ಲಘು – ಗುರು | Lagu Guru in Kannada Grammer Book Online

ಲಘು ಗುರು ಕನ್ನಡ ವ್ಯಾಕರಣ, Lagu Guru Kannada Grammer Book Online Kannada Grammer, Kannada Vyakarana in Kannada Pdf Download

ಮಾತ್ರೆ :- ಅ ಎಂಬ ಅಕ್ಷರವನ್ನು ನಾವು ಎಳೆಯದಂತೆ,  ಮೊಟಕುಗೊಳಿಸದಂತೆ ಉಚ್ಚಾರಮಾಡುವುದಕ್ಕೆ ಬೇಕಾಗುವ ಕಾಲವೇ ಒಂದು ಮಾತ್ರಾಕಾಲ. 

ಲಘುಗಳು :

ಒಂದು ಮಾತ್ರಾ ಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ ಲಘುಗಳೆನಿಸುವುವು.  

ಲಘುವನ್ನು ‘U’ ಹೀಗೆಗುರುತಿಸುವುದುವಾಡಿಕೆ.

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು :-
ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಲಘುಗಳೆನಿಸುವುವುಲಘುಗಳಾಗಿರುವ ಅಕ್ಷರಗಳ ಮೇಲೆ ‘U‘ ಹೀಗೆ ಛಂದಸ್ಸಿನಲ್ಲಿ ಗುರುತಿಸುವುದು ವಾಡಿಕೆ.
ಉದಾಹರಣೆಗೆ:-

UUUUUU
UUUUUU
ಕಿಕು
UUUUUU
ಕೆಕೊಸುಸೊಸೃಕೃ

ಮೇಲೆ ಹ್ರಸ್ವಸ್ವರ ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಾದುದರಿಂದ ಅವುಗಳ ಮೇಲೆ ಹೀಗೆ ಗುರುತು ಮಾಡಿದೆ.

ಗುರುಗಳು :- 

ಎರಡುಮಾತ್ರೆಗಳಕಾಲದಲ್ಲಿಉಚ್ಚರಿಸಲ್ಪಡುವಅಕ್ಷರಗಳೆಲ್ಲಗುರುಗಳೆನಿಸುವುವು.  ಗುರುಗಳಾಗಿರುವಅಕ್ಷರಗಳಮೇಲೆಹೀಗೆಗುರುತಿಸುವುದುವಾಡಿಕೆ.

ಗುರುಗಳಾಗುವ ಅಕ್ಷರಗಳು :-

ದೀರ್ಘಸ್ವರದೀರ್ಘಸ್ವರದಿಂದಕೂಡಿದಗುಣಿತಾಕ್ಷರಗಳುಅನುಸ್ವಾರವಿಸರ್ಗಗಳಿಂದಕೂಡಿದಅಕ್ಷರಗಳುಒತ್ತಕ್ಷರದಹಿಂದಿನಅಕ್ಷರವ್ಯಂಜನಾಕ್ಷರದಹಿಂದಿನಅಕ್ಷರಷಟ್ಪದಿಪದ್ಯಗಳಲ್ಲಿಬರುವ೩ನೆಯ೬ನೆಯಸಾಲಿನಕೊನೆಯಲ್ಲಿರುವಅಕ್ಷರ(ಲಘುವಾಗಿದ್ದರೂಗುರುಗಳೆನಿಸುವುವು.

ಉದಾಹರಣೆಗೆ :

(i) ದೀರ್ಘಸ್ವರಾಕ್ಷರಗಳುಗುರುಗಳಾಗುವುದಕ್ಕೆ

(ii) ದೀರ್ಘಸ್ವರದಿಂದಕೂಡಿದಗುಣಿತಾಕ್ಷರಗಳು

ಕಾಕೀಚೇಚೈಸೈನಾರೋಸೌ
ಕ್ಕಾಸ್ನೇತ್ರೇಪ್ರೈಕ್ರೋಧ್ಯಾ ಲೋ

iii) ಅನುಸ್ವಾರವಿಸರ್ಗಗಳಿಂದಕೂಡಿದಅಕ್ಷರಗಳು

ಅಂಅಃತಂತಃಸಂಸಃಕಂ

(iv) ಒತ್ತಕ್ಷರದಹಿಂದಿನಅಕ್ಷರಗುರುವಾಗುವುದಕ್ಕೆ

—U—U—U—UU
ಕಲ್ಲುಮಣ್ಣುನಿಲ್ಲುಮೆತ್ತಗೆ

(ಇಲ್ಲಿ ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುಗಳಾಗಿದ್ದು, ಉಳಿದವು ಲಘುವಾಗಿದ್ದರೆ ಲಘು ಚಿಹ್ನೆಯನ್ನೂ ಗುರುವಾಗಿದ್ದರೆ ಗುರು ಚಿಹ್ನೆಯನ್ನೂ ಹಾಕಬೇಕು)

(v) ವ್ಯಂಜನಾಕ್ಷರದಹಿಂದಿನಅಕ್ಷರಗುರುವಾಗುವುದಕ್ಕೆ

ಕಲ್ನಿಲ್ಪಣ್ತಿನ್ಮೇಣ್ಕಾಲ್ಮೇಲ್ತಾಯ್

ಮೇಲೆ ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುಗಳಾಗಿರುವುದನ್ನು ಗಮನಿಸಿರಿ.  ‘ಮೇಣ್‘ ಎಂಬಲ್ಲಿ ‘ಮೇ‘ ಎಂಬುದೂ, ‘ಕಾಲ್‘ ಎಂಬಲ್ಲಿ ‘ಕಾ‘ ಎಂಬುದೂ, ‘ಮೇಲ್‘ ಎಂಬಲ್ಲಿ ‘ಮೇ‘ ಎಂಬುದೂ, ‘ತಾಯ್‘ ಎಂಬಲ್ಲಿ ‘ತಾ‘ ಎಂಬುದೂ ದೀರ್ಘಾಕ್ಷರಗಳಾಗಿದ್ದರಿಂದ ಸಹಜವಾಗಿ ಅವು ಗುರುಗಳೇ ಆಗಿದ್ದರೂ, ವ್ಯಂಜನಾಕ್ಷರಗಳು ಹಿಂದಿರುಗುವುದರಿಂದಲೂ ಅವು ಗುರುಗಳು.  ಹೀಗೆ ಅವು ಗುರುಗಳಾಗುವುದಕ್ಕೆ ಎರಡು ಕಾರಣಗಳಿದ್ದರೂ ಒಂದೇ ಗುರು.  ಮೇಲಿನ ಉದಾಹರಣೆಗಳಲ್ಲಿ ವ್ಯಂಜನಾಕ್ಷರಗಳಾದ ಲ್, ಣ್, ಯ್ ಮೊದಲಾದವು ಲಘುಗಳೂ ಅಲ್ಲ, ಗುರುಗಳೂ ಅಲ್ಲ.  ಅವಕ್ಕೆ ಯಾವ ಚಿಹ್ನೆಯನ್ನು ಹಾಕಬಾರದು.  ಒಂದು ಅಕ್ಷರ ಗುರುವಾಗಲು ಎರಡು ಮೂರು ಕಾರಣಗಳಿದ್ದರೂ ಒಂದೇ ಗುರುವೆಂದು ಭಾವಿಸಬೇಕು.
ಉದಾಹರಣೆಗೆ:-

—U—U
ಶಾಸ್ತ್ರಕಾಂಕ್ಷೆ

ಮೇಲಿನ ಉದಾಹರಣೆಗಳಲ್ಲಿ ‘ಶಾ’ ಅಕ್ಷರ ಗುರುವಾಗುವುದಕ್ಕೆ ಎರಡು ಕಾರಣಗಳಿವೆ.  ಅದು ದೀರ್ಘವಾದ್ದರಿಂದ ಗುರು, ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದ ಗುರು.  ಕಾ ಎಂಬುದು ಮೂರು ಕಾರಣ ಹೊಂದಿದೆ.  ದೀರ್ಘವಾಗಿರುವುದರಿಂದ ಗುರು; ಅನುಸ್ವಾರವಿರುವುದರಿಂದ ಗುರು; ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದಲೂ ಗುರು.
(vi) ಶರಕುಸುಮಭೋಗಭಾಮಿನೀಪರಿವರ್ಧಿನೀವಾರ್ಧಕಇತ್ಯಾದಿ ಆರು ಜಾತಿಯ ಷಟ್ಪದಿ ಪದ್ಯಗಳಲ್ಲಿ ಬರುವ ಮೂರನೆಯಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೆ ಗುರು ಅಕ್ಷರವೆಂದು ಭಾವಿಸಬೇಕು.

[1] (i) ಗುಬ್ಬಿಯ ಚಿಕ್ ಎನ್ನುವ ಕಾಲವನ್ನು ೧ ಮಾತ್ರಾಕಾಲವೆಂದೂ ಕಾಗೆಯು ಕಾ ಕಾ – ಎಂದು ಕೂಗುವ ಕಾಲವನ್ನು ೨ ಮಾತ್ರಾಕಾಲವೆಂದೂ, ನವಿಲು ಒಂದು ಸಲ ಕೂಗುವ ಕಾಲವನ್ನು ೩ ಮಾತ್ರಾಕಾಲವೆಂದು ಮುಂಗುಲಿಯು ಧ್ವನಿಮಾಡುವ ಕಾಲವನ್ನು ಳಿ ಮಾತ್ರಾಕಾಲವೆಂದೂ ಸ್ಥೂಲವಾಗಿ ತಿಳಿಯುತ್ತಾರೆ ಅಥವಾ ಕೋಳಿಯು ಪ್ರಾತಃಕಾಲದಲ್ಲಿ ಕೂಗುವ –
(ii) ಕೂ ಕೂ ಕೂ –ಎಂಬಲ್ಲಿ ಮೊದಲನೆಯ ಕೂಗು ಏಕಮಾತ್ರಾಕಾಲ, ಎರಡನೆಯದು ದ್ವಿಮಾತ್ರಾಕಾಲ, ಮೂರನೆಯದು ತ್ರಿಮಾತ್ರಾಕಾಲ (ಪ್ಲುತ) ಎಂದು ಸಾಮಾನ್ಯವಾಗಿ ಗ್ರಹಿಸುತ್ತಾರೆ. [2] ಲಘುವಿನ ಚಿಹ್ನೆಯನ್ನು “U” ಹೀಗೂ, ಗುರುವಿನ ಚಿಹ್ನೆಯನ್ನು “-” ಹೀಗೂ ಪ್ರಾಚೀನಕಾಲದಿಂದಲೂ ಗುರುತಿಸುವ ಪದ್ಧತಿಯಿತ್ತು.  ಇತ್ತೀಚೆಗೆ ಅದು ಸ್ವಲ್ಪ ವ್ಯತ್ಯಾಸವಾಗಿ ಗುರುವನ್ನು “-” ಹೀಗೂ ಲಘುವನ್ನು “U” ಹೀಗೂ ಗುರುತಿಸುವುದು ವಾಡಿಕೆಯಲ್ಲಿ ಬಂದಿದೆ.

FAQ :

ಮಾತ್ರೆ ಎಂದರೇನು?

ಅ ಎಂಬ ಅಕ್ಷರವನ್ನು ನಾವು ಎಳೆಯದಂತೆ,  ಮೊಟಕುಗೊಳಿಸದಂತೆ ಉಚ್ಚಾರಮಾಡುವುದಕ್ಕೆ ಬೇಕಾಗುವ ಕಾಲವೇ ಒಂದು ಮಾತ್ರಾಕಾಲ. 

ಲಘು ಎಂದರೇನು?

ಒಂದು ಮಾತ್ರಾ ಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ ಲಘುಗಳೆನಿಸುವುವು.  

ಗುರು ಎಂದರೇನು?

ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳೆನಿಸುವುವು. ಗುರುಗಳಾಗಿರುವ ಅಕ್ಷರಗಳ ಮೇಲೆ ಹೀಗೆ ಗುರುತಿಸುವುದು ವಾಡಿಕೆ.

Lagu Guru Kannada Grammer Book Online Kannada Grammer

Kannada Grammar Books ; Click Here

ಇತರೆ ವಿಷಯಗಳು :

ಕನ್ನಡ ವರ್ಣಮಾಲೆ

Kannada Grammer

ಕನ್ನಡ ಸ್ವರಗಳು

Kannada Grammar Books ; Click Here

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಲಘು ಗುರುಗಳ ಬಗ್ಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಲಘು ಗುರುಗಳ ಬಗ್ಗೆ ಮಾಹಿತಿ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

3 thoughts on “ಲಘು – ಗುರು | Lagu Guru in Kannada Grammer Book Online

Leave a Reply

Your email address will not be published. Required fields are marked *

rtgh