5ನೇ ತರಗತಿ ಮೂಡಲ ಮನೆ ಪದ್ಯ ನೋಟ್ಸ್‌ | 5th Standard Kannada Moodala Mane Poem Notes

5ನೇ ತರಗತಿ ಕನ್ನಡ ಮೂಡಲ ಮನೆ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು 2024, 5th Standard Moodala Mane Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Poem 8 Notes 5th Class Kannada 8th Poem Notes Moodala Mane Kannada Padya Notes

Moodala Mane Kannada Notes

5th Standard Kannada Moodala Mane Poem Notes

ತರಗತಿ : ೫ ನೇ ತರಗತಿ

ಪದ್ಯದ ಹೆಸರು : ಮೂಡಲಮನೆ

ಕೃತಿಕಾರರ ಹೆಸರು : ಚಂದ್ರಶೇಖರ್‌ ಕಂಬಾರ

ಕೃತಿಕಾರರ ಪರಿಚಯ:

Moodala Mane Kannada Notes

ಡಾ . ಚಂದ್ರಶೇಖರ ಕಂಬಾರರು ದಿನಾಂಕ ೨-೧೧ -೧೯೩೭ ರಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೆರೆ ಗ್ರಾಮದಲ್ಲಿ ಜನಿಸಿದರು . ಪ್ರಸಿದ್ಧ ಜಾನಪದ ವಿದ್ವಾಂಸರಾದ ಡಾ . ಕಂಬಾರರು 24 ನಾಟಕಗಳು , 10 ಕವನ ಸಂಕಲನಗಳು , 5 ಕಾದಂಬರಿಗಳು ಮತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ . ‘ ಚಕೋರಿ ‘ ಅವರ ಮಹಾಕಾವ್ಯ ಸಂಗ್ಯಾಬಾಳ್ಯಾ , ಜೋಕುಮಾರಸ್ವಾಮಿ , ಸಿರಿಸಂಪಿಗೆ , ಶಿವರಾತ್ರಿ ಮುಂತಾದವು ನಾಟಕಗಳು , ಕರಿಮಾಯಿ , ಸಿಂಗಾರವ್ವ ಮತ್ತು ಅರಮನೆ , ಶಿಖರಸೂರ್ಯ ಮುಂತಾದವು ಕಾದಂಬರಿಗಳು . ಶ್ರೀಯುತರು 2010 ರ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ . ಕೇಂದ್ರ ಸರ್ಕಾರದ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಶ್ರೀಯುತರಿಗೆ ಲಭಿಸಿವೆ . ಪ್ರಸ್ತುತ ʼಮೂಡಲಮನೆʼ ಕವನವನ್ನು ಅವರ ʼಎಲ್ಲಿದೆ, ಶಿವಾಪುರʼ ಎಂಬಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

ಪದಗಳ ಅರ್ಥ

ಅಗಸಿ = ಊರಿನ ಪ್ರವೇಶದ್ವಾರ, ಊರಿನ ಹೆಬ್ಬಾಗಿಲು

ಐತಿ = ಇರುವುದು, ಇದೆ

ಕರಗ = ಒಂದು ಉತ್ಸವದ ಹೆಸರು

ತಲೆಯ = ಮೇಲೆ ಕಲಶ ಹೊತ್ತುಕೊಂದು ಕುಣಿಯುವ ಒಂದು ನೃತ್ಯ,

ಕರುಳಬಳ್ಳಿ = ಸಂಬಂಧವನ್ನು ಕುರಿತು ಹೇಳುವಾಗ ಬಳಸುವ ಪದ

ಗೂಡಿನ್ಯಾಗ = ಗೂಡಿನಲ್ಲಿ, ಗೂಡಿನೊಳಗೆ

ಜಡಿ = ಜಡೆ. ಉದ್ದವಾದ ಕೂದಲ ರಾಶಿ, ಜಟೆ

ಜಡೆಮುನಿ = ವಿಶೇಷವಾಗಿ ಜಡೆಯನ್ನು ಬೆಳೆಸಿದ ಸನ್ಯಾಸಿ.

ಜೋತಬಾವಲಿ = ರಾತ್ರಿಯ ಹೊತ್ತು ಸಂಚರಿಸುವ, ಮರದ ರೆಂಬೆಗಳಲ್ಲಿ ನೇತಾಡುವ, ಹಾರುವ ಒಂದು ಪ್ರಾಣಿ.

ತಪ = ತಪಸ್ಸು, ಧ್ಯಾನ

ತಳ = ಕೆಳಭಾಗ, ಸಮತಟ್ಟಾದ ಪ್ರದೇಶ.

ತೊಗಲು ಗೊಂಬೆಯಾಟ = ಚರ್ಮ ಬಳಸಿ ಸಿದ್ಧಪಡಿಸಿದ ಗೊಂಬೆಗಳನ್ನು ಬಳಸಿ ಆಡುವ ಆಟ.

ನಾವೂನು = ನಾವೂ ಸಹ, ನಾವೆಲ್ಲರೂ.

ನೆತ್ತಿ = ತಲೆಯ ಮದ್ಯಭಾಗ.

ಮ್ಯಾಲ = ಮೇಲೆ

ಮೊಳಕೆ ಒಡಿ = ಮೊಳಕೆ ಬರುವುದು, ಚಿಗುರುವುದು

ಬಲಿತ = ಬೆಳೆದ, ಶಕ್ತಿಯುತವಾದ, ಬಲಿಷ್ಠ

ಬಳಗ = ಗುಂಪು, ಬಂಧುಗಳ ಸಮೂಹ

ಬಿಳಲ = ಬಿಳಲು, ಮರದ ಕೊಂಬೆಗಳಿಂದ ನೇತಾಡುವ ಬಿಳಲು

ಭಾಗ = ಅಂಶ, ಒಂದು ಪಾಲು

ಭೂತ ಬೇತಾಳ = ದೆವ್ವ ಪಿಶಾಚಿ

ವಲಸಿಗ = ಬೇರೆಡೆಯಿಂದ ಬಂದ, ಬೇರೆಡೆಗೆ ಹೋದ

ಶಾಂತಚಿತ್ತ = ಶಾಂತ ಮನಸ್ಸು, ತೃಪ್ತ ಮನಸ್ಸು

ಹರವು = ಹರಡು, ವಿಸ್ತರಿಸು, ಕೆದರು

ಹಸರ = ಹಸಿರು

ಅಭ್ಯಾಸ

5th standard kannada notes question answer

ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

೧. ಆಲದ ಮರ ಎಲ್ಲಿ ಬೆಳೆದು ನಿಂತಿದೆ?

ಆಲದ ಮರ ಊರ ಹೆಬ್ಬಾಗಿಲಲ್ಲಿ ಬೆಳೆದು ನಿಂತಿದೆ.

೨. ರೆಂಬೆ ಕೊಂಬೆಯ ಮೇಲೆ ಯಾರ ಗೂಡು ಕಟ್ಟಿದ್ದಾರೆ?

ರೆಂಬೆ ಕೊಂಬೆಯ ಮೇಲೆ ಬಲಿತ ಹಕ್ಕಿಗಳ ಗೂಡು ಕಟ್ಟಿದೆ.

೩. ಬನ್ನಿರಿ, ನೀವು ನಮ್ಮ ಬಳಗ ಎಂದು ಕವಿ ಯಾರಿಗೆ ಹೇಳುತ್ತಿದ್ದಾರೆ?

ಬನ್ನಿರಿ, ನೇವು ನಮ್ಮ ಬಳಗ ಎಂದು ಕವಿ ವಲಸಿಗ ಹಕ್ಕಿಗೆ ಹೇಳುತ್ತಿದ್ದಾರೆ.

೪. ಮರದಲ್ಲಿ ಯಾರೆಲ್ಲಾ ಸೇರಿ ಕರಗ ಕುಣಿಯುತ್ತಾರೆ?

ಮರದಲ್ಲಿ ಭೂತ ಬೇತಾಳ, ಜೋತ ಬಾವಲಿಗಳು ಸೇರಿ ಕರಗ ಕುಣಿಯುತ್ತಾರೆ.

೫. ಮರದ ಎಲೆಗಳ ನೆರಳಾಟ ಎಲ್ಲಿ ನಡೆಯುತ್ತಿದೆ?

ಮರದ ಎಲೆಗಳ ನೆರಳಾಟ ಮನೆಯ ಗೋಡೆಯ ಮೇಲೆ ನಡೆಯುತ್ತಿದೆ.

೬. ಕವಿ ಇಲ್ಲಿ ದೇಶವನ್ನು ಯಾವುದಕ್ಕೆ ಹೋಲಿಸಿದ್ದಾರೆ?

ಕವಿಗಳು ದೇಶವನ್ನು ವಿಶಾಲವಾದ ಆಲದ ಮರಕ್ಕೆ ಹೋಲಿಸಿದ್ದಾರೆ.

೧. ಆಲದ ಮರ ಎಲ್ಲಿ ಬೆಳೆದು ನಿಂತಿದೆ?

ಆಲದ ಮರ ಊರ ಹೆಬ್ಬಾಗಿಲಲ್ಲಿ ಬೆಳೆದು ನಿಂತಿದೆ.

೨. ರೆಂಬೆ ಕೊಂಬೆಯ ಮೇಲೆ ಯಾರ ಗೂಡು ಕಟ್ಟಿದ್ದಾರೆ?

ರೆಂಬೆ ಕೊಂಬೆಯ ಮೇಲೆ ಬಲಿತ ಹಕ್ಕಿಗಳ ಗೂಡು ಕಟ್ಟಿದೆ.

೩. ಬನ್ನಿರಿ, ನೀವು ನಮ್ಮ ಬಳಗ ಎಂದು ಕವಿ ಯಾರಿಗೆ ಹೇಳುತ್ತಿದ್ದಾರೆ?

ಬನ್ನಿರಿ, ನೇವು ನಮ್ಮ ಬಳಗ ಎಂದು ಕವಿ ವಲಸಿಗ ಹಕ್ಕಿಗೆ ಹೇಳುತ್ತಿದ್ದಾರೆ.

೪. ಮರದಲ್ಲಿ ಯಾರೆಲ್ಲಾ ಸೇರಿ ಕರಗ ಕುಣಿಯುತ್ತಾರೆ?

ಮರದಲ್ಲಿ ಭೂತ ಬೇತಾಳ, ಜೋತ ಬಾವಲಿಗಳು ಸೇರಿ ಕರಗ ಕುಣಿಯುತ್ತಾರೆ.

೫. ಮರದ ಎಲೆಗಳ ನೆರಳಾಟ ಎಲ್ಲಿ ನಡೆಯುತ್ತಿದೆ?

ಮರದ ಎಲೆಗಳ ನೆರಳಾಟ ಮನೆಯ ಗೋಡೆಯ ಮೇಲೆ ನಡೆಯುತ್ತಿದೆ.

೬. ಕವಿ ಇಲ್ಲಿ ದೇಶವನ್ನು ಯಾವುದಕ್ಕೆ ಹೋಲಿಸಿದ್ದಾರೆ?

ಕವಿಗಳು ದೇಶವನ್ನು ವಿಶಾಲವಾದ ಆಲದ ಮರಕ್ಕೆ ಹೋಲಿಸಿದ್ದಾರೆ.

ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ,ಕಂಠಪಾಠ ಮಾಡಿರಿ

೧. ನಮ್ಮೂರ ಅಗಸ್ಯಾಗ ಆಲದ ಮರ ಬೆಳೆದು

ಹಾದಿ ಬೀದೆಲ್ಲಾ ತಂಪು ನೆರಳ |

ನೆತ್ತಿಗೂದಲ ಹರವಿ ತಪವ ಮಾಡೋನ್ಯಾರ |

ಜಡಿಮುನಿಯ ಜಡಿಯ ಹಾಂಗ ಬಿಳಲ ||

೨. ಮೂಡ್ಯಾವ | ತೊಗಲ ಗೊಂಬಿಯಾಟ

ಕರುಳ ಬಳ್ಳಿಯ ಕತೆಯ ಹೇಳತಾವ

ನೋಡ್ರಿ ಶಾಂತ ಚಿತ್ತ |

ನಾವೂನು ಅದರ ಭಾಗ ಮಾತ್ರ ||

ವ್ಯಾಕರಣ ಮಾಹಿತಿ

ಅ) ಕಾಲಗಳು

ನಡೆದ ನಡೆಯುತ್ತಿರುವ, ಮತ್ತು ನಡೆಯುವ ಕ್ರಿಯೆಗಳನ್ನು ಸೂಚಿಸುವುದೇ ಕಾಲಗಳು.

ಇವುಗಳಲ್ಲಿ ಮೂರು ವಿಧ

೧) ಭೂತಕಾಲ

೨) ವರ್ತಮಾನಕಾಲ

೩) ಭವಿಷ್ಯತ್‌ ಕಾಲ

೧. ಭೂತಕಾಲ (ನಡೆದ)

ಮಹೇಂದ್ರನು ಮನೆಗೆಲಸವನ್ನು ಮಾಡಿದನು

ರಾಣಿ ಮಾರುಕಟ್ಟೆಗೆ ಹೋದಳು

ಗುರುಗಳು ಪಾಠವನ್ನು ಹೇಳಿದರು

೨. ವರ್ತಮಾನಕಾಲ ( ನಡೆಯುತ್ತಿರುವ)

ರಾಜು ತೋಟದಲ್ಲಿ ಕೆಲಸ ಮಾಡುತ್ತಾನೆ

ಲಕ್ಷ್ಮಿ ಶಾಲೆಗೆ ಹೋಗುತ್ತಾಳೆ

ಅವರು ಜಮೀನಿನಲ್ಲಿ ದುಡಿಯುತ್ತಾರೆ

೩. ಭವಿಷ್ಯತ್‌ ಕಾಲ (ನಡೆಯುವ)

ಪ್ರಸಾದ್‌ ಶಿಕ್ಷಕ ಆಗುವನು

ಶಾಲಿನಿ ನಟಿ ಆಗುವಳು

ವೈದ್ಯರು ನಮ್ಮ ಮನೆಗೆ ಬರುವರು

ಕೆಳಗಿನ ಕೋಷ್ಠಕವನ್ನು ಗಮನಿಸಿ ಓದಿರಿ.

ಕಾಲಗಳು

ಭೂತಕಾಲ ವರ್ತಮಾನಕಾಲ ಭವಿಷ್ಯತ್‌ ಕಾಲ

ಆಡಿದೆನು ಆಡುತ್ತೇನೆ ಆಡುವೆನು

ನೋಡಿದೆನು ನೋಡುತ್ತೇನೆ ನೋಡುವೆನು

ಬೇಡಿದಳು ಬೇಡುತ್ತಾಳೆ ಬೇಡುವಳು

ಓಡಿದನು ಓಡುತ್ತಾನೆ ಓಡುವನು

ನಡೆಯಿತು ನಡೆಯುತ್ತದೆ ನಡೆಯುವುದು

ಭಾಷಾಭ್ಯಾಸ

ಅ) ಈ ವಾಕ್ಯಗಳಲ್ಲಿ ಅಡಿಗೆರೆ ಎಳೆದ ಶಬ್ಧ ಯಾವ ಕಾಲವನ್ನು ಸೂಚಿಸುತ್ತದೆ ಬರೆಯಿರಿ.

೧. ಅರ್ಚನ ಗೆಳತಿಯ ಮನೆಗೆ ಹೋಗುವಳು (ಭವಿಷ್ಯತ್‌ ಕಾಲ)

೨. ಚಂದನ ಚೆಂಡಾಟ ಆಡುತ್ತಾನೆ (ವರ್ತಮಾನಕಾಲ)

೩. ಧನುಶ್ರೀ ಗೀತೆ ಹಾಡಿದಳು (ಭೂತಕಾಲ)

ಆ) ಮಾದರಿಯಂತೆ ಸರಿಯಾದ ಶಬ್ಧ ಬರೆಯಿರಿ.

ಮಾದರಿ : ರಾಜ್ಯವನ್ನು ಆಳುವವಳು (ರಾಣಿ)

೧. ಹಣ, ವಸ್ತುಗಳನ್ನು ಉಚಿತವಾಗಿ ನೀಡುವವ ( ದಾನಿ)

೨. ಸೇನೆಯನ್ನು ಮುನ್ನಡೆಸುವವ (ಸೇನಾಧಿಪತಿ)

೩. ಕಾಯಿಲೆಯಿಂದ ಹಾಸಿಗೆಯಲ್ಲಿ ಮಲಗಿದವ (ರೋಗಿ)

ಇ) ಶುಭನುಡಿ

೧. ಜೀವನ ಬಲು ಚಿಕ್ಕದು. ಅದನ್ನು ಆದಷ್ಟು ಚೊಕ್ಕವಾಗಿ ಕಳೆಯೋಣ.

೨. ನಿನ್ನ ದೇಶಕ್ಕಾಗಿ ನೀನು ಯಾವ ತ್ಯಾಗಕ್ಕಾದರೂ ಸಿದ್ಧನಾಗು

Moodala Mane Poem Summary in Kannada

ಪ್ರವೇಶ

ನಾವು ವಿವಿಧ ಜಾತಿಗಳಿಂದ ವಿವಿಧ ಮತಗಳಿಂದ ಬಂದಿರಬಹುದು . ಆದರೆ ಒಂದೇ ದೇಶದಲ್ಲಿ ಬಾಳಿ ಬದುಕುತ್ತೇವೆ . ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಮೇಲುಕೀಳುಗಳನ್ನು ಮರೆಯುತ್ತಾ , ಭಾರತಮಾತೆಯೆಂಬ ಒಂದೇ ತಾಯಿ ಮರದ ವಿಶಾಲ ಜೀವಿಸಬೇಕಾದ ಸತ್ಯವನ್ನು , ಅಗತ್ಯವನ್ನು ಪುಸ್ತುತ ಕವನದಲ್ಲಿ ಕಂಡುಕೊಳ್ಳುತ್ತೇವೆ .

ಮುಖ್ಯಾಂಶಗಳು

ಚಂದ್ರಶೇಖರ ಕಂಬಾರರು ನೆಮ್ಮದಿ ಬದುಕಿನಿಂದ ಸತ್ಯವನ್ನು ತಿಳಿಸುತ್ತಿದ್ದಾರೆ . ‘ ಪುಕೃತಿಯು ಬಹಳ ಒಳ್ಳೆಯ ಗುರು ‘ ಪುಕೃತಿಯಿಂದ ಕಲಿಯಬಹುದಾದದ್ದು , ಕಲಿಯ ಬೇಕಾದದ್ದು ಅಪಾರ . ಪ್ರಸ್ತುತ ಕವನದಲ್ಲಿ ಆಲದ ಮರದಿಂದ ಒಗ್ಗಟ್ಟು , ಬೇಧಭಾವ ರಹಿತ ಜೀವನ , ಮೇಲು ಕೀಳೆಂಬ ಮನೋಭಾವ ಸಲ್ಲದು ಎಂಬ ಅಂಶಗಳನ್ನು ಕಲಿಯಬಹುದು .

ನಮ್ಮೂರಿನ ಹೆಬ್ಬಾಗಿಲಿನ ಸಮೀಪ ಒಂದು ದೊಡ್ಡ ಆಲದ ಮರದ ಬೆಳೆದು ಹಾದಿ – ಬೀದಿಯಲ್ಲಿ ಹೋಗುವ ಜನರಿಗೆ ತಂಪಾದ ನೆರಳನ್ನು ಕೊಡುತ್ತಿದೆ . ಬಹಳ ವಿಶಾಲವಾದ ಮರ . ಅದರ ಬಿಳಿಲುಗಳು , ತನ್ನ ನೆತ್ತಿಯ ಕೂದಲನ್ನೆಲ್ಲಾ ಹರಡಿಕೊಂಡ ತಪೋಮುನಿಯ ಜಡೆಯಂತೆ ಕಾಣುತ್ತದೆ . ಈ ಅಗಾಧವಾದ ವೃಕ್ಷದ ರೆಂಬೆ

Moodala Mane Kannada Notes

ಕೊಂಬೆಗಳ ನಡುವೆ ರೆಕ್ಕೆ ಬಲಿತ ಹಕ್ಕಿಗಳು ಗೂಡು ಕಟ್ಟಿವೆ . ಆ ಗೂಡಿನೊಳಗೆ ಮರಿಹಕ್ಕಿಗಳು ಹಾಯಾಗಿ ಮಲಗಿವೆ . ಈ ಗೂಡುಗಳು ಬೇರೆ ಕಡೆಯಿಂದ ಬರುವ ವಲಸಿಗ ಹಕ್ಕಿಗಳಿಗೂ ಆಶ್ರಯ ಕೊಡುತ್ತವೆ . ಬನ್ನಿ , ಬನ್ನಿ ನೀವೆಲ್ಲಾ ನಮ್ಮ ಬಳಗವೇ ಎಂದು ಹಾರ್ಧಿಕವಾಗಿ ಸ್ವಾಗತಿಸುತ್ತದೆ . ಹಳೆಯ ಬಾವಿಯ ತಳದಲ್ಲಿರುವ ತೇವಾಂಶದಿಂದಲೇ ಹಸಿರು ಚಿಗುರುತ್ತದೆ . ಬೇರು ಮೊಳಕೆ ಒಡೆದು ಹೊಸ ಸಸಿಯನ್ನು ಕೊಡುತ್ತದೆ . ಭೂತ , ದೆವ್ವ , ಪಿಶಾಚಿಗಳು , ಬಾವಲಿಗಳು ಕೂಗುತ್ತಿರುತ್ತವೆ . ಈ ಮರದಲ್ಲಿ ಎಲ್ಲವೂ ಸಂತೋಷವಾಗಿ ಕೂಗಿ ಕರಗ ಕುಣಿಯುತ್ತವೆ . ಮನೆಯ ಗೋಡೆಯ ಮೇಲೆ ಮರದ ನೆರಳು ಕಪ್ಪು ಬೆಳಕಿನ ಆಟ ಆಡುತ್ತದೆ . ಕರುಳ ಬಳ್ಳಿಯ ಆಟವನ್ನು ತೊಗಲ ಗೊಂಬೆಯ ಆಟದ ಮೂಲಕ ಹೇಳುತ್ತದೆ . ಇವೆಲ್ಲವನ್ನೂ ನಾವು ಶಾಂತಚಿತ್ತರಾಗಿ ನೋಡಿ ಆನಂದಿಸಬೇಕು . ನಾವೂ ಸಹ ಇದರ ಭಾಗ ಎಂಬುದನ್ನು ಮರೆಯಬಾರದು .

ಇತರೆ ವಿಷಯಗಳು:

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

This image has an empty alt attribute; its file name is Kannada-Deevige-Telegram.png

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh