5ನೇ ತರಗತಿ ಕನ್ನಡ ಬೇವು ಬೆಲ್ಲದೊಳಿಡಲೇನು ಫಲ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು Pdf, 5th Standard Bevu Belladolidalenu Phala Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Poem 6 Notes 5th Class Kannada 6th Poem Notes Pdf Bevu Belladolidalenu Phala Kannada Padya Notes
Bevu Belladolidalenu Phala Question Answer in Kannada
ಬೇವು ಬೆಲ್ಲದೊಳಿಡಲೇನು ಫಲ ಪದ್ಯ ನೋಟ್ಸ್
ಕೃತಿಕಾರರ ಪರಿಚಯ
ಪುರಂದರದಾಸರು :
ಹರಿದಾಸ ಸಾಹಿತ್ಯದ ಅಶ್ವಿನಿದೇವತೆಗಳಲ್ಲಿ ಒಬ್ಬರು . ಈಗಿನ ಮಹಾರಾಷ್ಟ್ರದ ಪುರಂದರದಾಸರು : ಹರಿದಾಸ ಸಾಹಿತ್ಯದ ಅಶ್ವಿನಿದೇವತೆಗಳಲ್ಲಿ ಪುರಂದರಗಡದಲ್ಲಿ ಕ್ರಿ.ಶ. ಸುಮಾರು 1480 ರಲ್ಲಿ ಜನಿಸಿದರು . ತಂದೆ ವರದಪ್ಪನಾಯಕ , ತಾಯಿ ಸರಸ್ವತಿ , ಪೂರ್ವದ ಹೆಸರು ಶ್ರೀನಿವಾಸನಾಯಕ , ಆಭರಣ ವ್ಯಾಪಾರಿಯಾಗಿದ್ದ ಇವರು ಜೀವನದಲ್ಲಿ ನಡೆದ ಘಟನೆಯಿಂದಾಗಿ ವೈರಾಗ್ಯ ತಾಳಿದರು . ಹರಿಭಕ್ತರಾಗಿ ನೂರಾರು ಕೀರ್ತನೆಗಳನ್ನು ರಚಿಸಿದರು . ‘ ದಾಸರೆಂದರೆ ಪುರಂದರದಾಸರಯ್ಯ ‘ ಎಂದು ತಮ್ಮ ಗುರುಗಳಾದ ವ್ಯಾಸರಾಯರಿಂದಲೇ ಹೊಗಳಿಕೆಗೆ ಪಾತ್ರರಾದರು . ಪುರಂದರದಾಸರು ಕರ್ನಾಟಕ ಸಂಗೀತದ ಪಿಳ್ಳಾರಿ ಗೀತೆಗಳನ್ನು ರಚಿಸಿ ‘ ಕರ್ನಾಟಕ ಸಂಗೀತದ ಪಿತಾಮಹ ‘ ಎನಿಸಿಕೊಂಡರು . ಇವರ ಅಂಕಿತ “ ಪುರಂದರವಿಠಲ ‘ .
ಪದಗಳ ಅರ್ಥ
ಕುಟಿಲ = ಮೋಸ, ವಂಚನೆ
ಕುಪಿತ = ಸಿಟ್ಟಿನಿಂದ ಕೂಡಿದ
ಸಟೆ = ಸುಳ್ಳು
ಅಭ್ಯಾಸ
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
ಹಾವಿಗೆ ಹಾಲೆರೆದ ಮಾತ್ರಕ್ಕೆ ಹಾವಿನ ಗುಣದಲ್ಲಿ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ ಎಂಬುದಾಗಿ ಕೀರ್ತನಕಾರರು ʼಗುಣವನ್ನು ಬದಲಾಯಿಸಲಾಗುವುದಿಲ್ಲʼ ಎಂಬುದನ್ನು ಸ್ಪಷ್ಟಪಡಿಸಲು ಉದಾಹರಣೆಯಾಗಿ ಈ ವಾಕ್ಯವನ್ನು ಹೇಳಿದ್ದಾರೆ.
ಮಂತ್ರ ಪಠಣೆಯ ಫಲ ಸಿಗಬೇಕೆಂದರೆ ಮನುಜ ಕುಟಿಲತೆಯನ್ನು ಬಿಡಬೇಕೆಂದು ಹೇಳಿದ್ದಾರೆ.
“ಕೆಟ್ಟ ಗುಣಗಳನ್ನು ಬಿಡದೆ ಪವಿತ್ರವಾದ ಗಂಗಾಸ್ನಾನ ಮಾಡಿದರೂ ಪ್ರಯೋಜನವಿಲ್ಲ” ಎಂಬುದೇ ಈ ವಾಕ್ಯದ ಭಾವವಾಗಿದೆ.
“ಜಪದ ಫಲ” ನಮಗೆ ಸಿಗಬೇಕಾದರೆ ಮನಸ್ಸಿನಲ್ಲಿನ ಕಪಟತನವನ್ನು ಬಿಡಬೇಕು.
“ಪುರಂದರ ವಿಠಲ” ಎಂಬುದು ಪುರಂದರದಾಸರ ಅಂಕಿತನಾಮವಾಗಿದೆ.
೧. ಕೀರ್ತನಕಾರರು ʼಹಾವಿಗೆ ಹಾಲೆರೆದರೇನು ಫಲʼ ಎಂದು ಏಕೆ ಹೇಳಿದ್ದಾರೆ?
ಹಾವಿಗೆ ಹಾಲೆರೆದ ಮಾತ್ರಕ್ಕೆ ಹಾವಿನ ಗುಣದಲ್ಲಿ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ ಎಂಬುದಾಗಿ ಕೀರ್ತನಕಾರರು ʼಗುಣವನ್ನು ಬದಲಾಯಿಸಲಾಗುವುದಿಲ್ಲʼ ಎಂಬುದನ್ನು ಸ್ಪಷ್ಟಪಡಿಸಲು ಉದಾಹರಣೆಯಾಗಿ ಈ ವಾಕ್ಯವನ್ನು ಹೇಳಿದ್ದಾರೆ.
೨. ಮಂತ್ರ ಪಠಣೆಯ ಫಲ ಸಿಗಬೇಕೆಂದರೆ ಮನುಜ ಏನನ್ನು ಮಾಡಬೇಕು?
ಮಂತ್ರ ಪಠಣೆಯ ಫಲ ಸಿಗಬೇಕೆಂದರೆ ಮನುಜ ಕುಟಿಲತೆಯನ್ನು ಬಿಡಬೇಕೆಂದು ಹೇಳಿದ್ದಾರೆ.
೩. “ಹೀನ ಗುಣಗಳ ಹಿಂಗದೆ ಗಂಗೆಯ ಸ್ನಾನವ ಮಾಡಿದರೇನು ಫಲ” ಇದರ ಭಾವಸಾರವನ್ನು ಬರೆಯಿರಿ
“ಕೆಟ್ಟ ಗುಣಗಳನ್ನು ಬಿಡದೆ ಪವಿತ್ರವಾದ ಗಂಗಾಸ್ನಾನ ಮಾಡಿದರೂ ಪ್ರಯೋಜನವಿಲ್ಲ” ಎಂಬುದೇ ಈ ವಾಕ್ಯದ ಭಾವವಾಗಿದೆ.
೪. “ಜಪದ ಫಲ” ನಮಗೆ ಸಿಗಬೇಕಾದರೆ ನಾವು ಹೇಗಿರಬೇಕು?
“ಜಪದ ಫಲ” ನಮಗೆ ಸಿಗಬೇಕಾದರೆ ಮನಸ್ಸಿನಲ್ಲಿನ ಕಪಟತನವನ್ನು ಬಿಡಬೇಕು.
೫. ಪುರಂದರದಾಸರ ಅಂಕಿತನಾಮ ಯಾವುದು?
“ಪುರಂದರ ವಿಠಲ” ಎಂಬುದು ಪುರಂದರದಾಸರ ಅಂಕಿತನಾಮವಾಗಿದೆ.
ಆ) ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
೧. ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ !!
೨. ಹೀನ ಗುಣಗಳ ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಪುರಂದರವಿಠಲನ ನೆನೆಯದೆ
ಮೌನವ ಮಾಡಿದರೇನು ಫಲ
ವ್ಯಾಕರಣ ಮಾಹಿತಿ
ಪ್ರಕೃತಿಭಾವ
ಕೆಲವು ಸಲ ಸ್ವರಕ್ಕೆ ಸ್ವರವು ಪರವಾದಾಗ ಯಾವುದೇ ರೀತಿಯ ಸಂಧಿ ಕಾಠ್ಯವು ನಡೆಯುವುದಿಲ್ಲ. ಇದನ್ನು ಪ್ರಕೃತಿಭಾವ ಎನ್ನುತ್ತೇವೆ.
ಉದಾ : ಅಣ್ಣಾ + ಓಡಿ ಬಾ = ಅಣ್ಣಾ ಓಡಿ ಬಾ.
ಇಲ್ಲಿ ʼಅಣ್ಣಾ ಮತ್ತು ʼಓಡಿ ಬಾʼ ಎಂಬ ಎರಡು ಪದಗಳ ನಡುವೆ ಸಂಧಿಕಾರ ನಡೆಯದೆ ಆ ಪದಗಳು ಹಾಗೆಯೇ ಉಳಿದುಕೊಂಡಿವೆ.
ಇದೇ ರೀತಿ ಕೆಲವು ಉದಾಹರಣೆಗಳನ್ನು ಗಮನಿಸಿರಿ.
ಕೃಷ್ಣಾ + ಎಲ್ಲಿದ್ದೀಯಾ = ಕೃಷ್ಣಾ ಎಲ್ಲಿದ್ದೀಯಾ?
ಅಕ್ಕಾ + ಎಲ್ಲಿರುವೆ = ಅಕ್ಕಾ ಎಲ್ಲಿರುವೆ?
ಆ + ಅಂಗಡಿ = ಆ ಅಂಗಡಿ
ಈ + ಮನೆ = ಈ ಮನೆ
ಆ) ವಿರುದ್ಧಾರ್ಥಕ ಪದಗಳು
ದಿನನಿತ್ಯ ಮಾತನಾಡುವಾಗ, ಬರೆಯುವಾಗ ಬಳಸುವ ಪದಗಳಲ್ಲಿ ವಿರುದ್ಧವಾದ ಅರ್ಥವಿರುವ ಕೆಲವು ಪದಗಳನ್ನು ಇಲ್ಲಿ ಕೊಡಲಾಗಿದೆ.
ಅನುಭವ ಅನಾನುಭವ
ಪದ ವಿರುದ್ಧಾರ್ಥಕ ಪದ
ಪದ | X | ವಿರುದ್ಧಾರ್ಥಕ ಪದ |
ಅನುಭವ | X | ಅನಾನುಭವ |
ಆದಿ | X | ಅಂತ್ಯ |
ಉತ್ತಮ | X | ಅಧಮ |
ಉನ್ನತಿ | X | ಅವನತಿ |
ಗರ್ವಿ | X | ನಿಗರ್ವಿ |
ಭಾಷಾಭ್ಯಾಸ
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಈ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬಳಸಿ – ಸಂತ ವಾಕ್ಯ ರಚಿಸಿರಿ.
( ಶುದ್ಧ , ಅನುಕೂಲ , ಆರೋಗ್ಯ , ಸಫಲ )
ಮಾದರಿ : ಅವರಿಗೆ ತಂತ್ರಜ್ಞಾನದಲ್ಲಿ ಅನುಭವವಿದೆ . ಅವರು ತಂತ್ರಜ್ಞಾನದಲ್ಲಿ ಅನಾನುಭವಿಗಳು
1. ಈ ನೀರು ಕುಡಿಯಲು ಶುದ್ಧವಾಗಿದೆ . ಅಶುದ್ಧವಾದ ನೀರನ್ನು ಕುಡಿಯಬಾರದು .
2. ನಮ್ಮ ಶಾಲೆಯಲ್ಲಿ ವ್ಯಾಯಾಮ ಮಾಡಲು ಅನುಕೂಲವಾಗಿದೆ . ಆದರೆ ವಿದ್ಯಾರ್ಥಿಗಳಿಗೆ ಬರಲು ಅನಾನುಕೂಲ . ಏಕೆಂದರೆ ಆ ವೇಳೆಯಲ್ಲಿ ಬರಲು ಬಸ್ ಸೌಕರ್ಯವಿಲ್ಲ .
3. ಆರೋಗ್ಯವೇ ಮಹಾಭಾಗ್ಯ ಎಂದು ತಿಳಿದವರೂ ಸಹ ಅನಾರೋಗ್ಯಕರ ತಿಂಡಿಯನ್ನು ( Junk food ) ತಿನ್ನುತ್ತಾರೆ .
4. ವಿದ್ಯಾರ್ಥಿಗಳು ಜೀವನದಲ್ಲಿ ಸಫಲರಾಗಲು ವಿದ್ಯೆ ಮುಖ್ಯ . ವಿದ್ಯೆ ಕಲಿಯದವರ ಜೀವನ ನಿಪ್ಪಲವಾಗುವುದು .
2. ಪ್ರಕೃತಿ ಭಾವ ಎಂದರೇನು ?
ಕೆಲವು ಸಲ ಸ್ವರಕ್ಕೆ ಸ್ವರವು ಪರವಾದಾಗ ಯಾವುದೇ ರೀತಿಯ ಸಂಧಿ ಕಾಠ್ಯವು ನಡೆಯುವುದಿಲ್ಲ . ಇದನ್ನು ಪ್ರಕೃತಿಭಾವ ಎನ್ನುತ್ತೇವೆ .
೩. ಪ್ರಕೃತಿಭಾವಗಳನ್ನು ಹಾಗೂ ಸಂಧಿ ಪದಗಳನ್ನು ವಿಂಗಡಿಸಿ ಬರೆಯಿರಿ.
ಓಹೋ, ನಿಧಿ ಸಿಕ್ಕಿತು! ಅಣ್ಣಾ, ಅಲ್ಲಿ ನೋಡು
ಅಡಿಗಲ್ಲು ಆ ಅರಸು
ಹಳಿಯಲ್ಲಿ ಈ ಮನೆ
ಪ್ರಕೃತಿ ಭಾವ ಸಂಧಿಪದಗಳು
ಓಹೋ, ನಿಧಿ ಸಿಕ್ಕಿತು! ಅಡಿಗಲ್ಲು
ಅಣ್ಣಾ, ಅಲ್ಲಿ ನೋಡು ಹಳ್ಳಿಯಲ್ಲಿ
ಆ ಅರಸು
ಈ ಮನೆ
ಇ) ಶುಭನುಡಿ
೧. ಸದ್ಗುಣಗಳು ಸ್ವರ್ಗಕ್ಕೆ ಹಾದಿ.
೨. ಕೋಪದಿಂದ ಕೊಯ್ದ ಮೂಗು ಮತ್ತೆ ಬಂದೀತೇ?
೩. ಆಚಾರವೇ ಸ್ವರ್ಗ ಅನಾಚಾರವೇ ನರಕ.
Bevu Belladolidalenu Phala Summary in Kannada
ಬೇವು ಬೆಲ್ಲದೊಳಿಡಲೇನು ಫಲ ಪದ್ಯದ ಸಾರಾಂಶ
ಪ್ರವೇಶ
ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ . ಯಾವುದೇ ಕೆಲಸ ನಿರ್ವಹಿಸಿದರೂ ಅದರಿಂದ ಫಲಾಫಲವನ್ನು ಅಪೇಕ್ಷಿಸಬಾರದು . ನಿರ್ಮಲ ಭಕ್ತಿ ಇಲ್ಲದಿದ್ದರೆ ಮಾಡಿದ ಕೆಲಸ ಕೂಡ ನಿಷ್ಪಲವಾಗುತ್ತದೆ ಎಂಬುದನ್ನು ಪುರಂದರ ದಾಸರು ಸರಳ ಉದಾಹರಣೆಗಳ ಮೂಲಕ ಇಲ್ಲಿ ನಿರೂಪಿಸಿದ್ದಾರೆ .
ಮುಖ್ಯಾಂಶಗಳು
ಪುರಂದರದಾಸರ ಬಗ್ಗೆ ಕೇಳದವರೇ ವಿರಳ ಎನ್ನಬಹುದು . ಇವರು ಆದ್ಯಾತ್ಮವನ್ನು ಸಂಗೀತದ ಮೂಲಕ ತುಂಬಾ ಸರಳವಾಗಿ ಜನರ ಮನ ಮುಟ್ಟುವಂತೆ ಹೇಳಿದ್ದಾರೆ . ಪ್ರಸ್ತುತ ಪದ್ಯದಲ್ಲಿ ವಸ್ತುಗಳು ಮತ್ತು ವ್ಯಕ್ತಿಗಳು ತಮ್ಮ ಸ್ವಭಾವವನ್ನು ಬಿಡುವುದು ಸುಲಭವಲ್ಲ ಎಂದು ಹೇಳುತ್ತಾ ಬೇವು ಅದು ಬೆಲ್ಲದಲ್ಲಿಟ್ಟರೂ , ಕಹಿಯನ್ನು ಬಿಡುವುದಿಲ್ಲ . ಅದೇ ರೀತಿ ಹಾವಿಗೆ ಎಷ್ಟು ಹಾಲು ಕುಡಿಸಿದರೂ ಅದು ತನ್ನ ವಿಷವನ್ನು ಬಿಡುವುದಿಲ್ಲ.
ಈ ರೀತಿ ಮಾಡುವುದರಿಂದ ಯಾವ ಉಪಯೋಗವೂ ಇಲ್ಲ . ಮೋಸವನ್ನು ಬಿಡದೆ ಮನುಷ್ಯರು ಮಂತ್ರವನ್ನು ಜಪಿಸಿದರೆ ಫಲ ಸಿಗುವುದೇ ? ಸದಾ ಸುಳ್ಳು ಹೇಳುತ್ತಾ ನಟನೆ ಯನ್ನು ಮಾಡುವ ಮನುಷ್ಯರಿಂದ ಉಪಯೋಗವೇನು ? ಮೋಸ , ವಂಚನೆಗಳಿಂದ ಜನರನ್ನು ಕಾಡಿಸುತ್ತಾ , ಜಪ ಮಾಡಿದರೆ ಅದು ಸಿದ್ಧಿಸುವುದೇ ? ಕೋಪವನ್ನು ಬಿಡದೆ ಯಾವಾಗಲೂ ಗೀತೆಯನ್ನು ಓದಿದರೆ ಫಲವಿದೆಯೇ ? ಕೆಟ್ಟ ಬುದ್ಧಿಯನ್ನು ಬಿಡದೆ , ಗಂಗಾಸ್ನಾನವನ್ನು ಮಾಡಿದರೆ ಪುಣ್ಯದ ಫಲ ದೊರೆಯುತ್ತದೆಯೇ ? ಶ್ರೀನಿಧಿ ಪುರಂದರ ವಿಠಲನನ್ನು ನೆನೆಯದೆ ಮನ ವ್ರತವನ್ನಾಚರಿಸಿದರೆ ಫಲ ದೊರೆಯುವುದೇ ? ಎಂದು ಕೀರ್ತನಕಾರರು ಕೇಳುತ್ತಿದ್ದಾರೆ.
ಇತರೆ ವಿಷಯಗಳು:
5th Standard All Subject Notes
5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.