4ನೇ ತರಗತಿ ಕನ್ನಡ ಕನ್ನಡಮ್ಮನ ಹರಕೆ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 4th Standard Kannada Kannadammana Harake Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 4 Kannada Chapter 1 Notes 4th Standard Kannada 1st Poem Notes Kannadammana Harake Padya Kannada Kannadammana Harake 4th Standard
ಅಭ್ಯಾಸ
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು ?
ಉತ್ತರ : ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು .
2. ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?
ಉತ್ತರ : ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ .
3. ಕನ್ನಡದ ಕಂದ ಯಾವುದನ್ನು
ಉತ್ತರ : ಕನ್ನಡದ ಕಂದ ಕನ್ನಡಮ್ಮನ ಹರಕೆಯನ್ನು ಮರೆಯಬಾರದು .
4. ಕನ್ನಡ ನುಡಿಯ ಸೊಗಸನ್ನು ಯಾವುದಕೆ ಹೋಲಿಸಲಾಗಿದೆ ?
ಉತ್ತರ : ಕನ್ನಡ ನುಡಿಯ ಸೊಗಸನ್ನು ತಾಯಿ ಎದೆ ಹಾಲಿಗೆ ಹಾಗೂ ಆಕೆಯ ಅಪ್ಪುಗೆಯಿಂದುಂಟಾಗುವ ಆನಂದಕ್ಕೆ ಹೋಲಿಸಲಾಗಿದೆ .
4th Standard Kannada 1st Lesson Question Answer
ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಖಾಲಿ ಸ್ಥಳದಲ್ಲಿ ಬರೆಯಿರಿ
1. ಕನ್ನಡಕೆ ಹೋರಾಡು ಕನ್ನಡದ …..
- 1. ವೀರ
- 2. ಶೂರ
- 3. ಧೀರ
- 4. ಕಂದಾ
ಉತ್ತರ
- 4. ಕಂದಾ
2. ಮರತಯಾದರೆ ……. .ಮರೆತಂತೆ ನನ್ನ
- 1.ದಮ್ಮಯ್ಯ
- 2. ಅಯ್ಯೋ
- 3. ಕಂದಯ್ಯ
- 4 . ನನ್ನ
ಉತ್ತರ :
- 2. ಅಯ್ಯೋ
3. ಮೊಲೆಯ ಹಾಲೆಂತಮತೆ …….. ಬಾಯ್ಗೆ .
- 1. ಹೆಜ್ಜೇನು
- 2. ಕಿರುಚೇನು
- 3. ಸವಿಜೇನು
- 4. ಹಾಲ್‌ಜೇನು
ಉತ್ತರ :
- 3. ಸವಿಜೇನು
4. ಹೋರಾಡು ಕನ್ನಡಕೆ ….. ರನ್ನಾ .
- ವೀರನಾಗಿ
- ಶೂರನಾಗಿ ,
- ಕಲಿಯಾಗಿ
- ಧೀರನಾಗಿ
ಉತ್ತರ :
- 3. ಕಲಿಯಾಗಿ .
ಇ ) ಪದ್ಯದಲ್ಲಿ ಬಿಟ್ಟಿರುವ ಮುಂದಿನ ಸಾಲುಗಳನ್ನು ಬರೆಯಿರಿ.
1. ದಮ್ಮಯ್ಯ ಕಂದಯ್ಯ
__________
ಮರೆಯದಿರು ಚಿನ್ನಾ |
ಉತ್ತರ :ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ ।
ಕನ್ನಡಮ್ಮನ ಹರಕೆ ,
ಮರೆಯದಿರು ಚಿನ್ನ ।
2. ಮರತೆಯಾದರೆ ಅಯೋ :
_____________
______________
ಕಲಿಯಾಗಿ ರನ್ಯಾ
ಉತ್ತರ :
ಮರೆತೆಯಾದರೆ ಅಯೋ ;
ಮರೆತಂತೆ ನನ್ನ
ಹೋರಾಡು ಕನ್ನಡಕ
ಕಲಿಯಾಗಿ ರನ್ನ .
ಭಾಷಾ ಚಟುವಟಿಕೆ
ಅ ) ಮಾದರಿಯಂತೆ ಕೊಟ್ಟಿರ ಪದಗಳಿಗೆ ಪ್ರಾಸ
ಪದ ಬರೆ .
ಉತ್ತರ : ಮಾದರಿ : ದಮ್ಮಯ್ಯ: ಕಂದಯ್ಯ
- ಹೋರಾಡು : ಕಾಪಾಡು
- ಬಾಯ್ಕೆ : ಮೆಯ್ಕೆ
- ಬಾಳೆ : ಏಳ
- ಚಿನ್ನಾ : ರನ್ನಾ
ಆ ) ಕೊಟ್ಟಿರುವ ಪದಗಳಲ್ಲಿ ಬರಹದ ಸರಿಯಾದ ರೂಪವನ್ನು ಆರಿಸಿ ಬರೆಯಿರಿ .
1. ಓರಾಡು – ಹೋರಾಡು
ಉತ್ತರ : ಹೋರಾಡು
2. ಹರಕೆ – ಅರಕೆ
ಉತ್ತರ : ಹರಕೆ
3. ಆನಂದ – ಹಾನಂದ
ಉತ್ತರ : ಆನಂದ
4. ಹಯ್ಯೋ – ಅಯ್ಯೋ
ಉತ್ತರ : ಅಯೋ
5. ಹಾಲು – ಆಲು
ಉತ್ತರ : ಹಾಲು
6. ಅಪ್ಪುಗೆ – ಹಪ್ಪುಗೆ
ಉತ್ತರ : ಅಪ್ಪುಗೆ
ಇ ) ಕೊಟ್ಟಿರುವ ಒತ್ತಕ್ಷರಗಳನ್ನು ಗಮನಿಸಿ .
ವೃತ್ತದೊಳಗೆ ಸಜಾತಿ ಒತ್ತಕ್ಷರ ಹಾಗೂ ಚೌಕದಲ್ಲಿ ವಿಜಾತಿ ಒತ್ತಕ್ಷರಗಳನ್ನು ಬರೆ .
13 . ನ್ನ ಸ್ನ ಷ್ಟ , ಹ , ದ್ವಿ , ಯ್ಯ , ಸ , ಟೈ , ತ ಮ್ಮ ಶ್ರೇ , ಕ್ಷ , ಪ್ರ, ಶ್ನೆ .
ಉತ್ತರ :
ಸ್ಟೋ ನ್ನ ಷ್ಟ ಹ ಬ್ಬ ಸ್ತ ಯ್ಯ ತ್ತ ಟ್ಟ ಶ್ರೇ ಮ್ಮ ಕ್ಷ , ಪ್ರ, ಶ್ನೆ
ಕೊಟ್ಟಿರುವ ಸಾಲುಗಳನ್ನು ವೇಗವಾಗಿ ಉಚ್ಚರಿಸು .
- ಟಗರಿಗೆ ತರಗು ತಂದು ಹಾಕು
- ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ .
- ಕಪ್ಪು ಕುಂಕುಮ ಕೆಂಪು ಕುಂಕು
- ಕಾಗೆ ಪುಕ್ಕ ಗೂಬೆ ಪುಕ್ಕ ,
ಪದ್ಯದಲ್ಲಿ ನೀನು ಇಷ್ಟ ಪಡುವ ನಾಲ್ಕು ಸಾಲುಗಳನ್ನು ಬರೆ.
ಉತ್ತರ : ಗುರುವಿನೊಳುಡಿಯಂತೆ
ಶ್ರೇಯಸ್ಸು ಬಾಳ್ಗೆ
ತಾಯುಡಿಗೆ ದುಡಿದು ಮಡಿ
ಇಹಪರಗಳೇಳ್ಗೆ ।
ಉ .ಈ ಪದ್ಯದ ಮೊದಲ 12 ಸಾಲುಗಳನ್ನು ಕಂಠಪಾಠ ಮಾಡಿ ನಿನ್ನದೇ ರಾಗದಲ್ಲಿ ಹಾಡು.
ಉತ್ತರ :
ಕನ್ನಡಮ್ಮನ ಹರಕೆ
ಕನ್ನಡಕೆ ಹೋರಾಡು
ಕನ್ನಡದ ಕಂದಾ ;
ಕನ್ನಡವ ಕಾಪಾಡು
ನನ್ನ ಆನಂದಾ |
ಜೋಗುಳದ ಹರಕೆಯಿದು ಮರೆಯದಿರು , ಚಿನ್ನಾ ;
ಮರತೆಯಾದರೆ ಅಯೋ
ಮರೆತಂತೆ ನನ್ನ |
ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ಕೆ ;
ತಾಯಿಯಪ್ಪುಗೆಯಂತೆ
ಬಲುಸೊಗಸು ಮೆಯ್ದೆ
ಪದ್ಯದ ಸಾರಾಂಶ :
ರಾಷ್ಟ್ರಕವಿ ಕುವೆಂಪುರವರು ಕನ್ನಡ ನಾಡು , ಕನ್ನಡ ನುಡಿ ಹಾಗೂ ಈ ನಾಡಿಗೆ ನಾವು ಸಲ್ಲಿಸುವ ಸೇವೆ ಕುರಿತು ವಿವರಿಸಿದ್ದಾರೆ . ಎಂದೆಂದಿಗೂ ಕನ್ನಡಕ್ಕಾಗಿ ಹೋರಾಡು , ಕನ್ನಡವನ್ನು ರಕ್ಷಿಸು ಮತ್ತು ಕನ್ನಡಕ್ಕಾಗಿ ಕೆಲಸ ಮಾಡು ಎನ್ನುತ್ತಾರೆ . ತಾಯಿಯ ಜೋಗುಳದ ಹರಕೆಯಿದು , ಈ ಕನ್ನಡವನ್ನು ಮರೆಯದಿರು , ನೀನು ಮರೆತರೆ ತಾಯಿಯನ್ನು ಮರೆತಂತೆ ಎನ್ನುತ್ತಾರೆ .ಈ ನಮ್ಮ ಕನ್ನಡ ನಾಡು , ಕನ್ನಡ ನುಡಿ ತಾಯಿಯ ಹಾಲಿನಂತ ರುಚಿ , ಬಾಯಿಯಲ್ಲಿ ಕನ್ನಡ ನುಡಿ ನುಡಿದರೆ ಸವಿ ಜೇನು ಬಾಯಿಯಲ್ಲಿ ಇದಂತೆ . ಈ ನಮ್ಮ ನುಡಿ ತಾಯಿಯನ್ನು ಅಪ್ಪಿಕೊಂಡಾಗ ಎಷ್ಟು ಆನಂದ ಮಗುವಿಗೆ ಆಗುತ್ತದೆಯೋ ಅಪೇ ಆನಂದ ಈ ಕನ್ನಡ ನುಡಿಯಲ್ಲಿದೆ ಎನ್ನುತ್ತಾರೆ . ಗುರುವಿನಿಂದ ಈ ನುಡಿಯನ್ನು ಕಲಿತು ಜೀವನದಲ್ಲಿ ಏಳಿಗೆ ಹೊಂದು , ಈ ನಿನ್ನ ತಾಯಿ ನುಡಿಯಾದ ಕನ್ನಡಕ್ಕೆ ಕೆಲಸ ಮಾಡು ,ಈ ನುಡಿಗಾಗಿಯೇ ಜೀವನ ತ್ಯಜಿಸು ಎಂದಿದ್ದಾರೆ . ಕವಿ ದೀನತೆಯಿಂದ ಕನ್ನಡಮ್ಮನ ಹರಕೆಯನ್ನು ಮರೆಯದಿರು ಕಂದಾ , ಚಿನ್ನಾ ಎಂದು ಕೇಳುತಾರ . ಮರತೆಯಾದರೆ ನೀನು ಮರೆತಂತೆ ನನ್ನನ್ನು ಎನ್ನುತ್ತಾ ಎಂದೆಂದಿಗೂ ನೀ ಕನ್ನಡಕ್ಕಾಗಿ ವೀರನಾಗಿ ಹೋರಾಡು ಎಂದು ಈ ಪದ್ಯದಲ್ಲಿ ಓದುಗರಿಗೆ ಕವಿ ಕರೆ ನೀಡಿದ್ಯಾರೆ .
FAQ :
ಉತ್ತರ : ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ .
ಉತ್ತರ : ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು .
ಇತರೆ ವಿಷಯಗಳು :
4th Standard Kannada Textbook Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.