ವಿಭಕ್ತಿ ಪ್ರತ್ಯಯಗಳು ಕನ್ನಡ, Vibhakti Pratyaya in Kannada, Vibhakti Pratyaya Galu Details About Kannada Vibhakti Pratyaya, Vibhakti Pratyaya Chart ವಿಭಕ್ತಿ ಪ್ರತ್ಯಯ examples vibhakti pratyaya examples in kannada
ವಿಭಕ್ತಿ ಪ್ರತ್ಯಯಗಳು
ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ. ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.
vibhakti pratyaya galu endarenu in kannada
ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದು ಹೆಸರು”
ಅಥವಾ “ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.
ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ
ಮೊದಮೊದಲು 8 ವಿಭಕ್ತಿ ಪ್ರತ್ಯಯಗಳು ಇದ್ದವು.
ಆದರೆ ಈಗ ಸಂಬೋಧನಾ ವಿಭಕ್ತಿ ಯನ್ನು ಬಿಟ್ಟು 7 ವಿಭಕ್ತಿಗಳನ್ನು ಕಾಣಬಹುದು.
ಅವುಗಳೆಂದರೆ:
ಪ್ರಥಮ,
ದ್ವಿತೀಯ,
ತೃತೀಯ,
ಚತುರ್ಥಿ,
ಪಂಚಮಿ,
ಷಷ್ಠಿ,
ಸಪ್ತಮೀವಿಭಕ್ತಿ ಗಳೆಂದು.
Halegannada Vibhakti Pratyaya in Kannada
ಹಳೆಗನ್ನಡ ಪ್ರತ್ಯಗಳು: ಕ್ರಮವಾಗಿ:- ಮ್, ಅಮ್, ಇಮ್,ಗೆ(ಕೆ), ಅತ್ತಣಿಂ, ಅ, ಒಳ್.
hosagannada vibhakti pratyaya in kannada
ಹೊಸಗನ್ನಡ ಪ್ರತ್ಯಯಗಳು: ಕ್ರಮವಾಗಿ:- ಉ,ಅನ್ನು,ಇಂದ,ಗೆ(ಕೆ),ದೆಸೆಯಿಂದ, ಅ,ಅಲ್ಲಿ.
Vibhakti Pratyaya Kannada Chart
ವಿಭಕ್ತಿಯ ಹೆಸರು ಪ್ರತ್ಯಯ
1)ಪ್ರಥಮವಿಭಕ್ತಿ – ಉ
2)ದ್ವಿತೀಯವಿಭಕ್ತಿ – ಅನ್ನು
3)ತೃತೀಯವಿಭಕ್ತಿ – ಇಂದ
4)ಚತುರ್ಥಿವಿಭಕ್ತಿ – ಗೆ, ಇಗೆ
5)ಪಂಚಮಿವಿಭಕ್ತಿ – ದೆಸೆಯಿಂದ
6)ಷಷ್ಠಿವಿಭಕ್ತಿ – ಅ
7)ಸಪ್ತಮಿವಿಭಕ್ತಿ – ಅಲ್ಲಿ
8)ಸಂಭೋಧನವಿಭಕ್ತಿ – ಮ ಏ,
ವಿಭಕ್ತಿ ಪ್ರತ್ಯಯಗಳ ಬಳಕೆ ಮತ್ತು ಅವು ಕೊಡುವ ಅರ್ಥ’
ಮನೆ ಎಂಬ ನಾಮಪದಕ್ಕೆ ಏ೦ಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.
ಪ್ರಥಮಾ ವಿಭಕ್ತಿ: ಮನೆ + ಉ = ಮನೆಯು
ದ್ವಿತೀಯಾ ವಿಭಕ್ತಿ: ಮನೆ + ಅನ್ನು = ಮನೆಯನ್ನು
ತೃತೀಯಾ ವಿಭಕ್ತಿ: ಮನೆ + ಇಂದ = ಮನೆಯಿಂದ
ಚತುರ್ಥೀ ವಿಭಕ್ತಿ: ಮನೆ + ಗೆ = ಮನೆಗೆ
ಪಂಚಮೀ ವಿಭಕ್ತಿ: ಮನೆ + ದೆಸೆಯಿಂದ = ಮನೆಯ ದೆಸೆಯಿಂದ
ಷಷ್ಠೀ ವಿಭಕ್ತಿ: ಮನೆ + ಅ = ಮನೆಯ
ಸಪ್ತಮೀ ವಿಭಕ್ತಿ: ಮನೆ + ಅಲ್ಲಿ = ಮನೆಯಲ್ಲಿ, ಮನೆಯೊಳು, ಮನೆಯಾಗ
ಸಂಭೋದನ ವಿಭಕ್ತಿ: ಮನೆ + ಆ = ಮನೆಯಾ
1. ಪ್ರಥಮಾ : “ಶಾಮನು ಬಂದನು”
ಇಲ್ಲಿ “ಬಂದನು” ಎಂಬ ಕ್ರಿಯೆಯನ್ನು ನಡೆಸಿದ ಹೆಸರುಪದ ‘ಶಾಮ'(ಕರ್ತೃ).
ಸಾಮಾನ್ಯವಾಗಿ ಕನ್ನಡದಲ್ಲಿ ಪ್ರಥಮಾ ವಿಭಕ್ತಿಯ ಬಳಕೆ ಬಹಳ ಕಡಮೆ. ಹೆಚ್ಚಾಗಿ “ಶಾಮನು ಬಂದನು” ಎಂದು ಹೇಳಲು, “ಶಾಮ ಬಂದ” ಎಂದು ಹೇಳುವುದು, ಬರೆಯುವುದು ಉಂಟು.
2. ದ್ವಿತೀಯಾ : “ಶಾಮನನ್ನು ಕರೆದರು”
ಇಲ್ಲಿ “ಕರೆದರು” ಎಂಬ ಕ್ರಿಯೆಯನ್ನು ‘ಶಾಮ’ ಎಂಬ ನಾಮಪದದ ಕುರಿತು( ನಾಮಪದದ ಮೇಲೆ ) ನಡೆಯಿತು. ಸಂಸ್ಕೃತ ಮತ್ತು ಕನ್ನಡದಲ್ಲಿ ದ್ವಿತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.
ಸಂಸ್ಕೃತದಲ್ಲಿ “ಗ್ರಾಮಂ ಗತಃ” ಅಂದರೆ “ಗ್ರಾಮಕ್ಕೆ ಹೋದವನು” ಎಂದು. ಆದರೆ “ಗ್ರಾಮಂ” ದ್ವಿತೀಯಾ ವಿಭಕ್ತಿ, “ಗ್ರಾಮಕ್ಕೆ” ಚತುರ್ಥೀ ವಿಭಕ್ತಿ. ಕನ್ನಡದಲ್ಲಿ ಸಂಸ್ಕೃತದಂತೆ “ಗ್ರಾಮವನ್ನು ಹೋದನು” ಎಂದರೆ ತಪ್ಪು.
3. ತೃತೀಯಾ: “ಶಾಮನು ಬಿಲ್ಲಿನಿಂದ ಹೊಡೆದನು”
ಇಲ್ಲಿ ‘ಶಾಮ’ ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) ‘ಹೊಡೆದನು’ ಎಂಬ ಕ್ರಿಯೆಯನ್ನು ‘ಬಿಲ್ಲು’ ಎಂಬ ನಾಮಪದವನ್ನು ಬಳಸಿ ನಡೆಸಿತು. ಸಂಸ್ಕೃತ ಮತ್ತು ಕನ್ನಡದಲ್ಲಿ ತೃತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.
4. ಚತುರ್ಥೀ : “ಶಾಮನು ಮನೆಗೆ ಹೋದನು”
ಇಲ್ಲಿ ‘ಶಾಮ’ ಎಂಬ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) ‘ಹೋದನು’ ಎಂಬ ಕ್ರಿಯೆಯನ್ನು ನಡೆಸಿ ತಲುಪಿದ ಜಾಗ ‘ಮನೆ’ ಎಂಬ ನಾಮಪದ ತಿಳಿಸುವ ಜಾಗ.
5. ಪಂಚಮೀ : “ಶಾಮನ ದೆಸೆಯಿಂದ ಶಿವ ಹೋದನು”
ಇಲ್ಲಿ ‘ಶಾಮ’ ಎಂಬ ನಾಮಪದದ ಪ್ರೇರಣೆಯಿಂದ ‘ಶಿವ’ ಎಂಬ ನಾಮಪದವು(ಪ್ರಥಮಾ ವಿಭಕ್ತಿ) ‘ಹೋದನು’ ಎಂಬ ಕ್ರಿಯೆಯನ್ನು ಮಾಡಿತು.
6. ಷಷ್ಠೀ : “ಶಾಮನ ಹೆಂಡತಿ ಸೀತೆ”
ಇಲ್ಲಿ ‘ಶಾಮ’ ಎಂದ ನಾಮಪದಕ್ಕೆ ಮತ್ತು ‘ಸೀತೆ’ ಎಂಬ ನಾಮಪದಕ್ಕೆ ಇರುವ ಸಂಬಂಧ/ನಂಟನ್ನು ‘ಹೆಂಡತಿ’ ಎಂಬ ನಾಮಪದವು ತಿಳಿಸುವುದು.
7. ಸಪ್ತಮೀ : “ಶಾಮನು ಕಾಡಿನಲ್ಲಿ ಹೊಡೆದನು”
ಇಲ್ಲಿ ‘ಶಾಮ’ ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) ‘ಹೊಡೆದನು’ ಎಂಬ ಕ್ರಿಯೆಯನ್ನು ನಡೆಸಿದ ಜಾಗವನ್ನು ‘ಕಾಡು’ ಎಂಬ ನಾಮಪದವು ತಿಳಿಸುವುದು.
ವಿಭಕ್ತಿ ಪ್ರತ್ಯಯ ರೂಪಗಳು :
1)ಪ್ರಥಮಾ ಮ್ ಮ್ ಶಾಮಂ
2)ದ್ವಿತೀಯಾ ಅಮ್ ಶಾಮನಂ
3)ತೃತೀಯ ಇಮ್ ಶಾಮನಿಂ
4)ಚತುರ್ಥೀ ಗೆ ಶಾಮಂಗೆ
5)ಪಂಚಮಿ ಅತ್ತಣಿಂ ಶಾಮನತ್ತಣಿಂ
6)ಷಷ್ಠಿ ಅ ಶಾಮನ
7)ಸಪ್ತಮಿ ಒಳ್ ಶಾಮನೊಳ್
FAQ :
“ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದು ಹೆಸರು”
ಒಟ್ಟು 7 ವಿಭಕ್ತಿ ಪ್ರತ್ಯಯಗಳಿವೆ
ಇತರೆ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ
ವಿಭಕ್ತಿ ಪ್ರತ್ಯಯಗಳು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ವಿಭಕ್ತಿ ಪ್ರತ್ಯಯಗಳು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.