7ನೇ ತರಗತಿ ಚಗಳಿ ಇರುವೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 7th Standard Chagali Iruve Kannada Notes Question Answer Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Chapter 6 Notes 7th Class Kannada 6th Chapter Notes Summary Pdf 7th Kannada Chagali Iruve Question Answer Chagali Iruve Notes Kannada Pdf
7th Standard Kannada 6th Lesson Notes Pdf
ಲೇಖಕರ ಪರಿಚಯ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಲೇಖಕರು ರಾಷ್ಟ್ರ ಕವಿ ಕುವೆಂಪುರವರ ಪುತ್ರ 1938 ರ ಸೆಪ್ಟೆಂಬರ್ 08 ರಂದು,ಶಿವಮೊಗ್ಗದಲ್ಲಿ ಜನಿಸಿದರು ತೋಟಗಾರಿಕೆ,ಛಾಯಾಗ್ರಹಣ , ಬರವಣಿಗೆ ಚಿತ್ರಕಲೆ ಇವರ ಹವ್ಯಾಸ . ಕತೆ , ಪರಿಸರ , ಶಿಕಾರಿ ಸಂಬಂಧಿತ ಬರಹಗಳು ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ .ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಭಾರತೀಯ ಭಾಪ್ರಾ ಪರಿಷತ್ ಪ್ರಶಸ್ತಿ ದೊರೆತಿವೆ . ಇವರ ಸಮಗ್ರ ಸಾಹಿತ್ಯಕ್ಕಾಗಿ ‘ ಪಂಪ ಪ್ರಶಸ್ತಿ ‘ ನೀಡಲಾಗಿದೆ . ಇಂದಿನ ಮಕ್ಕಳು ಪರಿಸರವನ್ನು ವೀಕ್ಷಿಸುವುದು ಕಡಿಮೆ . ನಮ್ಮ ಸುತ್ತಮುತ್ತಲು ಅನೇಕ ಕೌತುಕಗಳು ಘಟಿಸುತ್ತಲೇ ಇರುತ್ತದೆ . ಅನೇಕ ಜೀವಿಗಳಿಂದ ನಾವು ಕಲಿಯಬೇಕಾದುದು ಬಹಳಪ್ಪಿರುತ್ತದೆ . ಅದನ್ನು ಕಲಿಯುವ ನಿಟ್ಟಿನಲ್ಲಿ ಈ ಗದ್ಯಪಾಠವೊಂದು ಪ್ರಯತ್ನ ಇಲ್ಲಿ ಲೇಖಕರು ಚಗಳಿ ಇರುವೆಗಳ ಪರಿಚಯ ಮಾಡಿಕೊಟ್ಟಿದ್ದಾರೆ .
7th Standard Kannada 6st Lesson Question Answers
ಶಬ್ದಾರ್ಥ :
- ಸಂಕೀರ್ಣ – ಜಟಿಲವಾದ
- ಸಂವಹನ = ಸಾಗಿಸುವುದು
- ಸಂಘಜೀವಿ = ಸಮೂಹದಲ್ಲಿ ವಾಸಿಸುವ , ಸಮೂಹ ಜೀವಿ
- ಲಾರ್ವಾ = ಮೊಟ್ಟೆಯಿಂದ ಹೊರಬಂದ ಮರಿ ಇರುವೆ
- ನೇವರಿಸು = ಸವರು
- ಸವಿಸು = ಒಸರು , ಜಿನುಗು
- ಸಿಂಪರಿಸು = ಚಿಮುಕಿಸು ಸನ್ನದ
- ಉಚ್ಚಿ = ಎಂಜಲು
- ಉಪದ್ರವಕಾರಿ = ತೊಂದರೆ ಕೊಡುವ
- ಸಮುದಾಯ = ಗುಂಪು , ಸಮೂಹ
- ಸಂಯೋಜನೆ = ಕ್ರಮಬದ್ಧವಾಗಿ
- ಒಸರು = ಜಿನುಗು
- ಬೆಸೆ = ಕೂಡಿಸು
ಅಭ್ಯಾಸ ಪ್ರಶ್ನೆಗಳು
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1. ಕೊಟ್ಟೆ ಎಂದರೇನು ?
ಉತ್ತರ : ಚಗಳಿ ಇರುವೆಗಳು ಎಲೆಗಳನ್ನು ಒಂದಕ್ಕೊಂದು ಸೇರಿಸಿ ಕಟ್ಟುವ ಗೂಡನ್ನು ಕೊಟ್ಟೆ ‘ ಎನ್ನುತ್ತಾರೆ.
2. ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ಏನನ್ನು ಬಳಸುತ್ತವೆ ?
ಉತ್ತರ : ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ತಮ್ಮ ದೇಹದಿಂದ ಉತ್ಪತ್ತಿಯಾಗುವ ರೇಷ್ಮೆಯಂತ ನೂಲನ್ನು ಬಳಸುತ್ತದೆ .
3. ಇವು ತಮ್ಮ ಸಂಗಡಿಗರಿಗೆ ಯಾವ ರಾಸಾಯನಿಕದ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ ?
ಉತ್ತರ : ತಮ್ಮ ಸಂಗಡಿಗರಿಗೆ ಫಿರಮೊನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸುವುದರ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ .
4. ಚಗಳಿ ಇರುವೆಗಳಂತೆಯೇ ಸಂಘಜೀವನವನ್ನು ನಡೆಸುವ ಇತರ ಜೀವಿಗಳು ಯಾವುವು ?
ಉತ್ತರ : ಚಗಳಿ ಇರುವೆಗಳಂತೆಯೇ ಸಂಘಜೀವನವನ್ನು ನಡೆಸುವ ಇತರ ಜೀವಿಗಳು ಜೇನುಹುಳು , ಕರಿಗೊದ್ದ . ಕೆಂಪು ಇರುವೆ …. ಇತ್ಯಾದಿ .
ಆ. ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
1. ಚಗಳಿ ಇರುವೆಗಳ ಶಿಸ್ತಿಗೆ ಒಂದು ಉದಾಹರಣೆ ಕೊಡಿ.
ಉತ್ತರ : ಕಟ್ಟುವ ರೀತಿ ನಿಜವಾಗಲೂ ಇರುವೆಗಳು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತದೆ . ಎಲೆಯನ್ನು ಬಗ್ಗಿಸಿ ಇರುವೆಗಳು ಒಂದರ ಕಾಲು ಇನ್ನೊಂದು ಹಿಡಿದುಕೊಂಡು ಜೋತಾಡುತ್ತಾ ಕಟ್ಟುವುದು .
2. ಕೆಲಸಗಾರ ಇರುವೆಗಳ ಕೆಲಸವೇನು ?
ಉತ್ತರ : ಕೆಲಸಗಾರ ಇರುವೆಗಳು ತಿಗಣೆ ಮತ್ತು ಜಿಗಿ ಹುಳುಗಳನ್ನು ಹಿಡಿದು ತಂದು ತಾವು ಕೊಟ್ಟೆ ಕಟ್ಟಿದ ಮರದ ಕೊಂಬೆಗಳ ಮೇಲೆ ಅವುಗಳನ್ನು ಸಾಕುವುದು , ಚಗಳಿಗಳ ಜೀವನದಲ್ಲಿ ಇದಕ್ಕೆ ಅಪಾರ ಪ್ರಾಮುಖ್ಯತೆ ಇದೆ . ಅವು ತರುವ ಕೀಟಗಳ ಉಚ್ಚಿಷ್ಯ ( ಎಂಜಲು)ಸಿಹಿಯಾದ ಮಧುವಾಗಿರುವುದರಿಂದ ಅದು ಇರುವೆಗಳಿಗೆ ಆಹಾರವಾಗುತ್ತದೆ.
3. ಚಗಳಿ ಇರುವೆಗಳನ್ನು ಹಿಮ್ಮೆಟ್ಟಿಸುವುದು ಮನುಷ್ಕರಿಗೂ ಏಕೆ ಕಷ್ಟ ? ಏಕೆ ?
ಉತ್ತರ : ಚಗಳಿ ಇರುವೆಗಳಲ್ಲಿ ಶಿಸ್ತು , ಧೈರ್ಯ ಮತ್ತು ಸಹ ಕಪ್ಪ , ಇವುಗಳನ್ನು ಹಿಡಿಯಲು ಹೋದರೆ ಬದಲಿಗೆ ತಿರುಗಿ ನಿಂತು ಕಚ್ಚಲು ಹೋದರೆ ಓಡುವುದರ ಬದಲಿಗೆ ತಿರುಗಿ ನಿಂತು ನೆಗೆದು ಕಚ್ಚಲು ಸಿದ್ದವಾಗುತ್ತವೆ. ಅಷ್ಟೆ ಅಲ್ಲದೇ ತನ್ನ ಹಿಂಭಾಗವನ್ನು ಮೇಲೆತ್ತಿ ಹೊಟ್ಟೆ ಅಡಿಯಲ್ಲಿರುವ ಗ್ರಂಥಿಗಳಿಂದ ಅಪಾಯದ ಪಿರಮೋನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸುತ್ತವೆ.
ಇ. ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ ?
1. ಚಗಳಿ ಇರುವೆಗಳು ತಮ್ಮ ಗೂಡನ್ನು ಹೇಗೆ ನಿರ್ಮಿಸುತ್ತವೆ ?
ಉತ್ತರ : ಚಗಳಿ ಇರುವೆಗಳು ಎಲ್ಲಿ ಗೂಡು ಕಟ್ಟಬೇಕು ಎಂದು ನಿರ್ಧರಿಸಿ , ಮೊದಲು ಎರಡೋ ಮೂರೋ ಅಕ್ಕಪಕ್ಕದ ಎಲೆಗಳನ್ನು ಸೇರಿಸಿ ಪೊಟ್ಟಣ ಕಟ್ಟಿದಂತೆ ಗೂಡು ಕಟ್ಟುತ್ತವೆ . ನಂತರ ಅಕ್ಕಪಕ್ಕದ ಹಲವಾರು ಎಲೆಗಳನ್ನು ಹೊಂದಿಸಿ ಮಾಳಿಗೆಗಳನ್ನು ನಿರ್ಮಿಸುತ್ತಾ ಗೂಡನ್ನು ದೊಡ್ಡ ಮಾಡುತ್ತವೆ . ಇದರ ಶರೀರಕ್ಕಿಂತ ನೂರಾರು ಪಟ್ಟು ವಿಸ್ತಾರವಾಗಿಯೂಬಲವಾಗಿಯೂ ಇರುವ ಎಲೆಗಳನ್ನು ಬಗ್ಗಿಸಿ ಅದನ್ನು ದಾರದಿಂದಅಂಚನ್ನು ಹೊಲೆಯಲು ಅನೇಕ ಇರುವೆಗಳು ಒಂದರ ಕಾಲನ್ನುಇನ್ನೊಂದು ಹಿಡಿದುಕೊಂಡು ಜೋತಾಡುತ್ತಾ ಮೇಲಿನಿಂದ ಕೆಳಗೆ ಬರುತ್ತದೆ . ಈ ಕಾರ್ಯದಲ್ಲಿ ಶಿಸ್ತಿನ ಸಿಪಾಯಿಯಂತೆ ಕರಾರುವಕ್ಕಾಗಿ ಕೆಲಸ ಮಾಡುತ್ತವೆ . ಈ ರೀತಿ ಗೂಡನ್ನು ನಿರ್ಮಿಸುತ್ತದೆ .
2. ಚಗಳಿ ಇರುವೆಗಳು ಉಪಕಾರಿಯೂ ಹೌದು , ಉಪದ್ರವಕಾರಿಯೂ ಹೌದು .ಈ ಹೇಳಿಕೆಯನ್ನು ವಿವರಿಸಿ .
ಉತ್ತರ : ಚಗಳಿ ಇರುವೆಗಳು ತಮ್ಮ ಆಹಾರಕ್ಕಾಗಿ ಲಕ್ಷಾಂತರ ಕೀಟಗಳನ್ನು ಹಿಡಿದು ತಂದು ಕೊಲ್ಲುವುದರಿಂದ ಸಹಾಯ ಮಾಡಿದಂತಾಗುತ್ತದೆ . ಈ ಕೀಟಗಳಿಂದ ಆಗುವ ಹಾನಿಗಳು ತಪ್ಪಿ ಇರುವೆಗಳು ರೈತಮಿತ್ರ ಎನಿಸಿಕೊಳ್ಳುತ್ತದೆ . ಹಾಗೆಯೇ ಜಿಗಿ ಹುಳುಗಳನ್ನೂ , ತಿಗಣೆಗಳನ್ನು ಗೂಡು ಮಾಡಿರುವ ಮರ ಗಿಡಗಳಲ್ಲೆಲ್ಲಾ ತಂದು ಸಾಕುವುದರಿಂದ ಈ ಉಪದ್ರವಕಾರಿ . ಹಚ್ಚಿ ತೊಂದರೆ ಕೊಡುತ್ತದೆ . ಆದುದರಿಂದ ಇದನ್ನು ಉಪಕ್ರಿಯೂ ಹೌದು ಉಪದ್ರಕಾರಿಗಳು ಹೌದು ಎಂಬುದನ್ನು ತಿಳಿಯಬಹುದು .
3. ಕಷ್ಟಕ್ಕೆ ಹೆದರಿ ಓಡಬಾರದು , ತಿರುಗಿ ನಿಂತು ಎದುರಿಸಬೇಕೆಂಬ ಸಂದೇಶವನ್ನು ನಾವು ಇವುಗಳ ಜೀವನದಿಂದ ಹೇಗೆ ಕಲಿಯಬಹುದು?
ಉತ್ತರ : ಮನುಷ್ಕನೇನಾದರೂ ಚಗಳಿ ಇರುವೆಗಳನ್ನು ಹಿಡಿಯಲು ಅಥವಾ ಹಿಂಸಿಸಲು ಹೋದರೆ , ಅವು ತಮ್ಮ ಸ್ವಾರ್ಥವನ್ನು ಮಾತ್ರ ನೋಡಿಕೊಂಡು ಓಡಿ ಹೋಗುವುದಿಲ್ಲ . ಅದರ ಬದಲಿಗೆ ತಿರುಗಿ ನಿಂತು , ನೆಗೆದು ಕಚ್ಚಲು ಸಿದ್ದವಾಗುತ್ತದೆ . ಎಲ್ಲ ಚಗಳಿ ಅಪೇ ಅಲ್ಲ ತನ್ನ ಹೊಟ್ಟೆಯ ಅಡಿಯಲ್ಲಿರುವ ಗಂಥಿಗಳಿಂದ ಅಪಾಯದ ಫೆರಮೋನ್ ಎಂಬ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸಿ , ಕೆಲವೇ ಕ್ಷಣಗಳಲಿರ್ಲಿ ಇರುವೆಗಳೂ ಹಾಜರಾಗುವಂತೆ ಮಾಡುತ್ತ ಇದನ್ನು ನೋಡಿ ನಾವು ಕಪ್ಪಕ್ಕೆ ಹೆದರಿ ನಿಂತು ಎದುರಿಸಬೇಕೆಂಬ ಸಂ ಕಲಿಯಬಹುದು . ಓಡಬಾರದು , ತಿರುಗಿ ನಿಂತು ಎದುರಿಸಬೇಕು ಸಂದೇಶವನ್ನ ಕಲಿಯಬಹುದು .
ಈ. ಖಾಲಿ ಜಾಗವನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ.
1. ಚಗಳಿ ಇರುವೆಗಳಿಗೆ ಮೂಲ ರಾಣಿ ಇರುವೆ .
2. ದನ ಸಾಕುವ ಗೋಪಾಲಕರನ್ನು ಹೋಲುವ ಇರುವೆಗಳು ಕೆಲಸಗಾರ ಇರುವೆಗಳು
3. ಚಗಳಿ ಇರುವೆಗಳ ಗೂಡನ್ನು ಕೊಟ್ಟೆ ಎಂದು ಕರೆಯುತ್ತಾರೆ .
4. ಒಂದು ಚಗಳಿ ಇರುವೆ ಗೂಡಿನಲ್ಲಿ ಸುಮಾರು 5 ರಿಂದ 10 ಲಕ್ಷ ಇರುವೆಗಳು ಇರುತ್ತವೆ.
5. ಇರುವೆಗಳಿಂದ ಒಸರುವ ರಾಸಾಯನಿಕ ಫಿರಮೋನ್
ಭಾಷಾ ಚಟುವಟಿಕೆ
ಅ . ಕೆಳಗಿನ ಪಟ್ಟಿಯಲ್ಲಿ ಅನೇಕ ವಾಕ್ಯಗಳನ್ನು ಒಳಗೊಂಡಿರುವ ಪದಗಳಿವೆ . ನಿಮ್ಮಿಂದ ಎಷ್ಟು ವಾಕ್ಯಗಳನ್ನು ಪತ್ತೆ ಹಚ್ಚಲು ಸಾಧ್ಯ ? ಪ್ರಯತ್ನಿಸಿ.
ಮಾದರಿ : ಮುಂಜಾನೆ ಬೇಗ ಏಳಬೇಕು .
- ಮುಂಜಾನೆ ಬೇಗ ಏಳಬೇಕು .
- ಭಾನುವಾರ ಶಾಲೆಗೆ ರಜೆ .
- ಮುಂಜಾನೆ ಕೋಳಿಯು ಕೂಗುತ್ತದೆ .
- ರಮೇಶ ಶಾಲೆಗೆ ಹೋದನು .
- ಸಲೀಮ ಒಳ್ಳೆಯವನು .
- ಸೂರ್ಯ ಬೆಳಕು ಬೀರುತ್ತಾನೆ .
ಅ . ಕೆಳಗಿನ ವಾಕ್ಯಗಳನ್ನು ಗಮನಿಸಿ ಓದಿ , ಅಲ್ಲಿ ಯಾವ ಭಾವನೆ ಪ್ರಮುಖವಾಗಿ ವ್ಯಕ್ತವಾಗಿದೆ ಎಂಬುದನ್ನು ಗಮನಿಸಿ ಅಂಥಹದೇ ಇದು ವಾಕ್ಯವನ್ನು ನೀವು ರಚಿಸಿರಿ ,
ಪ್ರಶ್ನೆ 1 . ಸ್ವಾಮಿ ! ಈ ಕುರ್ಚಿಯಲ್ಲಿ ದಯಮಾಡಿ ಕುಳಿತುಕೊಳ್ಳಿ ( ಗೌರವ )
ಉತ್ತರ : ಗುರುಗಳ , ವಂದನೆಗಳು , ದಯಮಾಡಿ ಒಳಗೆ ಬನ್ನಿ ..
ಪ್ರಶ್ನೆ 2 . ದೇವ ದೇವ ನಮಗೆ ಒಳಿತನ್ನು ಮಾಡು . ( ಪ್ರಾರ್ಥನೆ )
ಉತ್ತರ : ದೇವರೇ , ಎಲ್ಲರಿಗೂ ಒಳ್ಳೆಯದನ್ನು ಮಾಡು .
ಪ್ರಶ್ನೆ 3 . ಅಯ್ಯೋ ! ಮಗು ಎಡವಿ ಬಿದ್ದಿದೆ . ( ಕಾಳಜಿ )
ಉತ್ತರ : ಅಯೋ , ಹಾಲೆಲ್ಲಾ ಚೆಲ್ಲಿ ಹೋಯಿತು .
ಪ್ರಶ್ನೆ 4 . ಭಲೇ ಭಲೇ ! ನೀನು ನಮ್ಮ ಊರಿನ ಮಾನ ಕಾಪಾಡಿ ! ( ಮೆಚ್ಚುಗೆ )
ಉತ್ತರ : ಭೇಷ್ , ಅಂತೂ ನೀನು ಗೆದ್ದಿರುವುದು ಎಲ್ಲರಿಗೂ ಸಂತೋಷ .
ಇ . ಯಾವ ರೀತಿ ಓದಿದರೂ ಅರ್ಥ ವ್ಯತ್ಯಾಸವಾಗದ ಪದಗಳನ್ನು ಗಮನಿಸಿ.
ಉತ್ತರ : ನಯನ , ದಡದ , ಕನಕ ನಮನ , ಜಲಜ , ಗುನುಗು … ಇತ್ಯಾದಿ .
ವ್ಯಾಕರಣ
ವಿಭಕ್ತಿ ಪ್ರತ್ಯಯಗಳು
ಅ , ಅನ್ನು , ಇಂದ , ಗೆ ಮತ್ತು ಅಲ್ಲಿ , ಈ ಪಾಠದಲ್ಲಿ ಬರುವ ಕೆಲವು ಪದಗಳು :
FAQ :
ಉತ್ತರ : ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ತಮ್ಮ ದೇಹದಿಂದ ಉತ್ಪತ್ತಿಯಾಗುವ ರೇಷ್ಮೆಯಂತ ನೂಲನ್ನು ಬಳಸುತ್ತದೆ .
ಉತ್ತರ : ಚಗಳಿ ಇರುವೆಗಳಂತೆಯೇ ಸಂಘಜೀವನವನ್ನು ನಡೆಸುವ ಇತರ ಜೀವಿಗಳು ಜೇನುಹುಳು , ಕರಿಗೊದ್ದ. ಕೆಂಪು ಇರುವೆ …. ಇತ್ಯಾದಿ .
ಉತ್ತರ : ಚಗಳಿ ಇರುವೆಗಳು ಎಲೆಗಳನ್ನು ಒಂದಕ್ಕೊಂದು ಸೇರಿಸಿ ಕಟ್ಟುವ ಗೂಡನ್ನು ಕೊಟ್ಟೆ ‘ ಎನ್ನುತ್ತಾರೆ.
ಇತರೆ ವಿಷಯಗಳು :
7th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.