9ನೇ ತರಗತಿ ಸಮಾಜ ವಿಜ್ಞಾನ ಕರ್ನಾಟಕದ ಜಲಸಂಪನ್ಮೂಲಗಳು ನೋಟ್ಸ್, 9th Standard Social Science Karnatakada Jala Sampanmulagalu Notes Question Answer Pdf Download in Kannada Medium Karnataka State Syllabus 2026 ಜಲ ಸಂಪನ್ಮೂಲಗಳು ಪ್ರಶ್ನೋತ್ತರಗಳು jala sampanmula in kannada karnatakada jala sampanmulagalu question answer karnatakada jala sampanmulagalu question answer 9th, 9th class karnataka jala sampanmulagalu Notes Pdf Kseeb Solution For Class 9 Social Science chapter 12 Notes 9th class social science chapter 12 kannada medium 9th class social science 12th lesson notes state Syllabus

ಅಭ್ಯಾಸ
I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.
- ಕಾವೇರಿ ನದಿಯು ಕೊಡಗು ಜಿಲ್ಲೆಯ ತಲಕಾವೇರಿ ಎಂಬಲ್ಲಿ ಉಗಮ ಹೊಂದುತ್ತದೆ.
- ಪ್ರಸಿದ್ಧ ಜೋಗ್ ಜಲಪಾತ ಶರಾವತಿ ನದಿಯಿಂದ ಸೃಷ್ಟಿಯಾಗಿದೆ.
- ಕರ್ನಾಟಕದಲ್ಲಿ ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ ರಾಯಚೂರು.
- ಕರ್ನಾಟಕದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಶಿವನಸಮುದ್ರ.
- ಆಲಮಟ್ಟಿ ಅಣೆಕಟ್ಟೆಯನ್ನು ಕೃಷ್ಣಾ ನದಿಗೆ ನಿರ್ಮಿಸಲಾಗಿದೆ.
II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.
6. ಕರ್ನಾಟಕದ ಪ್ರಮುಖ ನದಿಗಳನ್ನು ಹೆಸರಿಸಿ.
ಕರ್ನಾಟಕದ ಪ್ರಮುಖ ನದಿಗಳು:
- ಕೃಷ್ಣಾ
- ಕಾವೇರಿ
- ಪೆನ್ನಾರ್
- ಪಾಲಾರ್
- ಶರಾವತಿ
- ಕಾಳಿ
- ಗಂಗಾವಳಿ (ಬೇಡ್ತಿ)
- ನೇತ್ರಾವತಿ
- ವಾರಾಹಿ
- ಅಘನಾಶಿನಿ
- ತುಂಗಭದ್ರಾ
- ಘಟಪ್ರಭಾ
- ಮಲಪ್ರಭಾ
7. ಕೃಷ್ಣಾ ನದಿಯನ್ನು ಕುರಿತು ಟಿಪ್ಪಣಿ ಬರೆಯಿರಿ.
ಕೃಷ್ಣಾ ನದಿಯು ದಕ್ಷಿಣ ಭಾರತದ ಎರಡನೇ ಪ್ರಮುಖ ನದಿಯಾಗಿದೆ. ಇದು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮಿಸಿ, ಸುಮಾರು 1,392 ಕಿ.ಮೀ. ದೂರ ಪೂರ್ವದ ಕಡೆಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ಸುಮಾರು 480 ಕಿ.ಮೀ. ಹರಿಯುತ್ತದೆ. ಭೀಮಾ, ಕೋಯ್ನಾ, ತುಂಗಭದ್ರಾ, ಘಟಪ್ರಭಾ ಮತ್ತು ಮಲಪ್ರಭಾ ಇದರ ಉಪನದಿಗಳಾಗಿವೆ. ಉತ್ತರ ಕರ್ನಾಟಕದಲ್ಲಿ ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಗೆ ಈ ನದಿ ಸಹಾಯಕವಾಗಿದೆ.
8. ಕಾವೇರಿ ನದಿಯ ಉಪನದಿಗಳಾವುವು?
ಕಾವೇರಿ ನದಿಯ ಪ್ರಮುಖ ಉಪನದಿಗಳು:
- ಹೇಮಾವತಿ
- ಹಾರಂಗಿ
- ಲೋಕಪಾವನಿ
- ಅರ್ಕಾವತಿ
- ಶಿಂಷಾ
- ಲಕ್ಷ್ಮಣತೀರ್ಥ
- ಕಪಿಲೆ
- ಸುವರ್ಣಾವತಿ
- ಭವಾನಿ
9. ಕರ್ನಾಟಕದ ನೀರಾವರಿಯ ಮೂಲಗಳನ್ನು ತಿಳಿಸಿ.
ಕರ್ನಾಟಕದ ಪ್ರಮುಖ ನೀರಾವರಿ ಮೂಲಗಳು:
- ಕೊಳವೆ ಬಾವಿಗಳು
- ಕಾಲುವೆಗಳು
- ಬಾವಿಗಳು
- ಕೆರೆಗಳು
- ಇತರ ನೀರಾವರಿ ಮೂಲಗಳು
ಕೃಷಿಗೆ ನೀರು ಒದಗಿಸಲು ನದಿಗಳಿಂದ ಕಾಲುವೆಗಳನ್ನು ನಿರ್ಮಿಸುವುದು ಮತ್ತು ಕೆರೆಗಳ ನೀರನ್ನು ಬಳಸುವುದು ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ.
10. ನಮ್ಮ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೆಸರಿಸಿ.
ಕರ್ನಾಟಕದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳು:
- ಶಿವನಸಮುದ್ರ
- ಶಿಂಷಾ
- ಶರಾವತಿ
- ಲಿಂಗನಮಕ್ಕಿ
- ಮಹಾತ್ಮ ಗಾಂಧಿ
- ಗೇರುಸೊಪ್ಪ
- ಸೂಪಾ
- ನಾಗರಝರಿ
- ಕದ್ರಾ
- ಕೊಡಸಳ್ಳಿ
- ವಾರಾಹಿ
- ಮಾರಿಕಣಿವೆ
- ಭದ್ರಾ
- ತುಂಗಭದ್ರಾ
- ಘಟಪ್ರಭಾ
- ಆಲಮಟ್ಟಿ
III. ಹೊಂದಿಸಿ ಬರೆಯಿರಿ.
| ಅ | ಆ |
|---|---|
| i. ಲಿಂಗನಮಕ್ಕಿ ಅಣೆಕಟ್ಟು | E) ಶರಾವತಿ ನದಿ |
| ii. ಗಗನಚುಕ್ಕಿ, ಭರಚುಕ್ಕಿ ಜಲಪಾತ | D) ಕಾವೇರಿ ನದಿ |
| iii. ವಾಣಿವಿಲಾಸ ಸಾಗರ | F) ಮಾರಿಕಣಿವೆ |
| iv. ಗೋಕಾಕ್ ಜಲಪಾತ | A) ಘಟಪ್ರಭಾ ನದಿ |
| v. ಮಾಘೋಡು ಜಲಪಾತ | B) ಬೇಡ್ತಿ ನದಿ |
ಇತರೆ ವಿಷಯಗಳು:
9th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.