ನಿಘಂಟು ಕನ್ನಡ | Kannada Nigantu Kannada Grammer

ಕನ್ನಡ ನಿಘಂಟು, Kannada Nighantu Kannada Grammar in Kannada Nighantu Meaning in Kannada Kannada Nighantu Online ನಿಘಂಟು ಪದಗಳು Vyakarana in Kannada

ಅ ಅವ್ಯಯ ಪ್ರ ಪ್ರತ್ಯಯ
ಅರ ಅರಬ್ಬಿ ಪ್ರಾ ಪ್ರಾಕೃತ
ಇಂ ಇಂಗ್ಲೀಷ್ ಪೋರ್ಚು ಪೋರ್ಚುಗೀಸ್
ಕ್ರಿ ಕ್ರಿಯಾಪದ ಫ್ರೆ ಫ್ರೆಂಚ್
ಗು ಗುಣವಾಚಕ ಮರಾ ಮರಾಠಿ
ಗ್ರೀ ಗ್ರೀಕ್ ಮಲೆ ಮಲೆಯಾಳ
ತಮಿ ತಮಿಳು ಮುಂ. ಮುಂತಾದ
ತು ತುಳು ಮೊ. ಮೊದಲಾದ
ತೆಲು ತೆಲುಗು ಯಾ ಅಥವ
ದೇ ದೇಶ್ಯ ಸ.ನಾ ಸರ್ವನಾಮ
ನಾ ನಾಮಪದ ಸಂ ಸಂಸ್ಕೃತ
ಪಾರ ಪಾರಸಿ ಹಿಂ ಹಿಂದಿ
ಕೆಲವು ಪದಗಳ ಅರ್ಥಗಳ ಮುನ್ನ ವಿವರಣೆ ನೀಡಲಾಗಿದೆ. ಆ ವಿವರಣೆಯು ಎಲ್ಲ ಅರ್ಥಗಳಿಗೂ ಅನ್ವಯಿಸುತ್ತದೆ ಎಂದು ತೋರಿಸಲು ಒಂದು ಅಡ್ಡಗೆರೆ ಎಳೆಯಲಾಗಿದೆ (—). ಪದದ ಅರ್ಥದ ಮೊದಲು ಓದುಗರು ವಿವರಣೆಯನ್ನು ಸೇರಿಸಿಕೊಳ್ಳಬೇಕು.
ಮುಖ್ಯೋಲ್ಲೇಖಗಳ ಕೆಳಗಿನ ಪದಪುಂಜಗಳ ವ್ಯಾಕರಣರೂಪವು ಬದಲಾಗಿದ್ದರೆ, ಅವುಗಳ ಬದಲಾದ ರೂಪವನ್ನು ಮಾತ್ರ ಸೂಚಿಸಲಾಗಿದೆ.
ಚಿಹ್ನೆಗಳು
< ಶಬ್ದಮೂಲವನ್ನು ಸೂಚಿಸುವ ಚಿಹ್ನೆ
> ಶಬ್ದಮೂಲವನ್ನು ಸೂಚಿಸುವ ಚಿಹ್ನೆ
= ಸಮಾನ ಎಂಬರ್ಥವನ್ನು ಸೂಚಿಸುವ ಚಿಹ್ನೆ
+ ಜೊತೆಗೆ ಎಂಬರ್ಥವನ್ನು ಸೂಚಿಸುವ ಚಿಹ್ನೆ

ಬರಹ ಅಂತರ್ಜಾಲ ನಿಘಂಟುವಿನಲ್ಲಿ ನಿಮ್ಮ ಕ್ಲಿಷ್ಟ ಪದಗಳಿಗೆ ಅರ್ಥವನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ

ಬರಹ ನಿಘಂಟು

ಗೃಹ ಹೆಸರುಪದ

(ಸಂ) ೧ ಮನೆ, ಬೀಡು ೨ ಹೆಂಡತಿ, ಪತ್ನಿ
ಗೃಹಕಲಹ ಹೆಸರುಪದ

ಒಳಜಗಳ, ಅಂತಃಕಲಹ
ಗೃಹಕೈಗಾರಿಕೆ ಹೆಸರುಪದ

ಮನೆಯಲ್ಲಿಯೇ ಮಾಡಬಹುದಾದ ಚಿಕ್ಕ ಪುಟ್ಟ ಕೈಗಾರಿಕೆ
ಗೃಹಖಾತೆ ಹೆಸರುಪದ

ರಾಜ್ಯದ ಯಾ ರಾಷ್ಟ್ರದ ಒಳಾಡಳಿತವನ್ನು ನೋಡಿಕೊಳ್ಳುವ ಖಾತೆ
ಗೃಹಬಂಧನ ಹೆಸರುಪದ

ಹೊರಗೆ ಹೋಗದಂತೆ ಆರೋಪಿಗಳನ್ನು ಮನೆಯಲ್ಲಿಯೇ ನಿರ್ಬಂಧದಲ್ಲಿರಿಸುವುದು
ಗೃಹಶಾಂತಿ ಹೆಸರುಪದ

ಭೂತ ಪಿಶಾಚಿಗಳಿಂದ ಮನೆಗೆ ತೊಂದರೆ ಉಂಟಾಗದಂತೆ ನಡೆಸುವ ಶಾಂತಿಕರ್ಮ
ಗೃಹಸಂಸ್ಕಾರ ಹೆಸರುಪದ

೧ ಗೃಹಶುದ್ಧಿ ಮಾಡುವ ಪುಣ್ಯಾ ಹವೇ ಮೊ. ಕ್ರಿಯೆ ೨ ಮದುವೆಯಲ್ಲಿ ವರನ ಬಿಡಾರಕ್ಕೆ ಏರ್ಪಾಡು ಮಾಡುವ ಸಾಮಾನು
ಗೃಹಸ್ಥ ಹೆಸರುಪದ

(ಸಂ) ೧ ಮದುವೆ ಮಾಡಿಕೊಂಡವನು, ಸಂಸಾರಿ ೨ ಸಭ್ಯ, ಶಿಷ್ಟ
ಗೃಹಸ್ಥಾಶ್ರಮ ಹೆಸರುಪದ

ನಾಲ್ಕು ಆಶ್ರಮಗಳಲ್ಲಿ ಎರಡನೆ ಯದು, ಸಾಂಸಾರಿಕ ಜೀವನ
ಗೃಹಿಣಿ ಹೆಸರುಪದ

(ಸಂ) ಹೆಂಡತಿ, ಪತ್ನಿ, ಭಾರ್‍ಯೆ, ಗೃಹಸ್ಥನ ಮನೆವಾಳ್ತಿ
ಗೃಹೀತ ಹೆಸರುಪದ

(ಸಂ) ೧ ಸ್ವೀಕರಿಸಬಹುದಾದುದು, ಒಪ್ಪಿಕೊಳ್ಳಬಹುದಾದುದು ೨ ಅಭಿಪ್ರಾಯ, ಅನಿಸಿಕೆ
ಗೃಹೀತ ಪರಿಚೆಪದ

(ಸಂ) ೧ ಸ್ವೀಕರಿಸಿದ, ಹೊಂದಿದ ೨ ಗ್ರಹಿಸಿದ, ತಿಳಿದ
ಗೆಂಟು ಹೆಸರುಪದ

(ದೇ) ೧ ದೂರ ೨ ವ್ಯತ್ಯಾಸ, ಭೇದ ೩ ಪರಸ್ಪರ ವಿರೋಧ ೪ ಸ್ವಲ್ಪವೇ ದೂರ, ನಸು ದೂರ, ಸಮೀಪ
ಗೆಜೆಟ್ಟು ಹೆಸರುಪದ

(<ಇಂ. gazette) ಸರ್ಕಾರದ ವಿಷಯಗಳನ್ನೊಳಗೊಂಡ ಸರ್ಕಾರಿ ಪತ್ರಿಕೆ, ರಾಜ್ಯ ಪತ್ರ
ಗೆಜ್ಜೆ ಹೆಸರುಪದ

(ದೇ) ೧ ಕಿರುಗಂಟೆ, ಕಿಂಕಿಣಿ ೨ ಕಾಲಿಗೆ ತೊಟ್ಟುಕೊಳ್ಳುವ ಒಂದು ಆಭರಣ ೩ ಪ್ರಾಣಿಗಳ ಯೋನಿ
ಗೆಜ್ಜೆಕಟ್ಟು ಎಸಕಪದ

= ೧ ಕಾಲಿಗೆ ಗೆಜ್ಜೆಯನ್ನು ಕಟ್ಟು ೨ ಯಕ್ಷಗಾನದಲ್ಲಿ ಮೊಟ್ಟಮೊದಲು ರಂಗ ಪ್ರವೇಶಿಸುವುದಕ್ಕಾಗಿ ಕಾಲಿಗೆ ಗೆಜ್ಜೆಯನ್ನು ಕಟ್ಟು ೩ ವೇಶ್ಯೆಯರ ಪದ್ಧತಿಯಂತೆ ವೃತ್ತಿಯನ್ನು ಪ್ರಾರಂಭಿಸಲು ಗೆಜ್ಜೆ ಪೂಜೆಯಲ್ಲಿ ಕಾಲಿಗೆ ಗೆಜ್ಜೆಯನ್ನು ಕಟ್ಟು
ಗೆಜ್ಜೆಪೂಜೆ ಹೆಸರುಪದ

೧ ಬಯಲಾಟವನ್ನು ಕಲಿಯಲು ಪ್ರಾರಂಭಿಸುವ ದಿನ ಗೆಜ್ಜೆಗೆ ಮಾಡುವ ಪೂಜೆ ೨ ವೇಶ್ಯಾವೃತ್ತಿಯನ್ನು ಪ್ರಾರಂಭಿಸುವಾಗ ಮಾಡುವ ಒಂದು ಸಮಾರಂಭ
ಗೆಜ್ಜೆವಸ್ತ್ರ ಎಸಕಪದ

ಪೂಜೆಗಾಗಿ ಹತ್ತಿಯಿಂದ ಮಾಡುವ ಸರ ಮತ್ತು ದುಂಡುಬಿಲ್ಲೆ
ಗೆಡಪ ಹೆಸರುಪದ

(ದೇ) ೧ ಅರ್ಥವಿಲ್ಲದ ಮಾತು, ಹರಟೆ
ಗೆಡೆ ಹೆಸರುಪದ

(ದೇ) ೧ ಎಣೆ, ಸಮ ೨ ಸ್ನೇಹ, ಗೆಳೆತನ ೩ ಬೀಳುವಿಕೆ, ಪತನ

FAQ :

ನಿಘಂಟು ಎಂದರೇನು?

ಶಬ್ದಗಳನ್ನು ಆಕಾರಾದಿಯಾಗಿ ವಿಂಗಡಿಸಿ ಅವುಗಳ ಅರ್ಥವನ್ನು ಹೇಳಿದಲ್ಲಿ ಅದು ಕೋಶವೆನಿಸುತ್ತದೆ.

ಭರತಖಂಡದಲ್ಲಿ ನಿಘಂಟು ರಚನೆಯಾಗಿದ್ದು ಯಾವಾಗ?

ಭರತಖಂಡದಲ್ಲಿ. ಸುಮಾರು ಕ್ರಿ.ಪೂ.1000ಕ್ಕಿಂತ ಹಿಂದೆಯೇ ಭಾರತದಲ್ಲಿ ನಿಘಂಟುಗಳು ರಚನೆಯಾಗಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ.

Kannada Nigantu Kannada Grammer

Kannada Grammer Book : Click Here

ಇತರೆ ವಿಷಯಗಳು :

ಅಲಂಕಾರ-ಅರ್ಥಾಲಂಕಾರಗಳು

Kannada Grammer

ಕನ್ನಡ ಸ್ವರಗಳು

Kannada Grammar Books ; Click Here

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಕನ್ನಡ ನಿಘಂಟುಗಳ ಬಗ್ಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ನಿಘಂಟುಗಳ ಬಗ್ಗೆ ಮಾಹಿತಿ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *

rtgh