ಕನ್ನಡ ಕವನಗಳು | Top 10 Kannada Kavanagalu

ಕನ್ನಡ ಕವನಗಳು, Latest Top 10 Kannada Kavanagalu, Sharechat Kannada Kavanagalu, Kannada Kavanagalu About Life, Love Kavanagalu Friendship Kavanagalu

Kannada Kavanagalu

Kannada Kavanagalu
Kannada Kavanagalu

1. ಕುವೆಂಪು ಕನ್ನಡ ಕವನಗಳು

ಜ್ಞಾನಪೀಠ ಪ್ರಶಸ್ತಿಯ ವಿಜೇತರು ಇವರು
ಶ್ರೀ ರಾಮಾಯಣ ದರ್ಶನಂ ಕೃತಿ ಬರೆದವರೇ
ಇವರು
ಇವರು ನಮ್ಮೆಲ್ಲರಿಗೂ ಜ್ಞಾನದ ಬಿಂದು
ಇವರೇ ಕವಿಗಳ ಗುಂಪಿಗೆ ಕೇಂದ್ರ ಬಿಂದು.
ನಮ್ಮ ನಾಡಿನ ರಾಷ್ಟ್ರ ಕವಿ
ನಮ್ಮ ನಾಡನ್ನು ಕವನದಿಂದ ಹೊಗಳಿದ ಕವಿ
ಇವರದು ನಮ್ಮ ನಾಡನಲ್ಲಿ ಅದ್ಭುತ ಕೀರ್ತಿಯ
ಪಾತ್ರ
ಅವರೇ ನಮ್ಮ ನಾಡಿನ ಪ್ರತಿಬಿಂಬ ಕವಿ ಕುವೆಂಪು
ಮಾತ್ರ
ಇವರು ಹುಟ್ಟಿದ್ದು ಕುಪ್ಪಳ್ಳಿಯಲ್ಲಿ
ಹೆಸರು ಮಾಡಿದ್ದು ಇಡೀ ಜಗತ್ತಿನಲ್ಲಿ
ಇವರ ಕವನ ಕೇಳಲು ತುಂಬಾ ಇಂಪು
ಅವರೇ ನನ್ನ ಗುರು ಕವಿ ಕುವೆಂಪು.

2. ಎಲ್ಲಿದೆ ಮಮತೆ?

ಧನಿಕನ ಮನೆಯಲ್ಲಿದೆಯೇ
ಬಡವರ ಮನೆಯಲ್ಲಿದೆಯೇ
ಏನೂ ಅರಿಯದ ಮಗುವಿನಲ್ಲಿದೆಯೇ
ಮಮತೆ ಎಲ್ಲಿದೆ ? ಎಲ್ಲಿದೆ ಮಮತೆ?
ಗಿಡದಲ್ಲಿನ ಹೂವಿನಲ್ಲಿದೆಯೇ
ಜೇನಿನ ಗೂಡಿನಲ್ಲಿದೆಯೇ
ಮರದಲ್ಲಿನ ಹಣ್ಣಿನಲ್ಲಿದೆಯೇ
ಮಮತೆ ಎಲ್ಲಿದೆ? ಎಲ್ಲಿದೆ ಮಮತೆ?
ನಿಮ್ಮ ಮನಸ್ಸಿನಲ್ಲಿದೆಯೇ
ನಿಮ್ಮ ಕಣ್ಣಿನಲ್ಲಿದೆಯೇ
ಹಾಗಾದರೆ ನಿಮಲ್ಲಿ ಮಮತೆ ಇಲ್ಲವೇ?
ಮಮತೆ ಎಲ್ಲಿದೆ? ಎಲ್ಲಿದೆ ಮಮತೆ?

3. ಕವನ ಪಲ್ಲವಿ ನೀನೇ

ಓ ನನ್ನ ಜೀವ
ನನ್ನ ಮನದಾಳದ ಹೂವೆ
ನನ್ನ ಪ್ರಾಣಕ್ಕೆ ಪ್ರಾಣ ಕೊಡುವ ಮನವೆ
ನನ್ನ ಜೀವನದ ಗೆಳತಿ ಪಲ್ಲವಿ ನೀನೇ.
ನನ್ನ ಪಾಲಿನ ಉಸಿರು ನೀನೇ
ನನ್ನಗೆಳೆತನದ ಬಿಂದು ನೀನೇ
ನನ್ನ ಬಾಳಿನಲ್ಲಿ ಅರ್ಥ ನೀನೇ.
ನನ್ನ ಜೀವನದ ಗೆಳತಿ ಪಲ್ಲವಿ ನೀನೆ
ನನ್ನ ಬಾಲ ಗೆಳತಿ ನೀನೇ
ನನ್ನ ಮುದ್ದಾದ ಸ್ನೇಹಿತೆ ನೀನೇ
ನನ್ನಿಂದ ದೂರಾದ ಹುಡುಗಿ ನೀನೇ
ನನ್ನ ಜೀವನದ ಗೆಳತಿ ಪಲ್ಲವಿ ನೀನೇ.

4. ಕವನ ಸೌಂದರ್ಯ

ಓ ಪರಿಸರವೇ
ನಿನಗೆ ಈ ಸೌಂದರ್ಯವನ್ನು ಕೊಟ್ಟವರಾರು?
ನಿನ್ನ ಈ ಸೌಂದರ್ಯ ನೋಡುತ್ತಲೆ
ಮೈ ಮರೆಯುವೆವು ನಾವೆಲ್ಲರೂ.
ಪರಿಸರವೇ ನಿನ್ನ ಮಡಿಲಲ್ಲಿ ಸಾವಿರಾರು
ಗಿಡಮರಗಳು
ಅವುಗಳ ಬಳಿ ನಾವೆಲ್ಲರೂ
ಅವುಗಳಿಲ್ಲದಿರೆ ಒಂದು ಕ್ಷಣ
ನಮ್ಮ ಬಾಳಿನ ಅವಸಾನ (ಸಾವು)
ನಮ್ಮ ನಾಡಿನ ಸೌಂದರ್ಯ
ಬೇರೆಯವರಿಗುಂಟು ಮಾಡುವುದು ಆಶ್ಚರ್ಯ
ಈ ಸೌಂದರ್ಯವನ್ನು ನೋಡುತ್ತಲೆ
ಕವನಗಳನ್ನು ಬರೆಯುತ್ತಿರುವೆ ನಾನು.

5.ಕವನ ಓ ಮನುಜ

ಓ ಮನುಜನೇ
ನಿನ್ನ ಮನದಲ್ಲಿ
ಇಂತಹದು ಏಕೆ
ಭಾವನೆ?
ನಿನ್ನ ಮನೆಯವರು ನಿನ್ನ ಬಂಧುಗಳು
ಬೇರೆ ಜನರು ಯಾರೋ ಏನು?
ಇಂತಹದು ಭಾವನೆ ನಿನ್ನಲ್ಲೇಕೆ?
ಮನುಜ ನಿನ್ನಲ್ಲೇಕೆ?
ಬೇರೆ ಜನರು ನಿನ್ನ ಮಿತ್ರ ಬಂಧುಗಳಲ್ಲವೆ
ನೀನೇಕೆ ನಿನ್ನ ಮನೆಯವರಿಗೆ ಒಳ್ಳೆಯದನ್ನು
ಬೇರೆ ಜನರಿಗೆ ಕೆಟ್ಟದನ್ನೆ ಬಯಸುವೆ
ನಿನ್ನ ಮನದಲ್ಲಿ ಅವರು ಇವರು ಎಂಬ
ಪಂಗಡವನ್ನು ಏಕೆ ಮಾಡಿಕೊಂಡೆಹಮನುಜ
ಹೀಗೆಕೆ ಪಂಗಡವಾಗಿಸಿ ವಿಭಾಗಿಸಿದೆ
ಮನುಜ ಏಕೆ ವಿಭಜಿಸಿದೆ.

6. ಕವನ ಮನಸೆ

ಓ ಮನಸೆ ಏನಾಗಿದೆ ನಿನಗೆ ?
ಹೀಗೇಕೆ ದೂರಾಗುವೆ
ನಮ್ಮಲ್ಲಿ ಹೀಗೆಕೆ ಮೌನ ತರುವೆ.
ನಮ್ಮನ್ನು ಬೇರೆಯಾಗಿಸುವೆಯಾ
ನಮ್ಮ ಸ್ನೇಹವನ್ನು ನನಗೆ
ಮರೆಯಲಾಗುವುದಿಲ್ಲ
ಹೀಗೆ ದೂರವಾಗಬೇಡ
ಮನಸೇ ನನ್ನಿಂದ ದೂರವಾಗಬೇಡ .
ನಮ್ಮ ಗೆಳೆತನವನ್ನು
ದೂರಗೊಳಿಸಲು ಹೀಗೆ ಮಾಡುವೆಯಾ?
ನಾನೊಂದು ತೀರ (ಕಡೆ)
ಅವಳೊಂದು ತೀರ (ಕಡೆ)
ಹೀಗೇಕೆ ದೂರಗೊಳಿಸಿದೆ
ಮನಸೇ ಹೇಳು ಮನಸೇ
ಹೇಳು ಹೀಗೆಕೆ ಮಾಡಿದಿ
ಬೇಗ ನಮ್ಮ ಸ್ನೇಹವನ್ನು
ಒಂದು ಗೂಡಿಸು ನಮ್ಮ ನಮ್ಮಲ್ಲಿ
ಒಡಕು ತಂದ ಮನಸೇ ನೀನೆ ಕೂಡಿಸು.

7. ಕವನ ಮರೆಯಿರಿ ನೋವು

ಕಷ್ಟಗಳು ಸಾವಿರಾರು ಸಹನೆ ಸಹಿಸುವ ಮನಸ್ಸು
ಒಂದೇ ಒಂದು ಕಷ್ಟ ನಿವಾರಿಸುವ ದಾರಿ
ನಗುನಗುತಾ ನೀವು ಮರೆಯಿರಿ ನೋವು
ಕಷ್ಟ ಎಂದುಕೊಳ್ಳುವ ಮನುಜನು
ಗುರಿಯನ್ನು ಮುಟ್ಟುವುದಿಲ್ಲ ಎಂದೆಂದಿಗೂ
ಕಷ್ಟವನ್ನು ನಿವಾರಿಸಬಲ್ಲ ಮನುಜನು
ದೊಡ್ಡ ವ್ಯಕ್ತಿಯಾಗಿ ಕಾಣುವನು ಎಂದೆಂದಿಗೂ
ಮನುಷ್ಯನೆಂದ ಮೇಲೆ ಅವನಿಗೆ ಬರುವವು
ಕಷ್ಟಗಳು
ಅವುಗಳನ್ನು ದೊಡ್ಡ ಸಮಸ್ಯೆ ಎಂದುಕೊಳದೆ
ಸಹಿಸುವ ದೃಷ್ಟಿಗಳು
ಅವುಗಳನ್ನು ನಿವಾರಿಸಲು ದುಡಿಯುವ
ಮುಷ್ಟಿಗಳು
ನಗುನಗುತಾ ನೀವು , ಮರೆಯಿರಿ ನೋವು.

8. ಕವನ ಸಂಬಂಧ

ಮುಂಜಾವಿನಲ್ಲಿ ಮಳೆ ಸುರಿಯುತ್ತಿತ್ತು
ಅಲ್ಲೊಂದು ನವಿಲು ಕುಣಿಯುತ್ತಿತ್ತು
ಅದು ನನ್ನನ್ನು ಬಾ ಎಂದು ಕರೆಯುತ್ತಿತ್ತು
ಅದರತ್ತ ನನ್ನ ಮನ ಸೆಳೆಯುತ್ತಿತ್ತು
ನನ್ನ ಸುತ್ತಲೂ ಸುತ್ತಿತ್ತು ಒಂದು ಜೇಡರ ಬಲೆ
ಅದನ್ನು ಬಿಡಿಸಿಕೊಳ್ಳುವುದು ನನ್ನದೊಂದು ಕಲೆ
ಆಗ ನನ್ನ ಮನದಲ್ಲಿ ತುಂಬಿತ್ತು ಸ್ಫೂರ್ತಿಯ ಸೆಲೆ
ಅದರಿಂದ ನಾ ಹೆಣೆದ ಕವನದ ಜೇಡರ ಬಲೆ.
ಈ ನೆನಪು ನನ್ನಲ್ಲಿ ನಿರಂತರ
ಅದಕ್ಕೂ ನನಗೂ ಇತ್ತು ಅಂತರ
ಅದರ ಬಗ್ಗೆ ನನ್ನ ಮನದಲ್ಲಿ
ಉಕ್ಕಿ ಬರುವುದು ಅನುಬಂಧ
ಅದೇ ನಮ್ಮಿಬ್ಬರ ಸಂಬಂಧ

9. ಕವನ ಹಕ್ಕಿಗಳ ಕೂಗು

ಚಿಲಿಪಿಲಿ ಹಕ್ಕಿಗಳೆ
ಹೀಗೇಕೆ ಕೂಗುವಿರಿ
ಕೂಗಲು ಕಾರಣವಿದೆ
ಹೇಳಿ ನೀವು ಬೇಗ ನನಗೆ
ನಾನು ನಿಮ್ಮೊಡನೆ ಬರಬೇಕು
ಎಂದು ಕೂಗಿದಿರೋ
ಇಲ್ಲವೋ ನನ್ನನ್ನು ಎಚ್ಚರಗೊಳಿಸಲು
ಕೂಗಿದಿರೋ
ನನ್ನನ್ನು ಕವನ ಬರೆ ಎಂದು
ಹೇಳಲು ಕೂಗಿದಿರೋ.
ನಾನು ನಿಮ್ಮೊಡನೆ ಕೂಗಲು ಬರಲೆಂದು
ಕೂಗಿದಿರೋ
ನನ್ನನ್ನು ಓದು ಎಂದು ಹೇಳಲುಕೂಗಿದಿರೋ
ಇಲ್ಲವೆ ಮತ್ತೇಕೆ ನನ್ನನ್ನು ಕೂಗಿದಿರಿ
ಹಕ್ಕಿಗಳೇ ಬೇಗ ಹೇಳಿ ನೀವು ನನಗೆ ಕಾರಣವ
ಚಿಲಿಪಿಲಿ ಹಕ್ಕಿಗಳು ನಾವು ನೀನು
ಕವನ ಬರೆಯಲೆಂದು ಕೂಗಿದೆವು
ನಾವು ನೀನು ಕವನ ಬರೆದು ಎಲ್ಲರಿಗೂ
ಎಲ್ಲರಿಗೂ ಹೇಳಲೆಂದು ಕೂಗಿದೆವು ನಾವು
ಎಲ್ಲರಿಗೂ
ಹೇಳಲೆಂದು ಕೂಗಿದೆವು.

10. ಕವನ ಪಲ್ಲವಿ ನೀನೆ

ಓ ನನ್ನ ಜೀವ
ನನ್ನ ಮನದಾಳದ ಹೂವೆ
ನನ್ನ ಪ್ರಾಣಕ್ಕೆ ಪ್ರಾಣ ಕೊಡುವ ಮನವೆ
ನನ್ನಜೀವದ ಗೇಳತಿ ಪಲ್ಲವಿ ನೀನೇ.
ನನ್ನ ಪಾಲಿನ ಉಸಿರು ನೀನೆ
ನನ್ನ ಗೆಳೆತನದ ಬಿಂದು ನೀನೆ
ನನ್ನ ಪಾಲಿನಲ್ಲಿ ಅರ್ಧ ನಿನೆ
ನನ್ನ ಜೀವದ ಗೆಳತಿ ಪಲ್ಲವಿ ನೀನೆ
ನನ್ನ ಬಾಲ್ಯ ಗೆಳತಿ ನೀನೆ
ನನ್ನ ಮುದ್ದಾದ ಸ್ನೇಹಿತೆ ನೀನೆ
ನನ್ನಿಂದ ದೂರಾದ ಹುಡುಗಿ ನೀನೆ
ನನ್ನ ಜೀವದ ಗೆಳತಿ ಪಲ್ಲವಿ ನೀನೆ.

Kannada Kavana Kannada Love Quotes

“kannada feeling kavanagalu”
“preethiya kavanagalu”
“love kavanagalu”
“kannada preethiya kavanagalu images”
“kannada love feeling kavanagalu”
“putta heart kannada kavanagalu”
“kannada kavanagalu photo”
“kannada kavanagalu facebook”

ಇತರೆ ವಿಷಯಗಳು :

60 ಕು ಹೆಚ್ಚು ಕನ್ನಡ ಕವನಗಳು

Kannada App Kavanagalu

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಕನ್ನಡ ಕವನಗಳು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ಕವನಗಳ ಬಗ್ಗೆ ಮಾಹಿತಿ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *

rtgh