7th Standard Parisara Samatholana Kannada Notes | 7ನೇ ತರಗತಿ ಪರಿಸರ ಸಮತೋಲನ ಕನ್ನಡ ನೋಟ್ಸ್

7ನೇ ತರಗತಿ ಪರಿಸರ ಸಮತೋಲನ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 7th Standard Parisara Samatholana Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Chapter 4 Notes Parisara Samatholana Kannada Question Answer 7th Kannada Parisara Samatholana Notes 7th Standard Kannada 4th Lesson Notes

Parisara Samatholana Notes Pdf

Contents hide

ಲೇಖಕರ ಪರಿಚಯ 

ಡಾ . ಕೃಪಾನಂದ ಕಾಮತ್‌ರವರು 29.9.1934 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದರು . ಡಾಕ್ಟರೇಟ್ ದವಿಯನ್ನು ಪಡೆದು , ಉದಯಪುರ ಮತ್ತು ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್‌ವೆಲ್ತ್ ಇನ್ಸ್ಟೂಟ್ ಆಫ್ ಬಯಲಾಜಿಕಲ್ ಕಂಟ್ರೋಲ್ ಸಂಸ್ಥೆಯ ಕೀಟ ಸಂಶೋಧನಾಧಿಕಾರಿ ಮತ್ತು ಸೇವೆ ಸಲ್ಲಿಸಿದರು . ಬೆಂಗಳೂರಿನಲ್ಲಿ ವೈಜ್ಞಾನಿಕ ಛಾಯಾಗ್ರಹಣ :ಲ್ಯಾಬೊರೇಟರಿ  ಪ್ರಾರಂಭಿಸಿ ಸುಮಾರು ಒಂದು ಹೆಚ್ಚು ಚಿತ್ರಗಳ ಛಾಯಾಗ್ರಹಣ ಮಾಡಿದ್ದಾರೆ . , “ ಪ್ರಾಣಿ ಪರಿಸರ ” , ” ಕೀಟ ಜಗತ್ತು ” . ಸಸ್ಯ ಪರಿಸರ ” , ” ಇರುವೆಯ ಇರವು ‘ , ‘ ಸರ್ಪ ಸಂಕುಲ ” ಮತ್ತು ” ಕಾವಿ ಕಲೆ ” ಇತ್ಯಾದಿ ಇವರ ಪುಮುಖ ಕೃತಿಗಳು . ಇವರಿಗೆ ರಾಜ್ಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ . 

Parisara Samatholana Question Answer 7th Class

ಶಬ್ದಾರ್ಥ 

ಆಚ್ಛಾದನ = ಬಟ್ಟೆ ವಸ್ತ್ರ , 

ಪರ್ಣ = ಎಲೆ 

ಗೊಣು = ಕುತ್ತಿಗೆ 

ಪಿತೃ = ತಂದೆ 

ವೀಳ್ಯ = ತಾಂಬೂಲ ( ಎಲೆ , ಅಡಿಕೆ )

ಚರ್ವಣ = ಅಗಿದು ತಿನ್ನುವುದು 

ಶತಮಾನ = ನೂರು ವರ್ಷಗಳು 

ಕ್ರೋಮೋಜೋಮು = ವರ್ಣತಂತು 

ವಿಪುಲ = ಹೆಚ್ಚು ಜಾಸ್ತಿ

 ಆದ್ರತೆ = ನೀರಿನ ಅಂಶ , ತೇವಾಂಶ 

ಪಾಶ್ಚಾತ್ಯ = ಪಶ್ಚಿಮ

 ದೇಶ ಕಿಸೆ = ಜೇಬು

 ತಾಣ = ಜಾಗ , ಸ್ಥಳ 

ಚಿಗರೆ = ಜಿಂಕೆ 

ಅವಿತು = ಬಚ್ಚಿಟ್ಟುಕೊಳ್ಳುವುದು 

ಕಣ್ಣು ಕಪ್ಪಡಿ = ಬಾವಲಿ 

ವಿಧಾಯಕ = ರಚನಾತ್ಮಕ 

ಹತ್ಯೆ = ಕೊಲ್ಲು

 ಹೌ ಹಾರು = ದಿಗ್ಬ್ರಮೆ 

ಅಭ್ಯಾಸ ಪ್ರಶ್ನೆಗಳು :

ಅ . ಕೊಟ್ಟಿರುವ ಪ್ರಶ್ನೆಗಳಗೆ ಒಂದು ವಾಕ್ಯದಲ್ಲಿ ಉತ್ತರಿಸಿ . 

1. ಆನೆ ಎಷ್ಟು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ ? 

ಉತ್ತರ : ಆನೆ ಐದು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ . 

2. ಪ್ರಾಣಿ – ಪ್ರಾಣಿಗಳ ನಡುವೆ ಯಾವುದಕ್ಕಾಗಿ ಸ್ಪರ್ಧೆ ನಡೆಯುತ್ತದೆ ? 

ಉತ್ತರ : ಪ್ರಾಣಿ – ಪ್ರಾಣಿಗಳ ನಡುವೆ ಆಹಾರ , ಅಚ್ಚಾದನಗಳಿಗಾಗಿ ( ವಸತಿ , ಬಟ್ಟೆ , ವಸ್ತ್ರ ) ಸ್ಪರ್ಧೆ ನಡೆಯುತ್ತದೆ 

3. ಬೀಜ ಪ್ರಸರಣ ಯಾವುದರ ಮೂಲಕ ನಡೆಯುತ್ತದೆ ?

 ಉತ್ತರ : ಬೀಜ ಪ್ರಸರಣ ಕೀಟ , ವಾಯು , ನೀರು ಮೊದಲಾದವುಗಳ ಮೂಲಕ ನಡೆಯುತ್ತದೆ . 

4. ದಟ್ಟವಾದ ಕಾಡು ಎಲ್ಲಿ ಬೆಳೆಯುತ್ತದೆ ? 

ಉತ್ತರ : ವಿಪುಲವಾದ ನೀರು , ಆರ್ದತೆ ಇರುವಲ್ಲಿ ದಟ್ಟವಾದ ಕಾಡುಗಳು ಬೆಳೆಯುತ್ತದೆ .

5. ಎಲ್ಲಿ ಬಿದ್ದ ಬೀಜಗಳು ನಾಶವಾಗುತ್ತವೆ ?

 ಉತ್ತರ : ಮರುಭೂಮಿ , ರಸ್ತೆ ಮತ್ತು ಕಟ್ಟಡಗಳ ಮೇಲೆ ಬಿದ್ದ ಬೀಜಗಳು ನಾಶವಾಗುತ್ತವೆ . 

6. ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ ಯಾವುದು ? 

ಉತ್ತರ : ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ ತಿಮಿಂಗಿಲ

ಆ . ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

1. ಜಿರಾಫೆ ಹೇಗೆ ಆಹಾರ ಸ್ಪರ್ಧೆಯಲ್ಲಿ ಯಶಸ್ವಿಯಾಗುತ್ತದೆ ? 

ಉತ್ತರ : ಜಿರಾಫೆ  ಹನ್ನೆರಡು ಅಡಿಗೂ ಎತ್ತರದವಲ್ಲಿದ್ದ ಪರ್ಣ ( ಎಲೆ) ತಿನ್ನುವಷ್ಟು ಉದ್ದ ಕಾಲು , ಉದ್ದಗೋಣು ಪಡೆದದ್ದರಿಂದ,ಆಹಾರ ಸ್ಪರ್ಧೆಯಲ್ಲಿ ಯಶಸ್ವಿಯಾಗುತ್ತದೆ  

2. ವನ್ಯಜೀವಿ ಸಂರಕ್ಷಣೆಯನ್ನು ಹೇಗೆ ಮಾಡುತ್ತಿದ್ದಾರೆ ?

ಉತ್ತರ : ವನ್ಯಜೀವಿಗಳ ಸಂರಕ್ಷಣೆಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾಡುತ್ತಾ ಬಂದಿದ್ದಾರೆ . ಮೊಸಳೆಗಳಿಗಾಗಿ ಕರ್ನಾಟಕದ ಬೆಂಗಳೂರಿನ ಹತ್ತಿರವಿರುವ ಬನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಆಲಯವನ್ನು ಸ್ಥಾಪಿಸಿ ಪೋಪಿಸುತ್ತಿದ್ದಾರೆ .ವಿಷಕಾರಿ ಹಾವುಗಳನ್ನು ಸಾಕುವ ಕೇಂದ್ರಗಳನ್ನು ಮುಂಬಯಿ , ಮದ್ರಾಸಿನಲ್ಲಿ  ಪ್ರಾರಂಭಿಸಿದ್ದಾರೆ .

3. ಸರೋವರ , ಕೆರೆ ಮತ್ತು ಹೊಂಡಗಳು ಬೇರೆ ಕೆಲಸಕ್ಕೆ ಬಳಕೆಯಾಗುತ್ತಿವೆ , ಏಕೆ ? 

ಉತ್ತರ : ಸರೋವರ , ಕೆರೆ ಮತ್ತು ಹೊಂಡಗಳು ಬೇರೆ ಕೆಲಸಕ್ಕೆ ಬಳಕೆಯಾಗುತ್ತಿರುವುದಕ್ಕೆ ಕಾರಣ ವಿಮಾನ , ರೈಲ್ವೆ ಮತ್ತು ನಿರ್ಮಾಣಕ್ಕಾಗಿ ಅವುಗಳನ್ನು ಮುಚ್ಚುತ್ತಿದ್ದಾರೆ . ಆದರೆ ಇದರಿಂದ ಆಗುವ ಅಸಮತೋಲನದ ಅರಿವಿಲ್ಲ .

4. ಯೋಜನೆ ತಯಾರಿಸುವ ವಿಜ್ಞಾನಿಗಳು ಯಾವ ರೀತಿಯ ಮುನ್ನಚ್ಚರಿಕೆ ವಹಿಸಬೇಕು?

ಉತ್ತರ : ಮುಂದಿನ ಪೀಳಿಗೆಗಾಗಿ ಇಂದೇ ಯೋಜನೆಯನ್ನು ತಯಾರಿಸುವ ವಿಜ್ಞಾನಿಗಳು ನಿಸರ್ಗದ ಆಗುಹೋಗುಗಳನ್ನು ವಿವರವಾಗಿ ಅಭ್ಯಸಿಸಿ ಮಾನವನ ಚಟುವಟಿಕೆ ಮಾನವನಿಗೆ ಕಂಟಕಪ್ರಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ , ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು . 

ಇ . ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ. 

1. ಮೊಸಳೆ , ಹಾವುಗಳ ಸಂರಕ್ಷಣಾ ಕ್ರಮಗಳನ್ನು ತಿಳಿಸಿ. 

ಉತ್ತರ : ಮೊಸಳೆಗಳ ಚರ್ಮಕ್ಕೆ ಪಾಶ್ಚಾತ್ಯರು ಮನ ಸೋತಿದ್ದಾರೆ ಮತ್ತು ಅದರಿಂದ ಅಪಾರವಾದ ಹಣವನ್ನು ಪಡೆಯಲು ಅತಿಯಾಗಿ ಅವುಗಳು ವಿನಾಶದ ಅಂಚನ್ನು ತಲುಪುವ ಸ್ಥಿತಿಗೆ ಬಂದಿತು. ಬನೇರುಘಟ್ಟದ ರಾಷ್ಟ್ರೀಯ ಉದ್ಯಾನದಲ್ಲಿ . ಅವುಗಳನ್ನು ಹೆಚ್ಚಿನ ದಕ್ಷತೆಯಿಂದ ಪಾಲನೆ ಪೋಷಣೆಯನ್ನು  ಮಾಡುತ್ತಿದ್ದಾರೆ . ಅದೇ ರೀತಿ ಹಾವುಗಳನ್ನು ಕಂಡ ಕಂಡ ಕಡೆಯಲ್ಲೆಲ್ಲ ಕೊಂದು , ಕೆಲವು ಜಾತಿಯ ಹಾವುಗಳು ನಶಿಸಿ ಹೋಗಿರುವುದರಿಂದ ವಿಷಕಾರಿ ಹಾವುಗಳನ್ನು ಸಾಕುವ ಕೇಂದ್ರಗಳನ್ನು ಮುಂಬಯಿ ಮತ್ತು ಮದ್ರಾಸಿನಲ್ಲಿ ಪ್ರಾರಂಭಿಸಿದ್ಯಾರೆ .

2. ಕಾಡನ್ನು ನಾಶ ಮಾಡುವುದರಿಂದ ಆಗುವ ದುಪ್ಪರಿಣಾಮಗಳೇನು ?

 ಉತ್ತರ : ಕಾಡನ್ನು ನಾಶ ಮಾಡುವುದರಿಂದ ಅಲ್ಲಿದ್ದ ಹಕ್ಕಿ ‘ ಪಕ್ಷಿಗಳು ಬೇರೆ ತಾಣಕ್ಕೆ ಹೋಗಬೇಕಾಗುತ್ತದೆ . ಮೇವು ಇಲ್ಲದ್ದರಿಂದ ಮಾಯವಾಗುತ್ತವೆ . ಈ ಚಿಗರೆಗಳನ್ನು ಬೇಟೆಯಾಡಿ ಹುಲಿ , ಚಿರತೆ ಮತ್ತು ಸಿಂಹಗಳ ನಾಶವಾಗುತ್ತದೆ . ಅಲ್ಲಿ ಮರೆ ಇಲ್ಲದ್ದರಿಂದ ತೋಳ ಕರಡಿಗಳು ಓಡಿ ಹೋಗುತ್ತವೆ . ಹಣ್ಣುಹಂಪಲುಗಳು ಸಿಗದಿರುವುದರಿಂದ ಇಣಚಿ – ಕಣ್ಮು ಕಪ್ಪಡಿಗಳು ಬೇರೆ ಕಡೆಗೆ ಪ್ರಯಾಣ, ಬೆಳೆ ಕಾಡು – ಪ್ರಾಣಿಗಳಿಗೆ ಆಹಾರ ವಸತಿಯ ಕೊರತೆಯಿಂದ ವಿನಾಶವಾಗುತ್ತದೆ . ಕಾಡುಗಳ ಅಲಭ್ಯತೆಯಿಂದ ಮಳ ಕಡಿಮೆಯಾಗಿ ಬೆ ಜಲ ಅಂತ ರ್ಜಲ ) ಕಡಿಮೆಯಾಗುತ್ತದೆ . ಆಮಜನಕದ ಕೊರತೆ ಮತ್ತು ಇಂಗಾಲದ ಡೈ ಆಕ್ಸಿಡ್ ಹೆಚ್ಚಿ ವಾಯುಮಾಲಿನ್ಯ ಉಂಟಾಗುತ್ತದೆ . ಪ್ರಕೃತಿಯ ಸಮತೋಲನ ತಪ್ಪಿ , ಅಸಮತೋಲನದಿಂದ ಅನೇಕ ದುಪ್ಪರಿಣಾಮಗಳಾಗುತ್ತದೆ .

ಈ , ಕೊಟ್ಟಿರುವ ಪದಗಳನ್ನು ಬಳಸಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಿ.

ನಿರ್ಮಾಣು, ಶತಮಾನ, ಮನಸೋಲು, ಹಿಂಬಾಲಿಸು 

ನದಿಗಳಿಗೆ ಸೇತುವೆಯ ನಿರ್ಮಾಣ ಅಗತ್ಯ

ಶತಮಾನಗಳಿಂದ ಬಂದಿರುವ ಅಂಧಶ್ರದ್ದೆ ತೊಲಗಬೇಕು . 

ಸುಂದರವಾದ ನಿಸರ್ಗದ ಚೆಲುವಿಗೆ ಎಲ್ಲರೂ ಮನ ಸೋಲುವರು .

ಕರು ಹಸುವನ್ನು ಹಿಂಬಾಲಿಸುತ್ತದೆ . 

ಭಾಷಾಭ್ಯಾಸ 

ಅ , ಬಿಟ್ಟಿರುವ ಪದಗಳನ್ನು ಸೂಕ್ತ ಪದಗಳಿಂದ ತುಂಬಿ , ಈ ಕೆಳಗಿನ ಗಾದೆ ಮಾತುಗಳನ್ನು ಪೂರ್ಣಗೊಳಿಸಿ .

  1. ದೂರದ ಬೆಟ್ಟ
  2. ಹಿತ್ತಲ ಗಿಡ 
  3. ತಾಯಿಗಿಂತ ದೇವರಿಲ್ಲ ಉಪ್ಪಿಗಿಂತ
  4. ಕೂತು ಉಣ್ಣುವವನಿಗೆ . 
  5. ಹಸು ಕಪ್ಪಾದರೆ 

ಉತ್ತರಗಳು : 

1 ) ಕಣ್ಣಿಗೆ , ನುಣ್ಣಗೆ

 2 ) ಮದ್ದಲ್ಲ 

3 ) ರುಚಿಯಿಲ್ಲ 

4 ) ಕುಡಿಕೆ ಹೊನ್ನು ಸಾಲುವುದಿಲ್ಲ 

5 ) ಹಾಲು ಕಪ್ಪೇ ?

ಆ . ಪ್ರಾಣಿಗಳ ಹೆಸರುಗಳನ್ನು ಆವರಣದಲ್ಲಿ ನೀಡಲಾಗಿದೆ . ಇವುಗಳಲ್ಲಿ ಸಸ್ಯಾಹಾರಿ ಪ್ರಾಣಿಗಳು ಮಾಂಸಾಹಾರಿ ಪ್ರಾಣಿಗಳು ಹಾಗು ಮಿಶ್ರಾಹಾರಿ ಪ್ರಾಣಿಗಳನ್ನು ವರ್ಗಿಕರಿಸಿ ಬರೆಯಿರಿ .

 ( ಹುಲಿ , ನಾಯಿ , ಚಿರತೆ , ಆನೆ , ಮೊಲ , ಸಿಂಹ , ಜಿಂಕೆ , ತೋಳ , ಹಸು , ಒಂಟೆ , ಬೆಕ್ಕು , ಕುದುರೆ , ಮಾನವ , ಮೊಸಳೆ ) 

ಸಸ್ಯಾಹಾರಿ           ಮಾಂಸಾಹಾರಿ :        ಮಿಶ್ರಾಹಾರಿ 

ಪ್ರಾಣಿಗಳು              ಪ್ರಾಣಿಗಳು               ಪ್ರಾಣಿಗಳು 

ಆನೆ                         ಹುಲಿ                      ನಾಯಿ  

ಮೊಲ                    ನಾಯಿ                    ಮೊಸಳೆ

ಜಿಂಕೆ                      ಚಿರತೆ                    ಮಾನವ 

ಹಸು                       ಸಿಂಹ                     ಒಂಟೆ 

ಕುದುರೆ                ತೋಳ            

ಇ , ಕೆಳಗಿನ ಸಸ್ಯಗಳಿಗೆ ಸಂಬಂಧಿಸಿದ ಮತ್ತು ನೀರಿಗೆ ಸಂಬಂಧಿಸಿದ ಪದಗಳನ್ನು ನೀಡಲಾಗಿದೆ . ಸಸ್ಯಗಳಿಗೆ  ಸಂಬಂಧಿಸಿದ ಪದಗಳಿಗೆ ನೀಲಿ ಶಾಂಯಿಯಲ್ಲೂ ನೀರಿಗೆ ಸಂಬಂಧಿಸಿದ ಪದಗಳಿಗೆ ಕೆಂಪು ಶಾಂಯಿಯಲ್ಲೂ ವೃತ್ತ ಹಾಕಿ , ಎರಡು ಗುಂಪಿನ ಪದಗಳನ್ನು ಪ್ರತೇಕವಾಗಿ ಅಕಾರಾದಿ ಕ್ರಮದಲ್ಲಿ ಜೋಡಿಸಿ , 

ಚಿಗುರುಬಳ್ಳಿಪ್ರವಾಹತೆಂಗುಜಲಪಾತಭತ್ತ
ಬಾವಿಬೇರುನದಿಸೊಪ್ಪುಹೊಲಕಡಲು
ಗದ್ದೆಗರಿಕೆನಲ್ಲಿರಂಬೆಸರೋವರಕೊಂಬೆ
ತಳಿರುಕೊಳಗರಿಕೆಬಳ್ಳಿಹೊಳೆಕಾಂಡ
ಹಳ್ಳ ,ಆಣೆಕಟ್ಟುಪತ್ರೆ ಆಣೆಕಟ್ಟುಮಲ್ಲಿಗೆಹೋಂಡಕಣಿವೆ

ಕಣಿವೆ , ಕಾಂಡ , ಕೊಂಬೆ , ಗದೆ , ಗರಿಕೆ , ಚಿಗುರು , ತಳಿರು , ತೆಂಗು ,

 ಪತ್ರೆ , ಬಳ್ಳಿ , ಬೇರು , ಭತ್ತ , ಮಲ್ಲಿಗೆ , ರೆಂಬೆ , ಸೊಪ್ಪು ,

 ಭಾಷಾ ಚಟುವಟಿಕೆ 

1. ಕಾಡು ನಾಶವಾಗುವುದರಿಂದ ಉಂಟಾಗುವ ತೊಂದರೆಗಳನ್ನು ಪಟ್ಟಿ ಮಾಡಿ 

ಉತ್ತರ : ಕಾಡು ನಾಶವಾಗುವುದರಿಂದ ಉಂಟಾಗುವ ತೊಂದರೆಗಳು : 

  • ಕಾಡು ಪ್ರಾಣಿಗಳ ಸಂತತಿಯ ನಾಶ
  • ಮಳೆಯ ಪುಮಾಣ ಕಡಿಮೆ
  • ಭೂಮಿಯ ಅಂತರ್ಜಲದ ಕೊರತೆ
  • ವಾಯು ಮಾಲಿನ್ಯ
  • ಕಾಡು ಪ್ರಾಣಿಗಳಿಗೆ ಆಹಾರವಸತಿಯ ಕೊರತೆ
  • ಆಮ್ಲಜನಕದ ಕೊರತೆ
  • ಪರಿಸರದ ಅಸಮತೋಲನ 

2 . ಗಿಡ – ಮರ ಸೂರ್ಯೋದಯ , ಪ್ರಾಣಿ ಪಕ್ಷಿಗಳು ಇರುವಂತೆ ಕಲ್ಪಿಸಿಕೊಂಡು ಪ್ರಕೃತಿ ಚಿತ್ರವನ್ನು ಬರೆಯಿರಿ .

( ವಿದ್ಯಾರ್ಥಿಗಳೇ ಸ್ವತಃ ಮಾಡುವುದು )

3 . ಪರಿಸರ ಸಂರಕ್ಷಣೆಯ ಅವಶ್ಯಕತೆ ಕುರಿತು ಒಂದು ಪ್ರಬಂಧವನ್ನು  ಬರೆಯಿರಿ . 

ಉತ್ತರ : ಇಂದಿನ ಬಹುಮುಖ್ಯ ಅವಶ್ಯಕತೆ ಎಂದರೆ ಪರಿಸರ ಸಂರಕ್ಷಣೆ , ನಮ್ಮ ಸುತ್ತಮುತ್ತಲಿನ ಪರಿಸರ ಅಗತ್ಯ . ಮನುಷ್ಯನ ಮತ್ತು ಯಾವುದೇ ಜೀವಿಗಳ ಮೂಲಭೂತ ಅವಶ್ಯಕತೆಗಳಾದ ನೀರು , ಗಾಳಿ , ಆಹಾರ , ಉಡುಪು ಮತ್ತು ವಸತಿಗಳು ಲಭ್ಯವಾಗುವುದೇ ಪರಿಸರದಿಂದ ಇವುಗಳು ನಮಗೆ ಸರಿಯಾದ ಪ್ರಮಾಣದಲ್ಲಿ ಶುದ್ಧವಾಗಿ ದೊರಕದಿದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತದೆ . ಪ್ರಕೃತಿಯು ಸಹಜವಾಗಿ ಸಸ್ಯ ಮತ್ತು ಪ್ರಾಣಿಗಳನ್ನು ಸಮತೋಲನ ಮಾಡಿರುತ್ತದೆ . ಈ ಸಮತೋಲನ ಹಾಗೆಯೇ ಮುಂದುವರಿದರೆ ಆಗ ಎಲ್ಲಾ ಜೀವಿಗಳೂ ಆರೋಗ್ಯದಿಂದ ನೆಮ್ಮದಿಯಿಂದ ಬದುಕಬಹುದು . ಪ್ರಕೃತಿ ನಮಗೆ ಅವಶ್ಯಕವಾಗಿರುವಪ್ನನ್ನು ಖಂಡಿತವಾಗಿಯೂ ಪೂರೈಸುತ್ತದೆ . ಆದರೆ ಮಾನವನು ತನ್ನ ದುರಾಸೆಗಾಗಿ ಈ ಸಮತೋಲನವನ್ನು ಹಾಳು ಮಾಡಿದರೆ ತನ್ನ ಕಾಲ ಮೇಲೆ ತಾನೇ ಕಲ್ಲನ್ನು ಹಾಕಿಕೊಂಡಂತೆ . ಪರಿಸರದಲ್ಲಿ ಎಲ್ಲವೂ ಅಗತ್ಯ . ಸಸ್ಯಗಳು , ನೀರಿನ ಆಕರಗಳು , ಪ್ರಾಣಿಗಳು ಇವೆಲ್ಲವೂ ಸೂಕ್ತ ಪ್ರಮಾಣದಲ್ಲಿದ್ದರೆ ಮನುಷ್ಯನೂ ಸಹ ನೆಮ್ಮದಿಯಾಗಿರಬಹುದು . ಈಗಾಗಲೇ ಸಾಕಷ್ಟು ಪರಿಸರವನ್ನು ಹಾಳು ಮಾಡಿರುವ ನಾವು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಪರಿಸರವನ್ನುಸಂರಕ್ಷಿಸಬೇಕು . ಆದಷ್ಟು ಗಿಡ ಮರಗಳನ್ನು ಅಂತರ್ಜಲವನ್ನು . ಪರಿಸರಮಾಲಿನ್ಯವನ್ನು ಪ್ರತಿಯೊಬ್ಬರೂ ಕೈಗೂಡಿಸಿ , ಶುಚಿಗೊಳಿಸಬೇಕು . ಜೀವನದಲ್ಲಿ ಪರಿಸರ ಸಂರಕ್ಷಣೆ ಎಂಬ ಇದು ನಮ್ಮೆಲ್ಲರ ಕರ್ತವ್ಯ

ಅಭ್ಯಾಸ 

ಆ . ಕೆಳಗಿನ ವಾಕ್ಯಗಳಲ್ಲಿ ಸಂಧಿಯಾಗಿರುವ ಪದಗಳನ್ನು ಗುರುತಿಸಿ 

ನೀನೇಕೆ ನಮ್ಮೊಡನೆ ಊರಿಗೆ ಬರುವುದಿಲ್ಲ ? ” 

ನೀನೇಕೆ , ನಮ್ಮೊಡನೆ , ಊರಿಗೆ – ಲೋಪಸಂಧಿ 

ಹಾಸಿಗೆಯಿದ್ದಷ್ಟು ಕಾಲು ಚಾಚು .

ಹಾಸಿಗೆಯಿದ್ದಷ್ಟು ‘ ಯ ‘ ಕಾರಾಗಮ ಸಂಧಿ 

ಕಾಲನ್ನು – ಲೋಪಸಂಧಿ

FAQ :

1. ಪ್ರಾಣಿ – ಪ್ರಾಣಿಗಳ ನಡುವೆ ಯಾವುದಕ್ಕಾಗಿ ಸ್ಪರ್ಧೆ ನಡೆಯುತ್ತದೆ ? 

ಉತ್ತರ : ಪ್ರಾಣಿ – ಪ್ರಾಣಿಗಳ ನಡುವೆ ಆಹಾರ , ಅಚ್ಚಾದನಗಳಿಗಾಗಿ ( ವಸತಿ , ಬಟ್ಟೆ , ವಸ್ತ್ರ ) ಸ್ಪರ್ಧೆ ನಡೆಯುತ್ತದೆ 

2. ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ ಯಾವುದು ? 

ಉತ್ತರ : ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ ತಿಮಿಂಗಿಲ

3. ಬೀಜ ಪ್ರಸರಣ ಯಾವುದರ ಮೂಲಕ ನಡೆಯುತ್ತದೆ ?

 ಉತ್ತರ : ಬೀಜ ಪ್ರಸರಣ ಕೀಟ , ವಾಯು , ನೀರು ಮೊದಲಾದವುಗಳ ಮೂಲಕ ನಡೆಯುತ್ತದೆ . 

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh