rtgh

7th Standard Sankrantiyandu Sukha Dukha Kannada Notes | 7ನೇ ತರಗತಿ ಸಂಕ್ರಾಂತಿಯಂದು ಸುಖ-ದುಃಖ ಕನ್ನಡ ನೋಟ್ಸ್

7ನೇ ತರಗತಿ ಸಂಕ್ರಾಂತಿಯಂದು ಸುಖ-ದುಃಖ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 7th Standard Sankrantiyandu Sukha Dukha Kannada Notes Question Answer Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Chapter 8 Notes 7th Class Kannada 8th Lesson Notes Summary Pdf

7th Standard Kannada Notes Sankranti Sukha Dukha

ಶಬ್ದಾರ್ಥ :

  • ಸಂಕ್ರಾಂತಿ = ದಾಟುವಿಕೆ, ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವ ದಿನ
  • ಕಿಚ್ಚು = ಬೆಂಕಿ
  • ಟೂ ಬಿಡು = ಮಾತು ಬಿಡುವುದು , ಮನಸ್ತಾಪ ಮಾಡಿಕೊಳ್ಳುವುದು .
  • ಪಟೇಲ = ಊರಿನ ಕ್ಷೇಮ – ಸಮಾಚಾರ ನೋಡಿಕೊಳ್ಳುತ್ತಿದ್ದ ಹಿರಿಯ .
  • ಮೀಯು = ಸ್ನಾನಮಾಡು
  • ಬ್ಯುಸಿ = ಬಿಡುವಿನ 
  • ರೆಡಿಮೇಡ್ – ಸಿದ್ದವಾದ 
  • ಪ್ಯಾಕ್ ಮಾಡು=ಪೊಟ್ಟಣ  ಕಟ್ಟು 
  • ಫ್ಯಾಬ್ ಮಾಲ್ = ಆಧುನಿಕ ಮಾರುಕಟ್ಟೆಯ ಒಂದು ರೂಪ

ಅಭ್ಯಾಸ ಪ್ರಶ್ನೆಗಳು

ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ : 

1. ಸಂಕ್ರಾಂತಿ ಯಾವ ರೀತಿಯ ಹಬ್ಬ ? 

ಉತ್ತರ :ಸಂಕ್ರಾಂತಿ ಹಳ್ಳಿಗರ ಮಧ್ಯೆಯೇ  ಸೃಷ್ಟಿಯಾದ ಹಬ್ಬ ಸಂಕ್ರಾಂತಿ ಜಾನುವಾರುಗಳಿಗೆ ಮೀಸಲಾದ ವಿಶೇಷ ಹಬ್ಬ

2 . ಕಿಚ್ಚು ಹಾಯಿಸುವುದು ಎಂದರೆ ಏನು ? 

ಉತ್ತರ : ಕಿಚ್ಚು ಹಾಯಿಸುವುದು ಎಂದರೆ ದನಕರುಗಳನ್ನು ಬೆಂಕಿಯಲ್ಲಿ ಜಿಗಿಸುವುದು . 

3. ಹಳ್ಳಿಗಳಲ್ಲಿ ಪಟೇಲರು ಏನು ಕೊಡಿಸಿ ರಾಜಿ ಮಾಡುತ್ತಿದ್ದರು ? 

ಉತ್ತರ : ಹಳ್ಳಿಗಳಲ್ಲಿ ಪಟೇಲರು ವರ್ಷದ ಕೊನೆಯಲ್ಲಿ ಜಗಳವಾಡಿದವರನ್ನು ಒಂದೆಡೆ ಸೇರಿಸಿ , ಅವರಿಂದ ಇವರಿಗೆ, ಇವರಿಂದ ಅವರಿಗೆ ಎಳ್ಳು ಬೆಲ್ಲ ಕೊಡಿಸಿ ರಾಜಿ ಮಾಡಿಸುತ್ತಿದ್ದರಂತೆ .

4. ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಏನು ಬಂದು ನಿಂತಿದೆ ? 

ಉತ್ತರ : ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಟ್ರಾಕ್ಟರ್ ಬಂದು ನಿಂತಿದೆ . 

5. ನಮ್ಮ ಸಂಕ್ರಾಂತಿಯಲ್ಲಿ ಏನು ಇರಬೇಕು ? 

ಉತ್ತರ : ನಮ್ಮ ಸಂಕ್ರಾಂತಿಯಲ್ಲಿ ಸಂಸ್ಕೃತಿ ಸಂಪ್ರದಾಯಗಳ – ಜೊತೆ ಸಮೃದಿ ಐಶ್ವರ್ಯಗಳು , ಸಂಭ್ರಮ , ಸೊಬಗು ತುಂಬಿರಬೇಕು . 

ಆ . ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ : 

1. ಸಂಕ್ರಾಂತಿಯಲ್ಲಿ ದನಕರುಗಳಿಗೆ ಏನು ಮಾಡಲಾಗುತ್ತದೆ ? 

ಉತ್ತರ : ಸಂಕ್ರಾಂತಿ , ದಂದು ದನ – ಕರುಗಳ ಮೈ ತೊಳೆದು , ಕೊರಳಿಗೆ ಗೆಜ್ಜೆ ಕಟ್ಟಿ ಕೊಂಬಿಗೆ ಬಣ್ಣ ಬಳಿದು , ಟೇಪು ಕಟ್ಟಿ , ಹೂವು ಮುಡಿಸಿ , ತರಹೇವಾರಿ ಬಲೂನ್ ಕಟ್ಟಿ ಶೃಂಗಾರ ಮಾಡುತ್ತಿದ್ದರು . 

2. ಸಂಕ್ರಾಂತಿಯಲ್ಲಿ ಎಳ್ಳು , ಬೆಲ್ಲ , ಕೊಬ್ಬರಿ ಏಕೆ ಮಾಡಲಾಗುತ್ತದೆ ?

 ಉತ್ತರ : ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಡೆದಿರುತ್ತದೆ . ದೇಹದಲ್ಲಿಕೊಬ್ಬಿನ ಅಂಶ ಕಡಿಮೆಯಾಗಿರುತ್ತದೆ . ಸಂಕ್ರಾಂತಿಯಂದು ಎಳ್ಳು , ಬೆಲ್ಲ , ಕೊಬ್ಬರಿಯನ್ನು ತಿಂದರೆ ಕಳೆದು ಹೋದ ಕೊಬ್ಬಿನ ಅಂಶ ಬೇಗನೆ ಸಿಗುತ್ತದೆ . ಎಳ್ಳು ಬೆಲ್ಲ ಕೊಬ್ಬರಿಯಲ್ಲಿ ಅತ್ಯಧಿಕ ಕೊಬ್ಬಿನ ಅಂಶವಿರುವುದರಿಂದ ಸಂಕ್ರಾಂತಿಯ ನೆಪದಲ್ಲಿ ಈ ಮಿಶ್ರಣವನ್ನು ತಿನ್ನುತ್ತಾರೆ . ಆಗ ದೇಹದ ಚರ್ಮ ತಂತಾನೇ ಸರಿಹೋಗುತ್ತದೆ .. ! 

3. ಸಂಕ್ರಾಂತಿಯ ದಿನದಿಂದ ಸೂರ್ಯನ ಚಲನೆ – ಹೇಗಿರುತ್ತದೆ ? 

ಉತ್ತರ : ಸಂಕ್ರಾಂತಿ ದಿನದಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸ್ವಲ್ಪ ಸ್ವಲ್ಪ ಸಂಚರಿಸಲುಶುರುವಿಡುತ್ತಾನೆ. ಸಂಕ್ರಾಂತಿಯ ಮರುದಿನದಿಂದಲೇ ಹಗಲು ದೀರ್ಘವಾಗುತ್ತದೆ. ರಾತ್ರಿಯ ಅವಧಿ
ಸಹಜವಾಗಿಯೇ ಕಡಿಮೆಯಾಗುತ್ತದೆ. ಉತ್ತರಾಯಣ ಪುಣ್ಯಕಾಲ ಬರೋದು ವರ್ಷದಲ್ಲಿ ಒಂದು ದಿನಮಾತ್ರ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿದೆ.

4. ಇಂದಿನ ಕಾಲದಲ್ಲಿ ಎಳ್ಳು – ಬೆಲ್ಲ ನೀಡುವುದು ಹೇಗಿರುತ್ತದೆ ?

ಉತ್ತರ : ಇಂದು ಎಳ್ಳು – ಬೆಲ್ಲ ನೀಡುವುದು ಪ್ರತಿಷ್ಮೆಯ ವಿಚಾರವಾಗಿದೆ . ಜಾಸ್ತಿ ಎಳ್ಳು – ಬೆಲ್ಲ ಕೊಟ್ಟವರೇ ಶ್ರೀಮಂತರು ಎಂಬಂತಾಗಿದೆ . ದೊಡ್ಡದಾಗಿ ಕಾಣಲೆಂದು ದಪ್ಪ ದಪ್ಪ ಸಕ್ಕರೆ ಅಚ್ಚು ಸೇರಿಸಿ ಎಳ್ಳು – ಬೆಲ್ಲ ಪ್ಯಾಕ್ ಮಾಡುತ್ತಿದ್ದಾರೆ . ರೆಡಿಮೇಡ್ ಎಳ್ಳು ಬೆಲ್ಲದ ಪ್ಯಾಕ್‌ಗಳು ಪ್ರಾಬ್ ಮಾಲ್‌ಗಳಲ್ಲಿ ಧಾರಾಳವಾಗಿ ದೊರಕುತ್ತಿವೆ ಕಳಪೆ ಮಾಲಾದರೂ ಎಲ್ಲರೂ ಇದನ್ನೇ ಹಂಚಲು ಮುಂದಾಗುತ್ತಾರೆ . ಮುಖವಾಡದೊಂದಿಗೆ ಬದುಕುವ ಜನ ಇದನ್ನು ಒಪ್ಪಿಕೊಂಡಿದ್ದಾರೆ , 

ಇ ) ಹೊಂದಿಸಿ ಬರೆಯಿರಿ : 

  1. ಯುಗಾದಿ – ಎಳ್ಳು – ಬೆಲ್ಲ 
  2. ದೀಪಾವಳಿ – ದಸರಾ 
  3. ರಂಜಾನ್ – ಯೇಸು ಹುಟ್ಟಿದ ದಿನ
  4. ಕ್ರಿಸ್‌ಮಸ್ – ಬೇವು – ಬೆಲ್ಲ 
  5. ವಿಜಯದಶಮಿ – ಬೆಳಕಿನ ಹಬ್ಬ
  6. ಮಕರ ಸಂಕ್ರಾಂತಿ – ಉಪವಾಸದ ಪರ್ವದಿನ 

ಈ ಕಳಗೆ ನೀಡಿರುವ ಪಟ್ಟಿಯಲ್ಲಿ ರಾಷ್ರ್ಟೀಯ/ ನಾಡ ಹಬ್ಬಗಳ ಮಹತ್ವವನ್ನು ಐದು – ಆರು ವಾಕ್ಯಗಳಲ್ಲಿ ತಿಳಿಸಿ . 

  1. ಸ್ವಾತಂತ್ರ್ಯೋತ್ಸವ :

ರಾಷ್ಟ್ರೀಯ ಹಬ್ಬಗಳೆಂದರೆ ಜಾತಿಮತ ಲಿಂಗ ಬೇಧವಿಲ್ಲದೆ ಆಚರಿಸುವ ಹಬ್ಬ ಎಲ್ಲಾ ಧರ್ಮದವರೂ ಸಂಭ್ರಮದಿಂದ ಸಾರ್ವಜನಿಕವಾಗಿ . ರಾಜ್ಯದಲ್ಲಿರುವ ಪ್ರತಿಯೊಬ್ಬರು ಇದು ತಮ್ಮದೇ ಹಬ್ಬವೆಂದು ಆಚರಿಸುವ ಪರಿಪಾಠವಿದೆ . ಆಗಸ್ಟ್ 15 ರಂದು ಪ್ರತಿವರ್ಷವೂ ಸ್ವಾತಂತ್ರ್ಯೋತ್ಸವವನ್ನು – ಆಚರಿಸಲು ಕಾರಣ 1947 ರ ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ ಬ್ರಿಟಿಷರು ನಮಗೆ ರಾಜಕೀಯ ಸ್ವಾತಂತ್ರವನ್ನು ಕೊಟ್ಟರು .ಸುಮಾರು 3-4 ಶತಮಾನಗಳಿಂದ ಬ್ರಿಟಿಷ್ ಆಳ್ವಿಕೆಯಿಂದ ಭಾರತೀಯರು ಈಗ ಸರ್ವತಂತ್ರ ಸ್ವತಂತ್ರರಾದರು .ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಆಗಸ್ಟ್ 15 ರಂದು ಉತ್ಸಾಹದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ . ಆ ದಿನ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿ , ರಾಷ್ಟ್ರಗೀತೆಯನ್ನು ಹಾಡುತ್ತೇವೆ . ಇದು ಭಾರತೀಯರಿಗೆಲ್ಲಾ ಸಂಭ್ರಮಿಸುವ ಹಬ್ಬ

  1. ಗಣರಾಜ್ಯ ದಿನ : 

ಗಣರಾಜ್ಯ ಎಂದರೆ ನಮ್ಮ ದೇಶವನ್ನು ನಮ್ಮ ನಾಯಕರು ಡಾ ಬಿ.ಆರ್.ಅಂಬೇಡ್ಕರರರ ನೇತೃತ ರಲ್ಲಿಒಂದು ಸಂವಿಧಾನವನ್ನು ರಚಿಸಿದರು . ಜನವರಿ 26 , 1950 ನೆಯ ಇಸವಿಯಲ್ಲಿ ಇದು ಜಾರಿಗೆ ಬಂತು . ನಮ್ಮಸಂವಿಧಾನವು ಲಿಖಿತ ಸಂವಿಧಾನ . ಇದನ್ನು ಜಾರಿಗೆ ತಂದ ದಿನವೇ ಗಣರಾಜ್ಯ ದಿನ , ಪ್ರತಿ ವರ್ಷವೂ ಗಣರಾಜ್ಯದಿನವನ್ನು ಆಚರಿಸುತ್ತೇವೆ . ಆ ದಿನ ಎಲ್ಲಾ ಸರ್ಕಾರಿ ಕಚೇರಿಗಳ , ದೇಶಭಕ್ತರ , ಶಾಲಾ – ಕಾಲೇಜುಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ , ರಾಷ್ಟ್ರ ಗೀತೆಯನ್ನು ಹಾಡಿ , ನೆರೆ ಹೊರೆಯವರಿಗೆಲ್ಲಾ ಸಿಹಿಯನ್ನು ಹಂಚಿ ಸಂಭ್ರಮಿಸುತ್ತೇವೆ . ಇದೂ ಸಹ ರಾಷ್ಟ್ರೀಯ ಹಬ್ಬ . ಇದನ್ನು ಆಚರಿಸುವುದರಿಂದ ರಾಷ್ಟ್ರಪ್ರೇಮ, ಐಕ್ಯತೆ , ಸಹೋದರತೆ , ಪರಸ್ಪರ ಪ್ರೀತಿ ವಾತ್ಸಲ್ಯಗಳು ವೃದ್ಧಿಯಾಗುತ್ತದೆ .

  1. ಕನ್ನಡ ರಾಜೋತ್ಸವ :

ಪ್ರತಿ ವರ್ಷ ನವಂಬರ್ 1 ಕರ್ನಾಟಕದ ಜನತೆಗೆ ಸಂಭ್ರಮೋತ್ಸಾಹ . ನವೆಂಬರ್ ಬರುವ ಮೊದಲೇ ನಾಡ ಹಬ್ಬಕ್ಕಾಗಿ ಸಿದ್ಧತೆ , ಕನ್ನಡ ರಾಜೋತ್ಸವ ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಖುಪಿ , 1956 ರ ನವೆಂಬರ್ ಒಂದು ಕರ್ನಾಟಕದ ಏಕೀಕರಣವಾಗಿ ಕನ್ನಡ ನಾಡಾಯಿತು .ಆದರೆ 1973 ರವರೆಗೂ ನಮ್ಮ ರಾಜ್ಯವನ್ನು ರಾಜ್ಯ ಎಂದು ಕರೆಯುತ್ತಿತ್ತು . 1973 ರ ನವಂಬರ್ 1 ರಿಂದ ಕರ್ನಾಟಕ ರಾಜ್ಯವಾಯಿತು . ಈಗ ಕನ್ನಡ ಆಡಳಿತ ಪ್ರಯಾಗಿ ನವಂಬರ್ ತಿಂಗಳು ಪೂರ್ತಿ ಕನ್ನಡ ರಾಜೋತೆ ವನ್ನು ಆಚರಿಸುತ್ತಾರೆ . ಎಲ್ಲಾ ರಾಷ್ಟ್ರೀಯ ಹಬ್ಬಗಳ ‘ಇದು ನಾಡ ಹಬ್ಬವಾದರೂ ಕನ್ನಡ ಧ್ವಜವನ್ನು ಹಾರಿಸಿ ಧ್ವಜಗೀತೆಯನ್ನು ಹಾಡಿ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ , ಸಿಹಿ ಹಂಚುತ್ತಾರೆ . 

ಭಾಷಾಭ್ಯಾಸ :

ಮುಂದೆ ನೀಡಿರುವ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳದಲ್ಲಿ ಆವರಣದಲ್ಲಿ ನೀಡಿರುವ ಪದಗಳ ಬಹುವಚನ ಬರೆಯಿರಿ :

ಪ್ರಶ್ನೆ

  1. ನಮ್ಮ ಮನೆಯಲ್ಲಿ ಎಂಟು – ( ದನ , ಇದೆ ) . 
  2. ನಮ್ಮ ತರಗತಿಯಲ್ಲಿ ಅರವತ್ತು – ( ಹುಡುಗ , ಇದ್ಯಾನ ) . 
  3. ಆರನೆಯ ತರಗತಿಯಲ್ಲಿ ಇಪ್ಪತ್ತು – ( ಹುಡುಗಿ , ಇದ್ಯಾಳೆ ) ,

ಉತ್ತರ :

  1. ದನಗಳು ಇವೆ 
  2. ಹುಡುಗರು ಇದ್ಯಾರೆ , 
  3. ಹುಡುಗಿಯರು ಇದ್ಯಾರೆ . . 

ಅಭಾಸ – 1

ಏಕವಚನ – ಬಹುವಚನ 

ಜಿಲ್ಲೆ – ಜಿಲ್ಲೆಗಳು 

ಊರು – ಊರುಗಳು 

ಕೊಠಡಿ – ಕೊಠಡಿಗಳು

ನಾಯಿ – ನಾಯಿಗಳು 

ಹಕ್ಕಿ – ಹಕ್ಕಿಗಳು

 ನದಿ – ನದಿಗಳು 

ಬೆಟ್ಟ – ಬೆಟ್ಟಗಳು

 ಗುಡ್ಡ – ಗುಡ್ಡಗಳು 

ಅಭ್ಯಾಸ – 2

ಏಕವಚನ – ಬಹುವಚನ 

ಅಣ್ಣ – ಅಣ್ಣಂದಿರು

ಚಿಕ್ಕಮ್ಮ – ಚಿಕ್ಕಮಂದಿರು ,

 ದೊಡ್ಡಮ್ಮ – ದೊಡ್ಮಂದಿರು

 ಅತ್ತ – ಅತ್ತೆಯರು ( ಅತ್ತೆಯಂದಿರು ) 

ತಮ್ಮ – ತಮ್ಮಂದಿರು , 

ಭಾವ – ಭಾವಂದಿರು 

ಲೇಖಕರ ಪರಿಚಯ 

ಎ.ಆರ್.ಮಣಿಕಾಂತ್. 

ಎ.ಆರ್ . ಮಣಿಕಾಂತ್ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯಿತನ ಹಳ್ಳಿಯಲ್ಲಿ ಜನಿಸಿದರು . ಎಂಜಿನಿ ಯರಿಂಗ್ ಪದವೀಧರರಾದ ಇವರು ಪತ್ರಿಕೋದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ . ‘ ಹಾಯ್ ಬೆಂಗಳೂರು ‘ , ಸಂಯುಕ್ತ ಕರ್ನಾಟಕ , ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಕೆಲಸ ಮಾಡಿ ಈಗ ‘ ಕನ್ನಡ ಪ್ರಭ ‘ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿದ್ದಾರೆ  ‘ ಭಾವತೀರಯಾನ ‘ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ . ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿದ್ಯಾರೆ . ಪ್ರಸ್ತುತ ಗದ್ಯ ಪಾಠವನ್ನು ‘ ಅಮ್ಮ ಹೇಳಿದ ನೂರೆಂಟು ಸುಳ್ಳುಗಳು ‘ ಎಂಬ ಕೃತಿಯಿಂದ ಆರಿಸಲಾಗಿದೆ .

ಪುರಾಣದ ಹಿನ್ನೆಲೆ , ಸಂಪ್ರದಾಯದ ಭಾವ ಇವೆಲ್ಲಾ ಇರುತ್ತದೆ . ಹಾಗೆಯೇ ಸಂಕ್ರಾಂತಿಯೂ ಸಹ ಎಲ್ಲಾ ಹಬ್ಬಗಳು ಮನುಷ್ಕೃರಿಗಾಗಿಆಚರಿಸಿದರೆ , ಸಂಕ್ರಾಂತಿ ದನ – ಕರುಗಳಿಗಾಗಿ ಆಚರಿಸುವ ವಾಡಿಕೆ . ವರ್ಷವಿಡೀ ದುಡಿಮೆಯಲ್ಲಿ ತೊಡಗಿದ್ದು ತನಗಾಗಿ ಬಾಳುವ ಎತ್ತು ದನಕರುಗಳಿಗೆ ಕೃತಜ್ಞತೆ ಹೇಳಲಿಕ್ಕೆ ಇದನ್ನು ಆಚರಿಸಿ ರೈತ ಖುಷಿಪಡುತ್ತಾನೆ . 

, ಸಂಕ್ರಾಂತಿ ಬರುವುದು ಚಳಿಗಾಲದಲ್ಲಿ ಕೃಷಿಕರಿಗೆ ಹೆಚ್ಚಿನ ಕೆಲಸವೂ ಇರುವುದಿಲ್ಲ . ಜಾನುವಾರುಗಳಿಗೂ ವಿಶ್ರಾಂತಿಯಿರುತ್ತದೆ . ಅವುಗಳ ಮೈಯಲ್ಲಿರುವ ಜಿಗಣೆಯಂಥ ಕ್ರಿಮಿಗಳನ್ನು ಹೋಗಲಾಡಿಸಲು ಕಿಚ್ಚು ಹಾಯಿಸುತ್ತಾರೆ . ಬೆಂಕಿಯ ತಾಪ ತಗುಲಿದ ತಕ್ಷಣ ಜಿಗಣೆಗಳು ಬೆಂಕಿಗೆ ಬೀಳುತ್ತವೆ . ಇದರಿಂದ ಜಾನುವಾರುಗಳು ನೆಮ್ಮದಿಯಾಗಿರುತ್ತದೆ . ಸಂಕ್ರಾಂತಿಯಂದು ಎಳ್ಳು – ಬೆಲ್ಲಕಡಲೆ – ಕೊಬ್ಬರಿಯನ್ನು ತಿನ್ನುವುದರಿಂದ ಒಡೆದ ಚರ್ಮ ಹುರುಪುಗೊಳ್ಳುತ್ತದೆ . ಹಾಗೆಯೇಜಗಳವಾಡಿದ ಜನರನ್ನು ಒಂದು ಮಾಡುವುದಕ್ಕಾಗಿ ಹಿರಿಯರು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂದು ಅವರನ್ನು ಒಂದು ಮಾಡುತ್ತಿದ್ದರು . ಅದು ಉತ್ತರಾಯಣ ಪುಣ್ಯಕಾಲ ಅಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ . ದನ ಕರುಗಳ ಮೈ ತೊಳೆದು , ಕೊರಳಿಗೆ ಗೆಜ್ಜೆ ಕಟ್ಟಿ ಕೊಂಬಿಗೆ ಬಣ್ಣ ಬಳಿದು ಟೇವು ಹೂವು ಮುಡಿಸಿ , ತರಹೇವಾರಿ ಬಲೂನು ಕಟ್ಟಿ , ಆದರೆ ಈಗ ಮೊದಲಿನ ಸಂಭ್ರಮವಿಲ್ಲ , ದನಕರುಗಳೇ ನಾಪತ್ತೆ , ಆ ಜಾಗಕ್ಕೆ ಟ್ರಾಕ್ಟರ್‌ಗಳು ನಿಂತಿವೆ . ಕಿಚ್ಚುಹಾಯಿಸುವ ಸಂಪ್ರದಾಯ ಕಣ್ಮರೆಯಾಗುತ್ತಿದೆ . ಕಾಂತಿಗೆ ಊರಿಗೆ ಹೋಗಿ ಖರ್ಚು ಹೆಚ್ಚು ಮಾಡುವುದರ ಬದಲಿಗೆ , ಹೋಟೇಲಿಗೆ ಹೋಗಿ ತಿಂದು ಬರೋದೆ ಸರಿ ಎಂಬ ತೀರ್ಮಾನಕ್ಕೆ ಬರುತ್ತಾರೆ . ಎಳ್ಳು – ಬೆಲ್ಲ ನೀಡುವುದೂ ಸಹ ಪ್ರತಿಷ್ಮೆಯ ವಿಚಾರವಾಗಿ , ರೆಡಿಮೇಡ್ ಎಳ್ಳುಬೆಲ್ಲದ ಕಳಪೆ ಮಾಲನ್ನು ಕೊಂಡು ತಂದು ಅದನ್ನು ಹಂಚುತ್ತಾರೆ . ಸದಾ ಮುಖವಾಡದೊಂದಿಗೆ ಬದುಕುವ ನಾವು ಈ ಬದಲಾವಣೆಯನ್ನು ಒಪ್ಪಿಕೊಂಡಿದೇವೆ . ಆದರೆ ನಾವೆಲ್ಲ ಬಯಸುವ ಸಂಕ್ರಾಂತಿ ಇದಲ್ಲ . ಹಬ್ಬಗಳ ಆಚರಣೆಯಲ್ಲಿ ಸಂಸ್ಕೃತಿ , ಸಂಪ್ರದಾಯ ಇರಬೇಕು . ಪ್ರೀತಿ , ವಿಶ್ವಾಸ ಕೃತಜ್ಞತೆ ಜೊತೆಯಾಗಬೇಕು . ಸಮ್ಮದಿ , ಐಶ್ವರ್ಯ , ನಮ್ಮದಿ , ಖುಷಿ ,ರಂಗು , ಆರೋಗ್ಯ , ನಲಿವು , ಸಂಭ್ರಮ , ಸೊಬಗು ,ಸಮ್ಮದಿ ಎಲ್ಲರ ಬಾಳಲ್ಲಿ ತುಂಬುವಂಥ ಹಬ್ಬದ ಆಚರಣೆ ನಮ್ಮದಾಗಬೇಕು ಎಂಬುದು ಕವಿಯ ಆಶಯ . 

FAQ :

1. ಕಿಚ್ಚು ಹಾಯಿಸುವುದು ಎಂದರೆ ಏನು ? 

ಉತ್ತರ : ಕಿಚ್ಚು ಹಾಯಿಸುವುದು ಎಂದರೆ ದನಕರುಗಳನ್ನು ಬೆಂಕಿಯಲ್ಲಿ ಜಿಗಿಸುವುದು . 

2. ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಏನು ಬಂದು ನಿಂತಿದೆ ? 

ಉತ್ತರ : ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಟ್ರಾಕ್ಟರ್ ಬಂದು ನಿಂತಿದೆ . 

3. ಹಳ್ಳಿಗಳಲ್ಲಿ ಪಟೇಲರು ಏನು ಕೊಡಿಸಿ ರಾಜಿ ಮಾಡುತ್ತಿದ್ದರು ? 

ಉತ್ತರ : ಹಳ್ಳಿಗಳಲ್ಲಿ ಪಟೇಲರು ವರ್ಷದ ಕೊನೆಯಲ್ಲಿ ಜಗಳವಾಡಿದವರನ್ನು ಒಂದೆಡೆ ಸೇರಿಸಿ , ಅವರಿಂದ ಇವರಿಗೆ, ಇವರಿಂದ ಅವರಿಗೆ ಎಳ್ಳು ಬೆಲ್ಲ ಕೊಡಿಸಿ ರಾಜಿ ಮಾಡಿಸುತ್ತಿದ್ದರಂತೆ .

Sankrantiyandu Sukha Dukha Question Answer Video

7th standard | lasson-8 | ಸಂಕ್ರಾಂತಿಯಂದು ಸುಖ ದುಃಖ | Sankrantiyandu suka dukka

7th standard | ಪಾಠ-8| ಸಂಕ್ರಾಂತಿಯಂದು ಸುಖ ದುಃಖ ಪ್ರಶ್ನೋತ್ತರಗಳು | Sankrantiyandu suka dukka

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *