7th Seena Settaru Namma Teacher Questions and Answers Notes । 7ನೇ ತರಗತಿ ಸೀನ ಸೆಟ್ಟರು ನಮ್ಮ ಟೀಚರು ಪಾಠದ ನೋಟ್ಸ್

7ನೇ ತರಗತಿ ಸೀನ ಸೆಟ್ಟರು ನಮ್ಮ ಟೀಚರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 7th Standard Seena Settaru Namma Teacher Kannada Notes Question Answer Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Chapter 2 Notes 7th Class Kannada 2nd Lesson Notes Pdf Sina Settaru Namma Teacher Lesson Notes Class 7 Kannada Chapter 2 Question Answer Seena Settaru Namma Teacher Kannada Notes Pdf

7th Standard Kannada 2nd Lesson Question Answers

 ಶಬ್ಧಾರ್ಥ : 

  • ಟೀಚರು = ಉಪಾಧ್ಯಾಯರು
  • ಆದೇಶ 
  • ಬೇಸಾಯ = ವ್ಯವಸಾಯ 
  • ರೂಮು = ಕೊಠಡಿ 
  • ಒಕ್ಕೊರಲಿನಿಂದ ‘ = ಒಂದೇ ಅಭಿಪ್ರಾಯದಿಂದ
  • ಒತ್ತಾಯಪೂರ್ವಕವಾಗಿ = ಬಲವಂತದಿಂದ 
  • ಇಡಿಯಾದ = ಸಂಪೂರ್ಣವಾದ
  • ಉತ್ತೇಜನ = ಪ್ರೋತ್ಸಾಹ .
  • ಪರಿವರ್ತಿತ =ಬದಲಾವಣೆ

ಅಭ್ಯಾಸ ಪ್ರಶ್ನೆಗಳು

 ಅ . ಕೆಳಗಿನ ಪ್ರಶ್ನೆಗಆಗಿ ಒಂದು ವಾಕ್ಯದಲ್ಲಿ ಉತ್ತರಿಸಿ : 

1. ಮಾಂಡವಿ ಯಾರನ್ನು ಪರಿಚಯಿಸಿದರು ?

ಉತ್ತರ : ಮಾಂಡವಿ ಸೀನಸೆಟ್ಟರನ್ನು ಪರಿಚಯಿಸಿದಳು .  

2. ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು ?

ಉತ್ತರ : ಸೀನಸೆಟ್ಟರು ತಮ್ಮ ಜಮೀನಿನಲ್ಲಿ ಸಾಸಿವೆಯನ್ನು ಬೆಳೆಯುತ್ತಿದ್ದ ಒಬ್ಬರೇ ರೈತರಾಗಿದ್ದರು . 

3. ಮಕ್ಕಳು ಏನನ್ನು ಹಾಕಿಕೊಂಡು ಗದ್ದೆಗೆ ಇಳಿದರು ? 

ಉತ್ತರ :ಮಕ್ಕಳು ಕಂಬಳಿಗೊಪ್ಪೆಯನ್ನು  ಹಾಕಿಕೊಂಡು ಗದ್ದೆಗೆ ಇಳಿದರು . 

4. ಹಾಲಪ್ಪನ ಕಾಲನ್ನು ಏನು ಕಚ್ಚಿತು ? 

ಉತ್ತರ : ಹಾಲಪ್ಪನ ಕಾಲನ್ನು ಒಂದು ನೀರಾವು ಕಚ್ಚಿತು

5. ಮನೆಯ ಅಟ್ಟ ಮಕ್ಕಳಿಗೆ ಯಾವ ಟವರ್‌ ಆಗಿ – ಪರಿವರ್ತಿತಗೊಂಡಿತ್ತು ? – 

ಉತ್ತರ : ಮನೆಯ ಅಟ್ಟ ಮಕ್ಕಳಿಗೆ ಗದ್ದೆ ವೀಕ್ಷಣೆಯ ಟವರ್‌ ಆಗಿ ಪರಿವರ್ತಿತಗೊಂಡಿತ್ತು . 

Seena Settaru Namma Teacher Questions and Answers

ಆ , ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ . 

1. ಸೀನಸೆಟ್ಟರ ವೇಷ ಹೇಗಿತ್ತು ?

ಉತ್ತರ : ಸೀನಸೆಟ್ಟರು ಹಳೆಯದಾದ ಪಂಚೆಯೊಂದನ್ನು ಸೊಂಟಕ್ಕೆ ಸುತ್ತಿ ಮೇಲಕ್ಕೆತ್ತಿ ಕಟ್ಟಿದ್ದರು . ಚೌಕುಳಿ ಚೌಕುಳಿಯ ಅಂಗಿ ಹೆಗಲ ಮೇಲೆ ಟವಲೊಂದನ್ನು ಹೊದ್ದಿದ್ದರು . ಇನ್ನೊಂದು ಹಳೆಯ ಟವಲಿನಿಂದ ತಲೆಗೆ ಲಪ್ಪಟೆ ಸುತ್ತಿಕೊಂಡಿದ್ದರು . ಅವರ ವೇಷ ಟೀಚರ್‌ರಂತೆ ಇರದೆ , ರೈತನಂತಿತ್ತು . ಕೆಲಸವೂ ಇಲ್ಲ , ಅತ್ತು ಕುಲಕಸುಬುಗಳೂ ಇಲ್ಲದೆ ಎಡಬಿಡಂಗಿಗಳಂತೆ ಆಗುತ್ತಿದ್ದರು

2. ದೊಡ್ಡ ತರಗತಿಗಳಿಗೆ ಹೋದಂತೆ ಮಕ್ಕಳು ಏನಾಗುತ್ತಾರೆಂದು ಮಾಂಡವಿಗೆ ಅನಿಸಿತ್ತು? 

ಉತ್ತರ : ದೊಡ್ಡ ತರಗತಿಗಳಿಗೆ ಹೋದಂತೆ ಕ್ರಮೇಣ ಮಕ್ಕಳು ಶಾಲಾ  ಶಿಕ್ಷಣಕ್ಕೂ ತಮ್ಮ ಮಣ್ಣಿನ ಬದುಕಿಗೂ ಏನೇನೂ ಸಂಬಂಧವಿಲ್ಲದವರಂತೆ  ವರ್ತಿಸುತ್ತಿದ್ದರು . ಹೀಗಾಗಿ ಇತ್ತ ಕೆಲಸವೂ ಇಲ್ಲ ಅತ್ತ ಕುಲಕಸುಬುಗಳೂ ಇಲ್ಲದೆ ಎಡಬಿಡಂಗಿಗಳಂತೆ ಆಗುತ್ತಿದ್ದರು.

3. ಮಕ್ಕಳು ಸಸಿ ಕಿತ್ತ ಬಗೆ ಹೇಗಿತ್ತು ? 

ಉತ್ತರ : ಮೊದ ಮೊದಲು ಮಕ್ಕಳಿಗೆ ಹಿಡಿ ತುಂಬಾ ಸಸಿಗಳನ್ನು ಬುಡ  ಸಮೇತ ಕೀಳುವುದು ಸಾಧ್ಯವಾಗಲಿಲ್ಲ . ಅನೇಕ ಸಸಿಗಳು ಹಾಳಾಯಿತು . ಹತ್ತಾರು ಬಾರಿ ಕಿತ್ತು ಕಿತ್ತು ಪ್ರಯತ್ನಿಸಿದಾಗ ಕೀಳುವುದು ಸಲೀಸಾಯಿತು. ಹಾಗೆಯೇ ಅವರ ಕೆಲಸದ ವೇಗವೂ ಹೆಚ್ಚಾಯಿತು

4. ಹಾಲಪ್ಪನಿಗೆ ಹಾವು ಕಚ್ಚಿದಾಗ ಸೀನಸೆಟ್ಟರು ಏನು ಹೇಳಿದರು ? 

ಉತ್ತರ : ಹಾಲಪ್ಪನಿಗೆ ಹಾವು ಕಚ್ಚಿದಾಗ ಗಾಬರಿಯಾಯಿತು. ಆಗ  ಸೀನಸೆಟ್ಟು ಹದರಬೇಡ , ಏನೂ ಆಗವುದಿಲ್ಲ , ಅದು ಹಾವಲ್ಲ ನೀರಾವು , ವಿಪವಿರುವುದಿಲ್ಲ . ಒಂದು ಮೀನು ಕಚ್ಚಿದ ಹಾಗೆ  ಆಗುತ್ತದೆ ಎಂದು ಸಮಾಧಾನ ಹೇಳಿದರು .

ಇ ,ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿ 

1.‘ ಹಂಗಾರೆ ಸೀನಸೆಟ್ಟು ನಮ್ಮ ಟೀಚರು ‘

ಉತ್ತರ : ಈ ಮಾತುಗಳನ್ನು ತುಂಗಾ ತನ್ನ ಉಪಾಧ್ಯಾಯಿನಿ ಹಾಗೂ ವಿದ್ಯಾರ್ಥಿಗಳ ಮುಂದೆ ಹೇಳಿದಳು .

2. ‘ ಮುಂಚೆ ಸಸಿಗಳನ್ನು ಕೀಳಾಣ ‘ .

ಉತ್ತರ : ಈ ಮಾತನ್ನು ಸೀನಸೆಟ್ಟರು ಮಕ್ಕಳನ್ನು ಉದ್ದೇಶಿಸಿ

3. “ ಇವತ್ತು ಪೂರಾ ಕಿತ್ತೇ ಹೋಗಾಣ ‘ . 

ಈ ಮಾತನ್ನು ಮಕ್ಕಳೆಲ್ಲರೂ ಒಕ್ಕೊರಲಿನಿಂದ ಸೀನಸೆಟ್ಟರಿಗೆ ಹೇಳಿದರು . 

4 .‘ ಕೈ ಎಲ್ಲಿಗ್ ಹೋತು  

ಉತ್ತರ : ಈ ಮಾತನ್ನು ಯಶೋಧ ಮಕ್ಕಳೆಲ್ಲರಿಗೂ ಆಟ ಆಡಿಸುವಾಗ , ಕೇಳಿದ ಮಾತು . 

ಈ ಕೆಳಗೆ ನೀಡಿರುವ ಪದಗಳಲ್ಲಿ ಬೇಸಾಯಕ್ಕೆ ಸಂಬಂಧಿಸಿದ ಪದಗಳನ್ನು ಮತ್ತು ಶಾಲೆಗೆ ಸಂಬಂಧಿಸಿದ ಪದಗಳನ್ನು ಪ್ರತ್ಯೇಕ ಪಟ್ಟಿಮಾಡಿ ಬರೆಯಿರಿ :

ಗದ್ಯೆ , ಬೆಂಚು , ಸಸಿ , ಕಪ್ಪು ಹಲಗೆ , ನಾಟಿ , ಪೈರು , ಪುಸ್ತಕ , ಪೆನ್ನು , 

ಜಮೀನು , ಮೇಷ್ಟ್ರು , ರೈತ , ಕೆಸರು , ಗಂಟೆ , ತೆನೆ , ಗೊಬ್ಬರ , ಸೀಮೆಸುಣ್ಯ , ಮನೆಕೆಲಸ . 

ಬೇಸಾಯಕ್ಕೆ ಸಂಬಂಧಪಟ್ಟ ಪದಗಳು 

ಗದ್ದೆ ಸಸಿ ನಾಟಿ , ಪೈರು , ಜಮೀನು , ರೈತ , ಕೆಸರು , ತೆನೆ , ಗೊಬ್ಬರ ,

ಶಾಲೆಗೆ ಸಂಬಂಧಪಟ್ಟ ಪದಗಳು

ಬೆಂಚು , ಕಪ್ಪು ಹಲಗೆ , ಪುಸ್ತಕ , ಪೆನ್ನು ಮೇಷ್ಟ್ರು , ಗಂಟೆ , ಸೀಮೆಸುಣ್ಣ , ಮನೆಕೆಲಸ , 

ಅ . ಕೆಳಗೆ ನೀಡಿರುವ ಬಂಡಿ ಆಟದಲ್ಲಿ ಬಿಟ್ಟ ಪದಗಳನ್ನು ತುಂಬಿರಿ

ಅಚ್ಚಚ್ಚು , ಬೆಲ್ಲದಚ್ಚು , ಅಲ್ಲಿನೋಡು ,  ಇಲ್ಲಿನೋಡು , ಸಂಪಂಗಿ ಮರದಲಿ  ಗುಂಪುನೋಡು ,  ಯಾವ ಗುಂಪು ? ಕಾಗೆ ಗುಂಪು ಯಾವ ಕಾಗೆ ?  ಕಪ್ಪು ಕಾಗೆ ,  ಯಾವ ಕಪ್ಪು ? ಇದ್ದಿಲು ಕಪ್ಪು , ಯಾವ ಇದೀಲು ? ಮರದ ಇದೀಲು. ಯಾವ ಮರ ?  ಮಾವಿನ ಮರ ,  ಯಾವ ಮಾವು ?  ಸಿಹಿ ಮಾವು .  ಯಾವ ಸಹಿ ? ಸಕ್ಕರೆ ಸಿಹಿ . ಯಾವ ಸಕ್ಕರೆ ? ಮಂಡ್ಯ ಸಕ್ಕರೆ ಯಾವ ಮಂಡ್ಯ , ಕರ್ನಾಟಕದ ಮಂಡ್ಯ ಯಾವ ಕರ್ನಾಟಕ ನಮ್ಮ ವಿಶಾಲ ಕರ್ನಾಟಕ . 

ಆ , ಕೆಳಗಿನ ವಾಕ್ಯಗಳಲ್ಲಿ ಸಂಧಿಯಾಗಿರುವ ಪದಗಳನ್ನು ಗುರುತಿಸಿ ಸಂಧಿಯ ಹೆಸರು ತಿಳಿಸಿ . 

ಉದಾ :  ನೀನೇಕೆ ನಮೊಡನ ಊರಿಗೆ ಬರುವುದಿಲ್ಲ ?

ನೀನೇಕೆ , ನಮ್ಮೊಡನೆ , ಊರಿಗೆ –  ಲೋಪಸಂಧಿ

1. ಹಾಸಿಗೆಯಿದ್ದಷ್ಟು ಕಾಲನ್ನು ಚಾಚು . 

ಉತ್ತರ :  ಹಾಸಿಗೆಯಿದ್ದಷ್ಟು ‘ ಯ ‘ ಕಾರಾಗಮ ಸಂಧಿ ಕಾಲನ್ನು – ಲೋಪಸಂಧಿ

2 . ದೇವನೊಲಿದಾತನೇ ಜಾತ ಸರ್ವಜ್ಞ 

ಉತ್ತರ : ದೇವನೊಲಿದಾತನೆ – ಲೋಪಸಂಧಿ 

3. ಬಾಯಿದ್ದವರು ಬರದಲ್ಲೂ ಬದುಕಿದರು . 

ಉತ್ತರ : ಬಾಯಿದ್ದವರು ಬರದಲೂ – ಲೋಪಸಂಧಿ 

ಹೆಚ್ಚಿನ ಅಭ್ಯಾಸಕ್ಕಾಗಿ 

ಉದಾಹರಣೆಯಲ್ಲಿ ನೀಡಿರುವಂತೆ ಕೆಳಗಿನ ವಾಕ್ಯಗಳಲ್ಲಿ  ಸರ್ವನಾಮಗಳನ್ನು ಗುರುತಿಸಿ ,

ಕ್ರಂ .ಸಂಖ್ಯೆವಾಕ್ಯಗಳುಸರ್ವನಾಮ ಪದಗಳುಸರ್ವನಾಮ ವಿಧ
ಉದಾ ,ಬಂದಾಗ ನಾವು ಯಾರಿಗೂ ಸಹಾಯ ಮಾಡದಿದ್ದರೆ ನಮಗೆ ಯಾರೂ ಸಹಾಯ ಮಾಡಲಾರರುನಾವು , ನಮಗೆಉತ್ತಮ ಪುರುಷ ಸರ್ವನಾಮ
1ನೀನು ಸುಳ್ಳುಗಾರನೆಂದು ಗೊತ್ತಾದ ಮೇಲೆ ನೀನು ನಿಜ ಹೇಳಿದರೂ ನಿನ್ನನ್ನು ಯಾರೂ ನಂಬುವುದಿಲ್ಲನೀನು , ನೀನು ನಿನ್ನನ್ನುಮಾಧ್ಯಮ ಪುರುಷ  ಸರ್ವನಾಮ
2ಅವನಿಗೆ ಅವನ ಅಕ್ಕ ಒಂದು ಪುಸ್ತಕ ಕೊಟ್ಟಳುಅವನಿಗೆ ಅವನಪ್ರಥಮ ಪುರುಷ
3ಅವನು ತನ್ನ ಪುಸ್ತಕವನ್ನು ಬಹಳ ಮೆಚ್ಚಿಕೊಂಡಅವನು ತನ್ನಪ್ರಥಮ ಪುರುಷ ಆತ್ಮಾರ್ಥಕ
4ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕುನಮ್ಮ ,ನಮ್ಮ ,ನಾವೇಉತ್ತಮ ಪುರುಷ ಸರ್ವನಾಮ
5ನಾವು ಊರಿಗೆ ಹೋಗಿ ನಿಮ್ಮ ಸಾಮಾನುಗಳನ್ನೂ ಅವುಗಳನ್ನಿಟ್ಟು ರುವ ಪೆಟ್ಟಿಗೆಗಳನ್ನೂ ತರುತ್ತೇವೆನಾವು, ನಿಮ್ಮಉತ್ತಮ ಪುರುಷ ಮಧ್ಯಮಪುರುಷ  ಸರ್ವನಾಮ

FAQ :

1. ಮಾಂಡವಿ ಯಾರನ್ನು ಪರಿಚಯಿಸಿದರು ?

ಉತ್ತರ : ಮಾಂಡವಿ ಸೀನಸೆಟ್ಟರನ್ನು ಪರಿಚಯಿಸಿದಳು .  

2. ಮಕ್ಕಳು ಏನನ್ನು ಹಾಕಿಕೊಂಡು ಗದ್ದೆಗೆ ಇಳಿದರು ? 

ಉತ್ತರ :ಮಕ್ಕಳು ಕಂಬಳಿಗೊಪ್ಪೆಯನ್ನು  ಹಾಕಿಕೊಂಡು ಗದ್ದೆಗೆ ಇಳಿದರು . 

3. ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು ?

ಉತ್ತರ : ಸೀನಸೆಟ್ಟರು ತಮ್ಮ ಜಮೀನಿನಲ್ಲಿ ಸಾಸಿವೆಯನ್ನು ಬೆಳೆಯುತ್ತಿದ್ದ ಒಬ್ಬರೇ ರೈತರಾಗಿದ್ದರು . 

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh