7ನೇ ತರಗತಿ ಹಿಲ್ಟನ್ ಹೆಡ್ ಚಳುವಳಿ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 7th Standard Hilton Head Chaluvali Kannada Notes Question Answer Summary Mcq Pdf Download in Kannada Medium Karnataka 2024, Kseeb Solutions For Class 7 Kannada Chapter 3 Hilton Head Chaluvali Notes 7th Class Kannada 3rd Lesson Notes Pdf Hilton Head Chaluvali Lesson in Kannada Hilton Head Chaluvali 7th Class Notes 7th Std Kannada 3rd Chapter Notes
7th Hilton Head Chaluvali Kannada Notes
7ನೇ ತರಗತಿ ಹಿಲ್ಟನ್ ಹೆಡ್ ಚಳುವಳಿ ಕನ್ನಡ ನೋಟ್ಸ್, 7th Standard Hilton Head Chaluvali Kannada Notes Question Answer Mcq, Kseeb Solution For Class 7 Kannada Chapter
7th Class Hilton Head Chaluvali Kannada Notes
ತರಗತಿ : 7ನೇ ತರಗತಿ
ವಿಷಯ : ಕನ್ನಡ
ಪಾಠದ ಹೆಸರು : ಹಿಲ್ಟನ್ ಹೆಡ್ ಚಳುವಳಿ
ಕೃತಿಕಾರರ ಹೆಸರು : ಶಶಿಧರ ವಿಶ್ವಾಮಿತ್ರ
ಕೃತಿಕಾರರ ಪರಿಚಯ
ಶಶಿಧರ ವಿಶ್ವಾಮಿತ್ರ ೧೯೪೦ ರಲ್ಲಿ ಮೈಸೂರಿನಲ್ಲಿ ಹುಟ್ಟಿದರು . ಸೆಂಟ್ರಲ್ ಕಾಲೇಜಿನಲ್ಲಿ ಪದವೀಧರರಾದ ಮೇಲೆ ಭಾರತ ಸರಕಾರದ ರಾಷ್ಟ್ರೀಯ ಕ್ಷಯರೋಗ ಸಂಸ್ಥೆಯಲ್ಲಿ ಸಂಶೋಧಕರಾಗಿ ವೃತ್ತಿಜೀವನ ಪ್ರಾರಂಭಿಸಿದರು . ಕ್ಷಯರೋಗಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳಲ್ಲಿ , ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ . ಖಿಲ , ಪದ ಕುಸಿಯೆ ನೆಲವಿಹುದೆ , ಹಿಂದೂ ಧರ್ಮ , ಸೃಷ್ಟಿಯ ರಂಗವಲ್ಲಿ – ಮುಂತಾದವು ಇವರ ಕೆಲವು ಪ್ರಕಟಿತ ಕೃತಿಗಳು , ಸಂಚಿ ಎಂಬ ಆತ್ಮಕತೆಯನ್ನು ಬರೆದಿದ್ದಾರೆ .
7ನೇ ತರಗತಿ ಹಿಲ್ಟನ್ ಹೆಡ್ ಚಳುವಳಿ ಕನ್ನಡ ನೋಟ್ಸ್
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1. ಹಿಲ್ಟನ್ ಹೆಡ್ ದ್ವೀಪ ಯಾವ ಸಾಗರದಲ್ಲಿದೆ?
ಹಿಲ್ಟನ್ ಹೆಡ್ ದ್ವೀಪ ಅಟ್ಲಾಂಟಿಕ್ ಸಾಗರದಲ್ಲಿದೆ.
2. ಅಮೆರಿಕಾದಲ್ಲಿ ವಾಸವಾಗಿದ್ದ ಮೂಲ ನಿವಾಸಿಗಳನ್ನು ಏನೆನ್ನುತ್ತಾರೆ?
ಅಮೆರಿಕಾದಲ್ಲಿ ವಾಸವಾಗಿದ್ದ ಮೂಲ ನಿವಾಸಿಗಳಿಗೆ ಅಮೆರಿಂಡಿಯನ್ನರು ಎನ್ನುವರು.
3. ಹಿಲ್ಟನ್ ಹೆಡ್ ನಲ್ಲಿ ಬಂದಿಳಿಯುವ ಶ್ರೀಮಂತರ ಉಡುಗೆ ತೊಡುಗೆ ಹೇಗಿತ್ತು?
ಹೆಲ್ಟನ್ ಹೆಡ್ ನಲ್ಲಿ ಬಂದಿಳಿಯುವ ಶ್ರೀಮಂತರು ಬೂಟು ಚಡ್ಡಿ ಟೀಶರ್ಟು ಕೂಲಿಂಗ್ ಗ್ಲಾಸ್ ಸ್ಕಲ್ ಕ್ಯಾಪ್ ಹಾಕಿಕೊಳ್ಳುತ್ತಿದ್ದರು.
4. ಹಿಲ್ಟನ್ ಹೆಡ್ ದ್ವೀಪದಲ್ಲಿ ಏನೇನು ಕ್ರೀಡೆಗಳನ್ನು ಆಯೋಜಿಸಲಾಗುತ್ತಿತ್ತು?
ಹಿಲ್ಟನ್ ಹೆಡ್ ದ್ವೀಪದಲ್ಲಿ ಬೋಟಿಂಗ್ ಹಾಗೂ ವಿವಿಧ ರೀತಿಯ ಕ್ರೀಡಾ ವಿನೋದಗಳನ್ನು ಆಯೋಜಿಸಲಾಗುತ್ತಿತ್ತು.
5. ಕಡಲತಡಿಯ ಲೈಟ್ ಹೌಸನ್ನೇರಿದರೆ ಯಾವ ಚಿತ್ರಣವು ಕಾಣ ಸಿಗುತ್ತದೆ?
ಕಡಲತಡಿಯ ಲೈಟ್ ಹೌಸನ್ನೇರಿದರೆ ಅಟ್ಲಾಂಟಿಕ್ ಮಹಾಸಾಗರ ಸಮುದ್ರದಲ್ಲೋಡಾಡುತ್ತಿದ್ದ ನೌಕೆಗಳು ಕಡಲ ಕಾಗೆಗಳು ನಮ್ಮ ಬಡ್ಡೆಗೇ ಬಂದಿಳಿಯುವ ರೇವನ್ ಮೈನಾಗಳು ಕಾಣಸಿಗುತ್ತವೆ.
6. ಹಿಲ್ಟನ್ ಹೆಡ್ ನಲ್ಲಿರುವ ಸ್ಮಾರಕ ಯಾವುದು?
ಹಿಲ್ಟನ್ ಹೆಡ್ ನಲ್ಲಿರುವ ಸ್ಮಾರಕ ಲಿಬರ್ಟಿ ಓಕ್ ಮರದ್ದಾಗಿದೆ.
ಬ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಯುರೋಪಿಯನ್ನರು ಬಂದ ಮೇಲೆ ಏನೇನು ಬದಲಾವಣೆಗಳಾದವು?
ಹಿಲ್ಟನ್ ಹೆಡ್ ನಲ್ಲಿ ಯುರೋಪಿಯನ್ನರು ಬಂದಮೇಲೆ ಪ್ರಾಕೃತಿಕ ಸೌಂದರ್ಯ ಅಳಿಸಿ ಹೋಯಿತು. ಆ ಸ್ಥಳದಲ್ಲಿ ಸೀ ಬೀಚ್ ಹೋಟೆಲ್ ಗಳು, ಸ್ಟೇ ಹೋಂ ಗಳು ಗಾಲ್ಫ ಕೋರ್ಸುಗಳು ಮತ್ತು ಲಕ್ಸುರಿ ಹೋಟೆಲ್ ಗಳು ತಲೆಯೆತ್ತಿದ್ದವು.
2. ಹಿಲ್ಟನ್ ಹೆಡ್ ಮೊದಲು ಹೇಗಿತ್ತು?
ಹಿಲ್ಟನ್ ಹೆಡ್ ಮೊದಲು ಒಂದು ಸುಂದರ ದ್ವೀಪವಾಗಿತ್ತು. ಅಲ್ಲಿ ಪುರಾತನ ಸಸ್ಯ ಸಂಪತ್ತು ಹಳೆಯ ಕಾಲದ ಹೊಂಡಗಳು ಹಿನ್ನೀರಿನ ಕೋವುಗಳು ಕಡಲ ತೀರದ ಸಸ್ಯಗಳು ಮತ್ತು ಕಾಡಿನ ಮರಗಳು ಇದ್ದವು.
3. ಹಿಲ್ಟನ್ ಹೆಡ್ ಡ್ಯಾಮ್ ಸ್ಮಾರಕ ಮರದ ಬಗ್ಗೆ ವಿವರಿಸಿ.
ಅದು ಲಿಬರ್ಟಿ ಓಕ್ ಮರ. ಐವತ್ತರ ದಶಕದಲ್ಲಿ ಪರಿಸರ ರಕ್ಷಣೆಗಾಗಿ ಜನ ಒಗ್ಗೂಡಿ ಪಣತೊಟ್ಟಿದ್ದು ಈ ಮರದಲ್ಲಿಯೇ ಇದು ಸಂರಕ್ಷಿತ ಜಾಗ ದಯವಿಟ್ಟು ಕಟ-ಕಟೆಯ ಒಳಗೆ ಪ್ರವೇಶ ಬೇಡಿ ಎನ್ನುವ ಫಲಕವನ್ನು ನೆಟ್ಟಿದ್ದರು. ನಂತರ ಈ ಮರದ ಸಾನಿಧ್ಯ ಎಷ್ಟು ಪ್ರಸಿದ್ದವಾಯಿತು ಎಂದರೆ ಎಷ್ಟೋ ವಿವಾಹಗಳಾಗಿವೆ ಎಂದು ಲೇಖಕರು ಹೇಳುತ್ತಾರೆ.
4. ಹಿಲ್ಟನ್ ಹೆಡ್ ದ್ವೀಪದಲ್ಲಿ ಏನೇನು ಕಟ್ಟಡಗಳು ನಿರ್ಮಾಣಗೊಂಡವು?
ಹಿಲ್ಟನ್ ಹೆಡ್ ದ್ವೀಪದಲ್ಲಿ ಸೀ ಬೀಚ್ ಹೋಟೆಲ್ ಗಳು , ಸ್ಟೇ ಹೋಂಗಳು, ಗಾಲ್ಫ್ ಕೋರ್ಸ್ ಗಳು, ರೆಸಾರ್ಟುಗಳು ಹೀಗೆ ಹಲವಾರು ಕಟ್ಟಡಗಳು ನಿರ್ಮಾಣಗೊಂಡವು. ಈ ಕಟ್ಟಡಗಳ ಜೊತೆಗೆ ರಸ್ತೆಗಳು ಸೇತುವೆಗಳು ಕೂಡ ನಿರ್ಮಾಣಗೊಂಡವು.
5. ಹಿಲ್ಟನ್ ಹೆಡ್ ನಲ್ಲಿ ಪರಿಸರ ಹೋರಾಟ ಹೇಗೆ ಪ್ರಾರಂಭವಾಯಿತು?
ಪುರಾತನ ಸಸ್ಯಗಳು ಹಳೆಯ ಕಾಲದ ಹೊಂಡಗಳು ಹಿನ್ನೀರಿನ ಕೋವುಗಳೂ ಕಡಲ ತೀರದ ಸಸ್ಯಗಳು ಮತ್ತು ಕಾಡಿನ ಮರಗಳನ್ನು ಕಡಿದು ರೆಸಾರ್ಟ್ ಹೋಟೆಲ್ ಇತ್ಯಾದಿ ಮಾಡುವುದನ್ನು ಪರಿಸರ ಅಭಿಮಾನಿಗಳು ವಿರೋಧಿಸಿ ಚಳುವಳಿ ಆರಂಭಿಸಿದರು. ದುಡ್ಡು ಮತ್ತು ದೌಲತ್ತುಗಳಿಂದ ಪರ್ಯಾವರಣದ ಚಳುವಳಿಗೆ ಮೊದಲು ನೆಲದಲ್ಲಾಳಿ ಹಾಗೂ ಅಭಿಯಂತರರು ಆಸಕ್ತಿ ತೋರಿ ತಾವು ಈ ಚಳುವಳಿಯಲ್ಲಿ ಸೇರಿಕೊಂಡರು. ಚಳುವಳಿ ಕೊನೆಗೆ ಯಶಸ್ವಿಯಾಯಿತು.
ಇ. ಬಿಟ್ಟಸ್ಥಳ ತುಂಬಿರಿ.
1. ಯುರೋಪಿಯನ್ನರ ಅಗಮನವಾದ ಮೇಲೆ ಅಮೆರಿಂಡಿಯನ್ನರ ಸಮುದಾಯವು ಧೂಳಿಪಟ ಆಯಿತು.
(ಅಭಿವೃದ್ಧಿ, ಶಿಕ್ಷಿತ,ಧೂಳಿಪಟ)
2. ಅಟ್ಲಾಂಟಿಕ್ ಸಾಗರವು ಅಮೆರಿಕದ ಪೂರ್ವ ಭಾಗದಲ್ಲಿದೆ.
( ಪೂರ್ವ, ಉತ್ತರ, ಪಶ್ಚಿಮ)
3. ವಿಧಿಯಿಲ್ಲದೆ ಕೊನೆಗೆ ನ್ಯಾಯಲಯದ ಮೊರೆ ಹೋಗಬೇಕಾಯಿತು.
( ಧನಿಕರ, ಅಮೆರಿಕಾಧ್ಯಕ್ಷರ, ನ್ಯಾಯಾಲಯದ)
4. ಕಟ್ಟಡಗಳಿಗೆ ತೋರುತ್ತಿದ್ದ ಅಭಿಯಂತರ ಶ್ರದ್ದೆಯನ್ನೇ ಜನ ಪರಿಸರಕ್ಕೂ ನೀಡತೊಡಗಿದರು.
( ಪಾರಂಪರಿಕ , ಅಭಿಯಂತರ, ರಾಜಕೀಯ)
5. ದ್ವೀಪದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮೊದಲು ಎಲ್ಲರೂ ಸೇರಿ ಮಂತ್ರಾಲೋಚನೆ ನಡೆಸಿದರು.
(ಮಂತ್ರಾಲೋಚನೆ, ಜಾಥಾ, ಪ್ರತಿಭಟನೆ)
6. ಹೋರಾಟ ಮುಂದುವರಿದ ಬಳಿಕ ಹಿಲ್ಟನ್ ಹೆಡ್ ನಂದನವನದಂತೆ ಕಂಗೊಳಿಸತೊಡಗಿತು.
( ರಾಜಧಾನಿಯಂತೆ, ನಂದನವನದಂತೆ, ಅಭಯಾರಣ್ಯದಂತೆ)
ಈ. ಕೆಳಗಿನ ಶಬ್ದಗಳಿಗೆ ವಿರುದ್ಧಾರ್ಥಕ ಶಬ್ದಗಳನ್ನು ಬರೆಯಿರಿ.
ಮಾದರಿ : ಆಗಮನ X ನಿರ್ಗಮನ
- ಲಾಭ X ಹಾನಿ
- ಚುರುಕು X ಮಂದ
- ಪುರಾತನ X ನವೀನ
- ಪ್ರಸಿದ್ದ X ಸಾಮಾನ್ಯ
- ಸಾಧಾರಣ X ಶ್ರೇಷ್ಠ
ಉ. ಈ ಕೆಳಗಿನ ಪದಗಳನ್ನು ಬಳಸಿಕೊಂಡು ವಾಕ್ಯಗಳನ್ನು ರಚಿಸಿರಿ.
1.ಭರಾಟೆ: ಈಗ ಎಲ್ಲ ಕಡೆ ಹಣದುಬ್ವರದ ಭರಾಟೆ ನಡೆದಿದೆ.
2.ಸುಧಾರಣೆ: ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡಬೇಕೆಂದು ಜನ ಬಯಸುತ್ತಾರೆ.
3. ಸಾರ್ವಭೌಮ : ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು.
4. ದೌಲತ್ತು: ಶ್ರೀಮಂತರು ದೌಲತ್ತು ತೋರಿಸದೆ ಬಡವರಿಗೆ ನೆರವಾಗಬೇಕು.
5. ಹೊಯ್ದಾಟ: ರಮೇಶನಿಗೆ ಸರಿಯಾದ ಉತ್ತರ ತಿಳಿಯದೆ ಮನಸ್ಸಿನಲ್ಲಿ ಬಹಳ ಹೊಯ್ದಾಟವಾಯಿತು.
6. ಪಣತೊಡು: ದುರ್ಯೋಧನನು ಪಾಂಡವರನ್ನು ಸೋಲಿಸಲು ಪಣತೊಡುವುದಾಗಿ ಹೇಳಿದನು.
7. ಅಭಿಮಾನಿ: ಸ್ವಾಮೀಜಿಗಳಿಗೆ ಬಹಳ ಜನ ಅಭಿಮಾನಿಗಳಿದ್ದಾರೆ.
FAQ :
ಹಿಲ್ಟನ್ ಹೆಡ್ ದ್ವೀಪದಲ್ಲಿ ಬೋಟಿಂಗ್ ಹಾಗೂ ವಿವಿಧ ರೀತಿಯ ಕ್ರೀಡಾ ವಿನೋದಗಳನ್ನು ಆಯೋಜಿಸಲಾಗುತ್ತಿತ್ತು.
ಕಡಲತಡಿಯ ಲೈಟ್ ಹೌಸನ್ನೇರಿದರೆ ಅಟ್ಲಾಂಟಿಕ್ ಮಹಾಸಾಗರ ಸಮುದ್ರದಲ್ಲೋಡಾಡುತ್ತಿದ್ದ ನೌಕೆಗಳು ಕಡಲ ಕಾಗೆಗಳು ನಮ್ಮ ಬಡ್ಡೆಗೇ ಬಂದಿಳಿಯುವ ರೇವನ್ ಮೈನಾಗಳು ಕಾಣಸಿಗುತ್ತವೆ.
ಹಿಲ್ಟನ್ ಹೆಡ್ ಮೊದಲು ಒಂದು ಸುಂದರ ದ್ವೀಪವಾಗಿತ್ತು. ಅಲ್ಲಿ ಪುರಾತನ ಸಸ್ಯ ಸಂಪತ್ತು ಹಳೆಯ ಕಾಲದ ಹೊಂಡಗಳು ಹಿನ್ನೀರಿನ ಕೋವುಗಳು ಕಡಲ ತೀರದ ಸಸ್ಯಗಳು ಮತ್ತು ಕಾಡಿನ ಮರಗಳು ಇದ್ದವು.
ಇತರೆ ವಿಷಯಗಳು :
7th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Beautiful 👌👍it helps 😊
I am very nice to write notes in home