5ನೇ ತರಗತಿ ಪ್ರಾಮಾಣಿಕತೆ ಪೂರಕ ಪಾಠದ ನೋಟ್ಸ್‌ | 5th Standard Pramanikathe Notes

ಅಭ್ಯಾಸ

ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ರಾಜಮ್ಮ ಎಲ್ಲಿಗೆ ಹೋಗಬೇಕಿತ್ತು ?

ರಾಜಮ್ಮ ದೂರದ ಹೊಳೇಪುರಕ್ಕೆ ಹೋಗಬೇಕಿತ್ತು .

2. ರಾಜಮ್ಮ ಬಸ್ಸಿನಲ್ಲಿ ಕುಳಿತು ಏನೆಂದು ಯೋಚಿಸ ತೊಡಗಿದಳು ?

ರಾಜಮ್ಮ ಬಸ್ಸಿನಲ್ಲಿ ಕುಳಿತು ತನ್ನಲ್ಲಿರುವ ಹಣದಲ್ಲಿ ಹೋಗಬಹುದಾದ ದೂರವನ್ನು ಪ್ರಯಾಣಿಸಿ , ಉಳಿದ ದೂರವನ್ನು ನಡೆದುಕೊಂಡೇ ಹೋಗಲು ನಿರ್ಧರಿದಳು.

3. ರಾಜಮ್ಮನ ಪ್ರಾಮಾಣಿಕತೆಗೆ ಸಹಪ್ರಯಾಣಿಕಳು ಯಾವ ಸಲಹೆ ಕೊಟ್ಟಳು ?

ರಾಜಮ್ಮನ ಪ್ರಾಮಾಣಿಕತೆಗೆ ಸಹಪ್ರಯಾಣಿಕಳು ಬಸ್ಸಿನಲ್ಲಿ ನಿದ್ರೆ ಬಂದಂತೆ ನಟಿಸಿ , ಹೊಳೇಪುರ ಬಂದಾಗ ಸುಮ್ಮನೆ ಇಳಿದು ಹೋಗುವಂತೆ ಸಲಹೆ ನೀಡಿದಳು

4. ‘ ಅಂಥವರಿಗೆ ಇನ್ನಾದರೂ ಬುದ್ದಿ ಬರಲಿ ‘ ಎಂದು ರಾಜಮ್ಮ ಏಕೆ ಪ್ರಾರ್ಥಿಸಿದಳು ?

ಯಾರೂ ನೋಡುವುದಿಲ್ಲ , ಯಾರಿಗೂ ಗೊತ್ತಾಗುವು ದಿಲ್ಲ ಎಂದು ನಾವು ಮೋಸ ಮಾಡಬಾರದು . ಅಂತಹವರಿಗೆ ಇನ್ನು ಮುಂದಾದರೂ ಬುದ್ದಿ ಬರಲಿ ಎಂದು ಮನಸಾರೆ ಪ್ರಾರ್ಥಿಸಿದಳು . ಪ್ರಾಮಾಣಿಕತೆ ಯಾವಾಗಲೂ ಒಳ್ಳೆಯದು .

Pramanikathe Summary in Kannada

ಮುಖ್ಯಾಂಶಗಳು

ಪ್ರಾಮಾಣಿಕತೆ ಎನ್ನುವ ಸದ್ಗುಣದ ಬಗ್ಗೆ ಇರುವ ಈ ಪಾಠ ನಿಜಕ್ಕೂ ಮಕ್ಕಳಿಗೆ ಆದರ್ಶವಾಗಿದೆ . ಈ ಸದ್ಗುಣವನ್ನು ಚಿಕ್ಕಂದಿನಿಂದಲೇ ಕಲಿಯಬೇಕು ಹಾಗೂ ಅಳವಡಿಸಿಕೊಳ್ಳಬೇಕು .

ರಾಜಮ್ಮ ಎಂಬ ಬಡ ಮಹಿಳೆಯೊಬ್ಬಳು ದೂರದ ಹೊಳೇಪುರಕ್ಕೆ ಹೋಗಬೇಕಿತ್ತು . ಆದರೆ ಅವಳಲ್ಲಿ ಅಷ್ಟು ದೂರ ಪಯಾಣ ಮಾಡಲು ಬೇಕಾದ ಟಿಕೆಟ್ ಹಣವಿರಲಿಲ್ಲ . ಆದ್ದರಿಂದ ಅವಳು ತನ್ನ ಹತ್ತಿರ ಇರುವ ಹಣಕ್ಕೆ ಎಷ್ಟು ದೂರ ಎಂದರೆ ಅರಸೀಪುರದವರೆಗೆ ಮಾತ್ರ ಟಿಕೆಟ್ ಕೊಂಡುಕೊಂಡಳು . ಪಕ್ಕದಲ್ಲಿ ಕುಳಿತಿದ್ದವರು ನೀವು ನಿದ್ದೆ ಮಾಡಿದಂತೆ ನಟಿಸಿ , ಹೊಳೇಪುರದವರೆಗೂ ಪಯಾಣ ಮಾಡಿ ನಂತರ ಸುಮ್ಮನೆ ಇಳಿದು ಹೋಗಿಬಿಡಿ ಎಂದು ಸಲಹೆ ಕೊಟ್ಟಳು . ಆದರೆ ರಾಜಮ್ಮ ಆ ರೀತಿ ಮಾಡದೆ ಅರಸೀಪುರದಲ್ಲೇ ಇಳಿದು , ಉಳಿದ ಹಾದಿಯನ್ನು ನಡೆದುಕೊಂಡು ಹೋಗಲು ನಿರ್ಧರಿಸಿದಳು . ರಾಜಮ್ಮನ ಮನಸ್ಸನ್ನು ಅರ್ಥಮಾಡಿಕೊಳ್ಳುವ ಶಕ್ತಿ ಆ ಸಹ ಪ್ರಯಾಣಿಕಳಿಗೆ ಇರಲಿಲ್ಲ . ರಾಜಮ್ಮ ಸಹ ಪ್ರಯಾಣಿಕಳಂತಹ ಜನರಿಗೆ ಇನ್ನು ಮುಂದಾದರೂ ಪ್ರಾಮಾಣಿಕತೆಯ ಬುದ್ದಿ ಬರಲಿ ಎಂದು ಮನಸಾರೆ ಪ್ರಾರ್ಥಿಸಿದಳು . ಯಾರು ಏನು ತಿಳಿದುಕೊಳ್ಳುತ್ತಾರೋ, ಏನೆಂದುಕೊಳ್ಳುತ್ತಾರೋ ಎಂಬ ಭಾವನೆಯನ್ನು ಇಟ್ಟುಕೊಳ್ಳದೆ ಪ್ರತಿಯೊಬ್ಬರು ಪ್ರಾಮಾಣಿಕರಾಗಿರಬೇಕು ಎಂಬುದೇ ಈ ಗದ್ಯದ ಆಶಯ.

5ನೇ ತರಗತಿ ಪ್ರಾಮಾಣಿಕತೆ PDF

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  5 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh