೂ ಹೆಚ್ಚಿನ ಸಾವು ನೋವುಗಳಿಗೆ ಕಾರಣನಾಗಿ ಜನಪ್ರಿಯತೆ ಯನ್ನು ಕಳೆದುಕೊಂಡನು .
- ನಾಣ್ಯ ಚಲಾವಣೆಯ ಪ್ರಯೋಗ ನಡೆಸಿ : ದುಬಾರಿ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯನ್ನು ಉಳಿತಾಯ ಮಾಡಲು ಇದರ ಸಮಾನ ಮೌಲ್ಯದ ತಾಮ್ರದ ನಾಣ್ಯಗಳನ್ನು ಜಾರಿಗೆ ತಂದನು . ಇದರಿಂದ ನಕಲಿ ನಾಣ್ಯದ ಹಾವಳಿ ಹೆಚ್ಚಾಗಿ ದೇಶದ ಅರ್ಥವ್ಯವಸ್ಥೆ ಕುಸಿಯಿತು . ಖಜಾನೆ ಬರಿದಾಯಿತು .
2nd Puc History Chapter 5.1 Notes
IV . ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದನ್ನು 30 ರಿಂದ 40 ವಾಕ್ಯಗಳಲ್ಲಿ ಉತ್ತರಿಸಿ :
1. ಅಲ್ಲಾವುದ್ದೀನ್ ಖಿಲ್ಲಿಯ ಸಾಧನೆಗಳನ್ನು ವಿವರಿಸಿ .
ಆಲಿಗುರ್ಷಪ್ ಎಂಬ ಮೂಲ ಹೆಸರು ಅಲ್ಲಾವುದ್ದೀನ್ ಖಿಲ್ಡಿಯು ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಜಲಾಲುದ್ದೀನ್ ಆಶ್ರಯದಲ್ಲಿ ಬೆಳೆದು , ಆತನ ಮಗಳನ್ನು ವಿವಾಹವಾಗಿ ಕರಾ ಪ್ರಾಂತ್ಯದ ರಾಜ್ಯಪಾಲನಾಗಿ ದೇವಗಿರಿಯ ಮೇಲೆ ಆಕ್ರಮಾಣ ಮಾಡಿ ನಂತರ ಜಲಾಲುದ್ದೀನ್ ನನ್ನೇ ಕೊಂದು ಅಧಿಕಾರಕ್ಕೆ ಬಂದನು . ಉತ್ತರ ಭಾರತದ ದಿಗ್ವಿಜಯಗಳಲ್ಲಿ ಗುಜರಾತಿನ ಮೇಲೆ ಆಕ್ರಮಣ ಮಾಡಿ ಕರ್ಣದೇವನನ್ನು , ರಣತಂಬೋರ್‌ನ ಮೇಲೆ ಆಕ್ರಮಣ ಮಾಡಿ ಹಮೀರ್ ದೇವನನ್ನು , ಮೇವಾಡದ ರಾಣಾ ರಥನ್ ಸಿಂಗ್‌ನನ್ನು ಸೋಲಿಸಿದನು .
ಸಾ.ಶ. 1296 ರಿಂದ 1308 ರ ವರೆಗೆ ಮಂಗೋಲಿಯನ್ನರ ದಾಳಿಯನ್ನು ಎದುರಿಸಿ ಯಶಸ್ಸು ಕಂಡನು ದಕ್ಷಿಣ ಭಾರತದ ಅಪಾರ ಸಂಪತ್ತು ಮತ್ತು ಅದನ್ನು ಆಕ್ರಮಿಸುವ ಉದ್ದೇಶದಿಂದ ತನ್ನ ಸಮರ್ಥ ಸೇನಾನಿಯಾದ ಮಲ್ಲಿಕಾಫರ್‌ನನ್ನು ದಕ್ಷಿಣ ಭಾರತದ ದಂಡಯಾತ್ರೆಗೆ ನಿಯೋಜಿಸಿದನು .
ದೇವಗಿರಿಯ ಮೇಲೆ ಆಕ್ರಮಣ ( ಸಾ.ಶ. 1307 ) :
ದೇವಗಿರಿಯ ರಾಜ ರಾಮಚಂದ್ರದೇವನನ್ನು ಸೋಲಿಸಿ . ರಾಣಿ ದೇವಲದೇವಿಯನ್ನು ಸೆರೆಹಿಡಿದನು ಅವಳನ್ನು ಅಲ್ಲಾವುದ್ದೀನ್ ಖಿಲ್ಲಿಯ ಹಿರಿಯ ಮಗ ಖಜರ್‌ಖಾನನು ವಿವಾಹವಾದನು . ರಾಮಚಂದ್ರದೇವನು ವಾರ್ಷಿಕ ಕಪ್ಪ ಕಾಣಿಕೆ ಕೊಡಲು ಒಪ್ಪಿದನು .
ವಾರಂಗಲ್‌ನ ದಂಡಯಾತ್ರೆ [ ಸಾ.ಶ. 1309 ]
ವಾರಂಗಲ್‌ನ ರಾಜ ಪ್ರತಾಪರುದ್ರದೇವನು ಮಲ್ಲಿಕಾಫರನಿಗೆ ಶರಣಾಗಿ ಶಾಂತಿ ಒಪಂದ ಮಾಡಿಕೊಳ್ಳಬೇಕಾಯಿತು . ಅಲ್ಲದೆ ಅಪಾರವಾದ ಸಂಪತ್ತನ್ನು ಕೊಟ್ಟನು .
ದ್ವಾರಸಮುದ್ರದ ಮೇಲೆ ದಾಳಿ [ ಸಾ.ಶ. 1310] :
ಹೊಯ್ಸಳ ರಾಜ 3 ನೇ ವೀರಬಲ್ಲಾಳನ ದ್ವಾರಸಮುದ್ರದ ಮೇಲೆ ಆಕ್ರಮಣ ಮಾಡಿದ ಮಲ್ಲಿಕಾಫರ್ ರಾಜಧಾನಿಯನ್ನು ಲೂಟಿ ಮಾಡಿ ಹಲವಾರು ದೇವಾಲಯಗಳನ್ನು ಕೆಡವಿದನು .
ಮಧುರೈನ ಆಕ್ರಮಣ [ ಸಾ.ಶ. 1311 ] :
ಮಧುರೈನಲ್ಲಿ ಸುಂದರ ಪಾಂಡ್ಯ ಮತ್ತು ವೀರ ಪಾಂಡ್ಯ ಎಂಬ ಸಹೋದರರ ಮಧ್ಯೆ ಅಂತಃ ಕಲಹ ನಡೆಯುತ್ತಿತ್ತು . ಈ ಮಧ್ಯೆ ಮಲ್ಲಿಕಾಫರ್‌ನ ಸೈನ್ಯ ನುಗ್ಗಿ ಹಲವಾರು ನಗರ ಹಾಗೂ ದೇವಾಲಯಗಳನ್ನು ಲೂಟಿ ಮಾಡಿತು . ಅಲ್ಲಿನ ಪ್ರಸಿದ್ಧ ದೇವಾಲಯವನ್ನು ಧ್ವಂಸಮಾಡಿ ಮಸೀದಿಯನ್ನು ನಿರ್ಮಿಸಿದನು .
ದೇವಗಿರಿಯ ಮೇಲೆ 2 ನೇ ಆಕ್ರಮಣ [ ಸಾ.ಶ. 1312 ] :
ಇದು ಕೊನೆಯ ಯುದ್ಧವಾಗಿದ್ದು ದೇವಗಿರಿಯ ಶಂಕರದೇವನು ಕಪ್ಪ ಕಾಣಿಕೆಗಳನ್ನು ತಡೆಹಿಡಿದು ಸ್ವತಂತ್ರನಾಗಲು ಪ್ರಯತ್ನಿಸುತ್ತಿದ್ದುದನ್ನು ಅರಿತ ಮಲ್ಲಿಕಾಫರ್ ಅವನನ್ನು ಸಾಯಿಸಿ ದೇವಗಿರಿಯನ್ನು ವಶಪಡಿಸಿಕೊಂಡನು . ಅಲ್ಲಾವುದ್ದೀನನು ಪ್ರಬಲ ಮತ್ತು ಸಮರ್ಥ ಆಡಳಿತಗಾರನಾಗಿದ್ದು ದೈವದತ್ತ ನಂಬಿಕೆ ಇಟ್ಟಿದ್ದನು . ಸರದಾರರು ಮತ್ತು ಅಧಿಕಾರಿಗಳ ವೈವಾಹಿಕ ಸಂಬಂಧವನ್ನು ನಿರ್ಬಂಧಿಸಿದ್ದು , ಅವರ ಗುಪ್ತಸಭೆ ಮತ್ತು ಔತಣಕೂಟಗಳನ್ನು ನಿಷೇಧಿಸಿದ್ದನು ಮತ್ತು ಗುಪ್ತಚರರನ್ನು ನೇಮಿಸಿದ್ದನು .
ಸೈನಿಕ ಸುಧಾರಣೆಗಳು :
ಬೃಹತ್ ಮತ್ತು ಸರ್ವಸನ್ನದ ಸೈನ್ಯವಿತ್ತು . ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿ , ಸೈನಿಕರನಕಲಿ ಹಾಜರಾತಿ ಮತ್ತು ಭ್ರಷ್ಟಾಚಾರವನ್ನು ತಡೆಯಲು ವಿವರಣಾತ್ಮಕ ದಾಖಲೆಗಳ ನಿರ್ವಹಣೆಯನ್ನು ಜಾರಿಗೆ ತಂದನು .
ಜಾಗೀರ್ ಪದ್ಧತಿಯನ್ನು ರದ್ದು ಪಡಿಸಿ ನಗದು ರೂಪದಲ್ಲಿ ವೇತನ ನೀಡಿದನು . ಅರೀಜ್ – ಇ – ಮುಮಾಲಿಕ್ ಎಂಬ ಅಧಿಕಾರಿಯು ಸೈನಿಕರ ಅಧಿಕಾರವನ್ನು ಹೊಂದಿದ್ದನು .
ಕಂದಾಯ ಸುಧಾರಣೆಗಳು :
ವೈಜ್ಞಾನಿಕ ತಳಹದಿಯ ಮೇಲೆ ಭೂ ಮಾಪನವನ್ನು ಆರಂಭಿಸಿ ಭೂ ಕಂದಾಯವನ್ನು ನಿಗಧಿಪಡಿಸಿದನು . ಸರದಾರರು , ಜಾಗೀರ್‌ದಾರರು ಮತ್ತು ಉಲೇಮಾರ ಮೇಲೆ ಅವನು ಹೆಚ್ಚಿನ ತೆರಿಗೆಗಳನ್ನು ಹೇರಿದನು .
ಮುಸ್ಲಿಂಮೇತರ ಮೇಲೆ ‘ ಜಜಿಯಾ ‘ ವನ್ನು ವಿಧಿಸಿದನು ,
ಅವರು ಯಾತ್ರಾ ತೆರಿಗೆ , ಸರಕು ತೆರಿಗೆಗಳನ್ನು ಕೊಡಬೇಕಿತ್ತು .
ಕಂದಾಯ ಅಧಿಕಾರಿಗಳ ಭ್ರಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ಅವರ ವೇತನವನ್ನು ಹೆಚ್ಚಿಸಿದನು . ರೈತರಿಂದ ಭೂ ಕಂದಾಯವನ್ನು ಸಂಗ್ರಹಿಸಲು ‘ ಮುಸ್ತಕ್‌ರಾಜ್ ‘ ಎಂಬ ವಿಶೇಷ ಅಧಿಕಾರಿಯ ಹುದ್ದೆಯನ್ನು ಸೃಷ್ಟಿಸಿದನು .
ಆರ್ಥಿಕ ಸುಧಾರಣೆಗಳು : [ ಮಾರುಕಟ್ಟೆ ನಿಯಮಗಳು ]
ಸೈನಿಕರಿಗೆ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಮಾರುಕಟ್ಟೆ ನಿಯಮ ಜಾರಿಗೊಳಿಸಿ , ದೈನಂದಿನ ಉಪಯೋಗದ ಎಲ್ಲಾ ವಸ್ತುಗಳ ದರಗಳನ್ನು ನಿಗದಿಗೊಳಿಸ ಲಾಯಿತು . ಮಾರುಕಟ್ಟೆಯನ್ನು ನಿಯಂತ್ರಿಸಲು ಪ್ರತ್ಯೇಕ ಇಲಾಖೆ ಮತ್ತು ವಿಶೇಷ ಅಧಿಕಾರಿಗಳನ್ನು ನೇಮಿಸಿದನು . ರಾಜಧಾನಿಯಲ್ಲಿ ನಿಗಧಿಗೊಳಿಸಿದ್ದ ದರಗಳು ಎಲ್ಲಾ ನಗರಗಳಿಗೂ ಅನ್ವಯವಾಗುತ್ತಿದ್ದವು .
ಸರ್ಕಾರಿ ಉಗ್ರಾಣಗಳಲ್ಲಿ ಧಾನ್ಯಗಳನ್ನು ಶೇಖರಿಸಿಡ ಲಾಗುತ್ತಿತ್ತು . ತುರ್ತು ಸಂದರ್ಭಗಳಾದ ಕೊರತೆಯ ಸಮಯ ಮತ್ತು ಬರಗಾಲಗಳಿಗಾಗಿ ಉಪಯೋಗಿಸ ಲಾಗುತ್ತಿತ್ತು . ಯಾವುದೇ ವ್ಯಾಪಾರಿ ಅಥವಾ ಮಾರಾಟಗಾರ ತೂಕ ಮತ್ತು ಅಳತೆಗಳಲ್ಲಿ ವಂಚಿಸಿದರೆ ವಂಚಿಸಲಾದ ತೂಕಕ್ಕೆ ಸಮನಾದಷ್ಟು ಮಾಂಸವನ್ನು ಅವನ ಶರೀರ ( ತೊಡೆ ) ದಿಂದ ಕತ್ತರಿಸಿ ಹಾಕುವ ಶಿಕ್ಷೆ ವಿಧಿಸಲಾಗುತ್ತಿತ್ತು .
ಅಲ್ಲವುದ್ದೀನ್ ಖಿಲ್ಜಿಯ ಕೊನೆಯ ದಿನಗಳು ಸುಖಕರವಾಗಿರಲಿಲ್ಲ . ಅವನ ನಂಬಿಕಸ್ತ ಸೇನಾಪತಿ ಮಲಿಕಾಫರ್ ಅವನಿಗೆ ವಿಷಪ್ರಾಶನ ಮಾಡಿದ್ದರಿಂದ ಸುಲ್ತಾನನು ಸಾ.ಶ. 1316 ರಲ್ಲಿ ಮರಣ ಹೊಂದಿದನು .
2. ಮಹಮದ್ ಬಿನ್ ತೊಘಲಕ್‌ನ ಆಡಳಿತ ಪ್ರಯೋಗಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಶಿಸಿ .
- ಮಹಮದ್ ಬಿನ್ ತೊಘಲಕ್‌ನು ಸುಶಿಕ್ಷಿತ ವಿದ್ವಾಂಸ , ವಾಗ್ನಿ , ಧರ್ಮನಿಷ್ಠೆ ಮುಸಲ್ಮಾನರಾಗಿದ್ದರು ಇವನು ಜಾರಿಗೆ ತಂದ ಯೋಜನೆಗಳು ಸಮರ್ಪಕವಾಗಿರಲಿಲ್ಲ ಆದ್ದರಿಂದಲೇ ಈತನನ್ನು ವೈರುದ್ಯಗಳ ಮಿಶ್ರಣ ಎಂದು ಕರೆಯಲಾಗಿದೆ . ತನ್ನ ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಲು ಗಂಗಾ ಮತ್ತು ಯಮುನಾ ನದಿಗಳ ಫಲವತ್ತಾದ ದೋ ಅಬ್ ಪ್ರದೇಶಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದನು ಇದು ಉತ್ತಮವಾದುದೇ ಆದರೂ ಮಳೆಯ ಕೊರತೆಯಿಂದಾಗಿ ರೈತರಿಗೆ ತೆರಿಗೆಯ ಭಾರ ಹೆಚ್ಚಾಯಿತು .
- ತೆರಿಗೆ ನೀಡದ ರೈತರ ವಿರುದ್ಧ ನಿರ್ದಯವಾಗಿ ಕ್ರಮ ಕೈಗೊಂಡು ಜನಪ್ರಿಯತೆಯನ್ನು ಕಳೆದುಕೊಂಡನು . ತನ್ನ ರಾಜಧಾನಿಯನ್ನು ಮಂಗೋಲರ ದಾಳಿಯಿಂದ ತಪ್ಪಿಸಲು ಮತ್ತು ದೆಹಲಿಯ ಗಡಿ ಪ್ರದೇಶಕ್ಕೆ ಹತ್ತಿರವಿದ್ದುದರಿಂದ ಸಾಮ್ರಾಜ್ಯದ ಕೇಂದ್ರದಲ್ಲಿದ್ದ ದೇವಗಿರಿಗೆ ವರ್ಗಾಯಿಸಲು ಹೊಸ ನಗರವನ್ನೇ ನಿರ್ಮಿಸಿ ಎಲ್ಲಾ ಜನತೆಯು ಸುಮಾರು 1120 ಕಿ.ಮೀ ದೂರದ ದೇವಗಿರಿಗೆ ಹೊರಡಲು ಆದೇಶಿಸಿದನು .
- ದಟ್ಟಕಾಡುಗಳ ಮೂಲಕ ಅನಾಯಾಸ ಪ್ರಯಾಣ , ಭಾರೀ ಮಳೆ , ಖಾಯಿಲೆ , ಹಸಿವು , ದರೋಡೆಕೋರರ ದಾಳಿಯಿಂದಾಗಿ ಅಪಾರವಾದ ಸಾವು ನೋವು ಉಂಟಾಗಿ ನಂತರ ಇದು ಸುಲ್ತಾನನಿಗೆ ತಿಳಿದು ಮತ್ತೆ ಜನರು ದೆಹಲಿಗೆ ಮರಳುವಂತೆ ಆದೇಶಿಸಿ ಇನ್ನೂ ಹೆಚ್ಚಿನ ಸಾವು ನೋವುಗಳಿಗೆ ಕಾರಣನಾಗಿ ಜನಪ್ರಿಯತೆಯನ್ನು ಕಳೆದುಕೊಂಡನು .
- ನಾಣ್ಯ ಚಲಾವಣೆಯ ಪ್ರಯೋಗ ನಡೆಸಿ ದುಬಾರಿ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯನ್ನು ಉಳಿತಾಯ ಮಾಡಲು ಇದರ ಸಮಾನ ಮೌಲ್ಯದ ತಾಮ್ರದ ನಾಣ್ಯಗಳನ್ನು ಜಾರಿಗೆ ತಂದನು . ಇದರಿಂದ ನಕಲಿ ನಾಣ್ಯದ ಹಾವಳಿ ಹೆಚ್ಚಾಗಿ ದೇಶದ ಅರ್ಥವ್ಯವಸ್ಥೆ ಕುಸಿಯಿತು . ಖಜಾನೆ ಬರಿದಾಯಿತು .
3. ದೆಹಲಿ ಸುಲ್ತಾನರ ಕೊಡುಗೆಗಳ ಬಗ್ಗೆ ಒಂದು ವಿವರಣೆ ನೀಡಿ .
ಆಡಳಿತ : ದೆಹಲಿ ಸುಲ್ತಾನರ ರಾಜ್ಯವು ದೇವ ಪ್ರಭುತ್ವವಾಗಿತ್ತು . ಷರಿಯತ್ [ ಇಸ್ಲಾಂ ಕಾನೂನು ] ರಾಜ್ಯದ ನಿಯಮವಾಗಿತ್ತು . ಉಲೇಮಾ [ ಇಸ್ಲಾಂ ವಿದ್ವಾಂಸರ ಒಂದು ಸಮಿತಿ ] ರಾಜ್ಯ ಮತ್ತು ಆಡಳಿತವನ್ನು ನಿಯಂತ್ರಿಸುತ್ತಿತ್ತು . ಸುಲ್ತಾನರು ತಮ್ಮನ್ನು ಖಲೀಫಾನ ಸಹಾಯಕರೆಂದು ಕರೆದುಕೊಂಡಿದ್ದರು .
ಸುಲ್ತಾನನೇ ಅಧಿಕಾರದ ಕೇಂದ್ರ ಬಿಂದುವಾಗಿದ್ದು ಶಾಸಕಾಂಗ , ಕಾರ್ಯಾಂಗ , ನ್ಯಾಯಾಂಗದ ಅಧಿಕಾರ ಹೊಂದಿದ್ದು , ಮಂತ್ರಿಗಳ ಮತ್ತು ಖಲೀಫರ ಸಲಹೆಯ ಮೇರೆಗೆ ಆಡಳಿತವನ್ನು ನಿರ್ವಹಿಸುತ್ತಿದ್ದನು . ವಜೀರ್ , ಅಲೀಜ್ – ಇ – ಮಾಮಿಕ್ , ಅಮೀರ್ – ಇ – ಮಸೀಸ್ , ಬರೀದ್ – ಇ – ಮುಮಾಲಿಬ್ , ಖಾಜಿ – ಉಲ್ – ಖಾಜತ್ ಮೊದಲಾದ ಮಂತ್ರಿಗಳಿದ್ದರು .
ಕಂದಾಯ :
ಭೂ ಕಂದಾಯ , ಯುದ್ಧದ ಲೂಟೆ , ವಾರ್ಷಿಕ ಕಪ್ಪ ಕಾಣಿಕೆಗಳು , ಜಜಿಯಾ ಕಂದಾಯ ಮುಂತಾದವು ಆದಾಯದ ಮೂಲಗಳಾಗಿದ್ದವು .
ಸೈನ್ಯ :
ಅಶ್ವಪಡೆ , ಗಜಪಡೆ , ಕಾಲ್ಗಳಗಳಿಂದ ಕೂಡಿತ್ತು . ದಿವಾನ್ – ಇ – ಅರೀಚ್ ಸೈನ್ಯಾಡಳಿತದ ಉಸ್ತುವಾರಿ ಹೊತ್ತಿದ್ದನು.
ಪ್ರಾಂತೀಯ ಆಡಳಿತ :
ಸಾಮ್ರಾಜ್ಯವನ್ನು ‘ ಇಕ್ತಾ ‘ ಎಂಬ ಅನೇಕ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ‘ ನಯಿಬ್ ಸುಲ್ತಾನ್ ಎಂಬ ರಾಜ್ಯಪಾಲನ ಅಧೀನದಲ್ಲಿತ್ತು . ಪ್ರತಿಯೊಂದು ಪ್ರಾಂತ್ಯವನ್ನು ಶಿಕ್ ಮತ್ತು ಫರಗಣಗಳಾಗಿ ವಿಂಗಡಿಸಿ ಶಿಖೆಗಳು ಮತ್ತು ಅಮೀಲ್ ಎಂಬ ಅಧಿಕಾರಿಗಳಿದ್ದರು .
ಸಾಹಿತ್ಯ :
ಇವರ ಕಾಲವು ಪರ್ಷಿಯನ್ ಮತ್ತು ದೇಶೀಯ ಭಾಷಾ ಸಾಹಿತ್ಯದ ಅಭಿವೃದ್ಧಿಗೆ ಸಾಕ್ಷಿಯಾಗಿತ್ತು . ಮಧ್ಯಏಷ್ಯದ ಪರ್ಷಿಯನ್ ಕವಿಗಳು ಇವರ ಆಶ್ರಯ ಪಡೆದಿದ್ದರು . ‘ ಭಾರತದ ಗಿಳಿ ‘ ಎಂದು ಕರೆಯುವ ಅಮೀರ್ ಖುಸ್ತು , ಖಜಾನ್ – ಉಲ್ – ಮುತಹ್ ಮತ್ತು ತಾರೀಖ್ ಇ – ಅಲೈ ಎಂಬ ಗ್ರಂಥಗಳನ್ನೂ , ಅಮೀರ್ ಹಸನ್ ದೆಹಲ್ವಿಯಾ ಅಷ್ಟ ಷಟ್ಟದಿ ಎಂಬ ಗ್ರಂಥವನ್ನೂ , ರಚಿಸಿದರು . ಮಹ್ಮದ್ ಬಿನ್ ತೊಗಲಕ್ ಮತ್ತು ಫಿರೋಷಾ ತೊಗಲಕ್ ಪ್ರಸಿದ್ಧ ವಿದ್ವಾಂಸರಾಗಿದ್ದರು . ಜಿಯಾ – ಉದ್ – ದಿನ್ ಬರಾನಿ ಮತ್ತು ಇಬನ್ ಬತೂತ ಇವರ ಕಾಲದ ಪ್ರಸಿದ್ಧ ಇತಿಹಾಸಕಾರರಾಗಿದ್ದರು .
ಭಕ್ತಿ ಚಳುವಳಿಯು ಸ್ಥಳೀಯ ಭಾಷಾ ಸಾಹಿತ್ಯಗಳ ಬೆಳವಣಿಗೆಗೂ ಅವಕಾಶ ಕಲ್ಪಿಸಿತು . ಚಾಂದ್ ಬರ್ದಾಯಿಯು ಪೃಥ್ವಿರಾಜ ರಾಸೋ , ಮತ್ತು ಮಲಿಕ್ ಮಹಮದ್ ಜೈಸಿಯು ‘ ಪದ್ಮಾವತಿ ‘ ಎಂಬ ಗ್ರಂಥಗಳನ್ನು ರಚಿಸಿದರು . ಸಂಸ್ಕೃತ ಗ್ರಂಥಗಳನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಲು ಪ್ರೋತ್ಸಾಹ ನೀಡಲಾಯಿತು .
ಕಲೆ ಮತ್ತು ವಾಸ್ತುಶಿಲ್ಪ :
ಭಾರತೀಯ ವಾಸ್ತುಶಿಲ್ಪ ಪರಂಪರೆಯನ್ನು ದೆಹಲಿ ಸುಲ್ತಾನರು ಸಮೃದ್ಧಗೊಳಿಸಿದರು . ಮಿನಾರ್‌ಗಳು , ಕಮಾನುಗಳು , ಗುಮ್ಮಟಗಳು , ಹಜಾರಗಳು , ಬೃಹತ್ ಹೆಬ್ಬಾಗಿಲು ಗಳನ್ನು ನಿರ್ಮಿಸಿ ಇಂಡೋ ಇಸ್ಲಾಮಿಕ್ ಎಂಬ ಹೊಸ ವಾಸ್ತುಶೈಲಿಯ ಪರಂಪರೆಗೆ ನಾಂದಿಯಿಟ್ಟರು . * ದೆಹಲಿಯ ಖುವಾತ್ – ಉಲ್ ಇಸ್ಲಾಂ ಮಸೀದಿ , ಅಜೀರದ ಅಡೈ – ದಿನ್ – ಕಾ – ಜೋಪರ ಮಸೀದಿ , ಕುತುಬ್ ಮಿನಾರ್ , ಹೌಜ್ – ಇ – ಶಾಮಿ , ಜಾಮಿ ಮಸೀದಿ , ಜಮೈತ್ ಖಾನ್ ಮಸೀದಿ , ಅಲೈ , ದರ್ವಾಜ , ಹಲವಾರು ಪಟ್ಟಣಗಳು , ಕೋಟೆಗಳನ್ನು ನಿರ್ಮಿಸಿದರು .
ಹೆಚ್ಚುವರಿ ಪ್ರಶ್ನೋತ್ತರಗಳು:
1 . ಸಾ.ಶ. 8 ರಿಂದ 12 ನೇ ಶತಮಾನದ ಅವಧಿಯಲ್ಲಿ ಉತ್ತರ ಭಾರತದಲ್ಲಿ ಸುಮಾರು ಎಷ್ಟು ಸ್ವತಂತ್ರ ರಾಜ್ಯಗಳಿದ್ದವು ?
ಸುಮಾರು 70 ಸ್ವತಂತ್ರ್ಯ ರಾಜ್ಯಗಳಿದ್ದವು .
2. ಸಾ.ಶ. 712 ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ ಮುಸ್ಲಿಂ ಆಕ್ರಮಣಕಾರನ ಹೆಸರೇನು ?
ಬಸ್ರಾದ ರಾಜ್ಯಪಾಲ ಮೊಹಮದ್ ಬಿನ್ ಖಾಸಿಂ
3. ಘಜಿ ಮೊಹಮು ಭಾರತದ ಮೇಲೆ ಎಷ್ಟು ಬಾರಿ ಆಕ್ರಮಣ ಮಾಡಿದನು ?
17 ಬಾರಿ
4. ಅಲ್ಬೆರೋನಿ ಯಾವ ದೇಶದವನು ?
ಪರ್ಶಿಯಾ ದೇಶದವನು .
5. ಮಹಮದ್ ಘೋರಿಯು ಸಾ.ಶ. ಎಷ್ಟರಲ್ಲಿ ಮರಣ ಹೊಂದಿದನು ?
ಸಾ.ಶ. 1206 ರಲ್ಲಿ
6.ಕುತುಬ್ – ಉದ್ – ದಿನ್ ಐಬಕ್ನು ಯಾರಿಂದ ದಾಸ್ಯ ವಿಮೋಚನೆಯನ್ನು ಪಡೆದುಕೊಂಡನು ?
ಬಾಗ್ದಾದಿನ ಖಲೀಫನಿಂದ .
7. ಟರ್ಕಿ ಭಾಷೆಯಲ್ಲಿ ಖಿಲ್ಲಿ ಎಂಬುದರ ಅರ್ಥವೇನು ?
ʼ ಖಡ್ಗಧಾರಿ ಪುರುಷರು ‘
8 . ಅಲ್ಲಾವುದ್ದೀನ್ ಖಿಲ್ಲಿಯ ಮೊದಲ ಹೆಸರೇನು ?
“ ಅಲಿಗುರ್ಷಪ್ ‘
FAQ
ಕುತುಬ್ – ಉದ್ – ದಿನ್ ಐಬಕ್
ಅಮೀರ್ ಖುಸ್ರು
ಇತರೆ ವಿಷಯಗಳು:
ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್
1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF