7th Standard Billa Habba Nataka Kannada Notes | 7ನೇ ತರಗತಿ ಬಿಲ್ಲ ಹಬ್ಬ ಕನ್ನಡ ನೋಟ್ಸ್

7ನೇ ತರಗತಿ ಬಿಲ್ಲ ಹಬ್ಬ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 7th Standard Kannada Billa Habba Kannada Notes Question Answer Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Chapter 7 Notes 7th Class Kannada 7th Lesson Notes billa habba nataka kannada notes

ಅಭ್ಯಾಸ ಪ್ರಶ್ನೆಗಳು

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ , 

1. ಕೃಷ್ಣ ಯಾರ ಸೊಂಟವನ್ನು ಮುರಿದನು ?

 ಉತ್ತರ : ಕೃಷ್ಣನು ಶಕಟನ ಸೊಂಟವನ್ನು ಮುರಿದನು. 

2. ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಏನಾದ ? 

ಉತ್ತರ : ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಬೇಲದ ಹಣ್ಣು ಬಡಿಯೋ ಬಡಿಗೆಯಾದನು . 

3. ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಯಾರು ?

ಉತ್ತರ : ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಶೈಲಿಕ ಮತ್ತು ದುರ್ವಿಧ ಎಂಬ ಗೂಢಚಾರರು . 

4. ವಸುದೇವನಿಗೆ ಮಕ್ಕಳ ವಿಚಾರ ಹೇಳಿದವರು ಯಾರು ?

ಉತ್ತರ : ವಸುದೇವನಿಗೆ ಅವನ ಮಕ್ಕಳ ವಿಚಾರವನ್ನು ಅಕ್ರೂರನು ಹೇಳಿದನು . 

5. ವಸುದೇವ ಹೇಳುವಂತೆ ರಾಜಕಾರ್ಯ ಹೇಗಿರುತ್ತದೆ ? 

ಉತ್ತರ : ವಸುದೇವ ಹೇಳುವಂತೆ ರಾಜಕಾರ್ಯವು ಹತ್ತು ಜನ ಕೂತಾಗ ಜೋಲಿ , ಏಕಾಂಗಿಯಾಗಿದ್ದಾಗ ಒತ್ತಿದರೂ ಮುಚ್ಚದ ರೆಪ್ಪೆ. 

6. ನಂದ ಯಾರೆಂದು ಕಂಸ ಹೇಳುತ್ತಾನೆ ?

ಉತ್ತರ : ನಂದ ದೇವಕಿಯ ಗಂಡ ವಸುದೇವನ ಬಾಲ್ಯಸ್ನೇಹಿತ , ಪರಮಾಪ್ತ ಪ್ರಾಣಮಿತ್ರ , 

ಆ ) ಕೊಡುವ ಪುಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ 

1. ಕೃಷ್ಣ ಯಾರು ಯಾರನ್ನು ಕೊಂದ ? 

ಉತ್ತರ : ಕೃಪ್ಪನು ಹಾಲು ಕೊಡಲು ಹೋದ ಪೂತನಿಯ ರಕ್ತ ಹೀರಿ ಕೊಂದನು . ಸವಾರಿ ಮಾಡು ಎಂದು ಬೆನ್ನೊಡಿದ ಶಕಟನ ಸೊಂಟ ಮುರಿದು ಕೊಂದನು . ತೃಣಾವರ್ತ ಆಟದ ಬುಗುರಿಯಾಗಿಸಾವನ್ನಪ್ಪಿದ . ಧೇನುಕ ಬೇಲದ ಹಣ್ಣು ಬಡಿಯೊ ಬಡಿಗೆಯಂತೆ ಬಡಿದು ಕೊಂದನು . 

2. ಕ್ರೀಡಾಗಾರದಲ್ಲಿ ಆಗಿದ್ದ ಗುಪ್ತ ಏರ್ಪಾಡು ಏನು ? 

ಉತ್ತರ : ಕ್ರೀಡಾಗಾರದ ಹೆಬ್ಬಾಗಿಲಿನ ಬಾಗಿಲುವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ ಮಾಡಿ , ಬಾಗಿಲವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ .. ಬಾಗಿಲವಾಡದ ಕಮಾನಿನ
ಮೇಲೆ ಗಾಜಿನ ರಾಜಗೋಪುರ.. … ಅದೇನಾದ್ರೂ ತಲೇ ಮೇಲೆ ಬಿತ್ತು ಅಂದ್ರೆ.. ..
..ಶ್ರೀಮದ್ ರಮಾರಮಣ ಗೋವಿಂದಾ ಗೋವಿಂದ . . .

3. ವಸುದೇವನು ತನ್ನ ಮಕ್ಕಳನ್ನು ನೆನೆದು ವ್ಯಥಪಟ್ಟ ಬಗೆ ಹೇಗೆ ?

 ಉತ್ತರ : ವಸುದೇವನು ತನ್ನ ಮಕ್ಕಳನ್ನು ನೆನೆಸಿಕೊಂಡು ಹದಿನಾರು ‘ ವರ್ಷಗಳಿಂದ ಅವರನ್ನು ನೋಡದೆ ತಪಿಸುತ್ತಿದ್ದನು . ತಮ್ಮ ಮಕ್ಕಳನ್ನು ತಾವು ಅಡಿಸಲಿಲ್ಲ , ಆರೈಕೆ ಮಾಡಲಿಲ್ಲ , ತೊದಲು ನುಡಿ ಕೇಳಲಿಲ್ಲ ತೂಗಲಿಲ್ಲ , ಜೋಗುಳ ಹಾಡಲಿಲ್ಲ ಎಂದು ವ್ಯಥೆ ಪಟ್ಟನು . 

4. ಕಂಸ ತಂಗಿಯ ಮೇಲಿನ ಪ್ರೀತಿ ಎಂಥದೊಂದು ಹೇಳಿಕೊಂಡಿದ್ದಾನೆ ? 

ಉತ್ತರ : ಕಂಸನು ತನಗೆ ತನ್ನ ತಂಗಿಯ ಮೇಲೆ ಅಪಾರ ಪ್ರೀತಿಯಿದೆ ಆದ್ದರಿಂದಲೇ ಸಂಕೊಲೆ ಹಾಕಿಸಿದರೂ ಅದನ್ನು ಶುದ್ಧ ಅಪರಂಜಿಯಿಂದ ಮಾಡಿದ್ದು , ಕೊರಳಿಗೆ ಮೂರಳೆ , ಕೈಗೆ ಎರಡೆಳೆ , ಕಾಲಿಗೆ ಒಂದೆಳೆಯನ್ನು – ಈ ಎಲ್ಲವನ್ನು ಚಿನ್ನದಿಂದಲೇ ಮಾಡಿಸಿರುವುದು . ಮಾಡಿಸಿ 25 ವರ್ಷಗಳಾದರೂ ಸ್ವಲ್ಪವೂ ಕಪ್ಪಾಗಿಲ್ಲ ಅದು ಪ್ರೀತಿ ಅಂದರೆ ಎಂದು ದೇವಕಿ – ವಸುದೇವನ ಮುಂದೆ ಹೇಳಿಕೊಂಡಿದ್ದಾನೆ . 

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯ ಉತ್ತರಿಸಿ , 

1 . ಗೂಢಚಾರರು ಯಾವುದರ ಬಗ್ಗೆ ಶೋಧನೆ ಮಾಡುತ್ತಿದ್ದಾರೆ ? ವಿವರಿಸಿ . 

ಉತ್ತರ : ಕೃಷ್ಣನು ಯಾರು , ಗೊಲ್ಲರ ಹುಡುಗನಾದ ಕೃಷ್ಮನಿಗೆ ರಾಕ್ಷಸರನ್ನೆಲ್ಲಾ ಸಾಯಿಸುವ ಅಗಾಧವಾದ ಶಕ್ತಿಯು ಎಲ್ಲಿಂದ ಬಂತು . ಯಾರು ಅವನಿಗೆ ಈ ಶಕ್ತಿಯನ್ನು ಕೊಟ್ಟಿದ್ದಾರೆ ಎಂಬುದರ ಬಗೆ ಗೂಢಚಾರರು ಶೋಧನೆ ಮಾಡುತ್ತಿದ್ದರು. ಕೃಷ್ಣನ  ತೊಂದರೆಯನ್ನು ಸಹಿಸಲಾರದೆ ಅವನನ್ನು ಹೇಗಾದರೂ ಮಾಡಿ ಸಾಯಸಿಬೇಕೆಂದು ಕಂಸನು ನಾನಾ ತರಹ ಉಪಾಯಗಳನ್ನು ಹೂಡುತ್ತಾನೆ . ಚಿಕ್ಕ ಮಗು ಎಂದು ಪೂತನಿಯನ್ನು ಕಳಿಸಿರುತ್ತಾನೆ . ನಂತರ ಶಕಟ , ತೃಣಾವರ್ತ , ಧೇನುಕ ಮೊದಲಾದ ರಾಕ್ಷಸರೆಲ್ಲ ಸತ್ತು ಹೋಗುತ್ತಾರೆ . ಅಗಾಧವಾದ ಗೋವರ್ಧನ ಬೆಟ್ಟವನ್ನು ಯಕಶ್ಚಿತ್ ಛತ್ರಿಯಾಗಿ ಮಾಡಿಕೊಂಡ ಕೃಷ್ಣನ ಬಗ್ಗೆ ಕಂಸನಿಗೆ ತುಂಬಾ ಕೋಪವಿರುತ್ತದೆ . ಆದ್ದರಿಂದ ಅವನು ಯಾರು , ಏನು ಎಂದು – ವಿಚಾರಿಸಲು ಗುಪ್ತಾಚರರನ್ನು ನೇಮಿಸಲು ಕಂಸನು ತನ್ನ ಮಂತ್ರಿಗೆ ಹೇಳಿರುತ್ತಾನೆ . ಅವರು ಅವನ ಬಗ್ಗೆ ತಿಳಿದುಕೊಳ್ಳುವ ಶೋಧನೆ ಕೊನೆ ಹಂತಕ್ಕೆ ಬಂದಿದೆ ಎಂದು ಮಂತ್ರಿಯು ಹೇಳುತ್ತಾನೆ 

2. ಕೃಷ್ಣನನ್ನು ಕೊಲ್ಲಲು ದುರ್ವಿಧ – ಶೈಲಿಕರು ಮಾಡಿದ್ದ – ಏರ್ಪಾಡುಗಳೇನು ? 

ಉತ್ತರ : ಕೃಷ್ಣ ತನ್ನ ಶತೃ , ಕೃಷ್ಣನಿಂದ ತನಗೆ ಸಾವು ಬರಬಹುದೆಂದು ಭಯದಿಂದ ಕಂಸನ್ನು ಕೃಷ್ಣನನ್ನು ಸಾಯಿಸಲು ಅನೇಕ ಉಪಾಯಗಳನ್ನು ಹೂಡುತ್ತಾನೆ . ಆದರೆ ಸಾಯಿಸಲೆಂದು ಹೋದವರೇ ಸತ್ತು ಹೋಗುತ್ತಿದ್ದುದನ್ನು ಕಂಡು ಈ ಹೊಸ ಉಪಾಯವಾದ ‘ ಬಿಲ್ಲಹಬ್ಬ ‘ ವನ್ನು ಆಯೋಚಿಸಿರುತ್ತಾರೆ . ಬಿಲ್ಲಹಬ್ಬಕ್ಕೆ ಬರುವ ಸ್ಪರ್ಧಾರ್ಥಿಗಳಲ್ಲಿ ಕೃಷ್ಣನೂ ಒಬ್ಬನಾಗಿರುತ್ತಾನೆ . ಕ್ರೀಡಾಂಗಣದ ಹೆಬ್ಬಾಗಿಲಿನ ಬಾಗಿಲವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ , ಅದರ ಮೇಲೆ ಗಾಜಿ ರಾಜಗೋಪುರವಿರುವ ಏರ್ಪಾಡು ಆಗಿರುತ್ತದೆ .ಕೃಷ್ಣ ಆ ದ್ವಾರದಲ್ಲಿ ಬರುವಾಗ ಒಂದು ಸಣ್ಣ ಕೀಲಿ ಕೈಯನ್ನು ಎಳೆಯುವ ಸಿದ್ಧತೆ ಮಾಡಿರುತ್ತಾರೆ , ಆ ಕೀಲಿ ಕೈ ಎಳೆದರೆ ಮೇಲಿನ ರಾಜಗೊಪುರದ ಸಮೇತ ಕೆಳಗೆ ಬೀಳುವಾಗ ಕಿರುಗತ್ತಿಯು ತಲೆಯ ಮೇಲೆ ಬಿದ್ದು ಕೆಳಗಿರುವ ವ್ಯಕ್ತಿ ಸಾಯುವಂತೆ ಮಾಡಿರುತ್ತಾರೆ . ಪಟ್ಟದ ಆನೆಯಾದ ಕುವಲಯಾಪೀಡಕ್ಕೆ ಔಪ . ಆಕ್ರಮಣ ಮಾಡುವಂತೆ ತರಬೇತಿ ಕೊಟ್ಟಿರುತ್ತಾರೆ . ಈ ರೀತಿ ಕೃಷ್ಣನನ್ನು ಕೋಲನ್ನು ದುರ್ವಿಧ – ಶೈಲಿಕರು ಯೋಜನೆ ಹೂಡಿರುತ್ತಾರೆ . 

3. ಕಂಸ ದೇವಕಿಯಿಂದ ಕೃಷ್ಮನ ಬಗ್ಗೆ ತಿಳಿಯಲು ಹೋಗಿ , ನಿರಾಶನಾದದ್ದು ಹೇಗೆ ? 

ಉತ್ತರ : ಕಂಸನು ದೇವಕಿಯ ಅಷ್ಟಮ ಪುತ್ರ , ತನ್ನನ್ನು ಕೊಲ್ಲುತ್ತಾನೆ ಎಂಬ ಮಾತಿನಿಂದ ಕಳವಳ ಪಟ್ಟುಕೊಂಡು ಅವನಿಗಾಗಿ ಹುಡುಕುತ್ತಿರುತ್ತಾನೆ . ದೇವಕಿಯನೇ ಎಲ್ಲಿ ಬಚ್ಚಿಟ್ಟಿದ್ದೀಯಾ ಹೇಳು , ಹೇಳಿದರೆ ನನ್ನ ರಾಜ್ಯವನ್ನೆಲ್ಲಾ ಕೊಟ್ಟು ಬಿಡುತ್ತೇನೆ , ರಾಜ್ಯ , ಕೋಶ , ಪಗಡಿ ಎಲ್ಲವನ್ನೂ ನಿನ್ನ ಗಂಡನಿಗೆ ಕೊಡುತ್ತೇನೆ ಹೇಳು ಎಂದಾಗ ಅಸಹಾಯಕಳಾದ ಅವಳು ಅಳುತ್ತಾಳೆ . ಗೋಕುಲದಲ್ಲಿರುವ ಕೃಷ್ಮ ನಿನ್ನ ಮಗನೇ ಎಂದಾಗ ಅಲ್ಲ ಎಂದು ಹೇಳುತ್ತಾಳೆ . ಪರಿಪರಿಯಾಗಿ ಬೇಡಿಕೊಂಡರೂ ಏನೂ ವಿಷಯ ಗೊತ್ತಾಗದೆ ನಿರಾಶನಾಗಿ ಹಿಂತಿರುಗುತ್ತಾನೆ .

ಈ ವಾಕ್ಯಗಳನ್ನು ಹೇಳಿಕೆಗಳನ್ನು ಯಾರು ಯಾರಿಗೆ . ಯಾವಾಗಿ ಹೇಳಿದರು / ತಿಳಿಸಿರಿ ? 

1 .” ಹೌದು ಒಡೆಯ – ಕ್ರೀಡಾಂಗಣಕ್ಕೆ ಇರೋರು ಒಂದೇ ಹೆಬ್ಬಾಗಿಲು  “

ಉತ್ತರ :ಈ ಮಾತನ್ನು ಕಂಸನಿಗೆ ಕೃಷ್ಣನನ್ನು ಸಾಯಿಸಲು ತಾನು ಮಾಡಿಸಿದ ಏರ್ಪಡಿಸಿದ  ಬಗ್ಗೆ ಹೇಳುವಾಗ ಹೇಳಿದ ಮಾತು .  

2 . ” ಮಂಡೇಲಿ ಕೊಂಚ ಮಾಂಸ ಇರಬೇಕು 

ಉತ್ತರ : ಈ ಮಾತನ್ನು ಕಂಸನು ಮಂತ್ರಿಗೆ ಹೇಳಿದನು . ಕಂಸನು ಕೃಷ್ಣನ ಬಗ್ಗೆ ತಿಳಿದುಕೊಳ್ಳಬೇಕೆಂದು ಮತಿಯನ್ನು ಕರೆದು ಕೂರಲು ಹೇಳಿದಾಗ ಮಂತ್ರಿಯು ವಿನಯವಾಗಿ ನಿರಾಕರಿಸಿದ ಸಂದರ್ಭದಲ್ಲಿ ಹೇಳಿದ್ದು , 

3. ” ನಿಮ್ಮ ಅಣ್ಣನಿಗೆ ಸ್ವಲ್ಪ ಹಾಲಾದರೂ ಕೊಡು ? 

ಉತ್ತರ : ಈ ಮಾತನ್ನು ಕಂಸನು ತಮ್ಮನ್ನು ನೋಡಲು ಬಂದಾಗ ವಸುದೇವ ದೇವಕಿಗೆ ಹೇಳಿದ ಮಾತು . 

4. ” ಕೊಲ್ಲಲು ಬಂದವರನ್ನೆಲ್ಲಾ ಅವನೇ ಕೊಂದುಬಿಟ್ಟ ” 

ಉತ್ತರ : ಕಂಸ ದೇವಕಿಯ ಹತ್ತಿರ ಕೃಪ್ಪನ ಬಗ್ಗೆ ಹೇಳುವಾಗ ಈ ಮಾತನ್ನು ಹೇಳಿದನು . 

ಉ ) ಹೊಂದಿಸಿ ಬರೆಯಿರಿ : 

 

  1. ಒಡೆಯ        ಕುವಲಯಾಪೀಡ
  2. ಶಿಲ್ಪ             ಶಕಟ 

     3 , ವೈದ್ಯ           ಗೋವರ್ಧನ 

     4 , ಆನೆ             ದುರ್ವಿಧ 

  1. ಬೆಟ್ಟ            ಶೈಲಿಕ

                            ಧೇನುಕ 

                            ಕಂಸ 

ಉತ್ತರಗಳು : 

1 ) ಕಂಸ ,

 2 ) ಶೈಲಿಕ 

3 ) ದುರ್ವಿಧ

 4 ) ಕುವಲಯಾಪೀಡ 

5 ) ಗೋವರ್ಧನ 

ಉ) ಕೆಳಗೆ ಕೊಟ್ಟಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ, ವಾಕ್ಯ ರಚಿಸಿ.

ಲೋಕಾಭಿರಾಮ : ಸಂಜೆಯ ವೇಳೆಯಲ್ಲಿ ಸ್ನೇಹಿತರು ಪರಸ್ಪರ ಲೋಕಾಭಿರಾಮವಾಗಿ ಚರ್ಚಿಸುತ್ತಿದ್ದರು . 

ಪರಾಂಬರಿಸು : ಪಾರಿಚಾರಿಕೆಯರು ಮಾಡಿದ ಕೆಲಸವನ್ನು ಒಡತಿ ಪರಾಂಬರಿಸುತ್ತಿದ್ದಳು . 

ಅಪರಂಜಿ : ಅಪರಂಜಿ ಚಿನ್ನದ ಒಡವೆಗಳು ಮೋಹಕವಾಗಿದ್ದವು . 

ಸೆರೆಮನೆ : ಸೆರೆಮನೆಯಲ್ಲಿರುವವರೆಲ್ಲರೂ ಅಪರಾಧಿಗಳಾಗಿರುವುದಿಲ್ಲ . 

ಸಂಕೊಲೆ : ಸಂಕೊಲೆ ಎಂದರೆ ಚಿನ್ನದ್ದಾರೆ ಬಂಧನವೇ , 

ಬೊಗಳೆ : ಯಾವುದೇ ವಿಷಯದಲ್ಲಿಯ ಬೊಗಳೆ ಮಾಡುವುದು ಸರಿಯಲ್ಲ .

ಅಭ್ಯಾಸ

ಅ . ಕೆಳಗಿನ ವಾಕ್ಯಗಳಲ್ಲಿ ಕರ್ಮಪದ , ಕರ್ತೃಪದ ಮತ್ತು ಕ್ರಿಯಾಪದಗಳನ್ನು ಉತ್ತರ : ಕ್ರಸಂ . ವಾಕ್ಯಗಳು ಕರ್ತೃಪದ ಕರ್ಮಪದ ಕ್ರಿಯಾಪದ 

ಕ್ರಂ . ಸಂಖ್ಯೆವಾಕ್ಯಗಳುಕರ್ತೃಪದಕರ್ಮಪದಕ್ರಿಯಾಪದ
1ಉಮಾ ಹಾಡನ್ನು ಹಾಡಿದಳುಉಮಾಹಾಡನ್ನುಹಾಡಿದಳು
2ಕೇಶವನು ಕುಂಬಳಕಾಯಿಯನ್ನು ಕುಂಬಳಕಾಯಿಯನ್ನು ಕೊಯ್ದನುಕೇಶವನುಕುಂಬಳಕಾಯಿಯನ್ನುಕುಂಬಳಕಾಯಿಯನ್ನು
3ಗಣೇಶ ಗಡಿಗೆಯನ್ನು ಒಡೆದನುಗಣೇಶಗಡಿಗೆಯನ್ನುಬಿಡಿಸಿದಳು
4ಹಸೀನ ಕೊಡೆ ಬಿಡಿಸಿದಳುಹಸೀನಕೊಡೆಬಿಡಿಸಿದಳು
5ರಜಿನ ಸಿನಿಮಾ ನೋಡಿದಳು .ರಜಿನಸಿನಿಮಾನೋಡಿದಳು
6ಅಧ್ಯಾಪಕರು ಪಾಠ ಬೋಧಿಸಿದರುಅಧ್ಯಾಪಕರುಪಾಠಬೋಧಿಸಿದರು

ಆ . ಕೆಳಗಿನ ವಾಕ್ಯಗಳಲ್ಲಿ ಕ್ರಿಯಾಪದಗಳನ್ನೂ , ಕ್ರಿಯಾಪದದ ವಿಧಗಳನ್ನೂ ಸೂಚಿಸಿ : 

ಕ್ರಂ . ಸಂಖ್ಯೆವಾಕ್ಯಗಳುಕ್ರಿಯಾಪದಕ್ರಿಯಾಪದದ ವಿಧ
1ರೈತರು ಕಾಳುಗಳನ್ನು ಬಿತ್ತಿದರುಬಿತ್ತಿದರುಭೂತಕಾಲ
2ಅಧ್ಯಾಪಕರು ಸಿನಿಮಾ ತೋರಿಸುತ್ತಾರೆ .ತೋರಿಸುತ್ತಾರೆವರ್ತ್ಮನ ಕಾಲ
3ನನ್ನ ಅಕ್ಕ ಭಾವ ಮುಂದಿನ ತಿಂಗಳು ಬರುವರುಬರುವರುಭವಿಷ್ಯತ್  ಕಾಲ
4ಬೆಳಿಗ್ಗೆ ಕೋಳಿ ಕೂಗುತ್ತದೆ .ಕೂಗುತ್ತದೆವರ್ತಮಾನಕಾಲ

ಲೇಖಕರ ಪರಿಚಯ : – 

ಎಚ್.ಎಸ್ . ವೆಂಕಟೇಶಮೂರ್ತಿ ಇವರು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಜನಿಸಿದರು . ಕನ್ನಡ ಪರ ಪ್ರಾಧ್ಯಾಪಕರು ಹಾಗೂ ಬಹುಮುಖ ಪ್ರತಿಭೆಯ ಸಾಹಿತಿ . ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ . ‘ ಋತುವಿಲಾಸ ‘ ಎಂಬ ಇವರ ಅನುವಾದಿತ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ .  ಕರ್ನಾಟಕ ರಾಜ್ಯೋತ್ಸವ ಪುಶಸ್ತಿ ಮತ್ತು ದೇವರಾಜ ಬಹದ್ದೂರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ . ಇವರು ‘ ಕನ್ನಡದ ಕಥನ ಕವನಗಳು ‘ ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಗಳಿಸಿದ್ಯಾರೆ . ಇವರ ಪ್ರಮುಖ ಕವನ ಸಂಕಲನಗಳು ಸಿಂದಾಬಾದನ ಆತ್ಮಕಥೆ , ಕ್ರಿಯಾಪರ್ವ ಇತ್ಯಾದಿ ಹಾಗೂ ಪ್ರಮುಖ ನಾಟಕಗಳು ಊರ್ಮಿಳಾ ಹೂವಿ , ಕತ್ತಲೆಗೆ ಎಷ್ಟು ಮುಖ , ಚಿತ್ರಪಟ , ರಾಮಾಯಾಣ ಇತ್ಯಾದಿ . 

ಮುಖ್ಯಾಂಶಗಳು : 

‘ ಬಿಲ್ಲ .ಹಬ್ಬ ‘ ಎಂಬುದು ಒಂದು ನಾಟಕ , ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ನಾಟಕವು ರಮ್ಯವಾದದ್ದು ಮತ್ತು ದೃಶ್ಯಮಾಧ್ಯಮವಾಗಿರುವುದರಿಂದ ಜೀವಂತಿಕೆಯೇ ಪ್ರಧಾನಲಕ್ಷಣವಾಗಿದೆ . ನಾಟಕಗಳು ಆಯಾ ಕಾಲಮಾನದ ಸಾಮಾಜಿಕ , ರಾಜಕೀಯ ವ್ಯವಸ್ಥೆಗಳ ಕೈಗನ್ನಡಿಯಾಗಿರುತ್ತವೆ . ಪ್ರಸ್ತುತ ನಾಟಕವು ಪೌರಾಣಿಕ ಕಥಾಹಿನ್ನೆಲೆಯನ್ನು ಹೊಂದಿದ್ದು ಅಂದಿನ ಯುಗಮಾನದಲ್ಲಿನ ರಾಜರ ಅಧಿಕಾರಶಾಹೀ ಆಡಳಿತ ವ್ಯವಸ್ತೆ ಅಧಿಕಾರಸ್ಥರ ಆತಂಕ , ಭಯ , ತಲ್ಲಣ , ಶೌರ್ಯ ಪ್ರದರ್ಶನಗಳನ್ನೊಳಗೊಂಡ ಈ ನಾಟಕದಲ್ಲಿ 3 ದೃಶ ಶಗಳಿವೆ . ಕಂಸನ ಅರಮನೆಯ ಬಿಸಿಲು ಮಾಳಿಗೆ ಮತ್ತು ವಸುದೇವ ದೇವಕಿಯರನ್ನು ಬಂದಿಸಿಟ್ಟಿರುವ ಜಾಗ , ಮೊದಲನೆ ದೃಶ್ಯದಲ್ಲಿ ಕಂಸನು ಗುಸುಕನ ಮಾತಾಡುತ್ತಿದ್ಯಾಗ ಕ್ರಪ್ಪನ ಬಗ್ಗೆ ಎಲ್ಲರೂ ಹೇಳುವ ಪ್ರವೇಶಿಸುತ್ತಾನೆ . ಕೇಳಿ ಮತ್ತು ಅವನ ಸಾಯಿಸಲು ಮಾಡಿದ ಪ್ರಯತ್ನವೆಲ್ಲವೂ ವಿಫಲವಾದುದಕ್ಕೆ ಅಸಹಜ ಮತ್ತು ಕೋಪದಿಂದ ಶಪಿಸುತ್ತಿರುತ್ತಾನೆ .

7th standard kannada Billa Habba Nataka Notes | 7ನೇ ತರಗತಿ ಬಿಲ್ಲ ಹಬ್ಬ ತರಗತಿ  ಕನ್ನಡ ನೋಟ್ಸ್ ಪ್ರಶ್ನೋತ್ತರ, question answer, text book pdf download

ಕೃಪ್ಪನ ಬಗ್ಗೆ ವಿಷಯ ತಿಳಿದು ಮತ್ತು ಕೋಪದಿಂದ ಶಪಿಸುತ್ತಿರುತ್ತಾನೆ . ಕೃಷ್ಮನ ಬಗ್ಗೆ ವಿಷಯ ತಿಳಿದುಕೊಳ್ಳಲು ಕಳುಹಿಸಿದ ಗೂಢಾಚಾರರ ಶೋಧನೆಯ ಬಗ್ಗೆ ಸಹ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ . ಆಗ ಅಲ್ಲಿಗೆ ಆ ಮಾಹಿತಿ ಸಂಗ್ರಹಕಾರರಾದ ಶೈಲಿ ಮತ್ತು ದುರ್ವಿಧರು ತಾವು ಮಾಡಿದ ಸಂಚಿನ ಬಗ್ಗೆ ತಿಳಿಸುತ್ತಾರೆ . ಆ ಸಂಚು ಬಿಲ್ಲ ಹಬ್ಬಕ್ಕೆಂದು ಆಹ್ವಾನಿಸಿ , ಕ್ರೀಡಾ ಂಗಣದ ಹೆಬ್ಬಾಗಿಲಿಗೆ ಕಿರುಗತ್ತಿ ಕಟ್ಟಿ , ಆ ದ್ವಾರದ ಮೂಲಕ ಕೃಹ್ಮನು ಬರುವಂತೆ ಮಾಡುವುದು , ಕಂಸನ ಪಟ್ಟದ ದಾನೆ ಕುವಲಯಾ ಪೀಠ ಹಳದಿ ಬಣ್ಣ ನೋಡಿದರೆ ಸಾಕು , ಮದವೇರಿ ಅಟ್ಟಿಸಿಕೊಂಡು ಬರುವಂತೆ ತರಬೇತಿ ಮಾಡಿರುತ್ತಾರೆ ಆ ಬಾಗಿಲು ಮೂಲಕವೇ ಬರಬೇಕು ಏಕೆಂದರೆ ಬೇರೆ ಬಾಗಿಲುಗಳಿರುವುದಿಲ್ಲ ಬಂದಾಗ ಸಾಯಲೇಬೇಕಾಗುವುದು ಎಂಬುದು ಅವರ ಯೋಜನೆಯಾಗಿತ್ತು . ಕೆಲಸವಾದ ನಂತರ ಆ ಆನೆಯನ್ನು ಗುಂಡು ಹಾರಿಸಿ ಕೊಂದುಬಿಡುವಂತೆ ಕಂಸನು ಆದೇಶಿಸುತ್ತಾನೆ . ಅವರಿಬ್ಬರೂ ಹೊರಟ ನಂತರ ಅವರಿಬ್ಬರ ಮೇಲೆ ಬಂದು ಕಣ್ಣಿಡುವಂತೆ ಹೇಳಿ ನಂತರ ಕ್ರಪ್ಪ ಹೇಗಿದ್ಯಾನೆಂದು ಕಂಸನು ತನ್ನ ಮಂತ್ರಿಯನ್ನು ಕೇಳುತ್ತಾನೆ . ಮಂತ್ರಿಯು ಕೃಷ್ಮನು ವಸುದೇವ ಹಾಗೂ ದೇವಕಿಯರ ಹೋಲಿಕೆಯನ್ನು ಅವನಲ್ಲಿ ಕಂಡಿಲ್ಲ . ಆದರೆ ಕೃಷ್ಮನ ಕೈ ಮಾತ್ರ ಕಂಸನ ಕೈಯಂತೆ ಇತ್ತು ಎಂದು ಹೇಳುತ್ತಾನೆ . ಅಲ್ಲಿಗೆ ಮೊದಲದೃಶ್ಯ ಮುಗಿಯುತ್ತದೆ . ಎರಡನೇ ದೃಶ್ಯದಲ್ಲಿ ಕಂಸನು ವಸುದೇವ ದೇವಕಿಯರನ್ನು ನೋಡಲು ಅವರನ್ನು ಬಂದಿಸಿಟ್ಟಿರುವ ಜಾಗಕ್ಕೆ ಬರುತ್ತಾನೆ . ಅವನು ಬರುವ ಮೊದಲು ಹದಿನಾರು ವರ್ಷಗಳಾದವು , ಇನ್ನೂ ನೋಡಿಲ್ಲ ಎಂದು ಬಡಿದು ವಸುದೇವನನ್ನು ಮಾತನಾಡಿಸುತ್ತಾಳೆ ದು ದೇವಕಿಗೆ ವಂಗವಾಗಿ ವನ ಚಾಗಿ ಮಾತನಾಡುತ ಅದಕ್ಕೆ ವಸುದೇವನೂ ಸಹ ಅಪವಗ್ರವಾಗಿ ಉತ್ತರ ಕೊಡುತ್ತಾನೆ . ಬಹುಪಾಲು ಮಾತನ್ನು ಕಂಸನೇ ಆಡುತ್ತಾನೆ . ತಾನು ಅವರಿಗೆ , ಯಾವುದರ ಕೊರಿಸಿ , ಅದು ಚಿನ್ನದು ಮತ್ತು ಲ್ಲದೆ ( ನೋಡಿಕೊಂಡಿದ್ದೇನೆ ಎಂದು ತಿಳಿಸುತ್ತಾ ಬಿಲ್ಲಹಬ್ಬದ ಬಗ್ಗೆ ತಿಳಿಸುತ್ತಾನೆ . ಅವರು ಬಂಧನದಲ್ಲಿದ್ರೂ ಸ್ವತಂತ್ರರು , ತಾವು ಬಯಲಲ್ಲಿದ್ರೂ ಬಂಧಿಗಳು ಎಂದು ಹೇಳುತ್ತಾನೆ . ದೇವಕೀ ಹೊಟೇಲಿ ಎಂಟನೆಯ ಮಗು ಹಣ್ಣಾದಾಗ , ಅವನ ರಾಜ್ಯದಲ್ಲಿಅಂದು ಹುಟ್ಟಿದ ಎಲ್ಲಾ ಮಕ್ಕಳನ್ನು ಕೊಲ್ಲಿಸಿದ , ದೇವಕಿಯ 8 ನೇ ಮಗನಿಂದ ತನಗೆ ಮೃತ್ಯು , ಆ ಮಗುವನ್ನು ದೇವಕಿ ಬಚ್ಚಿಟ್ಟಿರಬಹುದೆಂದು ವಿಧ ವಿಧವಾಗಿ ಅವಳಿಗೆ ಆ ಮಗುವನ್ನು ಕೊಡಲು ಬೇಡಿರಬಹುದೆಂದುವಿಧವಿಧವಾಗಿ ಅವಳಿಗೆ ಆ ಮಗುವನ್ನು ಕೊಡಲು ಬೇಡಿಕೊಳ್ಳುತ್ತಾನೆ . ಎಲ್ಲಾ ಮಕ್ಕಳನ್ನೂ ಕೊಲ್ಲಿಸಿದ್ದೇನೆ . ನನ್ನ ರಾಜ್ಯವನ್ನೆಲ್ಲಾ ನಿನಗೇ ಕೊಡುತೇನೆ , ನಿನ್ನ ಮಗನನ್ನು ಮಾತ್ರ ನನಗೆ ಕೊಡು ಎಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ . ಕೃಷ್ಮನ ಬಗ್ಗೆ ಅವನು ದೇವಕಿಯ ಮಗನೇ ಆಗಿರಬೇಕೆಂದು ಕೇಳಿದಾಗ ದೇವಕಿಯು ಕೃಷ್ಮನನ್ನ ಮಗನಲ್ಲ , ಅವನು ನಂದನ ಯಶೋಧೆಯರ ಮಗ ಎಂದು . ಅಳುತ್ತಾ ಹೇಳುತ್ತಾಳೆ . ಆಗ ಕಂಸನು ಸಮಧಾನದ ಧ್ವನಿಯಲ್ಲಿ ಅವನು ನಿಮ್ಮ ಮಗನಲ್ಲವೆಂದ ಮೇಲೆ ಅವನನ್ನು ನಾನು ಕೊಂದರೆ ನಿಮಗೆ ಬೇಜಾರಿಲ್ಲ .. ? ಎಂದು ಹೇಳುತ್ತಾ ನಿರ್ಗಮಿಸುತ್ತಾನೆ . 

ಪದಗಳ ಅರ್ಥ :

  • ಬಿಸಿಲು ಮಚ್ಚು = ಬಿಸಿಲು ಮಾಳಿಗೆ 
  • ಬಡಿಗೆ ,= ಗದೊಣ್ಯ , ಕೋಲು
  • ಘೋರ ಹುಡುಗ 
  • ಗೂಢಾಚಾರ = ಗುಪ್ತಚರ 
  • ಶೋಧ = ‘ ಹುಡುಕು 
  • ಮಾಹಿತಿ . = ತಿಳುವಳಿಕೆ , ವಿವರಣೆ 
  • ಲೋಕಾಭಿರಾಮ = ಸಹಜವಾಗಿ 
  • ಎಕ್ಕಡ = ಪಾದುಕೆ , ಪಾದರಕ್ಷೆ , 
  • ಚಪ್ಪಲಿ • ಪಾಶ = ಹಗ್ಗ 
  • • ಪರಾಂಬರಿಸು = ಗಮನಿಸು , ಪರಿಶೀಲಿಸು ‘ 
  • ಕೀಡಾಗಾರ = ಕ್ರೀಡಾಂಗಣ 
  • ಹೆಬ್ಬಾಗಿಲು = ಮಹಾದ್ವಾರ 
  • ಪಥ್ಯ = ಆಹಾರದ ಕಟ್ಟುಪಾಡು 
  • ತಮಾಷೆ = ಹಾಸ್ಯ 
  • • ಕೊಂಚ – ಸ್ವಲ್ಪ ‘ 
  • ಫಟಿಂಗ = ತುಂಟ , ಭಂಡ 
  • ತಾರಮ್ಮಯ್ಯ = ಅಂಗೈ ಆಡಿಸು ,
  •  • ವಾತಾಯನ = ಕಿಟಕಿ 
  • • ಕೂಸು = ಮಗು 
  • • ಹಾಲಾಹಲ = ವಿಷ 
  • ಕ್ಷೀರ = ಹಾಲು 
  • ಮಥಿಸು = ಕಡ . 
  • • ಸಂಕೊಲೆ = ಸರಪಳಿ
  •  • ಅಪರಂಜಿ = ಬಂಗಾ 
  • • ಯಾಗ = ಯಜ .
  •  • ತೊಯ್ = ನನೆ ಯಾಗು 
  • • ಸೆರೆಮನೆ – ಬಂದೀಖಾನೆ
  •  • ಪೀಡೆ = ತೊಂದರೆ 
  • ಬೊಗಳೆ = ಕೆಲಸಕ್ಕೆ ಬಾರದ ಮಾತು 
  • ಅಮಿ = ಎಂಟನೆಯ 
  • • ಕೋಶ = ಭಂಡಾರ 
  • ಪಟ್ಟ = ಸಿಂಹಾಸನ 
  • • ವಗಡಿ = ಕಾಣಿಕೆ , ಗೌರವ 
  • ಪಿಳಂಗೋವಿ = ಕೊಳಲು   

FAQ :

1. ಕೃಷ್ಣ ಯಾರ ಸೊಂಟವನ್ನು ಮುರಿದನು ?

 ಉತ್ತರ : ಕೃಷ್ಣನು ಶಕಟನ ಸೊಂಟವನ್ನು ಮುರಿದನು. 

2. ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಏನಾದ ? 

ಉತ್ತರ : ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಬೇಲದ ಹಣ್ಣು ಬಡಿಯೋ ಬಡಿಗೆಯಾದನು . 

3. ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಯಾರು ?

ಉತ್ತರ : ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಶೈಲಿಕ ಮತ್ತು ದುರ್ವಿಧ ಎಂಬ ಗೂಢಚಾರರು . 

Billa Babba Nataka Video

Class 07 Kannada Lesson | ಬಿಲ್ಲ ಹಬ್ಬ | Billa Habba | ೭ನೇತರಗತಿ ಕನ್ನಡ ಗದ್ಯ

Samveda – 7th – Kannada – Billa Habba Nataka

ಬಿಲ್ಲಹಬ್ಬ.(billa habba).textbook based play.7th standard Video

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

1 thoughts on “7th Standard Billa Habba Nataka Kannada Notes | 7ನೇ ತರಗತಿ ಬಿಲ್ಲ ಹಬ್ಬ ಕನ್ನಡ ನೋಟ್ಸ್

Leave a Reply

Your email address will not be published. Required fields are marked *

rtgh