5ನೇ ತರಗತಿ ಮಗುವಿನ ಮೊರೆ ಪದ್ಯದ ನೋಟ್ಸ್‌ | 5th Standard Kannada Maguvina More Poem Notes

5ನೇ ತರಗತಿ ಕನ್ನಡ ಮಗುವಿನ ಮೊರೆ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು 2024, 5th Standard Kannada Maguvina More Poem Notes Question Answer Summary Mcq Pdf Download in Kannada Medium Karnataka State Syllabus, Kseeb Solutions for Class 5 Kannada Poem 7 Notes 5th Class Kannada 7th Poem Notes Maguvina More Notes Pdf

Maguvina More Question Answer

ತರಗತಿ : 5

ಪದ್ಯದ ಹೆಸರು : ಮಗುವಿನ ಮೊರೆ

ಕೃತಿಕಾರರ ಹೆಸರು : ಸಿದ್ಧಯ್ಯ ಪುರಾಣಿಕ

ಕೃತಿಕಾರರ ಪರಿಚಯ :


ಸಿದ್ಧಯ್ಯ ಪುರಾಣಿಕ ಅವರು ಕ್ರಿ.ಶ. 1918 ರಲ್ಲಿ ಕೊಪ್ಪಳ ಜಿಲ್ಲೆಯ ಯಲಬರ್ಗಾ ತಾಲ್ಲೂಕಿನ ದ್ಯಾಂಪುರ ಗ್ರಾಮದಲ್ಲಿ ಜನಿಸಿದರು . ಇವರ ತಂದೆ ಪಂಡಿತ ಕಲ್ಲಿನಾಥ ಶಾಸ್ತಿ ಪುರಾಣಿಕ , ತಾಯಿ ದಾನಮ್ಮ ಪುರಾಣಿಕ . ಇವರು ಬಾಲ್ಯದಲ್ಲಿಯೇ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣವಿದ್ದ ಮನೆಯಲ್ಲಿ ಬೆಳೆದದ್ದರಿಂದ ಸಹಜವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮವಾದ ಸೇವೆಯನ್ನು ಸಲ್ಲಿಸಲು ಸಾಧ್ಯವಾಯಿತು . ‘ ವಚನೋದ್ಯಾನದ ಅನುಭಾವಿ ‘ ಬಿರುದಾಂಕಿತರು . ” ಕಾವ್ಯಾನಂದ ‘ ಕಾವ್ಯನಾಮಾಂಕಿತರು . ಐ.ಎ.ಎಸ್ . ಸ್ಥಾನಾಲಂಕೃತರು . ಇವರು ಜಲಪಾತ , ಕರುಣಾ ಶ್ರಾವಣ , ಮಾನಸ ಸರೋವರ , ಮೊದಲು ಮಾನವನಾಗು , ವಚನೋದ್ಯಾನ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ಗುಲ್ಬರ್ಗಾದಲ್ಲಿ 58 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವು ಸಂದಿದೆ .

ಪದಗಳ ಅರ್ಥ

ಒರತೆ = ನೀರು ಜಿನುಗುವ ತಗ್ಗು

ತೆರ = ರೀತಿ

ನಾವೆ = ದೋಣಿ, ನೀರಿನ ಮೇಲೆ ಪ್ರಯಾಣ ಮಾಡಲು ಬಳಸುವ ಸಾಧನ

ವಿಭು = ದೇವರು, ಪರಮಾತ್ಮ, ಒಡೆಯ

ಹಣತೆ = ದೀಪ

ಇರವಿಗೊಂದು = ಇರುವಿಕೆಗೆ ಒಂದು

ಗೊಳ ಮೊಟ್ಟೆಯಿಟ್ಟು = ಬರಿ ಮೊಟ್ಟೆ ಇಟ್ಟು

ಅಭ್ಯಾಸ

ಮಗುವಿನ ಮೊರೆ ಪದ್ಯ ಪ್ರಶ್ನೆ ಉತ್ತರಗಳು

ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

೧. ಯಾವುದು ಉರಿಯಲಿಲ್ಲ ಆರಲಿಲ್ಲ?

ಈ ಬಾಳಿನ ಹಣತೆ ಉರಿಯಲೂ ಇಲ್ಲ ; ಆರಲೂ ಇಲ್ಲ

೨. ಯಾವುದು ಮುಳುಗಲಿಲ್ಲ ತೇಲಲಿಲ್ಲ?

ಜೀವನ ಹಣತೆ ಮುಳುಗಲಿಲ್ಲ ತೇಲಲಿಲ್ಲ.

೩. ಯಾವುದನ್ನು ನಾವು ದೇವರಲ್ಲಿ ಬೇಡಿಕೊಳ್ಳಬೇಕು.

ಈ ಇರುವಿಕೆಗೊಂದು ಗುರಿಯನ್ನು ತೋರಿಸು ಎಂದು ನಾವು ದೇವರಲ್ಲಿ ಬೇಡಿಕೊಳ್ಳಬೇಕು.

೪. ನಾವು ಏನೆಂದು ಹಾಡಿಕೊಳ್ಳಬೇಕು?

ನಾವು ಈ ಬದುಕಿಗೊಂದು ಅರ್ಥವನ್ನು ತೋರಿಸು,ಅದನ್ನೇ ನಾವು ಹಾಡಿಕೊಳ್ಳಬೇಕು.

೫. ಸಿದ್ದಯ್ಯ ಪುರಾಣಿಕ ಅವರ ಕಾವ್ಯನಾಮ ಯಾವುದು?

ಸಿದ್ದಯ್ಯ ಪುರಾಣಿಕ ಅವರ ಕಾವ್ಯನಾಮ ಕಾವ್ಯಾನಂದ.

ಆ) ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಹಾಗೂ ಕಂಠಪಾಠ ಮಾಡಿರಿ.

೧. ಉರಿಯಲಿಲ್ಲ ಆರಲಿಲ್ಲ

ಬಾಳ ಹಣತೆ ಹೇ ಪ್ರಭೋ!

ಬತ್ತಲಿಲ್ಲ ತುಂಬಲಿಲ್ಲ

ಬಾಳ ಒರತೆ ಹೇ ವಿಭೋ!

೨. ಇರವಿಗೊಂದು ಗುರಿಯ ತೋರು

ಇದನೆ ಬೇಡಿಕೊಳ್ಳುವೆ !

ಬದುಕಿಗೊಂದು ಅರ್ಥ ತೋರು

ಅದನೆ ಹಾಡಿಕೊಳ್ಳುವೆ!

ವ್ಯಾಕರಣ ಮಾಹಿತಿ

ಅ) ಕ್ರಿಯಾಪದ

ಕರ್ತೃವಿನ ಕ್ರಿಯೆಯನ್ನು ಹೇಳುವ ಪದವೇ ಕ್ರಿಯಾಪದ,

ಇದು ಕರ್ತೃವು ಮಾಡುವ ಕೆಲಸವನ್ನು ತಿಳಿಸುವುದರಿಂದ ವಾಕ್ಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಉದಾ : ರಾಮನು ನದಿಯಲ್ಲಿ ಈಜಿದನು.

ಇಲ್ಲಿ ʼಈಜುʼ ಪದವು ಕ್ರಿಯೆಯನ್ನು ಸೂಚಿಸುತ್ತದೆ.

ಆ) ಕೆಳಗಿನ ವಾಕ್ಯಗಳಲ್ಲಿ ಕಂಡುಬರುವ ಕ್ರಿಯಾಪದಗಳನ್ನು ಓದಿ ತಿಳಿಯಿರಿ.

೧. ರೈತನು ಗದ್ದೆಯಲ್ಲಿ ದುಡಿಯುವನು.

೨. ರೈತನು ಭತ್ತವನ್ನು ಚೀಲದಲ್ಲಿ ತುಂಬುವನು.

೩. ಎತ್ತುಗಳು ಗದ್ದೆಯಲ್ಲಿ ನೇಗಿಲನ್ನು ಎಳೆಯುವವು.

ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

೧. ಕ್ರಿಯಾಪದ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ

ಕರ್ತೃವಿನ ಕ್ರಿಯೆಯನ್ನು ಹೇಳುವ ಪದವೇ ಕ್ರಿಯಾಪದ,

ಉದಾ : ನಾನು ಪುಸ್ತಕವನ್ನು ಓದಿದೆನು.

“ಓದಿದೆನು”ಎಂಬುದು ಕ್ರಿಯಾಪದ ಇದು ಕರ್ತೃವಾದ ನಾನು ಮಾಡಿದ ಕೆಲಸವನ್ನು ತಿಳಿಸುತ್ತದೆ. ʼಓದುʼ ಎಂಬುದು ಕ್ರಿಯೆಯನ್ನು ಸೂಚಿಸುತ್ತದೆ.

೨. ತಿನ್ನು, ಓದು, ಆಡು – ಈ ಪದಗಳನ್ನು ಮಾದರಿಯಂತೆ ಬರೆಯಿರಿ.

ಮಾದರಿ : ಕುಣಿ – ಕುಣಿಯುತ್ತಾನೆ – ಕುಣಿದನು

ತಿನ್ನು – ತಿನ್ನುತ್ತಾನೆ – ತಿಂದನು

ಓದು – ಓದುತ್ತಾನೆ – ಓದಿದನು

ಆಡು – ಆಡುತ್ತಾನೆ – ಆಡಿದನು

ಇ) ಶುಭನುಡಿ

೧. ಕಾಯಕವೇ ಕೈಲಾಸ

೨. ದುಡಿಮೆಯೇ ಜೀವನದ ಬಹುಮುಖ್ಯ ಗುರಿ.

Maguvina More Poem Summary in Kannada

ಮಗುವಿನ ಮೊರೆ ಪದ್ಯದ ಸಾರಾಂಶ

ಪ್ರವೇಶ

ನಮ್ಮ ಬಾಳು ‘ ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ‘ ಎನ್ನುವಂತೆ ಆಗಬಾರದು . ಹುಟ್ಟಿದ ಮೇಲೆ ವ್ಯರ್ಥವಾಗಿ ಬದುಕದೆ ಏನಾದರೂ ಸಾಧಿಸಬೇಕು . ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸದಾ ಇರಬೇಕು . ನಮ್ಮ ಇರುವಿಕೆಗೆ ಒಂದು ಗುರಿ ಇರಬೇಕು . ಆ ಗುರಿಯ ಕಡೆಗೆ ನಮ್ಮ ಪಯಣ ಸಾಗಬೇಕು. ನಮ್ಮ ಬದುಕಿಗೆ ಒಂದು ಅರ್ಥ ಬರಬೇಕು ಎಂಬುದೇ ಈ ಪದ್ಯದ ಆಶಯವಾಗಿದೆ .

ಮುಖ್ಯಾಂಶಗಳು

ಮನುಷ್ಯ ಸೃಷ್ಟಿಯ ಕಿರೀಟ . ( Man is the crown of creation ) ಅಮೂಲ್ಯವಾದ ಮನುಷ್ಯ ಜೀವನ ವ್ಯರ್ಥವಾಗಬಾರದು ಎಂದರೆ ಒಂದು ಗುರಿಯಿರಬೇಕು . ಆ ಗುರಿಗಾಗಿ ಸಾಧನೆ ಮಾಡಬೇಕು.

ಈ ನಮ್ಮ ಜೀವನ ಉರಿಯಲೂ ಇಲ್ಲ ; ಆರಲೂ ಇಲ್ಲ , ಹೇ ಪ್ರಭುವೇ ನಮ್ಮ ಬಾಳ ಹಣತೆಯ ಉದ್ದೇಶವೇನು ? ಜೀವನದ ನದಿ ಬತ್ತಿಹೋಗಲಿಲ್ಲ ಅದೇ ತರಹ ತುಂಬಿ ಹರಿಯಲೂ ಇಲ್ಲ , ಬದುಕಿನ ಹೂವು ಅರಳಲೂ ಇಲ್ಲ , ಉರುಳಲೂ ಇಲ್ಲ , ಜೀವನ ನೌಕೆ ತೇಲಲೂ ಇಲ್ಲ ; ಮುಳುಗಲೂ ಇಲ್ಲ . ಈ ರೀತಿಯ ಬಾಳು ಏಳಲೂ ಆಗದೆ ಬೀಳಲು ಆಗದೆ , ಬರೀ ಮೊಟ್ಟೆಯಿಟ್ಟು ಬೇಸರ ಪಡುವಂತಾಗಿದೆ . ನಮ್ಮ ಇರುವಿಕೆಗೊಂದು ಅರ್ಥಕೊಡು , ಗುರಿ ಅಥವಾ ಉದ್ದೇಶವನ್ನು ತೋರಿಸು . ಹೇ ದೇವರೇ ನಿನ್ನಲ್ಲಿ ಬೇಡಿಕೊಳ್ಳುವೆ ನಮ್ಮ ಬದುಕಿಗೊಂದು ಸಾರ್ಥಕತೆ ನೀಡು ಎಂದು ಕವಿಯು ಆವಿಧಾತನಲ್ಲಿ ಬೇಡಿಕೊಳ್ಳುತ್ತಿದ್ದಾರೆ . ಪ್ರತಿಯೊಬ್ಬರ ಬದುಕಿಗೂ ಗುರಿ ಅವಶ್ಯಕ . ಆ ಗುರಿಯಲ್ಲಿ ಸಾಧನೆ ಮಾಡುವ ಹಂಬಲ ಎಲ್ಲರಲ್ಲೂ ಮೂಡಲಿ ಎಂಬುದೇ ಈ ಪದ್ಯದ ಆಶಯ.

ಇತರೆ ವಿಷಯಗಳು:

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh