5ನೇ ತರಗತಿ ಭು‌ವನೇಶ್ವರಿ ಪದ್ಯದ ನೋಟ್ಸ್| 5th Standard Bhuvaneshwari Poem Notes

5ನೇ ತರಗತಿ ಕನ್ನಡ ಭು‌ವನೇಶ್ವರಿ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು 2024, 5th Standard Kannada Bhuvaneshwari Poem Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Poem Notes 5th Class Kannada 9th Poem Notes Pdf Bhuvaneshwari Kannada Padya Notes Pdf Bhuvaneshwari Poem 5th Standard

5th Class Bhuvaneshwari Kannada Notes

ತರಗತಿ : ೫ ನೇ ತರಗತಿ

ಪದ್ಯದ ಹೆಸರು : ಭುವನೇಶ್ವರಿ

ಕೃತಿಕಾರರ ಹೆಸರು : ಬಿ ವಿ ಸತ್ಯನಾರಾಯಣರಾವ್

ಕೃತಿಕಾರರ ಪರಿಚಯ

ಸತ್ಯವಿಠಲ ಅಂಕಿತದಿಂದ ಪ್ರಸಿದ್ಧರಾಗಿರುವ ಬಿ . ವಿ . ಸತ್ಯನಾರಾಯಣರಾವ್ ಅವರು ( 1948 ) ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದವರು . ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಇವರು ಪುಕೃತ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಉಪಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವರು . ಗೀತ , ಸ್ತೋತ್ರ , ಕಾವ್ಯ , ಲಾವಣಿ , ಗದ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಅರವತ್ತು ಕೃತಿಗಳನ್ನು ರಚಿಸಿದ್ದಾರೆ . ಹನ್ನೊಂದು ಭಾಮಿನಿ ಕಾವ್ಯಗಳನ್ನೂ ಬಸವ ಭಾರತಿ ಸುದೀರ್ಘ ಲಾವಣಿ ಕಾವ್ಯವನ್ನೂ ಸಂಪೂರ್ಣ ದೇವೀ ಮಹಾತ್ಮ ಬಸವೇಶ್ವರ ಲೀಲಾ ವೈಭವಂ , ಲಂಕೇಶ್ವರ ಸೋಮನಾಥ ಚಾರಿತ್ರ ಮುಂತಾದ ಕಾವ್ಯಗಳನ್ನೂ ರಚಿಸಿದ್ದಾರೆ . ಕನ್ನಡ – ಸಂಸ್ಕೃತ ಭಾಷೆಗಳೆರಡರಲ್ಲೂ ಪಾಂಡಿತ್ಯವುಳ್ಳವರು . ಬಾಹುಬಲಿಚರಿತಂ , ಗಾಯತ್ರೀರಾಮಾಯಣ , ಸಿರಿಗನ್ನಡ ವೈಜಯಂತಿ , ಕನ್ನಡನಾಡ ಚರಿತ್ರೆ , ತತ್ವಭಾರತಿ , ಭಾವಗೀತೆಗಳು , ಶ್ರೀಶಿವಕುಮಾರಸ್ವಾಮಿಗುರುಚರಿ ಗುರುದತ್ತಚರಿತಂ ಇವರ ಪ್ರಮುಖ ಕೃತಿಗಳು ನೃತ್ಯರೂಪಕ , ಹಾಗೂ ನಾಮಾವಳಿ ಗಳನ್ನು ರಚಿಸಿದ್ದಾರೆ .

ಪದಗಳ ಅರ್ಥ

ಪದ = ಪಾದ , ಕಾಲುಗಳು‌

ಚರಿತೆ = ಇತಿಹಾಸ

ಸೊಬಗು = ಚೆಲುವು , ಅಂದ

ಮೆರೆ = ಖ್ಯಾತಿಹೊಂದು

ವೀರತಾಣ = ವೀರರ ಸ್ಥಳ

ಹಿರಿಮ = ಹೆಚ್ಚುಗಾರಿಕೆ

ಸಿರಿ = ಶ್ರೀ , ಸಂಪತ್ತು , ಚೆಲುವು

ವೈಭವ = ಐಶ್ವರ್ಯ , ಡೌಲು

ಗರಿಮೆ = ಹಿರಿಮೆ

ಪತನ = ಅವನತಿ , ನಾಶ

ಶೀಘ್ರದಲಿ = ಬೇಗನೆ , ಅಲ್ಪ ಸಮಯದಲ್ಲೇ

ಬೆರಗಾಗು = ವಿಸ್ಮಯಪಡು

ಸಿರಿ ಸಂಪದ = ಸಂಪತ್ತು

ದ್ರೋಹ = ಕೇಡನ್ನೆಣಿಸು , ವಿಶ್ವಾಸಘಾತ

ಸೆರೆ = ಬಂಧನ

ಅಂತಃಕಲಹ = ಒಳಜಗಳ

ಅಮರಿದರು = ಆಕ್ರಮಿಸು

ಚಳುವಳಿ = ಹೋರಾಟ

ತತ್ತ್ವ = ಸಿದ್ಧಾಂತ , ಸಾರಸತ್ವ

ಅಸಹಕಾರ = ಸಹಕರಿಸದಿರುವುದು

ಮೊಳೆತವು = ಚಿಗುರಿದವು

ವಿಶಾಲ = ವಿಸ್ತಾರವಾದ

ಉದಯ = ಮೂಡು, ಹುಟ್ಟು

ಪರಿ = ರೀತಿ

ಪಂಥ = ಮಾರ್ಗ, ಸಂಪ್ರದಾಯ

ಚಿಮ್ಮು = ತಳಿ, ನೆಗೆ, ಬೀಸು

ಪೋಷಿಸು = ಕಾಪಾಡು, ಮೊರೆ

ಅಭ್ಯಾಸ

ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

೧. ಪಲ್ಲವರನ್ನು ಗೆದ್ದು ಮೆರೆದವರು ಯಾರು ?

ಪಲ್ಲವರನ್ನು ಗೆದ್ದು ಕದಂಬರ ಮಯೂರವರ್ಮನು ಬನವಾಸಿಯಲ್ಲಿ ಮೆರೆದನು .

೨. ಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರಾರು ?

ಬಾದಾಮಿಯಲ್ಲಿ ಚಾಲುಕ್ಯರು ವೀರ ಆಳ್ವಿಕೆಯನ್ನು ನಡೆಸಿದರು .

೩. ಯಾರ ಪತನದ ನಂತರ ವಿಜಯನಗರ ಬೆಳೆಯಿತು ?

ಹೊಯ್ಸಳರ ಪತನದ ನಂತರ ವಿಜಯನಗರ ಬೆಳೆಯಿತು .

೪. ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಯಾರು ?

ಕಿತ್ತೂರ ರಾಣಿ ಚೆನ್ನಮ್ಮ ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದಳು .

೫. ಭಾರತ ಸ್ವಾತಂತ್ರದ ಚಳುವಳಿ ಯಾರ ತತ್ವದಲ್ಲಿ ಬೆಳೆಯಿತು ?

ಭಾರತ ಸ್ವಾತಂತ್ರ್ಯದ ಚಳುವಳಿ ಗಾಂಧೀಜಿಯವರ ತತ್ವದಲ್ಲಿ ಬೆಳೆಯಿತು .

೬. ವಿಶಾಲ ಮೈಸೂರಿನ ಉದಯವಾದುದು ಯಾವಾಗ ?

ವಿಶಾಲ ಮೈಸೂರು ೧೯೫೬ ನವೆಂಬರ್‌ ೧ ರಂದು ಉದಯವಾಯಿತು

೭. ನಮ್ಮ ನಾಡಿನಲ್ಲಿ ಯಾವುದು ಗೆಲ್ಲಬೇಕು? ಯಾವುದು ಬಾಳಬೇಕು ?

ನಮ್ಮ ನಾಡಿನಲ್ಲಿ ಕನ್ನಡವು ಗೆಲ್ಲಬೇಕು , ಕನ್ನಡವು ಬಾಳಬೇಕು .

ಆ)ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.

1. ಹೊಯ್ಸಳ ಪತನದ ನಂತರ ಬೆಳೆಯಿತು

ವಿಜಯನಗರವತಿ ಶೀಘ್ರದಲ್ಲಿ ಲೋಕವೆ ಬೆರಗಾಗುವ

ಸಿರಿಸಂಪದ ಮೆರೆಯಿತು ಈ ಸಾಮ್ರಾಜ್ಯದಲಿ

2. ಯುದ್ಧದಿ ಆಂಗ್ಲರನೆದುರಿಸಿ ಗೆದ್ದಳು ಚನ್ನಮ್ಮನು

ಕಿತ್ತೂರಿನಲ್ಲಿ | ದೊಹಕೆ ಸೆರೆಯಾಗುತ ದಿನವನ್ನು

ದೂಡಿದಳವಳು ಜೈಲಿನಲಿ

3. ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬಸವೇಶ್ವರರ

ಸಿರಿಪಂಥವಿದೆ | ಕೊಂಕಣಿ ಉರ್ದು ತುಳುವಿನ

ಸಂಸ್ಕೃತಿ ಕನ್ನಡತನ ಜಲ ಚಿಮ್ಮುತಿದೆ

4. ” ಕನ್ನಡ ಗೆಲ್ಲಲಿ ಕನ್ನಡಬಾಳಲಿ ” ನಮ್ಮಿ ಕನ್ನಡ

ನೆಲದಲಿ “ ಕನ್ನಡ ಕಲಿಯಿರಿ ಕನ್ನಡ ಪೋಷಿಸಿ”

ನಮ್ಮಯ ಕನ್ನಡನಾಡಿನಲಿ

ವ್ಯಾಕರಣ ಮಾಹಿತಿ

ʼತಿನ್ನುʼ ಧಾತು

ಹಿಂದಿನ ಅಧ್ಯಾಯಗಳಲ್ಲಿ ಕ್ರಿಯಾಪದದ ರೂಪಗಳನ್ನು ಪರಿಚಯಿಸಿಕೊಂಡಿದ್ದೇವಲ್ಲವೆ ? ಕ್ರಿಯಾಪದದ ಮೂಲ ರೂಪವನ್ನು ಕ್ರಿಯಾಪಕೃತಿ ‘ ಅಥವಾ ‘ ಧಾತು ‘ – ಎಂದು ಕರೆಯುತ್ತೇವೆ . ಉದಾಹರಣೆಗೆ : ತಿನ್ನುತ್ತಾನೆ , ತಿನ್ನುತ್ತಾಳೆ , ತಿನ್ನುತ್ತದೆ , ತಿನ್ನುವರು , ತಿನ್ನಲಿ , ತಿಂದರು , ತಿಂದಿತು ಮುಂತಾದ ಕ್ರಿಯಾಪದಗಳ ಮೂಲರೂಪವು ‘ ತಿನ್ನು ‘ ಎಂಬುದಾಗಿದೆ .

ಇದೇ ರೀತಿಯಲ್ಲಿ ನಾವು ಭೂತ ಕಾಲ , ವರ್ತಮಾನಕಾಲ ಹಾಗೂ ಭವಿಷ್ಯತ್ ಕಾಲಗಳನ್ನು ಪರಿಚಯಿಸಿಕೊಂಡಿದ್ದೇವೆ . ಈ ಮೇಲಿನ ‘ ತಿನ್ನು ‘ ಎಂಬ ಧಾತುವು ಭೂತ , ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಕ್ರಿಯಾಪದ ರೂಪ ಪಡೆದಿರುವುದನ್ನು ಈ ಕೆಳಗಿನ ಪಟ್ಟಿಯಿಂದ ಅರ್ಥಮಾಡಿಕೊಳ್ಳಿರಿ . ಈ ಮೇಲಿನ ಪಟ್ಟಿಯಲ್ಲಿ ‘ ತಿನ್ನು ‘ ಧಾತುವು ವರ್ತಮಾನಕಾಲ , ಭೂತಕಾಲ ಮತ್ತು ಭವಿಷ್ಯತ್ಕಾಲಗಳಲ್ಲಿ , ಏಕವಚನ , ಬಹುವಚನ , ಪ್ರಥಮ ಪುರುಷ , ಮಧ್ಯಮ ಪುರುಷ , ಉತ್ತಮ ಪುರುಷಗಳಲ್ಲಿ ಬಳಕೆಯಾಗಿರುವುದನ್ನು ಗಮನಿಸಿದಿರಿ . ಇದೇ ರೀತಿಯಲ್ಲಿ ಇತರ ಧಾತುಗಳನ್ನು ಬಳಸಿ , ಉಪಯೋಗ ಮಾಡುವುದನ್ನು ಅಭ್ಯಾಸ ಮಾಡಿರಿ .

ಭಾಷಾಭ್ಯಾಸ

ಅ ) ಕೊಟ್ಟಿರುವ ಪದಗಳನ್ನು ಸೂಚನೆಯಂತೆ ಬದಲಾಯಿಸಿ .

1. ಆಡಿದಳು – ಇದನ್ನು ವರ್ತಮಾನಕ್ಕೆ ಬದಲಿಸಿ .

ಆಡುತ್ತಿದ್ದಾಳೆ .

2. ನೋಡುವರು – ಇದನ್ನು ಏಕವಚನಕ್ಕೆ ಬದಲಿಸಿ .

ನೋಡುವಳು – ನೋಡುವನು

3. ತಿಂದಿತು – ಇದರ ಮೂಲರೂಪ ಬರೆಯಿರಿ ತಿನ್ನು

4. ಬರುವುದು – ಇದನ್ನು ಭೂತಕಾಲಕ್ಕೆ ಬದಲಾಯಿಸಿ .

ಬಂದವು – ಬಂದಿತು .

ಆ ) ಇವುಗಳ ‘ ಧಾತು ‘ ರೂಪ ಬರೆಯಿರಿ

ಮಾದರಿ : ಬಂದರು – ಬರು

1. ಕುಣಿವಳು – ಕುಣಿ

2. ಕುಡಿಯಿತು – ಕುಡಿ

3. ಬರೆವಳು – ಬರೆ

4. ಬಂದನು – ಬರು

5. ಹೋಗುವರು – ಹೋಗು

ಈ ) ಶುಭನುಡಿ .

1. ತಾಯಿ – ತನ್ನೂರುಗಳು ಸ್ವರ್ಗಕ್ಕಿಂತಲೂ ಮಿಗಿಲು .

2. ನಮ್ಮ ನಾಡು – ನುಡಿಗೆ ಗೌರವ ಸಲ್ಲಿಸಬೇಕಾದುದು ನಮ್ಮ ಪ್ರಥಮ ಕರ್ತವ್ಯ .

3. ಕನ್ನಡ ನಾಡಿನಲ್ಲಿ ಕನ್ನಡವೇ ರಾಜ -ರಾಣಿ ಎಲ್ಲವೂ .

Bhuvaneshwari Poem Summary in Kannada

ಪ್ರವೇಶ

ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಎಳೆಯರಲ್ಲಿ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ . ನಮ್ಮ ನಾಡಿನ ಇತಿಹಾಸ , ಆಳಿದ ಪರಾಕ್ರಮಿಗಳು , ನಾಡನ್ನು ಕಟ್ಟಲು ಶ್ರಮಿಸಿದ ನೇತಾರರು , ಇಲ್ಲಿನ ಶಿಲ್ಪ ಕಲೆ , ಸಂಸ್ಕೃತಿ ಮುಂತಾದ ಪರಂಪರೆಯನ್ನು , ಅದರ ಶ್ರೀಮಂತಿಕೆಯನ್ನು ಮಕ್ಕಳಿಗೆ ಅರ್ಥಮಾಡಿಸುವ ಮೂಲಕ , ಅವರೆಲ್ಲರಲ್ಲೂ ನಾವು ಎಂತಹ ಪರಂಪರೆಯ ವಾರಸುದಾರರಾಗಿದೇವೆಂಬ ಬಗ್ಗೆ ಹೆಮ್ಮೆ ಮೂಡಿಸುವ ಆಶಯವನ್ನು ಪ್ರಸ್ತುತ ಪದ್ಯವು ಒಳಗೊಂಡಿದೆ .

ಮುಖ್ಯಾಂಶಗಳು

ನಮ್ಮ ಕನ್ನಡ ನಾಡು ಶ್ರೇಷ್ಠವಾದ ಹಿರಿಮೆಗರಿಮೆಗಳನ್ನು ಹೊಂದಿರುವ ನಾಡು , ನಮ್ಮ ನಾಡದೇವತೆ ಶ್ರೀ ಭುವನೇಶ್ವರಿ ಯನ್ನು ಪೂಜಿಸಿ , ಈ ದೇಶದ ಕೀರ್ತಿ ಚರಿತ್ರೆಯನ್ನು ಹೇಳಲು ಪ್ರಾರಂಭಿಸುವೆನು . ಕನ್ನಡ ನಾಡಿನ ಹೆಮ್ಮೆಯ ಮಕ್ಕಳಾದ ನೀವೆಲ್ಲಾ ನಿಮ್ಮ ನಾಡಿನ ಸೊಬಗನ್ನು ತಿಳಿದುಕೊಳ್ಳಬೇಕು . ಕನ್ನಡ ನಾಡಿನ ಚರಿತ್ರೆ ಶ್ರೀಮಂತವಾದುದು . ಪಲ್ಲವರನ್ನು ಗೆದ್ದು ಕದಂಬರ ಮಯೂರ ವರ್ಮನು ವೈಭವದಿಂದ ಈ ನಾಡನ್ನು ಆಳಿದ್ದಾನೆ .

5ನೇ ತರಗತಿ ಭು‌ವನೇಶ್ವರಿ ಪದ್ಯದ ನೋಟ್ಸ್ | 5th Bhuvaneshwari Poem Notes

ಹಿರಿಮೆಯ ಬನವಾಸಿ ಪ್ರಸಿದ್ಧತೆಯನ್ನು ಪಡೆದಿತ್ತು . ನಂತರ ಚಾಲುಕ್ಯರ ಆಳ್ವಿಕೆ ವೀರನಾಡಾದ ಬಾದಾಮಿಯಲ್ಲಿತ್ತು.

ಹೆಮ್ಮೆಯ ಗಂಗ ಮನೆತನ , ರಾಷ್ಟ್ರಕೂಟರು , ಹೊಯ್ಸಳರು ಆಳಿದ ನಾಡಿದು . ವಿಜಯನಗರದ ಅರಸರು , ಕೆಳದಿಯ ವೈಭವ ಇವೆಲ್ಲಾ ಕನ್ನಡ ತಾಯಿಯ ಮುಡಿಗೆ ನಿಜವಾದ ಗರಿಮೆಯನ್ನು ಮುಡಿಸಿದೆ .

ಹೊಯ್ಸಳರ ಪತನದ ನಂತರ , ಅತಿ ಶೀಘ್ರದಲ್ಲಿ ವಿಜಯನಗರ ಸಾಮ್ರಜ್ಯ ಪ್ರಪಂಚವೇ ಬೆರಗಾಗುವಷ್ಟು ಸಿರಿ ಸಂಪದಗಳಿಂದ ಮೆರೆಯಿತು . ಮುತ್ತು ರತ್ನಗಳನ್ನು ಬೀದಿಯಲ್ಲಿ ರಾಶಿರಾಶಿಯಾಗಿ ಮಾರುತ್ತಿದ್ದ ಕಾಲ , ಈಗ ಅದು ನಂಬಲು ಅಸಾಧ್ಯವಾಗುವಂತಹದು .

ಕಿತ್ತೂರ ರಾಣಿ ಚೆನ್ನಮ್ಮ ಆಂಗ್ಲರನ್ನು ಎದುರಿಸಿ ಯುದ್ಧ ಮಾಡಿ ಗೆದ್ದಳು . ಆದರೆ ದೇಶದ್ರೋಹಿಗಳ ಸಂಚಿನಿಂದ ಸೆರೆಯಾಗಿ ಜೈಲಿನಲ್ಲಿ ಖೈದಿಯಾಗಿ ಸೆರೆವಾಸವನ್ನು ಅನುಭವಿಸಬೇಕಾಗಿ ಬಂತು, ನಮ್ಮ ದೇಶದ ರಾಜರುಗಳ ಅಂತಃಕಲಹದಿಂದ ಇಂಗ್ಲೀಪರು ಸಂಪೂರ್ಣ ಭಾರತವನ್ನೇ ವಶಪಡಿಸಿಕೊಂಡರು .

ಮೈಸೂರಿನ ‘ ಹುಲಿ ಟಿಪ್ಪು ಸುಲ್ತಾನನ್ನು ಸೋಲಿಸಿ ಶ್ರೀರಂಗಪಟ್ಟಣವನ್ನು ಆಕ್ರಮಿಸಿದರು . ಗಾಂಧೀಜಿಯ ಚಳುವಳಿಗಳು , ಹೋರಾಟಗಳು ನಡೆದು ಹೋದವು . ದೇಶದ ಹಿರಿಯರು , ದೇಶಭಕ್ತರ ಅಸಹಕಾರವು ಮೊಳಗಿ , ಕೊನೆಗೆ 1947 ರ ಆಗಸ್ಟ್ 15 ರಂದು ಭಾರತದೇಶವು ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಿದರು . 1956 ರ ನವೆಂಬರ್ ಒಂದರಂದು ವಿಶಾಲ ಮೈಸೂರು ರಾಜ್ಯದ ಉದಯ ವಾಯಿತು . ಇದು ಕರ್ನಾಟಕವಾಗಿ ಪರಿವರ್ತಿತವಾದದ್ದು 1973 ರಲ್ಲಿ . ಈ ಸಿರಿನಾಡಿನಲ್ಲಿ ಹಿಂದೂಗಳು , ಮುಸ್ಲಿಂರು . ಕ್ರಿಶ್ಚಿಯನ್‌ರು , ಜೈನರು , ವೀರಶೈವರು ಹೀಗೆ ಎಲ್ಲಾ ಧರ್ಮದವರಿದ್ದಾರೆ . ಕೊಂಕಣಿ , ಉರ್ದು , ತುಳುವಿನ ಸಂಸ್ಕೃತಿಯು ಕನ್ನಡತನದ ಜಲದಲ್ಲಿ ಚಿಮ್ಮುತ್ತಿದೆ . ಇಂತಹ ಕನ್ನಡ ಗೆಲ್ಲಲಿ , ಬಾಳಲಿ , ನಮ್ಮ ನೆಲದಲಿ ವಾಸಿಸುವರೆಲ್ಲರೂ ಕನ್ನಡವನ್ನು ಕಲಿಯಲಿ ಎಂದು ಎಲ್ಲರೂ ಒಮ್ಮತದಿಂದ ಕನ್ನಡವನ್ನು ಪೋಷಿಸಬೇಕು . ಇದು ನಮ್ಮ ಕನ್ನಡನಾಡು ಎಂಬ ಹೆಮ್ಮೆ ಎಲ್ಲರಲ್ಲೂ ಇರಬೇಕು . ಇಂತಹ ಭವ್ಯವಾದ ಕನ್ನಡ ನಾಡು ನಮ್ಮದು ಎಂದು ಎಲ್ಲರೂ ಹೆಮ್ಮೆ ಪಡಬೇಕು . ಕನ್ನಡ ಚರಿತ್ರೆಯನ್ನು ತಿಳಿದಾಗ ನಿಜವಾದ ಸಾರ್ಥಕತೆ ಉಂಟಾಗುತ್ತದೆ.

ಇತರೆ ವಿಷಯಗಳು :

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh