Kannada Swaragalu, ಕನ್ನಡ ಸ್ವರಗಳು
ಸ್ವರಗಳು | Kannada Varnamale Swaragalu
ವ್ಯಾಕರಣ
ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ . ಪ್ರತಿ ಭಾಷೆಯನ್ನು ಮಾತನಾಡಲು ಅಥವಾ ಬರೆಯಲು ಕೆಲವು ನಿಯಮಗಳಿರುತ್ತವೆ . ಈ ನಿಯಮಗಳನ್ನು ನಾವು ವ್ಯಾಕರಣದಲ್ಲಿ ಕಲಿಯುತ್ತೇವೆ . ಇಲ್ಲಿ ನಾನು ವ್ಯಾಕರಣ ಎಂಬ ಪದವನ್ನು ಬಳಸುತ್ತಿದ್ದೆನೆ ಏಕೆಂದರೆ ವರ್ಣಮಾಲೆಯೂ ಕೂಡ ವ್ಯಾಕರಣದ ಭಾಗವಾಗಿದೆ
ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ .
ಆ ವರ್ಣಮಾಲೆಯಲ್ಲಿ ಮೂರು ವಿಧಗಳಿವೆ…
೧.ಸ್ವರಗಳು
೨.ವ್ಯಂಜನಗಳು
೩.ಯೋಗವಾಹಗಳು
ಸ್ವರಗಳು Kannada Swaragalu with pictures
ಸ್ವರಗಳು ಎಂದರೇನು ?
ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಸ್ವರಗಳು ಎಂದು ಕರೆಯುತ್ತಾರೆ .
ಕನ್ನಡದಲ್ಲಿ ಒಟ್ಟು 13 ಸ್ವರಗಳಿವೆ .
ಈ ಸ್ವರಗಳನ್ನು ಮತ್ತೆ ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ
೧. ಹೃಸ್ವ ಸ್ವರಗಳ
೨ ದೀರ್ಘ ಸ್ವರಗಳು
೩. ಪ್ಲುತ ಸ್ವರಗಳು
೧. ಹೃಸ್ವ ಸ್ವರಗಳು: ಒಂದೇ ಮಾತ್ರೆ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹೃಸ್ವ ಸ್ವರಗಳು ಎಂದು ಕರೆಯಲಾಗುತ್ತದೆ .
ಉದಾ : ಅ ಇ ಉ ಋ ಎ ಒ
೨. ದೀರ್ಘ ಸ್ವರಗಳು : ಎರಡು ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಸ್ವರಗಳಿಗೆ ದೀರ್ಘ ಸ್ವರಗಳು ಎನ್ನಲಾಗುತ್ತದೆ .
ಇವುಗಳನ್ನು ಉಚ್ಚರಿಸಲು ದೀರ್ಘ ಉಸಿರು ಉಸಿರು ಬೇಕಾಗುತ್ತದೆ .
ಧೀರ್ಘಸ್ವರ ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಧೀರ್ಘಸ್ವರಗಳು ಎಂದು ಕರೆಯುತ್ತೇವೆ .
ಕನ್ನಡದಲ್ಲಿ ಏಳು ಧೀರ್ಘಸ್ವರಗಳಿವೆ
ಉದಾ : ಆ ಈ ಊ ಏ ಐ ಓ ಔ .
೩.ಪ್ಲುತ ಸ್ವರಗಳು : ಮೂರು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರವನ್ನು ಪುತಾಕ್ಷರ ಎಂದು ಅಥವಾ ದೀರ್ಘ ಸ್ವರವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರಕ್ಕೆ ಪುತಾಕ್ಷರ ಎಂದು ಕರೆಯುತ್ತೇವೆ,
ಇಲ್ಲಿ ದೀರ್ಘ ಸ್ವರಗಳನ್ನು ಎಳೆದು ಉಚ್ಚರಿಸಲಾಗುತ್ತದೆ
ಉದಾ : ತಮ್ಮಾ SS , ಗೆಳೆಯಾ SSS .
ಇನ್ನು ಹೆಚ್ಚಿನ ವಿಷಯಗಳನ್ನು ಓದಿ:
Kannada Grammar Book | ಕನ್ನಡ ಪುಸ್ತಕಗಳು ಇಲ್ಲಿಂದ ಖರೀದಿ ಮಾಡಬಹುದು
Kannada Vyakarana Mattu Rachane [kannada Grammar And Composition] Buy Books