7th Standard Kannada Mailara Mahadeva Notes | 7ನೇ ತರಗತಿ ಮೈಲಾರ ಮಹಾದೇವ ಕನ್ನಡ ನೋಟ್ಸ್

7ನೇ ತರಗತಿ ಮೈಲಾರ ಮಹಾದೇವ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು‌, 7th Standard Mailara Mahadeva Kannada Notes Question Answer Mcq Pdf Download in Kannada Medium Karnataka State Syllabus 2024, Kseeb Solutions for Class 7 Kannada Chapter 5 Notes 7th Class Kannada 5th Lesson Notes Mailara Mahadeva Kannada Notes Pdf 7th Standard Kannada Chapter 5 Notes Mailara Mahadeva Notes in Kannada

7th Standard Mailara Mahadeva Lesson Notes Pdf

Contents hide
mailara mahadeva notes in kannada

ಶಬ್ದಾರ್ಥ : 

ಖಜಾನೆ = ಬೊಕ್ಕಸ , ತಿಜೋರಿ

 ಆತ್ಮಾಹುತಿ = ತನ್ನನ್ನು ತಾನು ಬಲಿಕೊಡುವುದು

 ವಿದೇಶಿ = ಬೇರೆ ದೇಶದ 

ಸಂಚಾಲಕ = ವ್ಯವಸ್ಮಾಪಕ , ವ್ಯವಹಾರವನ್ನು ನಡೆಸಿಕೊಂಡು ಹೋಗುವವರು . 

ಧಕ್ಕೆ = ತೊಂದರೆ

ಅಣಿಯಾಗು = ಸಿದ್ದವಾಗು 

ಶೋಧ = ಹುಡುಕಾಟ 

ಮಡು = ಕೊಳ್ಳ 

ಕಾಲ್ತೆಗೆ = ಓಡಿಹೋಗು 

ದಿಟ್ಟತನ = ಧೈರ್ಯ 

ಗುನುಗು = ಸತತವಾಗಿ ಧ್ವನಿ ಮಾಡು

 ಜೈಲು = ಸೆರೆಮನೆ 

ಓಟಕೀಳು = ಓಡಿಹೋಗು 

ಸದಾಗ್ರಹ = ಸತ್ಯಾಗ್ರಹ 

ಸ್ಥಳಾಂತರ = ಸ್ಥಳ ಬದಲಾವಣೆ

ಅಭ್ಯಾಸ ಪ್ರಶ್ನೆಗಳು 

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :

1. ಮೋಟೆಬೆನ್ನೂರು ಎಂಬ ಹಳ್ಳಿ ಯಾವ ಜಿಲ್ಲೆಯಲ್ಲಿದೆ ? 

ಉತ್ತರ : ಮೋಟೆಬೆನ್ನೂರು ಎಂಬ ಹಳ್ಳಿ ಹಾವೇರಿ ಜಿಲ್ಲೆಯಲ್ಲಿದೆ.

2. ಯಾವ ಬಟ್ಟೆಗಳ ವಿಚಾರ ಯಾವಾಗಲೂ ಮನಸ್ಸಿನಲ್ಲಿ ಗುನುಗುಡುತ್ತಿತ್ತು ? 

ಉತ್ತರ : ಖಾದಿ ಬಟ್ಟೆಗಳ , ವಿಚಾರ ಯಾವಾಗಲೂ ಮೈಲಾರರ ಮನಸ್ಸಿನಲ್ಲಿ ಗುನುಗುಡುತ್ತಿತ್ತು 

3. ಮಹಾದೇವನಿಗೆ ಗಾಂಧಿಯವರೊಡನೆ ಯಾವ ಆಶ್ರಮದಲ್ಲಿ ಇರಬೇಕೆಂದು ಆಸಯಾಯಿತು ?

ಉತ್ತರ : ಮಹಾದೇವನಿಗೆ ಗಾಂಧಿಯವರೊಡನೆ ಸಬರಮತಿ ಆಶ್ರಮದಲ್ಲಿ ಇರಬೇಕೆಂದು ಆಸೆಯಾಯಿತು 

4. ವಿಜಾಪುರ ಜಿಲ್ಲೆಯಲ್ಲಿ ಯಾವ ಗ್ರಾಮದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು 

ವಿಜಾಪುರ ಜಿಲ್ಲೆಯಲ್ಲಿ ‘ ಕಲಾದಗಿ ‘ ಎಂಬ ಗ್ರಾಮದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು . 

5. 1942 ರಲ್ಲಿ ಗಾಂಧೀಜಿಯವರು ಯಾವ ಘೋಷಣೆ ಮಾಡಿದರು? 

1942 ರಲ್ಲಿ ಗಾಂಧೀಜಿಯವರು ಬ್ರಿಟಿಷರಿಗೆ , ‘ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ‘ ಅಂದರೆ Quit India ಎಂಬ ಮಾಡಿದರು.

6. ಮಹಾದೇವ ಅವರು ಎಲ್ಲಿ ಪೋಲಿಸರ ಬಂದೂಕು – ಅಪಹರಿಸಿದರು ? 

ಉತ್ತರ : ಮಹಾದೇವ ಅವರು ಹೊನ್ನತ್ತಿ ಎಂಬಲ್ಲಿ ಪೋಲಿಸರ ಬಂದೂಕು ಅಪಹರಿಸಿದರು . 

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ : 

1. ಮಹಾದೇವ ಕಲಾದಗಿ ಎಂಬ ಒಂದು ಗ್ರಾಮಕ್ಕೆ ಹೋಗಿ ಏನು ತಿಳಿದುಕೊಂಡರು ?

ಉತ್ತರ : ಮಹಾದೇವನು 12-13 ರ ವಯಸ್ಸಿನಲ್ಲಿ ವಿಜಾಪುರ ಜಿಲ್ಲೆಯ ಕಲಾದಗಿ ಎಂಬ ಗ್ರಾಮಕ್ಕೆ ಹೋದನು .ಅಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು . ಮಹಾದೇವನು ಖಾದಿ ಬಟ್ಟೆ ತಯಾರು
ಮಾಡುವುದನ್ನು ಕಲಿತು ತಿಳಿದುಕೊಂಡರು . 

2 . ದಂಡಿಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಹಾದೇವರಿಗೆ ಆದ.ಶಿಕ್ಷೆ ಏನು ?

 ಉತ್ತರ : ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಸೆರೆಮನೆ ವಾಸದ ಶಿಕ್ಷೆಯಾಯಿತು .

3. ಮಹಾದೇವ ಮತ್ತು ಸಿದ್ದಮತಿ ಇಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಮಾಡಿದ ಕೆಲಸಗಳೇನು ?

ಉತ್ತರ : ಗಂಡ – ಹೆಂಡತಿಯರಿಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಅನೇಕ ಕೆಲಸಗಳನ್ನು ಮಾಡಿದರು .ಚರಕದಿಂದ ನೂಲು ತೆಗೆಯುವುದು , ಪ್ರಕೃತಿ ಚಿಕಿತ್ಸೆ , ವ್ಯಾಯಾಮ ಮುಂತಾದವನ್ನು ಹಳ್ಳಿಯ ಜನರಿಗೆ ಅಭ್ಯಾಸ ಮಾಡಿಸಿದರು. ಇಲ್ಲಿ ತಯಾರಾಗುತ್ತಿದ್ದ ಖಾದಿಯನ್ನು ಊರೂರಿಗೆ ಹೊತ್ತು ಮಾರುತ್ತಿದ್ದರು . 

4. ಮಹಾದೇವ ರಕ್ತದ ಮಡುವಿನಲ್ಲಿ ಬಿದ್ದದ್ದು ಏಕೆ ?

ಉತ್ತರ : 1943 ನೇ ಏಪ್ರಿಲ್ 1 ರಂದು ಹೊಸರಿತ್ತಿಯಲ್ಲಿ ಬ್ರಿಟಿಷರನ್ನು ಎದುರಿಸ ಬೇಕೆಂದು ಯೋಜನೆ ಹಾಕಿಕೊಂಡಿದ್ದರು . ದೇವಸ್ನಾನದ ಪಕ್ಕದಲೇ ಖಜಾನೆಯಿತ್ತು . ಮಹಾದೇವರು ಆಕ್ರಮಣ ಖಜಾನೆಯ ಬೀಗ ಮುರಿಯಲು ನಿರತರಾದಾಗ ಪೊಲಿಸರಲ್ಲೊಬ್ಬನು ಹಾರಿಸಿದ ಗುಂಡು ಮಹಾದೇವರ ಎದೆಯನ್ನು ತೂರಿತು .

ಇ ) ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ : 

1. ಮಹಾದೇವ ಅವರು ಜೈಲಿನಿಂದ ಬಿಡುಗಡೆಯಾದಮೇಲೆ ಮಾಡುದ ಕಾರ್ಯವೇನು ?

ಉತ್ತರ : ಮಹಾದೇವ ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ಅವರ ದೇಹದ ಶಿಸ್ತುಬನಿಗದ ಬಗೆಗೆ ಕಾಳಜಿ ಉಂಟಾಯಿತು . ಶಿಸ್ತುಬದ್ಧವಾದ ವ್ಯಾಯಾಮವನ್ನು ಕಲಿತರು .
ಔಷಧಗಳ ಶಾಸ್ತ್ರವನ್ನು ಅಭ್ಯಾಸ ಮಾಡಿದರು . ಚರಕದಿಂದ ನೂಲು ತೆಗೆಯುವುದು ,ಪ್ರಕೃತಿ ಚಿಕಿತ್ಸೆ , ವ್ಯಾಯಾಮ ಇವನ್ನೆಲ್ಲ ಜನರಿಗೆ ಅಭ್ಯಾಸ ಮಾಡಿಸಿದರು ಸೇವಾಶ್ರಮವನ್ನು ಪ್ರಾರಂಭಿಸಿ ಹಳ್ಳಿ ಜನರ ಜನರ ಸೇವೆ ಮಾಡುತ್ತಿದ್ದರು . ಅಲ್ಲಿಖಾದಿಯನ್ನು ತಯಾರಿಸುತ್ತಿದ್ದರು . ಆ ಖಾದಿಯನ್ನು ಊರೂರಿಗೆ ತೆಗೆದುಕೊಂಡುಮಾರಾಟ ಮಾಡುತ್ತಿದ್ದರು . ಆದ್ದರಿಂದ ಆ ಖಾದಿಯು ಮಹಾದೇವನ ಖಾದಿ ಎಂದೇ ಪ್ರಸಿದ್ಧಿ ಪಡೆಯಿತು .

2. ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕಾದರೆ ಮಾಡಬೇಕೆಂದು ಮಹಾದೇವ ಯೋಚಿಸಿದರು ? 

ಉತ್ತರ : ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕಾದ ಗರೆ ಅವರು ನಡೆಸುತ್ತಿರುವ ಆಡಳಿತಕ್ಕೆ ಧಕ್ಕೆ ಉಂಟುಮಾಡಬೇಕು . ಅವರಿಗೆ ಆಡಳಿತ ನಡೆಸುವುದು ಸಾಧ್ಯವಿ ಎನಿಸುವಷ್ಟು ಕಿರುಕುಳ ಕೊಡಬೇಕು
ಎಂದು ಯೋಚಿಸಿ ಮಹಾದೇವ ತಮ್ಮ ಸಂಗಡಿಗರೊಂದಿಗೆ ಇಂಥ ಸಾಹಸಕ್ಕೆ ಕೈ ಹಾಕಿದರು . ಎಂಬಲ್ಲಿ ಪೋಲಿಸರ ಬಂದೂಕು ಅಪಹರಿಸಿದರು . ರೈಲು ನಿಲ್ಯಾಣವನ್ನು ಸುಟ್ಟು ಹಾಕಿದರು . ಹೊನ್ನತ್ತಿ
ಬಾಳೆ ಹೊಸೂರಿನ ಪೋಲಿಸ್ ಕೇಂದ್ರವನ್ನು ಸುಟ್ಟರು . ಇವರ ಇಂತಹ ಕೃತ್ಯಗಳಿಂದ ಬ್ರಿಟಿಷ್ ಸರ್ಕಾರ ನಡುಗತು . ಈ ರೀತಿ ಬ್ರಿಟಿಷರಿಗೆ ತೊಂದರೆ ಕೊಟ್ಟರು . 

3. ಹೊಸರಿತ್ತಿಯಲ್ಲಿ ನಡೆದ ಘಟನೆಗಳಾವುವು ?

ಉತ್ತರ : ಹಾವೇರಿ ಜಿಲ್ಲೆಯ ಹೊಸ ರೀತಿಯಲ್ಲಿ ಕಂದಾಯವನ್ನು ಬಲವಂತವಾಗಿ ವಸೂಲಿ ಮಾಡಿ ಜನರನ್ನು ಹಿಂಸಿಸುತ್ತಿದ್ದ ಬ್ರಿಟಿಷ್ ಸರ್ಕಾರದ ಕೇಂದ್ರವಿತ್ತು . ಅದನ್ನು ಆಕ್ರಮಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿ ಪತ್ನಿಯನ್ನು ಹುಬ್ಬಳ್ಳಿಗೆ ಕಳುಹಿಸಿದರು .ಹೊಸರಿತ್ತಿಯ ಸಮೀಪದ ವೀರಭದ್ರ ದೇವಾಲಯದ್ರದ ಪೋಲಿಸರ ತುಕಡಿಯಿತ್ತು .ಪಕ್ಕದಲೇ ಬ್ರಿಟಿಷ್ ಖಜಾನೆ ಮಹಾದೇವನು ತನ್ನ ‘ ಮುತ್ತಿಗೆ ಹಾಕಿ , ಬೀಗ ತೆಗೆಯುತ್ತಿದ್ದಾಗ ಬಲಿಯಾದರು . 

ಈ ) ಖಾಲಿ ಜಾಗವನ್ನು ಸಾಕ್ಷ ಪದಗಳಿಂದ ಭರ್ತಿ ಮಾಡಿ : 

ಪ್ರಾಥಮಿಕ ನಂತರದ ವಿದ್ಯಾಭ್ಯಾಸಕ್ಕಾಗಿ ಮಹಾದೇವ ಹಂಸಭಾವಿ ಶಾಲೆಗೆ ಹೋದರು .

ಮಹಾದೇವೆ ದಂಡಿ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು . 

ಹಾವೇರಿ ಜಿಲ್ಲಾ ಹೊಸರಿತ್ತಿಯಲ್ಲಿದ್ದ ಸರಕಾರದ ಕೇಂದ್ರ ಕಂದಾಯ  ವಸೂಲಿ ಮಾಡುತ್ತಿತ್ತು . 

ಸ್ವಾತಂತ್ರ್ಯ ಚಳುವಳಿಗೆ ಬಾಳು ಮೀಸಲಾಗಿಸಬೇಕು . 

ಉ ) ಸ್ವಾತಂತ್ರ್ಯ ಚಳುವಳಿಗೆ ಸಂಬಂಧಪಟ್ಟ ಹತ್ತು ಪದಗಳನ್ನು ಬರೆಯಿರಿ :

ದೇಶಭಕ್ತರು – ಸಾಹಸ 

ಜೈಲುವಾಸ – ಹೋರಾಟ 

ಘೋಷಣೆ – ಚಳುವಳಿ 

ಸತ್ಯಾಗ್ರಹ – ತ್ಯಾಗ

 ಬಂದೂಕು – ಧೈರ್ಯ 

ಊ ) ಕೆಳಗೆ ಸೂಚಿಸಿರುವ ಊರುಗಳು ಯಾವ ಜಿಲ್ಲೆಯಲ್ಲಿವೆ ಎಂಬುದನ್ನು ಬರೆಯಿರಿ : 

  1. ಮೋಟೆಬೆನ್ನೂರು – ಹಾವೇರಿ ಜಿಲ್ಲೆ 
  2. ಹೊಸರಿತ್ತಿ – ಹಾವೇರಿ ಜಿಲ್ಲೆ 
  3. ಕಲಾದಗಿ – ವಿಜಾಪುರ ಜಿಲ್ಲೆ 

ಋ ) ಕೆಳಗೆ ಸೂಚಿಸಿರುವ ಪದಗಳನ್ನು ಬಳಸಿ ವಾಕ್ಯಗಳನ್ನು ರಚಿಸಿ : 

1 , ಸ್ವತಂತ್ರ 

ಸ್ವತಂತ್ರ ಎನ್ನುವುದು ಸೇಚ್ಛಾಚಾರವಲ್ಲ .

 2 , ಆಡಳಿತ 

ಸುಮಾರು 300 ವರ್ಷಗಳ ಕಾಲ ಬ್ರಿಟಿಷರು ಭಾರತದಲ್ಲಿ ಆಡಳಿತ ನಡೆಸಿದರು . 

3 , ದೇಶಭಕ್ತ

 ದೇಶಕ್ಕಾಗಿ ದುಡಿಯುವವನೇ ನಿಜವಾದ ದೇಶಭಕ್ತ . 

4 , ಅಸಹಕಾರ

ಅಸಹಕಾರದಿಂದ ಯಾವ ಕೆಲಸವೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ . 

5. ಚಳುವಳಿ

ಸ್ವಾತಂತ್ರ ಪಡೆಯಲು ದೇಶದಾದಂತ ಅನೇಕ ಚಳುವಳಿಗಳು ನಡೆದವು .

ಎ) ಉದಾಹರಣೆಯಲ್ಲಿ ನೀಡಿದಂತೆ ಕೆಳಗಿನ ವಾಕ್ಯಗಳಲ್ಲಿ ಸರ್ವನಾಮಗಳನ್ನು ಗುರುತಿಸಿ ಅವು ಯಾವ ರೀತಿಯ ಸರ್ವನಾಮಗಳೆಂದು ತಿಳಿಸಿ.

ಕ್ರಂ .ಸಂಖ್ಯೆವಾಕ್ಯಗಳುಸರ್ವನಾಮ ಪದಗಳುಸರ್ವನಾಮ ವಿಧ
ಉದಾ , ಕಷ್ಟ ಬಂದಾಗ ನಾವು ಯಾರಿಗೂ ಸಹಾಯ ಮಾಡದಿದ್ದರೆ ನಮಗೆ ಯಾರೂ ಸಹಾಯ ಮಾಡಲಾರರುನಾವು , ನಮಗೆಉತ್ತಮ ಪುರುಷ ಸರ್ವನಾಮ
1ನೀನು ಸುಳ್ಳುಗಾರನೆಂದು ಗೊತ್ತಾದ ಮೇಲೆ ನೀನು ನಿಜ ಹೇಳಿದರೂ ನಿನ್ನನ್ನು ಯಾರೂ ನಂಬುವುದಿಲ್ಲನೀನು , ನೀನು ನಿನ್ನನ್ನುಮಾಧ್ಯಮ ಪುರುಷ  ಸರ್ವನಾಮ
2ಅವನಿಗೆ ಅವನ ಅಕ್ಕ ಒಂದು ಪುಸ್ತಕ ಕೊಟ್ಟಳುಅವನಿಗೆ ಅವನಪ್ರಥಮ ಪುರುಷ
3ಅವನು ತನ್ನ ಪುಸ್ತಕವನ್ನು ಬಹಳ ಮೆಚ್ಚಿಕೊಂಡಅವನು ತನ್ನಪ್ರಥಮ ಪುರುಷ ಆತ್ಮಾರ್ಥಕ
4ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕುನಮ್ಮ ,ನಮ್ಮ ,ನಾವೇಉತ್ತಮ ಪುರುಷ ಸರ್ವನಾಮ
5ನಾವು ಊರಿಗೆ ಹೋಗಿ ನಿಮ್ಮ ಸಾಮಾನುಗಳನ್ನೂ ಅವುಗಳನ್ನಿಟ್ಟು ರುವ ಪೆಟ್ಟಿಗೆಗಳನ್ನೂ ತರುತ್ತೇವೆನಾವು, ನಿಮ್ಮಉತ್ತಮ ಪುರುಷ ಮಧ್ಯಮಪುರುಷ  ಸರ್ವನಾಮ
ಕ್ರಂ .ಸಂಖ್ಯೆವಾಕ್ಯಗಳುವಿಶೇಶ್ಯವಿಶೇಷಣ
1ತೋಳವು ದೊಡ್ಡ ನಾಯಿಯಂತೆ ಇದೆನಾಯಿದೊಡ್ಡ
2ಮಿನುಗುತ್ತಿರುವ ನಕ್ಷತ್ರಗಳನ್ನು ನೋಡುತ್ತಿರಲು ನನಗೆ ಇಷ್ಟನಕ್ಷತ್ರಮಿನುಗು
3ಭಾರತೀಯ ವಿಜ್ಞಾನಿಗಳು ತುಂಬಾ ಬುದ್ದಿವಂತರುವಿಜ್ಞಾನಿಭಾರತೀಯ
4ಸುಸ್ತಾದ ಯಾತ್ರಿಕರು ತಂಗಲು ತಂಗುದಾಣಗಳಿರಬೇಕುಯಾತ್ರಿಕರುಸುಸ್ತಾದ

ಲೇಖಕರ ಪರಿಚಯ 

ಇಂದಿನ ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ ಸಲುವಾಗಿ ಪಠ್ಯಪುಸ್ತಕ ರಚನಾ ಸಮಿತಿಯವರು ಈ ಸ್ವಾತಂತ್ರ  ಹೋರಾಟಗಾರನ ಘಟನೆಯನ್ನು ಪಠ್ಯವಾಗಿಟ್ಟಿದ್ದಾರೆ . ನಮ್ಮ ದೇಶದ ಸ್ವಾತಂತ್ರ ಹೋರಾಟದಲ್ಲಿ ಸಾವಿರಾರು ಜನ ತಮ್ಮ ಜೀವವನ್ನು ಬಲಿಕೊಟ್ಟಿದ್ದಾರೆ .ಇಂದು ನಾವು ಸ್ವತಂತ್ರತೆಯ  ಫಲವನ್ನು ಅನುಭವಿಸುತ್ತಿರುವುದು . ಅವರ ಬಲಿದಾನದಿಂದ ಅಂತಹವರನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ ನಮ್ಮ ಮೇಲೆ ಅನೇಕರ ಋಣವಿದೆ . 

ಮುಖ್ಯಾಂಶಗಳು 

ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲ . ಎಲ್ಲೆಲ್ಲೂ ಸ್ವತಂತ್ರದ ಕಹಳೆಯೂದುತ್ತಿತ್ತು . ಅನೇಕ ದೇಶ ಪ್ರೇಮಿಗಳು ಜನರನ್ನು ಜಾಗೃತಗೊಳಿಸುತ್ತಿದ್ದರು . ಮೈಲಾರ ಮಹದೇವನು 8-10 ವರ್ಷಗಳ ಹುಡುಗನಿದ್ದಾಗಲೇ , ದೇಶ ಭಕ್ತರ ಭಾಷಣದಿಂದ ಆಕರ್ಷಿತನಾಗಿ ತಾನೂ ಸ್ವತಂತ್ರ ಚಳುವಳಿಯಲ್ಲಿ ಧುಮುಕಿದನು . ಮಹಾತ್ಮಗಾಂಧೀಜಿಯವರು ಹೇಳಿದ ಖಾದಿ ಉಡುಪು ಅವನಲ್ಲಿ ಹೆಚ್ಚಿನ ಆಸಕ್ತಿ ವಡಿಸಿತು . 

ಖಾದಿಯನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡು , ಖಾದಿ ಪ್ರಚಾರವನ್ನು ಕೈಗೊಂಡನು . ಸಬರಮತಿ ಆಶ್ರಮಕ್ಕೆ ಹೋಗಿ ದಂಡಿಯಾತ್ರೆಯಲ್ಲಿ ಪಾಲ್ಗೊಂಡರು . ಅದರಿಂದ 6 ತಿಂಗಳು ಜೈಲುವಾಸ ಅನುಭವಿಸಬೇಕಾಯಿತು . ವಾಪಸ್ ಬಂದ ಮೇಲೆ ಮಹಾದೇವನನ್ನು ಕರ್ನಾಟಕದ ಸ್ವಾತಂತ್ರ್ಯ ಸೇನಾನಿ ಎಂಬುದಾಗಿಂತ ಗುರುತಿಸುತ್ತಿದ್ದರು . ತಮ್ಮ ಹೆಂಡತಿ ಸಿದ್ದಮ್ಮನನ್ನು ಸಿದ್ದವತಿ ಎಂದು ಕರೆಯುತ್ತಿದ್ದರು . ಸಿದ್ದಮ್ಮ ಸಬರಮತಿಗೆ ಬಂದು ಅಸಹಕಾರ ಚಳುವಳಿ ಭಾಗವಹಿ ಸಿದ್ದರಿಂದ ಜೈಲು ಸೇರಿದರು . ಹಿಂಡಲಗಾ ಜೈಲಿನಲ್ಲಿದ್ದಾಗ ಮಹಾದೇವರನ್ನು ಗಾಂಧೀಜಿಯವರು ಭೇಟಿ ನೀಡಿ ಪ್ರೋತ್ಸಾಹಿಸಿದರು . ಮುಂದೆ ಮಹಾದೇವರು ವ್ಯಾಯಾಮ ಕಲಿತು , ಔಷಧಗಳ ಶಾಸ್ತ್ರವನ್ನು ಅಭ್ಯಾಸ ಮಾಡಿದರು . ಒಂದು ಸೇವಾಶ್ರಮವನ್ನು ಪ್ರಾರಂಭಿಸಿ ಹಳ್ಳಿಯ ‘ ಜನರ ಸೇವೆ ಮಾಡುತ್ತಿದ್ದರು . ಇಲ್ಲಿ ತಯಾರಾದ ಖಾದಿಯನ್ನು ಊರೂರಿಗೆ ತೆಗೆದುಕೊಂಡು ಎಂದೇ ಪ್ರಸಿದ್ದಿಯಾಯಿತು . ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಖಾದಿ ‘ ಹೋಗಿ ಮಾರಾಟ ಮಾಡುತ್ತಿದ್ದರು . ಇದು ‘ ಸಿ ‘ ಗಾಂಧೀಜಿಯವರ ಘೋಷಣೆಯನ್ನು ಪ್ರಚಾರ ಮಾಡುತ್ತಿದ್ದರು . 1943 ರ ಮಾರ್ಚಿ 21 ರಂದು ಹೊಸರತಿಯ ಸಮೀಪದ ವೀರಭದ್ರು ದೇವಾಲಯದ ಪಕ್ಕ ಇದ್ದ ಮುತ್ತಿಗೆ ಹಾಕಿದರು . ಮಹಾದೇವನ ತಂಡದವರಿಗೂ ಪೋಲಿಸರಿಗೂ ನಡೆದ ಘರ್ಷಣೆಯಲ್ಲಿ ಮಹಾದೇವರು ” ಹಾದೇವರ ಎದೆಗೆ ಗುಂಡು ಹಾರಿತು . ದೇಶಕ್ಕಾಗಿ ತಮ್ಮನೇ ಪಣವಾಗಿಟ್ಟು ಹೋರಾಟ ಮಾಡಿ ಹುತಾತ್ಮರಾದರು . 

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *