10ನೇ ತರಗತಿ ಅಧ್ಯಾಯ-20 ಮಹಾಯುದ್ಧಗಳು ಹಾಗೂ ಭಾರತದ ಪಾತ್ರ ಸಮಾಜ ವಿಜ್ಞಾನ ನೋಟ್ಸ್‌ | 10th Class Social Science Chapter 20 Notes

10ನೇ ತರಗತಿ ಅಧ್ಯಾಯ-20 ಮಹಾಯುದ್ಧಗಳು ಹಾಗೂ ಭಾರತದ ಪಾತ್ರ ಸಮಾಜ ವಿಜ್ಞಾನ ನೋಟ್ಸ್‌,10th Social Science Chapter 20 Notes Question Answer Mcq Pdf 2024 Kseeb Solution For Class 10 Social science Chapter 20 Notes 10th Class Mahayuddhagalu Hagu Bharatada Patra Notes Kannada Medium

 

10th Standard Social Science Chapter 20 Notes

ತರಗತಿ : 10ನೇ ತರಗತಿ

ವಿಷಯ : ಸಮಾಜ ವಿಜ್ಞಾನ

ಪಾಠದ ಹೆಸರು : ಮಹಾಯುದ್ಧಗಳು ಹಾಗೂ ಭಾರತದ ಪಾತ್ರ

ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 10ನೇ ತರಗತಿ ಮಹಾಯುದ್ಧಗಳು ಹಾಗೂ ಭಾರತದ ಪಾತ್ರ ಸಮಾಜ ವಿಜ್ಞಾನ ನೋಟ್ಸ್‌ ನ್ನು ಕೊಟ್ಟಿರುತ್ತೇವೆ, ಈ ಪಾಠದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 10ನೇ ತರಗತಿ ಮಹಾಯುದ್ಧಗಳು ಹಾಗೂ ಭಾರತದ ಪಾತ್ರ ಪಾಠದ ಪ್ರಶ್ನೋತ್ತರಗಳ ನೋಟ್ಸ್‌ ನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಕೆಳಗಿನ ವಾಕ್ಯಗಳಲ್ಲಿ ಖಾಲಿಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿಮಾಡಿರಿ.

1. ಮೊದಲನೇ ಮಹಾಯುದ್ದವು 1918 ರಲ್ಲಿ ಅಂತ್ಯಗೊಂಡಿತು.

2. ವರ್ಸೇಲ್ಸ್‌ ಒಪ್ಪಂದವು 1919 ರಲ್ಲಿ ಏರ್ಪಟ್ಟಿತು.

3. ಫ್ಯಾಸಿಸ್ಟ್‌ ಸರ್ವಾಧಿಕಾರಿಯಾಗಿದ್ದವನು ಮುಸೋಲಿನಿ.

4. ಜರ್ಮನಿಯಲ್ಲಿ ನಾಜಿ ಪಕ್ಷದ ನಾಯಕನಾಗಿದ್ದವನು ಹಿಟ್ಲರ್‌

5. ಎರಡನೆಯ ಮಹಾಯುದ್ದವು 1939ರಲ್ಲಿ ಆರಂಭವಾಯಿತು.

6. ಅಮೆರಿಕಾದ ನೌಕಾ ಕೇಂದ್ರವಾಗಿದ್ದ ಪರ್ಲ್‌ ಹಾರ್ಬರ್‌ ಮೇಲೆ ಜಪಾನ್‌ ದಾಳಿ ಮಾಡಿತು.

7. ಮೈಸೂರು ಲ್ಯಾನ್ಸರ್ ಗಳ ಮುಖ್ಯಸ್ಥರಾಗಿ ಸೇನಾಧಿಕಾರಿ ಬಿ. ಚಾಮರಾಜ ಅರಸು ರನ್ನು ಯುದ್ದಭೂಮಿಗೆ ಕಳುಹಿಸಲಾಯಿತು.

ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.

1. ಪ್ರಥಮ ಮಹಾಯುದ್ದಕ್ಕೆ ತತ್ಕ್ಷಣದ ಕಾರಣವನ್ನು ವಿವರಿಸಿ.

  • ಆಸ್ಟ್ರಿಯಾದ ರಾಜಕುಮಾರ ಆರ್ಕ್‌ ಡ್ಯೂಕ್‌ ಫ್ರಾನ್ಸಿಸ್‌ ಫರ್ಡಿನೆಂಡ್ ನ ಹತ್ಯೆಯಾಯಿತು.
  • ಈ ಘಟನೆಯು ಆಸ್ಟ್ರಿಯಾ ಮತು ಸರ್ಬಿಯಾ ದೇಶಗಳ ನಡುವೆ ತಕ್ಷಣವೇ ಬಿಕ್ಕಟ್ಟನ್ನು ಸೃಷ್ಟಿಸಿತು.

2. ನಾಜಿ ಸಿದ್ದಾಂತವು ಜರ್ಮನಿಯನ್ನು ಹಾಳು ಮಾಡಿತು ಹೇಗೆ? ವಿವರಿಸಿ.

  • ಜಗತ್ತಿನಲ್ಲಿ ಶ್ರೇಷ್ಠವಾದ ಜನಾಂಗವೆಂದರೆ ಆರ್ಯ ಜರ್ಮನ್‌ ಜನಾಂಗ.
  • ಜಗತ್ತನ್ನು ಆಳ್ವಿಕೆ ಮಾಡಲು ಕೇವಲ ಜರ್ಮನ್ನರು ಮಾತ್ರ ಯೋಗ್ಯರು
  • ಉಳಿದ ಜನಾಂಗಗಳು ಕೇವಲ ಆಳಿಸಿಕೊಳ್ಳಲು ಮಾತ್ರ ಯೋಗ್ಯರು. ಜರ್ಮನ್ನರ ಎಲ್ಲಾ ಸಮಸ್ಯೆಗಳಿಗೆ ಯೆಹೂದಿಗಳೇ ಕಾರಣ.
  • ಇವರ ಜೊತೆಗೆ ಕಮ್ಯೂನಿಸ್ಟರು, ಕ್ಯಾಥೋಲಿಕ್‌ ರು, ಸೋಷಿಯಲಿಸ್ಟರು ಕೂಡಾ ಕಾರಣ.
  • ಇವರು ಬದುಕಲು ಯೋಗ್ಯರಲ್ಲ.

3. ಎರಡನೆಯ ಮಹಾಯುದ್ದಕ್ಕೆ ಕಾರಣಗಳಾವುವು?

  • ಶ್ರೀಮಂತ ದೇಶಗಳೂ ಮೊದಲನೆಯ ಮಹಾಯುದ್ದದಲ್ಲಿ ಹಣ ವ್ಯಯಮಾಡಿದ ಪರಿಣಾಮವಾಗಿ 1930ರ ದಶಕದಲ್ಲಿ ಮಹಾನ್‌ ಆರ್ಥಿಕ ಕುಸಿತ ಉಂಟಾಯಿತು.
  • ಇದರಿಂದಾಗಿ ಯುರೋಪ್‌ ಮತ್ತು ಅಮೆರಿಕದಲ್ಲಿ ಸಂಕಷ್ಟದ ಪರಿಸ್ಥಿತಿಗಳು ನಿರ್ಮಾಣವಾದವು.
  • ಜನರ ಜೀವನ ಮಟ್ಟ ತೀವ್ರವಾಗಿ ಕುಸಿಯಿತು.
  • ಕೈಗಾರಿಕೆ ಮತ್ತು ಕೃಷಿ ಬೆಳವಣಿಗೆ ಸ್ಥಗಿತವಾಯಿತು. ನಿರುದ್ಯೋಗ ವಿಪರೀತವಾಯಿತು.
  • ಮೊದಲ ಮಹಾಯುದ್ದದ ಸೋಲು, ಅವಮಾನಕರ ಒಪ್ಪಂದಗಳು, ಅಪಾರವಾದ ನಷ್ಟಗಳ ಹಿನ್ನೆಲೆಯಲ್ಲಿ ಜರ್ಮನಿ ಮತ್ತು ಯುರೋಪಿನ ಹಲವು ದೇಶಗಳಲ್ಲಿ ರಾಷ್ಟ್ರೀಯತೆಯನ್ನು ಬೆಳೆಸಲು ದೊಡ್ಡ ಪ್ರಮಾಣದ ಹಣವನ್ನು ನೀಡಿದರು.
  • ಇದನ್ನೇ ಬಳಸಿಕೊಂಡು ಸೇಡಿನ ಮತ್ತು ದುರಭಿಮಾನದ ಚಳುವಳಿಗಳು ಬೆಳೆದವು.
  • ಜರ್ಮನಿಯಲ್ಲಿ ಹಿಟ್ಲರ್‌ ಮತ್ತು ಇಟಲಿಯಲ್ಲಿ ಮುಸೋಲಿನಿಯಂತಹ ಸರ್ವಾಧಿಕಾರಿಗಳು ಬೆಳೆದರು.
  • ಪೂರ್ವ ಏಷ್ಯಾದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಚೀನಾದ ಮೇಲೆ ಜಪಾನ್‌ ದಾಳಿಗಲನನು ನಡೆಸುತ್ತಿತ್ತು.

4. ಮೈಸೂರಿನ ಮುಖ್ಯ ಕಮಾಂಡೇಟ್‌ ಗಳನ್ನು ಹೆಸರಿಸಿ.

  • ಕಮಾಂಡೇಟ್‌ ಎ.ಟಿ. ತ್ಯಾಗರಾಜ್‌
  • ರಿಸಾಲ್ದಾರ್‌ ಗಳಾದ ಎ. ಲಿಂಗರಾಜ್‌ ಅರಸ್‌
  • ಸುಬ್ಬರಾಜ ಅರಸ್‌
  • ವಿರ್‌ ತುರಾಕ್‌ ಆಲಿ
  • ಸರ್ದಾರ್‌ ಬಹಾದ್ದೂರ್‌
  • ಬಿ. ಚಾಮರಾಜ್‌ ಅರಸ್‌
  • ರೆಜಿಮೆಂಟ್‌ದಾರ್‌ ಬಿ. ಚಾಮರಾಜ ಅರಸ್‌
  • ಕರ್ನಲ್‌ ಜೆ. ದೇಸಿರಾಜ ಅರಸ್‌

5. ತೀನ್‌ ಮೂರ್ತ ಚೌಕ ಎಲ್ಲಿದೆ?

ದೆಹಲಿ

6. ಭಾರತದ ಸಂಪನ್ಮೂಲಗಳನ್ನು ಬ್ರಿಟನ್‌ ಹೇಗೆ ಎರಡನೇ ಮಹಾಯುದ್ದದಲ್ಲಿ ಉಪಯೋಗಿಸಿಕೊಂಡಿತು?

  • ಭಾರತೀಯ ಸಂಪನ್ಮೂಲಗಳು ಮತ್ತು ಸಿಪಾಯಿಗಳು, ಮಿತ್ರರಾಷ್ಟ್ರಗಳು ಯುದ್ದದಲ್ಲಿ ಜಯಗಳಿಸಲು ಸಹಾಯವಾದವು.
  • ರಾಷ್ಟೀಯ ಚಳುವಳಿಗೆ ಈ ಯುದ್ದದಲ್ಲಿ ಭಾಗಿಯಾಗುವುದರೊಂದಿಗೆ ಪಡೆದ ಅನುಭವವು ಭಾರತಕ್ಕೆ ಒಂದು ರೀತಿ ಪ್ರೋತ್ಸಾಹಕರವಾಗಿತ್ತು.
  • ಈ ಯುದ್ದಕ್ಕಾಗಿ ಬ್ರಿಟನ್‌ ಬಾರತೀಯ ಕೃಷಿ ವಸ್ತುಗಳನ್ನು, ಕೈಗಾರಿಕಾ ಪದಾರ್ಥಗಳನ್ನು ಉಪಯೋಗಿಸಿಕೊಂಡಿತು.
  • ಯುದ್ದಕ್ಕೆ ಬೇಕಾದ ಸಾಮಾಗ್ರಿಗಳನ್ನು ಉತ್ಪಾದಿಸಲು ಅರ್ಡಿನೆನ್ಸ್‌ ಕಾರ್ಖಾನೆಗಳನ್ನು ಮೇಲ್ದರ್ಜೆಗೇರಿಸಿ, ಹೊಸ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿತು.
  • ಇದರಿಂದಾಗಿ ಭಾರತೀಯ ಸೇನೆಯು ಯುದ್ದದ ಉತ್ತರ ಭಾಗದಲ್ಲಿ ಗುಣಾತ್ಮಕ ಹಾಗೂ ದೊಡ್ಡಗಾತ್ರದ ಉತ್ತಮ ಯುದ್ದ ಸಾಮಾಗ್ರಿಗಳ ಉಪಯೋಗ ಪಡೆದುಕೊಂಡಿತು.

FAQ:

ವರ್ಸೇಲ್ಸ್‌ ಒಪ್ಪಂದವು ಯಾವಾಗ ಏರ್ಪಟ್ಟಿತು.

ವರ್ಸೇಲ್ಸ್‌ ಒಪ್ಪಂದವು 1919 ರಲ್ಲಿ ಏರ್ಪಟ್ಟಿತು.

ಅಮೆರಿಕಾದ ನೌಕಾ ಕೇಂದ್ರ ಯಾವುದು?

ಅಮೆರಿಕಾದ ನೌಕಾ ಕೇಂದ್ರವಾಗಿದ್ದ ಪರ್ಲ್‌ ಹಾರ್ಬರ್‌

ಇತರೆ ವಿಷಯಗಳು:

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh